ಶಬ್ದಕ್ಕಿಂತ ವೇಗವಾಗಿ ಚಲಿಸಲಿದೆ ಬ್ರಿಟಿಷ್ ನಿರ್ಮಿತ ರಾಕೆಟ್ ಎಂಜಿನ್ ಚಾಲಿತ ಬ್ಲಡ್‌ಹೌಂಡ್!

ಭೂಮಿಯ ಮೇಲಿರುವ ಅತಿ ವೇಗದ ಕಾರುಗಳ ದಾಖಲೆಯನ್ನು ಮುರಿಯಬಲ್ಲ ಹಾಗೂ ಶಬ್ದಕ್ಕಿಂತ ವೇಗವಾಗಿ ಚಲಿಸುವ ಬ್ಲಡ್‌ಹೌಂಡ್ ಎಂಬ ಬ್ರಿಟಿಷ್ ನಿರ್ಮಿತ ರಾಕೆಟ್ ಚಾಲಿತ ಕಾರನ್ನು ಅಭಿವೃದ್ಧಿಪಡಿಸಲಾಗಿದ್ದು, ಇದು ವಿಶ್ವದ ಅತಿ ವೇಗದ ಕಾರಗಳಲ್ಲಿ ಅಗ್ರಸ್ಥಾನದಲ್ಲಿದೆ.

ಶಬ್ದಕ್ಕಿಂತ ವೇಗವಾಗಿ ಚಲಿಸಲಿದೆ ಬ್ರಿಟಿಷ್ ನಿರ್ಮಿತ ರಾಕೆಟ್ ಎಂಜಿನ್ ಚಾಲಿತ ಬ್ಲಡ್‌ಹೌಂಡ್!

ಬ್ಲಡ್‌ಹೌಂಡ್ ಎಂಬುದು ಬ್ರಿಟಿಷ್ ನಿರ್ಮಿತ ರಾಕೆಟ್ ಚಾಲಿತ ಕಾರಾಗಿದ್ದು, ಭೂಮಿಯ ಮೇಲೆ ಶಬ್ದದ ವೇಗವನ್ನು ದಾಖಲೆಯನ್ನು ಮುರಿಯಲು ಇದನ್ನು ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಕಾರು ಇತ್ತೀಚೆಗೆ 11 ಮಿಲಿಯನ್ ಡಾಲರ್‌ಗೆ ಮಾರಾಟಗೊಂಡಿದೆ.

ಶಬ್ದಕ್ಕಿಂತ ವೇಗವಾಗಿ ಚಲಿಸಲಿದೆ ಬ್ರಿಟಿಷ್ ನಿರ್ಮಿತ ರಾಕೆಟ್ ಎಂಜಿನ್ ಚಾಲಿತ ಬ್ಲಡ್‌ಹೌಂಡ್!

ಈ ಮಾದರಿಯು ವಿ8, ವಿ10, ವಿ12 ಮತ್ತು ಡಬ್ಲ್ಯೂ 16 ಗಳಿಗಿಂತ ಹೆಚ್ಚು ಸಾಮರ್ಥ್ಯದ್ದಾಗಿದ್ದು ವಿವರವಾಗಿ ಹೇಳುವುದಾದರೆ, ಬ್ಲಡ್‌ಹೌಂಡ್ ರೋಲ್ಸ್‌ ರಾಯ್ಸ್ ಇಜೆ 200 ಜೆಟ್ ಎಂಜಿನ್‌ನಿಂದ ಚಾಲಿತವಾಗಿದೆ. ಇದರ ಸಾಮರ್ಥ್ಯವು ರಾಯಲ್ ಏರ್‌ಫೋರ್ಸ್, ಯುರೋಫೈಟರ್ ಟೈಫೂನ್ ಫೈಟರ್ ಜೆಟ್‌ನಷ್ಟೇ ಶಕ್ತಿಯುತವಾಗಿದೆ.

ಶಬ್ದಕ್ಕಿಂತ ವೇಗವಾಗಿ ಚಲಿಸಲಿದೆ ಬ್ರಿಟಿಷ್ ನಿರ್ಮಿತ ರಾಕೆಟ್ ಎಂಜಿನ್ ಚಾಲಿತ ಬ್ಲಡ್‌ಹೌಂಡ್!

ಬ್ಲಡ್‌ಹೌಂಡ್ ಮಾದರಿಯು ರೋಲ್ಸ್-ರಾಯ್ಸ್ ಇಜೆ200 ಜೆಟ್ ಎಂಜಿನ್ ಅನ್ನು ಹೊಂದಿರುವುದರಿಂದ ಇದರ ಶಬ್ದ ತೀರ್ವತೆಯೂ ಇತರ ಕಾರುಗಳಿಗಿಂತ ಹೆಚ್ಚಾಗಿರುತ್ತದೆ. ಅಲ್ಲದೇ ಕಾರಿನ ಸುತ್ತಲೂ ಬಳಸಲಾದ ಪದರವು ಶಬ್ದದ ವೇಗವನ್ನು ಹಿಂದಿಕ್ಕಿ ಮುನ್ನುಗ್ಗುವ ಸಾಮರ್ಥ್ಯವನ್ನು ಹೊಂದಿದೆ.

ಶಬ್ದಕ್ಕಿಂತ ವೇಗವಾಗಿ ಚಲಿಸಲಿದೆ ಬ್ರಿಟಿಷ್ ನಿರ್ಮಿತ ರಾಕೆಟ್ ಎಂಜಿನ್ ಚಾಲಿತ ಬ್ಲಡ್‌ಹೌಂಡ್!

ಬ್ಲಡ್‌ಹೌಂಡ್‌ನ ದೇಹ ಮತ್ತು ಇತರ ಘಟಕಗಳನ್ನು ಅತ್ಯುನ್ನತ ಬಿಡಿಭಾಗಗಳಿಂದ ನಿರ್ಮಿಸಲಾಗಿದೆ, ಹಾಗಾಗಿ ಹೆಚ್ಚಿನ-ವೇಗ, ಶಬ್ದ ಹೊರ ಹೊಮ್ಮುವ ಸಂದರ್ಭಗಳಲ್ಲಿ ಉಂಟಾಗುವ ಅಪಾರ ಒತ್ತಡದಲ್ಲೂ ಬ್ಲಡ್‌ಹೌಂಡ್ ಸುಲಭವಾಗಿ ನಿಭಾಯಿಸುವಂತೆ ವಿನ್ಯಾಸಗೊಳಿಸಲಾಗಿದೆ.

ಶಬ್ದಕ್ಕಿಂತ ವೇಗವಾಗಿ ಚಲಿಸಲಿದೆ ಬ್ರಿಟಿಷ್ ನಿರ್ಮಿತ ರಾಕೆಟ್ ಎಂಜಿನ್ ಚಾಲಿತ ಬ್ಲಡ್‌ಹೌಂಡ್!

ಅತಿ ವೇಗವನ್ನು ಸಾಧಿಸಲು, ಬ್ಲಡ್‌ಹೌಂಡ್ ಅನ್ನು ಗರಿಷ್ಠ ಏರೋಡೈನಾಮಿಕ್ ದಕ್ಷತೆಯನ್ನು ಮನಸ್ಸಿನಲ್ಲಿಟ್ಟುಕೊಂಡು ರೂಪಿಸಲಾಗಿದೆ. ಇದು ಬ್ಲಡ್‌ಹೌಂಡ್ ದೇಹದ ಸುತ್ತಲೂ ಕನಿಷ್ಠ ಒತ್ತಡದೊಂದಿಗೆ ಗಾಳಿಯನ್ನು ಬೇರ್ಪಡಿಸುತ್ತಾ ಮುನ್ನುಗ್ಗಲು ಅನುವು ಮಾಡಿಕೊಡುತ್ತದೆ.

ಶಬ್ದಕ್ಕಿಂತ ವೇಗವಾಗಿ ಚಲಿಸಲಿದೆ ಬ್ರಿಟಿಷ್ ನಿರ್ಮಿತ ರಾಕೆಟ್ ಎಂಜಿನ್ ಚಾಲಿತ ಬ್ಲಡ್‌ಹೌಂಡ್!

ಈ ಅತ್ಯಂತ ಏರೋಡೈನಾಮಿಕ್ ವಿನ್ಯಾಸದಿಂದಾಗಿ, ಬ್ಲಡ್‌ಹೌಂಡ್ ಅತ್ಯಂತ ಕಿರಿದಾಗಿ ಕಾಣುತ್ತದೆ. ಅಲ್ಲದೇ ವಿನ್ಯಾಸದಲ್ಲಿ ತೆಳುವಾಗಿದ್ದು ಮಾಮೂಲಿ ಕಾರಿನಂತೆ ನಾಲ್ಕು ಚಕ್ರಗಳನ್ನು ಹೊಂದುವ ಮೂಲಕ ಕ್ರೂಸ್ ಕ್ಷಿಪಣಿಯಂತೆ ಕಾಣುತ್ತದೆ. ಅಧಿಕೃತವಾಗಿ ಲ್ಯಾಂಡ್ ಸ್ಪೀಡ್ ರೆಕಾರ್ಡ್ ಅನ್ನು ಸ್ಥಾಪಿಸಲು, ಮೊದಲ ರನ್‌ನಲ್ಲಿ 60 ನಿಮಿಷಗಳ ಒಳಗೆ ಕಾರನ್ನು ಎರಡು ದಿಕ್ಕುಗಳಲ್ಲಿ ಓಡಿಸಲಾಗುತ್ತದೆ.

ಶಬ್ದಕ್ಕಿಂತ ವೇಗವಾಗಿ ಚಲಿಸಲಿದೆ ಬ್ರಿಟಿಷ್ ನಿರ್ಮಿತ ರಾಕೆಟ್ ಎಂಜಿನ್ ಚಾಲಿತ ಬ್ಲಡ್‌ಹೌಂಡ್!

ನಂತರ ಎರಡೂ ರನ್‌ಗಳಲ್ಲಿ ಸಾಧಿಸಿದ ಉನ್ನತ ವೇಗಗಳನ್ನು ಸರಾಸರಿ ಮಾಡುವ ಮೂಲಕ ಅಧಿಕೃತ ವೇಗವನ್ನು ಲೆಕ್ಕಹಾಕಲಾಗುತ್ತದೆ. ಅನೇಕ ಲ್ಯಾಂಡ್ ಸ್ಪೀಡ್ ರೆಕಾರ್ಡ್-ಬ್ರೇಕಿಂಗ್ ಕಾರುಗಳು ಅಧಿಕೃತವಾಗಿ ತಮ್ಮ ದಾಖಲೆ ಮುರಿಯುವ ಓಟಗಳನ್ನು ಸ್ಥಾಪಿಸಲು ಸಾಧ್ಯವಾಗದಿರುವುದಕ್ಕೆ ಇದು ಒಂದು ಕಾರಣವಾಗಿದೆ.

ಶಬ್ದಕ್ಕಿಂತ ವೇಗವಾಗಿ ಚಲಿಸಲಿದೆ ಬ್ರಿಟಿಷ್ ನಿರ್ಮಿತ ರಾಕೆಟ್ ಎಂಜಿನ್ ಚಾಲಿತ ಬ್ಲಡ್‌ಹೌಂಡ್!

ಆದ್ದರಿಂದ ಅಧಿಕೃತ ದಾಖಲೆ ಮುರಿಯಲು ಕಾರು ವೇಗವಾಗಿರುವುದರ ಜೊತೆಗೆ ಮುಂದಿನ 60 ನಿಮಿಷಗಳಲ್ಲಿ ಎರಡನೇ ಓಟವನ್ನು ಮಾಡಲು ವಿಶ್ವಾಸಾರ್ಹವಾಗಿರಬೇಕು. ಅಲ್ಲದೇ ಪಿಟ್ ಸಿಬ್ಬಂದಿ ಕೂಡ ಎರಡನೇ ಓಟಕ್ಕಾಗಿ ಕಾರನ್ನು ಸಿದ್ಧಪಡಿಸುವಷ್ಟು ವೇಗವಾಗಿರಬೇಕು. ಈ ನಿಯಮಗಳಿಂದಾಗಿಯೇ 1997ರಲ್ಲಿ ಆಂಡಿ ಗ್ರೀನ್ ಸಾಧಿಸಿದ ದಾಖಲೆಯ 1,227.93 ಕಿ.ಮೀ ವೇಗವೇ ಇಂದಿಗೂ ಪ್ರಸ್ತುತ ಭೂ ವೇಗದ ದಾಖಲೆಯಾಗಿದೆ.

ಶಬ್ದಕ್ಕಿಂತ ವೇಗವಾಗಿ ಚಲಿಸಲಿದೆ ಬ್ರಿಟಿಷ್ ನಿರ್ಮಿತ ರಾಕೆಟ್ ಎಂಜಿನ್ ಚಾಲಿತ ಬ್ಲಡ್‌ಹೌಂಡ್!

ಕುತೂಹಲಕಾರಿ ವಿಷಯವೆಂದರೇ ಇದೇ ಆಂಡಿ ಗ್ರೀನ್ ಅವರು ವೇಗದ ಪರೀಕ್ಷೆ ಮತ್ತು ದಾಖಲೆಯ ರನ್‌ಗಾಗಿ ಈ ಬಾರಿ ಬ್ಲಡ್‌ಹೌಂಡ್‌ ಅನ್ನು ಓಡಿಸಲಿದ್ದಾರೆ. ಬ್ಲಡ್‌ಹೌಂಡ್‌ ಬಗ್ಗೆ ವಿವರವಾಗಿ ಹೇಳುವುದಾದರೆ, 1,609.34 ಕಿ.ಮೀ ಉನ್ನತ ವೇಗವನ್ನು ಸಾಧಿಸಲು ಹೆಚ್ಚಿನ ನಂಬಿಕೆಯ ಅಗತ್ಯವಿದೆ, ಇದನ್ನು ಮೊದಲೇ ಹೇಳಿದಂತೆ ರೋಲ್ಸ್-ರಾಯ್ಸ್ ಇಜೆ 200 ಜೆಟ್ ಎಂಜಿನ್ನಿಂದ ಪೂರೈಸಲಾಗುತ್ತದೆ.

ಶಬ್ದಕ್ಕಿಂತ ವೇಗವಾಗಿ ಚಲಿಸಲಿದೆ ಬ್ರಿಟಿಷ್ ನಿರ್ಮಿತ ರಾಕೆಟ್ ಎಂಜಿನ್ ಚಾಲಿತ ಬ್ಲಡ್‌ಹೌಂಡ್!

ಜೆಟ್ ಎಂಜಿನ್ ಗಳನ್ನು ವಿಭಿನ್ನವಾಗಿ ನಿರ್ಮಿಸಿರುವುದರಿಂದ, ಇದಕ್ಕೆ ವಿಭಿನ್ನ ಇಂಧನ ಮತ್ತು ಇಂಧನ ವ್ಯವಸ್ಥೆಯ ಅಗತ್ಯವಿದೆ. ಇದಕ್ಕಾಗಿ ಒಂದು ಆಕ್ಸಿಲರಿ ಪವರ್ ಯೂನಿಟ್, ಇದು ಸೂಪರ್ಚಾರ್ಜ್ಡ್ ಜಾಗ್ವಾರ್ ವಿ8 ಎಂಜಿನ್ ಆಗಿದ್ದು, ಈ ಫ್ಯೂಯಲಿಂಗ್ ಸಿಸ್ಟಂಗೆ 40-ಲೀಟರ್ ಹೈ ಟೆಸ್ಟ್ ಪೆರಾಕ್ಸೈಡ್ ಅನ್ನು ತಲುಪಿಸುತ್ತದೆ.

ಶಬ್ದಕ್ಕಿಂತ ವೇಗವಾಗಿ ಚಲಿಸಲಿದೆ ಬ್ರಿಟಿಷ್ ನಿರ್ಮಿತ ರಾಕೆಟ್ ಎಂಜಿನ್ ಚಾಲಿತ ಬ್ಲಡ್‌ಹೌಂಡ್!

ಬ್ಲಡ್‌ಹೌಂಡ್‌ ದೈನಂದಿನ ಕಾರುಗಳಿಗೆ ವಿರುದ್ಧವಾಗಿದೆ, ಇದನ್ನು ವೇಗದ ದಾಖಲೆಗಾಗಿ ಮಾತ್ರ ನಿರ್ಮಿಸಲಾಗಿದೆ ಅಷ್ಟೇ. ಇದರ ನಾಲ್ಕು ಚಕ್ರಗಳು ಹಾಗೂ ವಿನ್ಯಾಸ ಕಾರಿನಂತಿದ್ದು, ರಸ್ತೆಯ ಮೇಲೆ ಚಲಿಸುತ್ತಿರುವ ಕಾರಣ ಕಾರು ಎಂದು ಪರಿಗಣಿಸಬಹುದು. ಆದರೇ ಇತರೆ ಕಾರುಗಳಂತೆ ಇದನ್ನು ನೋಡಲು ಅಸಾಧ್ಯ.

ಶಬ್ದಕ್ಕಿಂತ ವೇಗವಾಗಿ ಚಲಿಸಲಿದೆ ಬ್ರಿಟಿಷ್ ನಿರ್ಮಿತ ರಾಕೆಟ್ ಎಂಜಿನ್ ಚಾಲಿತ ಬ್ಲಡ್‌ಹೌಂಡ್!

ಏನೇ ಆಗಲಿ ತಾಂತ್ರಿಕವಾಗಿ ಇದೊಂದು ಕಾರಾಗಿದ್ದು ಬ್ಲಡ್‌ಹೌಂಡ್‌ ತಂಡವು ಲ್ಯಾಂಡ್ ಸ್ಪೀಡ್ ರೆಕಾರ್ಡ್ ಅನ್ನು ಮುರಿಯಲು ಮತ್ತು ಮುಂಬರುವ ವರ್ಷಗಳಲ್ಲಿ ವೇಗದ ಮತ್ತೊಂದು ಮಾದರಿಯೊಂದಿಗೆ ಬರಲು ಅತಿ ವೇಗದ ಕಾರುಗಳನ್ನು ಇಷ್ಟಪಡುವವರು ಬಯಸುತ್ತಿದ್ದಾರೆ.

Article Published On: Monday, March 21, 2022, 13:19 [IST]
English summary
Meet the bloodhound a car that can break the sound barrier
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+