ಭಾರತದಲ್ಲಿಯೇ ನಿರ್ಮಾಣಗೊಂಡ ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್ ಕಾರು ಬಿಡುಗಡೆ

ಐಷಾರಾಮಿ ಕಾರು ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಮರ್ಸಿಡಿಸ್ ಬೆಂಝ್ ಇಂಡಿಯಾ ಕಂಪನಿಯು ಸ್ಥಳೀಯವಾಗಿ ನಿರ್ಮಾಣಗೊಳಿಸಿದ ಮೇಬ್ಯಾಕ್ ಎಸ್-ಕ್ಲಾಸ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಮಾದರಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 2.50 ಕೋಟಿ ಬೆಲೆ ಹೊಂದಿದೆ.

ಭಾರತದಲ್ಲಿಯೇ ನಿರ್ಮಾಣಗೊಂಡ ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್ ಕಾರು ಬಿಡುಗಡೆ

ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್ ಕಾರು ಮಾದರಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಎಸ್580 ಮತ್ತು ಎಸ್680 ವೆರಿಯೆಂಟ್‌ಗಳೊಂದಿಗೆ ಮಾರಾಟಗೊಳ್ಳಲಿದ್ದು, ಆರಂಭಿಕ ಮಾದರಿಯಾದ ಎಸ್580 ಆವೃತ್ತಿಯು ಭಾಗಶಃ ಭಾರತದಲ್ಲಿಯೇ ನಿರ್ಮಾಣಗೊಳ್ಳಲಿದ್ದರೆ ಎಸ್680 ಮಾದರಿಯು ಸಂಪೂರ್ಣವಾಗಿ ವಿದೇಶಿ ಮಾರುಕಟ್ಟೆಯಿಂದ ಆಮದು ಮಾಡಿಕೊಳ್ಳಲಾಗುತ್ತದೆ.

ಹೀಗಾಗಿ ಮೇಬ್ಯಾಕ್ ಎಸ್-ಕ್ಲಾಸ್ ಎಸ್580 ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 2.50 ಕೋಟಿ ಬೆಲೆ ಹೊಂದಿದ್ದರೆ ಮೇಬ್ಯಾಕ್ ಎಸ್-ಕ್ಲಾಸ್ ಎಸ್680 ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 3.20 ಕೋಟಿ ಬೆಲೆ ಹೊಂದಿದೆ.

ಭಾರತದಲ್ಲಿಯೇ ನಿರ್ಮಾಣಗೊಂಡ ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್ ಕಾರು ಬಿಡುಗಡೆ

ಭಾರತದಲ್ಲಿ ಈಗಾಗಲೇ ತನ್ನ ಪ್ರಮುಖ ಕಾರು ಮಾದರಿಗಳನ್ನು ಸ್ಥಳೀಯವಾಗಿ ಉತ್ಪಾದನೆ ಕೈಗೊಳ್ಳುತ್ತಿರುವ ಮರ್ಸಿಡಿಸ್ ಬೆಂಝ್ ಕಂಪನಿಯು ಹೈ ಎಂಡ್ ಮಾದರಿಗಳನ್ನು ಸಹ ಹಂತ-ಹಂತವಾಗಿ ಸ್ಥಳೀಯವಾಗಿ ಅಭಿವೃದ್ದಿಗೊಳಿಸಲಾದ ಬಿಡಿಭಾಗಗಳ ಜೋಡಣೆ ಮಾಡುವಲ್ಲಿ ಮುಂಚೂಣಿ ಸಾಧಿಸುತ್ತಿದೆ.

ಭಾರತದಲ್ಲಿಯೇ ನಿರ್ಮಾಣಗೊಂಡ ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್ ಕಾರು ಬಿಡುಗಡೆ

ಸ್ಥಳೀಯವಾಗಿ ಬಿಡಿಭಾಗಗಳ ಜೋಡಣೆಯೊಂದಿಗೆ ಭಾರತದಲ್ಲಿ ಮಾರಾಟಗೊಳ್ಳುವ ಕಾರುಗಳಿಂತಲೂ ಸಂಪೂರ್ಣವಾಗಿ ವಿದೇಶಿ ಮಾರುಕಟ್ಟೆಯಿಂದ ಆಮದುಗೊಂಡ ಕಾರು ಮಾದರಿಗಳು ಹೆಚ್ಚಿನ ಬೆಲೆ ಹೊಂದಿದ್ದು, ಇದೇ ಕಾರಣಕ್ಕೆ ಪ್ರಮುಖ ಐಷಾರಾಮಿ ಕಾರು ಉತ್ಪಾದನಾ ಕಂಪನಿಗಳು ಭಾರತದಲ್ಲಿಯೇ ಸ್ಥಳೀಯ ಬಿಡಿಭಾಗಗಳೊಂದಿಗೆ ಉತ್ಪಾದನೆಯನ್ನು ಆರಂಭಿಸುತ್ತಿವೆ.

ಇದೀಗ ಮರ್ಸಿಡಿಸ್ ಬೆಂಝ್ ಕಂಪನಿಯು ಹೊಸ ಮೇಬ್ಯಾಕ್ ಎಸ್-ಕ್ಲಾಸ್ ಕಾರು ಮಾದರಿಯೊಂದಿಗೆ ಹೊಸ ಬದಲಾವಣೆಯ ನೀರಿಕ್ಷೆಯಲ್ಲಿದ್ದು, ಉನ್ನತೀಕರಿಸಿದ ಮೇಬ್ಯಾಕ್ ಎಸ್-ಕ್ಲಾಸ್ ಕಾರು ಮಾದರಿಯು ಸಾಕಷ್ಟು ಹೊಸ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ದಿಗೊಳಿಸಿದೆ.

ಭಾರತದಲ್ಲಿಯೇ ನಿರ್ಮಾಣಗೊಂಡ ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್ ಕಾರು ಬಿಡುಗಡೆ

7ನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ದಿಗೊಂಡಿರುವ ಹೊಸ ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್ ಕಾರು ಮಾದರಿಯು ಸ್ಟ್ಯಾಂಡರ್ಡ್ ಎಸ್-ಕ್ಲಾಸ್ ಮಾದರಿಯಂತೆಯೇ ಹೊರನೋಟವನ್ನು ಹೊಂದಿದ್ದರೂ ಮೇಬ್ಯಾಕ್ ಎಸ್-ಕ್ಲಾಸ್ ಕಾರಿನಲ್ಲಿ ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ತಂತ್ರಜ್ಞಾನ ಸೌಲಭ್ಯಗಳನ್ನು ನೀಡಲಾಗಿದೆ.

ಭಾರತದಲ್ಲಿಯೇ ನಿರ್ಮಾಣಗೊಂಡ ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್ ಕಾರು ಬಿಡುಗಡೆ

ಹೊಸ ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್ ಮಾದರಿಯಲ್ಲಿ ಲಂಬವಾದ ಸ್ಲ್ಯಾಟ್‌ಗಳೊಂದಿಗೆ ಸುತ್ತುವರಿದ ಬೋಲ್ಡ್ ಕ್ರೋಮ್‌ನೊಂದಿಗೆ ಆಕರ್ಷಕ ಗ್ರಿಲ್ ಹೊಂದಿದ್ದು, ಬಂಪರ್‌ ಕೆಳಭಾಗದಲ್ಲಿ ಅರ್ಧ ಭಾಗವು ವಿಶಿಷ್ಟವಾದ ಕ್ರೋಮ್ ಅಂಶವನ್ನು ಹೊಂದಿದೆ. ಇದು ಬಂಪರ್‌ನ ಎರಡೂ ಬದಿಗಳಲ್ಲಿ ಏರ್ ವೆಂಟ್ಸ್ ಹೊಂದಿದ್ದು, ಎರಡು ಬದಿಗಳಲ್ಲೂ ಬಲಿಷ್ಠ ವಿನ್ಯಾಸಗಳಿವೆ.

ಭಾರತದಲ್ಲಿಯೇ ನಿರ್ಮಾಣಗೊಂಡ ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್ ಕಾರು ಬಿಡುಗಡೆ

ಹೊಸ ಕಾರು ಸ್ಟ್ಯಾಂಡರ್ಡ್ ಎಸ್-ಕ್ಲಾಸ್ ಮಾದರಿಗಿಂತಲೂ 180 ಎಂಎಂ ಹೆಚ್ಚುವರಿ ಉದ್ದಳತೆ ಹೊಂದಿದ್ದು, ಹೊಸ ಕಾರು ಒಟ್ಟು 5,469 ಎಂಎಂ ಉದ್ದಳತೆಯೊಂದಿಗೆ ವಿಶಾಲವಾದ ಕ್ಯಾಬಿನ್ ಸ್ಪೆಸ್ ಹೊಂದಿದ್ದು, ಸ್ಟ್ಯಾಂಡರ್ಡ್ ಮಾದರಿಗಿಂತೂ ವಿಭಿನ್ನವಾಗಿ ಗುರುತಿಸಲು ಹೊಸ ಕಾರಿನಲ್ಲಿ ಕಂಪನಿಯು ಡ್ಯುಯಲ್ ಟೋನ್ ಪೇಟಿಂಗ್ ಮತ್ತು ಆಕರ್ಷಕವಾದ ಸಿ ಪಿಲ್ಲರ್‌ ವಿನ್ಯಾಸದಲ್ಲಿ ಮೇಬ್ಯಾಕ್ ಬ್ಯಾಜ್ಡ್ ಬಳಸಿರುವುದು ಆಕರ್ಷಕವಾಗಿದೆ.

ಭಾರತದಲ್ಲಿಯೇ ನಿರ್ಮಾಣಗೊಂಡ ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್ ಕಾರು ಬಿಡುಗಡೆ

ಹಾಗೆಯೇ ಹಿಂಭಾಗ ವಿನ್ಯಾಸವನ್ನು ಸಹ ಗುರುತರ ಬದಲಾವಣೆಗಳೊಂದಿಗೆ ಅಭಿವೃದ್ದಿಗೊಳಿಸಲಾಗಿದ್ದು, ಡ್ಯುಯಲ್-ಟೋನ್ ಪೇಂಟ್ ಸ್ಕೀಮ್ ಬೋಲ್ಡ್ ಕ್ರೋಮ್ ಪಟ್ಟಿಯು ಎರಡು ಟೈಲ್‌ಲ್ಯಾಂಪ್‌ಗಳನ್ನು ಸಂಪರ್ಕಿಸಲಿದ್ದರೆ ಎಕ್ಸಾಸ್ಟ್ ಟಿಪ್ಸ್ ಸ್ಪೋರ್ಟಿ ವಿನ್ಯಾಸದೊಂದಿಗೆ ಐಷಾರಾಮಿ ಕಾರಿಗೆ ಹೊಸ ಲುಕ್ ನೀಡುತ್ತವೆ.

ಭಾರತದಲ್ಲಿಯೇ ನಿರ್ಮಾಣಗೊಂಡ ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್ ಕಾರು ಬಿಡುಗಡೆ

ಇದಕ್ಕಿಂತಲೂ ಮುಖ್ಯವಾಗಿ ಹೊಸ ಕಾರಿನಲ್ಲಿ ಕಂಪನಿಯು ವಿಶೇಷ ತಂತ್ರಜ್ಞಾನ ಪ್ರೇರಿತ ಇ-ಆಕ್ಟಿವ್ ಬಾಡಿ ಕಂಟ್ರೋಲ್ 48 ವೊಲ್ಟ್ ಆಕ್ಟಿವಾ ರೋಲ್ ಬಳಕೆ ಮಾಡಿದ್ದು, ಇದು ಚಾಲನೆ ವೇಳೆ ಹಂಪ್ ಮತ್ತು ರಸ್ತೆ ಗುಂಡಿಗಳಲ್ಲಿ ಕಾರಿನ ಅಂಡರ್ ಬಾಡಿ ಪ್ಯಾನೆಲ್‌ಗೆ ಹಾನಿಯಾಗದಂತೆ ತಡೆಯುತ್ತದೆ.

ಭಾರತದಲ್ಲಿಯೇ ನಿರ್ಮಾಣಗೊಂಡ ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್ ಕಾರು ಬಿಡುಗಡೆ

ಸಂಪೂರ್ಣವಾಗಿ ಸೆನ್ಸಾರ್ ಮೇಲೆಯೇ ಕಾರ್ಯನಿರ್ವಹಿಸುವ ಇ-ಆಕ್ಟಿವ್ ಬಾಡಿ ಕಂಟ್ರೋಲ್ 48 ವೊಲ್ಟ್ ಆಕ್ಟಿವಾ ರೋಲ್ ತಂತ್ರಜ್ಞಾನವು ರಸ್ತೆಗುಂಡಿಗಳಲ್ಲಿ ಅಥವಾ ಹಂಪ್‌ಗಳು ದಾಟುವ ಸಂದರ್ಭದಲ್ಲಿ ಅಗತ್ಯವಿದ್ದಲ್ಲಿ ಕಾರಿನ ಸಸ್ಷೆಂಷನ್ ಅನ್ನು ಸುಮಾರು 15 ಎಂಎಂ ತನಕ ಎತ್ತರಿಸಿ ಆಗಾಬಹುದಾದ ಹಾನಿಯನ್ನು ತಡೆಯುತ್ತದೆ.

ಭಾರತದಲ್ಲಿಯೇ ನಿರ್ಮಾಣಗೊಂಡ ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್ ಕಾರು ಬಿಡುಗಡೆ

ಹೊಸ ಕಾರಿನಲ್ಲಿ ಮತ್ತೊಂದು ಆಸಕ್ತಿದಾಯಕ ವೈಶಿಷ್ಟ್ಯವೆಂದರೆ ಪ್ರತ್ಯೇಕ ವ್ಹೀಲ್ ಕಂಟ್ರೋಲ್ ಮೂಲಕ ಹಿಂದಿನ ಚಕ್ರವನ್ನು 4.5 ಡಿಗ್ರಿಗಳವರೆಗೆ ತಿರುಗಿಸಲು ಅನುವು ಮಾಡಿಕೊಡಲಿದ್ದು, ಇದರಿಂದಾಗಿ ಕಾರನ್ನು ಇಕ್ಕಟ್ಟಾದ ಯು ಟರ್ನ್‌ಗಳನ್ನು ಸುಲಭವಾಗಿ ತಿರುಗಿಸಬಹುದಾಗಿದೆ.

ಭಾರತದಲ್ಲಿಯೇ ನಿರ್ಮಾಣಗೊಂಡ ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್ ಕಾರು ಬಿಡುಗಡೆ

ಇನ್ನು ಹೊಸ ಕಾರಿನ ಒಳಭಾಗವು ಸಹ ಹೊಸ ವಿನ್ಯಾಸದೊಂದಿಗೆ ವಿಶ್ವದರ್ಜೆ ಸೌಲಭ್ಯಗಳನ್ನು ನೀಡಲಿದ್ದು, ಹೊಸ ಕಾರಿನಲ್ಲಿ ಬಳಸಲಾಗಿರುವ ಲೆದರ್ ಕೂಡಾ ಮೇಬ್ಯಾಕ್ ಎಕ್ಸ್‌ಕ್ಲೂಸಿವ್ ನಪ್ಪಾ ಲೆದರ್ ಮಾದರಿಯಾಗಿದೆ. ಇದರೊಂದಿಗೆ ಹೊಸ ಕಾರಿನಲ್ಲಿ ಕೇವಲ ನಾಲ್ಕು ಆಸನಗಳ ಸೌಲಭ್ಯವಿದ್ದು, ವಿಸ್ತರಿತವಾಗಿ ಸೆಂಟರ್ ಕನ್ಸೊಲ್ ಹಿಂಬದಿಯ ಸವಾರಿಗೆ ಹೆಚ್ಚಿನ ಮಟ್ಟದ ಸವಾರಿ ಅನುಭವ ನೀಡಲು ಇದನ್ನು ಅಭಿವೃದ್ದಿಗೊಳಿಸಲಾಗಿದೆ.

ಭಾರತದಲ್ಲಿಯೇ ನಿರ್ಮಾಣಗೊಂಡ ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್ ಕಾರು ಬಿಡುಗಡೆ

ಹಿಂಬದಿಯ ಆಸನಗಳು ಪ್ರತ್ಯೇಕ ನಿಯಂತ್ರಣ ಹೊಂದಿರುವ ವಿದ್ಯುತ್ ಚಾಲಿತ ಘಟಕಗಳನ್ನು ಹೊಂದಿದ್ದು, ಇವು 43.5 ಡಿಗ್ರಿಗಳವರೆಗೆ ಒರಗಿಕೊಳ್ಳಬಹುದು ಮತ್ತು ಈ ಆಸನಗಳು ಮೆತ್ತೆನೆಯ ಹೆಡ್‌ರೆಸ್ಟ್‌, ಮೆಮೊರಿ ಫಂಕ್ಷನ್ ಸೌಲಭ್ಯದೊಂದಿಗೆ ಆಸನಗಳಲ್ಲಿ ಕೂಲಿಂಗ್, ವಾರ್ಮ್ ಮತ್ತು ಮಸಾಜ್ ಫಂಕ್ಷನ್‌ಗಳನ್ನು ಸಹ ಜೋಡಿಲಾಗಿದೆ.

ಭಾರತದಲ್ಲಿಯೇ ನಿರ್ಮಾಣಗೊಂಡ ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್ ಕಾರು ಬಿಡುಗಡೆ

ಹೊಸ ಕಾರಿನಲ್ಲಿ ಹಿಂಬದಿಯ ಸವಾರರು 7-ಇಂಚಿನ ಆಂಡ್ರಾಯ್ಡ್ ಟ್ಯಾಬ್ಲೆಟ್ ಮೂಲಕ ವಿವಿಧ ತಾಂತ್ರಿಕ ಸೌಲಭ್ಯಗಳನ್ನು ನಿಯಂತ್ರಿಸಬಹುದಾಗಿದ್ದು, ಮುಂಭಾಗದ ಆಸನಗಳ ಹಿಂಭಾಗದಲ್ಲಿ ಜೋಡಿಸಲಾದ ಎರಡು 11.6-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇಗಳಲ್ಲಿ ವೀಡಿಯೊಗಳನ್ನು ವೀಕ್ಷಿಸಬಹುದಾಗಿದೆ.

ಭಾರತದಲ್ಲಿಯೇ ನಿರ್ಮಾಣಗೊಂಡ ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್ ಕಾರು ಬಿಡುಗಡೆ

ಇದಲ್ಲದೆ, ಹೊಸ ಕಾರಿನಲ್ಲಿ ಮೂರು ಲೇಸರ್ ಕ್ಯಾಮೆರಾಗಳನ್ನು ಬಳಸಿಕೊಂಡು ಆನ್‌ಬೋರ್ಡ್ ಕಂಪ್ಯೂಟರ್‌ಗಳಿಂದ ಒಳಭಾಗವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಬಹುದಾಗಿದ್ದು, ಮುಂಭಾಗದಲ್ಲಿ 12.8-ಇಂಚಿನ ಒಲೆಡ್ ಭಾವಚಿತ್ರ-ಶೈಲಿಯ ಟಚ್‌ಸ್ಕ್ರೀನ್ ಫೋರ್ ಜೋನ್ ಕ್ಲೈಮೆಟ್ ಕಂಟ್ರೋಲ್ ಸಂಯೋಜಿಸಲಾಗಿದೆ.

ಭಾರತದಲ್ಲಿಯೇ ನಿರ್ಮಾಣಗೊಂಡ ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್ ಕಾರು ಬಿಡುಗಡೆ

ಇದರೊಂದಿಗೆ ಹೊಸ ಕಾರಿನಲ್ಲಿ ಅಡಾಪ್ಟಿವ್ ಡಿಜಿಟಲ್ ಎಲ್ಇಡಿ ಹೆಡ್‌ಲೈಟ್ಸ್, ಹಿಂತೆಗೆದುಕೊಳ್ಳಬಹುದಾದ ಡೋರ್ ಹ್ಯಾಂಡಲ್‌, ಫಿಂಗರ್‌ಪ್ರಿಂಟ್ ರೀಡರ್, ಪನೋರಮಿಕ್ ಸನ್‌ರೂಫ್, 360-ಡಿಗ್ರಿ ಕ್ಯಾಮೆರಾ ಸಿಸ್ಟಮ್ ಮತ್ತು ಚಾಲಿತ ಹ್ಯಾಂಡ್ಸ್-ಫ್ರೀ ಬೂಟ್ ಲಿಡ್‌ನೊಂದಿಗೆ ಪೋರ್ ವಾಲ್‌ನಟ್ ಮರದ ಟ್ರಿಮ್ ಹೊಂದಿದೆ.

ಭಾರತದಲ್ಲಿಯೇ ನಿರ್ಮಾಣಗೊಂಡ ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್ ಕಾರು ಬಿಡುಗಡೆ

ಹಾಗೆಯೇ ಹೊಸ ಕಾರಿನಲ್ಲಿ ಮರ್ಸಿಡಿಸ್ ಕಂಪನಿಯು ಬರ್ಮೆಸ್ಟರ್‌ 4ಡಿ ಸರೌಂಡ್ ಸೌಂಡ್ ಸಿಸ್ಟಂ ಜೊತೆ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯತೆಗಳನ್ನು ನೀಡಿದ್ದು, ಮೇಬ್ಯಾಕ್ ಎಸ್-ಕ್ಲಾಸ್‌ನಲ್ಲಿ ಒಟ್ಟು 13 ಏರ್‌ಬ್ಯಾಗ್‌ಗಳು, ಲೆವೆಲ್-2 ಅಟೋನಮಸ್ ಡ್ರೈವಿಂಗ್ ಟೆಕ್ನಾಲಜಿ ಹೊಂದಿದೆ.

ಭಾರತದಲ್ಲಿಯೇ ನಿರ್ಮಾಣಗೊಂಡ ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್ ಕಾರು ಬಿಡುಗಡೆ

ಲೆವೆಲ್-2 ಅಟೋನಮಸ್ ಡ್ರೈವಿಂಗ್ ಟೆಕ್ನಾಲಜಿಯಲ್ಲಿ ಮರ್ಸಿಡಿಸ್ ಬೆಂಝ್ ಭಾರತದಲ್ಲಿ ಮೊದಲ ಬಾರಿಗೆ 'ಎವೇಸಿವ್ ಸ್ಟೀರಿಂಗ್ ಅಸಿಸ್ಟ್' ಮತ್ತು 'ಕ್ರಾಸ್ ಟ್ರಾಫಿಕ್ ಫಂಕ್ಷನ್' ಜೊತೆಗೆ ಆಕ್ಟಿವ್ ಬ್ರೇಕ್ ಅಸಿಸ್ಟ್‌ನಂತಹ ವೈಶಿಷ್ಟ್ಯಗಳನ್ನು ನೀಡುತ್ತದೆ. ಇನ್ನು ಹೊಸ ಕಾರು ಮಾದರಿಯಲ್ಲಿ 4 ಮ್ಯಾಟಿಕ್ ತಂತ್ರಜ್ಞಾನ ಪ್ರೇರಿತ 9 ಸ್ಪೀಡ್ ಟ್ರಾನಿಕ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪ್ರೇರಿತ ಎರಡು ಎಂಜಿನ್ ಆಯ್ಕೆಗಳಿದ್ದು, ಎಸ್580 ಮಾದರಿಯಲ್ಲಿ 4.0-ಲೀಟರ್ ವಿ8 ಎಂಜಿನ್ ಮತ್ತು ಎಸ್680 ಮಾದರಿಯಲ್ಲಿ 6.0-ಲೀಟರ್ ವಿ12 ಎಂಜಿನ್ ಜೋಡಿಸಲಾಗಿದೆ.

ಭಾರತದಲ್ಲಿಯೇ ನಿರ್ಮಾಣಗೊಂಡ ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್ ಕಾರು ಬಿಡುಗಡೆ

4.0-ಲೀಟರ್ ವಿ8 ಎಂಜಿನ್ ಮಾದರಿಯು 48 ವೊಲ್ಟ್ ಇಕ್ಯೂ ಬೂಸ್ಟ್ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ 496 ಬಿಎಚ್‌ಪಿ ಮತ್ತು 700 ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದರೆ ಎಸ್680 ಮಾದರಿಯಲ್ಲಿರುವ 6.0-ಲೀಟರ್ ವಿ12 ಎಂಜಿನ್ ಮಾದರಿಯು 612 ಬಿಎಚ್‌ಪಿ ಮತ್ತು 900 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

More from DriveSpark

Article Published On: Thursday, March 3, 2022, 15:03 [IST]
English summary
New mercedes maybach s class launched in india prices start from rs 2 50 crore details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+