ಕರ್ನಾಟಕದಲ್ಲಿ ನಿರ್ಮಾಣವಾಗಲಿದೆ ಮಹೀಂದ್ರಾ ಹೊಸ ಇವಿ ಕಾರು ಉತ್ಪಾದನಾ ಘಟಕ?

ಮಹೀಂದ್ರಾ ಕಂಪನಿಯು ತನ್ನ ಬಾರ್ನ್ ಎಲೆಕ್ಟ್ರಿಕ್ ವಿಷನ್ ಅಡಿಯಲ್ಲಿ ಹಲವು ಹೊಸ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಬಿಡುಗಡೆ ಮಾಡಲು ಸಿದ್ದವಾಗುತ್ತಿದೆ.

Recommended Video

Mahindra Scorpio Classic Unveil Walkaround | ಹೊಸ ಅವತಾರದಲ್ಲಿ ಹಳೆಯ ಎಸ್‌ಯುವಿ | ಹೊಸ ಡೀಸೆಲ್ ಎಂಜಿನ್

ಹೊಸ ಎಲೆಕ್ಟ್ರಿಕ್ ಕಾರು ಮಾದರಿಗಳ ಉತ್ಪಾದನೆಗಾಗಿ ಕಂಪನಿಯು ಪ್ರತ್ಯೇಕ ಉತ್ಪಾದನಾ ಘಟಕ ಆರಂಭಿಸಲು ಮುಂದಾಗಿದ್ದು, ಉತ್ಪಾದನಾ ಘಟಕ ನಿರ್ಮಾಣಕ್ಕಾಗಿ ರಾಜ್ಯಗಳ ಹುಡುಕಾಟ ಜೋರಾಗಿದೆ.

ಕರ್ನಾಟಕದಲ್ಲಿ ನಿರ್ಮಾಣವಾಗಲಿದೆ ಮಹೀಂದ್ರಾ ಹೊಸ ಇವಿ ಕಾರು ಉತ್ಪಾದನಾ ಘಟಕ?

ಹೊಸ ಬಾರ್ನ್ ಎಲೆಕ್ಟ್ರಿಕ್ ಸರಣಿ ಇವಿ ಕಾರುಗಳ ಉತ್ಪಾದನಾ ಯೋಜನೆ ಅಡಿ ಇತ್ತೀಚೆಗೆ ಐದು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಅನಾವರಣಗೊಳಿಸಿರುವ ಮಹೀಂದ್ರಾ ಕಂಪನಿಯು 2024ರಿಂದ ರಸ್ತೆಗಿಳಿಸುವ ಸುಳಿವು ನೀಡಿದ್ದು, ಅದಕ್ಕೂ ಮುನ್ನ ಕಂಪನಿಯು ಹೊಸ ಪ್ಲ್ಯಾಟ್‌ಫಾರ್ಮ್ ಸಿದ್ದಪಡಿಸಲು ಪ್ರತ್ಯೇಕ ಉತ್ಪಾದನಾ ಘಟಕ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ.

ಕರ್ನಾಟಕದಲ್ಲಿ ನಿರ್ಮಾಣವಾಗಲಿದೆ ಮಹೀಂದ್ರಾ ಹೊಸ ಇವಿ ಕಾರು ಉತ್ಪಾದನಾ ಘಟಕ?

ಹೊಸ ಇವಿ ಕಾರು ಮಾದರಿಗಳನ್ನು ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ.ಇ(XUV.e) ಮತ್ತು ಬಿಇ (BE) ಎನ್ನುವ ಎರಡು ಬ್ರಾಂಡ್‌ಗಳ ಅಡಿಯಲ್ಲಿ ಮಾರಾಟ ಮಾಡಲಿದ್ದು, ಹೊಸ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗಾಗಿ ಮಹೀಂದ್ರಾ ಕಂಪನಿಯು ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದೆ.

ಕರ್ನಾಟಕದಲ್ಲಿ ನಿರ್ಮಾಣವಾಗಲಿದೆ ಮಹೀಂದ್ರಾ ಹೊಸ ಇವಿ ಕಾರು ಉತ್ಪಾದನಾ ಘಟಕ?

ಹೊಸ ಹೂಡಿಕೆಯಲ್ಲಿ ಕಂಪನಿಯು ಪ್ರತ್ಯೇಕ ಉತ್ಪಾದನಾ ಘಟಕವನ್ನು ಸಹ ತೆರೆಯುವ ಯೋಜನೆ ರೂಪಿಸಿದ್ದು, ಹೊಸ ಇವಿ ಕಾರು ಉತ್ಪಾದನಾ ಘಟಕ ನಿರ್ಮಾಣಕ್ಕಾಗಿ ಕಂಪನಿಯು ಈಗಾಗಲೇ ಪ್ರಮುಖ ರಾಜ್ಯ ಸರ್ಕಾರಗಳ ಜೊತೆಗೆ ಚರ್ಚೆ ನಡೆಸಿದೆ.

ಕರ್ನಾಟಕದಲ್ಲಿ ನಿರ್ಮಾಣವಾಗಲಿದೆ ಮಹೀಂದ್ರಾ ಹೊಸ ಇವಿ ಕಾರು ಉತ್ಪಾದನಾ ಘಟಕ?

ಆಟೋಮೊಬೈಲ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿ ಕರ್ನಾಟಕದೊಂದಿಗೂ ಸಹ ಮಹೀಂದ್ರಾ ಕಂಪನಿಯ ಹಿರಿಯ ಅಧಿಕಾರಿಗಳು ಚರ್ಚೆ ನಡೆಸಿದ್ದು, ರಾಜ್ಯ ಸರ್ಕಾರಗಳ ಪ್ರೋತ್ಸಾಹವನ್ನು ನಿರ್ಣಯಿಸಿದ ನಂತರವಷ್ಟೇ ಮಹೀಂದ್ರಾ ಕಂಪನಿಯು ಕಂಪನಿಯು ತನ್ನ ಘಟಕವನ್ನು ಎಲ್ಲಿ ಸ್ಥಾಪಿಸಬೇಕು ಎಂಬುವ ಅಂತಿಮ ನಿರ್ಧಾರವನ್ನು ಪ್ರಕಟಿಸಲಿದೆ.

ಕರ್ನಾಟಕದಲ್ಲಿ ನಿರ್ಮಾಣವಾಗಲಿದೆ ಮಹೀಂದ್ರಾ ಹೊಸ ಇವಿ ಕಾರು ಉತ್ಪಾದನಾ ಘಟಕ?

ಹೊಸ ಉತ್ಪಾದನಾ ಘಟಕ ನಿರ್ಮಾಣಕ್ಕಾಗಿ ಭೂಸ್ಪಾಧೀನ ಪ್ರಕ್ರಿಯೆಗಳಿಗಾಗಿ ವಿವಿಧ ರಾಜ್ಯಗಳ ಜೊತೆ ಸಂಪರ್ಕದಲ್ಲಿರುವುದಾಗಿ ಮಹೀಂದ್ರಾ ಆಟೋ ಮತ್ತು ಫಾರ್ಮ್ ವಲಯದ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಶ್ ಜೆಜುರಿಕರ್ ದೃಡಪಡಿಸಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಹೊಸ ಇವಿ ಕಾರು ಉತ್ಪಾದನಾ ಘಟಕದ ನಿರ್ಮಾಣದ ಸ್ಥಳ ಕುರಿತಾಗಿ ಅಂತಿಮ ನಿರ್ಣಯ ಪ್ರಕಟಿಸುವುದಾಗಿ ಹೇಳಿಕೊಂಡಿದ್ದಾರೆ.

ಕರ್ನಾಟಕದಲ್ಲಿ ನಿರ್ಮಾಣವಾಗಲಿದೆ ಮಹೀಂದ್ರಾ ಹೊಸ ಇವಿ ಕಾರು ಉತ್ಪಾದನಾ ಘಟಕ?

ಆಟೋಮೊಬೈಲ್ ಉತ್ಪಾದನೆಯಲ್ಲಿ ಸದ್ಯ ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ ಮತ್ತು ದೆಹಲಿ ಮುಂಚೂಣಿಯಲ್ಲಿದ್ದು, ಮಹೀಂದ್ರಾ ಕಂಪನಿಯು ಹೊಸ ಇವಿ ಕಾರು ಉತ್ಪಾದನಾ ಘಟಕವನ್ನು ತಮಿಳುನಾಡು ಇಲ್ಲವೇ ಕರ್ನಾಟಕದಲ್ಲಿ ಸ್ಥಾಪನೆ ಮಾಡಬಹುದಾದ ಸಾಧ್ಯತೆಗಳು ಹೆಚ್ಚಿವೆ.

ಕರ್ನಾಟಕದಲ್ಲಿ ನಿರ್ಮಾಣವಾಗಲಿದೆ ಮಹೀಂದ್ರಾ ಹೊಸ ಇವಿ ಕಾರು ಉತ್ಪಾದನಾ ಘಟಕ?

ಮಹೀಂದ್ರಾ ಕಂಪನಿಯು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಇನ್‌ಗ್ಲೊ(INGLO) ಪ್ಲಾಟ್‌ಫಾರ್ಮ್ ಆರ್ಕಿಟೆಕ್ಚರ್‌ನಲ್ಲಿ ನಿರ್ಮಾಣ ಮಾಡಲು ನಿರ್ಧರಿಸಿದ್ದು, ಹೊಸ ಇವಿ ಕಾರುಗಳಲ್ಲಿ ಮೂರು ಎಸ್‌ಯುವಿ ಮಾದರಿಗಳಾಗಿದ್ದರೆ ಎರಡು ಎಸ್‌ಯುವಿ ಕೂಪೆ ಶೈಲಿಯಲ್ಲಿ ಆಧರಿಸಿರಲಿವೆ.

ಕರ್ನಾಟಕದಲ್ಲಿ ನಿರ್ಮಾಣವಾಗಲಿದೆ ಮಹೀಂದ್ರಾ ಹೊಸ ಇವಿ ಕಾರು ಉತ್ಪಾದನಾ ಘಟಕ?

ಎಕ್ಸ್‌ಯುವಿ.ಇ(XUV.e) ಬ್ರಾಂಡ್ ಅಡಿಯಲ್ಲಿ ಎಕ್ಸ್‌ಯುವಿ.ಇ8(XUV.E8) ಮತ್ತು ಎಕ್ಸ್‌ಯುವಿ.ಇ9(XUV.E9) ಮಾರಾಟಗೊಳ್ಳಲಿದ್ದರೆ ಬಿಇ(BE) ಬ್ರಾಂಡ್ ಅಡಿಯಲ್ಲಿ ಬಿಇ.05(BE.05). ಬಿಇ.07(BE.07) ಮತ್ತು ಬಿಇ.09(BE.09) ಕಾರುಗಳು ಮಾರಾಟಗೊಳ್ಳಲಿವೆ.

ಕರ್ನಾಟಕದಲ್ಲಿ ನಿರ್ಮಾಣವಾಗಲಿದೆ ಮಹೀಂದ್ರಾ ಹೊಸ ಇವಿ ಕಾರು ಉತ್ಪಾದನಾ ಘಟಕ?

ಮಹೀಂದ್ರಾ ಕಂಪನಿಯು ಮೊದಲ ಹಂತದಲ್ಲಿ ಎಕ್ಸ್‌ಯುವಿ.ಇ ಬ್ರಾಂಡ್ ಕಾರುಗಳನ್ನು ಮಾರಾಟಗೊಳಿಸಲಿದ್ದು, ತದನಂತರವಷ್ಟೇ ಬಿಇ ಬ್ರಾಂಡ್ ಇವಿ ಕಾರುಗಳನ್ನು ಬಿಡುಗಡೆ ಮಾಡಲಿದೆ. 2024ರ ಕೊನೆಯಲ್ಲಿ ಎಕ್ಸ್‌ಯುವಿ.ಇ ಕಾರುಗಳ ಮಾರಾಟ ಆರಂಭವಾಗಲಿದ್ದು, ಬಿಇ ಬ್ರಾಂಡ್ ಕಾರುಗಳ ಮಾರಾಟವು 2025ರ ಕೊನೆಯಲ್ಲಿ ಆರಂಭವಾಗಲಿದೆ.

ಕರ್ನಾಟಕದಲ್ಲಿ ನಿರ್ಮಾಣವಾಗಲಿದೆ ಮಹೀಂದ್ರಾ ಹೊಸ ಇವಿ ಕಾರು ಉತ್ಪಾದನಾ ಘಟಕ?

ಹೊಸ ಇವಿ ಕಾರುಗಳು ಅತ್ಯಾಧುನಿಕ ಸೌಲಭ್ಯದೊಂದಿಗೆ ಅತ್ಯಧಿಕ ಮೈಲೇಜ್ ಪ್ರೇರಿತ ಬ್ಯಾಟರಿ ಪ್ಯಾಕ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಹೊಸ ಇವಿ ಕಾರು ಮಾದರಿಗಳು ಅಡ್ವಾನ್ಸ್ ಫ್ಯೂಚರಿಸ್ಟಿಕ್ ವಿನ್ಯಾಸವನ್ನು ಹೊಂದಿರುವುದು ಪ್ರಮುಖ ಆಕರ್ಷಣೆಯಾಗಿವೆ.

ಕರ್ನಾಟಕದಲ್ಲಿ ನಿರ್ಮಾಣವಾಗಲಿದೆ ಮಹೀಂದ್ರಾ ಹೊಸ ಇವಿ ಕಾರು ಉತ್ಪಾದನಾ ಘಟಕ?

ಹೊಸ ಪ್ಲ್ಯಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಲಿರುವ ಮಹೀದ್ರಾ ಬಾರ್ನ್ ಇವಿ ಕಾರುಗಳು 60 ರಿಂದ 80 kWh ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿರಲಿದ್ದು, ಹಾಗೆಯೇ ಹೊಸ ಕಾರುಗಳು 175kW ಫಾಸ್ಟ್ ಚಾರ್ಜಿಂಗ್ ಸೌಲಭ್ಯದೊಂದಿಗೆ ಕೇವಲ 30 ನಿಮಿಷಗಳಲ್ಲಿ ಸೊನ್ನೆಯಿಂದ ಶೇ.80ರಷ್ಟು ರೀಚಾರ್ಜ್ ವೈಶಿಷ್ಟ್ಯತೆ ಹೊಂದಿರಲಿವೆ.

ಕರ್ನಾಟಕದಲ್ಲಿ ನಿರ್ಮಾಣವಾಗಲಿದೆ ಮಹೀಂದ್ರಾ ಹೊಸ ಇವಿ ಕಾರು ಉತ್ಪಾದನಾ ಘಟಕ?

ಇದರೊಂದಿಗೆ ಮಹೀಂದ್ರಾ ಕಂಪನಿಯು ಹೊಸ ಪ್ಲ್ಯಾಟ್‌ಫಾರ್ಮ್ ನಿರ್ಮಾಣಗೊಳಿಸಿದ ಐದು ಇವಿ ಕಾರು ಮಾದರಿಗಳಿಗೂ ಸುರಕ್ಷತೆಯಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್‌ ಒದಗಿಸುವ ಭರವಸೆ ವ್ಯಕ್ತಪಡಿಸಿದ್ದು, ಇವುಗಳಲ್ಲಿ ರಿಯರ್ ವ್ಹೀಲ್ ಡ್ರೈವ್ ಮತ್ತು ಆಲ್ ವೀಲ್ ಡ್ರೈವ್ ಮಾದರಿಗಳನ್ನು ಒಳಗೊಂಡಿದೆ.

ಕರ್ನಾಟಕದಲ್ಲಿ ನಿರ್ಮಾಣವಾಗಲಿದೆ ಮಹೀಂದ್ರಾ ಹೊಸ ಇವಿ ಕಾರು ಉತ್ಪಾದನಾ ಘಟಕ?

ಈ ಮೂಲಕ ಹೊಸ ಮಾದರಿಗಳು ಮೈಲೇಜ್ ಮತ್ತು ಪ್ರೀಮಿಯಂ ಫೀಚರ್ಸ್‌ಗಳ ಜೊತೆಗೆ ಪರ್ಫಾಮೆನ್ಸ್‌ನಲ್ಲೂ ಗಮನಸೆಳೆಯಲಿದ್ದು, ರಿಯಲ್ ವ್ಹೀಲ್ ಮಾದರಿಗಳು 231 ಬಿಎಚ್‌ಪಿಯಿಂದ 285 ಬಿಎಚ್‌ಪಿ ಉತ್ಪಾದಿಸಲಿದ್ದರೆ ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಹೊಂದಿರುವ ಕಾರು ಮಾದರಿಗಳು 340 ಬಿಎಚ್‌ಪಿಯಿಂದ 394 ಬಿಎಚ್‌ಪಿ ಉತ್ಪಾದಿಸಬಲ್ಲವು.

ಕರ್ನಾಟಕದಲ್ಲಿ ನಿರ್ಮಾಣವಾಗಲಿದೆ ಮಹೀಂದ್ರಾ ಹೊಸ ಇವಿ ಕಾರು ಉತ್ಪಾದನಾ ಘಟಕ?

ವೈಶಿಷ್ಟ್ಯತೆಗಳ ವಿಷಯದಲ್ಲಿ ಹೊಸ ಇವಿ ಕಾರು ಮಾದರಿಗಳು ಐಷಾರಾಮಿ ಕಾರುಗಳಲ್ಲೂ ಇಲ್ಲದ ಹಲವು ಹೊಸ ಫೀಚರ್ಸ್‌ಗಳೊಂದಿಗೆ ಲೆವಲ್ 2 ಎಡಿಎಎಸ್ ಸೇರಿದಂತೆ ಹಲವಾರು ಫೀಚರ್ಸ್ ಹೊಂದಿರಲಿದ್ದು, ಎಲ್ಲಾ ವರ್ಗದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಹೊಸ ಉತ್ಪನ್ನಗಳನ್ನು ಸಿದ್ದಪಡಿಸಲಾಗುತ್ತಿದೆ.

ಕರ್ನಾಟಕದಲ್ಲಿ ನಿರ್ಮಾಣವಾಗಲಿದೆ ಮಹೀಂದ್ರಾ ಹೊಸ ಇವಿ ಕಾರು ಉತ್ಪಾದನಾ ಘಟಕ?

ಜೊತೆಗೆ ಹೊಸ ಇವಿ ಕಾರುಗಳ ಉತ್ಪಾದನೆಗಾಗಿ ಮಹೀಂದ್ರಾ ಕಂಪನಿಯು ಫೋಕ್ಸ್‌ವ್ಯಾಗನ್ ಕಂಪನಿಯ ಎಂಇಬಿ ಪ್ಲಾಟ್‌ಫಾರ್ಮ್‌ ಅಡಿ ನಿರ್ಮಾಣವಾಗುವ ಇವಿ ಕಾರುಗಳ ಬಿಡಿಭಾಗಳ ಬಳಕೆಗಾಗಿ ಪಾಲುದಾರಿಕೆ ಪ್ರಕಟಿಸಿದ್ದು, ಹೊಸ ಎಲೆಕ್ಟ್ರಿಕ್ ಕಾರು ಮಾದರಿಗಳಿಗಾಗಿ ಪ್ಲ್ಯಾಟ್‌ಫಾರ್ಮ್, ಬ್ಯಾಟರಿ ಉತ್ಪಾದನೆ ಮತ್ತು ಪ್ರಮುಖ ತಾಂತ್ರಿಕ ಸೌಲಭ್ಯಗಳನ್ನು ಎರವಲು ಪಡೆದುಕೊಳ್ಳಲಿದೆ.

Most Read Articles

Kannada
English summary
Mahindra in talks with mojor state government for new ev plant setup
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X