ಮಹೀಂದ್ರಾ ಇವಿ ಕಾರು ಉತ್ಪಾದನಾ ಯೋಜನೆಯಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಿದ ಬ್ರಿಟಿಷ್ ಕಂಪನಿ

ಮಹೀಂದ್ರಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಹೊಸ ತಲೆಮಾರಿನ ಇವಿ ಕಾರು ಮಾದರಿಗಳ ಬಿಡುಗಡೆಗಾಗಿ ಬೃಹತ್ ಯೋಜನೆ ರೂಪಿಸುತ್ತಿದ್ದು, ಮಹೀಂದ್ರಾ ಹೊಸ ಯೋಜನೆಗಾಗಿ ಬ್ರಿಟಿಷ್ ಇಂಟರ್‌ನ್ಯಾಷನಲ್ ಇನ್ವೆಸ್ಟ್‌ಮೆಂಟ್(ಬಿಐಐ) ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಿದೆ.

ಮಹೀಂದ್ರಾ ಇವಿ ಕಾರು ಉತ್ಪಾದನಾ ಯೋಜನೆಯಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಿದ ಬ್ರಿಟಿಷ್ ಕಂಪನಿ

ಭಾರತದಲ್ಲಿ ಹೊಸ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗಾಗಿ ಮಹೀಂದ್ರಾ ಕಂಪನಿಯು ಪ್ರತ್ಯೇಕ ನಿಯಂತ್ರಿತ ಅಂಗಸಂಸ್ಥೆಯನ್ನು ಸ್ಥಾಪಿಸಲು ಯೋಜಿಸಿದ್ದು, ಮಹೀಂದ್ರಾ ಹೊಸ ಯೋಜನೆಯಲ್ಲಿ ಪ್ರಮುಖ ಬಂಡವಾಳ ಹೂಡಿಕೆ ಕಂಪನಿಗಳು ಹೆಚ್ಚಿನ ಮಟ್ಟದ ಷೇರು ಖರೀದಿಸುತ್ತಿವೆ. ಇದೀಗ ಮಹೀಂದ್ರಾ ಕಂಪನಿಯ ಹೊಸ ಯೋಜನೆಯಲ್ಲಿ ಬ್ರಿಟಿಷ್ ಇಂಟರ್‌ನ್ಯಾಷನಲ್ ಇನ್ವೆಸ್ಟ್‌ಮೆಂಟ್ ಕಂಪನಿಯು ಸಹ 250 ಮಿಲಿಯನ್ ಅಮೆರಿಕನ್ ಡಾಲರ್(ರೂ.1,925 ಕೋಟಿ) ಹೂಡಿಕೆ ಘೋಷಣೆ ಮಾಡಿದೆ.

ಮಹೀಂದ್ರಾ ಇವಿ ಕಾರು ಉತ್ಪಾದನಾ ಯೋಜನೆಯಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಿದ ಬ್ರಿಟಿಷ್ ಕಂಪನಿ

ಬಿಐಐ ಕಂಪನಿಯು ಮಹೀಂದ್ರಾ ಯೋಜನೆಯಲ್ಲಿ ಶೇ. 2.75 ರಿಂದ 4.76 ರಷ್ಟು ಪಾಲನ್ನು ಪಡೆದುಕೊಳ್ಳುತ್ತಿದ್ದು, ಎರಡು ಹಂತಗಳಲ್ಲಿ ಕಂಪನಿಯು ರೂ.1,925 ಕೋಟಿ ರೂ.ವರೆಗೆ ಹೂಡಿಕೆ ಮಾಡಲಿದೆ.

ಮಹೀಂದ್ರಾ ಇವಿ ಕಾರು ಉತ್ಪಾದನಾ ಯೋಜನೆಯಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಿದ ಬ್ರಿಟಿಷ್ ಕಂಪನಿ

ಮಹೀಂದ್ರಾ ಕಂಪನಿಯು ಸುಧಾರಿತ ತಂತ್ರಜ್ಞಾನಗಳೊಂದಿಗೆ ವಿಶ್ವ ದರ್ಜೆಯ ಎಲೆಕ್ಟ್ರಿಕ್ ಎಸ್‌ಯುವಿ ಪೋರ್ಟ್‌ಫೋಲಿಯೊವನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದು, ಮಹೀಂದ್ರಾ ಹೊಸ ಇವಿ ಅಂಗಸಂಸ್ಥೆಯು ತನ್ನ ಉತ್ಪನ್ನ ಪೋರ್ಟ್‌ಫೋಲಿಯೊವನ್ನು ಅಭಿವೃದ್ಧಿಪಡಿಸಲು 2027ರ ವೇಳೆಗೆ ಒಟ್ಟು 8,000 ಕೋಟಿ ಬಂಡವಾಳ ಹೂಡಿಕೆಯಾಗುವ ನೀರಿಕ್ಷೆಯಿಟ್ಟುಕೊಂಡಿದೆ.

ಮಹೀಂದ್ರಾ ಇವಿ ಕಾರು ಉತ್ಪಾದನಾ ಯೋಜನೆಯಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಿದ ಬ್ರಿಟಿಷ್ ಕಂಪನಿ

ಮಹೀಂದ್ರಾ ಕಂಪನಿಯ ಹೊಸ ಇವಿ ಅಂಗಸಂಸ್ಥೆಯು ಪೂರ್ಣ ಪ್ರಮಾಣದ ಕಾರ್ಯಾಚರಣೆ ವೇಳೆಗೆ ರೂ. 70,070 ಕೋಟಿ ಮೌಲ್ಯದ್ದಾಗಿರುತ್ತೆ ಎಂದು ಅಂದಾಜಿಸಲಾಗಿದ್ದು, ಮುಂಬರುವ ವರ್ಷಗಳಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ವಿಭಾಗಕ್ಕೆ ಮಹೀಂದ್ರಾ ಕಂಪನಿಯು ದೊಡ್ಡ ಯೋಜನೆಗಳನ್ನು ಪರಿಚಯಿಸಲಿದೆ.

ಮಹೀಂದ್ರಾ ಇವಿ ಕಾರು ಉತ್ಪಾದನಾ ಯೋಜನೆಯಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಿದ ಬ್ರಿಟಿಷ್ ಕಂಪನಿ

ಕಂಪನಿಯು 2027ರ ವೇಳೆಗೆ ಶೇ. 20 ರಿಂದ ಶೇ. 30% ರಷ್ಟು ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಮಾರಾಟ ಮಾಡುವ ಗುರಿ ಹೊಂದಿದ್ದು, ಕಂಪನಿಯು ಶೀಘ್ರದಲ್ಲಿಯೇ ತನ್ನ ಬಹುನೀರಿಕ್ಷಿತ 'ಬಾರ್ನ್ ಎಲೆಕ್ಟ್ರಿಕ್' ಮಾದರಿಗಳನ್ನು ಅನಾವರಣಗೊಳಿಸಿ ಬಿಡುಗಡೆಗಾಗಿ ಸಿದ್ದವಾಗುತ್ತಿದೆ.

ಮಹೀಂದ್ರಾ ಇವಿ ಕಾರು ಉತ್ಪಾದನಾ ಯೋಜನೆಯಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಿದ ಬ್ರಿಟಿಷ್ ಕಂಪನಿ

ನ್ಯೂ ಜನರೇಷನ್ ಮಾದರಿಗಳನ್ನು ಬಿಡುಗಡೆ ಮಾಡುವ ಮೂಲಕ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿರುವ ಮಹೀಂದ್ರಾ ಕಂಪನಿಯು ಸಾಮಾನ್ಯ ಕಾರುಗಳ ಜೊತೆ ಎಲೆಕ್ಟ್ರಿಕ್ ಕಾರು ಮಾದರಿಗಳ ಮೇಲೂ ಹೆಚ್ಚಿನ ಗಮನಹರಿಸಿದ್ದು, ಇವಿ ಕಾರು ಮಾದರಿಗಳಿಗಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ಮೂಲಕ ಬಾರ್ನ್ ಇವಿ ಶ್ರೇಣಿಯಲ್ಲಿ ಒಟ್ಟು ಮೂರು ಹೊಸ ಇವಿ ಎಸ್‌ಯುವಿ ಕಾರುಗಳನ್ನು ಪರಿಚಯಿಸಲಿದೆ.

ಮಹೀಂದ್ರಾ ಇವಿ ಕಾರು ಉತ್ಪಾದನಾ ಯೋಜನೆಯಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಿದ ಬ್ರಿಟಿಷ್ ಕಂಪನಿ

ಹೊಸ ಇವಿ ಕಾರು ಮಾದರಿಗಳಿಗಳನ್ನು ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ಮೂಲಕ ಸುಧಾರಿತ ತಂತ್ರಜ್ಞಾನ ಸೌಲಭ್ಯಗಳೊಂದಿಗೆ ಅಭಿವೃದ್ದಿಗೊಳಿಸುತ್ತಿದ್ದು, ಮೂರು ಹೊಸ ಇವಿ ಕಾರಿಗಳಲ್ಲಿ ಮೊದಲ ಇವಿ ಎಸ್‌‌ಯುವಿ ಕಾರಿನ ಟೀಸರ್ ಹಂಚಿಕೊಂಡಿರುವ ಕಂಪನಿಯು ಮುಂಬರುವ ಅಗಸ್ಟ್ 15ಕ್ಕೆ ಹೊಸ ಕಾನ್ಸೆಪ್ಟ್ ಮಾದರಿಯನ್ನು ಅನಾವರಣಗೊಳಿಸುವ ಸುಳಿವು ನೀಡಿದೆ.

ಮಹೀಂದ್ರಾ ಕಂಪನಿಯು ಬಾರ್ನ್ ಇವಿ ಪರಿಕಲ್ಪನೆ ಅಡಿಯಲ್ಲಿ ಹೊಸ ಇವಿ ಕಾರುಗಳನ್ನು ಯುಕೆಯಲ್ಲಿರುವ ತನ್ನ ಅಡ್ವಾನ್ಸ್ಡ್ ಡಿಸೈನ್ ಸ್ಟುಡಿಯೋದಲ್ಲಿ ವಿನ್ಯಾಸಗೊಳಿಸುತ್ತಿದ್ದು, ಹೊಸ ಶ್ರೇಣಿಯ ಇವಿ ಕಾರುಗಳನ್ನು ಕಂಪನಿಯು 2025 ಮತ್ತು 2026ರ ನಡುವೆ ಪರಿಚಯಿಸಲು ನಿರ್ಧರಿಸಿದೆ.

ಮಹೀಂದ್ರಾ ಇವಿ ಕಾರು ಉತ್ಪಾದನಾ ಯೋಜನೆಯಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಿದ ಬ್ರಿಟಿಷ್ ಕಂಪನಿ

ಮಹೀಂದ್ರಾ ಕಂಪನಿಯು ಭಾರತದಲ್ಲಿ ಹೊಸ ಬಾರ್ನ್ ಇವಿ ಮಾದರಿಗಳ ಬಿಡುಗಡೆಗೂ ಮುನ್ನ ಈಗಾಗಲೇ ಅನಾವರಣಗೊಳಿಸಲಾಗಿರುವ ಇಕೆಯುವಿ100 ಮತ್ತು ಇಎಕ್ಸ್‌ಯುವಿ300 ಕಾರುಗಳನ್ನು 2023ರ ಆರಂಭದಲ್ಲಿ ಬಿಡುಗಡೆ ಮಾಡಲಿದೆ. ಬಾರ್ನ್ ಇವಿ ಪರಿಕಲ್ಪನೆಯಲ್ಲಿ ಅಭಿವೃದ್ದಿಗೊಳ್ಳುತ್ತಿರುವ ಇವಿ ಕಾರುಗಳು ಇಕೆಯುವಿ100 ಮತ್ತು ಇಎಕ್ಸ್‌ಯುವಿ300 ಕಾರುಗಳಿಂತಲೂ ಹೆಚ್ಚಿನ ಮಟ್ಟದ ತಂತ್ರಜ್ಞಾನ ಪ್ರೇರಣೆಯೊಂದಿಗೆ ಬಿಡುಗಡೆಯಾಗಲಿದ್ದು, ಬಾರ್ನ್ ಇವಿ ಮಾದರಿಗಳು ಎರಡನೇ ತಲೆಮಾರಿನ ಇವಿ ತಂತ್ರಜ್ಞಾನ ಸೌಲಭ್ಯಗಳನ್ನು ಪಡೆದುಕೊಳ್ಳಲಿವೆ.

ಮಹೀಂದ್ರಾ ಇವಿ ಕಾರು ಉತ್ಪಾದನಾ ಯೋಜನೆಯಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಿದ ಬ್ರಿಟಿಷ್ ಕಂಪನಿ

ಬಾರ್ನ್ ಇವಿ ಪರಿಕಲ್ಪನೆಯ ಹೊಸ ಕಾರುಗಳು ಮಹೀಂದ್ರಾ ಕಂಪನಿಯ ಹೊಸ ಇವಿ ಕಾರುಗಳಿಗೆ ಮೀಸಲಾದ ಪ್ರತ್ಯೇಕ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿರಲಿದ್ದು, ಹೊಸ ಇವಿ ಎಸ್‌ಯುವಿ ಕಾರು ಸಿ ಆಕಾರದ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಟೈಲ್‌ಲೈಟ್‌ ಮತ್ತು ಆಕರ್ಷಕ ಕ್ಯಾಬಿನ್ ಹೊಂದಿರಲಿದೆ.

ಮಹೀಂದ್ರಾ ಇವಿ ಕಾರು ಉತ್ಪಾದನಾ ಯೋಜನೆಯಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಿದ ಬ್ರಿಟಿಷ್ ಕಂಪನಿ

2022ರ ಅಗಸ್ಟ್‌ನಲ್ಲಿ ಹೊಸ ಬಾರ್ನ್ ಇವಿ ಪರಿಕಲ್ಪನೆಯ ಅಡಿಯ ಹೊಸ ಮೂರು ಇವಿ ಕಾರುಗಳು ಕಾನ್ಸೆಪ್ಟ್ ಮಾದರಿಗಳೊಂದಿಗೆ ಅನಾವರಣಗೊಳ್ಳಲಿದ್ದು, ಹೊಸ ಕಾರುಗಳ ಭಾರತದಲ್ಲಿ ಮಾತ್ರವಲ್ಲ ಪ್ರಮುಖ ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೂ ಪ್ರವೇಶಿಸಲಿವೆ.

ಮಹೀಂದ್ರಾ ಇವಿ ಕಾರು ಉತ್ಪಾದನಾ ಯೋಜನೆಯಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಿದ ಬ್ರಿಟಿಷ್ ಕಂಪನಿ

ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ಎಕ್ಸ್‌ಯುವಿ700, ಎಕ್ಸ್‌ಯುವಿ300, ಬೊಲೆರೊ, ಸ್ಕಾರ್ಪಿಯೋ, ಥಾರ್ ಮಾದರಿಯೊಂದಿಗೆ ಎಸ್‌ಯುವಿ ಮಾರಾಟದಲ್ಲಿ ಮುಂಚೂಣಿ ಹೊಂದಿದ್ದು, ಎಸ್‌ಯುವಿ ವಿಭಾಗದಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಮಹೀಂದ್ರಾ ಇವಿ ಕಾರು ಉತ್ಪಾದನಾ ಯೋಜನೆಯಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಿದ ಬ್ರಿಟಿಷ್ ಕಂಪನಿ

ಹೊಸ ಎಸ್‌ಯುವಿ ಕಾರುಗಳ ಪಟ್ಟಿಯಲ್ಲಿ ಸಾಮಾನ್ಯ ಮಾದರಿಗಳ ಜೊತೆಗೆ ಎಲೆಕ್ಟ್ರಿಕ್ ಮಾದರಿಗಳು ಸಹ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಮುಂದಿನ ಐದು ವರ್ಷಗಳ ಅವಧಿಯಲ್ಲಿ ಒಟ್ಟು 13 ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

Most Read Articles

Kannada
English summary
Mahindra to attract investment from bii invest details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X