ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ನವೀಕೃತ ಮಹೀಂದ್ರಾ ಥಾರ್ ಎಸ್‌ಯುವಿ

ನ್ಯೂ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಆಫ್ ರೋಡ್ ಎಸ್‌ಯುವಿ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಥಾರ್ ಎಸ್‌ಯುವಿ ಭಾರೀ ಪ್ರಮಾಣದ ಬೇಡಿಕೆ ಹೊಂದಿದ್ದು, ಶೀಘ್ರದಲ್ಲಿಯೇ ಥಾರ್ ಮಾದರಿಯು ಕೆಲವು ಹೊಸ ನವೀಕರಣಗಳನ್ನು ಪಡೆದುಕೊಳ್ಳಲಿದೆ.

ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ನವೀಕೃತ ಮಹೀಂದ್ರಾ ಥಾರ್ ಎಸ್‌ಯುವಿ

2020ರ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಿದ್ದ ಥಾರ್ ಎಸ್‌ಯುವಿ ಮಾದರಿಯು ಇದುವರೆಗೆ 1 ಲಕ್ಷಕ್ಕೂ ಹೆಚ್ಚು ಬುಕಿಂಗ್ ಮೂಲಕ ಹಲವು ದಾಖಲೆಗಳನ್ನು ನಿರ್ಮಿಸಿದ್ದು, ಹೊಸ ಕಾರಿಗೆ ಕಂಪನಿಯು ಕೆಲವು ಬದಲಾವಣೆಗಳನ್ನು ಪರಿಚಯಿಸುವುದಕ್ಕೆ ಸಜ್ಜಾಗಿದೆ.

ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ನವೀಕೃತ ಮಹೀಂದ್ರಾ ಥಾರ್ ಎಸ್‌ಯುವಿ

ಮಹೀಂದ್ರಾ ಕಂಪನಿಯು ಇತ್ತೀಚೆಗೆ ತನ್ನ ಹೊಸ ಕಾರುಗಳಲ್ಲಿ ಬದಲಾವಣೆಗೊಳಿಸಲಾದ ಲೊಗೊ ಪರಿಚಯಿಸಿದ್ದು, ಥಾರ್ ಎಸ್‌ಯುವಿ ಕೂಡಾ ಶೀಘ್ರದಲ್ಲಿ ಹೊಸ ಲೊಗೊ ಸೇರಿದಂತೆ ಒಳಾಂಗಣ ಸೌಲಭ್ಯಗಳಲ್ಲಿ ಕೆಲವು ಹೊಸ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ.

ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ನವೀಕೃತ ಮಹೀಂದ್ರಾ ಥಾರ್ ಎಸ್‌ಯುವಿ

ಇದಲ್ಲದೆ ದೇಶಿಯ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರು ಉತ್ಪನ್ನಗಳನ್ನು ವಿಶ್ವದರ್ಜೆ ಗುಣಮಟ್ಟ ಮತ್ತು ಹಲವಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಬಿಡುಗಡೆ ಮಾಡುತ್ತಿರುವ ಮಹೀಂದ್ರಾ ಕಂಪನಿಯು ಕಳೆದ ಒಂದು ವರ್ಷದಿಂದ ಭಾರೀ ಪ್ರಮಾಣದಲ್ಲಿ ಬೆಳವಣಿಗೆ ಕಾಣುತ್ತಿದ್ದು, ನ್ಯೂ ಜನರೇಷನ್ ಥಾರ್ ಮಾದರಿಯಲ್ಲಿ 5 ಡೋರ್ ವರ್ಷನ್ ಸಹ ಪರಿಚಯಿಸುತ್ತಿದೆ.

ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ನವೀಕೃತ ಮಹೀಂದ್ರಾ ಥಾರ್ ಎಸ್‌ಯುವಿ

5 ಡೋರ್ ವರ್ಷನ್ ಸದ್ಯಕ್ಕೆ ಬಿಡುಗಡೆಯಾಗುವುದಿಲ್ಲವಾದರೂ 2023ರ ಮಾದರಿಯಲ್ಲಿ ಬಿಡುಗಡೆಯಾಗಬಹುದಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರು ಮಾದರಿಯಲ್ಲಿ 5 ಡೋರ್ ವರ್ಷನ್ ಸಿದ್ದಪಡಿಸುತ್ತಿದೆ.

ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ನವೀಕೃತ ಮಹೀಂದ್ರಾ ಥಾರ್ ಎಸ್‌ಯುವಿ

ಹೊಸ 5 ಡೋರ್ ವರ್ಷನ್ ಕಾರ್ಯಕ್ಷಮತೆ ಕುರಿತಾಗಿ ಈಗಾಗಲೇ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಕೈಗೊಂಡಿದ್ದು, ಕಂಪನಿಯು ಶೀಘ್ರದಲ್ಲಿಯೇ ಮಾರುಕಟ್ಟೆಗೆ ಪರಿಚಯಿಸಲಿದೆ.

ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ನವೀಕೃತ ಮಹೀಂದ್ರಾ ಥಾರ್ ಎಸ್‌ಯುವಿ

ಆಫ್-ರೋಡ್ ಪ್ರಿಯರಿಗಾಗಿ ವಿಶೇಷವಾಗಿ ಸಿದ್ದಗೊಂಡಿರುವ ಥಾರ್ ಕಾರು ಮಾದರಿಯು ಇದುವರೆಗೆ 1 ಲಕ್ಷಕ್ಕೂ ಹೆಚ್ಚು ಬುಕಿಂಗ್‌ನೊಂದಿಗೆ 60 ಸಾವಿರಕ್ಕೂ ಹೆಚ್ಚು ಯುನಿಟ್ ಮಾರಾಟಗೊಂಡಿವೆ. ಇನ್ನು ಸುಮಾರು 40 ಸಾವಿರಕ್ಕೂ ಹೆಚ್ಚು ಗ್ರಾಹಕರು ಹೊಸ ಕಾರು ಮಾದರಿಗಾಗಿ ಕಾಯುತ್ತಿದ್ದು, ಹೊಸ ಕಾರು ಆಫ್-ರೋಡ್‌ಗಿಂತಲೂ ಲೈಫ್‌ಸ್ಟೈಲ್ ಮಾದರಿಗಾಗಿ ಬದಲಾಗುತ್ತಿದೆ.

ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ನವೀಕೃತ ಮಹೀಂದ್ರಾ ಥಾರ್ ಎಸ್‌ಯುವಿ

ಹೊಸ ಕಾರು 3 ಡೋರ್ ಹೊಂದಿರುವುದರಿಂದ ಇನ್ನು ಹಲವು ಗ್ರಾಹಕರ ಹೊಸ ಕಾರನ್ನು ಖರೀದಿಸುವ ಆಸಕ್ತಿ ಇದ್ದರೂ ಹಿಂದೆ ಸರಿಸುತ್ತಿದ್ದು, ಕುಟಂಬ ಸಮೇತ ಪ್ರಯಾಣ ಮಾಡಲು ಅನುಕೂಲವಿದ್ದಲ್ಲಿ ಖರೀದಿ ಮಾಡಬಹುದಿತ್ತು ಎನ್ನುವುದು ಹಲವು ಗ್ರಾಹಕರ ಅಭಿಪ್ರಾಯವಾಗಿದೆ.

ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ನವೀಕೃತ ಮಹೀಂದ್ರಾ ಥಾರ್ ಎಸ್‌ಯುವಿ

3 ಡೋರ್ ಥಾರ್ ಕಾರಿನಲ್ಲಿ ನಾಲ್ಕು ಆಸನ ಸೌಲಭ್ಯವಿದ್ದರೂ ಮುಂಭಾಗದ ಆಸನಗಳಲ್ಲಿ ಚಾಲಕ ಮತ್ತು ಸಹಪ್ರಯಾಣಿಕ ಹೊರತುಪಡಿಸಿ ಹಿಂಬದಿಯ ಆಸನಗಳಿಗೆ ಪ್ರವೇಶಿಸಲು ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಹೀಗಾಗಿ ಥಾರ್ ಕಾರು ಕೇವಲ ಇಬ್ಬರು ಮಾತ್ರ ಪ್ರಯಾಣಿಸಬಹುದಾದ ಮಾದರಿಯಾಗಿದ್ದು, ಇದು ಆಫ್ ರೋಡ್ ಇಷ್ಟಪಡುವ ಗ್ರಾಹಕರಿಗೆ ಉತ್ತಮವಾಗಿದ್ದರೂ ಕುಟಂಬ ಸಮೇತ ಪ್ರಯಾಣ ಬಯಸುವ ಗ್ರಾಹಕರು ಹೊಸ ಕಾರಿನ ಆಯ್ಕೆಗೆ ಹಿಂದೆ ಸರಿಯುತ್ತಾರೆ.

ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ನವೀಕೃತ ಮಹೀಂದ್ರಾ ಥಾರ್ ಎಸ್‌ಯುವಿ

ಹೀಗಾಗಿ ಪ್ರಾಯೋಗಿಕವಾಗಿ ಹೊಸ 5 ಡೋರ್ ಥಾರ್ ಮಾದರಿಯನ್ನು ಅಭಿವೃದ್ದಿಪಡಿಸುತ್ತಿರುವ ಮಹೀಂದ್ರಾ ಕಂಪನಿಯು ಈ ವರ್ಷಾಂತ್ಯಕ್ಕೆ ಇಲ್ಲವೇ 2023ರ ಆರಂಭದಲ್ಲಿ ಬಿಡುಗಡೆಯಾಗಲಿರುವ ಥಾರ್ ಫೇಸ್‌ಲಿಫ್ಟ್ ಮಾದರಿಯಲ್ಲಿ 5 ಡೋರ್ ಮಾದರಿಯನ್ನು ಪರಿಚಯಿಸಬಹುದಾಗಿದೆ.

ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ನವೀಕೃತ ಮಹೀಂದ್ರಾ ಥಾರ್ ಎಸ್‌ಯುವಿ

ಹೊಸ ಮಾದರಿಯೊಂದಿಗೆ ಥಾರ್ ಕಾರು 3 ಡೋರ್ ಮತ್ತು 5 ಡೋರ್ ವರ್ಷನ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, 5 ಡೋರ್ ವರ್ಷನ್‌ಗಾಗಿ ಕಂಪನಿಯು ಹೊಸ ಕಾರಿನ ಉದ್ದಳತೆಯನ್ನು ಹೆಚ್ಚಿಸಲಿದೆ.

ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ನವೀಕೃತ ಮಹೀಂದ್ರಾ ಥಾರ್ ಎಸ್‌ಯುವಿ

ಇನ್ನು ನ್ಯೂ ಜನರೇಷನ್ ಥಾರ್ ಕಾರು ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಸದ್ಯ ಎಎಕ್ಸ್ ಮತ್ತು ಎಲ್ಎಕ್ಸ್ ಎನ್ನುವ ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಲ್ಯಾಡರ್-ಫ್ರೇಮ್ ಚಾರ್ಸಿ ಜೊತೆಗೆ ಹೊಸ ಸಸ್ಪೆಂಷನ್‌ ಸೌಲಭ್ಯವು ಹೊಸ ಥಾರ್ ಕಾರಿನ ಗುಣಮಟ್ಟ ಮತ್ತು ಕಾರ್ಯಕ್ಷಮತೆ ಹೆಚ್ಚಿಸಿದೆ.

ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ನವೀಕೃತ ಮಹೀಂದ್ರಾ ಥಾರ್ ಎಸ್‌ಯುವಿ

ಥಾರ್ ಕಾರು ಮಾದರಿಯಲ್ಲಿ ಮೊದಲ ಬಾರಿಗೆ ಡೀಸೆಲ್ ಎಂಜಿನ್ ಜೊತೆಗೆ ಪೆಟ್ರೋಲ್ ಕಾರಿನ ಆಯ್ಕೆಯನ್ನು ಸಹ ನೀಡಿರುವುದು ಆಫ್-ರೋಡ್ ಕಾರು ಮಾದರಿಯ ಮಾರಾಟದಲ್ಲಿ ಮತ್ತೊಂದು ಹಂತದ ಬದಲಾವಣೆಗೆ ಕಾರಣವಾಗಿದ್ದು, ಬಿಎಸ್-6 ಎಂಜಿನ್ ಪ್ರೇರಿತ 2.2-ಲೀಟರ್ ಡೀಸೆಲ್ ಎಂಜಿನ್ ಮತ್ತು ಹೊಸದಾಗಿ ಅಭಿವೃದ್ದಿಗೊಳಿಸಲಾದ 2.0-ಲೀಟರ್ ಎಂ-ಸ್ಟಾಲಿನ್ ಪೆಟ್ರೋಲ್ ಎಂಜಿನ್ ನೀಡಲಾಗಿದೆ.

ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ನವೀಕೃತ ಮಹೀಂದ್ರಾ ಥಾರ್ ಎಸ್‌ಯುವಿ

ಎರಡು ಎಂಜಿನ್ ಮಾದರಿಗಳಲ್ಲೂ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದ್ದು, ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ನೀಡಲಾಗಿದೆ.

ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ನವೀಕೃತ ಮಹೀಂದ್ರಾ ಥಾರ್ ಎಸ್‌ಯುವಿ

ಥಾರ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 13.53 ಲಕ್ಷದಿಂದ ರೂ. 16.03 ಲಕ್ಷ ಬೆಲೆ ಹೊಂದಿದ್ದು, 5 ಡೋರ್ ವರ್ಷನ್ ಬೆಲೆಯು 3 ಡೋರ್ ಮಾದರಿಗಿಂತಲೂ ತುಸು ದುಬಾರಿಯಾಗಿರಲಿದೆ.

Most Read Articles

Kannada
English summary
Mahindra thar suv gets new updates soon details
Story first published: Friday, September 9, 2022, 22:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X