ಹೊಸ ಮಾನದಂಡ ಪೂರೈಸಿದ ಜೆಡ್ಎಸ್ ಇವಿ ಎಕ್ಸೈಟ್- ಬೆಸ್ ವೆರಿಯೆಂಟ್ ವಿತರಣೆಗೆ ಸಿದ್ದವಾದ ಎಂಜಿ!

ಎಂಜಿ ಮೋಟಾರ್ ಕಂಪನಿಯು ಭಾರತದಲ್ಲಿ ತನ್ನ ಹೊಸ ಜೆಡ್ಎಸ್ ಇವಿ ಮೂಲಕ ಉತ್ತಮ ಮಾರುಕಟ್ಟೆ ಬೆಳವಣಿಗೆ ಸಾಧಿಸುತ್ತಿದ್ದು, ಕಂಪನಿಯು ಶೀಘ್ರದಲ್ಲಿಯೇ ಜೆಡ್ಎಸ್ ಇವಿ ಕಾರಿನ ಆರಂಭಿಕ ಮಾದರಿಯಾದ ಎಕ್ಸೈಟ್ ರೂಪಾಂತರದ ವಿತರಣೆಗೆ ಸಿದ್ದವಾಗುತ್ತಿದೆ.

ಜೆಡ್ಎಸ್ ಇವಿ ಎಕ್ಸೈಟ್ ವೆರಿಯೆಂಟ್ ವಿತರಣೆಗೆ ಸಿದ್ದವಾದ ಎಂಜಿ!

2022ರ ಜೆಡ್ಎಸ್ ಇವಿ ಮಾದರಿಯನ್ನು ಎಂಜಿ ಮೋಟಾರ್ ಕಂಪನಿಯು ಈ ವರ್ಷದ ಫೆಬ್ರವರಿ ಆರಂಭದಲ್ಲಿ ಬಿಡುಗಡೆ ಮಾಡಿತ್ತು. ಹೊಸ ಕಾರಿನಲ್ಲಿ ಎಕ್ಸೈಟ್ ಮತ್ತು ಎಕ್ಸ್‌ಕ್ಲೂಸಿವ್ ಎನ್ನುವ ಎರಡು ವೆರಿಯೆಂಟ್ ಪರಿಚಯಿಸಿತ್ತು. ಹೊಸ ಕಾರಿನಲ್ಲಿ ಸದ್ಯ ಕಂಪನಿಯು ಎಕ್ಸ್‌ಕ್ಲೂಸಿವ್ ವೆರಿಯೆಂಟ್ ಮಾತ್ರ ವಿತರಣೆ ಮಾಡುತ್ತಿದ್ದು, ಎಕ್ಸೈಟ್ ವೆರಿಯೆಂಟ್ ಅನ್ನು ಈ ವರ್ಷದ ಜುಲೈ ಅಂತ್ಯಕ್ಕೆ ವಿತರಣೆ ಆರಂಭಿಸುವುದಾಗಿ ಹೇಳಿಕೊಂಡಿತ್ತು.

ಜೆಡ್ಎಸ್ ಇವಿ ಎಕ್ಸೈಟ್ ವೆರಿಯೆಂಟ್ ವಿತರಣೆಗೆ ಸಿದ್ದವಾದ ಎಂಜಿ!

ಪೂರ್ವ ನಿಗದಿಯೆಂತೆ ಎಂಜಿ ಮೋಟಾರ್ ಕಂಪನಿಯು ಇದೀಗ ಎಕ್ಸೈಟ್ ವೆರಿಯೆಂಟ್ ವಿತರಣೆಗೆ ಸಿದ್ದವಾಗುತ್ತಿದ್ದು, ಹೊಸ ವೆರಿಯೆಂಟ್ ವಿತರಣೆಗಾಗಿ ಕಂಪನಿಯು ಇತ್ತೀಚೆಗೆ ಕೇಂದ್ರ ಸಾರಿಗೆ ಇಲಾಖೆಯಲ್ಲಿ ಎಲ್ಲಾ ಅಗತ್ಯ ಮಾನದಂಡಗಳನ್ನು ಪೂರೈಸುವ ಮೂಲಕ ಮಾರಾಟ ಅನುಮತಿ ಪಡೆದಿರುವ ಮಾಹಿತಿ ಲಭ್ಯವಾಗಿದೆ.

ಜೆಡ್ಎಸ್ ಇವಿ ಎಕ್ಸೈಟ್ ವೆರಿಯೆಂಟ್ ವಿತರಣೆಗೆ ಸಿದ್ದವಾದ ಎಂಜಿ!

2022ರ ಜೆಡ್ಎಸ್ ಎಲೆಕ್ಟ್ರಿಕ್ ಮಾದರಿಯು ಈ ಹಿಂದಿನಂತೆ ಪ್ರಮುಖ ಎರಡು ವೆರಿಯೆಂಟ್‌ಗಳೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 22 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 25.88 ಲಕ್ಷ ಬೆಲೆ ಹೊಂದಿದ್ದು, ಎಕ್ಸೈಟ್ ಮಾದರಿಯು ಎಕ್ಸ್‌ಕ್ಲೂಸಿವ್ ಕಡಿಮೆ ಪ್ರೀಮಿಯಂ ಫೀಚರ್ಸ್ ಹೊಂದಿದ್ದರೂ ಮೈಲೇಜ್ ವಿಚಾರವಾಗಿ ಗ್ರಾಹಕರನ್ನು ಸೆಳೆಯಲಿದೆ.

ಜೆಡ್ಎಸ್ ಇವಿ ಎಕ್ಸೈಟ್ ವೆರಿಯೆಂಟ್ ವಿತರಣೆಗೆ ಸಿದ್ದವಾದ ಎಂಜಿ!

ಹೊಸ ಜೆಡ್ಎಸ್ ಎಲೆಕ್ಟ್ರಿಕ್ ಮಾದರಿಯು ವಿಸ್ತರಿತ ಬ್ಯಾಟರಿ ಪ್ಯಾಕ್ ಮತ್ತು ಸುಧಾರಿತ ಕಾರ್ ಕನೆಕ್ಟ್ ಫೀಚರ್ಸ್‌ಗಳೊಂದಿಗೆ 2021 ಮಾದರಿಗಿಂತಲೂ ಸುಮಾರು ರೂ. 60 ಸಾವಿರದಷ್ಟು ಹೆಚ್ಚುವರಿ ಬೆಲೆ ಹೊಂದಿದ್ದು, ಬೆಲೆ ಏರಿಕೆಗೆ ಅನುಗುಣವಾಗಿ ಹೊಸ ಕಾರಿನಲ್ಲಿ ಸಾಕಷ್ಟು ಹೊಸ ತಾಂತ್ರಿಕ ಸೌಲಭ್ಯಗಳನ್ನು ಒದಗಿಸಲಾಗಿದೆ.

ಜೆಡ್ಎಸ್ ಇವಿ ಎಕ್ಸೈಟ್ ವೆರಿಯೆಂಟ್ ವಿತರಣೆಗೆ ಸಿದ್ದವಾದ ಎಂಜಿ!

ಎಂಜಿ ಮೋಟಾರ್ ಕಂಪನಿಯು ಹೊಸ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಮಾದರಿಯಲ್ಲಿ ಈ ಹಿಂದೆ ಪ್ರತಿ ಚಾರ್ಜ್‌ಗೆ 419 ಕಿ.ಮೀ ಒದಗಿಸುತ್ತಿದ್ದ 44.5 kWh ಬ್ಯಾಟರಿ ಪ್ಯಾಕ್ ಅನ್ನು 50.3 kWh ಅಡ್ವಾನ್ಸ್ ಬ್ಯಾಟರಿ ಪ್ಯಾಕ್‌ಗೆ ಉನ್ನತೀಕರಿಸಿದ್ದು, ಹೊಸ ಬ್ಯಾಟರಿ ಪ್ಯಾಕ್ ಪ್ರತಿ ಚಾರ್ಜ್‌ಗೆ ಗರಿಷ್ಠ 461 ಕಿ.ಮೀ ಮೈಲೇಜ್ ನೀಡುತ್ತದೆ.

ಜೆಡ್ಎಸ್ ಇವಿ ಎಕ್ಸೈಟ್ ವೆರಿಯೆಂಟ್ ವಿತರಣೆಗೆ ಸಿದ್ದವಾದ ಎಂಜಿ!

ಹೊಸ ಕಾರು ಮಾದರಿಯು ಸುಧಾರಿತ ತಂತ್ರಜ್ಞಾನ ಪ್ರೇರಿತ ಬ್ಯಾಟರಿ ಪ್ಯಾಕ್ ಜೊತೆ 8 ಲೆಯರ್ ಹೆರ್ ಪಿನ್ ಎಲೆಕ್ಟ್ರಿಕ್ ಮೋಟಾರ್ ಮೂಲಕ ಅತ್ಯುತ್ತಮ ಪರ್ಫಾಮೆನ್ಸ್ ಸಹ ಖಚಿತಪಡಿಸಿದ್ದು, ಹೊಸ ಕಾರು ಕೇವಲ 8.5 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗಪಡೆದುಕೊಳ್ಳುವ ಮೂಲಕ 176 ಬಿಎಚ್‌ಪಿ ಉತ್ಪಾದನೆ ಮಾಡಬಲ್ಲದು.

ಜೆಡ್ಎಸ್ ಇವಿ ಎಕ್ಸೈಟ್ ವೆರಿಯೆಂಟ್ ವಿತರಣೆಗೆ ಸಿದ್ದವಾದ ಎಂಜಿ!

ಹಾಗೆಯೇ ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗಿಂತಲೂ ಹೆಚ್ಚು ಪ್ರೀಮಿಯಂ ಆಗಿ ಅಭಿವೃದ್ದಿಗೊಂಡಿದ್ದು, ಹೊಸ ಕಾರಿನಲ್ಲಿ ಈ ಹಿಂದಿನ ರೆಡ್, ವೈಟ್ ಮತ್ತು ಪೊಲಾರ್ ವೈಟ್ ಬಣ್ಣಗಳ ಜೊತೆಗೆ ಹೊಸ ಮಾದರಿಯಲ್ಲಿ ಸಿಲ್ವರ್, ಬ್ರೌನ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ಜೆಡ್ಎಸ್ ಇವಿ ಎಕ್ಸೈಟ್ ವೆರಿಯೆಂಟ್ ವಿತರಣೆಗೆ ಸಿದ್ದವಾದ ಎಂಜಿ!

ಜೆಡ್ಎಸ್ ಇವಿ ಮಾದರಿಯಲ್ಲಿ ಎಂಜಿ ಮೋಟಾರ್ ಕಂಪನಿಯು ಫುಲ್ ಎಲ್‌ಇಡಿ ಯುನಿಟ್ ಹೊಂದಿರುವ ಹ್ವಾಕ್ ಐ ಹೆಡ್‌ಲ್ಯಾಂಪ್, ಎಲ್ಇಡಿ ಟೈಲ್ ಲೈಟ್ಸ್, ಎಲ್ಇಡಿ ಟರ್ನ್ ಇಂಡಿಕೇಟರ್ ಮತ್ತು ಫಾಗ್‌ಲ್ಯಾಂಪ್ ಹೊಂದಿದ್ದು, ಹಾಗೆಯೇ ಹೊಸ ಕಾರಿನಲ್ಲಿ ಈ ಹಿಂದಿನ ಗ್ರಿಲ್ ಅನ್ನು ಬಾಡಿ ಕಲರ್ ಕವರ್ಡ್ ಪ್ಲೇಟ್ ನಿಂದ ಬದಲಾಯಿಸಲಾಗಿದೆ.

ಜೆಡ್ಎಸ್ ಇವಿ ಎಕ್ಸೈಟ್ ವೆರಿಯೆಂಟ್ ವಿತರಣೆಗೆ ಸಿದ್ದವಾದ ಎಂಜಿ!

ಜೊತೆಗೆ ಇನ್ ಟೆಕ್ ವಿನ್ಯಾಸವು ಸಹ ಹಳೆಯ ಮಾದರಿಗೆ ಹೋಲಿಸಿದರೆ ಒಟ್ಟಾರೆ ವಿನ್ಯಾಸವು ಏರೋಡೈನಾಮಿಕ್ ಹೆಚ್ಚು ಪರಿಣಾಮಕಾರಿಯಾಗಿ ಕಾಣಲಿದ್ದು, ಮರುವಿನ್ಯಾಸಗೊಳಿಸಿದ 17 ಇಂಚಿನ ಟೊಮ್ಹಾಕ್ ಹಬ್ ಅಲಾಯ್ ವ್ಹೀಲ್ ಗಳು ಕಾರಿನ ಹೆಚ್ಚಿನ ಆಕರ್ಷಣೆ ನೀಡುತ್ತದೆ.

ಜೆಡ್ಎಸ್ ಇವಿ ಎಕ್ಸೈಟ್ ವೆರಿಯೆಂಟ್ ವಿತರಣೆಗೆ ಸಿದ್ದವಾದ ಎಂಜಿ!

ನವೀಕರಿಸಿದ ಎಂಜಿ ಜೆಡ್ಎಸ್ ಇವಿ ಫೇಸ್‌ಲಿಫ್ಟ್ ಮಾದರಿಯ ಕ್ಯಾಬಿನ್ ಒಳಗೂ ಕೂಡಾ ನವೀಕರಿಸಿದ ಹಲವು ಬದಲಾವಣೆಗಳಾಗಿದ್ದು, ಹೊಸ ಕಾರಿನಲ್ಲಿ ಎಂಜಿ ಐಸ್ಮಾರ್ಟ್ ಇನ್ಫೋಟೈನ್‌ಮೆಂಟ್ ಸಿಸ್ಟಂನೊಂದಿಗೆ ದೊಡ್ಡದಾದ ಪನೊರಮಿಕ್ ಸನ್‌ರೂಫ್, ಪಿಎಂ 2.5 ಫಿಲ್ಟರ್ ಹೊಂದಿರುವ ಏರ್ ಪ್ಯೂರಿಫೈಯರ್ ಹೊಂದಿದೆ.

ಜೆಡ್ಎಸ್ ಇವಿ ಎಕ್ಸೈಟ್ ವೆರಿಯೆಂಟ್ ವಿತರಣೆಗೆ ಸಿದ್ದವಾದ ಎಂಜಿ!

ಐಷಾರಾಮಿ ವೈಶಿಷ್ಟ್ಯಗಳೊಂದಿಗೆ ಅಭಿವೃದ್ದಿಗೊಂಡಿರುವ ಹೊಸ ಕಾರಿನಲ್ಲಿ ಸುಧಾರಿತ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಕೂಡಾ ಅಳವಡಿಸಿದ್ದು, 10.1 ಇಂಚಿನ ಹೆಚ್‌ಡಿ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಅತ್ಯುತ್ತಮ ಗ್ರಾಫಿಕ್ಸ್ ಮತ್ತು ಮೆನು ಲೇಔಟ್‌ನೊಂದಿಗೆ ಆ್ಯಪಲ್ ಕಾರ್‌ಪ್ಲೇ ಹಾಗೂ ಆಂಡ್ರಾಯಿಡ್ ಆಟೋ ಜೋಡಣೆ ಹೊಂದಿದೆ.

ಜೆಡ್ಎಸ್ ಇವಿ ಎಕ್ಸೈಟ್ ವೆರಿಯೆಂಟ್ ವಿತರಣೆಗೆ ಸಿದ್ದವಾದ ಎಂಜಿ!

ನವೀಕರಿಸಿದ ವೈಶಿಷ್ಟ್ಯತೆಗಳಲ್ಲಿ ರಿಮೋಟ್ ಕಂಟ್ರೋಲ್‌ನೊಂದಿಗೆ ಹೆಚ್ಚಿನ ಕನೆಕ್ಟಿವಿಟಿ ಫೀಚರ್ಸ್‌ಗಳ ಆಯ್ಕೆಗಳನ್ನು ಪಡೆಯಬಹುದಾಗಿದ್ದು, ಹೊಸ ಕಾರನಲ್ಲಿ ಕಂಪನಿಯು ಲೆವಲ್ 2 ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ ಹೊಂದಿರುವ ರಿಯರ್ ಎಡಿಎಎಸ್ ಜೋಡಣೆ ಮಾಡಿದೆ.

ಜೆಡ್ಎಸ್ ಇವಿ ಎಕ್ಸೈಟ್ ವೆರಿಯೆಂಟ್ ವಿತರಣೆಗೆ ಸಿದ್ದವಾದ ಎಂಜಿ!

ಜೊತೆಗೆ ಅತ್ಯುತ್ತಮ ಫೀಚರ್ಸ್‌ಗಳು ಎಂಜಿ ಜೆಡ್ಎಸ್ ಇವಿ ಬಳಕೆದಾರರನ್ನು ಸೆಳೆಯುತ್ತಿದ್ದು, ಹೊಸ ಕಾರಿಗಾಗಿ ಈಗಾಗಲೇ 5 ಸಾವಿರಕ್ಕೂ ಹೆಚ್ಚು ಗ್ರಾಹಕರು ಬುಕಿಂಗ್ ಸಲ್ಲಿಸಿದ್ದಾರೆ. ಜೆಡ್ಎಸ್ ಇವಿ ಮಾದರಿಗಾಗಿ ಈಗಾಗಲೇ ಮೊದಲ ಹಂತದ ಬುಕಿಂಗ್ ಭರ್ತಿಯಾಗಿದ್ದು, ಎರಡನೇ ಹಂತದಲ್ಲಿರುವ ಬುಕಿಂಗ್ ಸಲ್ಲಿಸುವ ಗ್ರಾಹಕರಿಗೆ ಜೆಡ್ಎಸ್ ಇವಿ ಖರೀದಿಯು ತುಸು ದುಬಾರಿಯಾಗಬಹುದಾಗಿದೆ.

Most Read Articles

Kannada
English summary
Mg zs ev base excite variant homologated details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X