Just In
- 48 min ago
2023ರಿಂದ ಭಾರತದಲ್ಲಿ ಮಾರಾಟಗೊಳ್ಳಲಿದೆ ಜೈವಿಕ ಇಂಧನ ಒಳಗೊಂಡ ಇ20 ಪೆಟ್ರೋಲ್ ಮಾದರಿ
- 1 hr ago
ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಸಲು ಹೊಸ ರೂಪದಲ್ಲಿ ಬರುತ್ತಿದೆ ಮಾರುತಿ ಆಲ್ಟೋ ಕೆ10
- 1 hr ago
ಹೊಸ ಆಕ್ಟಿವಾ ಟೀಸರ್ ಬಿಟ್ಟು ನಿರೀಕ್ಷೆ ಹೆಚ್ಚಿಸಿದ ಹೋಂಡಾ: ಆಕ್ಟಿವಾ 7G ಆಗಿರಬಹುದೇ?
- 3 hrs ago
ಇವಿ ಸ್ಕೂಟರ್ಗಳ ಬೆಲೆ ನಿಯಂತ್ರಿಸಲು ಬೃಹತ್ ಯೋಜನೆಗೆ ಚಾಲನೆ ನೀಡಿದ ಓಲಾ ಎಲೆಕ್ಟ್ರಿಕ್
Don't Miss!
- News
ಬಿಜೆಪಿ ನಾಯಕರಿಗೆ 'ಈಗಲೇ ಬಿಟ್ಟು ಹೊರಡಿ' ಎಂಬ ಸಂದೇಶ ನೀಡುತ್ತಿದ್ದಾರೆ ನಿತೀಶ್ ಕುಮಾರ್
- Sports
ಲೆಜೆಂಡ್ಸ್ ಲೀಗ್ ಕ್ರಿಕೆಟ್: ಇಂಡಿಯಾ ಮಹಾರಾಜಸ್ vs ವರ್ಲ್ಡ್ ಜೈಂಟ್ಸ್ ತಂಡಗಳು; ಪಂದ್ಯದ ದಿನಾಂಕ, ಸ್ಥಳ
- Finance
ಗೂಗಲ್ಪೇ, ಫೋನ್ಪೇ, ಇಂಟರ್ನೆಟ್ ಇಲ್ಲದೆ ಯುಪಿಐ ಪಾವತಿ ಹೀಗೆ ಮಾಡಿ..
- Technology
ಭಾರತದಲ್ಲಿ ವಿವೋ V25 ಪ್ರೊ ಸ್ಮಾರ್ಟ್ಫೋನಿನ ಲಾಂಚ್ ಡೇಟ್ ಬಹಿರಂಗ!
- Movies
ರಶ್ಮಿಕಾ ಆಯ್ತು, ಅನನ್ಯಾ ಪಾಂಡೆ ಕಡೆ ವಾಲಿದ ವಿಜಯ್ ದೇವರಕೊಂಡ!
- Lifestyle
ವಿಶ್ವ ಆನೆ ದಿನ 2022: ಆನೆಗಳ ಕುರಿತ ಈ ಆಸಕ್ತಿಕರ ಸಂಗತಿಗಳು ಗೊತ್ತಿದೆಯೇ?
- Travel
ಮಕ್ಕಳ ಜೊತೆ ಭೇಟಿ ಕೊಡಬಹುದಾದ ಕರ್ನಾಟಕದಲ್ಲಿಯ ಮೋಜಿನ ಸ್ಥಳಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ಮುಂಬರುವ ಸೆಪ್ಟೆಂಬರ್‌ನಲ್ಲಿ ಅನಾವರಣಗೊಳ್ಳಲಿದೆ ಮಹೀಂದ್ರಾ ಹೊಸ ಎಕ್ಸ್‌ಯುವಿ400 ಎಲೆಕ್ಟ್ರಿಕ್ ಕಾರು
ಮಹೀಂದ್ರಾ ಕಂಪನಿಯು ತನ್ನ ಹೊಸ ತಲೆಮಾರಿನ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಬಿಡುಗಡೆ ಮಾಡಲು ಬೃಹತ್ ಯೋಜನೆ ರೂಪಿಸುತ್ತಿದ್ದು, ಕಂಪನಿಯು ಹೊಸ ತಂತ್ರಜ್ಞಾನ ಪ್ರೇರಣೆ ಅಡಿಯಲ್ಲಿ ಅಭಿವೃದ್ದಿಗೊಂಡ ಮೊದಲ ಮಾದರಿಯನ್ನು 2023ರ ಆರಂಭದಲ್ಲಿ ಬಿಡುಗಡೆ ಮಾಡುತ್ತಿದೆ.

ಹೊಸ ಮಹೀಂದ್ರಾ ಎಲೆಕ್ಟ್ರಿಕ್ ಕಾರುಗಳ ಪೈಕಿ ಎಕ್ಸ್‌ಯುವಿ400 ಇವಿ ಕಾರು ಮಾದರಿಯು ಪ್ರಮುಖವಾಗಿದ್ದು, ಇಎಕ್ಸ್‌ಯುವಿ300 ಮಾದರಿಯನ್ನೇ ಕಂಪನಿಯು ಮುಂಬರುವ ದಿನಗಳಲ್ಲಿ ಎಕ್ಸ್‌ಯುವಿ400 ಹೆಸರಿನಲ್ಲಿ ಬಿಡುಗಡೆ ಮಾಡಲಿದೆ. ಎಕ್ಸ್‌ಯುವಿ300 ನೇಮ್ ಪ್ಲೇಟ್ ಅನ್ನು ಸದ್ಯ ಸಾಮಾನ್ಯ ಕಾರು ಮಾದರಿಗಾಗಿ ಮಾತ್ರ ಬಳಕೆಯ ಮಾಡಲಿದ್ದು, ಎಲೆಕ್ಟ್ರಿಕ್ ಆವೃತ್ತಿಗೆ ಎಕ್ಸ್‌ಯುವಿ400 ಹೆಸರು ಬಳಕೆ ಮಾಡಲಿದೆ.

ಮಹೀಂದ್ರಾ ಕಂಪನಿಯು ಮುಂದಿನ ಐದು ವರ್ಷಗಳಲ್ಲಿ ಒಟ್ಟು 13 ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಹೊಸ ಯೋಜನೆ ಅಡಿಯಲ್ಲಿ ಎಲೆಕ್ಟ್ರಿಕ್ ಮಾದರಿಯಾದ ಎಕ್ಸ್‌ಯುವಿ 400 ಮಾದರಿಯು ಕೂಡಾ ಬಿಡುಗಡೆಯಾಗಲಿದೆ.

2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡಿದ್ದ ಹೊಸ ಇಎಕ್ಸ್‌ಯುವಿ300(eXUV300) ಕಾರನ್ನು ಮಾರುಕಟ್ಟೆಯಲ್ಲಿನ ಸನ್ನಿವೇಶವನ್ನು ಆಧರಿಸಿ ಇದೀಗ ಬದಲಿ ಹೆಸರಿನಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಕೈಗೊಂಡಿದೆ.

ಎಕ್ಸ್‌ಯುವಿ400 ಎಲೆಕ್ಟ್ರಿಕ್ ಬಿಡುಗಡೆ ಯೋಜನೆ ಕುರಿತಂತೆ ಮಾತನಾಡಿರುವ ಮಹೀಂದ್ರಾ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಶ್ ಜೆಜುರಿಕರ್ ಅವರು ಹೊಸ ಇವಿ ಕಾರು ಮಾದರಿಯನ್ನು ಮುಂದಿನ ವರ್ಷ ಮೊದಲ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆಯ ಸುಳಿವು ನೀಡಿದ್ದು, ಹೊಸ ಕಾರು ಬಿಡುಗಡೆಗೂ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಹೊಸ ಕಾರಿನ ಉತ್ಪಾದನಾ ಮಾದರಿಯನ್ನು ಅನಾವರಣಗೊಳಿಸುವ ಮಾಹಿತಿ ಹಂಚಿಕೊಂಡಿದ್ದಾರೆ.

2023ರ ಜನವರಿಯಿಂದ ಮಾರ್ಚ್ ಅವಧಿಯಲ್ಲಿ ಎಕ್ಸ್‌ಯುವಿ400 ಎಲೆಕ್ಟ್ರಿಕ್ ಹೆಸರಿನಲ್ಲಿ ಬಿಡುಗಡೆಯಾಗಲಿದ್ದು, ಹೊಸ ಮಾದರಿಯು ನಾಲ್ಕು ಮೀಟರ್‌ಗಿಂತಲೂ ಹೆಚ್ಚಿನ ಉದ್ದಳತೆಯೊಂದಿಗೆ ಸಾಮಾನ್ಯ ಎಕ್ಸ್‌ಯುವಿ300 ಮಾದರಿಗಿಂತಲೂ ಹೆಚ್ಚಿನ ಸ್ಥಳಾವಕಾಶ ಹೊಂದಿರಲಿದೆ.

ಮಹೀಂದ್ರಾ ಕಂಪನಿಯ ಹೊಸ ಎಕ್ಸ್‌ಯುವಿ400 ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಟಾಟಾ ನೆಕ್ಸಾನ್ ಇವಿ ಮತ್ತು ನೆಕ್ಸಾನ್ ಇವಿ ಮ್ಯಾಕ್ಸ್ ಮಾದರಿಗಳಿಗೆ ಭರ್ಜರಿ ಪೈಪೋಟಿಯಾಗಿ ಬಿಡುಗಡೆಯಾಗುತ್ತಿದೆ.ಮಹೀಂದ್ರಾ ಕಂಪನಿಯು ಬಿಡುಗಡೆ ಮಾಡಲಿರುವ ಒಟ್ಟು 13 ಕಾರುಗಳಲ್ಲಿ ಎಂಟು ಎಲೆಕ್ಟ್ರಿಕ್ ಕಾರು ಮಾದರಿಗಳು ಬಿಡುಗಡೆಯಾಗಲಿದ್ದು, ಎಲೆಕ್ಟ್ರಿಕ್ ಕಾರುಗಳು 2022ರ ಮಧ್ಯಂತರದಿಂದ ಹಂತ-ಹಂತವಾಗಿ ಮಾರುಕಟ್ಟೆಯನ್ನು ಪ್ರವೇಶಿಸಲಿವೆ.

2022ರಿಂದ 2027ರ ತನಕ ಎಂಟು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲಿರುವ ಮಹೀಂದ್ರಾ ಕಂಪನಿಯು ಆರಂಭಿಕವಾಗಿ ಎಕ್ಸ್‌ಯುವಿ400 ಬಿಡುಗಡೆ ಮಾಡಲಿದ್ದು, ತದನಂತರ ಮಾರುಕಟ್ಟೆಯಲ್ಲಿ ಇತರೆ ಕಾರುಗಳ ಮಾದರಿಗಳ ಎಲೆಕ್ಟ್ರಿಕ್ ಆವೃತ್ತಿಗಳನ್ನು ಪರಿಚಯಿಸಲಿದೆ.

ಡೀಸೆಲ್ ಕಾರುಗಳನ್ನು ತಗ್ಗಿಸಲು ಪೆಟ್ರೋಲ್ ಹೈಬ್ರಿಡ್ ಕಾರು ಮಾದರಿಗಳನ್ನು ಸಹ ಅಭಿವೃದ್ದಿಪಡಿಸುತ್ತಿದ್ದು, ಇಎಕ್ಸ್‌ಯುವಿ400, ಇಕೆಯುವಿ100 ನಂತರ ಮತ್ತಷ್ಟು ಹೊಸ ಎಲೆಕ್ಟ್ರಿಕ್ ಕಾರುಗಳು ರಸ್ತೆಗಿಳಿಯಲಿವೆ.

ಹೊಸ ಎಕ್ಸ್‌ಯುವಿ400 ಮಾದರಿಯು ವಿವಿಧ ವೆರಿಯೆಂಟ್‌ಗಳೊಂದಿಗೆ ಎರಡು ರೀತಿಯ ಬ್ಯಾಟರಿ ಆಯ್ಕೆ ಪೆಡೆದುಕೊಳ್ಳಲಿದ್ದು, ಇದು ಪ್ರತಿ ಚಾರ್ಜ್‌ಗೆ ಕನಿಷ್ಠ 350 ಕಿ.ಮೀ ನಿಂದ 480 ಕಿ.ಮೀ ಮೈಲೇಜ್ ಪ್ರೇರಿತ ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿರಲಿದೆ.

ಸದ್ಯ ಮಾರುಕ್ಟೆಯಲ್ಲಿ ಟಾಟಾ ನೆಕ್ಸಾನ್ ಇವಿ ಕೂಡಾ ಎರಡು ಮಾದರಿಯ ಬ್ಯಾಟರಿ ಆಯ್ಕೆಯೊಂದಿಗೆ ಮಾರಾಟಗೊಳ್ಳುತ್ತಿದ್ದು, ಅದೇ ರೀತಿಯಾಗಿ ಎಕ್ಸ್‌ಯುವಿ400 ಮಾದರಿಯು ಸಹ ವಿವಿಧ ಹಂತದ ಬೆಲೆ ಸ್ತರಗಳೊಂದಿಗೆ ಬಿಡುಗಡೆಯಾಗಲಿದೆ.

ಬಜೆಟ್ ಆಧರಿಸಿ ಗ್ರಾಹಕರು ತಮ್ಮ ಬೇಡಿಕೆಯೆಂತೆ ಹೊಸ ಕಾರನ್ನು ಸ್ಟ್ಯಾಂಡರ್ಡ್ ಮತ್ತು ಎಕ್ಸ್ಸೆಂಡ್ ಮಾದರಿಗಳಲ್ಲಿ ಖರೀದಿ ಮಾಡಬಹುದಾಗಿದ್ದು, ಇದು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 12 ಲಕ್ಷದಿಂದ ಆರಂಭವಾಗಿ ಟಾಪ್ ಎಂಡ್ ಮಾದರಿಯು ರೂ. 20 ಲಕ್ಷ ಬೆಲೆ ಹೊಂದಬಹುದಾಗಿದೆ.

ಇನ್ನು ಪ್ರಸ್ತುತ ಮಾರುಕಟ್ಟೆಯಲ್ಲಿನ ಎಲೆಕ್ಟ್ರಿಕ್ ವಾಣಿಜ್ಯ ವಾಹನ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಮಹೀಂದ್ರಾ ಕಂಪನಿಯ ಮಹೀಂದ್ರಾ ಎಲೆಕ್ಟ್ರಿಕ್ ವಿಭಾಗವು ಮತ್ತಷ್ಟು ಹೊಸ ಇವಿ ವಾಹನ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಸಿದ್ದವಾಗುತ್ತಿದ್ದು, ವಾಣಿಜ್ಯ ವಾಹನಗಳ ಮಾದರಿಗಳಂತೆಯೇ ಪ್ರಯಾಣಿಕರ ಎಲೆಕ್ಟ್ರಿಕ್ ವಾಹನ ಮಾದರಿಯ ಮಾರಾಟದಲ್ಲೂ ಮುಂಚೂಣಿ ಸಾಧಿಸುವ ನೀರಿಕ್ಷೆಯಲ್ಲಿದೆ.

ಎಲೆಕ್ಟ್ರಿಕ್ ವಾಹನ ಉದ್ಯಮದಲ್ಲಿ ಮೇಲೆ ಈಗಾಗಲೇ ಭಾರೀ ಪ್ರಮಾಣದ ಹೂಡಿಕೆ ಮಾಡಿರುವ ಮಹೀಂದ್ರಾ ಕಂಪನಿಯು ಇವಿ ಮಾದರಿಗಳಾಗಿ ಪ್ರತ್ಯೇಕ ಇವಿ ವಿಭಾಗ ಆರಂಭಿಸುತ್ತಿದ್ದು, ಸದ್ಯಕ್ಕೆ ಎಕ್ಸ್‌ಯುವಿ400 ಮತ್ತು ಕೆಯುವಿ100ಇವಿ ಮಾದರಿಗಳನ್ನು ಸಾಮಾನ್ಯ ಕಾರುಗಳ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಬಿಡುಗಡೆ ಮಾಡಲಿದ್ದರೆ 2024ರಿಂದ ಹೊಸ ಇವಿ ಮಾದರಿಗಳನ್ನು ಹೊಸ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಬಿಡುಗಡೆ ಮಾಡಲಿದೆ.