ಗ್ರಾಹಕರ ಮನೆ ಬಾಗಿಲಿಗೆ ಸೇವೆ ಒದಗಿಸಲು ಸರ್ವಿಸ್‌ ಆನ್‌ ವ್ಹೀಲ್ಸ್‌ ಆರಂಭಿಸಿದ ಎಂಜಿ ಮೋಟಾರ್

ಭಾರತದಲ್ಲಿ ಪ್ರೀಮಿಯಂ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಎಂಜಿ ಮೋಟಾರ್ ಕಂಪನಿಯು ಗ್ರಾಹಕರ ಸೇವೆಗಳನ್ನು ಸರಳಗೊಳಿಸಲು ಹೊಸ ಸೇವಾ ಉಪಕ್ರಮಗಳನ್ನು ಅಳವಡಿಸಿಕೊಳ್ಳುತ್ತಿದ್ದು, ಕಂಪನಿಯು ಇದೀಗ ಹೊಸದಾಗಿ 'ಎಂಜಿ ಸರ್ವಿಸ್‌ ಆನ್‌ ವ್ಹೀಲ್ಸ್‌' ಆರಂಭಿಸಿದೆ.

ಗ್ರಾಹಕರ ಮನೆ ಬಾಗಿಲಿಗೆ ಸೇವೆ ಒದಗಿಸಲು ಸರ್ವಿಸ್‌ ಆನ್‌ ವ್ಹೀಲ್ಸ್‌ ಆರಂಭಿಸಿದ ಎಂಜಿ ಮೋಟಾರ್

ಎಂಜಿ ಸರ್ವಿಸ್‌ ಆನ್‌ ವ್ಹೀಲ್ಸ್‌ ಅಭಿಯಾನದಡಿ ಗ್ರಾಹಕರು ಇದೀಗ ತಮ್ಮ ಅನುಕೂಲಕ್ಕೆ ತಕ್ಕಂತೆ ಮನೆ ಬಾಗಿಲಿಗೆ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದ್ದು, ತುರ್ತು ಸಂದರ್ಭಗಳಲ್ಲಿ ಕಾರು ಮಾಲೀಕರಿಗೆ ಹೊಸ ಸೇವೆಯು ಸಾಕಷ್ಟು ಅನುಕೂಲಕವಾಗಲಿದೆ. ಗ್ರಾಹಕರ ಸೇವೆಗಳ ಮೌಲ್ಯ ಹೆಚ್ಚಿಸಲು ಎಂಜಿ ಮೋಟಾರ್ ಕಂಪನಿಯು ಹಲವಾರು ಉಪಕ್ರಮಗಳನ್ನು ಅಳವಡಿಸಿಕೊಂಡಿದ್ದು, ಕಂಪನಿಯು ಸರ್ವಿಸ್‌ ಆನ್‌ ವ್ಹೀಲ್ಸ್‌‌ಗೆ ಚಾಲನೆ ನೀಡಿದೆ.

ಗ್ರಾಹಕರ ಮನೆ ಬಾಗಿಲಿಗೆ ಸೇವೆ ಒದಗಿಸಲು ಸರ್ವಿಸ್‌ ಆನ್‌ ವ್ಹೀಲ್ಸ್‌ ಆರಂಭಿಸಿದ ಎಂಜಿ ಮೋಟಾರ್

ಹೊಸ ಸರ್ವಿಸ್‌ ಆನ್‌ ವ್ಹೀಲ್ಸ್‌ ಸೇವೆಯನ್ನು ಕಂಪನಿಯು ಸದ್ಯ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದ್ದು, ಶೀಘ್ರದಲ್ಲಿಯೇ ದೇಶಾದ್ಯಂತ ಹೊಸ ಸೇವೆಗೆ ಚಾಲನೆ ನೀಡಲಿದೆ.

ಗ್ರಾಹಕರ ಮನೆ ಬಾಗಿಲಿಗೆ ಸೇವೆ ಒದಗಿಸಲು ಸರ್ವಿಸ್‌ ಆನ್‌ ವ್ಹೀಲ್ಸ್‌ ಆರಂಭಿಸಿದ ಎಂಜಿ ಮೋಟಾರ್

ಈ ಹೊಸ ಸೌಲಭ್ಯದಡಿಯಲ್ಲಿ ಗ್ರಾಹಕರು ತಮ್ಮ ವಾಹನದ ದುರಸ್ತಿ ಮತ್ತು ನಿರ್ವಹಣೆಯನ್ನು ತಮ್ಮ ಮನೆಯ ಬಾಗಿಲಲ್ಲೇ ಪಡೆದುಕೊಳ್ಳಬಹುದಾಗಿದ್ದು, ಸಂಪೂರ್ಣ ತರಬೇತಿ ಪಡೆದ ಮತ್ತು ಪ್ರಮಾಣೀಕೃತ ತಂತ್ರಜ್ಞರ ತಂಡದೊಂದಿಗೆ ಹೊಸ ಸೇವಾ ಉಪಕ್ರಮ ನಿರ್ವಹಿಸಲಾಗುತ್ತದೆ.

ಗ್ರಾಹಕರ ಮನೆ ಬಾಗಿಲಿಗೆ ಸೇವೆ ಒದಗಿಸಲು ಸರ್ವಿಸ್‌ ಆನ್‌ ವ್ಹೀಲ್ಸ್‌ ಆರಂಭಿಸಿದ ಎಂಜಿ ಮೋಟಾರ್

ಹೊಸ ಸೇವಾ ಉಪಕ್ರಮದಡಿಯಲ್ಲಿ ಗ್ರಾಹಕರು ತಮ್ಮ ಅಗತ್ಯತೆಗೆ ಅನುಗುಣವಾಗಿ ಬುಕಿಂಗ್ ಮಾಡುವ ಮೂಲಕ ಸರ್ವಿಸ್‌ ಆನ್‌ ವ್ಹೀಲ್ಸ್‌ ಸೇವೆಯನ್ನು ಪಡೆದುಕೊಳ್ಳಬಹುದಾಗಿದ್ದು, ಎಲ್ಲಾ ಅಗತ್ಯ ಉಪಕರಣಗಳು, ಬಿಡಿ ಭಾಗಗಳನ್ನು ಒಳಗೊಂಡಿರುವ ಸೇವಾ ವಾಹನವು ಮನೆ ಬಾಗಿಲಿಗೆ ಬಂದು ಸೇವೆ ನೀಡುತ್ತವೆ.

ಗ್ರಾಹಕರ ಮನೆ ಬಾಗಿಲಿಗೆ ಸೇವೆ ಒದಗಿಸಲು ಸರ್ವಿಸ್‌ ಆನ್‌ ವ್ಹೀಲ್ಸ್‌ ಆರಂಭಿಸಿದ ಎಂಜಿ ಮೋಟಾರ್

ಮೊಬೈಲ್ ಕಾರ್ಯಾಗಾರ ವಾಹನದಲ್ಲಿ ಹೈಡ್ರಾಲಿಕ್ ಪವರ್ ಪ್ಯಾಕ್‌ನಲ್ಲಿ ಅಳವಡಿಸಲಾಗಿರುವ ಹೈಡ್ರಾಲಿಕ್ ಲಿಫ್ಟ್, ವಾಷಿಂಗ್ ಪಂಪ್‌ನೊಂದಿಗೆ ಏರ್ ಕಂಪ್ರೆಸರ್, ಡ್ರೈ ವಾಶ್‌, ಡಿಜಿಟಲ್ ಆಯಿಲ್ ಡಿಸ್ಪೆನ್ಸರ್, ತ್ಯಾಜ್ಯ ತೈಲ ಸಂಗ್ರಹ ಟ್ಯಾಂಕ್ ಮತ್ತು ಫಿಲ್ಟರ್‌ನೊಂದಿಗೆ ರೆಗ್ಯುಲೇಟರ್-ಲೂಬ್ರಿಕೇಟರ್ (ಎಫ್‌ಆರ್‌ಎಲ್) ಘಟಕದೊಂದಿಗೆ ನ್ಯೂಮ್ಯಾಟಿಕ್ ಲೈನ್ ಅನ್ನು ಹೊಂದಿದೆ.

ಗ್ರಾಹಕರ ಮನೆ ಬಾಗಿಲಿಗೆ ಸೇವೆ ಒದಗಿಸಲು ಸರ್ವಿಸ್‌ ಆನ್‌ ವ್ಹೀಲ್ಸ್‌ ಆರಂಭಿಸಿದ ಎಂಜಿ ಮೋಟಾರ್

ಇದರ ಹೊರತಾಗಿ ಸಂಪೂರ್ಣವಾಗಿ ಜೋಡಿಸಲಾದ ಬಿಡಿಭಾಗಗಳ ರ‍್ಯಾಕ್, ಎಲೆಕ್ಟ್ರಿಕ್ ಕಂಟ್ರೋಲ್ ಬಾಕ್ಸ್ ಮತ್ತು ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ಹೊಂದಿರಲಿದ್ದು, ಇದು ಗ್ರಾಹಕ ಸೇವಾ ಸೂಚ್ಯಂಕ ವೃದ್ದಿಗೆ ಸಹಕಾರಿಯಾಗಲಿದೆ.

ಗ್ರಾಹಕರ ಮನೆ ಬಾಗಿಲಿಗೆ ಸೇವೆ ಒದಗಿಸಲು ಸರ್ವಿಸ್‌ ಆನ್‌ ವ್ಹೀಲ್ಸ್‌ ಆರಂಭಿಸಿದ ಎಂಜಿ ಮೋಟಾರ್

ಇತ್ತೀಚೆಗೆ ಜೆ.ಡಿ. ಪವರ್ ಇಂಡಿಯಾ ಕಂಪನಿಯು ನಡೆದ ಕಾರುಗಳ ಸೇವಾ ವಿಭಾಗದ ಗ್ರಾಹಕ ಸೇವಾ ಸೂಚ್ಯಂಕ ಪ್ರಮಾಣದಲ್ಲಿ ಎಂಜಿ ಮೋಟಾರ್ ಕಂಪನಿಯು ಅಗ್ರಸ್ಥಾನ ಕಾಯ್ದುಕೊಂಡಿದ್ದು, ಹೊಸ ಸೇವಾ ಉಪಕ್ರಮಗಳು ಗ್ರಾಹಕ ಸೇವಾ ಸೂಚ್ಯಂಕ ಸುಧಾರಣೆಗೆ ಮತ್ತಷ್ಟು ಸಹಕಾರಿಯಾಗಲಿದೆ.

ಗ್ರಾಹಕರ ಮನೆ ಬಾಗಿಲಿಗೆ ಸೇವೆ ಒದಗಿಸಲು ಸರ್ವಿಸ್‌ ಆನ್‌ ವ್ಹೀಲ್ಸ್‌ ಆರಂಭಿಸಿದ ಎಂಜಿ ಮೋಟಾರ್

ಇನ್ನು ಎಂಜಿ ಮೋಟಾರ್ ಕಂಪನಿಯ ಇತರೆ ಸುದ್ದಿಗಳ ಕುರಿತಾಗಿ ನೋಡುವುದಾದರೆ ಕಂಪನಿಯು ತನ್ನ ಹೊಸ ಆಸ್ಟರ್ ಪ್ರೀಮಿಯಂ ಕಂಪ್ಯಾಕ್ಟ್ ಎಸ್‌‌ಯುವಿ ಬೆಲೆ ಹೆಚ್ಚಳ ಮಾಡಿದ್ದು, ಹೊಸ ದರಪಟ್ಟಿಯಲ್ಲಿ ಆಸ್ಟರ್ ಕಾರು ಮಾದರಿಯು ಶೇ.1 ರಷ್ಟು ದುಬಾರಿಯಾಗಿದೆ.

ಗ್ರಾಹಕರ ಮನೆ ಬಾಗಿಲಿಗೆ ಸೇವೆ ಒದಗಿಸಲು ಸರ್ವಿಸ್‌ ಆನ್‌ ವ್ಹೀಲ್ಸ್‌ ಆರಂಭಿಸಿದ ಎಂಜಿ ಮೋಟಾರ್

ಹೊಸ ಆಸ್ಟರ್(Astor) ಕಾರು ಬಿಡುಗಡೆಯೊಂದಿಗೆ ಪ್ರೀಮಿಯಂ ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಪ್ರತಿಸ್ಪರ್ಧಿ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುತ್ತಿರುವ ಎಂಜಿ ಮೋಟಾರ್ ಕಂಪನಿಯು ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್‌ಗಳನ್ನು ನೀಡುತ್ತಿದ್ದು, ಕಂಪನಿಯು ಇದೀಗ ಬೆಲೆ ಪಟ್ಟಿಯನ್ನು ಪರಿಷ್ಕರಣೆ ಮಾಡಿದೆ.

ಗ್ರಾಹಕರ ಮನೆ ಬಾಗಿಲಿಗೆ ಸೇವೆ ಒದಗಿಸಲು ಸರ್ವಿಸ್‌ ಆನ್‌ ವ್ಹೀಲ್ಸ್‌ ಆರಂಭಿಸಿದ ಎಂಜಿ ಮೋಟಾರ್

ಹೊಸ ಫೀಚರ್ಸ್ ಅಳವಡಿಕೆ ಹಿನ್ನೆಲೆಯಲ್ಲಿ ಹೊಸ ಕಾರುಗಳ ಬೆಲೆಯು ಸಾಕಷ್ಟು ಹೆಚ್ಚಳವಾಗುತ್ತಿದ್ದು, ಸ್ಪೋರ್ಟಿ ವಿನ್ಯಾಸದೊಂದಿಗೆ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್‌ಗಳನ್ನು ಜೋಡಣೆ ಹೊಂದಿರುವ ಆಸ್ಟರ್ ಮಾದರಿಯಲ್ಲಿ ಕಂಪನಿಯು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ರೂ. 10 ಸಾವಿರ ತನಕ ದರ ಹೆಚ್ಚಿಸಲಾಗಿದೆ.

ಗ್ರಾಹಕರ ಮನೆ ಬಾಗಿಲಿಗೆ ಸೇವೆ ಒದಗಿಸಲು ಸರ್ವಿಸ್‌ ಆನ್‌ ವ್ಹೀಲ್ಸ್‌ ಆರಂಭಿಸಿದ ಎಂಜಿ ಮೋಟಾರ್

ಆಸ್ಟರ್ ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ ಸ್ಟೈಲ್, ಸೂಪರ್, ಸ್ಮಾರ್ಟ್, ಸ್ಯಾವಿ ಮತ್ತು ಶಾರ್ಪ್ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ದರಪಟ್ಟಿ ಆಸ್ಟರ್ ಕಾರು ಎಕ್ಸ್‌ಶೋರೂಂ ಪ್ರಕಾರ ರೂ.10.32 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 18.32 ಲಕ್ಷ ಬೆಲೆ ಪಡೆದುಕೊಂಡಿದೆ.

ಗ್ರಾಹಕರ ಮನೆ ಬಾಗಿಲಿಗೆ ಸೇವೆ ಒದಗಿಸಲು ಸರ್ವಿಸ್‌ ಆನ್‌ ವ್ಹೀಲ್ಸ್‌ ಆರಂಭಿಸಿದ ಎಂಜಿ ಮೋಟಾರ್

ಸ್ಪೋರ್ಟಿ ವಿನ್ಯಾಸದೊಂದಿಗೆ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್‌ಗಳನ್ನು ಜೋಡಣೆ ಹೊಂದಿರುವ ಹೊಸ ಕಾರು 1.5 ಲೀಟರ್ ಮತ್ತು 1.3 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಹೊಸ ದರಗಳು ಇದಿನಿಂದ ಬುಕಿಂಗ್ ಮಾಡುವ ಗ್ರಾಹಕರಿಗೆ ಅನ್ವಯಿಸಲಿವೆ.

ಗ್ರಾಹಕರ ಮನೆ ಬಾಗಿಲಿಗೆ ಸೇವೆ ಒದಗಿಸಲು ಸರ್ವಿಸ್‌ ಆನ್‌ ವ್ಹೀಲ್ಸ್‌ ಆರಂಭಿಸಿದ ಎಂಜಿ ಮೋಟಾರ್

ಇನ್ನು ಆಸ್ಟರ್ ಕಾರು ಮಾದರಿಯು ಹಲವಾರು ವಿಶೇಷತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಿತ ತಾಂತ್ರಿಕ ಸೌಲಭ್ಯಗಳು ಮತ್ತು ಬಲಿಷ್ಠ ಎಂಜಿನ್ ಆಯ್ಕೆಯೊಂದಿಗೆ ವಿವಿಧ 11 ವೆರಿಯೆಂಟ್‌‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಗ್ರಾಹಕರ ಮನೆ ಬಾಗಿಲಿಗೆ ಸೇವೆ ಒದಗಿಸಲು ಸರ್ವಿಸ್‌ ಆನ್‌ ವ್ಹೀಲ್ಸ್‌ ಆರಂಭಿಸಿದ ಎಂಜಿ ಮೋಟಾರ್

ಹೊಸ ಕಾರಿನಲ್ಲಿರುವ 1.5-ಲೀಟರ್ ಪೆಟ್ರೋಲ್ ಮಾದರಿಯು 5 ಸ್ಪೀಡ್ ಮ್ಯಾನುವಲ್ ಅಥವಾ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 108-ಬಿಎಚ್‌ಪಿ, 144-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 1.3-ಲೀಟರ್ ಪೆಟ್ರೋಲ್ ಮಾದರಿಯು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಸಿವಿಟಿ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 138-ಬಿಎಚ್‌ಪಿ, 220-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

Article Published On: Wednesday, September 21, 2022, 11:17 [IST]
English summary
Mg motor introduces doorstep vehicle repair and maintenance service inciative
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+