Just In
- 2 hrs ago
ಭಾರತದಲ್ಲಿ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಬಿಡುಗಡೆಗೆ ಸಿದ್ದವಾದ ಎಲೆಕ್ಟ್ರಾನ್ ಇವಿ
- 15 hrs ago
ಆಕರ್ಷಕ ವಿನ್ಯಾಸದ 2022ರ ಹ್ಯುಂಡೈ ಟ್ಯೂಸಾನ್ ಎಸ್ಯುವಿಯ ವಿಶೇಷತೆಗಳು
- 16 hrs ago
ಪಾಸ್ಫೋರ್ಟ್ ಪ್ರಯೋಜನಗಳೇನು? ಏಕೆ ವಿವಿಧ ಬಣ್ಣಗಳಲ್ಲಿ ಲಭ್ಯವಿರುತ್ತವೆ ನೋಡಿ..
- 16 hrs ago
ಬ್ರೇಕ್ ಫೇಲ್ ಆದಾಗ ಕೇವಲ 8 ಸೆಕೆಂಡುಗಳಲ್ಲಿ ಕಾರು ನಿಲ್ಲಿಸುವುದು ಹೇಗೆ? ಇಲ್ಲಿದೆ ಉಪಯುಕ್ತ ಸಲಹೆ
Don't Miss!
- News
Breaking; ಭಾರತದಲ್ಲಿ ಕಡಿಮೆ ಆಯ್ತಾ ಕೊರೊನಾ ಪ್ರಕರಣ?
- Lifestyle
ಮಗುವಿಗೆ ಕೃಷ್ಣನ ವೇಷ ಹಾಕುತ್ತಿದ್ದೀರಾ? ಈ ಟಿಪ್ಸ್ ಸಹಾಯವಾದೀತು
- Movies
'ದಿ ಡರ್ಟಿ ಪಿಕ್ಟರ್' ಸೀಕ್ವೆಲ್ ಫಿಕ್ಸ್: ನಾಯಕಿ ಯಾರು?
- Travel
ಕರ್ನಾಟಕದ ಭದ್ರಾವತಿಯಲ್ಲಿರುವ ಲಕ್ಷ್ಮೀ ನರಸಿಂಹ ದೇವಾಲಯವು ಒಂದು ಪ್ರಾಚೀನ ಅದ್ಬುತಕ್ಕೆ ಸಾಕ್ಷಿ!
- Education
UGC Scholarship : ಯುಜಿಸಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
- Technology
ಧಮಾಕಾ ಕೊಡುಗೆ!..ಭರ್ಜರಿ ಡಿಸ್ಕೌಂಟ್ನಲ್ಲಿ ಹೊಸ ಸ್ಮಾರ್ಟ್ಟಿವಿ ನಿಮ್ಮದಾಗಿಸಿಕೊಳ್ಳಿ!
- Finance
ಆಗಸ್ಟ್ 17: ಭಾರತದ ಮೆಟ್ರೋ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು
- Sports
ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಖರೀದಿಸುತ್ತೇನೆ ಎಂದ ಎಲಾನ್ ಮಸ್ಕ್!
ಜೂನ್ ತಿಂಗಳಲ್ಲಿ 4,503 ಕಾರುಗಳನ್ನು ಮಾರಾಟ ಮಾಡಿದ MG ಮೋಟಾರ್: ಶೇ 27ರಷ್ಟು ವಾರ್ಷಿಕ ಬೆಳವಣಿಗೆ
ಜನಪ್ರಿಯ ಕಾರು ತಯಾರಕ ಕಂಪನಿಯಾದ ಎಂಜಿ ಮೋಟಾರ್ ಇಂಡಿಯಾ ಜೂನ್ 2022ರ ಮಾರಾಟ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಕಂಪನಿಯ ಪ್ರಕಾರ, ಜೂನ್ ತಿಂಗಳಲ್ಲಿ 4,503 ಯುನಿಟ್ ಕಾರುಗಳು ಮಾರಾಟವಾಗಿದ್ದು, ಈ ಮೂಲಕ ವರ್ಷದಿಂದ ವರ್ಷಕ್ಕೆ ಶೇ 27 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

ಕಂಪನಿಯ ಪ್ರಕಾರ ಪ್ರಮುಖ ಹೆಕ್ಟರ್ SUV ಮತ್ತು ZS EV ಗಾಗಿ ಜೂನ್‌ನಲ್ಲಿ ಕ್ರಮವಾಗಿ 4,000 ಯುನಿಟ್ ಮತ್ತು 1,000 ಯುನಿಟ್‌ಗಳ ಬುಕ್ಕಿಂಗ್‌ಗಳು ದಾಖಲಾಗಿವೆ. ಸುಧಾರಿತ ಸೆಮಿಕಂಡಕ್ಟರ್ ಪೂರೈಕೆಯಿಂದಾಗಿ ಮಾರಾಟವು ಹೆಚ್ಚಿದೆ, ಆದರೆ ಲಾಜಿಸ್ಟಿಕ್ಸ್ ಮತ್ತು ಪೂರೈಕೆ ಸರಪಳಿಯು ಅಡ್ಡಿಪಡಿಸಿತು ಎಂದು ಕಂಪನಿ ಹೇಳಿದೆ.

ಉತ್ಪಾದನೆ ಮತ್ತು ಪೂರೈಕೆ-ಸರಪಳಿ ಸಮಸ್ಯೆಗಳನ್ನು ಪರಿಹರಿಸಲು ಕಾರು ತಯಾರಕರು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈ ವರ್ಷಾಂತ್ಯಕ್ಕೆ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆಯಿದೆ. ಕಂಪನಿಯು ಗುಜರಾತ್‌ನಲ್ಲಿರುವ ತನ್ನ ಹಾಲೋಲ್ ಘಟಕದಲ್ಲಿ ಕಾರುಗಳನ್ನು ತಯಾರಿಸುತ್ತಿದೆ. ಸ್ಥಾವರದಲ್ಲಿ ವಾರ್ಷಿಕವಾಗಿ 80,000 ಕಾರುಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಮೂಲಕ ಪ್ರತ್ಯಕ್ಷವಾಗಿ 2,500 ಉದ್ಯೋಗಿಗಳಿಗೆ ಉದ್ಯೋಗವನ್ನು ಒದಗಿಸುತ್ತಿದೆ. ಕಂಪನಿಯು ಭಾರತದಲ್ಲಿ ಸೆಗ್ಮೆಂಟ್ ವಾಹನಗಳಲ್ಲಿ ಮೊದಲನೆಯದನ್ನು ಪರಿಚಯಿಸಿದೆ. ಇವುಗಳಲ್ಲಿ MG ಹೆಕ್ಟರ್ SUV, ಇದು ಭಾರತದ ಮೊದಲ ಇಂಟರ್ನೆಟ್ SUV ಆಗಿದೆ. MG ZS EV ಭಾರತದ ಮೊದಲ ಶುದ್ಧ ಎಲೆಕ್ಟ್ರಿಕ್ SUV ಆಗಿದೆ.

ಇದಲ್ಲದೆ, ಕಂಪನಿಯು MG ಗ್ಲೋಸ್ಟರ್ ಮತ್ತು MG ಆಸ್ಟರ್ ಅನ್ನು ಸಹ ಮಾರಾಟ ಮಾಡುತ್ತಿದೆ, ಇದು ಸ್ವಾಯತ್ತ ಮಟ್ಟ-2 ತಂತ್ರಜ್ಞಾನ ಮತ್ತು ವೈಯಕ್ತಿಕ AI ಸಹಾಯಕವನ್ನು ಹೊಂದಿರುವ ದೇಶದ ಮೊದಲ SUV ಆಗಿದೆ.

ಕೈಗೆಟಕುವ ಬೆಲೆಯ ಎಲೆಕ್ಟ್ರಿಕ್ ಕಾರನ್ನು ತರುತ್ತಿದೆ ಎಂಜಿ
ಎಂಜಿ ಮೋಟಾರ್ ಭಾರತದಲ್ಲಿ ಶೀಘ್ರದಲ್ಲೇ ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಇತ್ತೀಚೆಗೆ ಇದು ಭಾರತದಲ್ಲಿ ಆನ್ ರೋಡ್ ಟೆಸ್ಟ್ ಸಮಯದಲ್ಲಿ ಕಂಡುಬಂದಿದೆ. ಮಾಹಿತಿಯ ಪ್ರಕಾರ, MG ಯ ಮಿನಿ ಎಲೆಕ್ಟ್ರಿಕ್ ಕಾರು ಚೀನಾದಲ್ಲಿ ಮಾರಾಟವಾಗುವ ವುಲಿಂಗ್ EV ಅನ್ನು ಆಧರಿಸಿರಬಹುದು ಎನ್ನಲಾಗಿದೆ.

ಇದು ಮೂರು-ಬಾಗಿಲಿನ ಹ್ಯಾಚ್‌ಬ್ಯಾಕ್ ಮತ್ತು ಎರಡು-ಆಸನಗಳು, ನಾಲ್ಕು-ಆಸನಗಳ ಆವೃತ್ತಿಗಳಲ್ಲಿ ಲಭ್ಯವಾಗಲಿದೆ. ಎಂಜಿಯ ಎಲೆಕ್ಟ್ರಿಕ್ ಕಾರು ವಿನ್ಯಾಸ ಮತ್ತು ಗಾತ್ರದಲ್ಲಿ ಹೆಚ್ಚು ಭಿನ್ನವಾಗಿರುವುದಿಲ್ಲ. ವುಲಿಂಗ್‌ನ ಈ ಸಣ್ಣ ಗಾತ್ರದ ಎಲೆಕ್ಟ್ರಿಕ್ ಕಾರು ಚೀನಾದಲ್ಲಿ ತುಂಬಾ ಜನಪ್ರಿಯವಾಗಿರುವುದು ಈಗಾಗಲೇ ಎಲ್ಲರಿಗು ತಿಳಿದಿರುವ ವಿಷಯ.

ಚೀನಾದ ಹೊರಗೆ, ಇದನ್ನು MG E230 ಎಂದು ಮಾರಾಟ ಮಾಡಲಾಗುತ್ತಿದೆ. ವುಲಿಂಗ್‌ನ ಈ ಎಲೆಕ್ಟ್ರಿಕ್ ಕಾರು 3-ಮೀಟರ್‌ಗಳಿಗಿಂತ ಚಿಕ್ಕದಾಗಿದೆ. ಅದರ ಉದ್ದಳತೆಗಳ ಬಗ್ಗೆ ಮಾತನಾಡುವುದಾದರೆ, ಅದರ ಉದ್ದ 2,917 ಮಿ.ಮೀ, ಎತ್ತರ 1,621 ಮಿ.ಮೀ ಮತ್ತು ಅಗಲ 1,493 ಮಿ.ಮೀ ಇದೆ.

ಇದನ್ನು ಭಾರತೀಯ ಮಾರುಕಟ್ಟೆಯಲ್ಲಿ ದಟ್ಸನ್ ರೆಡಿಗೊ ಮತ್ತು ಮಾರುತಿ ಸುಜುಕಿ ಆಲ್ಟೊ ವಿರುದ್ಧ ಬಿಡುಗಡೆ ಮಾಡಬಹುದು. ಇತ್ತೀಚೆಗೆ ಈ ಮಿನಿ ಎಲೆಕ್ಟ್ರಿಕ್ ಕಾರಿನ ಪೇಟೆಂಟ್ ಅನ್ನು ಭಾರತದಲ್ಲಿ ನೋಂದಾಯಿಸಲಾಗಿದೆ. ಭಾರತದಲ್ಲಿ ಪರಿಚಯಿಸಲಿರುವ ಎಲೆಕ್ಟ್ರಿಕ್ ಕಾರು ನಾಲ್ಕು ಜನರು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಕಾರಿನ ಪವರ್‌ಟ್ರೇನ್ ಕುರಿತು ಮಾತನಾಡುವುದಾದರೆ, ಇದು 20kWh ಬ್ಯಾಟರಿ ಪ್ಯಾಕ್ ಜೊತೆಗೆ 20kWh ಎಲೆಕ್ಟ್ರಿಕ್ ಮೋಟರ್ ಅನ್ನು ನೀಡಬಹುದು. ಕಾರು ಸಂಪೂರ್ಣ ಚಾರ್ಜ್‌ನಲ್ಲಿ 150 ಕಿ.ಮೀ ದೂರದ ಚಾಲನಾ ವ್ಯಾಪ್ತಿಯನ್ನು ತಲುಪಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಸಣ್ಣ ಗಾತ್ರವಾದ ಕಾರಣ ಇಕ್ಕಟ್ಟಿನ ಸ್ಥಳಗಳಲ್ಲಿಯೂ ಸಹ ನಿಲ್ಲಿಸಲು ಸುಲಭವಾಗುತ್ತದೆ.

ವರದಿಗಳ ಪ್ರಕಾರ, ABS, EBD, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು, ಸುಧಾರಿತ ಚಾಲಕ ಸಹಾಯ ವ್ಯವಸ್ಥೆ (ADAS), ವಾಹನಗಳ ಇಂಟರ್ನೆಟ್ (IOV), ಸ್ವಯಂಚಾಲಿತ ಪಾರ್ಕಿಂಗ್, ವಾಯಿಸ್ ಕಮಾಂಡ್ ಮತ್ತು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳಂತಹ ವೈಶಿಷ್ಟ್ಯಗಳನ್ನು ಈ ಎಲೆಕ್ಟ್ರಿಕ್ ಕಾರಿನಲ್ಲಿ ನೀಡಬಹುದು.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಭಾರತದಲ್ಲಿ ಕಾರುಗಳ ಖರೀದಯು ವರ್ಷ ಕಳೆದಂತೆ ಹೆಚ್ಚಾಗುತ್ತಲೇ ಇದೆ. ಇದೀಗ ಮಧ್ಯಮ ವರ್ಗದವರಿಗೂ ಕೈಗೆಟುಕುವ ಬೆಲೆಗೆ ವಾಹನಗಳು ಲಭ್ಯವಾಗುತ್ತಿರುವುದರಿಂದ ಖರೀದಿದಾರರ ಸಂಖ್ಯೆ ಹೆಚ್ಚಾಗಿದೆ. ಮುಂಬರುವ ದಿನಗಳಲ್ಲಿ ಎಂಜಿ ಕೂಡ ಎಲೆಕ್ಟ್ರಿಕ್ ವಾಹನವನ್ನು ಕೈಗೆಟುಕುವ ಬೆಲೆಯಲ್ಲಿ ನೀಡುವುದರಿಂದ ಈ ಕಾರಿಗೆ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿದೆ.