Just In
- 8 hrs ago
ಕ್ರ್ಯಾಶ್ ಟೆಸ್ಟ್ನಲ್ಲಿ ಗರಿಷ್ಠ ರೇಟಿಂಗ್ ಪಡೆದುಕೊಂಡ ಹೊಸ ಕಿಯಾ ಇವಿ6 ಎಲೆಕ್ಟ್ರಿಕ್ ಕಾರು
- 9 hrs ago
ಕೇವಲ 40 ಸಾವಿರ ರೂ. ಬೆಲೆಗೆ ಬಿಡುಗಡೆಯಾಗಿದೆ 100 ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್
- 10 hrs ago
ಎರ್ಟಿಗಾದಲ್ಲಿ ಹೊಸ ಸಿಎನ್‌ಜಿ ರೂಪಾಂತರಗಳನ್ನು ಪರಿಚಯಿಸಲು ಸಜ್ಜಾದ ಮಾರುತಿ ಸುಜುಕಿ
- 10 hrs ago
ಏಪ್ರಿಲ್ ತಿಂಗಳ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಯಮಹಾ ಎಂಟಿ-15 ಬೈಕ್
Don't Miss!
- Sports
IPL 2022: ಕೆಎಲ್ ರಾಹುಲ್ ಹೋರಾಟ ವ್ಯರ್ಥ, ಲಕ್ನೋಗೆ ಮಣ್ಣು ಮುಕ್ಕಿಸಿದ ಆರ್ಸಿಬಿ ಟ್ರೋಫಿ ಕನಸು ಜೀವಂತ
- News
ವಿಮಾನ ಇಂಧನ ತೆರಿಗೆ ಕಡಿತ ಮಾಡುತ್ತಾ ಕೇಂದ್ರ ಸರ್ಕಾರ?
- Movies
ಹಿಜಾಬ್ ಧರಿಸಿ ಮುಸ್ಲಿಂ ಮಹಿಳೆಯರ ಪಾತ್ರ ಮಾಡುತ್ತಿರುವ ಸ್ಟಾರ್ ನಟಿಯರಿವರು
- Lifestyle
12 ಲಕ್ಷ ಖರ್ಚು ಮಾಡಿದ ನಾಯಿಯಾದ ಜಪಾನಿನ ವ್ಯಕ್ತಿ!
- Finance
ಮೇ 25ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Technology
ಅಪ್ಲಿಕೇಶನ್ ಡೆವಲಪರ್ಗಳಿಗೆ ಮತ್ತೊಮ್ಮೆ ಸಂದೇಶ ಕಳುಹಿಸಿದ ಆಪಲ್ ಕಂಪೆನಿ!
- Education
ESIC MTS 2022 : ಫೇಸ್ I ಫಲಿತಾಂಶ ಮತ್ತು ಫೇಸ್ II ಪ್ರವೇಶ ಪತ್ರ ಪ್ರಕಟ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೆಚ್ಚಿನ ಮೈಲೇಜ್‌ನೊಂದಿಗೆ ಸಿಎನ್‌ಜಿ ವರ್ಷನ್‌ನಲ್ಲಿ ಬಿಡುಗಡೆಯಾಗಲಿರುವ ಜನಪ್ರಿಯ ಕಾರುಗಳಿವು..
ಹೆಚ್ಚುತ್ತಿರುವ ಇಂಧನ ಬೆಲೆ, ವಾಯು ಮಾಲಿನ್ಯ ಮತ್ತು ವಾಹನಗಳ ಅಧಿಕ ಇನ್‌ಪುಟ್ ವೆಚ್ಚಗಳ ಸಮಸ್ಯೆಗಳಿಂದ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ವಾಹನ ತಯಾರಕರು ಪರಿಸರ ಸ್ನೇಹಿ ವಾಹನಗಳತ್ತ ಹೆಚ್ಚಿನ ಗಮನಹರಿಸುತ್ತಿದೆ. ಈ ಸಮಸ್ಯೆಗಳಿಗೆ ತಕ್ಷಣದ ಪರಿಹಾರವೆಂಬಂತೆ ವಾಹನ ತಯಾರಕರು ಸಿಎನ್‌ಜಿ ಮಾದರಿಗಳತ್ತ ಗಮನಹರಿಸುತ್ತಿದ್ದಾರೆ.

ಸಿಎನ್‌ಜಿ ಮಾದರಿಗಳು ಪರಿಸರ ಸ್ನೇಹಿ ಮತ್ತು ಸುಧಾರಿತ ಮೈಲೇಜ್ ಅನ್ನು ನೀಡುತ್ತದೆ, ಮಾರುತಿ ಸುಜುಕಿ, ಹುಂಡೈ ಮತ್ತು ಟಾಟಾ ಮೋಟಾರ್ಸ್‌ನಂತಹ ಜನಪ್ರಿಯ ತಯಾರಕರು ಸಿಎನ್‌ಜಿ ಮಾದರಿಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದೆ. ಇತ್ತೀಚೆಗೆ ಸ್ವದೇಶಿ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಟಿಯಾಗೋ ಮತ್ತು ಟಿಗೊರ್ ಸಿಎನ್‌ಜಿ ಆವೃತ್ತಿಗಳು ಬಿಡುಗಡೆಗೊಳಿಸಿದೆ, ಇನ್ನು ಹಲವಾರು ವಾಹನ ತಯಾರಕರು ತಮ್ಮ ಹೆಚ್ಚು ಜನಪ್ರಿಯ ಮಾದರಿಗಳ ಸಿಎನ್‌ಜಿ ರೂಪಾಂತರಗಳನ್ನು ಪರಿಚಯಿಸಲು ಯೋಜಿಸುತ್ತಿದ್ದಾರೆ. ಈ ಜನಪ್ರಿಯ ಕಾರುಗಳ ಬಗ್ಗೆ ಮಾಹಿತಿ ಇಲ್ಲಿದೆ.

ಮಾರುತಿ ಬ್ರೆಝಾ ಸಿಎನ್‌ಜಿ
ಇಂಡೋ-ಜಪಾನೀಸ್ ಕಾರು ತಯಾರಕರಾದ ಮಾರುತಿ ಸುಜುಕಿ ಮುಂಬರುವ ತಿಂಗಳುಗಳಲ್ಲಿ ಎರಡನೇ ತಲೆಮಾರಿನ ಮಾರುತಿ ಬ್ರೆಝಾವನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ಕಾಂಪ್ಯಾಕ್ಟ್ ಎಸ್‍ಯುವಿ ಬಲವಾದ ಹೈಬ್ರಿಡ್ ತಂತ್ರಜ್ಞಾನದ ಜೊತೆಗೆ ಒಳಗೆ ಮತ್ತು ಹೊರಗೆ ಸಮಗ್ರ ಬದಲಾವಣೆಗಳನ್ನು ಪಡೆಯುತ್ತದೆ.

2022ರ ಏಪ್ರಿಲ್ ತಿಂಗಳ ವೇಳೆಗೆ ಮಾರುತಿ ಬ್ರೆಝಾ ಸಿಎನ್‌ಜಿ ಅನ್ನು ಸಹ ತರಲಿದೆ ಎಂದು ವದಂತಿಗಳಿವೆ. ಮಾದರಿಯು 1.5L K15B ಪೆಟ್ರೋಲ್ ಎಂಜಿನ್ ಮತ್ತು ಫ್ಯಾಕ್ಟರಿ-ಹೊಂದಿದ CNG ಕಿಟ್‌ನೊಂದಿಗೆ ಬರುತ್ತದೆ. 2022ರ ಮಾರುತಿ ಬ್ರೆಝಾ ಸಿಎನ್‌ಜಿಯ ಶಕ್ತಿ ಮತ್ತು ಟಾರ್ಕ್ ಉತ್ಪಾದನೆಯು ಪೆಟ್ರೋಲ್ ಆವೃತ್ತಿಗಿಂತ ಸ್ವಲ್ಪ ಕಡಿಮೆ ಇರುತ್ತದೆ, ಇದು ಮೈಲೇಜ್‌ನಲ್ಲಿ ಹೆಚ್ಚು ಇರುತ್ತದೆ.

ಮಾರುತಿ ಸ್ವಿಫ್ಟ್ ಮತ್ತು ಡಿಜೈರ್ ಸಿಎನ್‌ಜಿ
ಮಾರುತಿ ಸುಜುಕಿಯ ಜನಪ್ರಿಯ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಮತ್ತು ಡಿಜೈರ್ ಕಾಂಪ್ಯಾಕ್ಟ್ ಸೆಡಾನ್ ಶೀಘ್ರದಲ್ಲೇ ಫಾಕ್ಟಿರಿ ಅಳವಡಿಸಲಾದ CNG ಕಿಟ್‌ನೊಂದಿಗೆ ನೀಡಲಾಗುವುದು. ಈ ಎರಡೂ ಮಾದರಿಗಳು 1.2 ಲೀಟರ್ Dualjet K12C ಪೆಟ್ರೋಲ್ ಎಂಜಿನ್ ಮತ್ತು ಸಿಎನ್‌ಜಿ ಕಿಟ್ ಅನ್ನು ಒಳಗೊಂಡಿರುತ್ತವೆ.

ಇವು 70 ಬಿಹೆಚ್‍ಪಿ ಪವರ್ ಮತ್ತು 95 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇನ್ನು ಸಾಮಾನ್ಯ ಗ್ಯಾಸೋಲಿನ್ ಯುನಿಟ್ 81 ಬಿಹೆಚ್‍ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಮುಂಬರುವ CNG ರೂಪಾಂತರಗಳಿಗೆ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಲಾಗುವುದಿಲ್ಲ.

ಟೊಯೊಟಾ ಇನೋವಾ ಕ್ರಿಸ್ಟಾ ಸಿಎನ್‌ಜಿ
ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಮುಂಬರುವ ತಿಂಗಳುಗಳಲ್ಲಿ ಇನ್ನೋವಾ ಕ್ರಿಸ್ಟಾ ಎಂಪಿವಿಯ ಸಿಎನ್‌ಜಿ ಆವೃತ್ತಿಯನ್ನು ಹೊರತರಲಿದೆ ಎಂದು ವರದಿಯಾಗಿದೆ. ಮುಂಬರುವ ಟೊಯೊಟಾ ಇನೋವಾ ಕ್ರಿಸ್ಟಾ ಸಿಎನ್‌ಜಿ ಬೇಸ್ ಜಿ ಟ್ರಿಮ್ ಅನ್ನು ಆಧರಿಸಿದೆ ಮತ್ತು ಸ್ಟ್ಯಾಂಡರ್ಡ್ ಪೆಟ್ರೋಲ್ ರೂಪಾಂತರಕ್ಕಿಂತ ಸುಮಾರು ರೂ. 80,000 - ರೂ.1 ಲಕ್ಷ ಹೆಚ್ಚಿನ ವೆಚ್ಚವನ್ನು ನಿರೀಕ್ಷಿಸಲಾಗಿದೆ.

ಈ ಟೊಯೊಟಾ ಇನೋವಾ ಕ್ರಿಸ್ಟಾ ಸಿಎನ್‌ಜಿ ಕಾರಿನಲ್ಲಿ 2.7 ಲೀಟರ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಜೊತೆಗೆ ಸಿಎನ್‌ಜಿ ಕಿಟ್‌ನೊಂದಿಗೆ ಬರುತ್ತದೆ. ಗ್ಯಾಸೋಲಿನ್ ಯುನಿಟ್ 166 ಬಿಹೆಚ್‍ಪಿ ಪವರ್ ಮತ್ತು 245 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಸಿಎನ್‌ಜಿ ರೂಪಾಂತರದ ಪವರ್ ಮತ್ತು ಟಾರ್ಕ್ ಅಂಕಿಅಂಶಗಳು ಸ್ವಲ್ಪ ಕಡಿಮೆ ಇರುತ್ತದೆ. ಇದನ್ನು ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ನೀಡಲಾಗುವುದು.

ಟಾಟಾ ಪಂಚ್ ಸಿಎನ್‌ಜಿ
ಟಾಟಾ ಮೋಟಾರ್ಸ್ ಹೊಸದಾಗಿ ಬಿಡುಗಡೆಯಾದ ಪಂಚ್ ಮಿನಿ ಎಸ್‍ಯುವಿಯ ಸಿಎನ್‌ಜಿ ಆವೃತ್ತಿಯಲ್ಲಿ ಕೆಲಸ ಮಾಡುತ್ತಿದೆ. ಸಿಎನ್‌ಜಿ-ಸ್ಪೆಕ್ ಪಂಚ್ ಮೈಕ್ರೋ ಎಸ್‌ಯುವಿಯ ಸ್ಪೈ ಶಾಟ್‌ಗಳು ಇತ್ತೀಚೆಗೆ ಬಹಿರಂಗವಾಗಿತ್ತು. ಟಾಟಾ ಪಂಚ್ ಸಿಎನ್‌ಜಿ ಮಾದರಿಯಲ್ಲಿ 1.2 ಲೀಟರ್ ಮೋಟಾರ್ ಮತ್ತು ಸಿಎನ್‌ಜಿ ಕಿಟ್‌ನಿಂದ ಚಾಲಿತವಾಗುತ್ತದೆ.

ಸಾಮಾನ್ಯ ಪಂಚ್ ಮಾದರಿಯು 85 ಬಿಹೆಚ್‍ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸಾಮಾನ್ಯ ಪೆಟ್ರೋಲ್ ರೂಪಾಂತರಕ್ಕೆ ಹೋಲಿಸಿದರೆ, ಸಿಎನ್‌ಜಿಯಲ್ಲಿನ ಪವರ್ ಮತ್ತು ಟಾರ್ಕ್ ಅಂಕಿಅಂಶಗಳು ಸ್ವಲ್ಪ ಕಡಿಮೆಯಾಗಬಹುದು ಮತ್ತು ಇದು ಐದು-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ಲಭ್ಯವಿರಬಹುದು. ಬ್ಯಾಡ್ಜ್ ಸೇರ್ಪಡೆಗಳನ್ನು ಹೊರತುಪಡಿಸಿ ಸ್ಟ್ಯಾಂಡರ್ಡ್ ಮಾದರಿಗೆ ಹೋಲಿಸಿದರೆ ಪಂಚ್ ಸಿಎನ್‌ಜಿ ಮಾದರಿಯಲ್ಲಿ ಯಾವುದೇ ಗಮನಾರ್ಹ ಬಾಹ್ಯ ಬದಲಾವಣೆಗಳನ್ನು ನಾವು ನಿರೀಕ್ಷಿಸುವುದಿಲ್ಲ.

ಮಾರುತಿ ಸುಜುಕಿ ಬಲೆನೊ ಸಿಎನ್‌ಜಿ
ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿಯ ಬಲೆನೊ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಸೇರಿದಂತೆ ಅದರ ನೆಕ್ಸಾ ಶ್ರೇಣಿಯ CNG ರೂಪಾಂತರಗಳನ್ನು ಪರಿಚಯಿಸುತ್ತದೆ ಎಂದು ವರದಿಗಳು ಸೂಚಿಸುತ್ತವೆ. 2022ರ ಮಾರುತಿ ಬಲೆನೊ ಸಿಎನ್‌ಜಿ ಅನ್ನು ಅದರ ನವೀಕರಿಸಿದ ಮಾದರಿಯೊಂದಿಗೆ ಮುಂದಿನ ತಿಂಗಳು (ಫೆಬ್ರವರಿ) ಬಿಡುಗಡೆ ಮಾಡಬಹುದು.

ಈ ಹೊಸ ಮಾರುತಿ ಸುಜುಕಿ ಬಲೆನೊ ಸಿಎನ್‌ಜಿ ಮಾದರಿಯು 1.2 ಲೀಟರ್ ಡ್ಯುಯಲ್ ಜೆಟ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 89 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇನ್ನು ಬಲೆನೊ ಮಾದರಿಯಲ್ಲಿ ಯಾವುದೇ ಗಮನಾರ್ಹ ಬಾಹ್ಯ ಬದಲಾವಣೆಗಳನ್ನು ಹೊಂದಿರುವುದಿಲ್ಲ.

ಹುಂಡೈ ವೆನ್ಯೂ ಸಿಎನ್‌ಜಿ
ದಕ್ಷಿಣ ಕೊರಿಯಾದ ವಾಹನ ತಯಾರಕರು ಅದರ ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಸಿಎನ್‌ಜಿ ಮತ್ತು ಔರಾ ಸಿಎನ್‌ಜಿ ರೂಪಾಂತರಗಳು ಹೆಚ್ಚು ಬೇಡಿಕೆಯಲ್ಲಿವೆ ಎಂದು ಹೇಳಿದರು. ಪ್ರವೃತ್ತಿಯನ್ನು ಪರಿಗಣಿಸಿ, ಕಂಪನಿಯು ಹೆಚ್ಚಿನ ಸಿಎನ್‌ಜಿ ಮಾದರಿಗಳನ್ನು ಪರಿಚಯಿಸಲು ಯೋಜಿಸುತ್ತಿದೆ. ಇದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳನ್ನು ಕಂಪನಿಯು ಬಹಿರಂಗಪಡಿಸಿಲ್ಲ.

ಮುಂದಿನ ದಿನಗಳಲ್ಲಿ ಹುಂಡೈ ವೆನ್ಯೂ ಸಿಎನ್‌ಜಿಯನ್ನು ತರುವ ಸಾಧ್ಯತೆಯಿದೆ. ಪ್ರಸ್ತುತ, ಕಾಂಪ್ಯಾಕ್ಟ್ ಎಸ್‍ಯುವಿಯು 1.2 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್, 1.0 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ.