ಬೊಲೆರೊ ಮ್ಯಾಕ್ಸ್ ಪಿಕ್-ಅಪ್ ಸಿಟಿ 3000 ಬಿಡುಗಡೆ ಮಾಡಿದ ಮಹೀಂದ್ರಾ

ವಾಣಿಜ್ಯ ವಾಹನಗಳ ಮಾರಾಟದಲ್ಲಿ ಪ್ರತಿಸ್ಪರ್ಧಿ ಕಂಪನಿ ಟಾಟಾ ಮೋಟಾರ್ಸ್‌ಗೆ ಪೈಪೋಟಿಯಾಗಿ ಹೊಸ ವಾಹನಗಳನ್ನು ಪರಿಚಯಿಸುತ್ತಿದ್ದು, ಕಂಪನಿಯು ಇದೀಗ ಹೊಸ ಫೀಚರ್ಸ್ ಒಳಗೊಂಡಿರುವ ಬೊಲೆರೊ ಮ್ಯಾಕ್ಸ್ ಪಿಕ್-ಅಪ್ ಸಿಟಿ 3000 ಬಿಡುಗಡೆ ಮಾಡಿದೆ.

ಬೊಲೆರೊ ಮ್ಯಾಕ್ಸ್ ಪಿಕ್-ಅಪ್ ಸಿಟಿ 3000 ಬಿಡುಗಡೆ ಮಾಡಿದ ಮಹೀಂದ್ರಾ

ಹೊಸ ಮಹೀಂದ್ರಾ ಬೊಲೆರೊ ಮ್ಯಾಕ್ಸ್ ಪಿಕ್-ಅಪ್ ಸಿಟಿ 3000 ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 7,68,000 ಆರಂಭಿಕ ಬೆಲೆ ಹೊಂದಿದ್ದು, ಹೊಸ ಬೊಲೆರೊ ಮ್ಯಾಕ್ಸ್ ಪಿಕ್-ಅಪ್ ಸಿಟಿ 3000 ಅನ್ನು ಖರೀದಿಸಲು ಆಕರ್ಷಕ ಹಣಕಾಸು ಆಯ್ಕೆಗಳೊಂದಿಗೆ ಸಹ ಘೋಷಣೆ ಮಾಡಲಾಗಿದೆ.

ಬೊಲೆರೊ ಮ್ಯಾಕ್ಸ್ ಪಿಕ್-ಅಪ್ ಸಿಟಿ 3000 ಬಿಡುಗಡೆ ಮಾಡಿದ ಮಹೀಂದ್ರಾ

ಮಹೀಂದ್ರಾ ಫೈನಾನ್ಸ್ ಅಡಿಯಲ್ಲಿ ಆಕರ್ಷಕ ಬಡ್ಡಿ ದರದೊಂದಿಗೆ ನೀವು ಕೇವಲ ರೂ. 25,000 ಡೌನ್ ಪಾವತಿಯೊಂದಿಗೆ ವಾಹನವನ್ನು ಬುಕ್ ಮಾಡಬಹುದಾಗಿದ್ದು, ಹೊಸ ವಾಣಿಜ್ಯ ವಾಹನವು ಶೀಘ್ರದಲ್ಲಿಯೇ ವಿತರಣೆಯಾಗಲಿದೆ.

ಬೊಲೆರೊ ಮ್ಯಾಕ್ಸ್ ಪಿಕ್-ಅಪ್ ಸಿಟಿ 3000 ಬಿಡುಗಡೆ ಮಾಡಿದ ಮಹೀಂದ್ರಾ

ಹೊಸ ಮಹೀಂದ್ರಾ ಬೊಲೆರೊ ಮ್ಯಾಕ್ಸ್ ಪಿಕ್-ಅಪ್ ಸಿಟಿ 3000 ಮಾದರಿಯು ಗರಿಷ್ಠ 1300 ಕೆಜಿ ಪೇಲೋಡ್ ಸಾಮರ್ಥ್ಯವನ್ನು ಹೊಂದಿದ್ದು, ಇದು 1700 ಎಂಎಂ ಅಗಲದ ಲೋಡಿಂಗ್ ಡೆಕ್ ಅನ್ನು ಪಡೆದುಕೊಂಡಿದೆ.

ಬೊಲೆರೊ ಮ್ಯಾಕ್ಸ್ ಪಿಕ್-ಅಪ್ ಸಿಟಿ 3000 ಬಿಡುಗಡೆ ಮಾಡಿದ ಮಹೀಂದ್ರಾ

ಹೊಸ ಪಿಕ್-ಅಪ್‌ನಲ್ಲಿ ಕಂಪನಿಯು m2Di ಡೀಸೆಲ್ ಎಂಜಿನ್ ಅನ್ನು ಬಳಸಲಾಗಿದ್ದು, ಇದು 65 ಬಿಎಚ್‌ಪಿ ಪವರ್ ಮತ್ತು 195 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಉತ್ತಮ ಇಂಧನ ದಕ್ಷತೆ ಹೊಂದಿದ್ದು, ಪ್ರತಿ ಲೀಟರ್‌ಗೆ ಈ ವಾಹನವು 17.2 kmpl ಮೈಲೇಜ್ ನೀಡಬಲ್ಲದು ಎಂದು ಕಂಪನಿ ಹೇಳಿಕೊಂಡಿದೆ.

ಬೊಲೆರೊ ಮ್ಯಾಕ್ಸ್ ಪಿಕ್-ಅಪ್ ಸಿಟಿ 3000 ಬಿಡುಗಡೆ ಮಾಡಿದ ಮಹೀಂದ್ರಾ

ಜೊತೆಗೆ ಉತ್ತಮ ಲೋಡಿಂಗ್ ಅನ್ನು ಬೆಂಬಲಿಸಲು ಹೊಸ ವಾಹನದಲ್ಲಿ R15 ಟೈರ್‌ಗಳನ್ನು ಜೋಡಿಸಲಾಗಿದ್ದು, ಮಹೀಂದ್ರಾ 20,000 ಕಿಮೀ ಉದ್ದದ ಸೇವಾ ಮಧ್ಯಂತರದೊಂದಿಗೆ 3 ವರ್ಷ/1,00,000 ಕಿಮೀ ವಾರಂಟಿಯನ್ನು ಸಹ ನೀಡುತ್ತಿದೆ.

ಬೊಲೆರೊ ಮ್ಯಾಕ್ಸ್ ಪಿಕ್-ಅಪ್ ಸಿಟಿ 3000 ಬಿಡುಗಡೆ ಮಾಡಿದ ಮಹೀಂದ್ರಾ

ಇದರಲ್ಲಿ ಮತ್ತೊಂದು ಆಸಕ್ತಿದಾಯಕ ಕೊಡುಗೆ ಏನೆಂದರೆ ಮಹೀಂದ್ರಾದ ಐಮ್ಯಾಕ್ಸ್ ಟೆಲಿಮ್ಯಾಟಿಕ್ಸ್ ಪರಿಹಾರವು ವಾಹನದ ಪರಿಣಾಮಕಾರಿ ನಿರ್ವಹಣೆಯನ್ನು ಸಕ್ರಿಯಗೊಳಿಸಲು ಮತ್ತು ವ್ಯಾಪಾರದ ಉತ್ಪಾದಕತೆಯನ್ನು ಹೆಚ್ಚಿಸಲು ಸಾಕಷ್ಟು ಅನುಕೂಲಕರವಾಗಿದೆ.

ಬೊಲೆರೊ ಮ್ಯಾಕ್ಸ್ ಪಿಕ್-ಅಪ್ ಸಿಟಿ 3000 ಬಿಡುಗಡೆ ಮಾಡಿದ ಮಹೀಂದ್ರಾ

ಹೊಸ ಮಹೀಂದ್ರಾ ಬೊಲೆರೊ ಮ್ಯಾಕ್ಸ್ ಪಿಕ್-ಅಪ್ ಸಿಟಿ 3000ನಲ್ಲಿರುವ ಲಭ್ಯವಿರುವ ಇತರೆ ವೈಶಿಷ್ಟ್ಯಗಳ ಬಗೆಗೆ ಹೇಳುವುದಾದರೆ ಕುರಿತು ಮಾತನಾಡುತ್ತಾ, ಹೊಸ ಮಾದರಿಯಲ್ಲಿ ಟ್ರಕ್ ಡ್ರೈವರ್ ಪ್ಲಸ್ ಟು ಫ್ರಂಟ್ ಸೀಟಿಂಗ್ ಸೆಟಪ್, ಎತ್ತರ ಹೊಂದಾಣಿಕೆಯ ಡ್ರೈವರ್ ಸೀಟ್, ಟರ್ನ್ ಸೇಫ್ ಲೈಟ್, ಹೊಸ ಹೆಡ್‌ಲ್ಯಾಂಪ್‌ಗಳು, ಹೊಸ ಫ್ರಂಟ್ ಗ್ರಿಲ್ ಮತ್ತು ಡಿಜಿಟಲ್ ಕ್ಲಸ್ಟರ್ ಅನ್ನು ಹೊಂದಿದೆ.

ಬೊಲೆರೊ ಮ್ಯಾಕ್ಸ್ ಪಿಕ್-ಅಪ್ ಸಿಟಿ 3000 ಬಿಡುಗಡೆ ಮಾಡಿದ ಮಹೀಂದ್ರಾ

ಜೊತೆಗೆ ಹೊಸ ವಾಹನದ ಚಾಲನೆಯನ್ನು ಪ್ರೀಮಿಯಂ ಆಗಿಸಲು ಹೊಸ ಡ್ಯಾಶ್‌ಬೋರ್ಡ್‌ ನೀಡಲಾಗುತ್ತಿದ್ದು, ಕ್ಲಾಸ್-ಲೀಡಿಂಗ್ ಪವರ್ ಮತ್ತು ಪೇಲೋಡ್ ಸಾಮರ್ಥ್ಯದ ಜೊತೆಗೆ ದಕ್ಷ ಎಂಜಿನ್‌ನಂತಹ ಹಲವು ವೈಶಿಷ್ಟ್ಯತೆ ಈ ವರ್ಗದ-ಮೊದಲ ಫೀಚರ್ಸ್‌ಗಳ ವಾಹನ ಖರೀದಿ ಮೌಲ್ಯ ಹೆಚ್ಚಿಸಲಿವೆ.

ಬೊಲೆರೊ ಮ್ಯಾಕ್ಸ್ ಪಿಕ್-ಅಪ್ ಸಿಟಿ 3000 ಬಿಡುಗಡೆ ಮಾಡಿದ ಮಹೀಂದ್ರಾ

ಹೊಸ ವಾಹನದ ಕುರಿತಾಗಿ ಮಾತನಾಡಿದ ಮಹೀಂದ್ರಾ ಅಂಡ್ ಮಹೀಂದ್ರಾ ಲಿಮಿಟೆಡ್‌ನ ಆಟೋಮೋಟಿವ್ ವಿಭಾಗದ ಅಧ್ಯಕ್ಷ ವಿಜಯ್ ನಕ್ರಾ, "ಮಹೀಂದ್ರಾದಲ್ಲಿ, ನಾವು ನಮ್ಮ ಗ್ರಾಹಕರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲು ನಿರಂತರವಾಗಿ ಶ್ರಮಿಸುತ್ತಿದ್ದು, ನಮ್ಮ ಹೊಸ ಉತ್ಪನ್ನಗಳೊಂದಿಗೆ ಹೆಚ್ಚು ಗಳಿಸಲು ಮತ್ತು ಏಳಿಗೆಯನ್ನು ಸಾಧಿಸಲು ಅನುವು ಮಾಡಿಕೊಡುತ್ತೇವೆ. ಎಂದಿದ್ದಾರೆ.

ಬೊಲೆರೊ ಮ್ಯಾಕ್ಸ್ ಪಿಕ್-ಅಪ್ ಸಿಟಿ 3000 ಬಿಡುಗಡೆ ಮಾಡಿದ ಮಹೀಂದ್ರಾ

ಹಾಗೆಯೇ ಹೊಸ ಬೊಲೆರೊ ಮ್ಯಾಕ್ಸ್ ಪಿಕ್-ಅಪ್ ನಲ್ಲಿರುವ ಸುಧಾರಿತ ಐಮ್ಯಾಕ್ಸ್ ತಂತ್ರಜ್ಞಾನ, ಟರ್ನ್ ಸೇಫ್ ಲೈಟ್‌ಗಳು, ಎತ್ತರ ಹೊಂದಾಣಿಕೆಯ ಚಾಲಕ ಸೀಟ್ ಸೌಲಭ್ಯಗಳು ವಾಹನ ಚಾಲನೆಯನ್ನು ಸರಳಗೊಳಿಸಲಿದ್ದು, ಪಿಕಪ್ ವಿಭಾಗದಲ್ಲಿನ ಹೊಸ ಮಾನದಂಡದವನ್ನು ಪೂರೈಸಿರುವುದು ಗ್ರಾಹಕರ ಗಳಿಕೆ ಹೆಚ್ಚಿಸಲು ಇದು ನೆರವಾಗಲಿದೆ.

ಬೊಲೆರೊ ಮ್ಯಾಕ್ಸ್ ಪಿಕ್-ಅಪ್ ಸಿಟಿ 3000 ಬಿಡುಗಡೆ ಮಾಡಿದ ಮಹೀಂದ್ರಾ

ಜೊತೆಗೆ ಗ್ರಾಹಕರ ಆದ್ಯತೆ ಮೇರೆಗೆ ಹೊಸ ವಾಹನಗಳಲ್ಲಿ ನಿರಂತರವಾಗಿ ಬದಲಾವಣೆ ಪರಿಚಯಿಸುತ್ತಿರುವ ಮಹೀಂದ್ರಾ ಕಂಪನಿಯು iMAX ಸಂಪರ್ಕ ವೈಶಿಷ್ಟ್ಯದೊಂದಿಗೆ ಟೆಲಿಮ್ಯಾಟ್ರಿಕ್ಸ್ ಸುಧಾರಣೆಗೊಳಿಸಿರುವ ಉತ್ತಮ ಬದಲಾವಣೆಯಾಗಿದೆ.

Most Read Articles

Kannada
English summary
Mahindra new maxx pick up city 3000 launched details
Story first published: Wednesday, August 10, 2022, 21:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X