ಸ್ಕಾರ್ಪಿಯೋ-ಎನ್ ನಂತರ ಸ್ಕಾರ್ಪಿಯೋ-ಕ್ಲಾಸಿಕ್ ಬಿಡುಗಡೆಗೆ ಸಿದ್ದವಾದ ಮಹೀಂದ್ರಾ

ಮಹೀಂದ್ರಾ ಕಂಪನಿಯು ತನ್ನ ಸ್ಕಾರ್ಪಿಯೋ-ಎನ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಕಂಪನಿಯು ಶೀಘ್ರದಲ್ಲಿಯೇ ಸ್ಕಾರ್ಪಿಯೋ-ಕ್ಲಾಸಿಕ್ ಮಾದರಿಯ ಬಿಡುಗಡೆಗಾಗಿ ಸಿದ್ದವಾಗುತ್ತಿದೆ.

ಸ್ಕಾರ್ಪಿಯೋ-ಎನ್ ನಂತರ ಸ್ಕಾರ್ಪಿಯೋ-ಕ್ಲಾಸಿಕ್ ಬಿಡುಗಡೆಗೆ ಸಿದ್ದವಾದ ಮಹೀಂದ್ರಾ

ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಸ್ಕಾರ್ಪಿಯೋ-ಎನ್ ಮಾದರಿಯನ್ನು ಬಿಡಿಗಡೆ ಮಾಡಿರುವ ಮಹೀಂದ್ರಾ ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಯನ್ನು ಸ್ಕಾರ್ಪಿಯೋ ಕ್ಲಾಸಿಕ್ ಹೆಸರಿನಲ್ಲಿ ಬಿಡುಗಡೆ ಮಾಡುತ್ತಿದ್ದು, ಸ್ಕಾರ್ಪಿಯೋ ಕ್ಲಾಸಿಕ್ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಸ್ಕಾರ್ಪಿಯೋ ಮಾದರಿಯಲ್ಲಿಯೇ ಕೆಲವು ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ.

ಸ್ಕಾರ್ಪಿಯೋ-ಎನ್ ನಂತರ ಸ್ಕಾರ್ಪಿಯೋ-ಕ್ಲಾಸಿಕ್ ಬಿಡುಗಡೆಗೆ ಸಿದ್ದವಾದ ಮಹೀಂದ್ರಾ

ಹೊಸ ತಲೆಮಾರಿನ ಸ್ಕಾರ್ಪಿಯೋ-ಎನ್ ಮಾದರಿಯು ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಹೊಂದಿದ್ದು, ಸ್ಕಾರ್ಪಿಯೋ ಕ್ಲಾಸಿಕ್ ಮಾದರಿಯು ಕೇವಲ ಡೀಸೆಲ್ ಎಂಜಿನ್ ಆಯ್ಕೆ ಮಾತ್ರ ಹೊಂದಿಲಿದೆ.

ಸ್ಕಾರ್ಪಿಯೋ-ಎನ್ ನಂತರ ಸ್ಕಾರ್ಪಿಯೋ-ಕ್ಲಾಸಿಕ್ ಬಿಡುಗಡೆಗೆ ಸಿದ್ದವಾದ ಮಹೀಂದ್ರಾ

ಜೊತೆಗೆ ಹೊಸ ಕಾರಿನಲ್ಲಿ ಕೇವಲ ಎರಡು ವೆರಿಯೆಂಟ್‌ಗಳನ್ನು ಮಾತ್ರ ಮಾರಾಟ ಮಾಡಲು ನಿರ್ಧರಿಸಿದ್ದು, ಹೊಸ ಸ್ಕಾರ್ಪಿಯೋ-ಎನ್ ಮಾದರಿಯು ವಿವಿಧ ಎಂಜಿನ್ ಎಂಜಿನ್ ಆಯ್ಕೆಯೊಂದಿಗೆ ಒಟ್ಟು ಹತ್ತು ವೆರಿಯೆಂಟ್‌ಗಳನ್ನು ಹೊಂದಿರಲಿದೆ.

ಸ್ಕಾರ್ಪಿಯೋ-ಎನ್ ನಂತರ ಸ್ಕಾರ್ಪಿಯೋ-ಕ್ಲಾಸಿಕ್ ಬಿಡುಗಡೆಗೆ ಸಿದ್ದವಾದ ಮಹೀಂದ್ರಾ

ಆದರೂ ಹೊಸ ಮಾದರಿಯಲ್ಲಿನ ಕೆಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಸ್ಕಾರ್ಪಿಯೋ ಕ್ಲಾಸಿಕ್ ಮಾದರಿಯಲ್ಲೂ ಜೋಡಣೆ ಮಾಡಲಾಗಿದ್ದು, ಕ್ಲಾಸಿಕ್ ಮಾದರಿಯು ವಿಶೇಷವಾಗಿ 7 ಸೀಟರ್ ಮತ್ತು 9 ಸೀಟರ್ ಆಯ್ಕೆಗಳನ್ನು ಪಡೆದುಕೊಳ್ಳಲಿದೆ.

ಸ್ಕಾರ್ಪಿಯೋ-ಎನ್ ನಂತರ ಸ್ಕಾರ್ಪಿಯೋ-ಕ್ಲಾಸಿಕ್ ಬಿಡುಗಡೆಗೆ ಸಿದ್ದವಾದ ಮಹೀಂದ್ರಾ

ಹೊಸ ಸ್ಕಾರ್ಪಿಯೋ-ಎನ್ ಮಾದರಿಯನ್ನು ಕಂಪನಿಯು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ 6 ಸೀಟರ್ ಮತ್ತು 7 ಸೀಟರ್ ಮಾದರಿಗಳಲ್ಲಿ ಪರಿಚಯಿಸಿದ್ದರೆ ಸ್ಕಾರ್ಪಿಯೋ ಕ್ಲಾಸಿಕ್ ಮಾದರಿಯನ್ನು 7 ಸೀಟರ್ ಮತ್ತು 9 ಸೀಟರ್ ಮಾದರಿಗಳಲ್ಲಿ ಅಭಿವೃದ್ದಿಗೊಳಿಸಿದೆ.

ಸ್ಕಾರ್ಪಿಯೋ-ಎನ್ ನಂತರ ಸ್ಕಾರ್ಪಿಯೋ-ಕ್ಲಾಸಿಕ್ ಬಿಡುಗಡೆಗೆ ಸಿದ್ದವಾದ ಮಹೀಂದ್ರಾ

ಸ್ಕಾರ್ಪಿಯೋ-ಎನ್ ಮಾದರಿಯ 6 ಸೀಟರ್ ಮಾದರಿಯು 2+2+2 ಆಸನಗಳನ್ನು ಹೊಂದಿದ್ದರೆ 7 ಸೀಟರ್ ಮಾದರಿಯು 2+3+2 ಆಸನಗಳನ್ನು ಹೊಂದಿದ್ದು, ಸ್ಕಾರ್ಪಿಯೋ-ಕ್ಲಾಸಿಕ್ ಮಾದರಿಯಲ್ಲಿ 7 ಸೀಟರ್ ಮಾದರಿಯಲ್ಲಿ 2+3+2 ಆಸನಗಳಿದ್ದರೆ 9 ಸೀಟರ್‌ ಮಾದರಿಯಲ್ಲಿ 2+3+4(ಬೆಂಚ್ ಸೀಟ್) ಆಸನಗಳನ್ನು ನೀಡಲಾಗಿದೆ.

ಸ್ಕಾರ್ಪಿಯೋ-ಎನ್ ನಂತರ ಸ್ಕಾರ್ಪಿಯೋ-ಕ್ಲಾಸಿಕ್ ಬಿಡುಗಡೆಗೆ ಸಿದ್ದವಾದ ಮಹೀಂದ್ರಾ

9 ಸೀಟರ್ ಮಾದರಿಯ ಮೂರನೇ ಸಾಲಿನಲ್ಲಿ ಬೆಂಚ್ ಸೀಟ್ ನೀಡಿರುವುದರಿಂದ ಪ್ರಯಾಣಿಕರು ಎದುರುಬದುರಾಗಿ ಕೂರಬೇಕಿದ್ದು, ಈ ವೆರಿಯೆಂಟ್ ಅನ್ನು ಕಂಪನಿಯು ವಿಶೇಷವಾಗಿ ಫ್ಲಿಟ್‌ಗಳಿಗೆ ಮಾರಾಟ ಮಾಡಬಹುದಾಗಿದೆ.

ಸ್ಕಾರ್ಪಿಯೋ-ಎನ್ ನಂತರ ಸ್ಕಾರ್ಪಿಯೋ-ಕ್ಲಾಸಿಕ್ ಬಿಡುಗಡೆಗೆ ಸಿದ್ದವಾದ ಮಹೀಂದ್ರಾ

ಇನ್ನು ಹೊಸ ಕಾರು ಮಾದರಿಯು ವಿವಿಧ ಎಂಜಿನ್ ಆಯ್ಕೆಗಳಿಗೆ ಅನುಗುಣವಾಗಿ ಜೆಡ್2, ಜೆಡ್4, ಜೆಡ್6, ಜೆಡ್8 ಮತ್ತು ಜೆಡ್ಎಲ್ ವೆರಿಯೆಂಟ್‌ಗಳನ್ನು ಹೊಂದಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 11.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 19.49 ಲಕ್ಷ ಬೆಲೆ ಹೊಂದಿದೆ.

ಸ್ಕಾರ್ಪಿಯೋ-ಎನ್ ನಂತರ ಸ್ಕಾರ್ಪಿಯೋ-ಕ್ಲಾಸಿಕ್ ಬಿಡುಗಡೆಗೆ ಸಿದ್ದವಾದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಹೊಸ ಸ್ಕಾರ್ಪಿಯೋ-ಎನ್ ಮಾದರಿಯನ್ನು ಎಕ್ಸ್‌ಯುವಿ700 ಮಾದರಿಯಲ್ಲಿರುವಂತೆ 2.0 ಲೀಟರ್ ಪೆಟ್ರೋಲ್ ಮತ್ತು 2.2 ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆ ಮಾಡಿದ್ದು, ಹೊಸ ಕಾರನ್ನು ಗ್ರಾಹಕರು 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ ಖರೀದಿ ಮಾಡಬಹುದಾಗಿದೆ.

ಸ್ಕಾರ್ಪಿಯೋ-ಎನ್ ನಂತರ ಸ್ಕಾರ್ಪಿಯೋ-ಕ್ಲಾಸಿಕ್ ಬಿಡುಗಡೆಗೆ ಸಿದ್ದವಾದ ಮಹೀಂದ್ರಾ

ಹೊಸ ಕಾರು ಸಾಕಷ್ಟು ವಿನ್ಯಾಸಗಳೊಂದಿಗೆ ಹೊರಗೂ ಮತ್ತು ಒಳಗೂ ಅಮೂಲಾಗ್ರಹ ಬದಲಾವಣೆ ಪಡೆದುಕೊಂಡಿದ್ದ, ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್, ಇಎಸ್ಇ, ಟ್ರಾಕ್ಷನ್ ಕಂಟ್ರೋಲ್, ಹಿಲ್ ಹೋಲ್ಡ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್, ಐಸೋಫಿಕ್ಸ್ ಆಂಕರ್ ಪಾಯಿಂಟ್‌ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಸೇರಿದಂತೆ ಹಲವಾರು ಫೀಚರ್ಸ್‌ಗಳಿವೆ.

ಸ್ಕಾರ್ಪಿಯೋ-ಎನ್ ನಂತರ ಸ್ಕಾರ್ಪಿಯೋ-ಕ್ಲಾಸಿಕ್ ಬಿಡುಗಡೆಗೆ ಸಿದ್ದವಾದ ಮಹೀಂದ್ರಾ

ಹೊಸ ಕಾರಿನ ಮುಂಭಾಗದಲ್ಲಿ ಮಹೀಂದ್ರಾ ಕಂಪನಿಯ ಸಾಂಪ್ರದಾಯಿಕ ಸಿಕ್ಸ್ ಸ್ಲಾಟ್ ಫ್ರಂಟ್ ಗ್ರಿಲ್ ಜೊತೆಗೆ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಸ್ಕಾರ್ಪಿಯನ್ ಟೈಲ್ ಶೇಪ್ ಹೊಂದಿರುವ ಡಿಆರ್‌ಎಲ್ಎಸ್ ಮತ್ತು ಫಾಗ್ ಲ್ಯಾಂಪ್ ಹೊಂದಿದ್ದು, 18 ಇಂಚಿನ ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ಮತ್ತು ಲಂಬವಾಗಿ ಜೋಡಿಸಲಾಗಿರುವ ಎಲ್ಇಡಿ ಟೈಲ್‌ಲೈಟ್‌ಗಳು ಮತ್ತು ಸ್ಪಾಯ್ಲರ್ ಹೊಂದಿವೆ.

ಸ್ಕಾರ್ಪಿಯೋ-ಎನ್ ನಂತರ ಸ್ಕಾರ್ಪಿಯೋ-ಕ್ಲಾಸಿಕ್ ಬಿಡುಗಡೆಗೆ ಸಿದ್ದವಾದ ಮಹೀಂದ್ರಾ

ಸ್ಕಾರ್ಪಿಯೋ-ಎನ್ ಮಾದರಿಯ ಮಧ್ಯಂತರ ವೆರಿಯೆಂಟ್‌ ನಂತರ ಲಭ್ಯವಾಗುವಂತೆ ಸನ್‌ರೂಫ್, ಎಲೆಕ್ಟ್ರಿಕಲ್ ಫೋಲ್ಡಿಂಗ್ ರಿಯರ್ ವ್ಯೂ ಮಿರರ್‌ಗಳು ಮತ್ತು ಶಾರ್ಕ್-ಫಿನ್ ಆಂಟೆನಾವನ್ನು ಸಹ ಒಳಗೊಂಡಿದ್ದು, ಡ್ಯುಯಲ್-ಟೋನ್ ಡ್ಯಾಶ್‌ಬೋರ್ಡ್ ಮತ್ತು ಮೆಟಲ್-ಫಿನಿಶ್ಡ್ ಡ್ಯುಯಲ್ ರೈಲ್‌ಗಳೊಂದಿಗೆ ಆಕರ್ಷಕವಾದ ಸೆಂಟರ್ ಕನ್ಸೋಲ್‌, ರಿಚ್ ಕಾಫಿ ಬ್ಲ್ಯಾಕ್ ಲೆದರ್ ಆಸನಗಳು, 6 ಹಂತಗಳಲ್ಲಿ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್ ಮತ್ತು ಎರಡನೇ ಸಾಲಿನಲ್ಲಿ ಕ್ಯಾಪ್ಟನ್ ಆಸನವನ್ನು ಅಳವಡಿಸಲಾಗಿದೆ.

ಸ್ಕಾರ್ಪಿಯೋ-ಎನ್ ನಂತರ ಸ್ಕಾರ್ಪಿಯೋ-ಕ್ಲಾಸಿಕ್ ಬಿಡುಗಡೆಗೆ ಸಿದ್ದವಾದ ಮಹೀಂದ್ರಾ

ಹಾಗೆಯೇ ಹೊಸ ಕಾರಿನಲ್ಲಿ 8-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, 70ಕ್ಕೂ ಹೆಚ್ಚು ಕಾರ್ ಕನೆಕ್ಟ್ ಫೀಚರ್ಸ್, ಅಂಡ್ರಾಯಿಡ್ ಆಟೋ ಮತ್ತು ಆಟೋ ಕಾರ್‌ಪ್ಲೇ, ಅಮೆಜಾನ್ ಅಲೆಕ್ಸಾ ವಾಯ್ಸ್ ಸರ್ಪೊಟ್, 3ಡಿ ಸೊನಿ ಸರೌಂಡ್ ಸೌಂಡ್ ಸಿಸ್ಟಂ ಮತ್ತು ವಾಯ್ಸ್ ಕಮಾಂಡ್ ಫೀಚರ್ಸ್ ಹೊಂದಿದೆ.

Most Read Articles

Kannada
English summary
Mahindra to reintroduce the scorpio classic soon
Story first published: Wednesday, June 29, 2022, 19:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X