Just In
Don't Miss!
- Movies
ವಿಷ್ಣು ಸ್ಮಾರಕ ವಿಚಾರಕ್ಕೆ ಆಕ್ರೋಶ: ಫಿಲ್ಮ್ ಚೇಂಬರ್ ವಿರುದ್ಧ ಸಿಡಿದೆದ್ದ ವೀರಕಪುತ್ರ ಶ್ರೀನಿವಾಸ್
- News
ಓಲಾದಲ್ಲಿ ಎಸಿಯಿಲ್ಲ ಎಂದು 15,000 ಪರಿಹಾರ ಪಡೆದ ಬೆಂಗಳೂರಿನ ಉದ್ಯಮಿ, ವಿವರಗಳು
- Sports
Ind vs NZ1st T20: ವಾಶಿಂಗ್ಟನ್ 'ಸುಂದರ' ಆಟ ವ್ಯರ್ಥ: ಭಾರತಕ್ಕೆ ಮೊದಲ ಪಂದ್ಯದಲ್ಲೇ ಸೋಲಿನ ಆಘಾತ
- Lifestyle
2023ರಲ್ಲಿ ರಾಜಯೋಗದಿಂದಾಗಿ ಈ 4 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಆಕರ್ಷಕ ಬೆಲೆಯಲ್ಲಿ ಪವರ್‌ಪುಲ್ ಮಹೀಂದ್ರಾ ಎಕ್ಸ್‌ಯುವಿ300 ಟರ್ಬೋಸ್ಪೋರ್ಟ್ ಬಿಡುಗಡೆ
ಸ್ವದೇಶಿ ವಾಹನ ತಯಾರಕ ಕಂಪನಿಯಾದ ಮಹೀಂದ್ರಾ ತನ್ನ ಎಕ್ಸ್‌ಯುವಿ300 ಟರ್ಬೋಸ್ಪೋರ್ಟ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಮಹೀಂದ್ರಾ ಎಕ್ಸ್‌ಯುವಿ300 ಟರ್ಬೋಸ್ಪೋರ್ಟ್ ಆರಂಭಿಕ ಬೆಲೆಯು ರೂ.10.35 ಲಕ್ಷವಾಗಿದೆ.

ಹೊಸ ಮಹೀಂದ್ರಾ ಎಕ್ಸ್‌ಯುವಿ300 ಟರ್ಬೋಸ್ಪೋರ್ಟ್ W6 TGDi, W8 TGDi ಮತ್ತು W8(O) TGDi ಎಂಬ ಮೂರು ಟ್ರಿಮ್ ಹಂತಗಳಲ್ಲಿ ಲಭ್ಯವಿದೆ, ಹೊಸ 1.2-ಲೀಟರ್ mStallion TGDi ಎಂಜಿನ್‌ನಿಂದ ಪಡೆದ ಮೊದಲ ಎಸ್‍ಯುವಿ ಇದಾಗಿದ್ದು, ಇದು ಪವರ್ ಫುಲ್ ಎಂಜಿನ್ ಆಗಿದೆ. ಇದನ್ನು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ಜೋಡಿಸಲಾಗಿದೆ. ಈ ಮಹೀಂದ್ರಾ ಎಕ್ಸ್‌ಯುವಿ300 ಟರ್ಬೋಸ್ಪೋರ್ಟ್ ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ವೆನ್ಯೂ ಎನ್-ಲೈನ್, ಕಿಯಾ ಸೋನೆಟ್ ಎಕ್ಸ್-ಲೈನ್ ಮತ್ತು ಹೊಸ ಮಾರುತಿ ಬ್ರೆಝಾ ಮಾದರಿಗಳಿಗೆ ಪೈಪೋಟಿ ನೀಡುತ್ತದೆ.

ಈ ಹೊಸ ಮಹೀಂದ್ರಾ ಎಕ್ಸ್‌ಯುವಿ300 ಟರ್ಬೋಸ್ಪೋರ್ಟ್ ಎಸ್‍ಯುವಿಯ ಒಟ್ಟಾರೆ ವಿನ್ಯಾಸವು ಸಾಮಾನ್ಯ ಮಾದರಿಗೆ ಹೋಲುತ್ತದೆ. ಮುಂಭಾಗದ ಫಾಸಿಕ ಹೊಸ ಬ್ಲ್ಯಾಕ್ ಗ್ರಿಲ್ ಅನ್ನು ಹೊಂದಿದೆ. ಮುಂಭಾಗದಲ್ಲಿ ಸೆಂಟ್ರಲ್ ಏರ್ ಇನ್‌ಟೇಕ್‌ನಲ್ಲಿ ಕ್ರೋಮ್ ಇನ್‌ಸರ್ಟ್‌ಗಳನ್ನು ಬ್ಲ್ಯಾಕ್ ಔಟ್ ಮಾಡಲಾಗಿದೆ.

ಈ ಹೊಸ ರೂಪಾಂತರದೊಂದಿಗೆ, ಮಹೀಂದ್ರಾ ಎಕ್ಸ್‌ಯುವಿ300 ಎಸ್‍ಯುವಿಯಲ್ಲಿ ಹೊಸ ಟ್ವಿನ್ ಪೀಕ್ಸ್ ಲೋಗೋವನ್ನು ಕೂಡ ಸೇರಿಸಿದೆ. ಸ್ವದೇಶಿ ಎಸ್‌ಯುವಿ ತಯಾರಕರು ಇದು ಮೂರು ಹೊಸ ಡ್ಯುಯಲ್-ಟೋನ್ ಬಣ್ಣಗಳನ್ನು ಒಳಗೊಂಡಂತೆ ಒಟ್ಟು ನಾಲ್ಕು ಬಾಹ್ಯ ಬಣ್ಣದ ಯೋಜನೆಗಳಲ್ಲಿ ಪರಿಚಯಿಸಿದ್ದಾರೆ.

ಬ್ಲ್ಯಾಕ್ ರೂಫ್ ಟಾಪ್‌ನೊಂದಿಗೆ ಬ್ಲೇಜಿಂಗ್ ಬ್ರಾಂಜ್, ವೈಟ್ ರೂಫ್ ಟಾಪ್‌ನೊಂದಿಗೆ ನಪೋಲಿ ಬ್ಲ್ಯಾಕ್, ಬ್ಲ್ಯಾಕ್ ರೂಫ್ ಟಾಪ್‌ನೊಂದಿಗೆ ಪರ್ಲ್ ವೈಟ್ ಮತ್ತು ಬ್ಲೇಜಿಂಗ್ ಬ್ರೋಂಜ್ ಸಿಂಗಲ್- ಟೋನ್ ಶೇಡ್ ಪ್ರಸ್ತುತ ಪರ್ಲ್ ವೈಟ್ ಮತ್ತು ನಾಪೋಲಿ ಬ್ಲ್ಯಾಕ್ ಬಣ್ಣಗಳನ್ನು ಈ ರೂಪಾಂತರದೊಂದಿಗೆ ನೀಡುವುದನ್ನು ಮುಂದುವರೆಸಿದೆ.

ಈ ಹೊಸ ಹೊಸ ಮಹೀಂದ್ರಾ ಎಕ್ಸ್‌ಯುವಿ300 ಟರ್ಬೋಸ್ಪೋರ್ಟ್ ಎಸ್‍ಯುವಿಯ ಕ್ಯಾಬಿನ್ ಒಳಗೆ ಸಂಪೂರ್ಣ ಬ್ಲ್ಯಾಕ್ ಥೀಮ್ ಅನ್ನು ಹೊಂದಿದೆ, ಕಂಪನಿಯು ಡ್ಯಾಶ್‌ಬೋರ್ಡ್ ಮತ್ತು ಸ್ಟೀರಿಂಗ್ ವೀಲ್‌ನಲ್ಲಿ ಸಿಲವರ್ ಅಸ್ಸೆಟ್ ಗಳನ್ನು ಕೂಡ ಸೇರಿಸಿದೆ. ಅಸ್ತಿತ್ವದಲ್ಲಿರುವ ಮಾದರಿಯು ಡ್ಯುಯಲ್-ಟೋನ್ ಕಪ್ಪು ಮತ್ತು ಬೀಜ್ ಒಳಾಂಗಣವನ್ನು ಹೊಂದಿದೆ.

ಟಾಪ್-ಸ್ಪೆಕ್ ಎಕ್ಸ್‌ಯುವಿ300 ಟರ್ಬೋಸ್ಪೋರ್ಟ್ W8 (O) ರೂಪಾಂತರವು ಎಲೆಕ್ಟ್ರಿಕ್ ಸನ್‌ರೂಫ್, ಎಲ್ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳೊಂದಿಗೆ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ಲೆಥೆರೆಟ್ ಅಪ್ಹೋಲ್‌ಸ್ಟರಿ ಮತ್ತು 6 ಏರ್‌ಬ್ಯಾಗ್‌ಗಳಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ಈ ಹೊಸ ಎಸ್‍ಯುವಿಯಲ್ಲಿ 16-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ. ಈ ಎಸ್‍ಯುವಿಯಲ್ಲಿ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಜೊತೆಗೆ Apple CarPlay ಮತ್ತು Android Auto ಜೊತೆಗೆ ಕನೆಕ್ಟಿವಿಟಿ ಕಾರ್ ಟೆಕ್ ಅನ್ನು ಒಳಗೊಂಡಿದೆ.

ಈ ಹೊಸ ಮಹೀಂದ್ರಾ ಎಕ್ಸ್‌ಯುವಿ300 ಟರ್ಬೋಸ್ಪೋರ್ಟ್ ಎಸ್‍ಯುವಿಯಲ್ಲಿ ಟರ್ಬೋಚಾರ್ಜ್ಡ್ 1.2-ಲೀಟರ್ ಮೂರು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 128.2 ಬಿಹೆಚ್‍ಪಿ ಪವರ್ ಮತ್ತು 230 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೊಸ ಟರ್ಬೊ ಪೆಟ್ರೋಲ್ ಎಂಜಿನ್ ಹೆಚ್ಚುವರಿ 20 ಎನ್ಎಂ ಟಾರ್ಕ್ ಅನ್ನು ನೀಡುವ ಓವರ್-ಬೂಸ್ಟ್ ಕಾರ್ಯವನ್ನು ಹೊಂದಿದೆ.

ಸಾಮಾನ್ಯ ಎಕ್ಸ್‌ಯುವಿ300 ಪೆಟ್ರೋಲ್‌ಗೆ ಅಳವಡಿಸಲಾಗಿರುವ 1.2-ಲೀಟರ್ ಟರ್ಬೊ ಎಂಜಿನ್‌ಗೆ ಹೋಲಿಸಿದರೆ ಟರ್ಬೋಸ್ಪೋರ್ಟ್ ಹೊಸ ಟರ್ಬೋಚಾರ್ಜ್ಡ್ mStallion TGDi ಎಂಜಿನ್ ಹೆಚ್ಚುವರಿ 19 ಬಿಹೆಚ್‍ಪಿ ಮತ್ತು 30 ಎನ್ಎಂ ಟಾರ್ಕ್ ಅನ್ನು ನೀಡುತ್ತದೆ. ಹೊಸ ಎಕ್ಸ್‌ಯುವಿ300 ಟರ್ಬೋಸ್ಪೋರ್ಟ್ ಅನ್ನು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ನೀಡಲಾಗುತ್ತದೆ, ಈ ಎಸ್‍ಯುವಿಯನ್ನು ಕೇವಲ 5 ಸೆಕೆಂಡುಗಳಲ್ಲಿ 0-60 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಹೊಸ ಮಹೀಂದ್ರಾ ಎಕ್ಸ್‌ಯುವಿ300 ಟರ್ಬೋಸ್ಪೋರ್ಟ್ ಬಿಡುಗಡೆಯ ಕುರಿತು ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್‌ನ ಆಟೋಮೋಟಿವ್ ಟೆಕ್ನಾಲಜಿ ಮತ್ತು ಉತ್ಪನ್ನ ಅಭಿವೃದ್ಧಿಯ ಅಧ್ಯಕ್ಷ ಆರ್ ವೇಲುಸಾಮಿ ಅವರು ಮಾತನಾಡಿ, "TGDi ಪವರ್‌ಟ್ರೇನ್‌ನಿಂದ ಚಾಲಿತವಾಗಿರುವ ಹೊಸ TurboSportTM ಸರಣಿಯನ್ನು ಅಂತಿಮ ಚಾಲನಾ ಅನುಭವವನ್ನು ಬಯಸುವ ಥ್ರಿಲೇನಿಯಲ್‌ಗಳಿಗಾಗಿ ಅಭಿವೃದ್ಧಿಪಡಿಸಲಾಗಿದೆ. ಎಕ್ಸ್‌ಯುವಿ300 TGDi ಅನ್ನು ಅಡ್ರಿನಾಲಿನ್-ಪ್ಯಾಕ್ಡ್ ಎಸ್‍ಯುವಿಯನ್ನು ಬಯಸುವರಿಗಾಗಿ ಕಾರ್ಯಕ್ಷಮತೆ, ಸುರಕ್ಷತೆ, ಸೌಕರ್ಯ ಮತ್ತು ಆಕರ್ಷಕ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿದರು.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಹೊಸ ಮಹೀಂದ್ರಾ ಎಕ್ಸ್‌ಯುವಿ300 ಟರ್ಬೋಸ್ಪೋರ್ಟ್ ಎಸ್‍ಯುವಿಯು ಆಕರ್ಷಕ ಬೆಲೆ, ಹೆಚ್ಚುವರಿ ಪವರ್ ಮತ್ತು ಅಧಿಕ-ಬೂಸ್ಟ್ ಕಾರ್ಯದೊಂದಿಗೆ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ಎಸ್‍ಯುವಿಯು ಎಷ್ಟರ ಮಟ್ಟಿಗೆ ಪರ್ಫಾಮೆನ್ಸ್ ಪ್ರಿಯರ ಗಮನಸೆಳೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.