ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಏರ್ ಇವಿ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ಎಂಜಿ ಮೋಟಾರ್ ಕಂಪನಿಯು ಭಾರತದಲ್ಲಿ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಬಿಡುಗಡೆಯ ನಂತರ ಮತ್ತೊಂದು ಹೊಸ ಇವಿ ಕಾರು ಬಿಡುಗಡೆಗೆ ಸಿದ್ದವಾಗುತ್ತಿದ್ದು, ಕಂಪನಿಯು ಇದೀಗ ಹೊಸ ಕಾರಿನ ಇಂಟಿರಿಯಲ್ ಮಾಹಿತಿಯನ್ನು ಹಂಚಿಕೊಂಡಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಏರ್ ಇವಿ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ಗ್ರಾಹಕರ ಬೇಡಿಕೆಯೆಂತೆ ಕಂಪನಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಇವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಎಂಜಿ ಮೋಟಾರ್ ಕಂಪನಿಯು ತನ್ನ ಜೆಡ್ಎಸ್ ಇವಿ ಕಾರಿನ ನಂತರ ಬಜೆಟ್ ಬೆಲೆಯ ಇವಿ ಕಾರು ಬಿಡುಗಡೆಗಾಗಿ ಯೋಜನೆ ರೂಪಿಸುತ್ತಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಏರ್ ಇವಿ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ಸದ್ಯ ಮಾರುಕಟ್ಟೆಯಲ್ಲಿರುವ ಜೆಡ್ಎಸ್ ಇವಿ ಕಾರು ಮಾದರಿಯು ಅತ್ಯುತ್ತಮ ಫೀಚರ್ಸ್‌ಗಳೊಂದಿಗೆ ತುಸು ದುಬಾರಿ ಎನ್ನಿಸಲಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರು ಮಾದರಿಯು ರೂ.10 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಏರ್ ಇವಿ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಸದ್ಯ ನಂ.1 ಸ್ಥಾನ ಕಾಯ್ದುಕೊಂಡಿರುವ ಟಾಟಾ ಇವಿ ಕಾರು ಮಾದರಿಗೆ ಪೈಪೋಟಿಯಾಗಿ ಎಂಜಿ ಕಂಪನಿಯು ಹೊಸ ಕಾರು ಮಾದರಿಯನ್ನು ನಿರ್ಮಾಣ ಮಾಡುತ್ತಿದ್ದು, ಹೊಸ ಕಾರು ಬಿಗ್ ಹ್ಯಾಚ್‌ಬ್ಯಾಕ್ ವೈಶಿಷ್ಟ್ಯತೆಯೊಂದಿಗೆ 2023ರ ಮೊದಲ ತ್ರೈಮಾಸಿಕ ಅವಧಿಗೆ ಮಾರುಕಟ್ಟೆ ಪ್ರವೇಶಿಸಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಏರ್ ಇವಿ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ಎಂಜಿ ಮೋಟಾರ್ ಕಂಪನಿಯು ಸದ್ಯ ಮಾರಾಟ ಮಾಡುತ್ತಿರುವ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಮಾದರಿಯು 50.3 kWh ಬ್ಯಾಟರಿ ಪ್ಯಾಕ್ ಜೊತೆ ಸುಧಾರಿತ ತಂತ್ರಜ್ಞಾನದೊಂದಿಗೆ ಅಭಿವೃದ್ದಿಗೊಂಡಿದ್ದು, ಪ್ರತಿ ಚಾರ್ಚ್‌ಗೆ 461 ಕಿ.ಮೀ ಮೈಲೇಜ್ ಹಿಂದಿರುಗಿಸುವ ಸಾಮರ್ಥ್ಯ ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಏರ್ ಇವಿ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ಆದರೆ ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೊಸ ಎಂಜಿ ಇವಿ ಕಾರು ಮಾದರಿಯು ರೂ. 8 ಲಕ್ಷದಿಂದ ರೂ. 10 ಲಕ್ಷ ಬೆಲೆ ಅಂತರದಲ್ಲಿ ಪ್ರತಿ ಚಾರ್ಜ್‌ಗೆ ಕನಿಷ್ಠ 250 ರಿಂದ 300 ಕಿ.ಮೀ ಮೈಲೇಜ್ ಪ್ರೇರಿತ ಕಾರು ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಏರ್ ಇವಿ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ಮಾಹಿತಿಗಳ ಪ್ರಕಾರ ಹೊಸ ಕಾರು ಎರಡು ಬಾಗಿಲು ಹೊಂದಿರುವ ಸಣ್ಣ ಇವಿ ಮಾದರಿಯಾಗಿರಬಹುದು ಎನ್ನಲಾಗಿದ್ದು, E230 ಹೆಸರಿನಲ್ಲಿ ಈಗಾಗಲೇ ಪ್ರಮುಖ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟಗೊಳ್ಳುತ್ತಿರುವ ತನ್ನ ಸಹಭಾಗೀತ್ವ ಕಂಪನಿಯ ವುಲಿಂಗ್ ಮಿನಿ ಇವಿ ಮಾದರಿಯನ್ನೇ ಭಾರತದಲ್ಲಿ ಕೆಲವು ಹೊಸ ಬದಲಾವಣೆಗಳೊಂದಿಗೆ ಮಾರಾಟಗೊಳಿಸಲು ನಿರ್ಧರಿಸಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಏರ್ ಇವಿ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ಇದರೊಂದಿಗೆ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಸ್ಥಳೀಯ ಸಂಪನ್ಮೂಲ ಬಳಕೆಯು ಇವಿ ವಾಹನಗಳ ಬೆಲೆ ಇಳಿಕೆಯಲ್ಲಿ ಪಾತ್ರವಹಿಸುವುದಾಗಿ ಹೇಳಿರುವ ಎಂಜಿ ಮೋಟಾರ್ ಮುಖ್ಯಸ್ಥರು ಮುಂಬರುವ ದಿನಗಳಲ್ಲಿ ಸ್ಥಳೀಯವಾಗಿ ಉತ್ಪಾದನೆಯಾದ ಬ್ಯಾಟರಿ ಉತ್ಪನ್ನದೊಂದಿಗೆ ಮತ್ತಷ್ಟು ಬೆಲೆ ಇಳಿಕೆ ಮಾಡಲು ಸಹಕಾರಿಯಾಗಿದೆ ಎಂದಿದ್ದಾರೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಏರ್ ಇವಿ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ಸದ್ಯ ಬಹುತೇಕ ಎಲೆಕ್ಟ್ರಿಕ್ ವಾಹನ ತಯಾಕ ಕಂಪನಿಗಳು ವಿದೇಶಿ ಮಾರುಕಟ್ಟೆಗಳಿಂದಲೇ ಹಲವಾರು ಬಿಡಿಭಾಗಗಳು ಮತ್ತು ಬ್ಯಾಟರಿ ಉತ್ಪನ್ನ ಆಮದು ಮಾಡಿಕೊಂಡು ಭಾರತದಲ್ಲಿ ಜೋಡಣೆ ಮಾಡಿ ಮಾರಾಟ ಮಾಡುತ್ತಿದ್ದು, ಇದು ಸ್ಥಳೀಯವಾಗಿ ಹೆಚ್ಚಳವಾದಾಗ ಮಾತ್ರವೇ ಇವಿ ವಾಹನಗಳ ಬೆಲೆಯನ್ನು ತಗ್ಗಿಸಲು ಸಾಧ್ಯವೆಂದಿದ್ದಾರೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಏರ್ ಇವಿ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ವುಲಿಂಗ್ ಏರ್ ಎಲೆಕ್ಟ್ರಿಕ್ ಕಾರು ಮಾದರಿಯು ಕಂಪ್ಯಾಕ್ಟ್ ವಿನ್ಯಾಸದೊಂದಿಗೆ 2,974 ಎಂಎಂ ಉದ್ದ, 1,505 ಎಂಎಂ ಅಗಲ ಮತ್ತು 1,631 ಎತ್ತರ ಜೊತೆಗೆ 2,010 ಎಂಎಂ ವೀಲ್‌ಬೇಸ್ ಉದ್ದವನ್ನು ಹೊಂದಿದ್ದು, ಇದು ಮೂರು-ಡೋರಿನ ಸೌಲಭ್ಯದೊಂದಿಗೆ ಟು ಸೀಟರ್ ಮತ್ತು ಫೋರ್ ಸೀಟರ್ ಆವೃತ್ತಿಗಳಲ್ಲಿ ಲಭ್ಯವಿರಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಏರ್ ಇವಿ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ಹೊಸ ಕಾರು ಮಾದರಿಯನ್ನು ಹಲವಾರು ಪ್ರಾಯೋಗಿಕ ಅಂಶಗಳೊಂದಿಗೆ ಸಿದ್ದಪಡಿಸಿರುವ ಎಂಜಿ ಕಂಪನಿಯು ಮಿನಿ ಕಾರನ್ನು ವಿಶೇಷವಾಗಿ ನಗರಗಳೊಗಡೆ ಸಂಚಾರಕ್ಕೆ ಅನುಕೂರವಾಗುವಂತೆ ನಿರ್ಮಾಣ ಮಾಡುತ್ತಿದ್ದು, ಇದು ದೂರದ ಪ್ರಯಾಣಕ್ಕೆ ಅಷ್ಟೊಂದು ಅನುಕೂಲಕರವಾಗಿಲ್ಲವಾದರೂ ನಗರದಲ್ಲಿನ ಸಂಚಾರಕ್ಕಾಗಿ ಉತ್ತಮ ಮಾದರಿಯಾಗಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಏರ್ ಇವಿ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ಭಾರತದಲ್ಲಿ ಬಿಡುಗಡೆಯಾಗಲಿರುವ ಆವೃತ್ತಿಯು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿನ ಮಾದರಿಗಳಂತೆ ಒಂದೇ ರೀತಿಯ ಆಯಾಮಗಳೊಂದಿಗೆ ತುಂಬಾ ಭಿನ್ನವಾಗಿಲ್ಲವಾದರೂ ಸಾಕಷ್ಟು ಪ್ರಾಯೋಗಿಕ ಅಂಶವನ್ನು ಹೊಂದಿದ್ದು, ಮೂರು ಬಾಗಿಲು ಸೌಲಭ್ಯ ಹೊಂದಿದ್ದರೂ ನಾಲ್ಕು ಆಸನಗಳನ್ನು ಹೊಂದಿರಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಏರ್ ಇವಿ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ಇದಲ್ಲದೆ ಹೊಸ ಕಾರಿನ ಒಳಭಾಗದಲ್ಲಿ ಸಂಪೂರ್ಣ ಡಿಜಿಟಲ್ ಉಪಕರಣ ಕನ್ಸೋಲ್, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು ಮುಂಭಾದಲ್ಲಿ ಹೆಚ್ಚಿನ ಸ್ಥಳಾವಕಾಶ ಹೊಂದಿರುವ ಆನಸಗಳನ್ನು ನೀಡಲಾಗಿದೆ.

ಭಾರತದಲ್ಲಿ ಬಿಡುಗಡೆ ಯಾಗಲಿರುವ ಎಂಜಿ ಏರ್ ಇವಿ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ಟಾಪ್ ಎಂಡ್ ಮಾದರಿಗಳಲ್ಲಿ ಕ್ಯಾಬಿನ್ ಸುತ್ತಲೂ ವುಡ್ ಮತ್ತು ಫಕ್ಸ್ ಅಲ್ಯೂಮಿನಿಯಂ ಅಸ್ಸೆಂಟ್ ಗಳನ್ನು ಪಡೆಯಲಿದ್ದು, ಸಾಫ್ಟ್-ಟಚ್ ಮೇಟಿರಿಯಲ್ಸ್ ಪ್ರೀಮಿಯಂ ಅನುಭವ ನೀಡುತ್ತದೆ. ಹಾಗೆಯೇ ಹೊಸ ಕಾರಿನ ಎಲ್ಎಫ್‌ಪಿ ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಿದ್ದು, ಇದನ್ನು ಟಾಟಾ ಆಟೋ ಕಾಂಪ್ (ಇದು ಚೀನಾದ ಬ್ಯಾಟರಿ ಪೂರೈಕೆದಾರ ಗೋಷನ್‌ನೊಂದಿಗೆ ಸಹಭಾಗಿತ್ವ ಅನ್ನು ಹೊಂದಿದೆ) ಉತ್ಪಾದಿಸುತ್ತದೆ.

Most Read Articles

Kannada
English summary
Mg revealed new air ev car interior details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X