ಆಕರ್ಷಕ ವಿನ್ಯಾಸದ ಹೊಸ ಮೈಕ್ರೋ ಎಲೆಕ್ಟ್ರಿಕ್ ಎಸ್‍ಯುವಿ ಪರಿಚಯಿಸಲಿದೆ ಎಂಜಿ ಮೋಟಾರ್

ಇತ್ತೀಚೆಗೆ ಜಾಗತಿಕವಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಳುತ್ತಿದೆ. ಹೆಚ್ಚಿನ ಗ್ರಾಹಕರು ಎಲೆಕ್ಟ್ರಿಕ್ ವಾಹನಗಳ ಕಡೆ ಮುಖ ಮಾಡುತ್ತಿದ್ದಾರೆ. ಇದರಿಂದ ಹಲವು ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಕಡೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದೆ.

ಹೊಸ ಮೈಕ್ರೋ ಎಲೆಕ್ಟ್ರಿಕ್ ಎಸ್‍ಯುವಿ ಪರಿಚಯಿಸಲಿದೆ ಎಂಜಿ ಮೋಟಾರ್

ಬಹುತೇಕ ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿಪಡಿಸುವಲ್ಲಿ ನಿರತರಾಗಿದ್ದಾರೆ. ಇದರ ನಡುವೆ ಜನಪ್ರಿಯ ಕಾರು ತಯಾರಕ ಎಂಜಿಯ ಸಹೋದರ ಬ್ರ್ಯಾಂಡ್ ಬಾಜುನ್ ಇತ್ತೀಚೆಗೆ ಚೀನಾದಲ್ಲಿ ತನ್ನ ಮುಂಬರುವ ಎಲೆಕ್ಟ್ರಿಕ್ ಮೈಕ್ರೋ ಎಸ್‍ಯುವಿಯನ್ನು ಒಂದು ನೋಟವನ್ನು ಹಂಚಿಕೊಂಡಿದೆ. ಅದನ್ನು ಚೀನಾದಲ್ಲಿ ಪ್ರದರ್ಶಿಸಿದರೆ ನಮಗೆ ಏನು ಸಂಬಂಧ ಎಂಬ ಪ್ರಶ್ನೆ ನಿಮಗೆ ಕಾಡಬಹುದು. ಉತ್ತರವೆಂದರೆ ಬಾಜುನ್ ಮತ್ತು ಎಂಜಿ ಎರಡೂ ಚೀನಾದ ಆಟೋ ದೈತ್ಯ ಎಸ್‌ಎಐಸಿ-ಜಿಎಂ-ವುಲಿಂಗ್ ಆಟೋಮೊಬೈಲ್ ಒಡೆತನದಲ್ಲಿದೆ.

ಹೊಸ ಮೈಕ್ರೋ ಎಲೆಕ್ಟ್ರಿಕ್ ಎಸ್‍ಯುವಿ ಪರಿಚಯಿಸಲಿದೆ ಎಂಜಿ ಮೋಟಾರ್

ಆದ್ದರಿಂದ ಎಂಜಿ ಮೋಟಾರ್ ಇಂಡಿಯಾ ತನ್ನ ಸ್ವಂತ ಬ್ರಾಂಡ್‌ನಲ್ಲಿ ಈ ವಾಹನವನ್ನು ದೇಶದಲ್ಲಿ ಬಿಡುಗಡೆ ಮಾಡಬಹುದು ಎಂದು ಹೇಳಲಾಗುತ್ತಿದೆ.ಚೀನಾದಲ್ಲಿ ಪ್ರದರ್ಶಿಸಲಾದ ಆಲ್-ಎಲೆಕ್ಟ್ರಿಕ್ ಮೈಕ್ರೋ ಎಸ್‌ಯುವಿ ಕಾನ್ಸೆಪ್ಟ್ ಚೀನಾದ ವಾಹನ ತಯಾರಕರು ತೋರಿಸಿದ ಇತ್ತೀಚಿನ ಆಟೋಮೊಬೈಲ್ ಆಗಿದೆ ಮತ್ತು ಇದು ಕೆಲವು ವಿಭಿನ್ನ ಜನಪ್ರಿಯ ಎಸ್‌ಯುವಿಗಳಿಂದ ಪ್ರೇರಿತವಾಗಿದೆ ಎಂದು ತೋರುತ್ತದೆ.

ಹೊಸ ಮೈಕ್ರೋ ಎಲೆಕ್ಟ್ರಿಕ್ ಎಸ್‍ಯುವಿ ಪರಿಚಯಿಸಲಿದೆ ಎಂಜಿ ಮೋಟಾರ್

ಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಆಟೋಮೋಟಿವ್ ಉತ್ಸಾಹಿಗಳು ಇದು ಸುಜುಕಿ ಜಿಮ್ನಿ, ಫೋರ್ಡ್ ಬ್ರಾಂಕೊ ಮತ್ತು ಟೊಯೊಟಾದ ಪ್ರಸಿದ್ಧ ಎಫ್‌ಜೆ ಕ್ರೂಸರ್‌ನಿಂದ ಸ್ವಲ್ಪಮಟ್ಟಿಗೆ ಸ್ಫೂರ್ತಿ ಪಡೆದಿದೆ ಎಂದು ಗುರುತಿಸಬಹುದು. ಇದು ಅತ್ಯಂತ ಆಧುನಿಕ ಮತ್ತು ಭವಿಷ್ಯದ ಬಾಹ್ಯ ವಿನ್ಯಾಸವನ್ನು ಹೊಂದಿದೆ.

ಹೊಸ ಮೈಕ್ರೋ ಎಲೆಕ್ಟ್ರಿಕ್ ಎಸ್‍ಯುವಿ ಪರಿಚಯಿಸಲಿದೆ ಎಂಜಿ ಮೋಟಾರ್

ಎಸ್‍ಯುವಿಯಲ್ಲಿ ಡ್ಯುಯಲ್-ಟೋನ್ ಬಾಹ್ಯ ಬಣ್ಣಗಳ ಬಳಕೆಯನ್ನು ನಾವು ಗಮನಿಸಬಹುದು ಜೊತೆಗೆ ನಾಲ್ಕು ಸ್ಟ್ರಿಪ್‌ಗಳ ಎಲ್ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳು ಹೆಡ್‌ಲ್ಯಾಂಪ್‌ಗಳಾಗಿರುತ್ತವೆ. ಸ್ವಲ್ಪ ಒರಟಾದ ಬಾಡಿವರ್ಕ್ ಜೊತೆಗೆ ಪ್ರಾಯೋಗಿಕ ಮತ್ತು ಸುಂದರವಾಗಿ ಕಾಣುವ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ.

ಹೊಸ ಮೈಕ್ರೋ ಎಲೆಕ್ಟ್ರಿಕ್ ಎಸ್‍ಯುವಿ ಪರಿಚಯಿಸಲಿದೆ ಎಂಜಿ ಮೋಟಾರ್

ಈ ಎಸ್‍ಯುವಿಯ ಮುಂಭಾಗದಲ್ಲಿ ಬಾಡಿಯಲ್ಲಿ ಎರಡು ಟೂಯಿಂಗ್ ಹುಕ್ ಅನ್ನು ಹೊಂದಿದೆ. ಗಮನಿಸಬೇಕಾದ ಇನ್ನೊಂದು ವಿಷಯವೆಂದರೆ ಇದು ಕೇವಲ ಎರಡು ಡೋರುಗಳನ್ನು ಹೊಂದಿರುತ್ತದೆ, ಹೀಗಾಗಿ ಇದರ ವೆಚ್ಚವನ್ನು ಕಡಿಮೆ ಮಾಡುತ್ತದೆ.

ಹೊಸ ಮೈಕ್ರೋ ಎಲೆಕ್ಟ್ರಿಕ್ ಎಸ್‍ಯುವಿ ಪರಿಚಯಿಸಲಿದೆ ಎಂಜಿ ಮೋಟಾರ್

ವರದಿಗಳ ಪ್ರಕಾರ, ಈ ಎಲೆಕ್ಟ್ರಿಕ್ ಮೈಕ್ರೋ ಎಸ್‌ಯುವಿಯನ್ನು ಬಾಜುನ್ ಕಿವಿ ಸಿಟಿ ಇವಿ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ, ಇದನ್ನು ಭಾರತ-ಬೌಂಡ್ ಎಂಜಿ ಸಣ್ಣ ಇವಿಯೊಂದಿಗೆ ಹಂಚಿಕೊಳ್ಳಲಾಗಿದೆ. ಜನವರಿಯಲ್ಲಿ ನಡೆಯಲಿರುವ 2023 ಆಟೋ ಎಕ್ಸ್‌ಪೋದಲ್ಲಿ ಎಂಜಿ ಈ ಹೊಸ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅನಾವರಣಗಳಿಸಲಿದೆ ಎಂದು ಊಹಾಪೋಹಗಳಿವೆ.

ಹೊಸ ಮೈಕ್ರೋ ಎಲೆಕ್ಟ್ರಿಕ್ ಎಸ್‍ಯುವಿ ಪರಿಚಯಿಸಲಿದೆ ಎಂಜಿ ಮೋಟಾರ್

ಎಂಜಿ ಇವಿ, ಒಂದರ ಬದಲಿಗೆ ಎರಡು ಎಲೆಕ್ಟ್ರಿಕ್ ಮೋಟಾರ್‌ಗಳನ್ನು ಹೊಂದಿರುತ್ತದೆ. ಮುಂಭಾಗದ ಮೋಟಾರ್ 60 ಬಿಹೆಚ್‍ಪಿ ಪವರ್ ಉತ್ಪಾದಿಸುತ್ತದೆ ಮತ್ತು ಹಿಂಭಾಗದ ಮೋಟಾರ್ ಸರಿಸುಮಾರು 54 ಬಿಹೆಚ್‍ಪಿ ಪವರ್ ಉತ್ಪಾದಿಸುತ್ತದೆ ಎಂಬ ವದಂತಿಗಳಿವೆ, ಸಂಯೋಜಿತ ಪವರ್ ಉತ್ಪಾದನೆಯು 100 ಬಿಹೆಚ್‍ಪಿ ನಷ್ಟು ಸಮೀಪದಲ್ಲಿದೆ ಎಂದು ನಿರೀಕ್ಷಿಸಲಾಗಿದೆ.

ಹೊಸ ಮೈಕ್ರೋ ಎಲೆಕ್ಟ್ರಿಕ್ ಎಸ್‍ಯುವಿ ಪರಿಚಯಿಸಲಿದೆ ಎಂಜಿ ಮೋಟಾರ್

ಇನ್ನು ಎಂಜಿ ಮೋಟಾರ್ ಕಂಪನಿಯು ಭಾರತದಲ್ಲಿ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಬಿಡುಗಡೆಯ ನಂತರ ಮತ್ತೊಂದು ಹೊಸ ಇವಿ ಕಾರು ಬಿಡುಗಡೆಗೆ ಸಿದ್ದವಾಗುತ್ತಿದ್ದು, ಕಂಪನಿಯು ಇತ್ತೀಚೆಗೆ ಹೊಸ ಕಾರಿನ ಇಂಟಿರಿಯಲ್ ಮಾಹಿತಿಯನ್ನು ಹಂಚಿಕೊಂಡಿದೆ. ಗ್ರಾಹಕರ ಬೇಡಿಕೆಯೆಂತೆ ಕಂಪನಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಇವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಹೊಸ ಮೈಕ್ರೋ ಎಲೆಕ್ಟ್ರಿಕ್ ಎಸ್‍ಯುವಿ ಪರಿಚಯಿಸಲಿದೆ ಎಂಜಿ ಮೋಟಾರ್

ಎಂಜಿ ಮೋಟಾರ್ ಕಂಪನಿಯು ತನ್ನ ಜೆಡ್ಎಸ್ ಇವಿ ಕಾರಿನ ನಂತರ ಬಜೆಟ್ ಬೆಲೆಯ ಇವಿ ಕಾರು ಬಿಡುಗಡೆಗಾಗಿ ಯೋಜನೆ ರೂಪಿಸುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಜೆಡ್ಎಸ್ ಇವಿ ಕಾರು ಮಾದರಿಯು ಅತ್ಯುತ್ತಮ ಫೀಚರ್ಸ್‌ಗಳೊಂದಿಗೆ ತುಸು ದುಬಾರಿ ಎನ್ನಿಸಲಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರು ಮಾದರಿಯು ರೂ.10 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಸದ್ಯ ನಂ.1 ಸ್ಥಾನ ಕಾಯ್ದುಕೊಂಡಿರುವ ಟಾಟಾ ಇವಿ ಕಾರು ಮಾದರಿಗೆ ಪೈಪೋಟಿಯಾಗಿ ಎಂಜಿ ಕಂಪನಿಯು ಹೊಸ ಕಾರು ಮಾದರಿಯನ್ನು ನಿರ್ಮಾಣ ಮಾಡುತ್ತಿದೆ.

ಹೊಸ ಮೈಕ್ರೋ ಎಲೆಕ್ಟ್ರಿಕ್ ಎಸ್‍ಯುವಿ ಪರಿಚಯಿಸಲಿದೆ ಎಂಜಿ ಮೋಟಾರ್

ಹೊಸ ಕಾರು ಬಿಗ್ ಹ್ಯಾಚ್‌ಬ್ಯಾಕ್ ವೈಶಿಷ್ಟ್ಯತೆಯೊಂದಿಗೆ 2023ರ ಮೊದಲ ತ್ರೈಮಾಸಿಕ ಅವಧಿಗೆ ಮಾರುಕಟ್ಟೆ ಪ್ರವೇಶಿಸಲಿದೆ. ಇನ್ನು ಎಂಜಿ ಮೋಟಾರ್ ಕಂಪನಿಯು ಸದ್ಯ ಮಾರಾಟ ಮಾಡುತ್ತಿರುವ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಮಾದರಿಯು 50.3 kWh ಬ್ಯಾಟರಿ ಪ್ಯಾಕ್ ಜೊತೆ ಸುಧಾರಿತ ತಂತ್ರಜ್ಞಾನದೊಂದಿಗೆ ಅಭಿವೃದ್ದಿಗೊಂಡಿದ್ದು, ಪ್ರತಿ ಚಾರ್ಚ್‌ಗೆ 461 ಕಿ.ಮೀ ಮೈಲೇಜ್ ಹಿಂದಿರುಗಿಸುವ ಸಾಮರ್ಥ್ಯ ಹೊಂದಿದೆ. ಆದರೆ ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೊಸ ಎಂಜಿ ಇವಿ ಕಾರು ಮಾದರಿಯು ರೂ. 8 ಲಕ್ಷದಿಂದ ರೂ. 10 ಲಕ್ಷ ಬೆಲೆ ಅಂತರದಲ್ಲಿ ಪ್ರತಿ ಚಾರ್ಜ್‌ಗೆ ಕನಿಷ್ಠ 250 ರಿಂದ 300 ಕಿ.ಮೀ ಮೈಲೇಜ್ ಪ್ರೇರಿತ ಕಾರು ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಹೊಸ ಮೈಕ್ರೋ ಎಲೆಕ್ಟ್ರಿಕ್ ಎಸ್‍ಯುವಿ ಪರಿಚಯಿಸಲಿದೆ ಎಂಜಿ ಮೋಟಾರ್

ಮಾಹಿತಿಗಳ ಪ್ರಕಾರ ಹೊಸ ಕಾರು ಎರಡು ಡೋರ್ ಹೊಂದಿರುವ ಸಣ್ಣ ಇವಿ ಮಾದರಿಯಾಗಿರಬಹುದು ಎನ್ನಲಾಗಿದ್ದು, E230 ಹೆಸರಿನಲ್ಲಿ ಈಗಾಗಲೇ ಪ್ರಮುಖ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟಗೊಳ್ಳುತ್ತಿರುವ ತನ್ನ ಸಹಭಾಗೀತ್ವ ಕಂಪನಿಯ ವುಲಿಂಗ್ ಮಿನಿ ಇವಿ ಮಾದರಿಯನ್ನೇ ಭಾರತದಲ್ಲಿ ಕೆಲವು ಹೊಸ ಬದಲಾವಣೆಗಳೊಂದಿಗೆ ಮಾರಾಟಗೊಳಿಸಲು ನಿರ್ಧರಿಸಿದೆ.

Most Read Articles

Kannada
English summary
Mg motor planning to launch new micro electric concept in india details
Story first published: Friday, September 30, 2022, 13:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X