Just In
- 3 hrs ago
ಎಲೆಕ್ಟ್ರಿಕ್, ಹೈಬ್ರಿಡ್ ಕಾರುಗಳಲ್ಲಿ ಮಾತ್ರ ರಿಜನರೇಟಿವ್ ಬ್ರೇಕಿಂಗ್ ಏಕೆ ಲಭ್ಯವಿದೆ: ಇದರ ಉಪಯೋಗವೇನು?
- 4 hrs ago
ಹೊಸ ನವೀಕರಣಗಳೊಂದಿಗೆ ಸಿಎಫ್ಮೋಟೋ 150ಎನ್ಕೆ ಬೈಕ್ ಬಿಡುಗಡೆ
- 6 hrs ago
ಏಪ್ರಿಲ್ ತಿಂಗಳ ಟಿವಿಎಸ್ ವಾಹನ ಮಾರಾಟ ವರದಿ: ರಫ್ತಿನಲ್ಲಿ ದಾಖಲೆ ನಿರ್ಮಾಣ
- 6 hrs ago
ಎಲೆಕ್ಟ್ರಿಕ್ ಕಾರ್ ಆಗಿ ಪರಿವರ್ತನೆಗೊಂಡು ಮಿಂಚುತ್ತಿದೆ 1954ರ ಫಿಯೆಟ್ ಕಾರು
Don't Miss!
- Sports
GT vs RR: ಅಂತಿಮ ಓವರ್ನಲ್ಲಿ ಅತಿ ಹೆಚ್ಚು ಬಾರಿ ರನ್ ಚೇಸ್ ಮಾಡಿದ ಗುಜರಾತ್ ಟೈಟನ್ಸ್ ದಾಖಲೆ
- News
ಶಿವಮೊಗ್ಗ: ಮಳೆಯಲ್ಲಿ ಸಿಲುಕಿದ್ದ 150 ಮಂದಿಗೆ ಆಪತ್ಭಾಂಧವರಾದ ಅಗ್ನಿಶಾಮಕ ದಳ
- Lifestyle
ಮೇ. 30ಕ್ಕೆ ಶನಿ ಜಯಂತಿ: ಶನಿ ಧೈಯ್ಯಾ, ಶನಿ ದೋಷವಿದ್ದರೆ ಈ ಪರಿಹಾರಗಳನ್ನು ಮಾಡಿ
- Finance
ಮೇ 24ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Movies
'ಯುಗಾಂತರ' ಧಾರಾವಾಹಿಗೆ ಪ್ರಾಮಾಣಿಕ ಐಎಎಸ್ ಅಧಿಕಾರಿ ಪ್ರೇರಣೆ: ವಾಹಿನಿ ಮುಖ್ಯಸ್ಥರ ಸ್ಪಷ್ಟನೆಯೇನು?
- Technology
ಭಾರತದಲ್ಲಿ ಎಲ್ಜಿ OLED 2022 ಸ್ಮಾರ್ಟ್ ಟಿವಿ ಸರಣಿ ಅನಾವರಣ!
- Education
BSF Recruitment 2022 : 281 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬೆಲೆ ಏರಿಕೆ: ಮಹೀಂದ್ರಾ ಥಾರ್ ಬೆಲೆಯಲ್ಲಿ ರೂ.51 ಸಾವಿರದಷ್ಟು ಹೆಚ್ಚಳ
ಆಟೋ ಬಿಡಿಭಾಗಗಳ ವೆಚ್ಚ ಹೆಚ್ಚುತ್ತಿರುವ ಪರಿಣಾಮ ಹೊಸ ವಾಹನಗಳ ಬೆಲೆಯು ನಿರಂತರವಾಗಿ ಏರಿಕೆಯಾಗುತ್ತಿದ್ದು, ಮಹೀಂದ್ರಾ ಕಂಪನಿಯು ಸಹ ತನ್ನ ಪ್ರಮುಖ ಕಾರುಗಳ ಬೆಲೆಯಲ್ಲಿ ಗರಿಷ್ಠ ಶೇ. 1.50 ರಿಂದ ಶೇ. 2.50ರಷ್ಟು ದರ ಹೆಚ್ಚಿಸಿದೆ.

ಹೊಸ ದರ ಪಟ್ಟಿಯಲ್ಲಿ ಮಹೀಂದ್ರಾ ನಿರ್ಮಾಣದ ಜನಪ್ರಿಯ ಎಸ್‌ಯುವಿ ಮಾದರಿಗಳು ದುಬಾರಿ ಬೆಲೆ ಏರಿಕೆ ಪಡೆದುಕೊಂಡಿದ್ದು, ಥಾರ್ ಆಫ್ ರೋಡ್ ಎಸ್‌ಯುವಿ ಮಾದರಿಯು ಸಹ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಸುಮಾರು ರೂ.35 ಸಾವಿರದಿಂದ ಗರಿಷ್ಠ ರೂ.51 ಸಾವಿರ ತನಕ ಬೆಲೆ ಹೆಚ್ಚಳವಾಗಿದೆ.

ಬೆಲೆ ಹೆಚ್ಚಳ ನಂತರ ಥಾರ್ ಕಾರಿನ ಬೆಲೆಯು ಇದೀಗ ರೂ. 13.53 ಲಕ್ಷದಿಂದ ಆರಂಭವಾಗಿ ಟಾಪ್ ಎಂಡ್ ಮಾದರಿಯು ರೂ.16.03 ಲಕ್ಷಕ್ಕೆ ಏರಿಕೆಯಾಗಿದ್ದು, ಡೀಸೆಲ್ ಮಾದರಿಗಳ ಬೆಲೆಯಲ್ಲಿ ಹೆಚ್ಚಿನ ಏರಿಕೆ ಮಾಡಲಾಗಿದೆ.

ಆಟೋ ಬಿಡಿಭಾಗಗಳ ಕೊರತೆ ಮತ್ತು ಹೆಚ್ಚುತ್ತಿರುವ ವೆಚ್ಚಗಳನ್ನು ನಿರ್ವಹಿಸಲು ಪ್ರಮುಖ ವಾಹನ ತಯಾರಕ ಕಂಪನಿಗಳು ಹೊಸ ವಾಹನಗಳ ಬೆಲೆಯನ್ನು ನಿರಂತರವಾಗಿ ಪರಿಷ್ಕರಣೆ ಮಾಡುತ್ತಿದ್ದು, ನಿರಂತರ ಬೆಲೆ ಏರಿಕೆ ಪರಿಣಾಮ ಹೊಸ ವಾಹನಗಳ ಮಾಲೀಕತ್ವವು ದಿನದಿಂದ ದಿನಕ್ಕೆ ದುಬಾರಿಯಾಗಿ ಪರಿಣಮಿಸುತ್ತಿದೆ.

ಕಳೆದ ಕೆಲವು ತಿಂಗಳುಗಳಲ್ಲಿ ಹೊಸ ವಾಹನಗಳ ಬೆಲೆಯು ಸಾಕಷ್ಟು ಏರಿಕೆಯಾಗಿದ್ದು, ಇದೀಗ ಮಹೀಂದ್ರಾ ಪ್ರಮುಖ ಕಾರುಗಳ ವಿವಿಧ ವೆರಿಯೆಂಟ್‌ಗಳ ಬೆಲೆಯಲ್ಲಿ ಶೇ.1.20 ರಿಂದ ಶೇ. 2.50 ರಷ್ಟು ಹೆಚ್ಚಳ ಮಾಡಲಾಗಿದ್ದು, 2022ರಲ್ಲಿ ಇದು ಎರಡನೇ ಬಾರಿ ದರ ಹೆಚ್ಚಳವಾಗಿದೆ.

ಇನ್ನು ಆಫ್ ರೋಡಿಂಗ್ ವೈಶಿಷ್ಟ್ಯತೆಯೊಂದಿಗೆ ತನ್ನದೆ ಆದ ಜನಪ್ರಿಯೆತೆ ಹೊಂದಿರುವ ಥಾರ್ ಕಾರು ಮಾದರಿಯು ಸಾಮಾನ್ಯ ಕಾರು ಮಾದರಿಗಳಂತೆ ಬೇಡಿಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ನ್ಯೂ ಜನರೇಷನ್ ಥಾರ್ ಖರೀದಿ ಮಾಡಿರುವ ಗ್ರಾಹಕರಲ್ಲಿ ಬಹುತೇಕರು ಹೊಸದಾಗಿ ಆಫ್ ಕೌಶಲ್ಯದ ಆಸಕ್ತಿಯೊಂದಿಗೆ ಥಾರ್ ಮಾಲೀಕತ್ವ ಪಡೆದುಕೊಂಡವರಾಗಿದ್ದಾರೆ.

ಶೇ.57ರಷ್ಟು ಗ್ರಾಹಕರು ಹೊಸದಾಗಿ ಆಫ್ ರೋಡಿಂಗ್ ಕಾರು ಖರೀದಿ ಮಾಡುತ್ತಿರುವ ಗ್ರಾಹಕರಾಗಿದ್ದು, ಮ್ಯಾನುವಲ್‌ಗಿಂತಲೂ ಹೆಚ್ಚು ಆಟೋಮ್ಯಾಟಿಕ್ ಡೀಸೆಲ್ ಮಾದರಿಗಳಿಗೆ ಹೆಚ್ಚು ಬೇಡಿಕೆ ಸಲ್ಲಿಸುತ್ತಿದ್ದಾರೆ.

ಥಾರ್ ಕಾರು ಮಾದರಿಗಾಗಿ ಮಹೀಂದ್ರಾ ಕಂಪನಿಯು ಇದುವರೆಗೆ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸುತ್ತಾ ಬಂದಿದ್ದು, ಹೊಸ ಕಾರು ಬಿಡುಗಡೆಯ ನಂತರ 80 ಸಾವಿರಕ್ಕೂ ಹೆಚ್ಚು ಗ್ರಾಹಕರಿಂದ ಬುಕಿಂಗ್ ಪಡೆದುಕೊಂಡಿದೆ.

ಹೊಸ ಥಾರ್ ಕಾರು ಮಾದರಿಯು ಈ ಬಾರಿ ಹಲವಾರು ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ನ್ಯೂ ಜನರೇಷನ್ ಥಾರ್ ಕಾರು ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಎಎಕ್ಸ್ ಮತ್ತು ಎಲ್ಎಕ್ಸ್ ಎನ್ನುವ ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿದೆ.

ಥಾರ್ ಕಾರು ಮಾದರಿಯಲ್ಲಿ ಮೊದಲ ಬಾರಿಗೆ ಡೀಸೆಲ್ ಎಂಜಿನ್ ಜೊತೆಗೆ ಪೆಟ್ರೋಲ್ ಕಾರಿನ ಆಯ್ಕೆಯನ್ನು ಸಹ ನೀಡಿರುವುದು ಆಫ್-ರೋಡ್ ಕಾರು ಮಾದರಿಯ ಮಾರಾಟದಲ್ಲಿ ಮತ್ತೊಂದು ಹಂತದ ಬದಲಾವಣೆಗೆ ಕಾರಣವಾಗಿದ್ದು, ಲ್ಯಾಡರ್-ಫ್ರೇಮ್ ಚಾರ್ಸಿ ಜೊತೆಗೆ ಹೊಸ ಸಸ್ಪೆಂಷನ್ ಸೌಲಭ್ಯವು ಹೊಸ ಥಾರ್ ಕಾರಿನ ಗುಣಮಟ್ಟ ಮತ್ತು ಕಾರ್ಯಕ್ಷಮತೆ ಹೆಚ್ಚಿಸಿದೆ.

ಹೊಸ ಥಾರ್ ಕಾರು ಮಾದರಿಯಲ್ಲಿ ಬಿಎಸ್-6 ಎಂಜಿನ್ ಪ್ರೇರಿತ 2.2-ಲೀಟರ್ ಡೀಸೆಲ್ ಎಂಜಿನ್ ಮತ್ತು ಹೊಸದಾಗಿ ಅಭಿವೃದ್ದಿಗೊಳಿಸಲಾದ 2.0-ಲೀಟರ್ ಎಂ-ಸ್ಟಾಲಿನ್ ಪೆಟ್ರೋಲ್ ಎಂಜಿನ್ ನೀಡಲಾಗಿದ್ದು, ಎರಡು ಎಂಜಿನ್ ಮಾದರಿಗಳಲ್ಲೂ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ.

ಹೊಸ ಕಾರಿನ ಒಳಭಾಗದ ಸೌಲಭ್ಯಗಳು ಪ್ರಸ್ತುತ ಮಾದರಿಗಿಂತಲೂ ಹೆಚ್ಚು ಪ್ರೀಮಿಯಂ ಮತ್ತು ಮಾರ್ಡನ್ ವಿನ್ಯಾಸಗಳನ್ನು ಹೊಂದಿದ್ದು, ಆಕರ್ಷಕ ಡ್ಯಾಶ್‌ಬೋರ್ಡ್‌ನೊಂದಿಗೆ ಆ್ಯಪಲ್ ಕಾರ್‌ಪ್ಲೇ ಮತ್ತು ಅಂಡ್ರಾಯಿಡ್ ಆಟೋಗೆ ಸರ್ಪೋಟ್ ಮಾಡಬಲ್ಲ 7-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಎಲ್ಲಾ ಮಾದರಿಯ ಹವಾಗುಣವನ್ನು ತಡೆಯಬಲ್ಲ ರೂಫ್ ಮೌಂಟೆಡ್ ಆಡಿಯೋ ಸ್ಪಿಕರ್ಸ್, ಮಲ್ಟಿ ಕಲರ್ ಇನ್ಫಾಮೆಷನ್ ಡಿಸ್‌ಪ್ಲೇ ಮತ್ತು ಸ್ಟೀರಿಂಗ್ ಮೌಟೆಂಟ್ ಕಂಟ್ರೋಲ್ ಸೌಲಭ್ಯ ನೀಡಲಾಗಿದೆ.

ಹೊಸ ಕಾರಿನಲ್ಲಿ ಸುರಕ್ಷತೆಗಾಗಿ ಹಲವಾರು ಸೆಫ್ಟಿ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಎರಡು ಎಂಜಿನ್ ಆಯ್ಕೆಗಳಲ್ಲೂ 4x4 ಡ್ರೈವ್ ಸಿಸ್ಟಂ, ಕ್ರೂಸ್ ಕಂಟ್ರೋಲ್, 255/65 18-ಇಂಚಿನ ಆಲ್ ಟೆರೆನ್ ಟೈರ್ಸ್, ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್, ಹಿಲ್ ಸ್ಟಾರ್ಟ್ ಅಸಿಸ್ಟ್, ರೋಲ್ ಓವರ್ ಮಿಟಿಗೆಷನ್, ತ್ರೀ ಪಾಯಿಂಟ್ ಸಿಲ್ಟ್ ಬೆಲ್ಟ್, ರಿಯರ್ ವ್ಯೂ ಕ್ಯಾಮೆರಾ ಜೋಡಿಸಲಾಗಿದೆ.