Just In
- 3 hrs ago
ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ಹೊಸ ಕಾರು ಮಾದರಿಗಳಿವು!
- 4 hrs ago
ಹೆಚ್ಚಿನ ಮೈಲೇಜ್ನೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ಸ್ವಿಫ್ಟ್ ಸಿಎನ್ಜಿ ಕಾರು
- 5 hrs ago
ಬಿಡುಗಡೆಗೂ ಮುನ್ನ 33 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡ ಮಾರುತಿ ಗ್ರ್ಯಾಂಡ್ ವಿಟಾರಾ
- 6 hrs ago
ವಿಶ್ವ ಜೈವಿಕ ಇಂಧನ ದಿನ: ವಾರ್ಷಿಕವಾಗಿ 3 ಕೋಟಿ ಲೀಟರ್ ಎಥೆನಾಲ್ ಉತ್ಪಾದನಾ ಸ್ಥಾವರ ಆರಂಭ
Don't Miss!
- News
ಅಮೆರಿಕ-ಭಾರತ ಬಾಂಧವ್ಯ ವೃದ್ಧಿಗೆ ಬೆಂಗಳೂರಿನ ಕಂಪನಿಗಳ ಕೊಡುಗೆ
- Movies
100 ಸಂಚಿಕೆ ಪೂರೈಸಿದ 'ರಾಜಿ': ಸೊಸೆಯ ಮುಗ್ಧತೆ ಅರ್ಥ ಮಾಡಿಕೊಳ್ಳುತ್ತಾಳಾ ಸರಸ್ವತಿ?
- Sports
ಬಾಲಿವುಡ್ ನಟಿ ಊರ್ವಶಿ ರೌಟೇಲಾ ಬಗ್ಗೆ ಕ್ರಿಕೆಟಿಗ ರಿಷಬ್ ಪಂತ್ ಗರಂ! ವಿವಾದ ಹುಟ್ಟುಹಾಕಿದ ಪೋಸ್ಟ್
- Lifestyle
ಜ್ಯೋತಿಷ್ಯ: ಯಾವ ರಾಶಿಯವರ ಮಾನಸಿಕ ಸ್ಥಿರತೆ ಹೇಗಿರುತ್ತದೆ, ಯಾರು ಮೊದಲಿಗರು ಯಾರು ಕೊನೆಯವರು?
- Finance
ಕೇರಳ ಲಾಟರಿ: 'ಕಾರುಣ್ಯ ಪ್ಲಸ್ KN 433' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ
- Technology
ಮೊಟೊ S30 ಪ್ರೊ ಸ್ಮಾರ್ಟ್ಫೋನ್ ಲಾಂಚ್! ಪ್ರೊಸೆಸರ್ ಯಾವುದು?
- Travel
ಯಾಣ - ಅತ್ಯದ್ಬುತ ಶಿಲೆಗಳಿರುವ ಇರುವ ತಾಣ!
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ಹೊಸ ಮಹೀಂದ್ರಾ ಸ್ಕಾರ್ಪಿಯೊ-N ಎಲ್ಲಾ ವೇರಿಯಂಟ್‌ಗಳ ಆನ್-ರೋಡ್ ಬೆಲೆಗಳು ಬಹಿರಂಗ
ಹೊಸ ಮಹೀಂದ್ರಾ ಸ್ಕಾರ್ಪಿಯೊ-N ಆಟೋಮ್ಯಾಟಿಕ್ 6-ಸೀಟರ್ ಮತ್ತು ಫೋರ್-ವೀಲ್ ಡ್ರೈವ್ (4WD) ವೇರಿಯಂಟ್‌ಗಳ ಪರಿಚಯಾತ್ಮಕ ಬೆಲೆಗಳನ್ನು ಇತ್ತೀಚೆಗೆ ಬಹಿರಂಗಪಡಿಸಿದ್ದು, ಅದರಂತೆ ಮಹೀಂದ್ರಾ ಸ್ಕಾರ್ಪಿಯೋ-N ಎಕ್ಸ್ ಶೋ ರೂಂ ಬೆಲೆಗಳು 11.99 ಲಕ್ಷ ರೂ.ನಿಂದ ಆರಂಭವಾಗಿ ಟಾಪ್ ವೇರಿಯಂಟ್ ಬೆಲೆ 23.9 ಲಕ್ಷ ರೂ.ವರೆಗೆ ಇದೆ.

ಇನ್ನು 2022 ಮಹೀಂದ್ರಾ ಸ್ಕಾರ್ಪಿಯೋ-N ಆನ್ ರೋಡ್ ಬೆಲೆಗಳು ಸ್ಥಳೀಯ ತೆರಿಗೆಗಳನ್ನು ಅವಲಂಬಿಸಿ ನಗರದಿಂದ ನಗರಕ್ಕೆ ಬದಲಾಗುತ್ತವೆ. ಅದರಂತೆ ಅತಿ ಕಡಿಮೆ ಬೆಲೆಯನ್ನು ಅಹಮದಾಬಾದ್ ಪಡೆದುಕೊಂಡಿದ್ದು, ಇಲ್ಲಿ ಎಂಟ್ರಿ ಲೆವಲ್‌ಗೆ ಸುಮಾರು 13.5 ಲಕ್ಷ ರೂ. ಇದ್ದರೆ, ಅತಿ ಹೆಚ್ಚು ಬೆಲೆಯನ್ನು ಕೊಚ್ಚಿ ಪಡೆದುಕೊಂಡಿದ್ದು, ಇಲ್ಲಿನ ಬೆಲೆಯು ಟಾಪ್ ವೇರಿಯಂಟ್‌ಗೆ ಸುಮಾರು 30 ಲಕ್ಷ ರೂ. ಇದೆ.

ಮಹೀಂದ್ರಾ ಸ್ಕಾರ್ಪಿಯೋ ತನ್ನ ಪ್ರಯಾಣವನ್ನು 2002 ರಲ್ಲಿ ಪ್ರಾರಂಭಿಸಿತು. ಆ ಸಮಯದಲ್ಲಿ, ಟಾಪ್ ಎಂಡ್ ಮಾದರಿಯನ್ನು ರಸ್ತೆಗಿಳಿಸಲು ಕೇವಲ 10 ಲಕ್ಷಕ್ಕಿಂತ ಕಡಿಮೆ ವೆಚ್ಚವಾಗುತ್ತಿತ್ತು. ಆದರೆ ಇಂದು ಟಾಪ್ ಸ್ಪೆಕ್ ಸ್ಕಾರ್ಪಿಯೋ-N ನ ಹೊಸ ಆವೃತ್ತಿಯು ಕೇರಳದ ಕೊಚ್ಚಿಯಲ್ಲಿ ಖರೀದಿಸುವುದಾದರೆ 30 ಲಕ್ಷ ರೂ. ಆಗಲಿದೆ. ಭಾರತದ ಕೆಲವು ನಗರಗಳಲ್ಲಿ ಹೊಸ ಮಹೀಂದ್ರಾ ಸ್ಕಾರ್ಪಿಯೊ-ಎನ್ ಆನ್-ರೋಡ್ ಬೆಲೆಗಳನ್ನು ಈ ಕೆಳಗೆ ನೀಡಲಾಗಿದೆ.
Cities | Mahindra Scorpio-N On-road Price, Lakh |
Mumbai | ₹14.46 - ₹29.17 |
Delhi | ₹14.23 - ₹28.54 |
Bangalore | ₹15.26 - ₹29.83 |
Hyderabad | ₹15.11 - ₹29.82 |
Ahmedabad | ₹13.47 - ₹26.95 |
Chennai | ₹14.80 - ₹29.12 |
Kolkata | ₹14.19 - ₹27.91 |
Surat | ₹13.45 - ₹26.92 |
Pune | ₹14.46 - ₹29.17 |
Jaipur | ₹14.17 - ₹28.36 |
Lucknow | ₹13.81 - ₹27.16 |
Patna | ₹14.17 - ₹28.36 |
Kochi | ₹14.53 - ₹30.51 |

ಇವುಗಳು ಪರಿಚಯಾತ್ಮಕ ಬೆಲೆಗಳು ಮತ್ತು ಮೊದಲ 25,000 ಬುಕಿಂಗ್‌ಗಳಿಗೆ ಮಾತ್ರ ಮಾನ್ಯವಾಗಿರುತ್ತವೆ ಎಂಬುದನ್ನು ಗಮನಿಸಬೇಕಾಗಿದೆ. ನಾವು XUV700 ಮತ್ತು ಥಾರ್ ವಿಷಯದಲ್ಲಿ ನೋಡಿದಂತೆ, ಮುಂಬರುವ ತಿಂಗಳುಗಳಲ್ಲಿ ಬೆಲೆಗಳು ಶೇ5-10 ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇದರ ಹೊರತಾಗಿಯೂ, ಭಾರತದಲ್ಲಿ 6/7 ಸೀಟ್ ಆಯ್ಕೆಯೊಂದಿಗೆ ಫ್ರೇಮ್ 4WD SUV ನಲ್ಲಿ ಸ್ಕಾರ್ಪಿಯೋ-N ಅತ್ಯಂತ ಕೈಗೆಟುಕುವ ಕಾರಾಗಿದೆ.

ಮಹೀಂದ್ರಾ ಸ್ಕಾರ್ಪಿಯೊ-N ಅನ್ನು ಈಟರ್ ಪೆಟ್ರೋಲ್ ಅಥವಾ ಡೀಸೆಲ್ ಎಂಜಿನ್‌ನೊಂದಿಗೆ ನೀಡಲಾಗುತ್ತದೆ. TGDi mStallion ಪೆಟ್ರೋಲ್ ಎಂಜಿನ್ 200 hp ಪವರ್ ಮತ್ತು 380 Nm ಟಾರ್ಕ್ ನೀಡುತ್ತದೆ. mHawk ಡೀಸೆಲ್ ಎಂಜಿನ್ 175 hp ಪವರ್ ಮತ್ತು 400 Nm ಟಾರ್ಕ್ ಅನ್ನು ಹೊರಹಾಕುತ್ತದೆ. ಎರಡೂ ಎಂಜಿನ್‌ಗಳು 6-ಸ್ಪೀಡ್ ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳೊಂದಿಗೆ ಬರುತ್ತವೆ. ಆದರೆ 4X4 ಆಯ್ಕೆಯು ಕೇವಲ ಡೀಸಲ್ ಎಂಜಿನ್‌ನಲ್ಲಿ ಮಾತ್ರ ಲಭ್ಯವಿದೆ.

4XPLOR ಜೊತೆಗೆ Scorpio-N ಮೊದಲ ದರ್ಜೆಯ ಇಂಟಲಿಜೆಂಟ್ ಟೆರೈನ್ ನಿರ್ವಹಣೆ ತಂತ್ರಜ್ಞಾನವನ್ನು ಎಲೆಕ್ಟ್ರಿಕ್ ಶಿಫ್ಟ್-ಆನ್-ಫ್ಲೈ 4Wheel ಡ್ರೈವ್ ಸಿಸ್ಟಮ್‌ನೊಂದಿಗೆ ನೀಡುತ್ತದೆ. ಇದು SUV ಅನ್ನು 2WD ಮೋಡ್‌ನಿಂದ ಹೆಚ್ಚು ಸಾಮರ್ಥ್ಯದ 4WD ಗೆ ಪರಿವರ್ತಿಸುತ್ತದೆ. ಇದು Zip, Zap ಮತ್ತು Zoom ನ ಮೂರು ಡ್ರೈವ್ ಮೋಡ್‌ಗಳನ್ನು ಸಹ ಪಡೆಯುತ್ತದೆ.

ಜಿಪ್ ಭಾರೀ ಟ್ರಾಫಿಕ್ ಪರಿಸ್ಥಿತಿಗಳ ನಡುವೆ ಸುಗಮ ಸವಾರಿಯನ್ನು ನೀಡಿದರೆ. Zap ಅದರ SUV ಪರ್ಫಾಮೆನ್ಸ್ ತೋರಿಸುತ್ತದೆ, ಇನ್ನು ಜೂಮ್ ಮೋಡ್ ರೈಡ್‌ನ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಪುಣೆ ಬಳಿಯ ಚಕನ್‌ನಲ್ಲಿರುವ ಕಂಪನಿಯ ಸ್ಥಾವರದಲ್ಲಿ ಹೊಸ ಸ್ಕಾರ್ಪಿಯೋ N ಅನ್ನು ಉತ್ಪಾದಿಲಾಗುವುದು.

ಹೊಸ ಸ್ಕಾರ್ಪಿಯೋ N ಟಾಟಾ ಸಫಾರಿ, MG ಹೆಕ್ಟರ್ ಪ್ಲಸ್, ಮಹೀಂದ್ರಾ XUV700 ಮತ್ತು ಹುಂಡೈ ಅಲ್ಕಾಜರ್‌ಗಳೊಂದಿಗೆ ಸ್ಪರ್ಧಿಸಲಿದೆ. ಸೆಪ್ಟೆಂಬರ್ 26 ರಿಂದ ವಿತರಣೆಗಳು ಪ್ರಾರಂಭವಾಗಲಿದ್ದು, ಈ ವರ್ಷ 20,000 ಹೊಸ ಸ್ಕಾರ್ಪಿಯೊ ಘಟಕಗಳನ್ನು ಉತ್ಪಾದಿಸುವ ಗುರಿಯನ್ನು ಮಹೀಂದ್ರಾ ಹೊಂದಿದೆ.

ಮಹೀಂದ್ರಾ ಕಂಪನಿಯು ತನ್ನ ಎಲ್ಲೆಯನ್ನು ವಿಸ್ತರಿಸಲು ಭಾರತದಲ್ಲಿ ಅಧಿಕೃತ ಬಿಡುಗಡೆ ಬಳಿಕ ಇದೀಗ ಹೊಸ ಮಹೀಂದ್ರಾ ಸ್ಕಾರ್ಪಿಯೊ-N ಅನ್ನು ದಕ್ಷಿಣ ಆಫ್ರಿಕಾ ಮತ್ತು ನೇಪಾಳದಲ್ಲಿ ಅನಾವರಣಗೊಳಿಸಿದೆ. ಈ ಮೂಲಕ ತನ್ನ ಜಾಗತಿಕ ಹೆಜ್ಜೆಗುರುತನ್ನು ವಿಸ್ತರಿಸುತ್ತಿದೆ.

ಮಹೀಂದ್ರಾದ ಸ್ಕಾರ್ಪಿಯೋ N ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದ ಬಳಿಕ ಈ SUV ಹಲವಾರು ತಿಂಗಳುಗಳಿಂದ ಹಲವರಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿತ್ತು. ಈಗ ಅಂತಿಮವಾಗಿ ಭಾರತದಲ್ಲಿ ಬಿಡುಗಡೆಯಾಗಿದ್ದು, ಹೊಸ 3 ಸಾಲು, 6/7 ಆಸನಗಳ SUV ಅನ್ನು ಸ್ಕಾರ್ಪಿಯೋ-N ಎಂದು ನಾಮಕರಣ ಮಾಡಲಾಗಿದೆ.

ಇಟಲಿಯ ಪಿನಿನ್‌ಫರಿನಾ ಮತ್ತು ಮಹೀಂದ್ರ ಇಂಡಿಯಾ ಡಿಸೈನ್ ಸ್ಟುಡಿಯೋ (MIDS), ಮುಂಬೈನಲ್ಲಿ ಈ ಕಾರನ್ನು ವಿನ್ಯಾಸಗೊಳಿಸಲಾಗಿದೆ. ಇದರ ಜೊತೆಗೆ ಚೆನ್ನೈ ಬಳಿಯ ಮಹೀಂದ್ರಾ ರಿಸರ್ಚ್ ವ್ಯಾಲಿ (MRV) ಮತ್ತು USA ನಲ್ಲಿರುವ ಮಹೀಂದ್ರಾ ನಾರ್ತ್ ಅಮೇರಿಕನ್ ಟೆಕ್ನಿಕಲ್ ಸೆಂಟರ್ (MNATC) ನಲ್ಲಿ ವಿನ್ಯಾಸಗೊಳಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಈ ಹಿಂದೆ ವಾಹನ ಮಾರುಕಟ್ಟೆಯಲ್ಲಿ ಮಹೀಂದ್ರಾಗೆ ಭಾರೀ ಬೇಡಿಕೆ ತಂದುಕೊಟ್ಟಿದ್ದ ಸ್ಕಾರ್ಪಿಯೋ ಮಾದರಿಯು, ಇತರ ಬ್ರಾಂಡ್‌ಗಳ ಹೊಸ ಕಾರುಗಳಲ್ಲಿನ ಹಲವು ವೈಶಿಷ್ಟ್ಯಗಳ ಪೈಪೋಟಿಯಿಂದಾಗಿ ತುಸು ಹಿಂದೆ ಸರಿದಿತ್ತು. ಇದೀಗ ಹಲವು ಹೊಸ ಫೀಚರ್ಸ್ ಹೊಸ ಡಿಸೈನ್‌ನೊಂದಿಗೆ ಬಿಡುಗಡೆಯಾಗಿರುವ ಬಿಗ್ ಡ್ಯಾಡಿ ತನ್ನ ಪೂರ್ವ ವೈಭವವನ್ನು ಹಿಂಪಡೆಯಲಿದೆಯೇ ಎಂದು ಕಾದುನೋಡಬೇಕಿದೆ.