ಮೇಡ್ ಇನ್ ಇಂಡಿಯಾ ಮಹೀಂದ್ರಾ ಎಕ್ಸ್‌ಯುವಿ300 ಆಫ್ರಿಕಾದ ಅತ್ಯಂತ ಸುರಕ್ಷಿತ ಕಾರು

ಮಹೀಂದ್ರಾ ಎಕ್ಸ್‌ಯುವಿ300 ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ. ಮಹೀಂದ್ರಾ ಎಕ್ಸ್‌ಯುವಿ300 ವರ್ಷಗಳ ಹಿಂದೆ ಭಾರತದಲ್ಲಿ ಸುರಕ್ಷಿತವಾದ ಕಾರು ಮತ್ತು ಅದರ ನಂತರ ಟಾಟಾ ನೆಕ್ಸಾನ್ ಹಿಂದೆ ಉಳಿದಿತ್ತು, ಆದರೆ ಈಗ ಮತ್ತೊಮ್ಮೆ ಮಹೀಂದ್ರಾದ ಎಕ್ಸ್‌ಯುವಿ700 ದೇಶದಲ್ಲಿ ಸುರಕ್ಷಿತ ಕಾರು ಎನಿಸಿಕೊಂಡಿದೆ.

ಮೇಡ್ ಇನ್ ಇಂಡಿಯಾ ಮಹೀಂದ್ರಾ ಎಕ್ಸ್‌ಯುವಿ300 ಆಫ್ರಿಕಾದ ಅತ್ಯಂತ ಸುರಕ್ಷಿತ ಕಾರು

ಮಹೀಂದ್ರಾ ಎಕ್ಸ್‌ಯುವಿ300 ಕಂಪನಿಯ ಮೊದಲ 5-ಸ್ಟಾರ್ ಸುರಕ್ಷತಾ ರೇಟಿಂಗ್ ಮಾದರಿಯಾಗಿದೆ. ಅಂದಿನಿಂದ ಕಂಪನಿಯ ಎಲ್ಲಾ ಹೊಸ ಮಾದರಿಗಳು ಉನ್ನರ ಮಟ್ಟದ ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆಯುತ್ತಿವೆ. ಇದರ ನಂತರ, ಕಂಪನಿಯು ಥಾರ್ ಮತ್ತು ಎಕ್ಸ್‌ಯುವಿ700 ಕೂಡ ಟಾಪ್ ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ. ಕಂಪನಿಯು ಈಗ ಹೊಸ ಸ್ಕಾರ್ಪಿಯೋ-ಎನ್ ಅನ್ನು ತಂದಿದೆ ಮತ್ತು ಈ ಎಸ್‍ಯುವಿ 5-ಸ್ಟಾರ್ ರೇಟಿಂಗ್ ಅನ್ನು ಸಹ ಪಡೆಯಲಿದೆ ಎಂದು ಟೀಸರ್ ಮೂಲಕ ಸೂಚಿಸಿದೆ.

ಮೇಡ್ ಇನ್ ಇಂಡಿಯಾ ಮಹೀಂದ್ರಾ ಎಕ್ಸ್‌ಯುವಿ300 ಆಫ್ರಿಕಾದ ಅತ್ಯಂತ ಸುರಕ್ಷಿತ ಕಾರು

ಮಹೀಂದ್ರಾ ಎಕ್ಸ್‌ಯುವಿ300 ಆಫ್ರಿಕನ್ ಮಾದರಿಯು ವಯಸ್ಕರ ಸುರಕ್ಷತೆಯಲ್ಲಿ 5-ಸ್ಟಾರ್‌ಗಳನ್ನು ಮತ್ತು ಭಾರತೀಯ ಮಾದರಿಯಂತೆ ಮಕ್ಕಳ ಸುರಕ್ಷತೆಯಲ್ಲಿ 4-ಸ್ಟಾರ್‌ಗಳನ್ನು ಪಡೆದುಕೊಂಡಿದೆ. ಕಂಪನಿಯು ಈ SUV ಅನ್ನು 2019 ರಲ್ಲಿ ಭಾರತ ಮತ್ತು ಆಫ್ರಿಕಾದಲ್ಲಿ ಬಿಡುಗಡೆ ಮಾಡಿತ್ತು ಮತ್ತು ಕಂಪನಿಯು ತನ್ನ ಅಸ್ತಿತ್ವದಲ್ಲಿರುವ 60 ಡೀಲರ್‌ಶಿಪ್‌ಗಳ ಮೂಲಕ ಅದನ್ನು ಮಾರಾಟ ಮಾಡಲಿದೆ.

ಮೇಡ್ ಇನ್ ಇಂಡಿಯಾ ಮಹೀಂದ್ರಾ ಎಕ್ಸ್‌ಯುವಿ300 ಆಫ್ರಿಕಾದ ಅತ್ಯಂತ ಸುರಕ್ಷಿತ ಕಾರು

ಮಹೀಂದ್ರಾ ಎಕ್ಸ್‌ಯುವಿ300 2021ರ ಜನವರಿ 28 ರಂದು ಆಫ್ರಿಕಾದ ಮೊದಲ 5-ಸ್ಟಾರ್ ರೇಟೆಡ್ ಸುರಕ್ಷಿತ ಮಾದರಿಯಾಗಿದೆ ಮತ್ತು ಅಂದಿನಿಂದ ಈ ಸ್ಥಾನವನ್ನು ಹೊಂದಿದೆ. ಸದ್ಯಕ್ಕೆ, ಆಫ್ರಿಕಾದಲ್ಲಿ 5-ಸ್ಟಾರ್ ಸುರಕ್ಷತೆಯನ್ನು ಪಡೆದ ಯಾವುದೇ ಮಾದರಿ ಇಲ್ಲ. ಕಂಪನಿಯು ಈ ಎಸ್‍ಯುವಿಯಲ್ಲಿ ಸೀಟ್ ಬೆಲ್ಟ್ ರಿಮೈಂಡರ್, ಎಬಿಎಸ್, 2 ಏರ್‌ಬ್ಯಾಗ್‌ಗಳು ಇತ್ಯಾದಿಗಳನ್ನು ಸ್ಟ್ಯಾಂಡರ್ಡ್ ಆಗಿ ಒದಗಿಸುತ್ತದೆ.

ಮೇಡ್ ಇನ್ ಇಂಡಿಯಾ ಮಹೀಂದ್ರಾ ಎಕ್ಸ್‌ಯುವಿ300 ಆಫ್ರಿಕಾದ ಅತ್ಯಂತ ಸುರಕ್ಷಿತ ಕಾರು

ಮಹೀಂದ್ರಾ ಎಕ್ಸ್‌ಯುವಿ300 ಅನ್ನು ಆಫ್ರಿಕಾದಲ್ಲಿ ಎರಡು ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗುತ್ತದೆ. ಇದು 1.5-ಲೀಟರ್ ಡೀಸೆಲ್ ಮತ್ತು 1.2-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಆಗಿದೆ. ಇದಕ್ಕೆ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೀಡಲಾಗಿದೆ. ಇದರೊಂದಿಗೆ, 17.8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಜಿಪಿಎಸ್ ನ್ಯಾವಿಗೇಷನ್, ಎಲ್‌ಇಡಿ ಹೆಡ್‌ಲೈಟ್ ಮತ್ತು ಟೈಲ್‌ಲೈಟ್ ನೀಡಲಾಗಿದೆ.

ಮೇಡ್ ಇನ್ ಇಂಡಿಯಾ ಮಹೀಂದ್ರಾ ಎಕ್ಸ್‌ಯುವಿ300 ಆಫ್ರಿಕಾದ ಅತ್ಯಂತ ಸುರಕ್ಷಿತ ಕಾರು

ಸುರಕ್ಷತೆಯ ವಿಷಯದಲ್ಲಿ, ಈ ಎಸ್‍ಯುವಿ 7 ಏರ್‌ಬ್ಯಾಗ್‌ಗಳು, ಮುಂಭಾಗದ ಪಾರ್ಕಿಂಗ್ ಸೆನ್ಸರ್ ಗಳು, ಎಲ್ಲಾ ನಾಲ್ಕು ಚಕ್ರಗಳಲ್ಲಿ ಡಿಸ್ಕ್ ಬ್ರೇಕ್‌ಗಳು, ಹಿಲ್ ಸ್ಟಾರ್ಟ್ ಅಸಿಸ್ಟ್, ISOFIX ಚೈಲ್ಡ್ ಸೀಟ್ ಆಂಕರ್‌ಗಳು, EBD ಜೊತೆಗೆ ABS, ESP ಅನ್ನು ಹೊಂದಿದೆ. ಈ ಸಂದರ್ಭದಲ್ಲಿ ಆನಂದ್ ಮಹೀಂದ್ರಾ ಕೂಡ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದು, ಎಲ್ಲಕ್ಕಿಂತ ಹೆಚ್ಚಾಗಿ ಅವರನ್ನು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದಕ್ಕೆ ನನಗೆ ತುಂಬಾ ಹೆಮ್ಮೆ ಅನಿಸುತ್ತಿದೆ ಎಂದು ಹೇಳಿದ್ದಾರೆ.

ಮೇಡ್ ಇನ್ ಇಂಡಿಯಾ ಮಹೀಂದ್ರಾ ಎಕ್ಸ್‌ಯುವಿ300 ಆಫ್ರಿಕಾದ ಅತ್ಯಂತ ಸುರಕ್ಷಿತ ಕಾರು

ಇನ್ನು ಹೊಸ ಮಹೀಂದ್ರಾ ಎಕ್ಸ್‌ಯುವಿ300 ಸಬ್-4 ಮೀಟರ್ ಎಸ್‍ಯುವಿಯು ಪ್ರಸ್ತುತ ಬಾರತದಲ್ಲಿ ಖರೀದಿಸಬಹುದಾದ ಸುರಕ್ಷಿತ ಸಬ್-4 ಮೀಟರ್ ಎಸ್‍ಯುವಿಗಳಲ್ಲಿ ಒಂದಾಗಿದೆ. ವಯಸ್ಕರ ರಕ್ಷಣೆಗಾಗಿ Global-NCAP ನಿಂದ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಹೊಂದಿದೆ. ಕೆಲವು ಸಮಯದ ಹಿಂದೆ, ಮಹೀಂದ್ರಾ ಎಕ್ಸ್‌ಯುವಿ300 ಎಸ್‍ಯುವಿ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಸ್ವಲ್ಪ ಹೆಚ್ಚು ಸಮಕಾಲೀನವಾಗಿಸಲು ಸಣ್ಣ ನವೀಕರಣಗಳನ್ನು ಪಡೆದುಕೊಂಡಿತ್ತು.

ಮೇಡ್ ಇನ್ ಇಂಡಿಯಾ ಮಹೀಂದ್ರಾ ಎಕ್ಸ್‌ಯುವಿ300 ಆಫ್ರಿಕಾದ ಅತ್ಯಂತ ಸುರಕ್ಷಿತ ಕಾರು

ಫೇಸ್‌ಲಿಫ್ಟ್ ಕೇವಲ ಚಿಕ್ಕದಾಗಿದ್ದರೂ, ಎಸ್‍ಯುವಿ ಅನ್ನು 2019 ರಲ್ಲಿ ಬಿಡುಗಡೆ ಮಾಡಿದ್ದರಿಂದ ಇದು ಅತ್ಯಗತ್ಯವಾಗಿತ್ತು. ನವೀಕರಣದೊಂದಿಗೆ, ಮಹೀಂದ್ರಾ ಎಕ್ಸ್‌ಯುವಿ300 ಎಸ್‍ಯುವಿಯ ಟಾಪ್-ಎಂಡ್ W8 ಮತ್ತು W8(O) ರೂಪಾಂತರಗಳೊಂದಿಗೆ ನೀಡಲಾದ ಅಲಾಯ್ ವ್ಹೀಲ್ ಗಳ ಗಾತ್ರವನ್ನು ಕಡಿಮೆಗೊಳಿಸಿತು. ಇದರರ್ಥ ಮಹೀಂದ್ರಾ ಎಕ್ಸ್‌ಯುವಿ300ನ 2022ರ W8 ರೂಪಾಂತರವು 17-ಇಂಚಿನ ಅಲಾಯ್ ವ್ಹೀಲ್ ಅನ್ನು ಹೊಂದಿಲ್ಲ.

ಮೇಡ್ ಇನ್ ಇಂಡಿಯಾ ಮಹೀಂದ್ರಾ ಎಕ್ಸ್‌ಯುವಿ300 ಆಫ್ರಿಕಾದ ಅತ್ಯಂತ ಸುರಕ್ಷಿತ ಕಾರು

ಅಲಾಯ್ ವ್ಹೀಲ್ ಗಳ ಗಾತ್ರವನ್ನು ಕಡಿಮೆ ಮಾಡುವುದರ ಜೊತೆಗೆ ಟೈರ್‌ಗಳ ಅಗಲವನ್ನು 215 ಎಂಎಂ ನಿಂದ 205 ಎಂಎಂಗೆ ಕಡಿಮೆ ಮಾಡಲಾಗಿದೆ. ಈ ಬದಲಾವಣೆಗಳು ಡೌನ್‌ಗ್ರೇಡ್‌ನಂತೆ ತೋರುತ್ತಿದ್ದರೂ, ನವೀಕರಿಸಿದ ಟೈರ್ ಗಾತ್ರವು ಭಾರತೀಯ ಚಾಲನಾ ಪರಿಸ್ಥಿತಿಗಳಿಗೆ ಉತ್ತಮವಾಗಿ ಸರಿಹೊಂದುತ್ತದೆ. ಎಕ್ಸ್‌ಯುವಿ300 ಎಸ್ಯುವಿಯು ಅತಿ ಹೆಚ್ಚು ಅಂಕಗಳೊಂದಿಗೆ ಕ್ರ್ಯಾಶ್ ಟೆಸ್ಟಿಂಗ್ 5 ಸ್ಟಾರ್ ರೇಟಿಂಗ್ ಪಡೆದ ಮೊದಲ ಬಜೆಟ್ ಕಾರು ಮಾದರಿಯಾಗಿದೆ.

ಮೇಡ್ ಇನ್ ಇಂಡಿಯಾ ಮಹೀಂದ್ರಾ ಎಕ್ಸ್‌ಯುವಿ300 ಆಫ್ರಿಕಾದ ಅತ್ಯಂತ ಸುರಕ್ಷಿತ ಕಾರು

ಪ್ರತಿ ಹೊಸ ಕಾರು ಮಾದರಿಗಳಿಗೂ ಪ್ರಯಾಣಿಕರ ಸುರಕ್ಷಾ ವಿಚಾರವಾಗಿ ಜಾಗತಿಕ ಪ್ರಮಾಣ ಪತ್ರದ ಅವಶ್ಯಕತೆಯಿದೆ. ಈ ಮಹೀಂದ್ರಾ ಎಕ್ಸ್‌ಯುವಿ300 ಪಡೆದುಕೊಳ್ಳುತ್ತಿರುವ ಉತ್ತಮ ರೇಟಿಂಗ್‌ನಿಂದಾಗಿ ಸುರಕ್ಷತೆಯಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ ಎಂಬುವುದು ಖಾತ್ರಿಯಾಗಿದೆ. ಈ ಕಾಂಪ್ಯಾಕ್ಟ್ ಎಸ್‌ಯುವಿ ಕಾರುಗಳಲ್ಲಿ ಈ ಮೊದಲು ಟಾಟಾ ನೆಕ್ಸಾನ್ ನಂತರ ಎಕ್ಸ್‌ಯುವಿ300 ಕೂಡಾ ಗರಿಷ್ಠ ರೇಟಿಂಗ್ ಪಡೆದುಕೊಳ್ಳುವ ಮೂಲಕ ಗರಿಷ್ಠ ಸುರಕ್ಷತಾ ಕಾರು ಮಾದರಿಯಾಗಿ ಗ್ರಾಹಕರ ಗಮನಸೆಳೆಯುತ್ತಿದೆ.

ಮೇಡ್ ಇನ್ ಇಂಡಿಯಾ ಮಹೀಂದ್ರಾ ಎಕ್ಸ್‌ಯುವಿ300 ಆಫ್ರಿಕಾದ ಅತ್ಯಂತ ಸುರಕ್ಷಿತ ಕಾರು

#SAFERCARSFORINDIA ಅಭಿಯಾನದಡಿ ದೇಶಿಯ ಮಾರುಕಟ್ಟೆಯಲ್ಲಿನ ಕಾರುಗಳ ಅಸಲಿಯತ್ತು ಬಯಲು ಮಾಡುತ್ತಿರುವ ಗ್ಲೋಬಲ್ ಎನ್‌ಸಿಎಪಿ ಸಂಸ್ಥೆಯು ಮಹೀಂದ್ರಾ ಎಕ್ಸ್‌ಯುವಿ300 ಕಾರು ಮಾದರಿಗೆ ಗರಿಷ್ಠ ರೇಟಿಂಗ್ ಅನ್ನು ನೀಡಿದೆ. ಈ ಎಕ್ಸ್‌ಯುವಿ300 ಮಾದರಿಯು ಗುಣಮಟ್ಟದ ಬಿಡಿಭಾಗಗಳೊಂದಿಗೆ ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಟಾಪ್ ಎಂಡ್ ಮಾದರಿಯಲ್ಲಿ 7 ಏರ್‌ಬ್ಯಾಗ್ ಸೇರಿದಂತೆ ಹಲವಾರು ಪ್ರೀಮಿಯಂ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಹೊಂದಿದ್ದು, ಹಲವಾರು ಸೆಗ್ಮೆಂಟ್ ಫಸ್ಟ್ ಪ್ರೀಮಿಯಂ ಫೀಚರ್ಸ್ ಹೊಂದಿದೆ. ಈ ಮಹೀಂದ್ರಾ ಎಕ್ಸ್‌ಯುವಿ 300 ಎಸ್‍ಯುವಿ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಖರೀದಿಗೆ ಲಭ್ಯವಿದೆ.

ಮೇಡ್ ಇನ್ ಇಂಡಿಯಾ ಮಹೀಂದ್ರಾ ಎಕ್ಸ್‌ಯುವಿ300 ಆಫ್ರಿಕಾದ ಅತ್ಯಂತ ಸುರಕ್ಷಿತ ಕಾರು

ಇದರಲ್ಲಿ 1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 110 ಬಿಹೆಚ್‍ಪಿ ಪವರ್ ಮತ್ತು 200 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 1.5 ಲೀಟರ್ ಆಯಿಲ್ ಬರ್ನರ್ ಎಂಜಿನ್ 117 ಬಿಹೆಚ್‍ಪಿ ಪವರ್ ಮತ್ತು 300 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎರಡು ಎಂಜಿನ್ ಗಳೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಮೇಡ್ ಇನ್ ಇಂಡಿಯಾ ಮಹೀಂದ್ರಾ ಎಕ್ಸ್‌ಯುವಿ300 ಆಫ್ರಿಕಾದ ಅತ್ಯಂತ ಸುರಕ್ಷಿತ ಕಾರು

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಈ ಮಹೀಂದ್ರಾ ಎಕ್ಸ್‌ಯುವಿ300 ಜನಪ್ರಿಯ ಕಾಂಪ್ಯಾಕ್ಟ್ ಎಸ್‍ಯುವಿಗಳಲ್ಲಿ ಒಂದಾಗಿದೆ, ಮಹೀಂದ್ರಾ ಎಕ್ಸ್‌ಯುವಿ300 ಭಾರತದಲ್ಲಿ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಹ್ಯುಂಡೈ ವೆನ್ಯೂ ಮತ್ತು ಟಾಟಾ ನೆಕ್ಸಾನ್ ಕಾಂಪ್ಯಾಕ್ಟ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಇನ್ನು ಆಫ್ರಿಕಾದಲ್ಲಿಯು ಕೂಡ ಈ ಮಾದರಿಯು ಹೆಚ್ಚಿನ ಜನಪ್ರಿಯತೆಗಳಿಸುತ್ತಿದೆ.

Most Read Articles

Kannada
English summary
Mahindra xuv300 becomes safest car of africa find here all details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X