ಬರೋಬ್ಬರಿ 40 ವೆರಿಯೆಂಟ್‌ಗಳನ್ನು ಹೊಂದಿರಲಿದೆ ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್

ಮಹೀಂದ್ರಾ ಕಂಪನಿಯು ಇದೇ ತಿಂಗಳು 27ರಂದು ಹೊಸ ಸ್ಕಾರ್ಪಿಯೋ ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ಹೊಸ ಕಾರಿನ ವೆರಿಯೆಂಟ್‌ಗಳ ಮಾಹಿತಿ ಬಹಿರಂಗವಾಗಿದೆ.

ಬರೋಬ್ಬರಿ 40 ವೆರಿಯೆಂಟ್‌ಗಳನ್ನು ಹೊಂದಿರಲಿದೆ ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್

ನ್ಯೂ ಜನರೇಷನ್ ವೈಶಿಷ್ಟ್ಯತೆ ಹೊಂದಿರುವ ಸ್ಕಾರ್ಪಿಯೋ-ಎನ್ ಮಾದರಿಯು ಪ್ರತಿ ಸ್ಪರ್ಧಿ ಮಾದರಿಗಳಿಗೆ ಪೈಪೋಟಿಯಾಗಿ ಹಲವಾರು ವಿಶೇಷತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಹೊಸ ಕಾರು ಸಂಪೂರ್ಣವಾಗಿ ಹೊಸ ಚಾಸಿಸ್‌ನೊಂದಿಗೆ ಸುಧಾರಿತ ವೈಶಿಷ್ಟ್ಯತೆಗಳು ಮತ್ತು ಹೊಸ ವಿವಿಧ ಎಂಜಿನ್ ಆಯ್ಕೆ ಹೊಂದಿರಲಿದೆ.

ಬರೋಬ್ಬರಿ 40 ವೆರಿಯೆಂಟ್‌ಗಳನ್ನು ಹೊಂದಿರಲಿದೆ ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್

ಹೊಸ ತಲೆಮಾರಿನ ಕಾರನ್ನು ಮಹೀಂದ್ರಾ ಕಂಪನಿಯು ಸ್ಕಾರ್ಪಿಯೋ-ಎನ್ ಹೆಸರಿನಲ್ಲಿ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಮಾದರಿಯು ಬಿಡುಗಡೆಯೊಂದಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಸ್ಕಾರ್ಪಿಯೋ ಮಾದರಿಯನ್ನು ಕಂಪನಿಯು ಸ್ಕಾರ್ಪಿಯೋ-ಕ್ಲಾಸಿಕ್ ಹೆಸರಿನಲ್ಲಿ ಮಾರಾಟ ಮುಂದುವರಿಸಲಿದೆ.

ಬರೋಬ್ಬರಿ 40 ವೆರಿಯೆಂಟ್‌ಗಳನ್ನು ಹೊಂದಿರಲಿದೆ ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್

ಮಹೀಂದ್ರಾ ಕಂಪನಿಯು ಸ್ಕಾರ್ಪಿಯೋ-ಎನ್ ಕಾರಿನಲ್ಲಿ ನ್ಯೂ ಜನರೇಷನ್ ಮಾದರಿಗಳಾದ ಥಾರ್ ಮತ್ತು ಎಕ್ಸ್‌ಯುವಿ700 ಮತ್ತು ಥಾರ್ ಮಾದರಿಯಲ್ಲಿರುವಂತೆ 2.0 ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 2.2 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡಲಿದ್ದು, ಹೊಸ ಕಾರಿನಲ್ಲಿರುವ ಎಂಜಿನ್ ಆಯ್ಕೆಯನ್ನು ಆಧರಿಸಿ ಬರೋಬ್ಬರಿ 40 ವೆರಿಯೆಂಟ್‌ಗಳನ್ನು ಹೊಂದಿರಲಿದೆ.

ಬರೋಬ್ಬರಿ 40 ವೆರಿಯೆಂಟ್‌ಗಳನ್ನು ಹೊಂದಿರಲಿದೆ ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್

ಒಟ್ಟು 40 ವೆರಿಯೆಂಟ್‌ನಲ್ಲಿ ಸ್ಕಾರ್ಪಿಯೋ-ಎನ್ ಮಾದರಿಗಳು 23 ಡೀಸೆಲ್ ವೆರಿಯೆಂಟ್‌ಗಳು, 13 ಪೆಟ್ರೋಲ್ ವೆರಿಯೆಂಟ್‌ಗಳಿದ್ದಲ್ಲಿ ಸ್ಕಾರ್ಪಿಯೋ ಕ್ಲಾಸಿಕ್ ಮಾದರಿಯಲ್ಲಿ 4 ವೆರಿಯೆಂಟ್ ಸೇರಿದ್ದು, ಹೊಸ ವೆರಿಯೆಂಟ್‌ಗಳನ್ನು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳಾಗಿ ವಿಭಜಿಸಲಾಗಿದೆ.

ಬರೋಬ್ಬರಿ 40 ವೆರಿಯೆಂಟ್‌ಗಳನ್ನು ಹೊಂದಿರಲಿದೆ ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್

ಹೊಸ ಕಾರು ಮಾದರಿಯಲ್ಲಿ ಅಳವಡಿಸಲಾಗುತ್ತಿರುವ 2.0 ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 2.2 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಕಂಪನಿಯು ಎಕ್ಸ್‌ಯುವಿ700 ಮಾದರಿಗಿಂತಲೂ ತುಸು ಡಿಟ್ಯೂನ್ ಮಾಡುವ ಮೂಲಕ ಜೋಡಣೆ ಮಾಡಲಾಗುತ್ತಿದ್ದು, ಹೊಸ ಕಾರು ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟಕ್ ಆಟೋಮ್ಯಾಟಿಕ್ ಮಾದರಿಗಳೊಂದಿಗೆ ಬಿಡುಗಡೆಯಾಗಲಿದೆ.

ಬರೋಬ್ಬರಿ 40 ವೆರಿಯೆಂಟ್‌ಗಳನ್ನು ಹೊಂದಿರಲಿದೆ ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್

ಇದಲ್ಲದೇ ಹೊಸ ಮಹೀಂದ್ರಾ ಸ್ಕಾರ್ಪಿಯೊ-ಎನ್ ಪೆಟ್ರೋಲ್ ಮತ್ತು ಡೀಸೆಲ್ ಹೈ ಎಂಡ್ ರೂಪಾಂತರಗಳು ಗ್ರಾಹಕರ ಬೇಡಿಕೆಯೆಂತೆ 4X2 ಮತ್ತು 4X4 ಆಯ್ಕೆಗಳೊಂದಿಗೆ ಲಭ್ಯವಿರಲಿದ್ದು, ಹೊಸ ಕಾರಿನಲ್ಲಿ ಕಂಪನಿಯು ಇನ್ನು ಹಲವಾರು ಹೊಸ ಸೌಲಭ್ಯಗಳನ್ನು ನೀಡಿದೆ.

ಬರೋಬ್ಬರಿ 40 ವೆರಿಯೆಂಟ್‌ಗಳನ್ನು ಹೊಂದಿರಲಿದೆ ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್

ಹಾಗೆಯೇ ಹೊಸ ಕಾರು ಪ್ರಮುಖ ಪ್ರೀಮಿಯಂ ಫೀಚರ್ಸ್‌ಗಳಿಂದಾಗಿ ಮತ್ತಷ್ಟು ಬಲಿಷ್ಠ ವಿನ್ಯಾಸ ಹೊಂದಿದ್ದು, ಇದು 4,662 ಎಂಎಂ ಉದ್ದಳತೆ ಮತ್ತು 2,750 ಎಂಎಂ ವಿಸ್ತರಿತ ವೀಲ್ಹ್ ಬೆಸ್ ಮೂಲಕ ಅರಾಮದಾಯಕ ಕ್ಯಾಬಿನ್ ಸ್ಪೆಸ್ ಹೊಂದಿದೆ. ಹೊಸ ಕಾರು ಪ್ರಸ್ತುತ ಮಾದರಿಗಿಂತಲೂ ಹೆಚ್ಚುವರಿಯಾಗಿ 206 ಎಂಎಂ ಉದ್ದ ಮತ್ತು 97 ಎಂಎಂ ಅಗಲ ಹೊಂದಿದ್ದರೆ 125 ಎಂಎಂ ನಷ್ಟು ಪ್ರಸ್ತುತ ಮಾದರಿಗಿಂತಲೂ ಕಡಿಮೆ ಎತ್ತರ ಹೊಂದಿದೆ.

ಬರೋಬ್ಬರಿ 40 ವೆರಿಯೆಂಟ್‌ಗಳನ್ನು ಹೊಂದಿರಲಿದೆ ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್

ವ್ಹೀಲ್‌ಬೇಸ್ ಸೌಲಭ್ಯವು ಪ್ರಸ್ತುತ ಮಾದರಿಗಿಂತಲೂ 70 ಎಂಂ ಉದ್ದವಾಗಿರುವುದರಿಂದ ಇದು ಖಂಡಿತವಾಗಿಯೂ ಹೆಚ್ಚಿನ ವೇಗದ ಸ್ಥಿರತೆಯನ್ನು ಸುಧಾರಿಸಲು ಸಹಾಯ ಮಾಡವುದಲ್ಲದೆ 2ನೇ ಸಾಲಿನಲ್ಲಿ ಕೂರುವ ಪ್ರಯಾಣಿಕರ ಮೊಣಕಾಲುಗಳಿಗೆ ಹೆಚ್ಚಿನ ಸ್ಥಳಾವಕಾಶ ಒದಗಿಸುತ್ತದೆ.

ಬರೋಬ್ಬರಿ 40 ವೆರಿಯೆಂಟ್‌ಗಳನ್ನು ಹೊಂದಿರಲಿದೆ ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್

ಜೊತೆಗೆ ಹೊಸ ಕಾರು ಎಕ್ಸ್‌ಯುವಿ700 ಮಾದರಿಗಿಂತಲೂ ಹೆಚ್ಚುವರಿಯಾಗಿ 27 ಎಂಎಂ ಅಗಲ ಮತ್ತು 115 ಎಂಎಂ ಎತ್ತರವನ್ನು ಹೊಂದಿದ್ದು, ಇದು ನಿಕಟ ಪ್ರತಿಸ್ಪರ್ಧಿ ಟಾಟಾ ಸಫಾರಿ ಎಸ್‌ಯುವಿ ಮಾದರಿಗಿಂತಲೂ ಹೆಚ್ಚುವರಿ 23 ಎಂಎಂ ಅಗಲ ಮತ್ತು 84 ಎಂಎಂ ಎತ್ತರ ಹೊಂದಿದೆ.

ಬರೋಬ್ಬರಿ 40 ವೆರಿಯೆಂಟ್‌ಗಳನ್ನು ಹೊಂದಿರಲಿದೆ ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್

ಹೊಸ ಕಾರಿನಲ್ಲಿ ಈ ಬಾರಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳ ಜೊತೆಗೆ ಹೆಚ್ಚಿನ ಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದ್ದು, ಆರಾಮದಾಯಕವಾದ ಆಸನ ಸೌಲಭ್ಯದೊಂದಿಗೆ ಆರ್ಟಿಫಿಶಲ್ ಇಂಟೆಜೆನ್ಸ್ ಹೊಂದಿರುವ ಅಂಡ್ರಾಯಿಡ್ ಆಟೋ ಮತ್ತು ಆಟೋ ಕಾರ್ ಪ್ಲೇ ಸರ್ಪೊಟ್ ಮಾಡುವ ಇನ್ಪೋಟೈನ್‌ಮೆಂಟ್ ಸಿಸ್ಟಂ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್, ಎಲೆಕ್ಟ್ರಿಕ್ ಸನ್‌ರೂಫ್ ಮತ್ತು ವಿವಿಧ ಡ್ರೈವ್ ಮೋಡ್ ಕಂಟ್ರೋಲ್ ಸೇರಿದಂತೆ ಹಲವು ಹೊಸ ಸೌಲಭ್ಯಗಳಿವೆ.

ಬರೋಬ್ಬರಿ 40 ವೆರಿಯೆಂಟ್‌ಗಳನ್ನು ಹೊಂದಿರಲಿದೆ ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್

ನ್ಯೂ ಜನರೇಷನ್ ಮಾದರಿಯ ಮತ್ತೊಂದು ವಿಶೇಷವೆಂದರೆ ಬ್ರಾಂಡ್ ನ್ಯೂ ಲೋಗೊ ಹೊಂದಿದ್ದು, ಸ್ಟೀರಿಂಗ್ ಮೌಂಟೆಡ್ ಮೇಲೆ ಇರಿಸಲಾಗಿರುವ ಲೋಗೊ ಸಾಕಷ್ಟು ಆಕರ್ಷಕವಾಗಿದೆ. ಹಾಗೆಯೇ ಹೊಸ ಕಾರಿನಲ್ಲಿ ಮಲ್ಟಿ ಏರ್‌ಬ್ಯಾಗ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಆಯ್ದ ವೆರಿಯೆಂಟ್‌ಗಳಲ್ಲಿ ಟ್ವಿನ್ ಪಾಡ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಸೌಲಭ್ಯಗಳಿವೆ.

ಬರೋಬ್ಬರಿ 40 ವೆರಿಯೆಂಟ್‌ಗಳನ್ನು ಹೊಂದಿರಲಿದೆ ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್

ಟಾಪ್ ಎಂಡ್ ಮಾದರಿಗಳಲ್ಲಿ ಹೆಚ್ಚಿನ ಸುರಕ್ಷತೆಗಾಗಿ ಕ್ರೂಸ್ ಕಂಟ್ರೋಲ್, ಸನ್‌ರೂಫ್, ಪುಶ್ ಬಟನ್ ಆನ್/ಆಫ್, ಕೀ ಲೆಸ್ ಎಂಟ್ರಿ, ರೂಫ್ ರೈಲ್ಸ್, ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಫಾಗ್ ಲ್ಯಾಂಪ್, ಎಲ್ಇಡಿ ಟರ್ನ್ ಇಂಡಿಕೇಟಕ್ ಲೈಟ್, ಸಿಲ್ವರ್ ಸ್ಕೀಡ್ ಪ್ಲೇಟ್ ಸೌಲಭ್ಯಗಳಿರಲಿವೆ.

ಬರೋಬ್ಬರಿ 40 ವೆರಿಯೆಂಟ್‌ಗಳನ್ನು ಹೊಂದಿರಲಿದೆ ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್

ಇದರೊಂದಿಗೆ ಹೊಸ ಕಾರಿನಲ್ಲಿ 18 ಇಂಚಿನ ಅಲಾಯ್ ವೀಲ್ಹ್‌ಗಳು, ಹೊಸ ವಿನ್ಯಾಸದ ಫ್ರಂಟ್ ಅಂಡ್ ರಿಯರ್ ಬಂಪರ್ ಮತ್ತು ವಿಸ್ತರಿತ ವೀಲ್ಹ್‌ಬೆಸ್‌ನಿಂದಾಗಿ ಮೂರನೇ ಸಾಲಿನ ಪ್ರಯಾಣಿಕರಿಗೆ ಹೆಚ್ಚಿನ ಮಟ್ಟದ ಸ್ಥಳಾವಕಾಶ ನೀಡಲಿದೆ.

ಬರೋಬ್ಬರಿ 40 ವೆರಿಯೆಂಟ್‌ಗಳನ್ನು ಹೊಂದಿರಲಿದೆ ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್

ಹೊಸ ಕಾರಿನಲ್ಲಿ ರಿಯರ್ ಎಸಿ ವೆಂಟ್ಸ್, ಲೆದರ್ ಸೀಟುಗಳು, 6 ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೀಟ್ ಸೇರಿದಂತೆ ಹೊಸ ಕಾರಿನಲ್ಲಿ ಹಲವಾರು ಸುರಕ್ಷಾ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದೆ.

Most Read Articles

Kannada
English summary
Mahindra new scorpio variants engine details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X