2021ರ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ MG Motor

ಜನಪ್ರಿಯ ಕಾರು ತಯಾರಕ ಕಂಪನಿಯಾದ ಎಂಜಿ ಮೋಟಾರ್ ಇಂಡಿಯಾ 2021ರ ವಾರ್ಷಿಕ ಕಾರು ಮಾರಾಟ ವರದಿಯನ್ನು ಬಹಿರಂಗಪಡಿಸಿದೆ. ವರದಿಯ ಪ್ರಕಾರ, ಎಂಜಿ ಮೋಟಾರ್ ಕಂಪನಿಯು 2021 ರಲ್ಲಿ 40,273 ಯುನಿಟ್‌ಗಳನ್ನು ಮಾರಾಟಗೊಳಿಸಿದ್ದು, ವರ್ಷದಿಂದ ವರ್ಷಕ್ಕೆ ಶೇಕಡಾ 43 ರಷ್ಟು ಮಾರಾಟ ಬೆಳವಣಿಗೆಯನ್ನು ಕಂಡಿದೆ.

2021ರ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ MG Motor

ಬ್ರಿಟಿಷ್ ತಯಾರಕರು ಹೇಳುವಂತೆ ಇದು ಇತ್ತೀಚೆಗೆ ಪರಿಚಯಿಸಲಾದ ಆಸ್ಟರ್ ಮಿಡ್ ಸೈಜ್ ಎಸ್‍ಯುವಿ ಜೊತೆಗೆ ಇತರ ಮಾದರಿಗಳೊಂದಿಗೆ ಗಮನಾರ್ಹವಾದ ಬೆಳವಣಿಗೆಯ ಪಡೆಯಲು ಸಹಾಯ ಮಾಡಿದೆ. ಅಲ್ಲದೇ 2020ರಲ್ಲಿ ಲಾಕ್ ಡೌನ್ ಮಾರಾಟದ ಮೇಲೆ ಹೆಚ್ಚು ಪರಿಣಾಮವನ್ನು ಬೀರಿತು. ಕಳೆದ ವರ್ಷ ಲಾಕ್ ಡೌನ್ ಇದ್ದರೂ ಅಷ್ಟು ದೊಡ್ಡ ಮಟ್ಟದಲ್ಲಿ ಪರಿಣಾಮವನ್ನು ಬೀರಿಲಿಲ್ಲ, ಅಲ್ಲದೇ ಎಂಜಿ ಆಸ್ಟರ್ ದಾಖಲೆ ಮಟ್ಟದ ಬೇಡಿಕೆ ಮತ್ತು ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಕಾರಿನ ಮಾಟವು ಹೆಚ್ಚಾಗಿದೆ.

2021ರ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ MG Motor

ಎಂಜಿ ಮೋಟಾರ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಚಾಬಾ ಮಾತನಾಡಿ, 2021ರ ವರ್ಷವು ಇಡೀ ಆಟೋ ಉದ್ಯಮಕ್ಕೆ ಸವಾಲಿನ ವರ್ಷವಾಗಿತ್ತು. SAIC-ಮಾಲೀಕತ್ವದ ಬ್ರ್ಯಾಂಡ್ 2019 ರಲ್ಲಿ ಹೆಕ್ಟರ್ ಮಿಡ್ ಸೈಜ್ ಎಸ್‍ಯುವಿಯೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಪಾದಾರ್ಪಣೆ ಮಾಡಿತು .

2021ರ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ MG Motor

ಕಳೆದ ವರ್ಷದ ಆರಂಭದಲ್ಲಿ, ಕೆಲವು ಸೌಂದರ್ಯವರ್ಧಕ ಮತ್ತು ವೈಶಿಷ್ಟ್ಯದ ನವೀಕರಣಗಳೊಂದಿಗೆ ಮೂರು-ಸಾಲು ರೂಪಾಂತರವನ್ನು ಸೇರಿಸುವುದರೊಂದಿಗೆ ಅದರ ಶ್ರೇಣಿಯನ್ನು ವಿಸ್ತರಿಸಲಾಯಿತು ಎಂದು ಹೇಳಿದರು,

2021ರ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ MG Motor

2021ರಲ್ಲಿ ಬ್ರ್ಯಾಂಡ್ ಹೆಕ್ಟರ್ ಮಾರಾಟದಲ್ಲಿ ಶೇ.21.5 ಬೆಳವಣಿಗೆಯಾದರೆ, ಎಂಜಿ ಜೆಡ್ಎಸ್ ಇವಿ ಶೇ.45 ರಷ್ಟು ಬೃಹತ್ ಬೆಳವಣಿಗೆಯನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದೆ ಮತ್ತು ಪ್ರಮುಖ ಗ್ಲೋಸ್ಟರ್ ಪೂರ್ಣ-ಗಾತ್ರದ ಎಸ್‍ಯುವಿಯು ಶೇ.252 ರಷ್ಟಿದೆ. ಕಂಪನಿಯು ಗ್ರಾಹಕರ ಬೇಡಿಕೆಯನ್ನು ಪೂರೈಸುವಾಗ ಶ್ರೇಣಿಯನ್ನು ಕ್ರೋಢೀಕರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಸಹ ಗಮನಿಸಲಾಗಿದೆ.

2021ರ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ MG Motor

2020ರ ಆರಂಭದಲ್ಲಿ, ಎಂಜಿ ಭಾರತಕ್ಕೆ ತನ್ನ ಎರಡನೇ ಕೊಡುಗೆಯಾಗಿ ಜೆಡ್ಎಸ್ ಇವಿಯನ್ನು ಬಿಡುಗಡೆ ಮಾಡಿತು ಮತ್ತು ಕಳೆದ ವರ್ಷ ಇದು ಸಣ್ಣ ನವೀಕರಣವನ್ನು ಸಹ ಪಡೆಯಿತು. ಕೆಲವೇ ತಿಂಗಳುಗಳ ಹಿಂದೆ, ಎಂಜಿ ಸ್ಟರ್ ಅನ್ನು ತಂದಿತು, ಇದು ಜಾಗತಿಕ ಮಾರುಕಟ್ಟೆಗಳಲ್ಲಿ ಮಾರಾಟವಾದ ಪೆಟ್ರೋಲ್-ಚಾಲಿತ ಫೇಸ್‌ಲಿಫ್ಟೆಡ್ ಜಿಡ್ಎಸ್ ಮಾದರಿಯಾಗಿದೆ.

2021ರ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ MG Motor

ಎಂಜಿ ಮೋಟಾರ್ ಕಂಪನಿಯು ಹೊಸ ಆಸ್ಟರ್ ಕಾರು ಬಿಡುಗಡೆಯೊಂದಿಗೆ ಪ್ರತಿಸ್ಪರ್ಧಿ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುತ್ತಿದೆ. ಈ ಹೊಸ ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ ಸ್ಟೈಲ್, ಸೂಪರ್, ಸ್ಮಾರ್ಟ್, ಸ್ಯಾವಿ ಮತ್ತು ಶಾರ್ಪ್ ವೆರಿಯೆಂಟ್‌ಗಳಲ್ಲಿ ಲಭ್ಯವಿದೆ.

2021ರ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ MG Motor

ಈ ಎಂಜಿ ಆಸ್ಟರ್ಸ್ಪೋರ್ಟಿ ವಿನ್ಯಾಸದೊಂದಿಗೆ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್‌ಗಳನ್ನು ಜೋಡಣೆ ಹೊಂದಿದ್ದು, ವಿವಿಧ ಆಕ್ಸೆಸರಿಸ್‌ಗಳು ಕಾರಿಗೆ ಐಷಾರಾಮಿ ಲುಕ್ ನೀಡಲಿವೆ. ಈ ಕಾರಿನ ಹೊರಭಾಗದ ತಾಂತ್ರಿಕ ಅಂಶಗಳಿಗೆ ಸುರಕ್ಷತೆ ನೀಡುವ 360 ಡಿಗ್ರಿ ಕ್ಯಾಮೆರಾ, ಎಮರ್ಜೆನ್ಸಿ ಕಾರ್ ಕಿಟ್, ಟೈರ್ ಇನ್‌ಪ್ಲಾಟರ್, ಬೈಸಿಕಲ್ ಕ್ಯಾರಿಯರ್, ಪೆಡಲ್ ಲ್ಯಾಂಪ್, ಸೈಡ್ ಸ್ಟೆಪ್ ಬೋರ್ಡ್, ಇಲ್ಯೂಮೆಟೆಡ್ ವ್ಹೀಲ್ ಹಬ್, ಸೈಡ್ ಸ್ಕೂಪ್, ರಿಯರ್ ಬುಲ್ ಬಾರ್, ಸ್ಪಾಯ್ಲರ್ ಎಕ್ಸ್‌ಟೆಕ್ಷನ್, ಕಾರ್ ಕವರ್, ಪೆಂಟ್ ಪ್ರೊಟೆಕ್ಷನ್ ಕೊಟಿಂಗ್, ಕ್ರೊಮ್ ಗಾರ್ನಿಶ್ ನೀಡಲಾಗಿದೆ.

2021ರ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ MG Motor

ಇನ್ನು ಎಂಜಿ ಮೋಟಾರ್ ಇಂಡಿಯಾ ಕಂಪನಿಯು ನಾನ್ ಫಂಗಬಲ್ ಟೋಕನ್ (ಎನ್‌ಎಫ್‌ಟಿ) ಬಿಡುಗಡೆಗೊಳಿಸಿದೆ. ಈ ಮೂಲಕ ಬ್ರಿಟಿಷ್ ಮೂಲದ ಆಟೋಮೊಬೈಲ್ ಕಂಪನಿಯು ಭಾರತದಲ್ಲಿ ಎನ್‌ಎಫ್‌ಟಿ ಆರಂಭಿಸಿದ ಮೊದಲ ಕಾರು ತಯಾರಕ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಂಪನಿಯು ಹೇಳಿರುವಂತೆ ಎನ್‌ಎಫ್‌ಟಿಯಿಂದ ಸಂಗ್ರಹಿಸಲಾಗುವ ಹಣವನ್ನು ಸಮುದಾಯ ಸೇವೆಗಾಗಿ ಬಳಸಲಾಗುತ್ತದೆ.

2021ರ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ MG Motor

ಎಂಜಿ ಮೋಟಾರ್ ಇಂಡಿಯಾ ಕಂಪನಿಯು ಡಿಸೆಂಬರ್ 28ರಿಂದ ಎನ್‌ಎಫ್‌ಟಿ ಮಾರಾಟವನ್ನು ಆರಂಭಿಸಲಿದೆ. ಕಂಪನಿಯು ಬಿಡುಗಡೆಯ ಭಾಗವಾಗಿ 1,111 ಯುನಿಟ್ ಗಳನ್ನು ಪರಿಚಯಿಸಲಿದೆ. ಕಂಪನಿಯು ತನ್ನ ಮೊದಲ ಎನ್‌ಎಫ್‌ಟಿಯನ್ನು KoineArt ನ NgageN ಪ್ಲಾಟ್‌ಫಾರಂನಲ್ಲಿ ಬಿಡುಗಡೆಗೊಳಿಸಲಿದೆ. ಇದನ್ನು ಎಂಜಿ ಕಂಪನಿಯವಹಿವಾಟುಗಳಿಗಾಗಿ ವಿಶೇಷವಾಗಿ ಆಪ್ಟಿಮೈಸ್ ಮಾಡಲಾಗಿದೆ.

2021ರ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ MG Motor

ಈ ಎನ್‌ಎಫ್‌ಟಿ ಎಂದರೆ ನಾನ್ ಫಂಗಿಬಲ್ ಟೋಕನ್. ಎನ್‌ಎಫ್‌ಟಿ ಬಿಟ್‌ಕಾಯಿನ್ ಅಥವಾ ಇತರ ಕ್ರಿಪ್ಟೋಕರೆನ್ಸಿಗಳಂತೆಯೇ ಕ್ರಿಪ್ಟೋ ಟೋಕನ್ ಆಗಿದೆ. ಎನ್‌ಎಫ್‌ಟಿ ಒಂದು ರೀತಿಯ ಡಿಜಿಟಲ್ ಆಸ್ತಿಯಾಗಿದ್ದು, ಮೌಲ್ಯವನ್ನು ಉತ್ಪಾದಿಸುತ್ತದೆ. ಉದಾಹರಣೆಗೆ, ಇಬ್ಬರು ವ್ಯಕ್ತಿಗಳು ಬಿಟ್‌ಕಾಯಿನ್‌ಗಳನ್ನು ಹೊಂದಿದ್ದರೆ, ಅವರು ಅವುಗಳನ್ನು ವಿನಿಮಯ ಮಾಡಿಕೊಳ್ಳಬಹುದು.

2021ರ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ MG Motor

ಇದರೊಂದಿಗೆ ಡಿಜಿಟಲ್ ಕಲೆ, ಸಂಗೀತ, ಚಲನಚಿತ್ರ, ಆಟಗಳು ಅಥವಾ ಯಾವುದೇ ಸಂಗ್ರಹಣೆಯಂತಹ ಡಿಜಿಟಲ್ ಸ್ವತ್ತುಗಳಲ್ಲಿ ಎನ್‌ಎಫ್‌ಟಿಗಳನ್ನು ಕಾಣಬಹುದು. ಇವು ಅನನ್ಯ ಕಲಾಕೃತಿಗಳಾಗಿರುವುದರಿಂದ, ಪ್ರತಿಯೊಂದು ಟೋಕನ್ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಅವುಗಳನ್ನು ವಿನಿಮಯ ಮಾಡಿಕೊಳ್ಳಲಾಗುವುದಿಲ್ಲ. ಈ ಡಿಜಿಟಲ್ ಟೋಕನ್ ಮಾಲೀಕತ್ವದ ಮಾನ್ಯ ಪ್ರಮಾಣಪತ್ರವನ್ನು ಪಡೆಯುತ್ತದೆ.

2021ರ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ MG Motor

ಇನ್ನು ಎಂಜಿ ಕಂಪನಿಯು ಅಟೆರೊ ಕಂಪನಿಯ ಸಹಯೋಗದೊಂದಿಗೆ ಇತ್ತೀಚೆಗೆ ಸಂಪೂರ್ಣ ಬ್ಯಾಟರಿ ಮರು ಬಳಕೆಯನ್ನು ಮಾಡಿದೆ. ಈ ಎರಡು ಕಂಪನಿಗಳು ಈ ವರ್ಷದ ಮೇ ತಿಂಗಳಿನಲ್ಲಿ ಎಲೆಕ್ಟ್ರಿಕ್ ವಾಹನ ಬ್ಯಾಟರಿಗಳನ್ನು ಮರುಬಳಕೆ ಮಾಡಲು ಕೈಜೋಡಿಸಿದ್ದವು. ಅಟೆರೊ ಕಂಪನಿಯು ಎಂಜಿ ಮೋಟಾರ್‌ನ ಗುರುಗ್ರಾಮ ಡೀಲರ್‌ಶಿಪ್‌ನಿಂದ 310 ಕೆ.ಜಿ ತೂಕದ ಬ್ಯಾಟರಿ ಜಂಕ್ ಅನ್ನು ಸಂಗ್ರಹಿಸಿ ಮರುಬಳಕೆ ಮಾಡಿದೆ.

Most Read Articles

Kannada
English summary
Mg motor india 2021 sales growth 43 percent details
Story first published: Saturday, January 1, 2022, 17:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X