ಹೊಸ ಎಲೆಕ್ಟ್ರಿಕ್ ಎಸ್‌ಯುವಿಯ ಮತ್ತೊಂದು ಟೀಸರ್ ಬಿಡುಗಡೆ ಮಾಡಿದ ಮಹೀಂದ್ರಾ

ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ಹೊಸ ಸಂಚಲನ ಮೂಡಿಸಲು ಸಜ್ಜಾಗುತ್ತಿರುವ ಮಹೀಂದ್ರಾ ಕಂಪನಿಯು ಬಾರ್ನ್ ಇವಿ ಶ್ರೇಣಿಯಲ್ಲಿ ಒಟ್ಟು ಐದು ಹೊಸ ಇವಿ ಎಸ್‌ಯುವಿ ಕಾರುಗಳನ್ನು ಪರಿಚಯಿಸುತ್ತಿದ್ದು, ಮುಂದಿನ ತಿಂಗಳು 15ರಂದು ಅನಾವರಣಗೊಳ್ಳಲಿರುವ ಹೊಸ ಕಾರಿನ ಮತ್ತೊಂದು ಟೀಸರ್ ಚಿತ್ರವನ್ನು ಹಂಚಿಕೊಂಡಿದೆ.

ಹೊಸ ಎಲೆಕ್ಟ್ರಿಕ್ ಎಸ್‌ಯುವಿಯ ಮತ್ತೊಂದು ಟೀಸರ್ ಬಿಡುಗಡೆ ಮಾಡಿದ ಮಹೀಂದ್ರಾ

ನ್ಯೂ ಜನರೇಷನ್ ಇವಿ ಕಾರು ಮಾದರಿಗಳ ಬಿಡುಗಡೆಗಾಗಿ ಬೃಹತ್ ಯೋಜನೆ ರೂಪಿಸಿರುವ ಮಹೀಂದ್ರಾ ಕಂಪನಿಯು ಮುಂಬರುವ ಕೆಲವೇ ವರ್ಷಗಳಲ್ಲಿ ಹಲವಾರು ಹೊಸ ಇವಿ ಕಾರು ಮಾದರಿಗಳನ್ನು ರಸ್ತೆಗಿಳಿಸುವ ಸಿದ್ದತೆಯಲ್ಲಿದ್ದು, ಹೊಸ ಇವಿ ಕಾರು ಮಾದರಿಗಳಿಗಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ಸಹ ಆರಂಭಿಸಿದೆ.

ಹೊಸ ಎಲೆಕ್ಟ್ರಿಕ್ ಎಸ್‌ಯುವಿಯ ಮತ್ತೊಂದು ಟೀಸರ್ ಬಿಡುಗಡೆ ಮಾಡಿದ ಮಹೀಂದ್ರಾ

ಹೊಸ ಇವಿ ಕಾರು ಮಾದರಿಗಳಿಗಳನ್ನು ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ಮೂಲಕ ಸುಧಾರಿತ ತಂತ್ರಜ್ಞಾನ ಸೌಲಭ್ಯಗಳೊಂದಿಗೆ ಅಭಿವೃದ್ದಿಗೊಳಿಸುತ್ತಿದ್ದು, ಐದು ಹೊಸ ಇವಿ ಕಾರಿಗಳಲ್ಲಿ ಮೊದಲ ಇವಿ ಎಸ್‌‌ಯುವಿ ಕಾರಿನ ಟೀಸರ್ ಹಂಚಿಕೊಂಡಿರುವ ಕಂಪನಿಯು ಮುಂಬರುವ ಅಗಸ್ಟ್ 15ಕ್ಕೆ ಹೊಸ ಕಾನ್ಸೆಪ್ಟ್ ಮಾದರಿಯನ್ನು ಅನಾವರಣಗೊಳಿಸುವ ಸುಳಿವು ನೀಡಿದೆ.

ಹೊಸ ಎಲೆಕ್ಟ್ರಿಕ್ ಎಸ್‌ಯುವಿಯ ಮತ್ತೊಂದು ಟೀಸರ್ ಬಿಡುಗಡೆ ಮಾಡಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಬಾರ್ನ್ ಇವಿ ಪರಿಕಲ್ಪನೆ ಅಡಿ ಹೊಸ ಇವಿ ಕಾರುಗಳನ್ನು ಯುಕೆಯಲ್ಲಿರುವ ತನ್ನ ಅಡ್ವಾನ್ಸ್ಡ್ ಡಿಸೈನ್ ಸ್ಟುಡಿಯೋದಲ್ಲಿ ವಿನ್ಯಾಸಗೊಳಿಸುತ್ತಿದ್ದು, ಹೊಸ ಶ್ರೇಣಿಯ ಇವಿ ಕಾರುಗಳನ್ನು ಕಂಪನಿಯು 2025 ಮತ್ತು 2026ರ ನಡುವೆ ಪರಿಚಯಿಸಲು ನಿರ್ಧರಿಸಿದೆ.

ಹೊಸ ಎಲೆಕ್ಟ್ರಿಕ್ ಎಸ್‌ಯುವಿಯ ಮತ್ತೊಂದು ಟೀಸರ್ ಬಿಡುಗಡೆ ಮಾಡಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಭಾರತದಲ್ಲಿ ಹೊಸ ಬಾರ್ನ್ ಇವಿ ಮಾದರಿಗಳ ಬಿಡುಗಡೆಗೂ ಮುನ್ನ ಈಗಾಗಲೇ ಅನಾವರಣಗೊಳಿಸಲಾಗಿರುವ ಇಕೆಯುವಿ100 ಮತ್ತು ಇಎಕ್ಸ್‌ಯುವಿ300 ಕಾರುಗಳನ್ನು 2023ರ ಆರಂಭದಲ್ಲಿ ಬಿಡುಗಡೆ ಮಾಡಲಿದ್ದು, ಬಾರ್ನ್ ಇವಿ ಪರಿಕಲ್ಪನೆಯಲ್ಲಿ ಅಭಿವೃದ್ದಿಗೊಳ್ಳುತ್ತಿರುವ ಇವಿ ಕಾರುಗಳು ಇಕೆಯುವಿ100 ಮತ್ತು ಇಎಕ್ಸ್‌ಯುವಿ300 ಕಾರುಗಳಿಂತಲೂ ಹೆಚ್ಚಿನ ಮಟ್ಟದ ತಂತ್ರಜ್ಞಾನ ಪ್ರೇರಣೆಯೊಂದಿಗೆ ಬಿಡುಗಡೆಯಾಗಲಿದ್ದು, ಬಾರ್ನ್ ಇವಿ ಮಾದರಿಗಳು ಎರಡನೇ ತಲೆಮಾರಿನ ಇವಿ ತಂತ್ರಜ್ಞಾನ ಸೌಲಭ್ಯಗಳನ್ನು ಪಡೆದುಕೊಳ್ಳಲಿವೆ.

ಹೊಸ ಎಲೆಕ್ಟ್ರಿಕ್ ಎಸ್‌ಯುವಿಯ ಮತ್ತೊಂದು ಟೀಸರ್ ಬಿಡುಗಡೆ ಮಾಡಿದ ಮಹೀಂದ್ರಾ

ಬಾರ್ನ್ ಇವಿ ಪರಿಕಲ್ಪನೆಯ ಹೊಸ ಕಾರುಗಳು ಮಹೀಂದ್ರಾ ಕಂಪನಿಯ ಹೊಸ ಇವಿ ಕಾರುಗಳಿಗಾಗಿ ಮೀಸಲಾದ ಪ್ರತ್ಯೇಕ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿರಲಿದ್ದು, ಹೊಸ ಇವಿ ಎಸ್‌ಯುವಿ ಕಾರು ಸಿ ಆಕಾರದ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಟೈಲ್‌ಲೈಟ್‌ ಮತ್ತು ಆಕರ್ಷಕ ಕ್ಯಾಬಿನ್ ಹೊಂದಿರಲಿದೆ.

ಹೊಸ ಎಲೆಕ್ಟ್ರಿಕ್ ಎಸ್‌ಯುವಿಯ ಮತ್ತೊಂದು ಟೀಸರ್ ಬಿಡುಗಡೆ ಮಾಡಿದ ಮಹೀಂದ್ರಾ

2022ರ ಅಗಸ್ಟ್‌ನಲ್ಲಿ ಹೊಸ ಬಾರ್ನ್ ಇವಿ ಪರಿಕಲ್ಪನೆಯ ಅಡಿಯ ಹೊಸ ಮೂರು ಇವಿ ಕಾರುಗಳು ಕಾನ್ಸೆಪ್ಟ್ ಮಾದರಿಗಳೊಂದಿಗೆ ಅನಾವರಣಗೊಳ್ಳಲಿದ್ದು, ಹೊಸ ಕಾರುಗಳ ಭಾರತದಲ್ಲಿ ಮಾತ್ರವಲ್ಲ ಪ್ರಮುಖ ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೂ ಪ್ರವೇಶಿಸಲಿವೆ.

ಹೊಸ ಎಲೆಕ್ಟ್ರಿಕ್ ಎಸ್‌ಯುವಿಯ ಮತ್ತೊಂದು ಟೀಸರ್ ಬಿಡುಗಡೆ ಮಾಡಿದ ಮಹೀಂದ್ರಾ

ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ಎಕ್ಸ್‌ಯುವಿ700, ಎಕ್ಸ್‌ಯುವಿ300, ಬೊಲೆರೊ, ಸ್ಕಾರ್ಪಿಯೋ, ಥಾರ್ ಮಾದರಿಯೊಂದಿಗೆ ಎಸ್‌ಯುವಿ ಮಾರಾಟದಲ್ಲಿ ಮುಂಚೂಣಿ ಹೊಂದಿದ್ದು, ಎಸ್‌ಯುವಿ ವಿಭಾಗದಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಹೊಸ ಎಲೆಕ್ಟ್ರಿಕ್ ಎಸ್‌ಯುವಿಯ ಮತ್ತೊಂದು ಟೀಸರ್ ಬಿಡುಗಡೆ ಮಾಡಿದ ಮಹೀಂದ್ರಾ

ಹೊಸ ಎಸ್‌ಯುವಿ ಕಾರುಗಳ ಪಟ್ಟಿಯಲ್ಲಿ ಸಾಮಾನ್ಯ ಮಾದರಿಗಳ ಜೊತೆಗೆ ಎಲೆಕ್ಟ್ರಿಕ್ ಮಾದರಿಗಳು ಸಹ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಮುಂದಿನ ಐದು ವರ್ಷಗಳ ಅವಧಿಯಲ್ಲಿ ಒಟ್ಟು 13 ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಹೊಸ ಎಲೆಕ್ಟ್ರಿಕ್ ಎಸ್‌ಯುವಿಯ ಮತ್ತೊಂದು ಟೀಸರ್ ಬಿಡುಗಡೆ ಮಾಡಿದ ಮಹೀಂದ್ರಾ

ಬಾರ್ನ್ ಇವಿ ಮಾದರಿಗಳ ಬಿಡುಗಡೆಗೂ ಮುನ್ನ 2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಮೊದಲ ಅನಾವರಣಗೊಂಡಿದ್ದ ಹೊಸ ಇಎಕ್ಸ್‌ಯುವಿ(eXUV300) ಕಾರನ್ನು ಮಾರುಕಟ್ಟೆಯಲ್ಲಿನ ಸನ್ನಿವೇಶವನ್ನು ಆಧರಿಸಿ ಇದೀಗ ಬಿಡುಗಡೆ ಮಾಡಲು ಮುಂದಾಗಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಕೈಗೊಂಡಿದೆ.

ಹೊಸ ಎಲೆಕ್ಟ್ರಿಕ್ ಎಸ್‌ಯುವಿಯ ಮತ್ತೊಂದು ಟೀಸರ್ ಬಿಡುಗಡೆ ಮಾಡಿದ ಮಹೀಂದ್ರಾ

ಹೊಸ ಕಾರು ಈ ವರ್ಷಾಂತ್ಯಕ್ಕೆ ಉತ್ಪಾದನಾ ಮಾದರಿಯೊಂದಿಗೆ ಅನಾವರಣಗೊಳ್ಳಲಿದ್ದು, 2023ರ ಆರಂಭದಲ್ಲಿ ಅಧಿತೃತವಾಗಿ ಮಾರುಕಟ್ಟೆ ಪ್ರವೇಶಿಸುವುದು ಖಚಿತವಾಗಿದೆ. ಮಹೀಂದ್ರಾ ಕಂಪನಿಯು ಇಎಕ್ಸ್‌ಯುವಿ300 ಬಿಡುಗಡೆಗೂ ಮುನ್ನ ಇಕೆಯುವಿ100 ಎಲೆಕ್ಟ್ರಿಕ್ ಕಾರು ಮಾದರಿಯ ಮಾರಾಟಕ್ಕೆ ಚಾಲನೆ ನೀಡಲಿದ್ದು, ಹೊಸ ಇಎಕ್ಸ್‌ಯುವಿ300 ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ಇವಿ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿ ಟಾಟಾ ನೆಕ್ಸಾನ್ ಇವಿ ಮಾದರಿಗೆ ಪೈಪೋಟಿಯಾಗಿ ಬಿಡುಗಡೆಯಾಗುತ್ತಿದೆ.

ಹೊಸ ಎಲೆಕ್ಟ್ರಿಕ್ ಎಸ್‌ಯುವಿಯ ಮತ್ತೊಂದು ಟೀಸರ್ ಬಿಡುಗಡೆ ಮಾಡಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಬಿಡುಗಡೆ ಮಾಡಲಿರುವ ಹೊಸ ಎಂಟು ಎಲೆಕ್ಟ್ರಿಕ್ ಕಾರುಗಳೊಂದಿಗೆ ಐದು ಸಾಮಾನ್ಯ ಕಾರು ಮಾದರಿಗಳು ಸಹ ಬಿಡುಗಡೆಯಾಗಲಿದ್ದು, ಹೊಸ ಎಲೆಕ್ಟ್ರಿಕ್ ಕಾರುಗಳು 2022ರ ಮಧ್ಯಂತರದಿಂದ ಹಂತ-ಹಂತವಾಗಿ ಮಾರುಕಟ್ಟೆ ಪ್ರವೇಶಿಸಲಿವೆ.

ಹೊಸ ಎಲೆಕ್ಟ್ರಿಕ್ ಎಸ್‌ಯುವಿಯ ಮತ್ತೊಂದು ಟೀಸರ್ ಬಿಡುಗಡೆ ಮಾಡಿದ ಮಹೀಂದ್ರಾ

2022ರಿಂದ 2027ರ ತನಕ ಎಂಟು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲಿರುವ ಮಹೀಂದ್ರಾ ಕಂಪನಿಯು ಆರಂಭಿಕವಾಗಿ ಇಕೆಯುವಿ100 ನಂತರ ಇಎಕ್ಸ್‌ಯುವಿ300 ಬಿಡುಗಡೆ ಮಾಡಲಿದ್ದು, ತದನಂತರ ಮಾರುಕಟ್ಟೆಯಲ್ಲಿನ ಇತರೆ ಕಾರುಗಳ ಮಾದರಿಗಳಲ್ಲೂ ಎಲೆಕ್ಟ್ರಿಕ್ ಆವೃತ್ತಿಗಳನ್ನು ಪರಿಚಯಿಸಲಿದೆ.

ಹೊಸ ಎಲೆಕ್ಟ್ರಿಕ್ ಎಸ್‌ಯುವಿಯ ಮತ್ತೊಂದು ಟೀಸರ್ ಬಿಡುಗಡೆ ಮಾಡಿದ ಮಹೀಂದ್ರಾ

ಹೊಸ ಇಎಕ್ಸ್‌ಯುವಿ300 ಮಾದರಿಯು ಪ್ರತಿ ಚಾರ್ಜ್‌ಗೆ ಕನಿಷ್ಠ 380 ಕಿ.ಮೀ ನಿಂದ 420 ಕಿ.ಮೀ ಮೈಲೇಜ್ ಪ್ರೇರಿತ ಬ್ಯಾಟರಿ ಪ್ಯಾಕ್‌ನೊಂದಿಗೆ ಟಾಟಾ ನೆಕ್ಸಾನ್ ಇವಿ ಬೆಲೆಗೆ ಸರಿಸಮನಾಗಿ ಬಿಡುಗಡೆ ಹೊಂದಬಹುದಾಗಿದ್ದು, ಹೊಸ ಕಾರು ಎಂಜಿ ಜೆಡ್ಎಸ್ ಇವಿ ಮಾದರಿಗೂ ಸಹ ಪೈಪೋಟಿ ನೀಡಲಿದೆ.

ಹೊಸ ಎಲೆಕ್ಟ್ರಿಕ್ ಎಸ್‌ಯುವಿಯ ಮತ್ತೊಂದು ಟೀಸರ್ ಬಿಡುಗಡೆ ಮಾಡಿದ ಮಹೀಂದ್ರಾ

ಇಕೆಯುವಿ100 ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 8.25 ಲಕ್ಷ ಬೆಲೆ ಹೊಂದಿದ್ದು, 15.9kWh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್‌ನೊಂದಿಗೆ ಪ್ರತಿ ಚಾರ್ಜ್‌ಗೆ ಕನಿಷ್ಠ 150 ಕಿ.ಮೀ ಮೈಲೇಜ್ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ ಇಎಕ್ಸ್‌ಯುವಿ 300 ಮಾದರಿಯು ಹೆಚ್ಚಿನ ಮಟ್ಟದ ಬ್ಯಾಟರಿ ಪ್ಯಾಕ್‌ನೊಂದಿಗೆ ಗರಿಷ್ಠ ಮೈಲೇಜ್ ಪ್ರೇರಣೆ ಹೊಂದಿಲಿದ್ದು, ಇದು 2023ರ ಆರಂಭದಲ್ಲಿ ಬಿಡುಗಡೆಯಾಗಲಿದೆ.

Most Read Articles

Kannada
English summary
Mahindra electric suv teaser to be unveiled on 15th august
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X