ಕಳೆದ ತಿಂಗಳು ಅಗಸ್ಟ್‌ನಲ್ಲಿ ಬಿಡುಗಡೆಯಾದ ಪ್ರಮುಖ ಕಾರು ಮಾದರಿಗಳಿವು!

ದೇಶಿಯ ಮಾರುಕಟ್ಟೆಯಲ್ಲಿ ಹಲವು ಹೊಸ ಕಾರುಗಳು ಕಳೆದ ತಿಂಗಳು ಅಗಸ್ಟ್‌ನಲ್ಲಿ ಗ್ರಾಹಕರ ಬೇಡಿಕೆಯೆಂತೆ ಹಲವು ಹೊಸ ಕಾರು ಮಾದರಿಗಳು ಮಾರುಕಟ್ಟೆ ಪ್ರವೇಶಿಸಿವೆ.

Recommended Video

New Maruti Alto K10 KANNADA Review | What’s New On The Affordable Hatchback? Mileage & Comfort

ಹೊಸ ಕಾರುಗಳಲ್ಲಿ ಮಧ್ಯಮ ಕ್ರಮಾಂಕದ ಮಾದರಿಗಳ ಜೊತೆಗೆ ಐಷಾರಾಮಿ ಕಾರುಗಳು ಸಹ ಬಿಡುಗಡೆಯಾಗಿದ್ದು, ಹೊಸ ಕಾರುಗಳ ಬೆಲೆ, ಎಂಜಿನ್ ಮತ್ತು ಪ್ರಮುಖ ಫೀಚರ್ಸ್ ಮಾಹಿತಿಯನ್ನು ಇಲ್ಲಿ ಚರ್ಚಿಸಲಾಗಿದೆ.

ಕಳೆದ ತಿಂಗಳು ಅಗಸ್ಟ್‌ನಲ್ಲಿ ಬಿಡುಗಡೆಯಾದ ಪ್ರಮುಖ ಕಾರು ಮಾದರಿಗಳಿವು!

ಹೊಸ ಮಾರುತಿ ಆಲ್ಟೋ ಕೆ10

ಮಾರುತಿ ಸುಜುಕಿ ಆಲ್ಟೋ ಕಳೆದ 22 ವರ್ಷಗಳಿಂದ ಭಾರತದಲ್ಲಿ ಹೆಚ್ಚು ಇಷ್ಟಪಟ್ಟ ಮತ್ತು ಹೆಚ್ಚಿನ ಬೇಡಿಕೆಯ ಕಾರು ಮಾದರಿಯಾಗಿದೆ. ಮಾರುತಿ ಆಲ್ಟೋ ಈಗಾಗಲೇ 4.32 ಮಿಲಿಯನ್ (43.2 ಲಕ್ಷ) ಗ್ರಾಹಕರೊಂದಿಗೆ ಕುಟುಂಬದ ನೆಚ್ಚಿನ ಕಾರು ಮಾದರಿಯಾಗಿದ್ದು, ಇದೀಗ ಹೊಸ ನವೀಕರಣಗಳೊಂದಿಗೆ ಮತ್ತೊಮ್ಮೆ ಮಾರುಕಟ್ಟೆ ಪ್ರವೇಶಿಸಿದೆ.

ಕಳೆದ ತಿಂಗಳು ಅಗಸ್ಟ್‌ನಲ್ಲಿ ಬಿಡುಗಡೆಯಾದ ಪ್ರಮುಖ ಕಾರು ಮಾದರಿಗಳಿವು!

ಹೊಸ ಮಾರುತಿ ಸುಜುಕಿ ಆಲ್ಟೋ ಕೆ10 ಹ್ಯಾಚ್‌ಬ್ಯಾಕ್‌ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 3.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 5.83 ಲಕ್ಷ ಬೆಲೆ ಹೊಂದಿದ್ದು, ಹೊಸ ಆಲ್ಟೋ ಕೆ10 ಹೊಸ ಮಾದರಿಯು ಸುಧಾರಿತ ವಿನ್ಯಾಸ, ಹೆಚ್ಚು ಪ್ರೀಮಿಯಂ ಒಳಾಂಗಣ ಮತ್ತು ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಹೊಸ ಕಾರು 1.0-ಲೀಟರ್ K10C ಮೂರು-ಸಿಲಿಂಡರ್ ಡ್ಯುಯಲ್ ಜೆಟ್ ಡ್ಯುಯಲ್ VVT ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು ಪ್ರತಿ ಲೀಟರ್‌ಗೆ 24.90 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಕಳೆದ ತಿಂಗಳು ಅಗಸ್ಟ್‌ನಲ್ಲಿ ಬಿಡುಗಡೆಯಾದ ಪ್ರಮುಖ ಕಾರು ಮಾದರಿಗಳಿವು!

ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್

ಮಹೀಂದ್ರಾ ಕಂಪನಿಯು ಹಳೆಯ ತಲೆಮಾರಿನ ನವೀಕೃತ ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿ ಮಾದರಿಯನ್ನು ಬಿಡುಗಡೆ ಮಾಡಿದೆ. ಹೊಸ ಸ್ಕಾರ್ಪಿಯೋ ಕ್ಲಾಸಿಕ್ ಮಾದರಿಯನ್ನು ಮಹೀಂದ್ರಾ ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಪ್ರಮುಖ ಬದಲಾವಣೆಗಳೊಂದಿಗೆ ಬಿಡುಗಡೆ ಮಾಡಿದ್ದು, ವಿವಿಧ ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ಹೊಸ ಕಾರಿನ ಎಸ್ ವೆರಿಯೆಂಟ್ ಎಕ್ಸ್‌ಶೋರೂಂ ಪ್ರಕಾರ ರೂ. 11.99 ಲಕ್ಷ ಬೆಲೆ ಹೊಂದಿದ್ದರೆ ಎಸ್11 ಟಾಪ್ ಎಂಡ್ ಮಾದರಿಯು ರೂ. 15.49 ಲಕ್ಷ ಬೆಲೆ ಹೊಂದಿದೆ.

ಕಳೆದ ತಿಂಗಳು ಅಗಸ್ಟ್‌ನಲ್ಲಿ ಬಿಡುಗಡೆಯಾದ ಪ್ರಮುಖ ಕಾರು ಮಾದರಿಗಳಿವು!

ಸ್ಕಾರ್ಪಿಯೋ ಕ್ಲಾಸಿಕ್ ಮಾದರಿಯು ಹೊಸದಾಗಿ 2.2 ಲೀಟರ್ ಎಂಹ್ವಾಕ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದು, ಇದರಲ್ಲಿ ಸ್ಕಾರ್ಪಿಯೋ-ಎನ್ ಮಾದರಿಯಲ್ಲಿ ಪೆಟ್ರೋಲ್ ಎಂಜಿನ್, ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ನೀಡಲಾಗಿಲ್ಲ. ಸ್ಕಾರ್ಪಿಯೋ-ಎನ್ ಮಾದರಿಯು ಸಂಪೂರ್ಣವಾಗಿ ಹೊಸ ಮಾದರಿಯಾಗಿದ್ದರೆ ಸ್ಕಾರ್ಪಿಯೋ-ಕ್ಲಾಸಿಕ್ ಮಾದರಿಯು ಈ ಹಿಂದಿನ ತಲೆಮಾರಿನ ವೈಶಿಷ್ಟ್ಯತೆಗಳಲ್ಲಿಯೇ ಕೆಲವು ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಕಳೆದ ತಿಂಗಳು ಅಗಸ್ಟ್‌ನಲ್ಲಿ ಬಿಡುಗಡೆಯಾದ ಪ್ರಮುಖ ಕಾರು ಮಾದರಿಗಳಿವು!

ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಜೆಟ್ ಎಡಿಷನ್

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಜನಪ್ರಿಯ ಎಸ್‌ಯುವಿ ಕಾರು ಮಾದರಿಗಳಾದ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿಗಳಲ್ಲಿ ಜೆಟ್ ಎಡಿಷನ್ ಬಿಡುಗಡೆ ಮಾಡಿದೆ. ಜೆಟ್ ಎಡಿಷನ್ ಸ್ಟ್ಯಾಂಡರ್ಡ್ ಮಾದರಿಗಿಂತ ಹೆಚ್ಚಿನ ಫೀಚರ್ಸ್‌ಗಳೊಂದಿಗೆ ವಿಶೇಷ ಬಣ್ಣದ ಆಯ್ಕೆ ಹೊಂದಿರಲಿವೆ. ಜೆಟ್ ಆವೃತ್ತಿಗಳು ಅಸ್ತಿತ್ವದಲ್ಲಿರುವ ಮಾದರಿಗಳ ಉನ್ನತ ರೂಪಾಂತರವನ್ನು ಆಧರಿಸಿದ್ದು, ಇವುಗಳು ವಿಶಿಷ್ಟವಾದ ಡ್ಯುಯಲ್ ಟೋನ್ ಸ್ಟಾರ್‌ಲೈಟ್ ಬಣ್ಣದ ಆಯ್ಕೆ ಹಾಗೂ ಕಂಚು ಬಣ್ಣದೊಂದಿಗೆ ಸಿಲ್ವರ್ ರೂಫ್ ಹೊಂದಿವೆ.

ಕಳೆದ ತಿಂಗಳು ಅಗಸ್ಟ್‌ನಲ್ಲಿ ಬಿಡುಗಡೆಯಾದ ಪ್ರಮುಖ ಕಾರು ಮಾದರಿಗಳಿವು!

ಆರಂಭಿಕ ಮಾದರಿಯಾದ ನೆಕ್ಸಾನ್ ಜೆಟ್ ಎಡಿಷನ್ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 12.13 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 14.08 ಲಕ್ಷ ಬೆಲೆ ಹೊಂದಿದ್ದು, ಹ್ಯಾರಿಯರ್ ರೂ. 22.20 ಲಕ್ಷದಿಂದ ರೂ. 22.90 ಲಕ್ಷ ಬೆಲೆ ಹೊಂದಿದೆ. ಹಾಗೆಯೇ ಸಫಾರಿ ಎಸ್‌ಯುವಿಯ ಜೆಟ್ ಎಡಿಷನ್ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 21.35 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 22.75 ಲಕ್ಷ ಬೆಲೆ ಹೊಂದಿವೆ.

ಕಳೆದ ತಿಂಗಳು ಅಗಸ್ಟ್‌ನಲ್ಲಿ ಬಿಡುಗಡೆಯಾದ ಪ್ರಮುಖ ಕಾರು ಮಾದರಿಗಳಿವು!

ಹೊಸ ಹ್ಯುಂಡೈ ಟ್ಯೂಸಾನ್

ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಫುಲ್ ಸೈಜ್ ಪ್ರೀಮಿಯಂ ಎಸ್‌ಯುವಿ ಮಾದರಿಯಾದ ಟ್ಯೂಸಾನ್ 2022ರ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 27.70 ಲಕ್ಷ ಬೆಲೆ ಹೊಂದಿದೆ.

ಕಳೆದ ತಿಂಗಳು ಅಗಸ್ಟ್‌ನಲ್ಲಿ ಬಿಡುಗಡೆಯಾದ ಪ್ರಮುಖ ಕಾರು ಮಾದರಿಗಳಿವು!

ಹೊಸ ಕಾರು ಮಾದರಿಯಲ್ಲಿ ಹ್ಯುಂಡೈ ಕಂಪನಿಯು ಪೆಟ್ರೋಲ್ ಮತ್ತು ಡಿಸೇಲ್ ಎಂಜಿನ್ ಆಯ್ಕೆ ನೀಡಿದ್ದು, ಹೈ ಎಂಡ್ ಡೀಸೆಲ್ ಮಾದರಿಯಲ್ಲಿ ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಮತ್ತು ಮಲ್ಟಿ ಟೆರೇನ್ ಮೋಡ್(ಸ್ನೋ, ಮಡ್, ಸ್ಯಾಂಡ್) ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡುವ ಬದಲು ಆಯ್ಕೆ ರೂಪದಲ್ಲಿ ನೀಡಲಾಗಿದೆ.

ಕಳೆದ ತಿಂಗಳು ಅಗಸ್ಟ್‌ನಲ್ಲಿ ಬಿಡುಗಡೆಯಾದ ಪ್ರಮುಖ ಕಾರು ಮಾದರಿಗಳಿವು!

ಜಾಗತಿಕ ಮಾರುಕಟ್ಟೆಯಲ್ಲಿ ಹಲವಾರು ಪ್ರೀಮಿಯಂ ಎಸ್‌ಯುವಿ ಫ್ಲ್ಯಾಗ್‌ಶಿಪ್ ಮಾರಾಟ ಹೊಂದಿರುವ ಹ್ಯುಂಡೈ ಕಂಪನಿಯು ಟ್ಯೂಸಾನ್ ಹೊಸ ಮಾದರಿಯನ್ನು ಹಲವಾರು ಬದಲಾವಣೆಗಳೊಂದಿಗೆ ಬಿಡುಗಡೆ ಮಾಡಿದೆ. ಹೊಸ ಕಾರು ಮಾದರಿಯು ಗ್ರಾಹಕರ ಬೇಡಿಕೆ ಆಧರಿಸಿ ಪ್ಲ್ಯಾಟಿನಂ ಮತ್ತು ಸಿಗ್ನೆಚರ್ ಎನ್ನುವ ಎರಡು ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಹೊಸ ಕಾರು ಮಾದರಿಯು ಮೊದಲ ಬಾರಿಗೆ ಎಡಿಎಎಸ್ ಸೌಲಭ್ಯದೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಕಳೆದ ತಿಂಗಳು ಅಗಸ್ಟ್‌ನಲ್ಲಿ ಬಿಡುಗಡೆಯಾದ ಪ್ರಮುಖ ಕಾರು ಮಾದರಿಗಳಿವು!

2022ರ ಎಂಜಿ ಗ್ಲೊಸ್ಟರ್ ಎಸ್‌ಯುವಿ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಎಂಜಿ ಮೋಟಾರ್ ತನ್ನ ಹೊಸ 2022ರ ಗ್ಲೊಸ್ಟರ್ ಎಸ್‌ಯುವಿಯನ್ನು ಬಿಡುಗಡೆ ಮಾಡಿದ್ದು, ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 31.99 ಲಕ್ಷ ಬೆಲೆಯೊಂದಿಗೆ ಹಲವಾರು ಅತ್ಯಾಧುನಿಕ ಫೀಚರ್ಸ್ ಹೊಂದಿದೆ.

ಕಳೆದ ತಿಂಗಳು ಅಗಸ್ಟ್‌ನಲ್ಲಿ ಬಿಡುಗಡೆಯಾದ ಪ್ರಮುಖ ಕಾರು ಮಾದರಿಗಳಿವು!

2022ರ ಎಂಜಿ ಗ್ಲೊಸ್ಟರ್ ಎಸ್‌ಯುವಿಯು 2.0 ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಸೂಪರ್, ಶಾರ್ಪ್ ಮತ್ತು ಸ್ಯಾವಿ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದ್ದು, 6 ಸೀಟರ್ ಮತ್ತು 7 ಸೀಟರ್ ಆಯ್ಕೆ ಹೊಂದಿರುವ ಹೊಸ ಕಾರು ನವೀಕೃತ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟ್ ಸಿಸ್ಟಮ್ (ADAS) ನೊಂದಿಗೆ ಡೋರ್ ಓಪನ್ ವಾರ್ನಿಂಗ್ (DOW), ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್ (RCTA), ಮತ್ತು ಲೇನ್ ಚೇಂಜ್ ಅಸಿಸ್ಟ್ (LCA) ನಂತಹ ಹೆಚ್ಚುವರಿ ಮೊದಲ-ಇನ್-ಸೆಗ್ಮೆಂಟ್ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ಕಳೆದ ತಿಂಗಳು ಅಗಸ್ಟ್‌ನಲ್ಲಿ ಬಿಡುಗಡೆಯಾದ ಪ್ರಮುಖ ಕಾರು ಮಾದರಿಗಳಿವು!

ಆಡಿ ಕ್ಯೂ3 ಎಸ್‌ಯುವಿ

ಸುದೀರ್ಘ ಕಾಯುವಿಕೆಯ ನಂತರ ಆಡಿ ಇಂಡಿಯಾ ಅಂತಿಮವಾಗಿ ಭಾರತದಲ್ಲಿ ತನ್ನ ಹೊಸ ಕ್ಯೂ3 ಎಸ್‌ಯುವಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 44.89 ಲಕ್ಷ ಬೆಲೆ ಹೊಂದಿದೆ.

ಕಳೆದ ತಿಂಗಳು ಅಗಸ್ಟ್‌ನಲ್ಲಿ ಬಿಡುಗಡೆಯಾದ ಪ್ರಮುಖ ಕಾರು ಮಾದರಿಗಳಿವು!

ಹೊಸ ಕಾರು ಪ್ರೀಮಿಯಂ ಪ್ಲಸ್ ಮತ್ತು ಟೆಕ್ನಾಲಜಿ ಎಂಬ ಎರಡು ರೂಪಾಂತರಗಳನ್ನು ಹೊಂದಿದ್ದು, 2.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ ಆಯ್ಕೆ ಹೊಂದಿದೆ. ಕ್ಯೂ3 ಭಾರತದಲ್ಲಿ ಅತ್ಯುತ್ತಮ ಮಾರಾಟವಾದ ಮತ್ತು ಸೆಗ್ಮೆಂಟ್ ಲೀಡರ್ ಎಸ್‌ಯುವಿಗಳಲ್ಲಿ ಒಂದಾಗಿದ್ದು, ಇದೀಗ ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಕಳೆದ ತಿಂಗಳು ಅಗಸ್ಟ್‌ನಲ್ಲಿ ಬಿಡುಗಡೆಯಾದ ಪ್ರಮುಖ ಕಾರು ಮಾದರಿಗಳಿವು!

ಎಕ್ಸ್7 ಜಹ್ರೇ ಎಂ ಎಡಿಷನ್

ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ತನ್ನ ಪ್ರಮುಖ ಕಾರುಗಳ ಸರಣಿಯಲ್ಲಿ ಹೊಸದಾಗಿ 50ಎಂ ಜಹ್ರೇ ಎಂ ಎಡಿಷನ್ ಬಿಡುಗಡೆಗೊಳಿಸುತ್ತಿದೆ. ಕಂಪನಿಯು ಇದೀಗ ಹೊಸ ಎಕ್ಸ್7 40ಐ ಎಂ ಸ್ಪೋರ್ಟ್ ಮಾದರಿಯಲ್ಲೂ ಕೂಡಾ ವಿನೂತನ ವಿನ್ಯಾಸದ 50 ಜಹ್ರೇ ಎಂ ಎಡಿಷನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಕಳೆದ ತಿಂಗಳು ಅಗಸ್ಟ್‌ನಲ್ಲಿ ಬಿಡುಗಡೆಯಾದ ಪ್ರಮುಖ ಕಾರು ಮಾದರಿಗಳಿವು!

ಹೊಸ ಎಕ್ಸ್7 40ಐ ಎಂ ಸ್ಪೋರ್ಟ್ 50 ಜಹ್ರೇ ಎಂ ಎಡಿಷನ್ ಭಾರತದಲ್ಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.20 ಕೋಟಿ ಬೆಲೆ ಹೊಂದಿದ್ದು, ಹೊಸ ಕಾರು ಮಾದರಿಯನ್ನು ಮುಂದಿನ ಕೆಲವೇ ದಿನಗಳಲ್ಲಿ ವಿತರಣೆ ಆರಂಭಗೊಳ್ಳುವುದಾಗಿ ಬಿಎಂಡಬ್ಲ್ಯು ಕಂಪನಿಯು ಮಾಹಿತಿ ಹಂಚಿಕೊಂಡಿದೆ.

ಕಳೆದ ತಿಂಗಳು ಅಗಸ್ಟ್‌ನಲ್ಲಿ ಬಿಡುಗಡೆಯಾದ ಪ್ರಮುಖ ಕಾರು ಮಾದರಿಗಳಿವು!

ಮರ್ಸಿಡಿಸ್-ಎಎಂಜಿ ಇಕ್ಯೂಎಸ್ 53 4ಮ್ಯಾಟಿಕ್+

ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ತನ್ನ ಮರ್ಸಿಡಿಸ್-ಎಎಂಜಿ ಇಕ್ಯೂಎಸ್ 53 4ಮ್ಯಾಟಿಕ್+ ಎಲೆಕ್ಟ್ರಿಕ್ ಸೆಡಾನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹೊಸ ಮರ್ಸಿಡಿಸ್-ಎಎಂಜಿ ಇಕ್ಯೂಎಸ್ 53 4ಮ್ಯಾಟಿಕ್+ ಎಲೆಕ್ಟ್ರಿಕ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ಆರಂಭಿಕ ಬೆಲೆಯು ರೂ.2.45 ಕೋಟಿಯಾಗಿದೆ. ಈ ಹೊಸ ಮರ್ಸಿಡಿಸ್-ಎಎಂಜಿ ಇಕ್ಯೂಎಸ್ 53 4ಮ್ಯಾಟಿಕ್+ ಎಲೆಕ್ಟ್ರಿಕ್ ಸೆಡಾನ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಆಡಿ ಇ-ಟ್ರಾನ್ ಆರ್‌ಎಸ್ ಮತ್ತು ಪೋರ್ಷೆ ಟೇಕಾನ್ ಎಲೆಕ್ಟ್ರಿಕ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.

ಕಳೆದ ತಿಂಗಳು ಅಗಸ್ಟ್‌ನಲ್ಲಿ ಬಿಡುಗಡೆಯಾದ ಪ್ರಮುಖ ಕಾರು ಮಾದರಿಗಳಿವು!

ಹೊಸ ಮರ್ಸಿಡಿಸ್-ಎಎಂಜಿ ಇಕ್ಯೂಎಸ್ 53 4ಮ್ಯಾಟಿಕ್+ ಎಲೆಕ್ಟ್ರಿಕ್ ಸೆಡಾನ್ ಸಾಕಷ್ಟು ಸ್ಪೋರ್ಟಿ ಲುಕ್ ಅನ್ನು ಹೊಂದಿದ್ದು, ದೂರದಿಂದ ನೋಡಿದಾಗ ಪೆಟ್ರೋಲ್-ಚಾಲಿತ ಮರ್ಸಿಡಿಸ್-ಎಎಂಜಿ ಕಾರಿನಂತೆ ಕಾಣುತ್ತದೆ. ಈ ಹೊಸ ಎಲೆಕ್ಟ್ರಿಕ್ ಕಾರಿನ ಸ್ಟೈಲಿಂಗ್‌ನಲ್ಲಿ ಶಾರ್ಪ್ ಮತ್ತು ಭವ್ಯವಾದ ನಿಲುವನ್ನು ಹೊಂದಿದೆ.

Article Published On: Thursday, September 1, 2022, 16:58 [IST]
English summary
New launched cars in august 2022 mahindra scorpio classic tata jet edition and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+