ಎಲೆಕ್ಟ್ರಿಕ್ ಬೊಲೆರೊ ಪಿಕ್ ಅಪ್ ಟ್ರಕ್ ಟೀಸರ್ ಬಿಡುಗಡೆ ಮಾಡಿದ ಮಹೀಂದ್ರಾ

ಭಾರತದ ಜನಪ್ರಿಯ ಕಾರು ತಯಾರಕ ಸಂಸ್ಥೆಯಾದ ಮಹೀಂದ್ರಾ ತನ್ನ ಬೊಲೆರೊ 'ಪಿಕ್ ಅಪ್' ಟ್ರಕ್‌ನ ಎಲೆಕ್ಟ್ರಿಕ್ ಆವೃತ್ತಿಯ ಆಗಮನದ ಬಗ್ಗೆ ಸುಳಿವು ನೀಡಿದೆ. ಮಹೀಂದ್ರಾ ಬೊಲೆರೊ ಪಿಕ್ ಅಪ್‌ನ ಎಲೆಕ್ಟ್ರಿಕ್ ಆವೃತ್ತಿಯ ಕುರಿತು ಮಹೀಂದ್ರಾ ತನ್ನ ಯುಟ್ಯೂಬ್ ಚಾನೆಲ್‌ನಲ್ಲಿ ಹೊಸ ಟೀಸರ್ ವಿಡಿಯೋವನ್ನು ಹಂಚಿಕೊಂಡಿದೆ.

ಎಲೆಕ್ಟ್ರಿಕ್ ಬೊಲೆರೊ ಪಿಕ್ ಅಪ್ ಟ್ರಕ್ ಟೀಸರ್ ಬಿಡುಗಡೆ ಮಾಡಿದ ಮಹೀಂದ್ರಾ

ಮುಂಬರುವ ಎಲೆಕ್ಟ್ರಿಕ್ ಬೊಲೆರೊ ಪಿಕ್ ಅಪ್‌ನ ಟೀಸರ್ ವಿಡಿಯೋವು ಕೆಲವು ಮುಖ್ಯಾಂಶಗಳನ್ನು ತೋರಿಸುವ ನೀಲಿ ಬಣ್ಣದ ಬೆಳಕಿನ ಪ್ರದರ್ಶನದಲ್ಲಿ ಪಿಕಪ್ ಟ್ರಕ್‌ನ ಸಣ್ಣ ಅನಾವರಣ ಮಾಡಲಾಗಿದೆ. ಬ್ಲೂ ಲೈಟ್ ಶೋ ಮೂಲಕ ಹೈಲೈಟ್ ಮಾಡಲಾದ ವಿನ್ಯಾಸದ ವೈಶಿಷ್ಟ್ಯಗಳು ಪಿಕಪ್ ಟ್ರಕ್‌ನ ಮುಂಭಾಗದ ತುದಿಯ ಬಾಕ್ಸಿ ಆಕಾರವನ್ನು ಒಳಗೊಂಡಿದೆ.

ಎಲೆಕ್ಟ್ರಿಕ್ ಬೊಲೆರೊ ಪಿಕ್ ಅಪ್ ಟ್ರಕ್ ಟೀಸರ್ ಬಿಡುಗಡೆ ಮಾಡಿದ ಮಹೀಂದ್ರಾ

ಇದನ್ನು ಬೊಲೆರೊದಿಂದ ಎರವಲು ಪಡೆಯಲಾಗಿದ್ದು, ಇದು ಕ್ಲಾಸಿಕಲ್ ಬಾಕ್ಸಿ ಹೆಡ್‌ಲೈಟ್ ಸೆಟಪ್ ಅನ್ನು ಒಳಗೊಂಡಿದೆ. ವಿಡಿಯೋವು ಹಳೆಯ ಮಹೀಂದ್ರಾ ಲೋಗೋ, ಬೊಲೆರೊ ಪಿಕ್ ಅಪ್‌ನ ಫ್ಲಾಟ್‌ಬೆಡ್ ಮತ್ತು ಪಿಕಪ್ ಟ್ರಕ್‌ನ ಸಿಂಗಲ್ ಕ್ಯಾಬ್ ಸೆಟಪ್ ಅನ್ನು ತೋರಿಸುತ್ತದೆ. ಮುಂಬರುವ ಎಲೆಕ್ಟ್ರಿಕ್ ಬೊಲೆರೊವನ್ನು ಪಿಕ್-ಅಪ್‌ಗಳ ಭವಿಷ್ಯ ಎಂದು ಕರೆಯುವ ಮೂಲಕ ವಿಡಿಯೋ ಕೊನೆಗೊಳ್ಳುತ್ತದೆ. ಇದಕ್ಕೂ ಮುಂಚೆ 'ಕಮಿಂಗ್ ಸೂನ್' ಎಂಬ ಪದಗಳು ವೀಡಿಯೊವನ್ನು ಮುಕ್ತಾಯಗೊಳಿಸುತ್ತವೆ.

ಎಲೆಕ್ಟ್ರಿಕ್ ಬೊಲೆರೊ ಪಿಕ್ ಅಪ್ ಟ್ರಕ್ ಟೀಸರ್ ಬಿಡುಗಡೆ ಮಾಡಿದ ಮಹೀಂದ್ರಾ

ಬೊಲೆರೊ ಪಿಕ್ ಅಪ್‌ನ ಎಲೆಕ್ಟ್ರಿಕ್ ಆವೃತ್ತಿಯ ಬಗ್ಗೆ ಮತ್ತು ಈ ಎಲೆಕ್ಟ್ರಿಕ್ ವಾಣಿಜ್ಯ ವಾಹನಕ್ಕೆ ಶಕ್ತಿ ತುಂಬುವ ಪವರ್‌ಟ್ರೇನ್ ಬಗ್ಗೆ ಹೆಚ್ಚು ತಿಳಿದುಬಂದಿಲ್ಲ. ಮಹೀಂದ್ರಾ ಪ್ರಸ್ತುತ ಪ್ರಯಾಣಿಕ ವಾಹನ ಮಾರುಕಟ್ಟೆಗಾಗಿ 5 ಹೊಸ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುತ್ತಿದೆ. ಇದಕ್ಕಾಗಿ EV Co. ಎಂಬ ಅಂಗಸಂಸ್ಥೆಯನ್ನು ಸ್ಥಾಪಿಸಿದೆ.

ಎಲೆಕ್ಟ್ರಿಕ್ ಬೊಲೆರೊ ಪಿಕ್ ಅಪ್ ಟ್ರಕ್ ಟೀಸರ್ ಬಿಡುಗಡೆ ಮಾಡಿದ ಮಹೀಂದ್ರಾ

ಕಂಪನಿಯು ಇತ್ತೀಚೆಗೆ ತನ್ನ ವಾಣಿಜ್ಯ ವಾಹನಗಳ ವಿಭಾಗಕ್ಕೆ ಎಲೆಕ್ಟ್ರಿಕ್ ಪಿಕಪ್ ಟ್ರಕ್‌ಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ. ಹೊಸ ಎಲೆಕ್ಟ್ರಿಕ್ ಬೊಲೆರೊ ಪಿಕ್ ಅಪ್ ಈ ಹೊಸ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳಲ್ಲಿ ಮೊದಲನೆಯದು ಎಂದು ತೋರುತ್ತಿದೆ. ಇನ್ನು ಮಹೀಂದ್ರಾ ಆಗಸ್ಟ್ 15 ರಂದು ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಬಹಿರಂಗಪಡಿಸಲು ಸಿದ್ಧವಾಗಿದೆ.

ಎಲೆಕ್ಟ್ರಿಕ್ ಬೊಲೆರೊ ಪಿಕ್ ಅಪ್ ಟ್ರಕ್ ಟೀಸರ್ ಬಿಡುಗಡೆ ಮಾಡಿದ ಮಹೀಂದ್ರಾ

ಇದನ್ನು ಲಂಡನ್‌ನಲ್ಲಿ ತನ್ನ ಹೊಸ ವಿನ್ಯಾಸ ಕೇಂದ್ರದಲ್ಲಿ ವಿನ್ಯಾಸಗೊಳಿಸಲಾಗಿದೆ. ಮಹೀಂದ್ರಾ 2027 ರ ವೇಳೆಗೆ 5 ಹೊಸ EV ಗಳನ್ನು ರಸ್ತೆಗೆ ತರಲು ಯೋಜಿಸಿದೆ. ಈ ಐದು ಎಲೆಕ್ಟ್ರಿಕ್ ವಾಹನಗಳಲ್ಲಿ ನಾಲ್ಕನ್ನು ನೆಲದಿಂದ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾಗುವುದು, ಐದನೇ ವಾಹನ XUV400 ಆಗಿದೆ.

ಎಲೆಕ್ಟ್ರಿಕ್ ಬೊಲೆರೊ ಪಿಕ್ ಅಪ್ ಟ್ರಕ್ ಟೀಸರ್ ಬಿಡುಗಡೆ ಮಾಡಿದ ಮಹೀಂದ್ರಾ

ಎಲ್ಲಾ ಐದು ಎಲೆಕ್ಟ್ರಿಕ್ ವಾಹನಗಳು ಎಸ್‌ಯುವಿಗಳಾಗಿದ್ದು, ಆಗಸ್ಟ್ 15 ರಂದು ಲಂಡನ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಅನಾವರಣಗೊಳ್ಳಲಿವೆ. XUV400 ಐದು ಎಲೆಕ್ಟ್ರಿಕ್ SUV ಗಳಲ್ಲಿ ರಸ್ತೆಗಿಳಿಯುವ ಮೊದಲನೆಯದು ಮತ್ತು ಮುಂದಿನ ತಿಂಗಳು ಭಾರತದಲ್ಲಿ ಪಾದಾರ್ಪಣೆ ಮಾಡಲಿದೆ. ಮುಂಬರುವ ಇತರ ನಾಲ್ಕು ಎಲೆಕ್ಟ್ರಿಕ್ SUVಗಳಿಗಿಂತ ಭಿನ್ನವಾಗಿ, XUV400 ಮಹೀಂದ್ರಾ ಶ್ರೇಣಿಯಲ್ಲಿರುವ ಪ್ರಸ್ತುತ ವಾಹನವನ್ನು ಆಧರಿಸಿದೆ.

ಎಲೆಕ್ಟ್ರಿಕ್ ಬೊಲೆರೊ ಪಿಕ್ ಅಪ್ ಟ್ರಕ್ ಟೀಸರ್ ಬಿಡುಗಡೆ ಮಾಡಿದ ಮಹೀಂದ್ರಾ

XUV300 ಮತ್ತು XUV400 ಎಲೆಕ್ಟ್ರಿಕ್ ಎರಡೂ ಸ್ಯಾಂಗ್ಯಾಂಗ್ ಟಿವೊಲಿಯ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿವೆ. ಆದಾಗ್ಯೂ, XUV300 ಗಿಂತ ಭಿನ್ನವಾಗಿ, ಹೊಸ XUV400 Tivoli ಪ್ಲಾಟ್‌ಫಾರ್ಮ್ ನೀಡುವ ಎಲ್ಲಾ ಜಾಗವನ್ನು ಬಳಸಿಕೊಳ್ಳುತ್ತಿದ್ದು, EVಗಳು ಭಾರತ ಸರ್ಕಾರವು 4-ಮೀಟರ್ ಉಪ ವಾಹನಗಳಿಗೆ ನೀಡುವ ಸಬ್ಸಿಡಿಗಳಿಗೆ ಅರ್ಹವಾಗದ ಕಾರಣ 4.2 ಮೀಟರ್ ಉದ್ದವಿರಲಿದೆ.

ಎಲೆಕ್ಟ್ರಿಕ್ ಬೊಲೆರೊ ಪಿಕ್ ಅಪ್ ಟ್ರಕ್ ಟೀಸರ್ ಬಿಡುಗಡೆ ಮಾಡಿದ ಮಹೀಂದ್ರಾ

ಇನ್ನು ಮಹೀಂದ್ರಾ ಕಂಪನಿಯು ತನ್ನ ಜನಪ್ರಿಯ ಬೊಲೆರೊ ಪಿಕ್ಅಪ್ ಮಾದರಿಯಲ್ಲಿ ಹೊಸದಾಗಿ ಇಂಧನ ಚಾಲಿತ ಸಿಟಿ ವೆರಿಯೆಂಟ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿತ್ತು. ಇದು ಬೊಲೆರೊ ಸಿಟಿ ಪಿಕ್ಅಪ್ ಮಾದರಿಯ ಎಂಟ್ರಿ ಲೆವಲ್ ಮಾದರಿಯಾಗಿದ್ದು, ಹೊಸ ವಾಣಿಜ್ಯ ವಾಹನವು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 7.79 ಲಕ್ಷ ಬೆಲೆ ಹೊಂದಿದೆ.

ಎಲೆಕ್ಟ್ರಿಕ್ ಬೊಲೆರೊ ಪಿಕ್ ಅಪ್ ಟ್ರಕ್ ಟೀಸರ್ ಬಿಡುಗಡೆ ಮಾಡಿದ ಮಹೀಂದ್ರಾ

ಹೊಸ ಆವೃತ್ತಿಯಲ್ಲಿ ಈಗಾಗಲೇ ಖರೀದಿಗೆ ಲಭ್ಯವಿರುವ ಎಕ್ಸ್‌ಟ್ರಾ ಲಾಂಗ್ ಮತ್ತು ಎಕ್ಸ್‌ಟ್ರಾ ಸ್ಟ್ರಾಂಗ್ ರೂಪಾಂತರಗಳಿಂತಲೂ ಕಡಿಮೆ ದರ್ಜೆಯ ಮಾದರಿಯಾಗಿದ್ದು, ಸಿಟಿ ಪಿಕ್-ಅಪ್ ಅನ್ನು ಕಿರಿದಾದ ಮತ್ತು ವಾಹನ ದಟ್ಟಣೆಯ ರಸ್ತೆಗಳಲ್ಲಿ ನಿರ್ವಹಿಸಲು ಸುಲಭವಾಗುವಂತೆ ಸಿದ್ದಪಡಿಸಲಾಗಿದೆ.

ಎಲೆಕ್ಟ್ರಿಕ್ ಬೊಲೆರೊ ಪಿಕ್ ಅಪ್ ಟ್ರಕ್ ಟೀಸರ್ ಬಿಡುಗಡೆ ಮಾಡಿದ ಮಹೀಂದ್ರಾ

ಬೊಲೆರೊ ಸಿಟಿ ಪಿಕ್-ಅಪ್ ಇಂಟ್ರಾ-ಸಿಟಿ ಅಪ್ಲಿಕೇಶನ್‌ಗಳು ಮತ್ತು ಸಿಟಿ ಕಾರ್ಗೊ ಹ್ಯಾಂಡ್ಲಿಂಗ್‌ಗಳಿಗೆ ಪರಿಪೂರ್ಣವಾದ ಮಾದರಿಯಾಗಿದ್ದು, 2,523 ಎಂಎಂ ಕಾರ್ಗೊ ಸೌಲಭ್ಯದೊಂದಿಗೆ ಹೊಸ ವಾಹನದಲ್ಲಿ ಎಂ2ಡಿಐ ನಾಲ್ಕು ಎಂಜಿನ್ ಡೀಸೆಲ್ ಎಂಜಿನ್ 48.5kW ಪವರ್‌ನೊಂದಿಗೆ 195 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಹೊಸ ವಾಣಿಜ್ಯ ವಾಹನವು ಸೆಗ್ಮೆಂಟ್ ಫಸ್ಟ್ ಪೇ-ಲೋಡ್ ಸಾಮರ್ಥ್ಯದೊಂದಿಗೆ ಹೆಚ್ಚಿನ ಮೈಲೇಜ್ ಹೊಂದಿದ್ದು, ಹೊಸ ವಾಹನವು ಪ್ರತಿ ಲೀಟರ್ ಡೀಸೆಲ್‌ಗೆ ಗರಿಷ್ಠ 17.2 ಕಿ.ಮೀ ಮೈಲೇಜ್ ನೀಡಲಿದೆ.

ಎಲೆಕ್ಟ್ರಿಕ್ ಬೊಲೆರೊ ಪಿಕ್ ಅಪ್ ಟ್ರಕ್ ಟೀಸರ್ ಬಿಡುಗಡೆ ಮಾಡಿದ ಮಹೀಂದ್ರಾ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಎಲೆಕ್ಟ್ರಿಕ್ ಮಹೀಂದ್ರಾ ಬೊಲೆರೊ ಪಿಕ್ ಅಪ್‌ನ ಟೀಸರ್ ಮುಂಬೈ ಮೂಲದ ವಾಹನ ತಯಾರಕರು ಎಲೆಕ್ಟ್ರಿಕ್ ವಾಹನಗಳೊಂದಿಗೆ ಎಷ್ಟು ಆಕ್ರಮಣಕಾರಿಯಾಗಲಿದ್ದಾರೆ ಎಂಬುದನ್ನು ತೋರಿಸುತ್ತದೆ. ಹೊಸ ಎಲೆಕ್ಟ್ರಿಕ್ ಬೊಲೆರೊ ಪಿಕ್ ಅಪ್ ದೇಶದಲ್ಲಿ ಮಾರಾಟವಾಗುವ ಮೊದಲ ಎಲೆಕ್ಟ್ರಿಕ್ ಪಿಕಪ್ ಟ್ರಕ್ ಆಗಿರಲಿದೆ. ಮುಂಬರುವ 5 ಎಲೆಕ್ಟ್ರಿಕ್ ಎಸ್‌ಯುವಿಗಳೊಂದಿಗೆ ಮಹೀಂದ್ರಾ ಭಾರತದಲ್ಲಿ ಇವಿ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಲಿದೆಯೇ ಕಾದು ನೋಡಬೇಕಿದೆ.

Most Read Articles

Kannada
English summary
Mahindra has released the electric Bolero pick up truck teaser
Story first published: Tuesday, August 2, 2022, 18:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X