ಸ್ಕಾರ್ಪಿಯೊ-N ಆಟೋಮ್ಯಾಟಿಕ್ ಮತ್ತು 4x4 ವೇರಿಯಂಟ್‌ಗಳ ಬೆಲೆ ಘೋಷಿಸಿದ ಮಹೀಂದ್ರಾ

ಹೊಸ ಮಹೀಂದ್ರಾ ಸ್ಕಾರ್ಪಿಯೊ N ಆಟೋಮ್ಯಾಟಿಕ್ 6-ಸೀಟರ್ ಮತ್ತು ಫೋರ್‌-ವೀಲ್ ಡ್ರೈವ್ (4WD) ವೇರಿಯಂಟ್‌ಗಳ ಪರಿಚಯಾತ್ಮಕ ಬೆಲೆಗಳನ್ನು ಬಹಿರಂಗಪಡಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಎರಡರಲ್ಲೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ ಅನ್ನು ಹೊಂದಬಹುದು, ಆದರೆ 4WD ಡೀಸೆಲ್‌ನೊಂದಿಗೆ ಮಾತ್ರ ಲಭ್ಯವಿದೆ.

ಸ್ಕಾರ್ಪಿಯೊ-N ಆಟೋಮ್ಯಾಟಿಕ್ ಮತ್ತು 4x4 ವೇರಿಯಂಟ್‌ಗಳ ಬೆಲೆ ಘೋಷಿಸಿದ ಮಹೀಂದ್ರಾ

ಹೊಸ ಮಹೀಂದ್ರ ಸ್ಕಾರ್ಪಿಯೊ-ಎನ್‌ ರೂ. 15.45 ಲಕ್ಷದಿಂದ ಪ್ರಾರಂಭವಾಗುತ್ತದೆ (ಎಕ್ಸ್ ಶೋ ರೂಂ). ಆಟೋಮ್ಯಾಟಿಕ್ ವೇರಿಯಂಟ್‌ಗಳು ತಮ್ಮ ಮ್ಯಾನುಯಲ್ ಕೌಂಟರ್‌ಪಾರ್ಟ್‌ಗಳಿಗಿಂತ 1.96 ಲಕ್ಷ ರೂ. ಮತ್ತು 4WD ವೇರಿಯಂಟ್‌ಗಳು ಆಯಾ 2WD ವೇರಿಯಂಟ್‌ಗಳಿಗಿಂತ 2.45 ಲಕ್ಷ ರೂಪಾಯಿಗಳ ಪ್ರೀಮಿಯಂ ಬೆಲೆಯನ್ನು ಹೊಂದಿವೆ.

ಸ್ಕಾರ್ಪಿಯೊ-N ಆಟೋಮ್ಯಾಟಿಕ್ ಮತ್ತು 4x4 ವೇರಿಯಂಟ್‌ಗಳ ಬೆಲೆ ಘೋಷಿಸಿದ ಮಹೀಂದ್ರಾ

ಅದೇ ರೀತಿ, ಮಹೀಂದ್ರಾ ಸ್ಕಾರ್ಪಿಯೊ-ಎನ್‌ನ ಆರು ಸೀಟ್‌ಗಳ ಆವೃತ್ತಿಗಳು ಏಳು ಸೀಟ್‌ಗಳ ಆವೃತ್ತಿಗಳಿಗಿಂತ 20,000 ರೂ.ನ ಹೆಚ್ಚಿನ ಬೆಲೆಯನ್ನು ಹೊಂದಿವೆ. ಜುಲೈ 30 ರಂದು ಆನ್‌ಲೈನ್‌ನಲ್ಲಿ ಮತ್ತು ಅದೇ ಸಮಯದಲ್ಲಿ ಮಹೀಂದ್ರಾ ಡೀಲರ್‌ಶಿಪ್‌ಗಳಲ್ಲಿ ಹೊಸ-ಜೆನ್ SUV ಯ ಬುಕಿಂಗ್ 11 AM ಗೆ ಪ್ರಾರಂಭವಾಗುತ್ತದೆ. ವಿತರಣೆಗಳು ಸೆಪ್ಟೆಂಬರ್ 26 ರಂದು ಪ್ರಾರಂಭವಾಗಲಿವೆ.

ಸ್ಕಾರ್ಪಿಯೊ-N ಆಟೋಮ್ಯಾಟಿಕ್ ಮತ್ತು 4x4 ವೇರಿಯಂಟ್‌ಗಳ ಬೆಲೆ ಘೋಷಿಸಿದ ಮಹೀಂದ್ರಾ

ಮಹೀಂದ್ರಾ ಪ್ರಕಾರ, 2022 ರ ಸ್ಕಾರ್ಪಿಯೋ-ಎನ್ ಬೆಲೆಗಳು ಮೊದಲು ಬಂದವರಿಗೆ ಮೊದಲು ಸೇವೆಯ ಆಧಾರದ ಮೇಲೆ ಮೊದಲ 25,000 ಬುಕಿಂಗ್‌ಗಳಿಗೆ ಮಾನ್ಯವಾಗಿರುತ್ತದೆ. ಬ್ರಾಂಡ್ ಸ್ಕಾರ್ಪಿಯೋ-ಎನ್‌ನ 20,000 ಯುನಿಟ್‌ಗಳನ್ನು ಆರಂಭಿಕ ಅವಧಿಯಲ್ಲಿ ಅಂದರೆ ಡಿಸೆಂಬರ್ 2022 ರವರೆಗೆ ಹೊರತರಲು ಯೋಜಿಸಲಾಗಿದೆ.

ಸ್ಕಾರ್ಪಿಯೊ-N ಆಟೋಮ್ಯಾಟಿಕ್ ಮತ್ತು 4x4 ವೇರಿಯಂಟ್‌ಗಳ ಬೆಲೆ ಘೋಷಿಸಿದ ಮಹೀಂದ್ರಾ

ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನ ಬೆಲೆಗಳನ್ನು ಜೂನ್ 27 ರಂದು ಘೋಷಿಸಲಾಯಿತು, ಆದರೆ ಟೆಸ್ಟ್ ಡ್ರೈವ್‌ಗಳು ಜುಲೈ 5 ರಂದು 30 ನಗರಗಳಲ್ಲಿ ಪ್ರಾರಂಭಿಸಲಾಗಿತ್ತು. ಗ್ರಾಹಕರು ಜುಲೈ 30 ರಂದು ಕಾಯ್ದಿರಿಸಿದ ತಮ್ಮ ಆಯ್ಕೆಯ ವೇರಿಯಂಟ್‌ ಅನ್ನು ಆಗಸ್ಟ್ 15 ರ ಮಧ್ಯರಾತ್ರಿಯವರೆಗೆ ಸಂಪಾದಿಸುವ ಆಯ್ಕೆಯನ್ನು ಹೊಂದಿರುತ್ತಾರೆ.

ಸ್ಕಾರ್ಪಿಯೊ-N ಆಟೋಮ್ಯಾಟಿಕ್ ಮತ್ತು 4x4 ವೇರಿಯಂಟ್‌ಗಳ ಬೆಲೆ ಘೋಷಿಸಿದ ಮಹೀಂದ್ರಾ

ಮಹೀಂದ್ರಾ ಸ್ಕಾರ್ಪಿಯೊ-ಎನ್ ಡ್ಯಾಜ್ಲಿಂಗ್ ಸಿಲ್ವರ್, ಡೀಪ್ ಫಾರೆಸ್ಟ್, ಗ್ರ್ಯಾಂಡ್ ಕ್ಯಾನ್ಯನ್, ಎವರೆಸ್ಟ್ ವೈಟ್, ನಪೋಲಿ ಬ್ಲಾಕ್, ರೆಡ್ ರೇಜ್ ಮತ್ತು ರಾಯಲ್ ಗೋಲ್ಡ್ ಸೇರಿದಂತೆ ಏಳು ಬಣ್ಣಗಳಲ್ಲಿ ಲಭ್ಯವಿರುತ್ತದೆ. ಗ್ರಾಹಕರು Z2, Z4, Z6, Z8 ಮತ್ತು Z8L ಸೇರಿದಂತೆ ಐದು ವೇರಿಯಂಟ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹದು.

ಸ್ಕಾರ್ಪಿಯೊ-N ಆಟೋಮ್ಯಾಟಿಕ್ ಮತ್ತು 4x4 ವೇರಿಯಂಟ್‌ಗಳ ಬೆಲೆ ಘೋಷಿಸಿದ ಮಹೀಂದ್ರಾ

ಸ್ಕಾರ್ಪಿಯೋ-ಎನ್ ಒಂದು ಪೆಟ್ರೋಲ್ ಮತ್ತು ಒಂದು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಲಭ್ಯವಿದೆ. ಆದಾಗ್ಯೂ, 2.2-ಲೀಟರ್ mHark ಡೀಸೆಲ್ ಎಂಜಿನ್ ಎರಡು ವಿಭಿನ್ನ ಟ್ಯೂನ್‌ಗಳಲ್ಲಿ ಲಭ್ಯವಿದೆ. ಈ SUV ಯಲ್ಲಿನ 2.0-ಲೀಟರ್ mStallion ಪೆಟ್ರೋಲ್ ಎಂಜಿನ್ 200 bhp ಪವರ್ ಮತ್ತು 370 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಸ್ಕಾರ್ಪಿಯೊ-N ಆಟೋಮ್ಯಾಟಿಕ್ ಮತ್ತು 4x4 ವೇರಿಯಂಟ್‌ಗಳ ಬೆಲೆ ಘೋಷಿಸಿದ ಮಹೀಂದ್ರಾ

ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಮೊದಲನೆಯದು 2.2-ಲೀಟರ್ mHawk ಎಂಜಿನ್ ಕಡಿಮೆ ಟ್ಯೂನಿಂಗ್‌ನಲ್ಲಿ ಲಭ್ಯವಿದೆ. ಇದು 130 bhp ಪವರ್ ಮತ್ತು 300 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಶಕ್ತಿಶಾಲಿ ಡೀಸೆಲ್ ಎಂಜಿನ್ ಹೊಂದಿದ್ದು 172.4 ಬಿಎಚ್ ಪಿ ಪವರ್ ಉತ್ಪಾದಿಸುತ್ತದೆ. ಇದರ ಟಾರ್ಕ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ವೇರಿಯಂಟ್‌ಗಳ ನಡುವೆ ಭಿನ್ನವಾಗಿರುತ್ತದೆ.

ಸ್ಕಾರ್ಪಿಯೊ-N ಆಟೋಮ್ಯಾಟಿಕ್ ಮತ್ತು 4x4 ವೇರಿಯಂಟ್‌ಗಳ ಬೆಲೆ ಘೋಷಿಸಿದ ಮಹೀಂದ್ರಾ

ಮಹೀಂದ್ರಾ SUV 17.78 ಸೆಂ ಕಲರ್ ಡ್ರೈವರ್ ಮಾಹಿತಿ ಪ್ರದರ್ಶನ, ಸ್ಟೀರಿಂಗ್ ಮೌಂಟೆಡ್ ಆಡಿಯೊ ಮತ್ತು ಕ್ರೂಸ್ ಕಂಟ್ರೋಲ್‌ಗಳು, 6-ವೇ ಪವರ್ ಅಡ್ಜಸ್ಟಬಲ್ ಡ್ರೈವರ್ ಸೀಟ್, ಆಂಟಿ-ಪಿಂಚ್ ಡ್ರೈವರ್ ಮತ್ತು ಕೋ-ಡ್ರೈವರ್ ಒನ್ ಟಚ್ ಪವರ್ ವಿಂಡೋಗಳು, ಹಿಂಭಾಗದ ಎಸಿ ಕಂಟ್ರೋಲ್, ಲ್ಯಾಂಪ್ ಮತ್ತು ಕೂಲಿಂಗ್ ವೈಶಿಷ್ಟ್ಯವನ್ನು ಹೊಂದಿದೆ.

ಸ್ಕಾರ್ಪಿಯೊ-N ಆಟೋಮ್ಯಾಟಿಕ್ ಮತ್ತು 4x4 ವೇರಿಯಂಟ್‌ಗಳ ಬೆಲೆ ಘೋಷಿಸಿದ ಮಹೀಂದ್ರಾ

ಗ್ಲೋವ್ ಬಾಕ್ಸ್, ಸನ್ ಗ್ಲಾಸ್ ಹೋಲ್ಡರ್, ಮೊಬೈಲ್ ಹೋಲ್ಡರ್‌ನೊಂದಿಗೆ ಸೀಟ್ ಮ್ಯಾಪ್ ಪಾಕೆಟ್, ನ್ಯಾವಿಗೇಷನ್‌ನೊಂದಿಗೆ 20.32 ಸೆಂ. ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಸೋನಿ 3D ಆಡಿಯೊ ಸಿಸ್ಟಮ್‌ನಂತಹ ಅನೇಕ ಪ್ರೀಮಿಯಂ ವೈಶಿಷ್ಟ್ಯಗಳನ್ನು ನೀಡುತ್ತದೆ.

ಸ್ಕಾರ್ಪಿಯೊ-N ಆಟೋಮ್ಯಾಟಿಕ್ ಮತ್ತು 4x4 ವೇರಿಯಂಟ್‌ಗಳ ಬೆಲೆ ಘೋಷಿಸಿದ ಮಹೀಂದ್ರಾ

ಸುರಕ್ಷತೆಯ ದೃಷ್ಟಿಯಿಂದ ಕಂಪನಿಯು ಈ ಕಾರನ್ನು ಕ್ರ್ಯಾಶ್ ಕಂಪ್ಲೈಂಟ್ ಸ್ಟ್ರಕ್ಚರ್, 6 ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಡ್ರೈವರ್ ಡ್ರೋಜಿನೆಸ್ ಅಲರ್ಟ್, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್, ವೆಹಿಕಲ್ ಡೈನಾಮಿಕ್ ಕಂಟ್ರೋಲ್ ಅನ್ನು ಸಜ್ಜುಗೊಳಿಸಿದೆ. ಹೋಲ್ಡ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್, ರೋಲ್ ಓವರ್ ಮಿಟಿಗೇಶನ್, ಬ್ರೇಕ್ ಡಿಸ್ಕ್ ವೈಪಿಂಗ್, ಎಲೆಕ್ಟ್ರಾನಿಕ್ ಬ್ರೇಕ್ ಪ್ರಿಫಿಲ್, ಇ-ಕಾಲ್, SOS ಸ್ವಿಚ್ ISOFIX ಮತ್ತು i-SIZE ಹೊಂದಾಣಿಕೆಯಂತಹ ವೈಶಿಷ್ಟ್ಯಗಳನ್ನು ನೀಡುತ್ತದೆ.

ಸ್ಕಾರ್ಪಿಯೊ-N ಆಟೋಮ್ಯಾಟಿಕ್ ಮತ್ತು 4x4 ವೇರಿಯಂಟ್‌ಗಳ ಬೆಲೆ ಘೋಷಿಸಿದ ಮಹೀಂದ್ರಾ

ದೇಶೀಯ ಮಾರುಕಟ್ಟೆಯಲ್ಲಿ ಈ SUV ಯ ಆರಂಭಿಕ ಬೆಲೆ ರೂ.11.99 ಲಕ್ಷಗಳು (ಎಕ್ಸ್ ಶೋ ರೂಂ). ಇದು 6-ಸೀಟರ್ ಮತ್ತು 7-ಸೀಟರ್, ಪೆಟ್ರೋಲ್ ಮತ್ತು ಡೀಸೆಲ್, ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್, ರಿಯರ್-ವೀಲ್ ಡ್ರೈವ್ ಮತ್ತು ಆಲ್-ವೀಲ್ ಡ್ರೈವ್ ಆಯ್ಕೆಗಳಲ್ಲಿ ಲಭ್ಯವಿದೆ.

ಸ್ಕಾರ್ಪಿಯೊ-N ಆಟೋಮ್ಯಾಟಿಕ್ ಮತ್ತು 4x4 ವೇರಿಯಂಟ್‌ಗಳ ಬೆಲೆ ಘೋಷಿಸಿದ ಮಹೀಂದ್ರಾ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಈ ಹಿಂದೆ ವಾಹನ ಮಾರುಕಟ್ಟೆಯಲ್ಲಿ ಮಹೀಂದ್ರಾಗೆ ಭಾರೀ ಬೇಡಿಕೆ ತಂದುಕೊಟ್ಟಿದ್ದ ಸ್ಕಾರ್ಪಿಯೋ ಮಾದರಿಯು, ಇತರ ಬ್ರಾಂಡ್‌ಗಳ ಹೊಸ ಕಾರುಗಳಲ್ಲಿನ ಹಲವು ವೈಶಿಷ್ಟ್ಯಗಳ ಪೈಪೋಟಿಯಿಂದಾಗಿ ತುಸು ಹಿಂದೆ ಸರಿದಿತ್ತು. ಇದೀಗ ಹಲವು ಹೊಸ ಫೀಚರ್ಸ್ ಹೊಸ ಡಿಸೈನ್‌ನೊಂದಿಗೆ ಬಿಡುಗಡೆಯಾಗಿರುವ ಬಿಗ್‌ ಡ್ಯಾಡಿ ತನ್ನ ಪೂರ್ವ ವೈಭವವನ್ನು ಹಿಂಪಡೆಯಲಿದೆಯೇ ಎಂದು ಕಾದುನೋಡಬೇಕಿದೆ.

Most Read Articles

Kannada
English summary
Mahindra Announces Prices of Scorpio N Automatic and 4x4 Variants
Story first published: Friday, July 22, 2022, 17:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X