ಆಕರ್ಷಕ ವಿನ್ಯಾಸದಲ್ಲಿ ಹೊಸ ಹ್ಯುಂಡೈ ಕ್ರೆಟಾ ಎನ್ ಲೈನ್ ಎಸ್‍ಯುವಿ ಅನಾವರಣ

ದಕ್ಷಿಣ ಕೊರಿಯಾದ ಕಾರು ತಯಾರಕ ಕಂಪನಿಯಾದ ಹ್ಯುಂಡೈ ತನ್ನ ಕ್ರೆಟಾ ಎನ್ ಲೈನ್ ಎಸ್‍ಯುವಿಯನ್ನು ಅನಾವರಣಗೊಳಿಸಿದೆ. ಈ ಹೊಸ ಹುಂಡೈ ಕ್ರೆಟಾ ಎನ್ ಲೈನ್ ಅದರೊಂದಿಗೆ ಕೆಲವು ವಿನ್ಯಾಸ ಟ್ವೀಕ್‌ಗಳು, 1.0-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಮತ್ತು ಪರಿಷ್ಕೃತ ಸಸ್ಪೆಂಕ್ಷನ್ ಸೆಟಪ್ ನೊಂದಿಗ ಬಿಡುಗಡೆಯಾಗಲಿದೆ.

ಆಕರ್ಷಕ ವಿನ್ಯಾಸದಲ್ಲಿ ಹೊಸ ಹ್ಯುಂಡೈ ಕ್ರೆಟಾ ಎನ್ ಲೈನ್ ಎಸ್‍ಯುವಿ ಅನಾವರಣ

ಹ್ಯುಂಡೈ ಕ್ರೆಟಾ ಎನ್ ಲೈನ್ ಕೆಲವು ವಿನ್ಯಾಸ ಟ್ವೀಕ್‌ಗಳನ್ನು ಪಡೆಯುತ್ತದೆ, ಇದು ಎಸ್‌ಯುವಿಯ ಸಾಮಾನ್ಯ ಆವೃತ್ತಿಯಿಂದ ಎದ್ದು ಕಾಣಲು ಸಹಾಯ ಮಾಡುತ್ತದೆ. ಕ್ರೆಟಾ ಎನ್ ಲೈನ್‌ನಲ್ಲಿನ ಈ ವಿನ್ಯಾಸ ಬದಲಾವಣೆಗಳು ಹೊಸ ವಿಶಾಲವಾದ ಗ್ರಿಲ್‌ನ ರೂಪದಲ್ಲಿ ಬರುತ್ತವೆ, ಇದು ಮುಂಬರುವ ಟ್ಯೂಸಾನ್ ನಂತಹ ಹೆಚ್ಚಿನ ಹ್ಯುಂಡೈ ಎಸ್‌ಯುವಿಗಳು ಇದೇ ಮಾದರಿಯ ವಿನ್ಯಾಸವನ್ನು ಅನುಕರಿಸುತ್ತದೆ. ಈ ಹೊಸ ಹ್ಯುಂಡೈ ಕ್ರೆಟಾ ಎನ್ ಲೈನ್ ಎಸ್‍ಯುವಿಯು ಸ್ಪೋರ್ಟಿ ಲುಕ್ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಹೊಸ ಹ್ಯುಂಡೈ ಕ್ರೆಟಾ ಎನ್ ಲೈನ್ ಎಸ್‍ಯುವಿ ಅನಾವರಣ

ಈ ಹೊಸ ಎಸ್‍ಯುವಿ ಗ್ರಿಲ್ ಡಾರ್ಕ್ ಕ್ರೋಮ್ ಅಸ್ಸೆಂಟ್ ಗಳನ್ನು ಹೊಂದಿದೆ ಆದರೆ ಮುಂಭಾಗದ ಬಂಪರ್ ಸ್ಪೋರ್ಟ್ಸ್ ತ್ರಿಕೋನ ಫಾಗ್ ಲ್ಯಾಂಪ್ ಹೌಸಿಂಗ್‌ಗಳ ಕೆಳಗಿನ ಭಾಗವು ದೊಡ್ಡ ಏರ್ ಟೆಕ್ ಸಂಪರ್ಕ ಹೊಂದಿದೆ. ಇನ್ನು ಮುಂಭಾಗದ ಗ್ರಿಲ್ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಹೊಸ ಹ್ಯುಂಡೈ ಕ್ರೆಟಾ ಎನ್ ಲೈನ್ ಎಸ್‍ಯುವಿ ಅನಾವರಣ

ಎನ್ ಲೈನ್‌ನ ಬದಿಗಳು ಎಸ್‌ಯುವಿ ಸ್ಪೋರ್ಟಿಂಗ್ ಹೊಸ ಸೈಡ್ ಸ್ಕರ್ಟ್‌ಗಳು ಮತ್ತು 17-ಇಂಚಿನ ಅಲಾಯ್ ವೀಲ್‌ಗಳೊಂದಿಗೆ ವಿಶಿಷ್ಟವಾದ ವಿನ್ಯಾಸದೊಂದಿಗೆ ಡಿ-ಕ್ರೋಮ್ ಆಗಿ ಕಾಣುತ್ತವೆ. ಮುಂಭಾಗದ ಫೆಂಡರ್‌ಗಳಲ್ಲಿ ಪ್ರಮುಖವಾದ ಎನ್ ಲೈನ್ ಬ್ಯಾಡ್ಜ್‌ಗಳು ಸಹ ಕಂಡುಬರುತ್ತವೆ.

ಆಕರ್ಷಕ ವಿನ್ಯಾಸದಲ್ಲಿ ಹೊಸ ಹ್ಯುಂಡೈ ಕ್ರೆಟಾ ಎನ್ ಲೈನ್ ಎಸ್‍ಯುವಿ ಅನಾವರಣ

ಹ್ಯುಂಡೈ ಕ್ರೆಟಾ ಎನ್ ಲೈನ್‌ನ ಹಿಂಭಾಗದ ವಿಭಾಗವು ಹೊಸ ಹಿಂಭಾಗದ ಬಂಪರ್ ಅನ್ನು ಬ್ಲ್ಯಾಕ್ ಬಣ್ಣದಲ್ಲಿ ಪೂರ್ಣಗೊಳಿಸಿದ ಫಾಕ್ಸ್ ಸ್ಕಿಡ್ ಪ್ಲೇಟ್ ಜೊತೆಗೆ ಕೆಲವು ಫ್ಯಾನ್ಸಿ ಸ್ಟೈಲಿಂಗ್ ಅಂಶಗಳೊಂದಿಗೆ ಡಿಫ್ಯೂಸರ್ ಆಗಿ ಕೆಲಸ ಮಾಡಿದರೆ ಇನ್ನೂ ಆಕರ್ಷಕವಾಗಿರುತ್ತಿತ್ತು.

ಆಕರ್ಷಕ ವಿನ್ಯಾಸದಲ್ಲಿ ಹೊಸ ಹ್ಯುಂಡೈ ಕ್ರೆಟಾ ಎನ್ ಲೈನ್ ಎಸ್‍ಯುವಿ ಅನಾವರಣ

ಹಿಂಭಾಗದಲ್ಲಿ ಟ್ವಿನ್ ಎಕ್ಸಾಸ್ಟ್ ಟಿಪ್ಸ್‌ಗಳು ಎಸ್‍ಯುವಿಗೆ ಹೆಚ್ಚು ಸ್ಪೋರ್ಟಿ ಲುಕ್ ಅನ್ನು ನೀಡುತ್ತದೆ. ಕ್ರೆಟಾ ಎನ್-ಲೈನ್ ಒಳಗೆ ಹೆಜ್ಜೆ ಹಾಕಿ ಮತ್ತು ಸಂಪೂರ್ಣ ಬ್ಲ್ಯಾಕ್ ಒಳಾಂಗಣದಿಂದ ನಿಮ್ಮನ್ನು ಸ್ವಾಗತಿಸಲಾಗುತ್ತದೆ. ಇತರ ಪ್ರಮುಖ ಬದಲಾವಣೆಗಳೆಂದರೆ ಹೊಸ ಎನ್ ಲೈನ್ ಥೀಮ್ ಸ್ಟೀರಿಂಗ್ ವೀಲ್ ಮತ್ತು ಗೇರ್ ನಾಬ್ ಜೊತೆಗೆ ಬ್ಲಾಯ್ಕ್ ಮೇಲೆ ಕೆಂಪು ಹೊಲಿಗೆ. ಸೀಟುಗಳ ಹೆಡ್‌ರೆಸ್ಟ್‌ಗಳಲ್ಲಿ ಎನ್ ಬ್ಯಾಡ್ಜಿಂಗ್ ಅನ್ನು ಸಹ ಒಳಗೊಂಡಿರುತ್ತವೆ.

ಆಕರ್ಷಕ ವಿನ್ಯಾಸದಲ್ಲಿ ಹೊಸ ಹ್ಯುಂಡೈ ಕ್ರೆಟಾ ಎನ್ ಲೈನ್ ಎಸ್‍ಯುವಿ ಅನಾವರಣ

ಹೊಸ ಕ್ರೆಟಾ ಎನ್ ಲೈನ್ ಎಸ್‌ಯುವಿಯಲ್ಲಿ ದಕ್ಷಿಣ ಕೊರಿಯಾದ ಕಾರು ತಯಾರಕರಲ್ಲಿ 1.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 118 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಬಾನೆಟ್ ಅಡಿಯಲ್ಲಿ ಮತ್ತೊಂದು ಆಯ್ಕೆಯು ನ್ಯಾಚುರಲ್ 2.0-ಲೀಟರ್ ಎಂಜಿನ್ ಆಗಿದ್ದು, ಈ ಪವರ್‌ಪ್ಲಾಂಟ್‌ನ ಔಟ್‌ಪುಟ್ ಅಂಕಿಅಂಶಗಳು ಪ್ರಸ್ತುತ ಲಭ್ಯವಿಲ್ಲ.

ಆಕರ್ಷಕ ವಿನ್ಯಾಸದಲ್ಲಿ ಹೊಸ ಹ್ಯುಂಡೈ ಕ್ರೆಟಾ ಎನ್ ಲೈನ್ ಎಸ್‍ಯುವಿ ಅನಾವರಣ

ಹುಂಡೈ ಕ್ರೆಟಾ ಎನ್ ಲೈನ್ ಕೂಡ ಟ್ವೀಕ್ ಮಾಡಲಾದ ಸಸ್ಪೆಂಕ್ಷನ್ ಸೆಟಪ್ ಅನ್ನು ಪಡೆಯುತ್ತದೆ. ಈ ಕ್ರೆಟಾ ಎನ್ ಲೈನ್ ಆಟೋನೊಮಸ್ ಬ್ರೇಕಿಂಗ್ ಮತ್ತು ಲೇನ್ ಅಸಿಸ್ಟ್‌ನಂತಹ ಕೆಲವು ಅಡ್ವಾನ್ಸ್ ಡ್ರೈವಿಂಗ್ ಅಸಿಸ್ಟ್ ಸಿಸ್ಟಂಗಲನ್ನು ಒಳಗೊಂಡಂತೆ ಸಂಪೂರ್ಣ ವೈಶಿಷ್ಟ್ಯಗಳನ್ನು ಪ್ಯಾಕ್ ಮಾಡುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಹೊಸ ಹ್ಯುಂಡೈ ಕ್ರೆಟಾ ಎನ್ ಲೈನ್ ಎಸ್‍ಯುವಿ ಅನಾವರಣ

ಹೊಸ ಕ್ರೆಟಾ ಎನ್ ಲೈನ್‌ನಲ್ಲಿನ ಇತರ ವೈಶಿಷ್ಟ್ಯಗಳು 10.25-ಇಂಚಿನ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ.

ಆಕರ್ಷಕ ವಿನ್ಯಾಸದಲ್ಲಿ ಹೊಸ ಹ್ಯುಂಡೈ ಕ್ರೆಟಾ ಎನ್ ಲೈನ್ ಎಸ್‍ಯುವಿ ಅನಾವರಣ

ಹ್ಯುಂಡೈ ಕ್ರೆಟಾ ಎನ್ ಲೈನ್ ಎಸ್‍ಯುವಿಯು ಭಾರತಕ್ಕೆ ಬರುವ ಮೊದಲು ದಕ್ಷಿಣ ಅಮೆರಿಕಾದ ಮಾರುಕಟ್ಟೆಯನ್ನು ಬಿಡುಗಡೆಗೊಳಿಸಬಹುದು. ಆದರೆ ಫೇಸ್‌ಲಿಫ್ಟೆಡ್ ಕ್ರೆಟಾ ಮುಂದಿನ ವರ್ಷ ಬಿಡುಗಡೆಯಾಗುವ ನಿರೀಕ್ಷೆಗಳಿದೆ. ಟ್ವೀಕ್ ಮಾಡಲಾದ ಎಸ್‌ಯುವಿ ಎನ್ ಲೈನ್ ಆವೃತ್ತಿಯು ಅದೇ ಸಮಯದಲ್ಲಿ ಅಥವಾ ಫೇಸ್‌ಲಿಫ್ಟೆಡ್ ಕ್ರೆಟಾ ಪ್ರಾರಂಭದ ನಂತರ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸಬಹುದು.

ಆಕರ್ಷಕ ವಿನ್ಯಾಸದಲ್ಲಿ ಹೊಸ ಹ್ಯುಂಡೈ ಕ್ರೆಟಾ ಎನ್ ಲೈನ್ ಎಸ್‍ಯುವಿ ಅನಾವರಣ

ಇನ್ನು ಹ್ಯುಂಡೈ ಇಂಡಿಯಾ ತನ್ನ ನ್ಯೂ ಜನರೇಷನ್ ಟ್ಯೂಸಾನ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಈ ನ್ಯೂ ಜನರೇಷನ್ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಹ್ಯುಂಡೈ ಕಂಪನಿಯು ಭಾರತೀಯ ವೆಬ್‌ಸೈಟ್‌ನಲ್ಲಿ ಹೊಸ ಟ್ಯೂಸಾನ್ ಎಸ್‍ಯುವಿಯ ಹೆಸರನ್ನು ಪಟ್ಟಿ ಮಾಡಿದ್ದಾರೆ. ಪ್ರಸ್ತುತ ಜನರೇಷನ್ ಟ್ಯೂಸಾನ್ ಎಸ್‍ಯುವಿಯು ಕೊನೆಯದಾಗಿ ಜುಲೈ 2020 ರಲ್ಲಿ ನವೀಕರಿಸಲಾಗಿದೆ. ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ತನ್ನ ನ್ಯೂ ಜನರೇಷನ್ ಟ್ಯೂಸಾನ್ ಎಸ್‍ಯುವಿಯನ್ನು 2020 ರಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪರಿಚಯಿಸಿತು. ಇದೀಗ ಹ್ಯುಂಡೈ ಕಂಪನಿಯು ತನ್ನ ನ್ಯೂ ಜನರೇಷನ್ ಟ್ಯೂಸಾನ್ ಎಸ್‍ಯುವಿಯನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಗೊಳಿಸಲಿದೆ ಎಂದು ಹೇಳಿದೆ.

ಆಕರ್ಷಕ ವಿನ್ಯಾಸದಲ್ಲಿ ಹೊಸ ಹ್ಯುಂಡೈ ಕ್ರೆಟಾ ಎನ್ ಲೈನ್ ಎಸ್‍ಯುವಿ ಅನಾವರಣ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಹ್ಯುಂಡೈ ಕ್ರೆಟಾ ಎನ್ ಲೈನ್ ದಕ್ಷಿಣ ಕೊರಿಯಾದ ಕಾರು ತಯಾರಕರ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ವಾಹನದ ಹೆಚ್ಚು ಸ್ಪೋರ್ಟಿಯಾಗಿ ಕಾಣುವ ಆವೃತ್ತಿಯಾಗಿದೆ. ಹ್ಯುಂಡೈ ಫೇಸ್‌ಲಿಫ್ಟೆಡ್ ವೆನ್ಯೂ ಮತ್ತು ಹೊಸ Ioniq 5 EV ಅನ್ನು ಭಾರತಕ್ಕೆ ತರುವಲ್ಲಿ ನಿರತವಾಗಿದೆ, ಭಾರತೀಯ ರಸ್ತೆಗಳಲ್ಲಿ ಕ್ರೆಟಾ ಎನ್ ಲೈನ್ ಮುಂದಿನ ವರ್ಷ ಬಿಡುಗಡೆಯಾಗುವ ಸಾಧ್ಯತೆಗಳಿದೆ,

Most Read Articles

Kannada
English summary
New hyundai creta n line suv revealed specs features details
Story first published: Friday, June 10, 2022, 10:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X