ಬಹುನಿರೀಕ್ಷಿತ 'XUV400' ಕಾರಿನ ಟೀಸರ್ ಬಿಡುಗಡೆ ಮಾಡಿದ ಮಹೀಂದ್ರಾ

ಎಲೆಕ್ಟ್ರಿಕ್ ಕಾರು ತಯಾರಿಕೆಯತ್ತ ಭಾರತೀಯ ವಾಹನ ತಯಾರಿಕ ಕಂಪನಿಗಳು ಗಮನ ಹರಿಸಿವೆ. ಇದೀಗ ಸೆಪ್ಟೆಂಬರ್ 2022ರಲ್ಲಿ ಅನಾವರಣಗೊಂಡ 'ಮಹೀಂದ್ರಾ XUV400' ಮುಂದಿನ ವರ್ಷ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಹಲವು ನವೀನವಾದ ವೈಶಿಷ್ಟ್ಯಗಳೊಂದಿಗೆ ರೆಡಿಯಾಗುತ್ತಿರುವ ಈ ಕಾರು, ಟಾಟಾ ನೆಕ್ಸಾನ್ EVಗೆ ಪ್ರಬಲ ಪೈಪೋಟಿ ನೀಡಬಹುದು ಎಂದು ಅಂದಾಜಿಸಲಾಗಿದೆ.

XUV400 ಎಲೆಕ್ಟ್ರಿಕ್ SUVಯ ತಯಾರಿಕೆಗಾಗಿ ಸಾಕಷ್ಟು ಕೆಲಸ ಮಾಡಲಾಗುತ್ತಿದೆ ಎಂದು ಮಹೀಂದ್ರಾ ಕಂಪನಿ ಹೇಳಿಕೊಂಡಿದ್ದು, ಅದರ ಭಾಗವಾಗಿ ಸೋಷಿಯಲ್ ಮೀಡಿಯಾ ಹ್ಯಾಂಡಲ್‌ಗಳಲ್ಲಿ ಟೀಸರ್ ಚಿತ್ರವನ್ನು ಪೋಸ್ಟ್ ಮಾಡಲಾಗಿದೆ. ಈ ಕಾರಿನ ತಯಾರಿಕೆಗೆ ಮಹೀಂದ್ರಾ ಗ್ರೂಪ್‌ನ ಚೀಫ್ ಡಿಸೈನ್ ಆಫೀಸರ್ ಪ್ರತಾಪ್ ಬೋಸ್ ಹಾಗೂ ಭಾರತೀಯ ವಿನ್ಯಾಸಕ ರಿಮ್ಜಿಮ್ ದಾದು ಸಾಕಷ್ಟು ಶ್ರಮಿಸಿದ್ದಾರೆ. XUV300 ಕಾಂಪ್ಯಾಕ್ಟ್ SUV ಆಧರಿಸಿ, ತಯಾರಿಸಿರುವ 'XUV400' EV SUV ಬಗ್ಗೆ ಇಲ್ಲಿದೆ ಮಾಹಿತಿ.

ಮಹೀಂದ್ರಾ XUV400 ಟೀಸರ್ ಬಿಡುಗಡೆ: ಕಾರು ಸೂಪರ್ ಗುರು

ವರದಿಗಳ ಪ್ರಕಾರ, ಹೊಸ ಮಹೀಂದ್ರಾ XUV400 ಎಲೆಕ್ಟ್ರಿಕ್ SUV ಬೇಸ್, ಇಪಿ ಮತ್ತು ಇಎಲ್ ಎಂಬ ಮೂರು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿರಲಿದೆ. ಅಲ್ಲದೆ, ಈ ಕಾರು, ಅಡ್ರಿನೊ ಎಕ್ಸ್ ಸಾಫ್ಟ್‌ವೇರ್, ಎಲೆಕ್ಟ್ರಿಕ್ ಸನ್‌ರೂಫ್, 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಜೊತೆಗೆ ಓವರ್-ದಿ-ಏರ್ (OTA) ವೈಶಿಷ್ಟ್ಯಗಳನ್ನು ಹೊಂದಿದ್ದು, ಟಾಪ್-ಸ್ಪೆಕ್ ರೂಪಾಂತರವು ಆರು ಏರ್‌ಬ್ಯಾಗ್‌ಗಳು, 4 ಡಿಸ್ಕ್ ಬ್ರೇಕ್‌ಗಳು, EBD ಜೊತೆಗೆ ABS (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್) ISOFIX ಚೈಲ್ಡ್ ಸೀಟ್ ಆಂಕಾರೇಜ್‌ಗಳು ಅನ್ನು ಹೊಂದಿದೆ.

ಮಹೀಂದ್ರಾ XUV400 ಎಲೆಕ್ಟ್ರಿಕ್ SUV ಲೆಥೆರೆಟ್ ಅಪ್ಹೋಲ್ಸ್ಟರಿ, IRVM, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ORVM, 17-ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್ ಮತ್ತು TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್)ಗಳನ್ನು ಹೊಂದಿರಲಿದೆ. ಈ ಹೊಸ ಕಾರು ಗ್ರಾಹಕರಿಗೆ ಐದು ಬಣ್ಣಗಳಲ್ಲಿ ಖರೀದಿಗೆ ಸಿಗಲಿದೆ ಎಂದು ಹೇಳಲಾಗಿದೆ. ಅವು ಆರ್ಕ್ಟಿಕ್ ಬ್ಲೂ, ಗ್ಯಾಲಕ್ಸಿ ಗ್ರೇ, ಎವರೆಸ್ಟ್ ವೈಟ್, ನಾಪೋಲಿ ಬ್ಲಾಕ್ ಮತ್ತು ಇನ್ಫಿನಿಟಿ ಬ್ಲೂ ಸ್ಯಾಟಿನ್ ಕಾಪರ್ ಫಿನಿಶ್ ಬಣ್ಣಗಳನ್ನು ಒಳಗೊಂಡಿದೆ.

ಮಹೀಂದ್ರಾ XUV400 ಎಲೆಕ್ಟ್ರಿಕ್ ಕಾರು, 3 ಡ್ರೈವಿಂಗ್ ಮೋಡ್‌ಗಳಲ್ಲಿ ಮಾರುಕಟ್ಟೆಗೆ ಬರಲಿದೆ - ಫನ್, ಫಾಸ್ಟ್ ಮತ್ತು ಫಿಯರ್‌ಲೆಸ್. ಇನ್ನೂ ಈ ನೂತನ ಕಾರಿನ ಟೆಸ್ಟ್ ಡ್ರೈವ್‌ಗಳು ಡಿಸೆಂಬರ್ 2022 ರಿಂದ ಮುಂಬೈ, ಹೈದರಾಬಾದ್, ದೆಹಲಿ, ಬೆಂಗಳೂರು, ಕೋಲ್ಕತ್ತಾ, ಚೆನ್ನೈ, ಪುಣೆ, ಅಹಮದಾಬಾದ್, ಗೋವಾ, ಜೈಪುರ, ಸೂರತ್, ನಾಗ್ಪುರ, ತಿರುವನಂತಪುರಂ, ನಾಸಿಕ್, ಚಂಡೀಗಢ ಮತ್ತು ಕೊಚ್ಚಿ ಸೇರಿದಂತೆ ದೇಶದ 16 ನಗರಗಳಲ್ಲಿ ಪ್ರಾರಂಭವಾಗಲಿದೆ ಎಂದು ವರದಿಯಾಗಿದೆ.

ಈ ಕಾರಿನ ಮೈಲೇಜ್ ಬಗ್ಗೆ ಹೇಳುವುದಾದರೆ, ಮಹೀಂದ್ರಾ XUV400, 456 ಕಿ.ಮೀ ಮೈಲೇಜ್ ನೀಡಬಹುದು ಎಂದು ಅಂದಾಜಿಸಲಾಗಿದೆ. ಇನ್ನೂ ತಯಾರಿಕಾ ಹಂತದಲ್ಲಿರುವ Nexon EV Max (ARAI- ಪ್ರಮಾಣೀಕೃತ) ಪೂರ್ಣ ಚಾರ್ಜ್‌ನಲ್ಲಿ 437 ಕಿ.ಮೀ ಮೈಲೇಜ್ ನೀಡಲಿದೆಯಂತೆ. XUV400 ಮತ್ತು Nexon EV ಮ್ಯಾಕ್ಸ್ ನಡುವಿನ ಮೈಲೇಜ್ ನಲ್ಲಿ ವ್ಯತ್ಯಾಸವು ಅಷ್ಟೇನೂ ಇಲ್ಲದಿದ್ದರೂ, ಮಹೀಂದ್ರಾ ಮಾತ್ರ ತನ್ನ ಕಾರು ಹೆಚ್ಚು ಮೈಲೇಜ್ ನೀಡುತ್ತದೆ ಎಂದು ಹೇಳಿಕೊಂಡಿದೆ.

XUV400 ಸಿಂಕ್ರೊನಸ್ ಮೋಟಾರ್ ಅನ್ನು ಹೊಂದಿದ್ದು, 5,500 rpmನಲ್ಲಿ 110 kW (147.5 hp) ಗರಿಷ್ಠ ಪವರ್ ಮತ್ತು 310 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು 39.4 kWh, 112 Ah ಬ್ಯಾಟರಿ ಪ್ಯಾಕ್‌ಗೆ ಸಂಪರ್ಕಿಸುತ್ತದೆ, ಇದು NMC (ನಿಕಲ್, ಮ್ಯಾಂಗನೀಸ್ ಮತ್ತು ಕೋಬಾಲ್ಟ್) ಎಲೆಕ್ಟ್ರೋ-ಕೆಮಿಕಲ್ ಸಂಯೋಜನೆ ಆಗಿದೆ. ಇದರ ತೂಕ 309 ಕೆ.ಜಿಯಿದ್ದು XUV400 ಟಾಪ್ ಸ್ಪೀಡ್ ಅನ್ನು 150 kmph ತಲುಪಬಲ್ಲದು. ಹಾಗೆಯೇ 8.3 ಸೆಕೆಂಡುಗಳಲ್ಲಿ 0-100 kmph ತಲುಪುವ ಸಾಮರ್ಥ್ಯ ಹೊಂದಿದೆ.

ಮೊದಲ ಹಂತದಲ್ಲಿ 16 ನಗರಗಳಲ್ಲಿ ಹೊಸ 'XUV400' ಮಾದರಿಯನ್ನು ಲಾಂಚ್ ಮಾಡಲು ಮಹೀಂದ್ರಾ ಯೋಜಿಸುತ್ತಿದೆ. ಹೊಸ XUV400 ಬೆಲೆಯನ್ನು ಜನವರಿ 2023ರಲ್ಲಿ ಬಹಿರಂಗಪಡಿಸಲಾಗುವುದು ಎಂದು ಕಂಪನಿ ತಿಳಿಸಿದ್ದು, ಹೊಸ ಮಾದರಿಯು ಟಾಟಾ ನೆಕ್ಸಾನ್ EV ಮ್ಯಾಕ್ಸ್, MG ZS EV ಮತ್ತು ಹ್ಯುಂಡೈ ಕೋನಾ ವಿರುದ್ಧ ಕಾರುಗಳಿಗೆ ತೀವ್ರ ಪೈಪೋಟಿ ನೀಡಲಿದೆ ಎಂಬುದು ತಜ್ಞರ ಲೆಕ್ಕಾಚಾರವಾಗಿದೆ. ಹೊಸ ಮಾದರಿಯ ಬೆಲೆ 18 ಲಕ್ಷದಿಂದ 23 ಲಕ್ಷದವರೆಗೆ (ಎಕ್ಸ್ ಶೋ ರೂಂ) ಇರಬಹುದು ಎಂದು ನಿರೀಕ್ಷಿಸಲಾಗಿದೆ.

Most Read Articles

Kannada
English summary
Mahindra xuv400 teaser released car super
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X