ಎಕ್ಸ್‌ಯುವಿ300 ಕಾರು ಮಾದರಿಗಾಗಿ ಹೊಸ ವಿನ್ಯಾಸದ ಅಲಾಯ್ ವ್ಹೀಲ್ ಪರಿಚಯಿಸಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಶೀಘ್ರದಲ್ಲಿಯೇ ತನ್ನ ಜನಪ್ರಿಯ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಾದ ಎಕ್ಸ್‌ಯುವಿ300 ಮಾದರಿಯ ಫೇಸ್‌ಲಿಫ್ಟ್ ಆವೃತ್ತಿ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಕಂಪನಿಯು ಫೇಸ್‌ಲಿಫ್ಟ್ ಆವೃತ್ತಿಯ ಬಿಡುಗಡೆಗೂ ಮುನ್ನ ಟಾಪ್ ಎಂಡ್ ಮಾದರಿಗಾಗಿ ಕೆಲವು ಬದಲಾವಣೆಗಳನ್ನು ಪರಿಚಯಿಸಿದೆ.

ಎಕ್ಸ್‌ಯುವಿ300 ಕಾರು ಮಾದರಿಗಾಗಿ ಹೊಸ ವಿನ್ಯಾಸದ ಅಲಾಯ್ ವ್ಹೀಲ್ ಪರಿಚಯಿಸಿದ ಮಹೀಂದ್ರಾ

ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಗರಿಷ್ಠ ಸುರಕ್ಷಾ ಹೊಂದಿರುವ ಕಾರು ಮಾದರಿಯಾಗಿ ಹೊರಹೊಮ್ಮಿರುವ ಎಕ್ಸ್‌ಯುವಿ300 ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಹಲವಾರು ಬದಲಾವಣೆಗಳನ್ನು ಪಡೆದುಕೊಳ್ಳುತ್ತಿದ್ದು, ಕಂಪನಿಯು ಎಕ್ಸ್‌ಯುವಿ300 ಮಾದರಿಯ ಟಾಪ್ ಎಂಡ್ ವೆರಿಯೆಂಟ್ ಡಬ್ಲ್ಯು8 ಆಪ್ಷನ್ ಮಾದರಿಯಲ್ಲಿ ಹೊಸ ಅಲಾಯ್ ವ್ಹೀಲ್ ಜೋಡಣೆ ಮಾಡಿದೆ.

ಎಕ್ಸ್‌ಯುವಿ300 ಕಾರು ಮಾದರಿಗಾಗಿ ಹೊಸ ವಿನ್ಯಾಸದ ಅಲಾಯ್ ವ್ಹೀಲ್ ಪರಿಚಯಿಸಿದ ಮಹೀಂದ್ರಾ

ಎಕ್ಸ್‌ಯುವಿ300 ಡಬ್ಲ್ಯು8 ಆಪ್ಷನ್ ಮಾದರಿಯು ಇನ್ಮುಂದೆ 17-ಇಂಚಿನ ಡ್ಯುಯಲ್ ಟೋನ್ ಅಲಾಯ್ ವ್ಹೀಲ್ ಹೊಂದಿರಲಿದ್ದು, ಇನ್ನುಳಿದ ಮಾದರಿಗಳಲ್ಲಿ ಕಂಪನಿಯು 16 ಇಂಚಿನ ಅಲಾಯ್ ವ್ಹೀಲ್ ನೀಡುತ್ತದೆ.

ಎಕ್ಸ್‌ಯುವಿ300 ಕಾರು ಮಾದರಿಗಾಗಿ ಹೊಸ ವಿನ್ಯಾಸದ ಅಲಾಯ್ ವ್ಹೀಲ್ ಪರಿಚಯಿಸಿದ ಮಹೀಂದ್ರಾ

ಟಾಪ್ ಎಂಡ್ ಮಾದರಿಯಲ್ಲಿ ಹೊಸ ಡ್ಯುಯಲ್ ಟೋನ್ ಮಾದರಿಯ ಹೊರತಾಗಿಯೂ ಕಂಪನಿಯು ಈ ಹಿಂದಿನ ಬೆಲೆ ಪಟ್ಟಿಯನ್ನು ಮುಂದುವರಿಸಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಕಂಪನಿಯು ಎಕ್ಸ್‌ಯುವಿ300 ಮಾದರಿಯ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ.

ಎಕ್ಸ್‌ಯುವಿ300 ಕಾರು ಮಾದರಿಗಾಗಿ ಹೊಸ ವಿನ್ಯಾಸದ ಅಲಾಯ್ ವ್ಹೀಲ್ ಪರಿಚಯಿಸಿದ ಮಹೀಂದ್ರಾ

ಎಕ್ಸ್‌ಯುವಿ300 ಮಾದರಿಯು ಸದ್ಯ ವಿವಿಧ ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಡಬ್ಲ್ಯು4, ಡಬ್ಲ್ಯು6, ಡಬ್ಲ್ಯು8, ಡಬ್ಲ್ಯು8 ಆಪ್ಷನ್ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.41 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 14.07 ಲಕ್ಷ ಬೆಲೆ ಹೊಂದಿದೆ.

ಎಕ್ಸ್‌ಯುವಿ300 ಕಾರು ಮಾದರಿಗಾಗಿ ಹೊಸ ವಿನ್ಯಾಸದ ಅಲಾಯ್ ವ್ಹೀಲ್ ಪರಿಚಯಿಸಿದ ಮಹೀಂದ್ರಾ

ವಿವಿಧ ಎಂಜಿನ್ ಮತ್ತು ಗೇರ್‌ಬಾಕ್ಸ್ ಆಯ್ಕೆಗೆ ಅನುಗುಣವಾಗಿ ಹೊಸ ಕಾರು ಒಟ್ಟು 16 ಮಾದರಿಗಳನ್ನು ಹೊಂದಿದ್ದು, , ಶೀಘ್ರದಲ್ಲೇ ಹೊಸ ಕಾರು ಮತ್ತಷ್ಟು ಉನ್ನತೀಕರಿಸಿದ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ.

ಎಕ್ಸ್‌ಯುವಿ300 ಕಾರು ಮಾದರಿಗಾಗಿ ಹೊಸ ವಿನ್ಯಾಸದ ಅಲಾಯ್ ವ್ಹೀಲ್ ಪರಿಚಯಿಸಿದ ಮಹೀಂದ್ರಾ

ಮಧ್ಯಮ ಕ್ರಮಾಂಕದ ಎಸ್‌ಯುವಿ ಸರಣಿ ಕಾರುಗಳ ಮಾರಾಟದಲ್ಲಿ ಸದ್ಯ ಉತ್ತಮ ಬೇಡಿಕೆ ಕಾಯ್ದಕೊಂಡಿರುವ ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ300 ಮೂಲಕ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದು, ಬಿಡುಗಡೆಯ ನಂತರ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹಲವಾರು ಬದಲಾವಣೆಗಳನ್ನು ಪರಿಚಯಿಸಿದೆ.

ಎಕ್ಸ್‌ಯುವಿ300 ಕಾರು ಮಾದರಿಗಾಗಿ ಹೊಸ ವಿನ್ಯಾಸದ ಅಲಾಯ್ ವ್ಹೀಲ್ ಪರಿಚಯಿಸಿದ ಮಹೀಂದ್ರಾ

ಎಕ್ಸ್‌ಯುವಿ300 ಮಾದರಿಯಲ್ಲಿ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ತಾಂತ್ರಿಕ ಅಂಶಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿದ್ದು, ಫೇಸ್‌ಲಿಫ್ಟ್ ಮಾದರಿಯೊಂದಿಗೆ ಹೊಸ ಕಾರು ಈ ಬಾರಿ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿರುವ ಸ್ಪೋರ್ಟ್ಜ್ ಮಾದರಿಯು ಕೂಡಾ ಬಿಡುಗಡೆಯಾಗಬಹುದಾಗಿದೆ.

ಎಕ್ಸ್‌ಯುವಿ300 ಕಾರು ಮಾದರಿಗಾಗಿ ಹೊಸ ವಿನ್ಯಾಸದ ಅಲಾಯ್ ವ್ಹೀಲ್ ಪರಿಚಯಿಸಿದ ಮಹೀಂದ್ರಾ

ಎಕ್ಸ್‌ಯುವಿ 300 ಕಾರು ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಖರೀದಿಗೆ ಲಭ್ಯವಿದ್ದು, ಕಂಪನಿಯು ಶೀಘ್ರದಲ್ಲೇ ಎಕ್ಸ್‌ಯುವಿ300 ಮಾದರಿಯ ಟರ್ಬೊ ವರ್ಷನ್ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಎಕ್ಸ್‌ಯುವಿ300 ಕಾರು ಮಾದರಿಗಾಗಿ ಹೊಸ ವಿನ್ಯಾಸದ ಅಲಾಯ್ ವ್ಹೀಲ್ ಪರಿಚಯಿಸಿದ ಮಹೀಂದ್ರಾ

2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿದ್ದ ಮಹೀಂದ್ರಾ ಎಕ್ಸ್‌ಯುವಿ300 ಸ್ಪೋರ್ಟ್ಜ್ ಆವೃತ್ತಿಯು ಇದೀಗ ಬಿಡುಗಡೆಗಾಗಿ ಅಂತಿಮ ಹಂತದ ಸಿದ್ದತೆಯಲ್ಲಿದ್ದು, ಕಳೆದ ವರ್ಷವೇ ಬಿಡುಗಡೆಯಾಗಬೇಕಿದ್ದ ಹೊಸ ಕಾರು ಕೋವಿಡ್ ಪರಿಣಾಮ ಬಿಡುಗಡೆ ಮುಂದೂಡಿಕೆಯಾಗುತ್ತಾ ಇದೀಗ ಮಾರುಕಟ್ಟೆ ಪ್ರವೇಶಿಸುತ್ತಿದೆ.

ಎಕ್ಸ್‌ಯುವಿ300 ಕಾರು ಮಾದರಿಗಾಗಿ ಹೊಸ ವಿನ್ಯಾಸದ ಅಲಾಯ್ ವ್ಹೀಲ್ ಪರಿಚಯಿಸಿದ ಮಹೀಂದ್ರಾ

ಹೊಸ ಕಾರಿನಲ್ಲಿ ಸಾಮಾನ್ಯ ಮಾದರಿಯಲ್ಲಿರುವಂತೆಯೇ ಪ್ರಮುಖ ತಾಂತ್ರಿಕ ಅಂಶಗಳೊಂದಿಗೆ ಪರ್ಫಾಮೆನ್ಸ್ ಪ್ರಿಯರಿಗಾಗಿಯೇ ಹೊಸದಾಗಿ ಅಭಿವೃದ್ದಿಗೊಳಿಸಲಾದ 1.2-ಲೀಟರ್ ಟಿ-ಜಿಡಿಐ ಪೆಟ್ರೋಲ್ ಎಂಜಿನ್‌ ಜೋಡಣೆ ಹೊಂದಿದ್ದು, ಅತಿ ಹೆಚ್ಚು ಬಿಎಚ್‌ಪಿ ಉತ್ಪಾದನಾ ವೈಶಿಷ್ಟ್ಯತೆಯೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ.

ಎಕ್ಸ್‌ಯುವಿ300 ಕಾರು ಮಾದರಿಗಾಗಿ ಹೊಸ ವಿನ್ಯಾಸದ ಅಲಾಯ್ ವ್ಹೀಲ್ ಪರಿಚಯಿಸಿದ ಮಹೀಂದ್ರಾ

ಹೊಸದಾಗಿ ಅಭಿವೃದ್ದಿಗೊಳಿಸಲಾಗಿರುವ 1.2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಎಂಸ್ಟಾಲಿನ್ ಎಂದು ಹೆಸರಿಸಿರುವ ಮಹೀಂದ್ರಾ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿರುವ ಸಾಮಾನ್ಯ ಮಾದರಿಯ 1.2-ಲೀಟರ್ ಪೆಟ್ರೋಲ್ ಎಂಜಿನ್‌ಗಿಂತಲೂ ಹೆಚ್ಚು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ದಿಗೊಳಿಸಲಾಗಿದೆ.

ಎಕ್ಸ್‌ಯುವಿ300 ಕಾರು ಮಾದರಿಗಾಗಿ ಹೊಸ ವಿನ್ಯಾಸದ ಅಲಾಯ್ ವ್ಹೀಲ್ ಪರಿಚಯಿಸಿದ ಮಹೀಂದ್ರಾ

ಹೊಸ ಎಂಜಿನ್ ಅನ್ನು ಸ್ಪೋರ್ಟ್ಜ್ ವರ್ಷನ್‌ನಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರಲಿದ್ದು, ಹೊಸ ಕಾರು ಮುಂಬರುವ ಫೇಸ್‌ಲಿಫ್ಟ್ ಮಾದರಿಯಲ್ಲಿ ಬಿಡುಗಡೆಯಾಗಬಹುದಾಗಿದೆ. ಹೊಸ ಎಂಜಿನ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಲಿದೆ.

ಎಕ್ಸ್‌ಯುವಿ300 ಕಾರು ಮಾದರಿಗಾಗಿ ಹೊಸ ವಿನ್ಯಾಸದ ಅಲಾಯ್ ವ್ಹೀಲ್ ಪರಿಚಯಿಸಿದ ಮಹೀಂದ್ರಾ

ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಗಳಲ್ಲಿಯೇ ಅತಿ ಹೆಚ್ಚು ಸುರಕ್ಷಿತ ಕಾರು ಮಾದರಿಯೆಂಬ ಹೆಗ್ಗಳಿಕೆ ಹೊಂದಿರುವ ಎಕ್ಸ್‌ಯುವಿ300 ಮಾದರಿಯು ಕಳೆದ ಕೆಲ ತಿಂಗಳಿನಿಂದ ಹೆಚ್ಚಿನ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದೆ. ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಅತಿ ಹೆಚ್ಚು ಸುರಕ್ಷಾ ಫೀಚರ್ಸ್ ಹೊಂದಿರುವ ಎಕ್ಸ್‌ಯುವಿ300 ಮಾದರಿಯು ಅತಿ ಹೆಚ್ಚು ಅಂಕಗಳೊಂದಿಗೆ ಕ್ರ್ಯಾಶ್ ಟೆಸ್ಟಿಂಗ್ 5 ಸ್ಟಾರ್ ರೇಟಿಂಗ್ ಪಡೆದ ಮೊದಲ ಬಜೆಟ್ ಕಾರು ಮಾದರಿಯಾಗಿದೆ.

ಎಕ್ಸ್‌ಯುವಿ300 ಕಾರು ಮಾದರಿಗಾಗಿ ಹೊಸ ವಿನ್ಯಾಸದ ಅಲಾಯ್ ವ್ಹೀಲ್ ಪರಿಚಯಿಸಿದ ಮಹೀಂದ್ರಾ

ಎಕ್ಸ್‌ಯುವಿ300 ಮಾದರಿಯು ಗುಣಮಟ್ಟದ ಬಿಡಿಭಾಗಗಳೊಂದಿಗೆ ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಟಾಪ್ ಎಂಡ್ ಮಾದರಿಯಲ್ಲಿ 7 ಏರ್‌ಬ್ಯಾಗ್ ಸೇರಿದಂತೆ ಹಲವಾರು ಪ್ರೀಮಿಯಂ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಹೊಂದಿದ್ದು, ಹಲವಾರು ಸೆಗ್ಮೆಂಟ್ ಫಸ್ಟ್ ಪ್ರೀಮಿಯಂ ಫೀಚರ್ಸ್ ಹೊಂದಿದೆ.

Most Read Articles

Kannada
English summary
Mahindra xuv300 suv get new alloy wheels details
Story first published: Friday, June 17, 2022, 19:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X