India
YouTube

ಭಾರತದಲ್ಲಿ ಮಾನ್ಸೂನ್ ವಿಶೇಷ ಕೊಡುಗೆಗಳನ್ನು ಪರಿಚಯಿಸಿದ ಎಂಜಿ ಮೋಟಾರ್

ಮಧ್ಯಮ ಗಾತ್ರದ ಪ್ರೀಮಿಯಂ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಎಂಜಿ ಮೋಟಾರ್ ಕಂಪನಿಯ ಮಾನ್ಸೂನ್ ವಿಶೇಷ ಕೊಡುಗೆಗಳನ್ನು ಪ್ರಕಟಿಸಿದ್ದು, ಮಳೆಗಾಲದಲ್ಲಿ ಕಾರುಗಳ ತಾಂತ್ರಿಕ ಸೌಲಭ್ಯಗಳಿಗೆ ವಿಶೇಷ ಕಾಳಜಿ ವಹಿಸಲು ಹೊಸ ಸೇವೆಗಳು ಸಾಕಷ್ಟು ಸಹಕಾರಿಯಾಗಿವೆ.

ಭಾರತದಲ್ಲಿ ಮಾನ್ಸೂನ್ ವಿಶೇಷ ಕೊಡುಗೆಗಳನ್ನು ಪರಿಚಯಿಸಿದ ಎಂಜಿ ಮೋಟಾರ್

ಎಂಜಿ ಮೋಟಾರ್ ಇಂಡಿಯಾ ಕಂಪನಿಯು ತನ್ನ ಗ್ರಾಹಕರಿಗೆ ಮಾನ್ಸೂನ್ ವಿಶೇಷ ಕೊಡುಗೆಗಳನ್ನು ಇದೇ ತಿಂಗಳು 18ರಿಂದ ಆರಂಭಿಸಿದ್ದು, ಮಾನ್ಸೂನ್ ಕೊಡುಗೆಯ ಮಾಹಿತಿಯನ್ನು ಕಂಪನಿಯು ತನ್ನ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಹಂಚಿಕೊಂಡಿದೆ.

ಭಾರತದಲ್ಲಿ ಮಾನ್ಸೂನ್ ವಿಶೇಷ ಕೊಡುಗೆಗಳನ್ನು ಪರಿಚಯಿಸಿದ ಎಂಜಿ ಮೋಟಾರ್

ಮಾನ್ಸೂನ್ ವಿಶೇಷ ಕೊಡುಗೆಗಳ ಮೂಲಕ ಕಾರುಗಳ ತಾಂತ್ರಿಕ ಸೇವೆಗಳಿಗೆ ವಿಶೇಷ ಸೇವೆಗಳನ್ನು ಒದಗಿಸಲಾಗುತ್ತಿದ್ದು, ಗ್ರಾಹಕರು ಹೆಚ್ಚಿನ ಮಾಹಿತಿಗಾಗಿ ಕಂಪನಿಯ ಡೀಲರ್‌ಶಿಪ್‌ಗೆ ಭೇಟಿ ನೀಡಬಹುದೆಂದು ಎಂಜಿ ಕಂಪನಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತದಲ್ಲಿ ಮಾನ್ಸೂನ್ ವಿಶೇಷ ಕೊಡುಗೆಗಳನ್ನು ಪರಿಚಯಿಸಿದ ಎಂಜಿ ಮೋಟಾರ್

ವಿಶೇಷ ಕೊಡುಗೆಗಳ ಮೂಲಕ ದೀರ್ಘ ಮಾನ್ಸೂನ್ ಪ್ರಯಾಣಕ್ಕಾಗಿ ನಿಮ್ಮ ಕಾರನ್ನು ಸಜ್ಜುಗೊಳಿಸಿಕೊಳ್ಳಬಹುದಾಗಿದ್ದು, ಮಾನ್ಸೂನ್ ಕೊಡುಗೆಯ ಅಡಿಯಲ್ಲಿ ಗ್ರಾಹಕರು ಕಾರಿನ ಪ್ರಮುಖ ತಾಂತ್ರಿಕ ಸೌಲಭ್ಯಗಳ ಸೇವೆಗಳ ಮೇಲಿನ ಶುಲ್ಕದಲ್ಲಿ ಸಾಕಷ್ಟು ಉಳಿತಾಯ ಮಾಡಬಹುದಾಗಿದೆ.

ಭಾರತದಲ್ಲಿ ಮಾನ್ಸೂನ್ ವಿಶೇಷ ಕೊಡುಗೆಗಳನ್ನು ಪರಿಚಯಿಸಿದ ಎಂಜಿ ಮೋಟಾರ್

ಒಂದೇ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ವಿವಿಧ ಸೇವೆಗಳನ್ನು ಪೂರೈಸಲಿರುವ ಎಂಜಿ ಮೋಟಾರ್ ಕಂಪನಿಯು ಸಮಗ್ರ ವಾಹನ ತಪಾಸಣೆ, ಕಾರ್ ಟಾಪ್ ವಾಶ್/ಡ್ರೈ ವಾಶ್, ಫ್ರಂಟ್ ವೈಪರ್ ಬ್ಲೇಡ್‌ಗಳ ಮೇಲೆ ಶೇ.50 ರಿಯಾಯಿತಿ, ಕಾಂಪ್ಲಿಮೆಂಟರಿಯಾಗಿ ಬ್ರೇಕ್ ಪ್ಯಾಡ್ ಕ್ಲೀನಿಂಗ್ ಮತ್ತು ಮೌಲ್ಯವರ್ಧಿತ ಸೇವೆಗಳು ಸೇರಿದಂತೆ ಟೈರ್ ಮತ್ತು ಬ್ಯಾಟರಿಗಳ ಮೇಲೆ ಆಕರ್ಷಕ ಕೊಡುಗೆಗಳನ್ನು ನೀಡಲಾಗುತ್ತಿದೆ.

ಭಾರತದಲ್ಲಿ ಮಾನ್ಸೂನ್ ವಿಶೇಷ ಕೊಡುಗೆಗಳನ್ನು ಪರಿಚಯಿಸಿದ ಎಂಜಿ ಮೋಟಾರ್

ಮಾನ್ಸೂನ್ ಸಂದರ್ಭದಲ್ಲಿ ಕಾರನ್ನು ಹೆಚ್ಚಿನ ಸಮಯ ಹೊರಭಾಗದಲ್ಲಿಯೇ ಪಾರ್ಕಿಂಗ್ ಮಾಡುವುದರಿಂದ ಹಲವಾರು ತಾಂತ್ರಿಕ ಸಮಸ್ಯೆಗಳಿಗೆ ತುತ್ತಾಗುವುದಲ್ಲದೆ ಚಾಲನೆ ವೇಳೆ ಅದು ಸಮಸ್ಯೆ ಉಂಟುಮಾಡಬಹುದು. ಹೀಗಾಗಿ ಕಾಲಕಾಲಕ್ಕೆ ಕಾರುಗಳ ತಾಂತ್ರಿಕ ಸೌಲಭ್ಯಗಳ ತಪಾಸಣೆಯು ಚಾಲನೆಯನ್ನು ಸುರಕ್ಷಿತವಾಗಿಸುತ್ತಲ್ಲದೆ ವಾಹನ ಮೌಲ್ಯವನ್ನು ಕಾಯ್ದುಕೊಳ್ಳಲು ಸಹಕಾರಿಯಾಗುತ್ತವೆ.

ಭಾರತದಲ್ಲಿ ಮಾನ್ಸೂನ್ ವಿಶೇಷ ಕೊಡುಗೆಗಳನ್ನು ಪರಿಚಯಿಸಿದ ಎಂಜಿ ಮೋಟಾರ್

ಸದ್ಯ ಎಂಜಿ ಕಂಪನಿಯು ಹೊಸ ಕಾರುಗಳ ಮಾರಾಟದೊಂದಿಗೆ ಗ್ರಾಹಕರ ಸೇವೆಗಳಿಗೂ ಹೆಚ್ಚಿನ ಒತ್ತು ನೀಡುತ್ತಿದ್ದು, ಮಾನ್ಸೂನ್ ವಿಶೇಷ ಕೊಡುಗೆಗಳ ಅಡಿಯಲ್ಲಿ ರಿಯಾಯ್ತಿ ದರದಲ್ಲಿ ಸೇವೆಗಳನ್ನು ಒದಗಿಸುವ ಭರವಸೆ ನೀಡಿದೆ.

ಭಾರತದಲ್ಲಿ ಮಾನ್ಸೂನ್ ವಿಶೇಷ ಕೊಡುಗೆಗಳನ್ನು ಪರಿಚಯಿಸಿದ ಎಂಜಿ ಮೋಟಾರ್

ಎಂಜಿ ಮೋಟಾರ್ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಪ್ರಸ್ತುತ ಐದು ಕಾರು ಮಾದರಿಗಳ ಮಾರಾಟವನ್ನು ಹೊಂದಿದ್ದು, ಗ್ರಾಹಕರ ಬೇಡಿಕೆಯೆಂತೆ ಆಸ್ಟರ್, ಹೆಕ್ಟರ್, ಹೆಕ್ಟರ್ ಪ್ಲಸ್, ಜೆಡ್ಎಸ್ ಇವಿ, ಗ್ಲೊಸ್ಟರ್ ಕಾರು ಮಾದರಿಗಳ ಮೂಲಕ ಪ್ರತಿಸ್ಪರ್ಧಿ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುತ್ತಿದೆ.

ಭಾರತದಲ್ಲಿ ಮಾನ್ಸೂನ್ ವಿಶೇಷ ಕೊಡುಗೆಗಳನ್ನು ಪರಿಚಯಿಸಿದ ಎಂಜಿ ಮೋಟಾರ್

ಮಾನ್ಸೂನ್ ಆಫರ್‌ನಲ್ಲಿ ಮೇಲಿನ ಎಲ್ಲಾ ಕಾರು ಮಾದರಿಗಳ ಮೇಲೆ ವಿವಿಧ ಕೊಡುಗೆಗಳನ್ನು ನೀಡಲಾಗುತ್ತಿದ್ದು, ವಿವಿಧ ಆಫರ್‌ಗಳ ಮೂಲಕ ಎಂಜಿ ಕಂಪನಿಯು ಗ್ರಾಹಕರ ಬೇಡಿಕೆಯಲ್ಲಿ ಮುಂಚೂಣಿ ಸಾಧಿಸುತ್ತಿದೆ.

ಭಾರತದಲ್ಲಿ ಮಾನ್ಸೂನ್ ವಿಶೇಷ ಕೊಡುಗೆಗಳನ್ನು ಪರಿಚಯಿಸಿದ ಎಂಜಿ ಮೋಟಾರ್

ಕಳೆದ ತಿಂಗಳು ಜೂನ್‌ನಲ್ಲಿ ಕಂಪನಿಯು 4,503 ಯುನಿಟ್ ಕಾರುಗಳು ಮಾರಾಟ ಮಾಡುವ ಮೂಲಕ ವರ್ಷದಿಂದ ವರ್ಷಕ್ಕೆ ಉತ್ತಮ ಬೆಳವಣಿಗೆ ಸಾಧಿಸುತ್ತಿದ್ದು, ಕಂಪನಿಯು ಕಳೆದ ಕಾರು ಮಾರಾಟದಲ್ಲಿ ಶೇ.27 ರಷ್ಟು ಹೆಚ್ಚು ಬೇಡಿಕೆ ಪಡೆದುಕೊಂಡಿದೆ.

ಭಾರತದಲ್ಲಿ ಮಾನ್ಸೂನ್ ವಿಶೇಷ ಕೊಡುಗೆಗಳನ್ನು ಪರಿಚಯಿಸಿದ ಎಂಜಿ ಮೋಟಾರ್

ಕಂಪನಿಯ ಪ್ರಕಾರ ಪ್ರಮುಖ ಎಸ್‌ಯುವಿ ಮಾದರಿಗಳಾದ ಹೆಕ್ಟರ್ ಮತ್ತು ಜೆಡ್ಎಸ್ ಮಾದರಿಗಳು ಉತ್ತಮ ಬೇಡಿಕೆ ದಾಖಲಿಸಿದ್ದು, ಸುಧಾರಿತ ಸೆಮಿಕಂಡಕ್ಟರ್ ಪೂರೈಕೆಯಿಂದಾಗಿ ಮಾರಾಟವು ಹೆಚ್ಚುತ್ತಿರುವುದಾಗಿ ಕಂಪನಿಯು ಹೇಳಿಕೊಂಡಿದೆ.

ಭಾರತದಲ್ಲಿ ಮಾನ್ಸೂನ್ ವಿಶೇಷ ಕೊಡುಗೆಗಳನ್ನು ಪರಿಚಯಿಸಿದ ಎಂಜಿ ಮೋಟಾರ್

ಉತ್ಪಾದನೆ ಮತ್ತು ಪೂರೈಕೆ-ಸರಪಳಿ ಸಮಸ್ಯೆಗಳನ್ನು ಪರಿಹರಿಸಲು ಕಾರು ತಯಾರಕರು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈ ವರ್ಷಾಂತ್ಯಕ್ಕೆ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆಯಿದೆ. ಕಂಪನಿಯು ಗುಜರಾತ್‌ನಲ್ಲಿರುವ ತನ್ನ ಹಾಲೋಲ್ ಘಟಕದಲ್ಲಿ ಕಾರುಗಳನ್ನು ತಯಾರಿಸುತ್ತಿದ್ದು, ಈ ಸ್ಥಾವರದಲ್ಲಿ ವಾರ್ಷಿಕವಾಗಿ 80,000 ಕಾರುಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಭಾರತದಲ್ಲಿ ಮಾನ್ಸೂನ್ ವಿಶೇಷ ಕೊಡುಗೆಗಳನ್ನು ಪರಿಚಯಿಸಿದ ಎಂಜಿ ಮೋಟಾರ್

ಈ ಮೂಲಕ ಕಂಪನಿಯು ಪ್ರತ್ಯಕ್ಷವಾಗಿ 2,500 ಉದ್ಯೋಗಿಗಳಿಗೆ ಉದ್ಯೋಗವನ್ನು ಒದಗಿಸುತ್ತಿದ್ದು, ಹೊಸ ಕಾರು ಉತ್ಪನ್ನಗಳೊಂದಿಗೆ ಕಂಪನಿಯು ಸಾಕಷ್ಟು ಬೇಡಿಕೆ ಪಡೆದುಕೊಳ್ಳುತ್ತಿದೆ. ಕಂಪನಿಯು ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಕಾರು ಉತ್ಪನ್ನಗಳನ್ನು ಪರಿಚಯಿಸಲು ಮುಂದಾಗಿದ್ದು, ಎಲೆಕ್ಟ್ರಿಕ್ ಕಾರುಗಳ ಮಾದರಿಗಳ ಮೇಲೆ ವಿಶೇಷ ಆಸಕ್ತಿ ವಹಿಸಿದೆ.

ಭಾರತದಲ್ಲಿ ಮಾನ್ಸೂನ್ ವಿಶೇಷ ಕೊಡುಗೆಗಳನ್ನು ಪರಿಚಯಿಸಿದ ಎಂಜಿ ಮೋಟಾರ್

ಸದ್ಯ ಜೆಡ್ಎಸ್ ಇವಿ ಮಾರಾಟ ಮಾಡುತ್ತಿರುವ ಎಂಜಿ ಕಂಪನಿಯು ಮುಂಬರುವ ದಿನಗಳಲ್ಲಿ ಮಧ್ಯಮ ಕ್ರಮಾಂಕದ ಮತ್ತೊಂದು ಇವಿ ಕಾರು ಪರಿಚಯಿಸುವ ಸಿದ್ದತೆಯಲ್ಲಿದ್ದು, ಹೊಸ ಇವಿ ಕಾರು ರೂ.10 ಲಕ್ಷ ಬೆಲೆಯೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

Most Read Articles

Kannada
English summary
Mg motor india introduced monsoon offers details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X