ಭಾರತದಲ್ಲಿ ಜನರಲ್ ಮೋಟಾರ್ಸ್ ಕಾರು ಉತ್ಪಾದನಾ ಘಟಕ ಖರೀದಿಗೆ ಸಿದ್ದವಾದ ಮಹೀಂದ್ರಾ

ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ತನ್ನ ಜನಪ್ರಿಯತೆ ಹೊಂದಿರುವ ಮಹೀಂದ್ರಾ ಕಂಪನಿಯು ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಮುಂಚೂಣಿ ಕಾಯ್ದುಕೊಂಡಿದ್ದು, ಕಂಪನಿಯು ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಯೋಜನೆಗಳೊಂದಿಗೆ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಭಾರತದಲ್ಲಿ ಜನರಲ್ ಮೋಟಾರ್ಸ್ ಕಾರು ಉತ್ಪಾದನಾ ಘಟಕ ಖರೀದಿಗೆ ಸಿದ್ದವಾದ ಮಹೀಂದ್ರಾ

ಭವಿಷ್ಯ ಯೋಜನೆಗಳಲ್ಲಿ ಮಹೀಂದ್ರಾ ಕಂಪನಿಯು ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮೇಲೆ ಹೆಚ್ಚಿನ ಗಮನಹರಿಸುತ್ತಿದ್ದು, ಇದಕ್ಕಾಗಿ ಕಂಪನಿಯು ಹೊಸ ಪ್ಲ್ಯಾಟ್‌ಫಾರ್ಮ್ ತೆರೆಯುತ್ತಿದೆ. ಹೊಸ ಪ್ಲ್ಯಾಟ್‌ಫಾರ್ಮ್ ತೆರೆಯಲು ಕಂಪನಿಯು ಪ್ರತ್ಯೇಕ ಉತ್ಪಾದನಾ ನಿರ್ಮಾಣ ಮಾಡುವ ಯೋಜನೆಯಲ್ಲಿದ್ದು, ಹೊಸ ಉತ್ಪಾದನಾ ಘಟಕ ನಿರ್ಮಾಣಕ್ಕಾಗಿ ಕಂಪನಿಯು ಈಗಾಗಲೇ ಪ್ರಮುಖ ರಾಜ್ಯ ಸರ್ಕಾರಗಳೊಂದಿಗೆ ಸಭೆ ಕೂಡಾ ನಡೆಸಿತ್ತು.

ಭಾರತದಲ್ಲಿ ಜನರಲ್ ಮೋಟಾರ್ಸ್ ಕಾರು ಉತ್ಪಾದನಾ ಘಟಕ ಖರೀದಿಗೆ ಸಿದ್ದವಾದ ಮಹೀಂದ್ರಾ

ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ಮಹೀಂದ್ರಾ ಕಂಪನಿಯು ಹೊಸ ಘಟಕ ನಿರ್ಮಾಣಕ್ಕಾಗಿ ಹೊಸದಾಗಿ ಭೂಮಿ ಖರೀದಿಯ ಬದಲಾಗಿ ಈಗಾಗಲೇ ಕಾರು ಉತ್ಪಾದನೆಗೊಂಡಿದ್ದ ಹಳೆಯ ಕಾರು ಘಟಕವನ್ನೇ ತೆಕ್ಕೆಗೆ ತೆಗೆದುಕೊಳ್ಳುವ ಸುಳಿವು ನೀಡಿದೆ.

ಭಾರತದಲ್ಲಿ ಜನರಲ್ ಮೋಟಾರ್ಸ್ ಕಾರು ಉತ್ಪಾದನಾ ಘಟಕ ಖರೀದಿಗೆ ಸಿದ್ದವಾದ ಮಹೀಂದ್ರಾ

ಹೊಸ ಕಾರು ಉತ್ಪಾದನಾ ಘಟಕಕ್ಕಾಗಿ ಪ್ರಮುಖ ರಾಜ್ಯಗಳಿಗೆ ಭೂಮಿ ಖರೀದಿಗಾಗಿ ಪ್ರಸ್ತಾವನೆ ಸಲ್ಲಿಸಿದ್ದ ಮಹೀಂದ್ರಾ ಕಂಪನಿಯು ಇದೀಗ ಹೊಸ ಘಟಕದ ಬದಲಾಗಿ ಈಗಾಗಲೇ ಸ್ಥಾಪಿತವಾಗಿರುವ ಜನರಲ್ ಮೋಟಾರ್ಸ್ ಘಟಕವನ್ನೇ ಖರೀದಿಗೆ ಸಿದ್ದತೆ ನಡೆಸುತ್ತಿದೆ.

ಭಾರತದಲ್ಲಿ ಜನರಲ್ ಮೋಟಾರ್ಸ್ ಕಾರು ಉತ್ಪಾದನಾ ಘಟಕ ಖರೀದಿಗೆ ಸಿದ್ದವಾದ ಮಹೀಂದ್ರಾ

ಮಹಾರಾಷ್ಟ್ರದ ತಲೆಗಾಂವ್‌ನಲ್ಲಿರುವ ಜನರಲ್ ಮೋಟಾರ್ಸ್ ಘಟಕವನ್ನು ಮಹೀಂದ್ರಾ ಕಂಪನಿಯು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದು, ಹಳೆಯ ಕಾರು ಘಟಕವನ್ನು ಖರೀದಿಗಾಗಿ ಈಗಾಗಲೇ ಹಲವು ಸುತ್ತಿನ ಮಾತುಕತೆಗಳು ಕೂಡಾ ನಡೆದಿವೆ.

ಭಾರತದಲ್ಲಿ ಜನರಲ್ ಮೋಟಾರ್ಸ್ ಕಾರು ಉತ್ಪಾದನಾ ಘಟಕ ಖರೀದಿಗೆ ಸಿದ್ದವಾದ ಮಹೀಂದ್ರಾ

ಭಾರತದಲ್ಲಿ 2017ರ ಮಧ್ಯಂತರದಲ್ಲಿ ಕಾರು ಮಾರಾಟ ಸ್ಥಗಿತಗೊಳಿಸಿದ್ದ ಅಮೆರಿಕದ ಜನರಲ್ ಮೋಟಾರ್ಸ್ ಕಂಪನಿಯು 2020ರ ತನಕ ಇದೇ ಘಟಕದಿಂದ ವಿದೇಶಿ ಮಾರುಕಟ್ಟೆಗಳಿಗೆ ಕಾರು ರಫ್ತು ಪ್ರಕ್ರಿಯೆಯನ್ನು ಹೊಂದಿತ್ತು.

ಭಾರತದಲ್ಲಿ ಜನರಲ್ ಮೋಟಾರ್ಸ್ ಕಾರು ಉತ್ಪಾದನಾ ಘಟಕ ಖರೀದಿಗೆ ಸಿದ್ದವಾದ ಮಹೀಂದ್ರಾ

ಸದ್ಯ ಹಳೆಯ ಘಟಕದಲ್ಲಿ ಕಾರು ಉತ್ಪಾದನೆಯು ಸಂಪೂರ್ಣವಾಗಿ ಸ್ಥಗಿತಗೊಂಡಿರುವುದರಿಂದ ಜನರಲ್ ಮೋಟಾರ್ಸ್ ಕಂಪನಿಯು ಮಾರಾಟಕ್ಕೆ ಯತ್ನಿಸುತ್ತಿದ್ದು, ಕಳೆದ ವರ್ಷ ಈ ಘಟಕವನ್ನು ಚೀನಿ ಕಾರು ಉತ್ಪಾದನಾ ಕಂಪನಿಯಾಗಿರುವ ಗ್ರೇಟ್ ವಾಲ್ ಮೋಟಾರ್ಸ್ ಕಂಪನಿಯು ಖರೀದಿ ಮಾಡಿತ್ತು.

ಭಾರತದಲ್ಲಿ ಜನರಲ್ ಮೋಟಾರ್ಸ್ ಕಾರು ಉತ್ಪಾದನಾ ಘಟಕ ಖರೀದಿಗೆ ಸಿದ್ದವಾದ ಮಹೀಂದ್ರಾ

ಭಾರತದಲ್ಲಿ ಹೊಸದಾಗಿ ಕಾರು ಉತ್ಪಾದನೆಯ ಯೋಜನೆಯಲ್ಲಿದ್ದ ಗ್ರೇಟ್ ವಾಲ್ ಮೋಟಾರ್ಸ್ ಕಂಪನಿಯು ಕಾರು ಉತ್ಪಾದನೆಗಾಗಿ ಜನರಲ್ ಮೋಟಾರ್ಸ್ ಘಟಕ ಖರೀದಿಗೆ ಸಿದ್ದತೆ ನಡೆಸಿತ್ತು. ಆದರೆ ಗಡಿ ವಿವಾದ ನಂತರ ಚೀನಿ ಕಂಪನಿಗಳ ಹೊಸ ವ್ಯವಹಾರಕ್ಕೆ ಬ್ರೇಕ್ ಬಿದ್ದ ನಂತರ ಗ್ರೇಟ್ ವಾಲ್ ಮೋಟಾರ್ಸ್ ಯೋಜನೆ ಕೊನೆಗೊಂಡಿತು.

ಭಾರತದಲ್ಲಿ ಜನರಲ್ ಮೋಟಾರ್ಸ್ ಕಾರು ಉತ್ಪಾದನಾ ಘಟಕ ಖರೀದಿಗೆ ಸಿದ್ದವಾದ ಮಹೀಂದ್ರಾ

ಹೀಗಾಗಿ ಸದ್ಯ ಉತ್ಪಾದನೆಯಿಲ್ಲದೆ ಖಾಲಿ ಬಿದ್ದಿರುವ ಜನರಲ್ ಮೋಟಾರ್ಸ್ ಘಟಕವನ್ನು ಸ್ವಾಧೀನಕ್ಕೆ ಪ್ರಮುಖ ಕಂಪನಿಗಳು ಯೋಜನೆ ರೂಪಿಸುತ್ತಿದ್ದು, ಇದೀಗ ಮಹೀಂದ್ರಾ ಖರೀದಿಸುತ್ತಿರುವುದು ಖಾತ್ರಿಯಾಗಿದೆ.

ಭಾರತದಲ್ಲಿ ಜನರಲ್ ಮೋಟಾರ್ಸ್ ಕಾರು ಉತ್ಪಾದನಾ ಘಟಕ ಖರೀದಿಗೆ ಸಿದ್ದವಾದ ಮಹೀಂದ್ರಾ

ಚಾಕಾನ್‌ನಲ್ಲಿ ಈಗಾಗಲೇ ಕಾರು ಉತ್ಪಾದನಾ ಘಟಕವನ್ನು ಹೊಂದಿರುವ ಮಹೀಂದ್ರಾ ಕಂಪನಿಗೆ ಚಾಕಾನ್‌ನಿಂದ ತಲೆಗಾಂವ್‌ನಲ್ಲಿರುವ ಜನರಲ್ ಮೋಟಾರ್ಸ್ ಘಟಕವು ಕೇವಲ 60 ಕಿ.ಮೀ ದೂರದಲ್ಲಿರುವುದರಿಂದ ನಿರ್ವಹಣೆಗೆ ಮತ್ತಷ್ಟು ಅನುಕೂಲಕವಾಗಲಿದೆ.

ಭಾರತದಲ್ಲಿ ಜನರಲ್ ಮೋಟಾರ್ಸ್ ಕಾರು ಉತ್ಪಾದನಾ ಘಟಕ ಖರೀದಿಗೆ ಸಿದ್ದವಾದ ಮಹೀಂದ್ರಾ

ಭಾರತದಲ್ಲಿ ಅಮೆರಿಕದ ಕಂಪನಿಗಳ ಒಡೆತನದಲ್ಲಿರುವ ಫೋರ್ಡ್ ಘಟಕವನ್ನು ಟಾಟಾ ಮೋಟಾರ್ಸ್ ಕಂಪನಿಯು ಖರೀದಿಸಿದ ನಂತರ ಇದೀಗ ಜನರಲ್ ಮೋಟಾರ್ಸ್ ಕಂಪನಿಯ ಕಾರು ಘಟಕವನ್ನು ಮಹೀಂದ್ರಾ ಖರೀದಿಸುತ್ತಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಭಾರತದಲ್ಲಿ ಜನರಲ್ ಮೋಟಾರ್ಸ್ ಕಾರು ಉತ್ಪಾದನಾ ಘಟಕ ಖರೀದಿಗೆ ಸಿದ್ದವಾದ ಮಹೀಂದ್ರಾ

ಜನರಲ್ ಮೋಟಾರ್ಸ್ ಘಟಕವನ್ನು ಮಹೀಂದ್ರಾ ಕಂಪನಿಯು ವಿಶೇಷವಾಗಿ ಇವಿ ಕಾರು ಮಾದರಿಗಳಿಗಾಗಿ ಬಳಕೆ ಮಾಡುವ ಯೋಜನೆ ಹೊಂದಿದ್ದು, ಇದಕ್ಕಾಗಿ ಕಂಪನಿಯು ಭಾರೀ ಪ್ರಮಾಣದ ಹೂಡಿಕೆಗೆ ಸಿದ್ದವಾಗಿದೆ.

ಭಾರತದಲ್ಲಿ ಜನರಲ್ ಮೋಟಾರ್ಸ್ ಕಾರು ಉತ್ಪಾದನಾ ಘಟಕ ಖರೀದಿಗೆ ಸಿದ್ದವಾದ ಮಹೀಂದ್ರಾ

ಹೊಸ ಬಾರ್ನ್ ಎಲೆಕ್ಟ್ರಿಕ್ ಸರಣಿ ಇವಿ ಕಾರುಗಳ ಉತ್ಪಾದನಾ ಯೋಜನೆ ಅಡಿ ಇತ್ತೀಚೆಗೆ ಐದು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಅನಾವರಣಗೊಳಿಸಿರುವ ಮಹೀಂದ್ರಾ ಕಂಪನಿಯು 2024ರಿಂದ ರಸ್ತೆಗಿಳಿಸುವ ಸುಳಿವು ನೀಡಿದೆ. ಹೊಸ ಇವಿ ಕಾರು ಮಾದರಿಗಳನ್ನು ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ.ಇ(XUV.e) ಮತ್ತು ಬಿಇ (BE) ಎನ್ನುವ ಎರಡು ಬ್ರಾಂಡ್‌ಗಳ ಅಡಿಯಲ್ಲಿ ಮಾರಾಟ ಮಾಡಲಿದೆ.

ಭಾರತದಲ್ಲಿ ಜನರಲ್ ಮೋಟಾರ್ಸ್ ಕಾರು ಉತ್ಪಾದನಾ ಘಟಕ ಖರೀದಿಗೆ ಸಿದ್ದವಾದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಇನ್‌ಗ್ಲೊ(INGLO) ಪ್ಲಾಟ್‌ಫಾರ್ಮ್ ಆರ್ಕಿಟೆಕ್ಚರ್‌ನಲ್ಲಿ ನಿರ್ಮಾಣ ಮಾಡಲು ನಿರ್ಧರಿಸಿದ್ದು, ಹೊಸ ಇವಿ ಕಾರುಗಳಲ್ಲಿ ಮೂರು ಎಸ್‌ಯುವಿ ಮಾದರಿಗಳಾಗಿದ್ದರೆ ಎರಡು ಎಸ್‌ಯುವಿ ಕೂಪೆ ಶೈಲಿಯಲ್ಲಿ ಆಧರಿಸಿರಲಿವೆ.

ಭಾರತದಲ್ಲಿ ಜನರಲ್ ಮೋಟಾರ್ಸ್ ಕಾರು ಉತ್ಪಾದನಾ ಘಟಕ ಖರೀದಿಗೆ ಸಿದ್ದವಾದ ಮಹೀಂದ್ರಾ

ಎಕ್ಸ್‌ಯುವಿ.ಇ(XUV.e) ಬ್ರಾಂಡ್ ಅಡಿಯಲ್ಲಿ ಎಕ್ಸ್‌ಯುವಿ.ಇ8(XUV.E8) ಮತ್ತು ಎಕ್ಸ್‌ಯುವಿ.ಇ9(XUV.E9) ಮಾರಾಟಗೊಳ್ಳಲಿದ್ದರೆ ಬಿಇ(BE) ಬ್ರಾಂಡ್ ಅಡಿಯಲ್ಲಿ ಬಿಇ.05(BE.05). ಬಿಇ.07(BE.07) ಮತ್ತು ಬಿಇ.09(BE.09) ಕಾರುಗಳು ಮಾರಾಟಗೊಳ್ಳಲಿವೆ.

ಭಾರತದಲ್ಲಿ ಜನರಲ್ ಮೋಟಾರ್ಸ್ ಕಾರು ಉತ್ಪಾದನಾ ಘಟಕ ಖರೀದಿಗೆ ಸಿದ್ದವಾದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಮೊದಲ ಹಂತದಲ್ಲಿ ಎಕ್ಸ್‌ಯುವಿ.ಇ ಬ್ರಾಂಡ್ ಕಾರುಗಳನ್ನು ಮಾರಾಟಗೊಳಿಸಲಿದ್ದು, ತದನಂತರವಷ್ಟೇ ಬಿಇ ಬ್ರಾಂಡ್ ಇವಿ ಕಾರುಗಳನ್ನು ಬಿಡುಗಡೆ ಮಾಡಲಿದೆ. 2024ರ ಕೊನೆಯಲ್ಲಿ ಎಕ್ಸ್‌ಯುವಿ.ಇ ಕಾರುಗಳ ಮಾರಾಟ ಆರಂಭವಾಗಲಿದ್ದು, ಬಿಇ ಬ್ರಾಂಡ್ ಕಾರುಗಳ ಮಾರಾಟವು 2025ರ ಕೊನೆಯಲ್ಲಿ ಆರಂಭವಾಗಲಿದೆ.

Most Read Articles

Kannada
English summary
Mahindra planning to buy gm talegaon car plant details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X