ವರ್ಷದ ಆರಂಭದಲ್ಲಿಯೇ ಎಂಜಿ ಆಸ್ಟರ್ ಎಸ್‌ಯುವಿ ಬೆಲೆಯಲ್ಲಿ ಹೆಚ್ಚಳ

ಎಂಜಿ ಮೋಟಾರ್ ಇಂಡಿಯಾ ಕಂಪನಿಯು ಭಾರತದಲ್ಲಿ ತನ್ನ ಪ್ರಮುಖ ಕಾರು ಮಾದರಿಗಳ ಬೆಲೆಯಲ್ಲಿ ಹೆಚ್ಚಳ ಮಾಡಿರುವುದಾಗಿ ಘೋಷಣೆ ಮಾಡಿದ್ದು, ಕಂಪನಿಯ ಹೊಸ ಆಸ್ಟರ್ ಪ್ರೀಮಿಯಂ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯ ಬೆಲೆ ಕೂಡಾ ಇದೀಗ ಮತ್ತಷ್ಟು ದುಬಾರಿಯಾಗಿದೆ.

ವರ್ಷದ ಆರಂಭದಲ್ಲಿಯೇ ಎಂಜಿ ಆಸ್ಟರ್ ಎಸ್‌ಯುವಿ ಬೆಲೆಯಲ್ಲಿ ಹೆಚ್ಚಳ

ಜಾಗತಿಕ ಮಾರುಕಟ್ಟೆಯಲ್ಲಿ ಆಟೋ ಬಿಡಿಭಾಗಗಳ ವೆಚ್ಚ ಹೆಚ್ಚುತ್ತಿರುವ ಪರಿಣಾಮ ಹೊಸ ವಾಹನಗಳ ಬೆಲೆಯು ನಿರಂತರವಾಗಿ ಏರಿಕೆಯಾಗುತ್ತಿದ್ದು, ಪ್ರೀಮಿಯಂ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಎಂಜಿ ಮೋಟಾರ್ ಇಂಡಿಯಾ ಕಂಪನಿಯು ಕೂಡಾ ತನ್ನ ಪ್ರಮುಖ ಕಾರು ಮಾದರಿಗಳ ಬೆಲೆ ಹೆಚ್ಚಿಸಿದೆ. ಜನವರಿ 1ರಿಂದ ಬೆಲೆ ಅನ್ವಯವಾಗುವಂತೆ ಹೊಸ ದರ ಪಟ್ಟಿ ಪ್ರಕಟಿಸಿರುವ ಎಂಜಿ ಕಂಪನಿಯು ಕಳೆದ ಕೆಲ ತಿಂಗಳ ಹಿಂದೆ ಬಿಡುಗಡೆ ಮಾಡಲಾಗಿದ್ದ ಆಸ್ಟರ್ ಕಂಪ್ಯಾಕ್ಟ್ ಎಸ್‌ಯುವಿ ಬೆಲೆಯಲ್ಲಿ ಹೆಚ್ಚಿನ ಮಟ್ಟದ ದರ ಏರಿಕೆ ಮಾಡಿದೆ.

ವರ್ಷದ ಆರಂಭದಲ್ಲಿಯೇ ಎಂಜಿ ಆಸ್ಟರ್ ಎಸ್‌ಯುವಿ ಬೆಲೆಯಲ್ಲಿ ಹೆಚ್ಚಳ

ಭಾರತದ ಮೊದಲ ವ್ಯಯಕ್ತಿಕರಣಗೊಳಿಸಿದ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಸೌಲಭ್ಯ ಹೊಂದಿರುವ ಕಾರು ಮಾದರಿಯಾಗಿ ಗುರಿತಿಸಿಕೊಂಡಿರುವ ಆಸ್ಟರ್ ಕಂಪ್ಯಾಕ್ಟ್ ಎಸ್‌ಯುವಿಯು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ರೂ.20 ಸಾವಿರದಿಂದ ರೂ. 35 ಸಾವಿರ ತನಕ ಬೆಲೆ ಹೆಚ್ಚಳ ಪಡೆದುಕೊಂಡಿದೆ.

ವರ್ಷದ ಆರಂಭದಲ್ಲಿಯೇ ಎಂಜಿ ಆಸ್ಟರ್ ಎಸ್‌ಯುವಿ ಬೆಲೆಯಲ್ಲಿ ಹೆಚ್ಚಳ

ಪರಿಷ್ಕೃತ ದರಪಟ್ಟಿಯಲ್ಲಿ ಆಸ್ಟರ್ ಕಾರು ವಿವಿಧ ವೆರಿಯೆಂಟ್‌ ಅನುಗುಣವಾಗಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.9.98 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 17.73 ಲಕ್ಷ ಬೆಲೆ ಹೊಂದಿದ್ದು, ಟಾಪ್ ಎಂಡ್ ಮಾದರಿಯಲ್ಲಿ ಹೆಚ್ಚಿನ ಮಟ್ಟದ ದರ ಹೆಚ್ಚಳ ಮಾಡಲಾಗಿದೆ.

ವರ್ಷದ ಆರಂಭದಲ್ಲಿಯೇ ಎಂಜಿ ಆಸ್ಟರ್ ಎಸ್‌ಯುವಿ ಬೆಲೆಯಲ್ಲಿ ಹೆಚ್ಚಳ

ಹೊಸ ಕಾರು ಪ್ರತಿಸ್ಪರ್ಧಿ ಮಾದರಿಗಳಿಂತಲೂ ಅತ್ಯುತ್ತಮ ಫೀಚರ್ಸ್, ವಿವಿಧ ಎಂಜಿನ್ ಆಯ್ಕೆ ಮತ್ತು ಆಕರ್ಷಕ ಬೆಲೆಗಳನ್ನು ಪಡೆದುಕೊಂಡಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಿತ ತಾಂತ್ರಿಕ ಸೌಲಭ್ಯಗಳು ಮತ್ತು ಬಲಿಷ್ಠ ಎಂಜಿನ್ ಆಯ್ಕೆಯೊಂದಿಗೆ ಭರ್ಜರಿ ಬೇಡಿಕೆಪಡೆದುಕೊಳ್ಳುತ್ತಿದೆ.

ವರ್ಷದ ಆರಂಭದಲ್ಲಿಯೇ ಎಂಜಿ ಆಸ್ಟರ್ ಎಸ್‌ಯುವಿ ಬೆಲೆಯಲ್ಲಿ ಹೆಚ್ಚಳ

ಹೊಸ ಕಾರಿನಲ್ಲಿ ಸ್ಟೈಲ್, ಸೂಪರ್, ಸ್ಮಾರ್ಟ್, ಸ್ಯಾವಿ ಮತ್ತು ಶಾರ್ಪ್ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಸ್ಪೋರ್ಟಿ ವಿನ್ಯಾಸದೊಂದಿಗೆ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್‌ಗಳನ್ನು ಜೋಡಣೆ ಹೊಂದಿದೆ.

ವರ್ಷದ ಆರಂಭದಲ್ಲಿಯೇ ಎಂಜಿ ಆಸ್ಟರ್ ಎಸ್‌ಯುವಿ ಬೆಲೆಯಲ್ಲಿ ಹೆಚ್ಚಳ

ಹೊಸ ಕಾರಿನಲ್ಲಿರುವ 1.5-ಲೀಟರ್ ಪೆಟ್ರೋಲ್ ಮಾದರಿಯು 5 ಸ್ಪೀಡ್ ಮ್ಯಾನುವಲ್ ಅಥವಾ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 108-ಬಿಎಚ್‌ಪಿ, 144-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 1.3-ಲೀಟರ್ ಪೆಟ್ರೋಲ್ ಮಾದರಿಯು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಸಿವಿಟಿ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 138-ಬಿಎಚ್‌ಪಿ, 220-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ವರ್ಷದ ಆರಂಭದಲ್ಲಿಯೇ ಎಂಜಿ ಆಸ್ಟರ್ ಎಸ್‌ಯುವಿ ಬೆಲೆಯಲ್ಲಿ ಹೆಚ್ಚಳ

ಆಸ್ಟರ್ ಕಾರು ಆಕರ್ಷಕವಾದ ಗ್ರಿಲ್ ಜೊತೆ ಹ್ವಾಕ್ ಐ ಹೆಡ್‌ಲ್ಯಾಂಪ್ಸ್, ಕ್ರೊಮ್ ಸ್ಟಡ್ ಗ್ರಿಲ್, ಸ್ಪ್ಲಿಟ್ ಎಲ್ಇಡಿ ಟೈಲ್‌ಲ್ಯಾಂಪ್, 17-ಇಂಚಿನ ಅಲಾಯ್ ವ್ಹೀಲ್, ಡ್ಯುಯಲ್ ಎಕ್ಸಾಸ್ಟ್ ಟ್ರಿಪ್ಸ್, ರೂಫ್ ರೈಲ್ಸ್, ಆಲ್ ಅರೌಂಡ್ ಕ್ಲಾಡಿಂಗ್ ಹೊಂದಿರಲಿದ್ದು, ಕಾರಿನ ಒಳಭಾಗದಲ್ಲಿ 10.1 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, 7 ಇಂಚಿನ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಪವರ್ ಅಡ್ಜೆಸ್ಟ್ ಸೀಟ್, ಡ್ರೈವ್ ಮತ್ತು ಸ್ಪೀರಿಂಗ್ ಮೋಡ್, ಪನೊರಮಿಕ್ ಸನ್‌ರೂಫ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಹಿಟೆಡ್ ರಿಯರ್ ವ್ಯೂ ಮಿರರ್ ಸೌಲಭ್ಯವಿವೆ.

ವರ್ಷದ ಆರಂಭದಲ್ಲಿಯೇ ಎಂಜಿ ಆಸ್ಟರ್ ಎಸ್‌ಯುವಿ ಬೆಲೆಯಲ್ಲಿ ಹೆಚ್ಚಳ

ಕ್ಯಾಬಿನ್ ಫೀಚರ್ಸ್ ಹೆಚ್ಚಿಸಲು ಫ್ರಂಟ್ ಅಂಡ್ ರಿಯಲ್ ಆರ್ಮ್ ರೆಸ್ಟ್, ಲೆದರ್ ಇಂಟಿರಿಯರ್, ರಿಯರ್ ಎಸಿ ವೆಂಟ್ಸ್, ಪಿಎಂ 2.5 ಕ್ಯಾಬಿನ್ ಫಿಲ್ಟರ್ ಜೊತೆಗೆ ಹೊಸ ಕಾರಿನ ಕನೆಕ್ಟೆಡ್ ಫೀಚರ್ಸ್‌ಗಳು ಕೂಡಾ ಸಾಕಷ್ಟು ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿವೆ.

ವರ್ಷದ ಆರಂಭದಲ್ಲಿಯೇ ಎಂಜಿ ಆಸ್ಟರ್ ಎಸ್‌ಯುವಿ ಬೆಲೆಯಲ್ಲಿ ಹೆಚ್ಚಳ

ಮತ್ತೊಂದು ವಿಶೇಷವೆಂದರೆ ಹೊಸ ಕಾರಿನಲ್ಲಿ ಭಾರತದ ಮೊದಲ ವ್ಯಯಕ್ತಿಕರಣಗೊಳಿಸಿದ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಸೌಲಭ್ಯ ಜೋಡಿಸಲಾಗಿದ್ದು, ಇದು ರಿಲಯನ್ಸ್ ಜಿಯೋದಿಂದ ಎರವಲು ಪಡೆಯಲಾದ ರಿಯಲ್-ಟೈಮ್ ಇನ್ಫೋಟೈನ್‌ಮೆಂಟ್ ಮತ್ತು ಟೆಲಿಮ್ಯಾಟಿಕ್ಸ್‌ಗಾಗಿ ಇ-ಸಿಮ್, ಐಒಟಿ ಟೆಕ್ ಅನ್ನು ಒಳಗೊಂಡಿರುವ ಹೊಸ ಕಾರು ಗರಿಷ್ಠ ಸುರಕ್ಷತೆ ಖಚಿತಪಡಿಸಲಿದೆ.

ವರ್ಷದ ಆರಂಭದಲ್ಲಿಯೇ ಎಂಜಿ ಆಸ್ಟರ್ ಎಸ್‌ಯುವಿ ಬೆಲೆಯಲ್ಲಿ ಹೆಚ್ಚಳ

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಸೌಲಭ್ಯದೊಂದಿಗೆ ಮನರಂಜನೆ, ಕಾರಿನ ತಾಂತ್ರಿಕ ಅಂಶಗಳ ನ್ಯೂನತೆಗಳ ಪತ್ತೆ ಹಚ್ಚುವಲ್ಲಿ ಸಹಕಾರಿಯಾಗುವುದರ ಜೊತೆ ವಾಯ್ಸ್ ಅಸಿಸ್ಟ್ ಮೂಲಕ ಕಾರು ಚಾಲನೆಯನ್ನು ಸರಳಗೊಳಿಸುತ್ತದೆ.

ವರ್ಷದ ಆರಂಭದಲ್ಲಿಯೇ ಎಂಜಿ ಆಸ್ಟರ್ ಎಸ್‌ಯುವಿ ಬೆಲೆಯಲ್ಲಿ ಹೆಚ್ಚಳ

ಹೊಸ ಕಾರಿನಲ್ಲಿರುವ ಲೆವಲ್ 2 ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ(ಎಡಿಎಎಸ್)ನಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಫಾರ್ವಡ್ ಕೂಲಿಷನ್ ಕಂಟ್ರೋಲ್, ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್, ಲೇನ್ ಕೀಪ್ ಅಸಿಸ್ಟ್, ಲೈನ್ ಡಿಫಾರ್ಚರ್ ಪ್ರಿವೆಷನ್, ಸ್ಪೀಡ್ ವಾರ್ನಿಂಗ್, ಇಂಟೆಲಿಜೆಂಟ್ ಮೋಡ್ ಹೊಂದಿರುವ ಸ್ಪಿಡ್ ಅಸಿಸ್ಟ್ ಸಿಸ್ಟಂ, ಮ್ಯಾನುವಲ್ ಮೋಡ್ ಹೊಂದಿರುವ ಸ್ಪೀಡ್ ಅಸಿಸ್ಟ್ ಸಿಸ್ಟಂ, ರಿಯರ್ ಡ್ರೈವ್ ಅಸಿಸ್ಟ್, ಲೈನ್ ಚೆಂಜ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಮತ್ತು ಇಂಟೆಲಿಜೆಂಟ್ ಹೆಡ್‌ಲ್ಯಾಂಪ್ ಲೈಟಿಂಗ್ಸ್ ಕಂಟ್ರೋಲ್‌ಗಳಲಿವೆ.

ವರ್ಷದ ಆರಂಭದಲ್ಲಿಯೇ ಎಂಜಿ ಆಸ್ಟರ್ ಎಸ್‌ಯುವಿ ಬೆಲೆಯಲ್ಲಿ ಹೆಚ್ಚಳ

ಆಕ್ಟಿವ್ ಸೇಫ್ಟಿ ಫೀಚರ್ಸ್‌ಗಳಲ್ಲಿ ಎಡಿಎಎಸ್ ತಂತ್ರಜ್ಞಾನವು ಅಗತ್ಯ ಸಂದರ್ಭಗಳಲ್ಲಿ ಅಟೊನೊಮಸ್ ಬ್ರೇಕಿಂಗ್ ಸೌಲಭ್ಯವಾಗಿಯೂ ಕಾರ್ಯ ನಿರ್ವಹಣೆ ಮಾಡಲಿದ್ದು, ಟಾಪ್ ಎಂಡ್ ಮಾದರಿಯಲ್ಲಿ ಆರು ಏರ್‌ಬ್ಯಾಗ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್(ಇಎಸ್‌ಪಿ), ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಹಿಲ್ ಡಿಸೆಂಟ್ ಮತ್ತು 360 ಡಿಗ್ರಿ ವ್ಯೂ ಕ್ಯಾಮೆರಾ ಸೌಲಭ್ಯಗಳಿವೆ.

Article Published On: Saturday, January 8, 2022, 19:49 [IST]
English summary
Mg astor suv price increased up to 35 000 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+