Just In
- 31 min ago
ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಸಲು ಹೊಸ ರೂಪದಲ್ಲಿ ಬರುತ್ತಿದೆ ಮಾರುತಿ ಆಲ್ಟೋ ಕೆ10
- 37 min ago
ಹೊಸ ಆಕ್ಟಿವಾ ಟೀಸರ್ ಬಿಟ್ಟು ನಿರೀಕ್ಷೆ ಹೆಚ್ಚಿಸಿದ ಹೋಂಡಾ: ಆಕ್ಟಿವಾ 7G ಆಗಿರಬಹುದೇ?
- 2 hrs ago
ಇವಿ ಸ್ಕೂಟರ್ಗಳ ಬೆಲೆ ನಿಯಂತ್ರಿಸಲು ಬೃಹತ್ ಯೋಜನೆಗೆ ಚಾಲನೆ ನೀಡಿದ ಓಲಾ ಎಲೆಕ್ಟ್ರಿಕ್
- 2 hrs ago
ಹೊಸ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಇಂದು ಬಿಡುಗಡೆ: ಹೇಗರಲಿವೆ ವಿನ್ಯಾಸ, ಬೆಲೆ, ವೈಶಿಷ್ಟ್ಯಗಳು!
Don't Miss!
- Technology
ಸದ್ದಿಲ್ಲದೇ ಮತ್ತೆ ಹೊಸ ಪ್ಲ್ಯಾನ್ ಪರಿಚಯಿಸಿದ 'ಜಿಯೋ'!..180GB ಡೇಟಾ ಪಕ್ಕಾ!
- Movies
ನೇರ ನುಡಿಯ ಸ್ವಾಭಿಮಾನಿ ಗಾಯಕ ಶಿವಮೊಗ್ಗ ಸುಬ್ಬಣ್ಣ: ಗಾಯಕಿ ಬಿ. ಕೆ ಸುಮಿತ್ರಾ ಸಂದರ್ಶನ
- Finance
ತೆರಿಗೆ ದರ ವಿಚಾರದಲ್ಲಿ ಹಿರಿಯ ನಾಗರಿಕರಿಗೆ ಪ್ರಯೋಜನ ನೋಡಿ!
- News
Breaking: ಧರ್ಮಗುರು ರಹೀಮುಲ್ಲಾ ಹಕ್ಕಾನಿ ಹತ್ಯೆ ಹೊಣೆ ಹೊತ್ತ ಐಸಿಸ್
- Sports
Asia Cup 2022: ರಾಹುಲ್ ಅಲ್ಲ, ಈತ ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸಲಿ; ಪಾಕ್ ಕ್ರಿಕೆಟಿಗ
- Travel
ಮಕ್ಕಳ ಜೊತೆ ಭೇಟಿ ಕೊಡಬಹುದಾದ ಕರ್ನಾಟಕದಲ್ಲಿಯ ಮೋಜಿನ ಸ್ಥಳಗಳು
- Lifestyle
ಹಣ್ಣು ಹೇಗೆ ಸೇವಿಸಬೇಕು? : ಹಣ್ಣು ಸೇವನೆ ವೇಳೆ ಈ ರೀತಿಯ ಮಿಸ್ಟೇಕ್ ನೀವು ಮಾಡುತ್ತಿದ್ದರೆ ಕೂಡಲೇ ನಿಲ್ಲಿಸಿ
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ಎಲೆಕ್ಟ್ರಿಕ್ ವಾಹನಗಳಂತೆ ಚಲಿಸುತ್ತಿದ್ದ ಮಹೀಂದ್ರಾ ಥಾರ್‌ನಲ್ಲೂ ಬೆಂಕಿ: ಕಾರಣವೇನಿರಬಹುದು?
ಮಹೀಂದ್ರಾ ಥಾರ್ ಹೆಚ್ಚು ಜನಪ್ರಿಯವಾಗಿರುವ ಆಫ್-ರೋಡಿಂಗ್ SUV ಆಗಿದ್ದು, ಭಾರತ ಸೇರಿದಂತೆ ವಿದೇಶಗಳಲ್ಲೂ ಈ ಮಾದರಿಗೆ ಹೆಚ್ಚಿನ ಬೇಡಿಕೆಯಿದೆ. ಸದ್ಯ ಮಾರಟದಲ್ಲಿ ಉತ್ತಮ ಪ್ರಗತಿ ಸಾಧಿಸುತ್ತಿರುವ ಮಹೀಂದ್ರಾ ಥಾರ್, ಹೈವೇವೊಂದರಲ್ಲಿ ಪ್ರಯಾಣಿಸುವ ವೇಳೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

NCAP ರೇಟಿಂಗ್‌ಗೆ ಬಂದಾಗ ಈ ಕಾರನ್ನು ಸಾಕಷ್ಟು ಸುರಕ್ಷಿತ ವಾಹನವೆಂದು ಪರಿಗಣಿಸಲಾಗಿದೆ. ಈವರೆಗೆ ಥಾರ್‌ನಲ್ಲಿ ಇಂತಹ ಅವಘಡ ಸಂಭವಿಸಿರುವ ಯಾವುದೇ ದಾಖಲೆಗಳಿಲ್ಲ. ಆದರೂ ಇತ್ತೀಚೆಗೆ ಪ್ರಯಾಣದ ವೇಳೆ ಇದ್ದಕ್ಕಿದ್ದಂತೆ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ಕೆಲವು ಅನುಮಾನಗಳನ್ನು ಹುಟ್ಟುಹಾಕಿದ್ದು, ಘಟನೆಗೆ ಕಾರಣ ತಿಳಿದುಬರಬೇಕಿದೆ.

ಸಾಮಾನ್ಯವಾಗಿ ಎಲೆಕ್ಟ್ರಿಕ್ ವಾಹನಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ಕಂಡುಬರುತ್ತಿದ್ದವು. ಭಾರತದ ವಾತಾವರಣಕ್ಕೆ ಹೊಂದಿಕೊಳ್ಳಲಾಗದೇ ಹೆಚ್ಚಿನ ಬಿಸಿಲಿನಿಂದ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತಿತ್ತು. ಆದರೆ ಈಗ ಇಂಧನ ಚಾಲಿತ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಗ್ರಾಹಕರನ್ನು ತುಸು ಆತಂಕಕ್ಕೆ ದೂಡಿದೆ.
ಹೆದ್ದಾರಿಯಲ್ಲಿ ಪ್ರಯಾಣಿಸುವಾಗ ಬೆಂಕಿ ಕಾಣಿಸಿಕೊಂಡಿದೆ
ವಿಷಯಕ್ಕೆ ಬಂದರೆ ಹೆದ್ದಾರಿಯಲ್ಲಿ ಚಾಲನೆ ಮಾಡುವಾಗ ಮಹೀಂದ್ರಾ ಥಾರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಕುರಿತ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಆದರೆ ಈ ಪ್ರಕರಣದ ವಿವರಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಯೂಟ್ಯೂಬ್‌ನಲ್ಲಿನ ವೀಡಿಯೊದ ಶೀರ್ಷಿಕೆಯು ಥಾರ್ ದೆಹಲಿಯಿಂದ ಪಾಣಿಪತ್‌ಗೆ ಪ್ರಯಾಣಿಸುತ್ತಿದ್ದುದನ್ನು ಉಲ್ಲೇಖಿಸುತ್ತದೆ.

ದೃಶ್ಯಗಳ ಪ್ರಕಾರ, SUV ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿ ರಸ್ತೆಯ ಬದಿಯಲ್ಲಿ ನಿಂತಿದೆ. ಇದು ರಾತ್ರಿಯ ಸಮಯದಂತೆ ತೋರುತ್ತಿದೆ, ಹಗಲಿನಲ್ಲಿ ಹೆಚ್ಚು ಬಿಸಿಲಿನಿಂದಾಗಿ ಇಂತಹ ಘಟನೆಗಳು ಸಂಭವಿಸಬಹುದು ಸಾಮಾನ್ಯ. ಆದರೆ ರಾತ್ರಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಕೆಲ ಅನುಮಾನಗಳಿಗೂ ಕಾರಣವಾಗಿದೆ.

ಕೆಲವು ಅನಗತ್ಯ ಮಾಡಿಫೈಗಳಿಂದ ಘಟನೆ ಸಂಭವಿಸಿರಬಹುದು
ಕಳಪೆಯಾಗಿ ಮಾಡಿದ ಮಾರ್ಪಾಡು ಅಥವಾ ಕೆಲವು ಪರಿಕರಗಳ ಸೇರ್ಪಡೆಯಿಂದಲೂ ಬೆಂಕಿ ಬೀಳಲು ಕಾರಣವಾಗಿರಬಹುದು. ಈ ಘಟನೆಯ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ, ಹಾಗಾಗಿ ಪ್ರತಿಷ್ಟಿತ ಕಂಪನಿಯ ಇಂತಹ ಅನಿರೀಕ್ಷಿತ ಘಟನೆಗಳಿಗೆ ಸಂಬಂಧಿಸಿ ಯಾವುದೇ ಕಾಮೆಂಟ್ ಮಾಡಬಾರದು. ಹಾಗಾಗಿ ಘಟನೆಯ ತನಿಖೆವರೆಗೂ ಕಾಯಬೇಕಿದೆ.

ಈಗ, ಥಾರ್ ಸುರಕ್ಷಿತ ಮತ್ತು ಒರಟಾದ ರಸ್ತೆಗಳಿಗೆ ಜನಪ್ರಿಯವಾಗಿದ್ದು, ಇದರ ಮಾರಾಟವು ಪ್ರಸ್ತುತ ಉತ್ತುಂಗದಲ್ಲಿದೆ. ಇಂತಹ ಸಮಯದಲ್ಲಿ ಅನೀರೀಕ್ಷಿತ ಬೆಂಕಿ ಅವಘಡ ಕಾಣಿಸಿಕೊಂಡಿರುವುದು ಕೆಲ ಗ್ರಾಹಕರನ್ನು ಕಂಗೆಡಿಸಬಹುದು. ಹಾಗಾಗಿ ಕಂಪನಿಯು ಆದಷ್ಟು ಬೇಗ ಘಟನೆಯ ತನಿಖೆ ಮಾಡಿ ಕಾರಣವನ್ನು ತಿಳಿಸಬೇಕಿದೆ.

ಆಫ್ ರೋಡಿಂಗ್ ವೈಶಿಷ್ಟ್ಯತೆಯೊಂದಿಗೆ ತನ್ನದೆ ಆದ ಜನಪ್ರಿಯೆತೆ ಹೊಂದಿರುವ ಥಾರ್ ಕಾರು ಮಾದರಿಯು ಸಾಮಾನ್ಯ ಕಾರು ಮಾದರಿಗಳಂತೆ ಬೇಡಿಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ನ್ಯೂ ಜನರೇಷನ್ ಥಾರ್ ಖರೀದಿ ಮಾಡಿರುವ ಗ್ರಾಹಕರಲ್ಲಿ ಬಹುತೇಕರು ಹೊಸದಾಗಿ ಆಫ್ ಕೌಶಲ್ಯದ ಆಸಕ್ತಿಯೊಂದಿಗೆ ಥಾರ್ ಮಾಲೀಕತ್ವ ಪಡೆದುಕೊಂಡವರಾಗಿದ್ದಾರೆ.

ಥಾರ್ ಕಾರು ಮಾದರಿಗಾಗಿ ಮಹೀಂದ್ರಾ ಕಂಪನಿಯು ಇದುವರೆಗೆ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸುತ್ತಾ ಬಂದಿದ್ದು, ಹೊಸ ಕಾರು ಬಿಡುಗಡೆಯ ನಂತರ 80 ಸಾವಿರಕ್ಕೂ ಹೆಚ್ಚು ಗ್ರಾಹಕರಿಂದ ಬುಕಿಂಗ್ ಪಡೆದುಕೊಂಡಿದೆ.

ಹೊಸ ಥಾರ್ ಕಾರು ಮಾದರಿಯು ಈ ಬಾರಿ ಹಲವಾರು ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ನ್ಯೂ ಜನರೇಷನ್ ಥಾರ್ ಕಾರು ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಎಎಕ್ಸ್ ಮತ್ತು ಎಲ್ಎಕ್ಸ್ ಎನ್ನುವ ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿದೆ.

ಥಾರ್ ಕಾರು ಮಾದರಿಯಲ್ಲಿ ಮೊದಲ ಬಾರಿಗೆ ಡೀಸೆಲ್ ಎಂಜಿನ್ ಜೊತೆಗೆ ಪೆಟ್ರೋಲ್ ಕಾರಿನ ಆಯ್ಕೆಯನ್ನು ಸಹ ನೀಡಿರುವುದು ಆಫ್-ರೋಡ್ ಕಾರು ಮಾದರಿಯ ಮಾರಾಟದಲ್ಲಿ ಮತ್ತೊಂದು ಹಂತದ ಬದಲಾವಣೆಗೆ ಕಾರಣವಾಗಿದ್ದು, ಲ್ಯಾಡರ್-ಫ್ರೇಮ್ ಚಾರ್ಸಿ ಜೊತೆಗೆ ಹೊಸ ಸಸ್ಪೆಂಷನ್ ಸೌಲಭ್ಯವು ಹೊಸ ಥಾರ್ ಕಾರಿನ ಗುಣಮಟ್ಟ ಮತ್ತು ಕಾರ್ಯಕ್ಷಮತೆ ಹೆಚ್ಚಿಸಿದೆ.

ಹೊಸ ಥಾರ್ ಕಾರು ಮಾದರಿಯಲ್ಲಿ ಬಿಎಸ್-6 ಎಂಜಿನ್ ಪ್ರೇರಿತ 2.2-ಲೀಟರ್ ಡೀಸೆಲ್ ಎಂಜಿನ್ ಮತ್ತು ಹೊಸದಾಗಿ ಅಭಿವೃದ್ದಿಗೊಳಿಸಲಾದ 2.0-ಲೀಟರ್ ಎಂ-ಸ್ಟಾಲಿನ್ ಪೆಟ್ರೋಲ್ ಎಂಜಿನ್ ನೀಡಲಾಗಿದೆ. ಎರಡು ಎಂಜಿನ್ ಮಾದರಿಗಳಲ್ಲೂ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ.

ಹೊಸ ಕಾರಿನ ಒಳಭಾಗದ ಸೌಲಭ್ಯಗಳು ಪ್ರಸ್ತುತ ಮಾದರಿಗಿಂತಲೂ ಹೆಚ್ಚು ಪ್ರೀಮಿಯಂ ಮತ್ತು ಮಾರ್ಡನ್ ವಿನ್ಯಾಸಗಳನ್ನು ಹೊಂದಿದ್ದು, ಆಕರ್ಷಕ ಡ್ಯಾಶ್‌ಬೋರ್ಡ್‌ನೊಂದಿಗೆ ಆ್ಯಪಲ್ ಕಾರ್‌ಪ್ಲೇ ಮತ್ತು ಅಂಡ್ರಾಯಿಡ್ ಆಟೋಗೆ ಸರ್ಪೋಟ್ ಮಾಡಬಲ್ಲ 7-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಎಲ್ಲಾ ಮಾದರಿಯ ಹವಾಗುಣವನ್ನು ತಡೆಯಬಲ್ಲ ರೂಫ್ ಮೌಂಟೆಡ್ ಆಡಿಯೋ ಸ್ಪಿಕರ್ಸ್, ಮಲ್ಟಿ ಕಲರ್ ಇನ್ಫಾಮೆಷನ್ ಡಿಸ್‌ಪ್ಲೇ ಮತ್ತು ಸ್ಟೀರಿಂಗ್ ಮೌಟೆಂಟ್ ಕಂಟ್ರೋಲ್ ಸೌಲಭ್ಯ ನೀಡಲಾಗಿದೆ.

ಹೊಸ ಕಾರಿನಲ್ಲಿ ಸುರಕ್ಷತೆಗಾಗಿ ಹಲವಾರು ಸೆಫ್ಟಿ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಎರಡು ಎಂಜಿನ್ ಆಯ್ಕೆಗಳಲ್ಲೂ 4x4 ಡ್ರೈವ್ ಸಿಸ್ಟಂ, ಕ್ರೂಸ್ ಕಂಟ್ರೋಲ್, 255/65 18-ಇಂಚಿನ ಆಲ್ ಟೆರೆನ್ ಟೈರ್ಸ್ ನೀಡಲಾಗಿದೆ.

ಇದರೊಂದಿಗೆ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್, ಹಿಲ್ ಸ್ಟಾರ್ಟ್ ಅಸಿಸ್ಟ್, ರೋಲ್ ಓವರ್ ಮಿಟಿಗೆಷನ್, ತ್ರೀ ಪಾಯಿಂಟ್ ಸಿಲ್ಟ್ ಬೆಲ್ಟ್, ರಿಯರ್ ವ್ಯೂ ಕ್ಯಾಮೆರಾ ಜೋಡಿಸಲಾಗಿದೆ.