ಆಸ್ಟರ್ ನಂತರ ಹೆಕ್ಟರ್ ಸರಣಿ ಎಸ್‌ಯುವಿ ಬೆಲೆಯಲ್ಲೂ ಹೆಚ್ಚಳ ಮಾಡಿದ ಎಂಜಿ ಮೋಟಾರ್

ಎಂಜಿ ಮೋಟಾರ್ ಕಂಪನಿಯು ತನ್ನ ಹೊಸ ಕಾರುಗಳ ಬೆಲೆಯಲ್ಲಿ ಹೆಚ್ಚಳ ಮಾಡಿದ್ದು, ಆಸ್ಟರ್ ನಂತರ ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಎಸ್‌ಯುವಿಗಳ ಬೆಲೆಯು ಇದೀಗ ದುಬಾರಿಯಾಗಿದೆ.

ಆಸ್ಟರ್ ನಂತರ ಹೆಕ್ಟರ್ ಸರಣಿ ಎಸ್‌ಯುವಿ ಬೆಲೆಯಲ್ಲೂ ಹೆಚ್ಚಳ ಮಾಡಿದ ಎಂಜಿ ಮೋಟಾರ್

ವಾಹನ ಉತ್ಪಾದನಾ ವೆಚ್ಚ ಹೆಚ್ಚುತ್ತಿರುವುದರಿಂದ ಪ್ರಮುಖ ಕಾರು ಕಂಪನಿಯು ನಿರಂತವಾಗಿ ಬೆಲೆ ಪರಿಷ್ಕರಣೆ ಮಾಡಲಾಗುತ್ತಿದ್ದು, ಎಂಜಿ ಮೋಟಾರ್ ಕಂಪನಿಯು ಸಹ ತನ್ನ ಪ್ರಮುಖ ಎಸ್‌ಯುವಿ ಮಾದರಿಗಳಾದ ಆಸ್ಟರ್, ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಮಾದರಿಗಳ ಬೆಲೆಯಲ್ಲಿ ಶೇ.1 ರಿಂದ ಶೇ.2 ರಷ್ಟು ಹೆಚ್ಚಿಸಿದೆ.

ಆಸ್ಟರ್ ನಂತರ ಹೆಕ್ಟರ್ ಸರಣಿ ಎಸ್‌ಯುವಿ ಬೆಲೆಯಲ್ಲೂ ಹೆಚ್ಚಳ ಮಾಡಿದ ಎಂಜಿ ಮೋಟಾರ್

ಹೊಸ ದರಪಟ್ಟಿಯಲ್ಲಿ ಆಸ್ಟರ್, ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಕಾರುಗಳ ಬೆಲೆಯು ರೂ. 10 ಸಾವಿರದಿಂದ ರೂ. 28 ಸಾವಿರ ತನಕ ಹೆಚ್ಚಿಸಲಾಗಿದ್ದು, ಆಸ್ಟರ್ ಮಾದರಿಗಳ ಬೆಲೆಯಲ್ಲಿ ಕಡಿಮೆ ಏರಿಕೆಯಾಗಿದ್ದರೆ ಹೆಕ್ಟರ್ ಕಾರಿನ ಬೆಲೆಯಲ್ಲಿ ಗರಿಷ್ಠ ಏರಿಕೆ ಮಾಡಲಾಗಿದೆ.

ಆಸ್ಟರ್ ನಂತರ ಹೆಕ್ಟರ್ ಸರಣಿ ಎಸ್‌ಯುವಿ ಬೆಲೆಯಲ್ಲೂ ಹೆಚ್ಚಳ ಮಾಡಿದ ಎಂಜಿ ಮೋಟಾರ್

ಹೆಕ್ಟರ್ ಎಸ್‌ಯುವಿ ಮಾದರಿಯ ಬೆಲೆಯಲ್ಲಿ ರೂ. 20 ಸಾವಿರದಿಂದ ರೂ. 28 ಸಾವಿರ ತನಕ ಬೆಲೆ ಹೆಚ್ಚಳವಾಗಿದ್ದು, ಬೆಲೆ ಹೆಚ್ಚಳ ನಂತರ ಹೆಕ್ಟರ್ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ. 14.43 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 20.36 ಲಕ್ಷ ಬೆಲೆ ಹೊಂದಿದೆ.

ಆಸ್ಟರ್ ನಂತರ ಹೆಕ್ಟರ್ ಸರಣಿ ಎಸ್‌ಯುವಿ ಬೆಲೆಯಲ್ಲೂ ಹೆಚ್ಚಳ ಮಾಡಿದ ಎಂಜಿ ಮೋಟಾರ್

ಹೆಕ್ಟರ್ ಪ್ಲಸ್ ಎಸ್‌ಯುವಿ ಕೂಡಾ ರೂ. 25 ಸಾವಿರದಿಂದ ರೂ. 28 ಸಾವಿರ ತನಕ ಬೆಲೆ ಹೆಚ್ಚಳ ಪಡೆದುಕೊಂಡಿದ್ದು, ಬೆಲೆ ಹೆಚ್ಚಳ ನಂತರ ಹೆಕ್ಟರ್ ಪ್ಲಸ್ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ.14.94 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 20.35 ಲಕ್ಷ ಬೆಲೆ ಹೊಂದಿದೆ.

ಆಸ್ಟರ್ ನಂತರ ಹೆಕ್ಟರ್ ಸರಣಿ ಎಸ್‌ಯುವಿ ಬೆಲೆಯಲ್ಲೂ ಹೆಚ್ಚಳ ಮಾಡಿದ ಎಂಜಿ ಮೋಟಾರ್

ಹಾಗೆಯೇ ಆಸ್ಟರ್ ಎಸ್‌ಯುವಿ ಬೆಲೆಯಲ್ಲಿ ಎಲ್ಲಾ ವೆರಿಯೆಂಟ್‌ಗಳು ರೂ. 10 ಸಾವಿರದಷ್ಟು ದುಬಾರಿಯಾಗಿದ್ದು, ಬೆಲೆ ಹೆಚ್ಚಳ ನಂತರ ಆಸ್ಟರ್ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ. 10.32 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 18.23 ಲಕ್ಷ ಬೆಲೆ ಹೊಂದಿದೆ.

ಆಸ್ಟರ್ ನಂತರ ಹೆಕ್ಟರ್ ಸರಣಿ ಎಸ್‌ಯುವಿ ಬೆಲೆಯಲ್ಲೂ ಹೆಚ್ಚಳ ಮಾಡಿದ ಎಂಜಿ ಮೋಟಾರ್

ಹೊಸ ದರಗಳು ಇಂದಿನಿಂದ ಅಧಿಕೃತವಾಗಿ ಜಾರಿಗೆ ಬಂದಿದ್ದು, ಇದು 2022ರಲ್ಲಿ ಎಂಜಿ ಕಂಪನಿಯು ಮೂರನೇ ಬಾರಿಗೆ ದರ ಹೆಚ್ಚಿಸದಂತಾಗಿದೆ. ಕಳೆದ ಮೇ ನಲ್ಲಿ ದರ ಹೆಚ್ಚಿಸಿದ್ದ ಎಂಜಿ ಕಂಪನಿಯು ಹೆಚ್ಚುತ್ತಿರುವ ಬಿಡಿಭಾಗಗಳ ವೆಚ್ಚ ನಿರ್ವಹಣೆಗಾಗಿ ದರ ಹೆಚ್ಚಿಸುವುದಾಗಿ ಹೇಳಿಕೊಂಡಿದೆ.

ಆಸ್ಟರ್ ನಂತರ ಹೆಕ್ಟರ್ ಸರಣಿ ಎಸ್‌ಯುವಿ ಬೆಲೆಯಲ್ಲೂ ಹೆಚ್ಚಳ ಮಾಡಿದ ಎಂಜಿ ಮೋಟಾರ್

ಇನ್ನು ಭಾರತದಲ್ಲಿ ಪ್ರೀಮಿಯಂ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಎಂಜಿ ಮೋಟಾರ್ ಕಂಪನಿಯು ಗ್ರಾಹಕರ ಸೇವೆಗಳನ್ನು ಸರಳಗೊಳಿಸಲು ಹೊಸ ಸೇವಾ ಉಪಕ್ರಮಗಳನ್ನು ಅಳವಡಿಸಿಕೊಳ್ಳುತ್ತಿದ್ದು, ಕಂಪನಿಯು ಇದೀಗ ಹೊಸದಾಗಿ 'ಎಂಜಿ ಸರ್ವಿಸ್‌ ಆನ್‌ ವ್ಹೀಲ್ಸ್‌' ಆರಂಭಿಸಿದೆ.

ಆಸ್ಟರ್ ನಂತರ ಹೆಕ್ಟರ್ ಸರಣಿ ಎಸ್‌ಯುವಿ ಬೆಲೆಯಲ್ಲೂ ಹೆಚ್ಚಳ ಮಾಡಿದ ಎಂಜಿ ಮೋಟಾರ್

ಎಂಜಿ ಸರ್ವಿಸ್‌ ಆನ್‌ ವ್ಹೀಲ್ಸ್‌ ಅಭಿಯಾನದಡಿ ಗ್ರಾಹಕರು ಇದೀಗ ತಮ್ಮ ಅನುಕೂಲಕ್ಕೆ ತಕ್ಕಂತೆ ಮನೆ ಬಾಗಿಲಿಗೆ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದ್ದು, ತುರ್ತು ಸಂದರ್ಭಗಳಲ್ಲಿ ಕಾರು ಮಾಲೀಕರಿಗೆ ಹೊಸ ಸೇವೆಯು ಸಾಕಷ್ಟು ಅನುಕೂಲಕವಾಗಲಿದೆ.

ಆಸ್ಟರ್ ನಂತರ ಹೆಕ್ಟರ್ ಸರಣಿ ಎಸ್‌ಯುವಿ ಬೆಲೆಯಲ್ಲೂ ಹೆಚ್ಚಳ ಮಾಡಿದ ಎಂಜಿ ಮೋಟಾರ್

ಗ್ರಾಹಕರ ಸೇವೆಗಳ ಮೌಲ್ಯ ಹೆಚ್ಚಿಸಲು ಎಂಜಿ ಮೋಟಾರ್ ಕಂಪನಿಯು ಹಲವಾರು ಉಪಕ್ರಮಗಳನ್ನು ಅಳವಡಿಸಿಕೊಂಡಿದ್ದು, ಕಂಪನಿಯು ಸರ್ವಿಸ್‌ ಆನ್‌ ವ್ಹೀಲ್ಸ್‌‌ಗೆ ಚಾಲನೆ ನೀಡಿದೆ.

ಆಸ್ಟರ್ ನಂತರ ಹೆಕ್ಟರ್ ಸರಣಿ ಎಸ್‌ಯುವಿ ಬೆಲೆಯಲ್ಲೂ ಹೆಚ್ಚಳ ಮಾಡಿದ ಎಂಜಿ ಮೋಟಾರ್

ಹೊಸ ಸರ್ವಿಸ್‌ ಆನ್‌ ವ್ಹೀಲ್ಸ್‌ ಸೇವೆಯನ್ನು ಕಂಪನಿಯು ಸದ್ಯ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದ್ದು, ಶೀಘ್ರದಲ್ಲಿಯೇ ದೇಶಾದ್ಯಂತ ಹೊಸ ಸೇವೆಗೆ ಚಾಲನೆ ನೀಡಲಿದೆ.

ಆಸ್ಟರ್ ನಂತರ ಹೆಕ್ಟರ್ ಸರಣಿ ಎಸ್‌ಯುವಿ ಬೆಲೆಯಲ್ಲೂ ಹೆಚ್ಚಳ ಮಾಡಿದ ಎಂಜಿ ಮೋಟಾರ್

ಈ ಹೊಸ ಸೌಲಭ್ಯದಡಿಯಲ್ಲಿ ಗ್ರಾಹಕರು ತಮ್ಮ ವಾಹನದ ದುರಸ್ತಿ ಮತ್ತು ನಿರ್ವಹಣೆಯನ್ನು ತಮ್ಮ ಮನೆಯ ಬಾಗಿಲಲ್ಲೇ ಪಡೆದುಕೊಳ್ಳಬಹುದಾಗಿದ್ದು, ಸಂಪೂರ್ಣ ತರಬೇತಿ ಪಡೆದ ಮತ್ತು ಪ್ರಮಾಣೀಕೃತ ತಂತ್ರಜ್ಞರ ತಂಡದೊಂದಿಗೆ ಹೊಸ ಸೇವಾ ಉಪಕ್ರಮ ನಿರ್ವಹಿಸಲಾಗುತ್ತದೆ.

ಆಸ್ಟರ್ ನಂತರ ಹೆಕ್ಟರ್ ಸರಣಿ ಎಸ್‌ಯುವಿ ಬೆಲೆಯಲ್ಲೂ ಹೆಚ್ಚಳ ಮಾಡಿದ ಎಂಜಿ ಮೋಟಾರ್

ಹೊಸ ಸೇವಾ ಉಪಕ್ರಮದಡಿಯಲ್ಲಿ ಗ್ರಾಹಕರು ತಮ್ಮ ಅಗತ್ಯತೆಗೆ ಅನುಗುಣವಾಗಿ ಬುಕಿಂಗ್ ಮಾಡುವ ಮೂಲಕ ಸರ್ವಿಸ್‌ ಆನ್‌ ವ್ಹೀಲ್ಸ್‌ ಸೇವೆಯನ್ನು ಪಡೆದುಕೊಳ್ಳಬಹುದಾಗಿದ್ದು, ಎಲ್ಲಾ ಅಗತ್ಯ ಉಪಕರಣಗಳು, ಬಿಡಿ ಭಾಗಗಳನ್ನು ಒಳಗೊಂಡಿರುವ ಸೇವಾ ವಾಹನವು ಮನೆ ಬಾಗಿಲಿಗೆ ಬಂದು ಸೇವೆ ನೀಡುತ್ತವೆ.

ಆಸ್ಟರ್ ನಂತರ ಹೆಕ್ಟರ್ ಸರಣಿ ಎಸ್‌ಯುವಿ ಬೆಲೆಯಲ್ಲೂ ಹೆಚ್ಚಳ ಮಾಡಿದ ಎಂಜಿ ಮೋಟಾರ್

ಮೊಬೈಲ್ ಕಾರ್ಯಾಗಾರ ವಾಹನದಲ್ಲಿ ಹೈಡ್ರಾಲಿಕ್ ಪವರ್ ಪ್ಯಾಕ್‌ನಲ್ಲಿ ಅಳವಡಿಸಲಾಗಿರುವ ಹೈಡ್ರಾಲಿಕ್ ಲಿಫ್ಟ್, ವಾಷಿಂಗ್ ಪಂಪ್‌ನೊಂದಿಗೆ ಏರ್ ಕಂಪ್ರೆಸರ್, ಡ್ರೈ ವಾಶ್‌, ಡಿಜಿಟಲ್ ಆಯಿಲ್ ಡಿಸ್ಪೆನ್ಸರ್, ತ್ಯಾಜ್ಯ ತೈಲ ಸಂಗ್ರಹ ಟ್ಯಾಂಕ್ ಮತ್ತು ಫಿಲ್ಟರ್‌ನೊಂದಿಗೆ ರೆಗ್ಯುಲೇಟರ್-ಲೂಬ್ರಿಕೇಟರ್ (ಎಫ್‌ಆರ್‌ಎಲ್) ಘಟಕದೊಂದಿಗೆ ನ್ಯೂಮ್ಯಾಟಿಕ್ ಲೈನ್ ಅನ್ನು ಹೊಂದಿದೆ.

ಆಸ್ಟರ್ ನಂತರ ಹೆಕ್ಟರ್ ಸರಣಿ ಎಸ್‌ಯುವಿ ಬೆಲೆಯಲ್ಲೂ ಹೆಚ್ಚಳ ಮಾಡಿದ ಎಂಜಿ ಮೋಟಾರ್

ಇದರ ಹೊರತಾಗಿ ಸಂಪೂರ್ಣವಾಗಿ ಜೋಡಿಸಲಾದ ಬಿಡಿಭಾಗಗಳ ರ‍್ಯಾಕ್, ಎಲೆಕ್ಟ್ರಿಕ್ ಕಂಟ್ರೋಲ್ ಬಾಕ್ಸ್ ಮತ್ತು ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ಹೊಂದಿರಲಿದ್ದು, ಇದು ಗ್ರಾಹಕ ಸೇವಾ ಸೂಚ್ಯಂಕ ವೃದ್ದಿಗೆ ಸಹಕಾರಿಯಾಗಲಿದೆ.

ಆಸ್ಟರ್ ನಂತರ ಹೆಕ್ಟರ್ ಸರಣಿ ಎಸ್‌ಯುವಿ ಬೆಲೆಯಲ್ಲೂ ಹೆಚ್ಚಳ ಮಾಡಿದ ಎಂಜಿ ಮೋಟಾರ್

ಇತ್ತೀಚೆಗೆ ಜೆ.ಡಿ. ಪವರ್ ಇಂಡಿಯಾ ಕಂಪನಿಯು ನಡೆದ ಕಾರುಗಳ ಸೇವಾ ವಿಭಾಗದ ಗ್ರಾಹಕ ಸೇವಾ ಸೂಚ್ಯಂಕ ಪ್ರಮಾಣದಲ್ಲಿ ಎಂಜಿ ಮೋಟಾರ್ ಕಂಪನಿಯು ಅಗ್ರಸ್ಥಾನ ಕಾಯ್ದುಕೊಂಡಿದ್ದು, ಹೊಸ ಸೇವಾ ಉಪಕ್ರಮಗಳು ಗ್ರಾಹಕ ಸೇವಾ ಸೂಚ್ಯಂಕ ಸುಧಾರಣೆಗೆ ಮತ್ತಷ್ಟು ಸಹಕಾರಿಯಾಗಲಿದೆ.

Most Read Articles

Kannada
English summary
Mg hector hector plus astor prices hiked up to 28 000 details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X