ಬೆಲೆ ಹೆಚ್ಚಳ: ಮಹೀಂದ್ರಾ ಥಾರ್ ಮತ್ತು ಎಕ್ಸ್‌ಯುವಿ700 ಬೆಲೆ ಮತ್ತಷ್ಟು ದುಬಾರಿ!

ಮಹೀಂದ್ರಾ ಕಂಪನಿಯು ತನ್ನ ಪ್ರಮುಖ ಎಸ್‌ಯುವಿ ಮಾದರಿಗಳ ಬೆಲೆ ಪರಿಷ್ಕರಣೆ ಮಾಡಿದ್ದು, ಹೊಸ ದರ ಪಟ್ಟಿಯಲ್ಲಿ ಥಾರ್ ಮತ್ತು ಎಕ್ಸ್‌ಯುವಿ700 ಬೆಲೆಯಲ್ಲಿ ಭಾರೀ ಪ್ರಮಾಣದ ಹೆಚ್ಚಳವಾಗಿದೆ.

ಬೆಲೆ ಹೆಚ್ಚಳ: ಮಹೀಂದ್ರಾ ಥಾರ್ ಮತ್ತು ಎಕ್ಸ್‌ಯುವಿ700 ಬೆಲೆ ಮತ್ತಷ್ಟು ದುಬಾರಿ!

ಹೊಸ ಕಾರುಗಳ ಉತ್ಪಾದನಾ ವೆಚ್ಚ ಹೆಚ್ಚುತ್ತಿರುವುದರಿಂದ ನಿರಂತವಾಗಿ ಬೆಲೆ ಪರಿಷ್ಕರಣೆ ಮಾಡಲಾಗುತ್ತಿದ್ದು, ಹೊಸ ದರ ಪಟ್ಟಿಯಲ್ಲಿ ಥಾರ್ ಮತ್ತು ಎಕ್ಸ್‌ಯುವಿ700 ಎಸ್‌ಯುವಿ ಮಾದರಿಗಳ ಬೆಲೆಯಲ್ಲಿ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಎಕ್ಸ್‌ಶೋರೂಂ ಪ್ರಕಾರ ರೂ. 6 ಸಾವಿರದಿಂದ ರೂ. 37 ಸಾವಿರ ತನಕ ಬೆಲೆ ಹೆಚ್ಚಿಸಲಾಗಿದೆ.

ಬೆಲೆ ಹೆಚ್ಚಳ: ಮಹೀಂದ್ರಾ ಥಾರ್ ಮತ್ತು ಎಕ್ಸ್‌ಯುವಿ700 ಬೆಲೆ ಮತ್ತಷ್ಟು ದುಬಾರಿ!

ಆಟೋ ಬಿಡಿಭಾಗಗಳ ಕೊರತೆ ಮತ್ತು ಹೆಚ್ಚುತ್ತಿರುವ ವೆಚ್ಚಗಳನ್ನು ನಿರ್ವಹಿಸಲು ಪ್ರಮುಖ ವಾಹನ ತಯಾರಕ ಕಂಪನಿಗಳು ಹೊಸ ವಾಹನಗಳ ಬೆಲೆಯನ್ನು ನಿರಂತರವಾಗಿ ಪರಿಷ್ಕರಣೆ ಮಾಡುತ್ತಿದ್ದು, ನಿರಂತರ ಬೆಲೆ ಏರಿಕೆ ಪರಿಣಾಮ ಹೊಸ ವಾಹನಗಳ ಮಾಲೀಕತ್ವವು ದಿನದಿಂದ ದಿನಕ್ಕೆ ದುಬಾರಿಯಾಗಿ ಪರಿಣಮಿಸುತ್ತಿದೆ.

ಬೆಲೆ ಹೆಚ್ಚಳ: ಮಹೀಂದ್ರಾ ಥಾರ್ ಮತ್ತು ಎಕ್ಸ್‌ಯುವಿ700 ಬೆಲೆ ಮತ್ತಷ್ಟು ದುಬಾರಿ!

ಕಳೆದ ಕೆಲವು ತಿಂಗಳುಗಳಲ್ಲಿ ಹೊಸ ವಾಹನಗಳ ಬೆಲೆಯು ಸಾಕಷ್ಟು ಏರಿಕೆಯಾಗಿದ್ದು, ಇದೀಗ ಮಹೀಂದ್ರಾ ಪ್ರಮುಖ ಕಾರುಗಳ ವಿವಿಧ ವೆರಿಯೆಂಟ್‌ಗಳ ಬೆಲೆಯಲ್ಲಿ ಶೇ.1 ರಿಂದ ಶೇ. 2 ರಷ್ಟು ಹೆಚ್ಚಳ ಮಾಡಲಾಗಿದ್ದು, ಹೊಸ ದರಪಟ್ಟಿಯಲ್ಲಿ ಥಾರ್ ಬೆಲೆಯು ರೂ. 6 ಸಾವಿರದಿಂದ ರೂ. 28 ಸಾವಿರದಷ್ಟು ಬೆಲೆ ಹೆಚ್ಚಳವಾಗಿದೆ.

ಬೆಲೆ ಹೆಚ್ಚಳ: ಮಹೀಂದ್ರಾ ಥಾರ್ ಮತ್ತು ಎಕ್ಸ್‌ಯುವಿ700 ಬೆಲೆ ಮತ್ತಷ್ಟು ದುಬಾರಿ!

ಎಕ್ಸ್‌ಯುವಿ700 ಎಸ್‌ಯುವಿ ಮಾದರಿಯು ಎಕ್ಸ್‌ಶೋರೂಂ ದರದಲ್ಲಿ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ರೂ. 20 ಸಾವಿರದಿಂದ ರೂ. 37 ಸಾವಿರ ತನಕ ದರ ಹೆಚ್ಚಿಸಲಾಗಿದ್ದು, ತಕ್ಷಣವೇ ಜಾರಿಗೆ ಬರುವಂತೆ ಹೊಸ ದರಗಳನ್ನು ಪ್ರಕಟಿಸಲಾಗಿದೆ.

ಬೆಲೆ ಹೆಚ್ಚಳ: ಮಹೀಂದ್ರಾ ಥಾರ್ ಮತ್ತು ಎಕ್ಸ್‌ಯುವಿ700 ಬೆಲೆ ಮತ್ತಷ್ಟು ದುಬಾರಿ!

ದರ ಹೆಚ್ಚಳದ ನಂತರ ಮಹೀಂದ್ರಾ ಎಕ್ಸ್‌ಯುವಿ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 13.45 ಲಕ್ಷದಿಂದ ಆರಂಭವಾಗಿ ಟಾಪ್ ಎಂಡ್ ಮಾದರಿಯು ರೂ. 24.95 ಲಕ್ಷ ಬೆಲೆ ಹೊಂದಿದ್ದು, ಡೀಸೆಲ್ ಮಾದರಿಗಳ ಬೆಲೆಯಲ್ಲಿ ಭಾರೀ ಪ್ರಮಾಣದ ದರ ಏರಿಕೆ ಮಾಡಲಾಗಿದೆ.

ಬೆಲೆ ಹೆಚ್ಚಳ: ಮಹೀಂದ್ರಾ ಥಾರ್ ಮತ್ತು ಎಕ್ಸ್‌ಯುವಿ700 ಬೆಲೆ ಮತ್ತಷ್ಟು ದುಬಾರಿ!

ಹಾಗೆಯೇ ಥಾರ್ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 13.59 ಲಕ್ಷದಿಂದ ಆರಂಭವಾಗಿ ಟಾಪ್ ಎಂಡ್ ಮಾದರಿಯು ರೂ. 16.29 ಲಕ್ಷ ಬೆಲೆ ಹೊಂದಿದ್ದು, ಇದರಲ್ಲೂ ಕೂಡಾ ಡೀಸೆಲ್ ಮಾದರಿಗಳ ಬೆಲೆಯಲ್ಲಿ ಭಾರೀ ಪ್ರಮಾಣದ ದರ ಏರಿಕೆ ಮಾಡಲಾಗಿದೆ.

ಬೆಲೆ ಹೆಚ್ಚಳ: ಮಹೀಂದ್ರಾ ಥಾರ್ ಮತ್ತು ಎಕ್ಸ್‌ಯುವಿ700 ಬೆಲೆ ಮತ್ತಷ್ಟು ದುಬಾರಿ!

ಇನ್ನು 2021ರ ಅಕ್ಟೊಬರ್‌ನಲ್ಲಿ ಬಿಡುಗಡೆಗೊಂಡಿದ್ದ ಹೊಸ ಎಕ್ಸ್‌ಯುವಿ700 ಕಾರು ಇದುವರೆಗೆ ಸುಮಾರು ಐದು ಬಾರಿ ದರ ಹೆಚ್ಚಳ ಪಡೆದುಕೊಂಡಿದ್ದು, ದುಬಾರಿ ಬೆಲೆ ನಡುವೆಯೂ ಹೊಸ ಕಾರು ಬಿಡುಗಡೆಯಾದ ಕೆಲವೇ ತಿಂಗಳಿನಲ್ಲಿ ಬರೋಬ್ಬರಿ 1.50 ಲಕ್ಷಕ್ಕೂ ಹೆಚ್ಚು ಯುನಿಟ್‌ಗಳಿಗೆ ಬುಕಿಂಗ್ ಪಡೆದುಕೊಳ್ಳುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.

ಬೆಲೆ ಹೆಚ್ಚಳ: ಮಹೀಂದ್ರಾ ಥಾರ್ ಮತ್ತು ಎಕ್ಸ್‌ಯುವಿ700 ಬೆಲೆ ಮತ್ತಷ್ಟು ದುಬಾರಿ!

ಹೊಸ ಎಕ್ಸ್‌ಯುವಿ700 ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಗ್ರಾಹಕರ ಬೇಡಿಕೆಯೆಂತೆ 5 ಸೀಟರ್ ಮತ್ತು 7 ಸೀಟರ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಕಾರಿನಲ್ಲಿ ಕಂಪನಿಯು 2.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆ ನೀಡಿದೆ.

ಬೆಲೆ ಹೆಚ್ಚಳ: ಮಹೀಂದ್ರಾ ಥಾರ್ ಮತ್ತು ಎಕ್ಸ್‌ಯುವಿ700 ಬೆಲೆ ಮತ್ತಷ್ಟು ದುಬಾರಿ!

2.0-ಲೀಟರ್ ಪೆಟ್ರೋಲ್ ಮಾದರಿಯು 198-ಬಿಎಚ್‌ಪಿ, 300-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 2.2-ಲೀಟರ್ ಡೀಸೆಲ್ ಮಾದರಿಯು 183-ಬಿಎಚ್‌ಪಿ ಮತ್ತು 420-ಎನ್ಎಂ ಟಾರ್ಕ್(6-ಸ್ಪೀಡ್ ಎಂಟಿ),450-ಎನ್ಎಂ ಟಾರ್ಕ್(6-ಸ್ಪೀಡ್ ಎಟಿ) ಉತ್ಪಾದನಾ ವೈಶಿಷ್ಟ್ಯತೆ ಹೊಂದಿದೆ.

ಬೆಲೆ ಹೆಚ್ಚಳ: ಮಹೀಂದ್ರಾ ಥಾರ್ ಮತ್ತು ಎಕ್ಸ್‌ಯುವಿ700 ಬೆಲೆ ಮತ್ತಷ್ಟು ದುಬಾರಿ!

ಆಫ್-ರೋಡ್ ಪ್ರಿಯರಿಗಾಗಿ ವಿಶೇಷವಾಗಿ ಸಿದ್ದಗೊಂಡಿರುವ ಥಾರ್ ಕಾರು ಮಾದರಿಯು ಇದುವರೆಗೆ 1 ಲಕ್ಷಕ್ಕೂ ಹೆಚ್ಚು ಬುಕಿಂಗ್‌ನೊಂದಿಗೆ 60 ಸಾವಿರಕ್ಕೂ ಹೆಚ್ಚು ಯುನಿಟ್ ಮಾರಾಟಗೊಂಡಿವೆ. ಇನ್ನು ಸುಮಾರು 40 ಸಾವಿರಕ್ಕೂ ಹೆಚ್ಚು ಗ್ರಾಹಕರು ಹೊಸ ಕಾರು ಮಾದರಿಗಾಗಿ ಕಾಯುತ್ತಿದ್ದು, ಹೊಸ ಕಾರು ಆಫ್-ರೋಡ್‌ಗಿಂತಲೂ ಲೈಫ್‌ಸ್ಟೈಲ್ ಮಾದರಿಗಾಗಿ ಬದಲಾಗುತ್ತಿದೆ.

ಬೆಲೆ ಹೆಚ್ಚಳ: ಮಹೀಂದ್ರಾ ಥಾರ್ ಮತ್ತು ಎಕ್ಸ್‌ಯುವಿ700 ಬೆಲೆ ಮತ್ತಷ್ಟು ದುಬಾರಿ!

ನ್ಯೂ ಜನರೇಷನ್ ಥಾರ್ ಕಾರು ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಸದ್ಯ ಎಎಕ್ಸ್ ಮತ್ತು ಎಲ್ಎಕ್ಸ್ ಎನ್ನುವ ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಲ್ಯಾಡರ್-ಫ್ರೇಮ್ ಚಾರ್ಸಿ ಜೊತೆಗೆ ಹೊಸ ಸಸ್ಪೆಂಷನ್‌ ಸೌಲಭ್ಯವು ಹೊಸ ಥಾರ್ ಕಾರಿನ ಗುಣಮಟ್ಟ ಮತ್ತು ಕಾರ್ಯಕ್ಷಮತೆ ಹೆಚ್ಚಿಸಿದೆ.

ಬೆಲೆ ಹೆಚ್ಚಳ: ಮಹೀಂದ್ರಾ ಥಾರ್ ಮತ್ತು ಎಕ್ಸ್‌ಯುವಿ700 ಬೆಲೆ ಮತ್ತಷ್ಟು ದುಬಾರಿ!

ಥಾರ್ ಕಾರು ಮಾದರಿಯಲ್ಲಿ ಮೊದಲ ಬಾರಿಗೆ ಡೀಸೆಲ್ ಎಂಜಿನ್ ಜೊತೆಗೆ ಪೆಟ್ರೋಲ್ ಕಾರಿನ ಆಯ್ಕೆಯನ್ನು ಸಹ ನೀಡಿರುವುದು ಆಫ್-ರೋಡ್ ಕಾರು ಮಾದರಿಯ ಮಾರಾಟದಲ್ಲಿ ಮತ್ತೊಂದು ಹಂತದ ಬದಲಾವಣೆಗೆ ಕಾರಣವಾಗಿದ್ದು, ಬಿಎಸ್-6 ಎಂಜಿನ್ ಪ್ರೇರಿತ 2.2-ಲೀಟರ್ ಡೀಸೆಲ್ ಎಂಜಿನ್ ಮತ್ತು ಹೊಸದಾಗಿ ಅಭಿವೃದ್ದಿಗೊಳಿಸಲಾದ 2.0-ಲೀಟರ್ ಎಂ-ಸ್ಟಾಲಿನ್ ಪೆಟ್ರೋಲ್ ಎಂಜಿನ್ ನೀಡಲಾಗಿದೆ.

ಬೆಲೆ ಹೆಚ್ಚಳ: ಮಹೀಂದ್ರಾ ಥಾರ್ ಮತ್ತು ಎಕ್ಸ್‌ಯುವಿ700 ಬೆಲೆ ಮತ್ತಷ್ಟು ದುಬಾರಿ!

ಎರಡು ಎಂಜಿನ್ ಮಾದರಿಗಳಲ್ಲೂ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದ್ದು, ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ನೀಡಲಾಗಿದೆ.

ಬೆಲೆ ಹೆಚ್ಚಳ: ಮಹೀಂದ್ರಾ ಥಾರ್ ಮತ್ತು ಎಕ್ಸ್‌ಯುವಿ700 ಬೆಲೆ ಮತ್ತಷ್ಟು ದುಬಾರಿ!

ನ್ಯೂ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಆಫ್ ರೋಡ್ ಎಸ್‌ಯುವಿ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಥಾರ್ ಎಸ್‌ಯುವಿ ಭಾರೀ ಪ್ರಮಾಣದ ಬೇಡಿಕೆ ಹೊಂದಿದ್ದು, ಶೀಘ್ರದಲ್ಲಿಯೇ ಥಾರ್ ಮಾದರಿಯು ಕೆಲವು ಹೊಸ ನವೀಕರಣಗಳನ್ನು ಪಡೆದುಕೊಳ್ಳಲಿದೆ. ಥಾರ್ ಎಸ್‌ಯುವಿಯು ಹೊಸ ಲೊಗೊ ಸೇರಿದಂತೆ ಒಳಾಂಗಣ ಸೌಲಭ್ಯಗಳಲ್ಲಿ ಕೆಲವು ಹೊಸ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ.

Most Read Articles

Kannada
English summary
Mahindra xuv700 and thar suv prices hiked details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X