Just In
- 7 hrs ago
ಕ್ರ್ಯಾಶ್ ಟೆಸ್ಟ್ನಲ್ಲಿ ಗರಿಷ್ಠ ರೇಟಿಂಗ್ ಪಡೆದುಕೊಂಡ ಹೊಸ ಕಿಯಾ ಇವಿ6 ಎಲೆಕ್ಟ್ರಿಕ್ ಕಾರು
- 7 hrs ago
ಕೇವಲ 40 ಸಾವಿರ ರೂ. ಬೆಲೆಗೆ ಬಿಡುಗಡೆಯಾಗಿದೆ 100 ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್
- 8 hrs ago
ಎರ್ಟಿಗಾದಲ್ಲಿ ಹೊಸ ಸಿಎನ್ಜಿ ರೂಪಾಂತರಗಳನ್ನು ಪರಿಚಯಿಸಲು ಸಜ್ಜಾದ ಮಾರುತಿ ಸುಜುಕಿ
- 9 hrs ago
ಏಪ್ರಿಲ್ ತಿಂಗಳ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಯಮಹಾ ಎಂಟಿ-15 ಬೈಕ್
Don't Miss!
- Sports
IPL 2022: ಕೆಎಲ್ ರಾಹುಲ್ ಹೋರಾಟ ವ್ಯರ್ಥ, ಲಕ್ನೋಗೆ ಮಣ್ಣು ಮುಕ್ಕಿಸಿದ ಆರ್ಸಿಬಿ ಟ್ರೋಫಿ ಕನಸು ಜೀವಂತ
- News
ವಿಮಾನ ಇಂಧನ ತೆರಿಗೆ ಕಡಿತ ಮಾಡುತ್ತಾ ಕೇಂದ್ರ ಸರ್ಕಾರ?
- Movies
ಹಿಜಾಬ್ ಧರಿಸಿ ಮುಸ್ಲಿಂ ಮಹಿಳೆಯರ ಪಾತ್ರ ಮಾಡುತ್ತಿರುವ ಸ್ಟಾರ್ ನಟಿಯರಿವರು
- Lifestyle
12 ಲಕ್ಷ ಖರ್ಚು ಮಾಡಿದ ನಾಯಿಯಾದ ಜಪಾನಿನ ವ್ಯಕ್ತಿ!
- Finance
ಮೇ 25ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Technology
ಅಪ್ಲಿಕೇಶನ್ ಡೆವಲಪರ್ಗಳಿಗೆ ಮತ್ತೊಮ್ಮೆ ಸಂದೇಶ ಕಳುಹಿಸಿದ ಆಪಲ್ ಕಂಪೆನಿ!
- Education
ESIC MTS 2022 : ಫೇಸ್ I ಫಲಿತಾಂಶ ಮತ್ತು ಫೇಸ್ II ಪ್ರವೇಶ ಪತ್ರ ಪ್ರಕಟ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಎಕ್ಸ್‌ಯುವಿ700 ಎಎಕ್ಸ್7 ಎಡಬ್ಲ್ಯುಡಿ ಲಗ್ಷುರಿ ವೆರಿಯೆಂಟ್ ವಿತರಣೆ ಆರಂಭಿಸಿದ ಮಹೀಂದ್ರಾ
ಹೊಸ ಮಹೀಂದ್ರಾ ಎಕ್ಸ್‌ಯುವಿ700(Mahindra XUV700) ಎಸ್‌ಯುವಿಯು ಭಾರತದಲ್ಲಿ ಬಿಡುಗಡೆಯ ನಂತರ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಕಾರು ಇದುವರೆಗೆ ಸುಮಾರು 80 ಸಾವಿರಕ್ಕೂ ಹೆಚ್ಚು ಯುನಿಟ್‌ಗಳಿಗೆ ಬುಕ್ಕಿಂಗ್ ಪಡೆದುಕೊಂಡಿದೆ.

ಹೊಸ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಆಕರ್ಷಕ ಬೆಲೆಯೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದ್ದು, ಉತ್ಪಾದನಾ ಸಾಮರ್ಥ್ಯದ ಆಧಾರದ ಮೇಲೆ ಕಂಪನಿಯು ಹಂತ-ಹಂತವಾಗಿ ವಿತರಣೆ ಪ್ರಮಾಣವನ್ನು ಹೆಚ್ಚಿಸುತ್ತಿದೆ. ಕಾರಣಾಂತರಗಳಿಂದ ಎಕ್ಸ್‌ಯುವಿ700 ಕಾರಿನ ಎಎಕ್ಸ್7 ಎಡಬ್ಲ್ಯುಡಿ ಲಗ್ಷುರಿ ವೆರಿಯೆಂಟ್ ವಿತರಣೆಯನ್ನು ಇದೀಗ ಆರಂಭಿಸಿದ್ದು, ಹೈ ಎಂಡ್ ಮಾದರಿಯು ಇನ್ನುಳಿದ ವೆರಿಯೆಂಟ್‌ಗಳಿಂತಲೂ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಹೊಂದಿದೆ.

ಹೊಸ ಕಾರು ಉತ್ಪಾದನಾ ಸಾಮಾರ್ಥ್ಯದ ಆಧಾರದ ಮೇಲೆ ಹೊಸ ಕಾರಿನ ಕಾಯುವಿಕೆ ಅವಧಿಯು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಗರಿಷ್ಠ ಒಂದು ವರ್ಷದ ತನಕ ನಿಗದಿಪಡಿಸಲಾಗಿದ್ದು, ಲಗ್ಷುರಿ ವೆರಿಯೆಂಟ್ ವಿತರಣೆಯು ಅತಿ ಕಡಿಮೆ ಅವಧಿಯಲ್ಲಿ ವಿತರಣೆಯಾಗಲಿದ್ದರೆ ಬೆಸ್ ವೆರಿಯೆಂಟ್ ವಿತರಣೆಗೆ ಹೆಚ್ಚಿನ ಸಮಯಾವಕಾಶ ತೆಗೆದುಕೊಳ್ಳಲಿದೆ.

ಸೆಮಿಕಂಡಕ್ಟರ್ ಕೊರತೆಯ ಪರಿಣಾಮ ಹೊಸ ಕಾರಿನ ಉತ್ಪಾದನೆಯು ಕುಂಠಿತವಾಗಿರುವುದೇ ವಿತರಣಾ ಅವಧಿಯಲ್ಲಿ ಹೆಚ್ಚಳವಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಸೆಮಿಕಂಡಕ್ಟರ್ ಪೂರೈಕೆ ಸುಧಾರಿಸುವ ನೀರಿಕ್ಷೆಗಳಿವೆ.

ಹೊಸ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಗ್ರಾಹಕರ ಬೇಡಿಕೆಯೆಂತೆ 5 ಸೀಟರ್ ಮತ್ತು 7 ಸೀಟರ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.99 ಲಕ್ಷಕ್ಕೆ ಮತ್ತು ಹೆಚ್ಚಿನ ಮಟ್ಟದ ಫೀಚರ್ಸ್ ಹೊಂದಿರುವ ಟಾಪ್ ಎಂಡ್ ಮಾದರಿಯನ್ನು ರೂ. 22.89 ಲಕ್ಷ ಬೆಲೆ ಹೊಂದಿದೆ.

ಮೊದಲ 50 ಸಾವಿರ ಯುನಿಟ್‌ಗೆ ಬುಕ್ಕಿಂಗ್ ಮಾಡಿರುವ ಗ್ರಾಹಕರಿಗೆ ಹಳೆಯ ಬೆಲೆಯಲ್ಲಿಯೇ ವಿತರಣೆ ಮಾಡುವುದಾಗಿ ಹೇಳಿಕೊಂಡಿರುವ ಮಹೀಂದ್ರಾ ಕಂಪನಿಯು 50 ಸಾವಿರ ಯುನಿಟ್ ನಂತರ ಬುಕ್ಕಿಂಗ್ ಮಾಡಿರುವ ಗ್ರಾಹಕರಿಗೆ ಅನ್ವಯಿಸುವಂತೆ ದರ ಏರಿಕೆ ಮಾಡಿದೆ.

ಮಹೀಂದ್ರಾ ಕಂಪನಿಯ ಹೊಸ ದರಪಟ್ಟಿಯಲ್ಲಿ ಎಕ್ಸ್‌ಯುವಿ700 ಮಾದರಿಯು ಪೆಟ್ರೋಲ್ ಮಾದರಿಯಲ್ಲಿ ಗರಿಷ್ಠ ರೂ. 75 ಸಾವಿರ ಮತ್ತು ಡೀಸೆಲ್ ಮಾದರಿಗಳಲ್ಲಿ ಗರಿಷ್ಠ ರೂ. 81 ಸಾವಿರ ದರ ಹೆಚ್ಚಳ ಮಾಡಲಾಗಿದೆ. ಬೆಲೆ ಹೆಚ್ಚಳದ ನಂತರ ಹೊಸ ಎಕ್ಸ್‌ಯುವಿ700 ಮಾದರಿಯು ಇದೀಗ ಆರಂಭಿಕವಾಗಿ ರೂ. 12.95 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 23.80 ಲಕ್ಷ ಬೆಲೆ ಪಡೆದುಕೊಂಡಂತಾಗಿದೆ.

ಹೊಸ ಕಾರಿನಲ್ಲಿ 7 ಸೀಟರ್ ಮಾದರಿಯು 2+3+2 ಮಾದರಿಯ ಆಸನ ಸೌಲಭ್ಯ ಹೊಂದಿದ್ದರೆ 5 ಸೀಟರ್ ಮಾದರಿಯು 2+3 ಆಸನ ಸೌಲಭ್ಯ ಹೊಂದಿದ್ದು, ಹೊಸ ಕಾರಿನಲ್ಲಿ ಕಂಪನಿಯು 2.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆ ನೀಡಿದೆ.

2.0-ಲೀಟರ್ ಪೆಟ್ರೋಲ್ ಮಾದರಿಯು 198-ಬಿಎಚ್‌ಪಿ, 300-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 2.2-ಲೀಟರ್ ಡೀಸೆಲ್ ಮಾದರಿಯು 183-ಬಿಎಚ್‌ಪಿ ಮತ್ತು 420-ಎನ್ಎಂ ಟಾರ್ಕ್(6-ಸ್ಪೀಡ್ ಎಂಟಿ),450-ಎನ್ಎಂ ಟಾರ್ಕ್(6-ಸ್ಪೀಡ್ ಎಟಿ) ಉತ್ಪಾದನಾ ವೈಶಿಷ್ಟ್ಯತೆ ಹೊಂದಿದೆ.

ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ ಎಂಎಕ್ಸ್, ಎಎಕ್ಸ್3, ಎಎಕ್ಸ್5, ಎಎಕ್ಸ್7 ಮತ್ತು ಎಎಕ್ಸ್7 ಲಗ್ಷುರಿ ಎನ್ನುವ ವಿವಿಧ ವೆರಿಯೆಂಟ್‌ಗಳೊಂದಿಗೆ ಆಕರ್ಷಕ ಫೀಚರ್ಸ್, ಬಲಿಷ್ಠ ಎಂಜಿನ್ ಆಯ್ಕೆ ಹೊಂದಿದ್ದು, ಕಂಪನಿಯೇ ಜೋಡಣೆ ಮಾಡುವ 7 ಸೀಟರ್ ಮಾದರಿಗಳನ್ನು ಹೊರತುಪಡಿಸಿ 5 ಸೀಟರ್ ಹೊಂದಿರುವ ಮಾದರಿಗಳಲ್ಲಿ 7 ಸೀಟರ್ ಬಯಸುವ ಗ್ರಾಹಕರು ಹೆಚ್ಚುವರಿ ರೂ. 70 ಸಾವಿರ ಪಾವತಿ ಮಾಡಬೇಕಾಗುತ್ತದೆ.

ಹೊಸ ಕಾರಿನಲ್ಲಿ ಫ್ರಂಟ್ ಫಾಸಿಯಾದೊಂದಿಗೆ ಸಂಯೋಜನೆಗೊಂಡಿರುವ ಎಲ್ಇಡಿ ಹೆಡ್‌ಲ್ಯಾಂಪ್ಸ್, ಸಿ ಆಕಾರದಲ್ಲಿರುವ ಎಲ್ಇಡಿ ಡಿಆರ್‌ಎಲ್ಎಸ್, ಸಿಲ್ವರ್ ಕೋಟಿಂಗ್ ಹೊಂದಿರುವ ಫ್ಲಕ್ಸ್ ಸ್ಕೀಡ್ ಪ್ಲೇಟ್, 18-ಇಂಚಿನ ಡ್ಯುಯಲ್ ಟೋನ್ ಮಲ್ಟಿ ಸ್ಪೋಕ್ ಅಲಾಯ್ ವ್ಹೀಲ್ ಪಡೆದುಕೊಂಡಿದೆ.

ಎಕ್ಸ್‌ಯುವಿ700 ಮಾದರಿಯ ಸೈಡ್ ಪ್ರೋಫೈಲ್ ಮತ್ತು ಹಿಂಬದಿಯ ವಿನ್ಯಾಸವು ಕೂಡಾ ಸಾಕಷ್ಟು ಹೊಸತನದಿಂದ ಕೂಡಿದ್ದು, ಹಿಂಬದಿಯ ಫೆಂಡರ್‌ನೊಂದಿಗೆ ಹರಡಿಕೊಂಡಿರುವ ವಿಭಜಿತ ಟೈಲ್‌ಲ್ಯಾಂಪ್, ವಿನೂತನ ವಿನ್ಯಾಸದ ಬಂಪರ್, ಫ್ಲಕ್ಸ್ ಸ್ಕೀಡ್ ಪ್ಲೇಟ್, ರೂಫ್ ರೈಲ್ಸ್, ಶಾರ್ಕ್ ಫಿನ್ ಆಂಟೆನಾ, ರೂಫ್ ಸ್ಪಾಯ್ಲರ್ ಪಡೆದುಕೊಂಡಿದೆ.

ಹಾಗೆಯೇ ಹೊಸ ಕಾರಿನಲ್ಲಿ 10.25 ಇಂಚಿನ ಡಿಜಿಟಲ್ ಮತ್ತು ಇನ್ಪೋಟೈನ್‌ಮೆಂಟ್ ಟಚ್‌ಸ್ಕ್ರೀನ್ ಡಿಸ್‌ಪ್ಲೇ, ಆಂಡ್ರಾಯಿಡ್ ಆಟೋ ಮತ್ತು ಆಟೋ ಕಾರ್‌ಪ್ಲೇ, ಅಮೆಜಾನ್ ಅಲೆಕ್ಸಾ, 60 ತಾಂತ್ರಿಕ ಸೌಲಭ್ಯಗಳನ್ನು ನಿಯಂತ್ರಿಸಬಹುದಾದ ಕಾರ್ ಕನೆಕ್ಟ್ ಟೆಕ್ನಾಲಜಿ, ವಾಯ್ಸ್ ಅಸಿಸ್ಟೆನ್ಸ್, ಆ್ಯಂಬಿಯೆಂಟ್ ಲೈಟಿಂಗ್ಸ್, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, 2 ಮತ್ತು 3ನೇ ಸಾಲಿನಲ್ಲೂ ಎಸಿ ವೆಂಟ್ಸ್, ಪನೋರಮಿಕ್ ಸನ್‌ರೂಫ್ ಮತ್ತು ಏರ್ ಪ್ಯೂರಿಫ್ಲೈರ್ ಸೌಲಭ್ಯಗಳಿವೆ.

ಅಡ್ವಾನ್ಸ್ ಡ್ರೈವರ್ ಅಸಿಸ್ಟೆಡ್ ಸಿಸ್ಟಂ ಸೌಲಭ್ಯವು ಹೊಸ ಕಾರಿನ ಪ್ರಮುಖ ಸುರಕ್ಷಾ ಸೌಲಭ್ಯವಾಗಿದ್ದು, ಇದರ ಜೊತೆಗೆ 7-ಏರ್‌ಬ್ಯಾಗ್, ಎಬಿಎಸ್ ಜೊತೆಗೆ ಇಬಿಡಿ, ಎಲೆಕ್ಟ್ರಾನಿಕ್ ಲಾಕಿಂಗ್, ಟ್ರಾಕ್ಷನ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋ ಹೆಡ್‌ಲ್ಯಾಂಪ್ ಬೂಸ್ಟರ್, ವ್ಯಯಕ್ತಿಕರಣಗೊಳಿಸಿದ ಸೇಫ್ಟಿ ಅಲರ್ಟ್, ಡ್ರೈವರ್ ಡ್ರಾಸಿನೆಸ್ ಅಲರ್ಟ್, ಲೆನ್ ಕಿಪ್ ಅಸಿಸ್ಟ್ ಸೌಲಭ್ಯ ಹೊಂದಿದೆ.