ಪ್ರತಿಸ್ಪರ್ಧಿಗಳ ನಿದ್ದೆ ಕೆಡಿಸಿದ ಮಹೀಂದ್ರಾ...ಗ್ರಾಹಕರ ನಿರೀಕ್ಷೆಗಿಂತ ವೇಗವಾಗಿ ಕೈಸೇರಲಿವೆ ಹೊಸ ಕಾರುಗಳು

ಮಹೀಂದ್ರಾ ಕಂಪನಿ ತನ್ನ ಆಕ್ರಮಣಕಾರಿ ನಿರ್ಧಾರದಿಂದ ಇದೀಗ ತನ್ನ ಪ್ರತಿಸ್ಪರ್ಧಿಗಳ ನಿದ್ದೆ ಕೆಡಿಸಿದೆ. ಈ ಕುರಿತ ಆಸಕ್ತಿಕರ ಮಾಹಿತಿಯನ್ನು ಈ ಲೇಖನದಲ್ಲಿ ನೋಡಬಹುದು.

ಮಹೀಂದ್ರಾ ತನ್ನ SUV ಗಳ ಉತ್ಪಾದನೆಯಲ್ಲಿ ವಿಶ್ವಾದ್ಯಂತ ಬಹಳ ಜನಪ್ರಿಯವಾಗಿದೆ. ಈ ಕಂಪನಿಯ ಎಸ್‌ಯುವಿಗಳನ್ನು ಖರೀದಿಸಲು ಗ್ರಾಹಕರು ಈಗ ಪೈಪೋಟಿ ಬೀಳುತ್ತಿದ್ದು, ಮಹೀಂದ್ರಾ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ.

ಪ್ರತಿಸ್ಪರ್ಧಿಗಳ ನಿದ್ದೆ ಕೆಡಿಸಿದ ಮಹೀಂದ್ರಾ...ಗ್ರಾಹಕರ ನಿರೀಕ್ಷೆಗಿಂತ ವೇಗವಾಗಿ ಕೈಸೇರಲಿವೆ ಹೊಸ ಕಾರುಗಳು

ವಿಶೇಷವಾಗಿ ಮಹೀಂದ್ರಾ XUV300, ಮಹೀಂದ್ರಾ XUV700, ಮಹೀಂದ್ರಾ ಸ್ಕಾರ್ಪಿಯೋ N ಮತ್ತು ಮಹೀಂದ್ರಾ ಥಾರ್ ಕಾರು ಮಾದರಿಗಳನ್ನು ಅನೇಕ ಜನರು ಬುಕ್ ಮಾಡುತ್ತಿರುವುದರಿಂದ, ಈ ಕಾರುಗಳಿಗೆ ಕಾಯುವ ಅವಧಿ ತುಂಬಾ ಹೆಚ್ಚಾಗಿದೆ.

ಅದರಲ್ಲೂ ಎಕ್ಸ್‌ಯುವಿ700 ಮತ್ತು ಸ್ಕಾರ್ಪಿಯೊ ಎನ್‌ನ ಕಾಯುವ ಅವಧಿಯು ಗ್ರಾಹಕರಿಗೆ ಕಿರಿಕಿರಿ ಉಂಟುಮಾಡುತ್ತದೆ. XUV700 ಪ್ರಸ್ತುತ 4-6 ವಾರಗಳಿಂದ 72 ವಾರಗಳವರೆಗೆ ಕಾಯುವ ಅವಧಿಯನ್ನು ಹೊಂದಿದೆ ಎಂದು ವರದಿಗಳು ಸೂಚಿಸುತ್ತಿವೆ. ಇನ್ನು ಸ್ಕಾರ್ಪಿಯೊ ಎನ್ ಕಾರಿಗೆ ಕಾಯುವ ಅವಧಿಯು 15 ವಾರಗಳಿಂದ 105 ವಾರಗಳವರೆಗೆ ಇದೆ.

ಈ ಕಾರುಗಳನ್ನು ಬುಕ್ ಮಾಡುವ ಗ್ರಾಹಕರು ವೇರಿಯಂಟ್‌ಗಳ ಆಧಾರದ ಮೇಲೆ ಇಷ್ಟು ದಿನಗಳ ಕಾಲ ಕಾಯಬೇಕಾಗುತ್ತದೆ. ಅದರ ನಂತರವೇ ಕಾರು ಲಭ್ಯವಾಗಲಿದೆ. ಈ ಸುದೀರ್ಘ ಕಾಯುವ ಅವಧಿಯು ಗ್ರಾಹಕರ ತಾಳ್ಮೆಯನ್ನು ಪರೀಕ್ಷಿಸುತ್ತಿದೆ. ಹೀಗಾಗಿ ಮಹೀಂದ್ರಾ ಕಂಪನಿ ಈಗ ಕಠಿಣ ನಿರ್ಧಾರ ಕೈಗೊಂಡಿದೆ.

ಹೌದು, ಕಾಯುವ ಅವಧಿಯನ್ನು ಕಡಿಮೆ ಮಾಡಲು ಕಾರುಗಳ ಉತ್ಪಾದನೆಯನ್ನು ಹೆಚ್ಚಿಸುವುದಾಗಿ ಮಹೀಂದ್ರಾ ಘೋಷಿಸಿದೆ. ಅದರಂತೆ, XUV300 ಕಾರಿನ ಉತ್ಪಾದನೆಯನ್ನು ತಿಂಗಳಿಗೆ 9,500 ಕ್ಕೆ ಹೆಚ್ಚಿಸಲಾಗುವುದು ಕಂಪನಿ ತಿಳಿಸಿದೆ. ಪ್ರಸ್ತುತ ತಿಂಗಳಿಗೆ 5,000 XUV300 ಕಾರುಗಳನ್ನು ಮಾತ್ರ ಉತ್ಪಾದಿಸಲಾಗುತ್ತಿದೆ.

ಅದೇ ರೀತಿ, XUV700 ಉತ್ಪಾದನೆಯನ್ನು ತಿಂಗಳಿಗೆ 6,000 ರಿಂದ 10,000 ಕ್ಕೆ ಹೆಚ್ಚಿಸಲಾಗುವುದು. ಮತ್ತೊಂದೆಡೆ, ಸ್ಕಾರ್ಪಿಯೊ ಎನ್ ಕಾರಿನ ಉತ್ಪಾದನೆಯು ಪ್ರಸ್ತುತ ತಿಂಗಳಿಗೆ ಕೇವಲ 6,000 ಯುನಿಟ್‌ಗಳಲ್ಲಿದೆ. ಇದನ್ನು ತಿಂಗಳಿಗೆ 10,000 ಕಾರುಗಳಿಗೆ ಹೆಚ್ಚಿಸಲಾಗುವುದು. ಮಹೀಂದ್ರಾ ಈ ಸಾಲಿನಲ್ಲಿ ಥಾರ್ ಎಸ್‌ಯುವಿ ಉತ್ಪಾದನೆಯನ್ನು ಹೆಚ್ಚಿಸಲಿದೆ.

ಪ್ರಸ್ತುತ ತಿಂಗಳಿಗೆ 4,000 ಥಾರ್ ಎಸ್‌ಯುವಿಗಳನ್ನು ಮಾತ್ರ ಉತ್ಪಾದಿಸಲಾಗುತ್ತಿದೆ. ಈ ಸಂಖ್ಯೆಯನ್ನು ತಿಂಗಳಿಗೆ 6,000 ಕ್ಕೆ ಹೆಚ್ಚಿಸಲಾಗುವುದು. ಉತ್ಪಾದನೆ ಹೆಚ್ಚಾದಂತೆ ಮಹೀಂದ್ರಾ ಕಾರುಗಳ ಕಾಯುವ ಅವಧಿ ಕಡಿಮೆಯಾಗಲಿದೆ. ಈ ಕಾರಣದಿಂದಾಗಿ, ಗ್ರಾಹಕರು ವೇಗವಾಗಿ ವಿತರಣೆಯನ್ನು ಪಡೆಯಬಹುದು.

ಹಾಗಾಗಿ ಮಹೀಂದ್ರಾ ಕಾರುಗಳನ್ನು ಬುಕ್ ಮಾಡಿ ಡೆಲಿವರಿಗಾಗಿ ಕಾಯುವ ಗ್ರಾಹಕರು ಖುಷಿಯಾಗಿದ್ದಾರೆ. ಉತ್ಪಾದನೆಯ ಹೆಚ್ಚಳದಿಂದಾಗಿ, ಮಹೀಂದ್ರಾ ಕಾರುಗಳ ಮಾರಾಟವೂ ಹೆಚ್ಚಾಗುತ್ತದೆ. ಇದು ಸ್ಪರ್ಧಾತ್ಮಕ ಕಂಪನಿಗಳಿಗೆ ತೀವ್ರ ಒತ್ತಡವನ್ನು ಉಂಟುಮಾಡುವ ನಿರೀಕ್ಷೆಯಿದೆ. ಮುಂದಿನ ದಿನಗಳಲ್ಲಿ ಮಾರಾಟ ಕೂಡ ಹೆಚ್ಚಾಗಲಿರುವ ಕಾರಣ ಕಂಪನಿ ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದೆ.

ಈಗಾಗಲೇ ಮಹೀಂದ್ರಾ ಹೊಸ ಸ್ಕಾರ್ಪಿಯೋ-ಎನ್ ಹಾಗೂ XUV700 ನಂತಹ ಕಾರುಗಳಿಗೆ ಬೇಡಿಕೆ ಹೆಚ್ಚಿಸಿಕೊಂಡು ತನ್ನ ಲೈನ್‌ಅಪ್‌ ಅನ್ನು ವಿಸ್ತರಿಸುತ್ತಾ ಸಾಗಿದೆ. ಇನ್ನು ಎಲೆಕ್ಟ್ರಿಕ್ ಲೈನಪ್ ಅನ್ನು ಕೂಡ ಮುಂದಿನ ದಿನಗಳಲ್ಲಿ ಮತ್ತುಷ್ಟು ವೇಗಗೊಳಿಸಿ, ಟಾಟಾಗೆ ತೀರ್ವ ಪೈಪೋಟಿ ನೀಡಲು ಸಜ್ಜಾಗುತ್ತಿದೆ ಎಂದು ತಿಳಿದುಬಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಂ ಮತ್ತು ಯೂಟ್ಯೂಬ್ ಚಾನಲ್‌ಗಳೊಂದಿಗೆ ಸಂಪರ್ಕದಲ್ಲಿರಿ.

Most Read Articles

Kannada
English summary
Mahindra new cars will reach customers faster than expected
Story first published: Saturday, November 12, 2022, 12:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X