ಎಡಿಸನ್ ಮೋಟಾರ್ಸ್‌ನೊಂದಿಗೆ ಸ್ಯಾಂಗ್‌ಯಾಂಗ್ ಮಾರಾಟದ ಒಪ್ಪಂದ ರದ್ದುಗೊಳಿಸಿದ ಮಹೀಂದ್ರಾ

ಸ್ಯಾಂಗ್‌ಯಾಂಗ್ ಮೋಟಾರ್‌ ಅನ್ನು ಎಡಿಸನ್ ಮೋಟಾರ್ಸ್‌ಗೆ ಮಾರಾಟ ಮಾಡಲು ಮಾಡಿಕೊಂಡಿದ್ದ ಒಪ್ಪಂದವನ್ನು ಮಹೀಂದ್ರಾ ಕಂಪನಿ ರದ್ದುಗೊಳಿಸಿದೆ. Ssangyong ಅನ್ನು ಖರೀದಿಸಲು ನಿರ್ಧರಿಸಿದ ಬಿಡ್ ಮೊತ್ತವನ್ನು ಠೇವಣಿ ಮಾಡಲು ಎಡಿಸನ್ ಮೋಟಾರ್ಸ್ ವಿಫಲವಾದ ಕಾರಣ ಈ ಒಪ್ಪಂದವನ್ನು ರದ್ದುಗೊಳಿಸಲಾಗಿದೆ ಎಂದು ಮಹೀಂದ್ರಾ ತಿಳಿಸಿದೆ.

ಎಡಿಸನ್ ಮೋಟಾರ್ಸ್‌ನೊಂದಿಗೆ ಸ್ಯಾಂಗ್‌ಯಾಂಗ್ ಮಾರಾಟದ ಒಪ್ಪಂದ ರದ್ದುಗೊಳಿಸಿದ ಮಹೀಂದ್ರಾ

ಸ್ಯಾಂಗ್‌ಯಾಂಗ್ ಮೋಟಾರ್ ಕೊರಿಯಾದ ಆಟೋಮೋಟಿವ್ ಬ್ರಾಂಡ್ ಆಗಿದ್ದು, ಈ ಹಿಂದೆ ಬ್ರಾಂಡ್ ಕೆಲವು ಅದ್ಭುತ ಪ್ರಯಾಣಿಕ ವಾಹನ ಮಾದರಿಗಳನ್ನು ನಿರ್ಮಿಸಿದೆ. ಇದು ದಕ್ಷಿಣ ಕೊರಿಯಾದಲ್ಲಿ ಐದನೇ ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿದ್ದು, ದಿವಾಳಿಯಾಗುವವರೆಗೂ ಉತ್ತಮವಾಗಿ ಕಾರ್ಯನಿರ್ವಹಿಸಿ ಉತ್ತಮ ಬ್ರಾಂಡ್ ಎಂದು ಜನಪ್ರಿಯತೆ ಪಡೆದುಕೊಂಡಿತ್ತು.

ಎಡಿಸನ್ ಮೋಟಾರ್ಸ್‌ನೊಂದಿಗೆ ಸ್ಯಾಂಗ್‌ಯಾಂಗ್ ಮಾರಾಟದ ಒಪ್ಪಂದ ರದ್ದುಗೊಳಿಸಿದ ಮಹೀಂದ್ರಾ

ಪ್ರೀಮಿಯಂ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿದ್ದ ಸ್ಯಾಂಗ್‌ಯಾಂಗ್‌ ಕಂಪನಿಯಲ್ಲಿ ಭಾರತದಲ್ಲಿ ಅತಿ ದೊಡ್ಡ ವಾಹನ ತಯಾರಿಕಾ ಕಂಪನಿಯಾಗಿರುವ ಮಹೀಂದ್ರಾ ಕಂಪನಿಯು ಹೆಚ್ಚಿನ ಮಟ್ಟದ ಪಾಲನ್ನು ಹೊಂದಿತ್ತು. ನಂತರ ಮಹೀಂದ್ರಾ ಕಂಪನಿಯು 2010 ರಲ್ಲಿ ಸ್ಯಾಂಗ್‌ಯಾಂಗ್‌ನ ಶೇ 75ಕ್ಕೂ ಹೆಚ್ಚು ಪಾಲನ್ನು ಖರೀದಿಸುವ ಮೂಲಕ ಸ್ವಾಧೀನಪಡಿಸಿಕೊಂಡಿತ್ತು.

ಎಡಿಸನ್ ಮೋಟಾರ್ಸ್‌ನೊಂದಿಗೆ ಸ್ಯಾಂಗ್‌ಯಾಂಗ್ ಮಾರಾಟದ ಒಪ್ಪಂದ ರದ್ದುಗೊಳಿಸಿದ ಮಹೀಂದ್ರಾ

ಈಗಲು ಕೆಲವು ದೇಶಗಳಲ್ಲಿ ಈ ಕೊರಿಯನ್ ಬ್ರ್ಯಾಂಡ್‌ ಹಲವು ಮಾದರಿಗಳು ಕಾಣಸಿಗುತ್ತವೆ. ನಮ್ಮ ಭಾರತದಲ್ಲಿಯೂ ಸಹ ಸ್ಯಾಂಗ್‌ಯಾಂಗ್‌ನ ಇಂಜಿನಿಯರಿಂಗ್‌ ಮಾದರಿಯನ್ನು ಪಡೆದುಕೊಂಡಿದ್ದೇವೆ. ಭಾರತದಲ್ಲಿ ಬಿಡುಗಡೆಯಾದ ಮೊದಲ ಸ್ಯಾಂಗ್‌ಯಾಂಗ್ ವಾಹನ ರೆಕ್ಸ್‌ಟನ್ ಆಗಿದ್ದು, ಇದು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗದಿದ್ದರೂ, ಬಲಿಷ್ಟ ಹಾಗೂ ಗಟ್ಟಿಮುಟ್ಟಾದ SUV ಆಗಿದೆ ಎಂದು ವಾಹನ ಖರೀದಿಸಿರುವ ಕೆಲ ಭಾರತೀಯ ಮಾಲೀಕರು ಹೇಳುತ್ತಾರೆ.

ಎಡಿಸನ್ ಮೋಟಾರ್ಸ್‌ನೊಂದಿಗೆ ಸ್ಯಾಂಗ್‌ಯಾಂಗ್ ಮಾರಾಟದ ಒಪ್ಪಂದ ರದ್ದುಗೊಳಿಸಿದ ಮಹೀಂದ್ರಾ

ಪ್ರಸ್ತುತ ಭಾರತದಲ್ಲಿ ಮಾರಾಟವಾಗುತ್ತಿರುವ Mahindra Alturas G4 ಇತ್ತೀಚಿನ ಜನ್-ಸ್ಯಾಂಗ್‌ಯಾಂಗ್ ರೆಕ್ಸ್‌ಟನ್ ಅನ್ನು ಆಧರಿಸಿದೆ. ಮಹೀಂದ್ರಾ XUV300 ಸಹ ಸ್ಯಾಂಗ್ಯಾಂಗ್ ಟಿವೊಲಿಯನ್ನು ಆಧರಿಸಿದೆ. ಸ್ಯಾಂಗ್‌ಯಾಂಗ್ ಅನ್ನು ಸ್ವಾಧೀನ ಪಡಿಸಿಕೊಂಡ ನಂತರ ಮಹೀಂದ್ರಾ ಹಲವು ರೀತಿಯಲ್ಲಿ ಸ್ಯಾಂಗ್‌ಯಾಂಗ್‌ ಅನ್ನು ತನ್ನ ಮಾದರಿಗಳಲ್ಲಿ ಬಳಸಿಕೊಂಡಿದೆ.

ಎಡಿಸನ್ ಮೋಟಾರ್ಸ್‌ನೊಂದಿಗೆ ಸ್ಯಾಂಗ್‌ಯಾಂಗ್ ಮಾರಾಟದ ಒಪ್ಪಂದ ರದ್ದುಗೊಳಿಸಿದ ಮಹೀಂದ್ರಾ

ಮಹೀಂದ್ರಾ 2020 ರಲ್ಲಿ ಸ್ಯಾಂಗ್‌ಯಾಂಗ್‌ನಲ್ಲಿ ಹೂಡಿಕೆ ಮಾಡುವುದನ್ನು ಯಾವಗ ನಿಲ್ಲಿಸಿತೋ ಆಗ ಬ್ರ್ಯಾಂಡ್ ಅಪಾರ ಆರ್ಥಿಕ ನಷ್ಟದಲ್ಲಿ ಸಿಲುಕಲಾರಂಭಿಸಿತು. 2021 ರಲ್ಲಿ, ಸ್ಯಾಂಗ್‌ಯಾಂಗ್ ಅನ್ನು ಕೋರ್ಟ್ ರಿಸೀವರ್‌ಶಿಪ್ ಅಡಿಯಲ್ಲಿ ಇರಿಸಲಾಯಿತು. ಇದಾದ ಬಳಿಕ ಮಹೀಂದ್ರಾ ಹೆಚ್ಚು ಆರ್ಥಿಕ ಹೊರೆಯನ್ನು ನಿಯಂತ್ರಣಕ್ಕೆ ತರಲು ಅಂದಿನಿಂದ ಖರೀದಿದಾರರನ್ನು ಹುಡುಕುತ್ತಾ ಬಂದಿತ್ತು.

ಎಡಿಸನ್ ಮೋಟಾರ್ಸ್‌ನೊಂದಿಗೆ ಸ್ಯಾಂಗ್‌ಯಾಂಗ್ ಮಾರಾಟದ ಒಪ್ಪಂದ ರದ್ದುಗೊಳಿಸಿದ ಮಹೀಂದ್ರಾ

ಜನವರಿ 2022 ರಲ್ಲಿ, ಸ್ಯಾಂಗ್‌ಯಾಂಗ್ ಮಾರಾಟವಾಗುವ ಸುದ್ದಿ ಹೊರಬಿದ್ದಾಗ, ಎಡಿಸನ್ ಮೋಟಾರ್ಸ್ ನೇತೃತ್ವದ ಖರೀದಿದಾರರ ಒಕ್ಕೂಟಕ್ಕೆ ಮಹೀಂದ್ರಾ ಸ್ಯಾಂಗ್‌ಯಾಂಗ್ ಅನ್ನು 305 ಬಿಲಿಯನ್ ವಾನ್ (ರೂ. 1,885 ಕೋಟಿ)ಗೆ ಮಾರಾಟ ಮಾಡಿದೆ ಎಂದು ವರದಿಯಾಗಿತ್ತು. ಇದೀಗ ಎಡಿಸನ್ ಮೋಟಾರ್ಸ್ ತಾನು ಬಿಡ್ ಮಾಡಿದ್ದ ಮೊತ್ತವನ್ನು ಠೇವಣಿ ಇಡಲು ಅಸಮರ್ಥತೆ ವ್ಯಕ್ತಪಡಿಸಿರುವುದು ಬಹಿರಂಗವಾಗಿದೆ.

ಎಡಿಸನ್ ಮೋಟಾರ್ಸ್‌ನೊಂದಿಗೆ ಸ್ಯಾಂಗ್‌ಯಾಂಗ್ ಮಾರಾಟದ ಒಪ್ಪಂದ ರದ್ದುಗೊಳಿಸಿದ ಮಹೀಂದ್ರಾ

ಇದರ ಪರಿಣಾಮವಾಗಿ ಸ್ಯಾಂಗ್‌ಯಾಂಗ್ ಮೋಟಾರ್ ಅನ್ನು ಒಕ್ಕೂಟಕ್ಕೆ ಮಾರಾಟ ಮಾಡುವ ಒಪ್ಪಂದವನ್ನು ಈಗ ರದ್ದುಗೊಳಿಸಲಾಗಿದೆ. ಮಹೀಂದ್ರಾ ಮತ್ತೊಮ್ಮೆ ಸಂಭಾವ್ಯ ಖರೀದಿದಾರರ ಹುಡುಕಾಟದಲ್ಲಿದೆ ಎಂದು ತಿಳಿದುಬಂದಿದೆ. ಈ ಸಮಯದಲ್ಲಿ Ssangyong ಅನ್ನು ಖರೀದಿಸಲು ಬೇರೆ ಯಾರು ಆಸಕ್ತಿ ತೋರುತ್ತಿಲ್ಲ ಎಂದು ಅಂತರಾಷ್ಟ್ರೀಯ ಮಾದ್ಯಮಗಳು ವರದಿ ಮಾಡಿವೆ.

ಎಡಿಸನ್ ಮೋಟಾರ್ಸ್‌ನೊಂದಿಗೆ ಸ್ಯಾಂಗ್‌ಯಾಂಗ್ ಮಾರಾಟದ ಒಪ್ಪಂದ ರದ್ದುಗೊಳಿಸಿದ ಮಹೀಂದ್ರಾ

ಮಹೀಂದ್ರಾ ಒಡೆತನದಿಂದ ಸ್ಯಾಂಗ್‌ಯಾಂಗ್ ಅನ್ನು ಪರಿಪೂರ್ಣವಾಗಿ ಖರೀದಿಸುವ ಏಕೈಕ ಖರೀದಿದಾರ ಎಡಿಸನ್ ಮೋಟಾರ್ಸ್ ಆಗಿದೆ. ಎಡಿಸನ್ ಮೂಲತಃ ಕೊರಿಯಾದ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾಗಿದ್ದು, ಇದು ಮುಖ್ಯವಾಗಿ ಎಲೆಕ್ಟ್ರಿಕ್ ಬಸ್‌ಗಳು ಮತ್ತು ಟ್ರಕ್‌ಗಳನ್ನು ತಯಾರಿಸುತ್ತಿದೆ. ಸ್ಯಾಂಗ್‌ಯಾಂಗ್ ಬ್ರ್ಯಾಂಡ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ ದೊಡ್ಡ ಯೋಜನೆಗಳನ್ನು ರೂಪಿಸಿವ ತವಕದಲ್ಲಿತ್ತು.

ಎಡಿಸನ್ ಮೋಟಾರ್ಸ್‌ನೊಂದಿಗೆ ಸ್ಯಾಂಗ್‌ಯಾಂಗ್ ಮಾರಾಟದ ಒಪ್ಪಂದ ರದ್ದುಗೊಳಿಸಿದ ಮಹೀಂದ್ರಾ

ಮಾರುಕಟ್ಟೆಗಳಲ್ಲಿ ಹೊಸ ಸ್ಯಾಂಗ್‌ಯಾಂಗ್ ಮಾದರಿಗಳನ್ನು ಅತ್ಯುತ್ತಮ ವಿನ್ಯಾಸದೊಂದಿಗೆ ಪರಿಚಯಿಸಲು ಯೋಜಿಸಿತ್ತು. ಆದರೆ ಕೆಲವು ಅನಿವಾರ್ಯ ಕಾರಣಗಳಿಂದ ಬಿಡ್ ಮೊತ್ತವನ್ನು ಹೊಂದಿಸಲಾಗದೆ ಒಪ್ಪಂದ ಮುರಿದುಬಿದ್ದಿದ್ದು, ಸದ್ಯ ಈ ಒಪ್ಪಂದ ಮುಂದುವರಿಯುವಂತೆ ಕಾಣುತ್ತಿಲ್ಲ. ಮುಂದಿನ ದಿನಗಳಲ್ಲಿ ಎಡಿಸನ್ ಮೋಟಾರ್ಸ್‌ ಮತ್ತೊಮ್ಮೆ ಈ ಒಪ್ಪಂದನ್ನು ಮಹೀಂದ್ರಾದೊಂದಿಗೆ ಮುಂದುವರಿಸಿದರು ಆಶ್ಚರ್ಯವಿಲ್ಲ.

ಎಡಿಸನ್ ಮೋಟಾರ್ಸ್‌ನೊಂದಿಗೆ ಸ್ಯಾಂಗ್‌ಯಾಂಗ್ ಮಾರಾಟದ ಒಪ್ಪಂದ ರದ್ದುಗೊಳಿಸಿದ ಮಹೀಂದ್ರಾ

ಸ್ಯಾಂಗ್‌ಯಾಂಗ್ ಉತ್ಪನ್ನಗಳು ಮತ್ತು ಇಂಜಿನಿಯರಿಂಗ್ ಸಾಮರ್ಥ್ಯಕ್ಕೆ ಹೋಲಿಸಿಕೊಂಡರೆ ಮಹೀಂದ್ರಾ ಉತ್ಪನ್ನಗಳು ಇನ್ನೂ ಅತ್ಯುತ್ತಮವಾಗಿವೆ. ಉದಾಹರಣೆಗೆ XUV700 ಗಾಗಿ ಕಾಯುವ ಅವಧಿಯು ಒಂದು ವರ್ಷವಿದ್ದು, ಮಹೀಂದ್ರ ಥಾರ್‌ಗಾಗಿ ಕಾಯುವ ಅವಧಿಯು ಐದು ತಿಂಗಳವರೆಗೆ ಇದೆ. ಈ ಮಟ್ಟದ ಕಾಯುವಿಕೆ ಇದೆಯೆಂದರೆ ಕಂಪನಿಯ ಮಾದರಿಗಳಿಗೆ ಮಾರುಕಟ್ಟೆಯಲ್ಲಿ ಎಷ್ಟು ಬೇಡಿಕೆ ಇದೆಯೆಂದು ಇಲ್ಲೇ ತಿಳಿಯುತ್ತದೆ.

ಎಡಿಸನ್ ಮೋಟಾರ್ಸ್‌ನೊಂದಿಗೆ ಸ್ಯಾಂಗ್‌ಯಾಂಗ್ ಮಾರಾಟದ ಒಪ್ಪಂದ ರದ್ದುಗೊಳಿಸಿದ ಮಹೀಂದ್ರಾ

ನಿಖರವಾಗಿ ಹೇಳುವುದಾದರೆ ಪ್ರಸ್ತುತ ಮಹೀಂದ್ರಾಗೆ ಹಣದ ಅವಶ್ಯಕತೆ ಇಲ್ಲ. ಆದರೂ ಸ್ಯಾಂಗ್‌ಯಾಂಗ್‌ನಲ್ಲಿ ಬಹುತೇಕ ಪಾಲನ್ನು ಮಹಿಂದ್ರಾ ಹೊಂದಿರುವುದರಿಂದ ಮುಂದಿನ ದಿನಗಳಲ್ಲಿ ಆರ್ಥಿಕ ಹೊರೆ ಹೆಚ್ಚಾಗಬಹುದು. ಹಾಗಾಗಿ ಬ್ರಾಂಡ್ ಅನ್ನು ಮಾರಾಟ ಮಾಡಲು ಮಹೀಂದ್ರಾ ಕಾತುರದಲ್ಲಿದೆ. ಸ್ಯಾಂಗ್‌ಯಾಂಗ್ ಬ್ರಾಂಡ್‌ನಲ್ಲಿ ಮಹೀಂದ್ರಾ ಹೊಂದಿರುವ ಶೇ75ಕ್ಕೂ ಹೆಚ್ಚು ಪಾಲನ್ನು ಕಂಪನಿ ಹೇಗೆ ಸಂಬಾಳಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

Most Read Articles

Kannada
English summary
Mahindra cancels Sangayang sale agreement with Edison Motors
Story first published: Friday, April 8, 2022, 17:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X