ಭಾರತದಲ್ಲಿ ಬಿಡುಗಡೆಗೆ ಸಜ್ಜಾದ 2.9 ಮೀಟರ್ ಉದ್ದದ ಹೊಸ ಎಂಜಿ ಎಲೆಕ್ಟ್ರಿಕ್ ಕಾರು

ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನಕ್ಕೆರಿದೆ. ಏರುತ್ತಿರುವ ಇಂಧನ ಬೆಲೆಗಳಿಂದ ಪಾರಾಗಲು ಜನರು ಪರ್ಯಾಯ ಆಯ್ಕೆಗಳನ್ನು ಹುಡುಕಲಾರಂಭಿಸಿದೆ. ಇದರಿಂದ ಜನರು ಈಗ ನಿಧಾನವಾಗಿ ಎಲೆಕ್ಟ್ರಿಕ್ ಕಾರುಗಳ ಕಡೆ ಮುಖ ಮಾಡಲು ಪ್ರಾರಂಭಿಸಲಾಗಿದೆ.

ಬಿಡುಗಡೆಗೆ ಸಜ್ಜಾದ 2.9 ಮೀಟರ್ ಉದ್ದದ ಹೊಸ ಎಂಜಿ ಎಲೆಕ್ಟ್ರಿಕ್ ಕಾರು

ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. ಈ ವೇಳೆ ಟಾಟಾ ಕಂಪನಿಯು ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಪಾರುಪತ್ಯ ಮುಂದುವರೆಸಲು ಪ್ರಯತ್ನಿಸುತ್ತಿದೆ. ಸದ್ಯ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಟಾಟಾ ಮೇಲುಗೈಯನ್ನು ಸಾಧಿಸಿದೆ. ಇತ್ತೀಚೆಗೆ ಸ್ವದೇಶಿ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಹೊಸ ಟಿಯಾಗೋ ಎಲೆಕ್ಟ್ರಿಕ್ ಕಾರನ್ನು ಕೂಡ ಬಿಡುಗಡೆಗೊಳಿಸಿತು. ಇದು ಕೈಗೆಟುಕುವ ಮತ್ತು ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ ಆಗಿದೆ.

ಬಿಡುಗಡೆಗೆ ಸಜ್ಜಾದ 2.9 ಮೀಟರ್ ಉದ್ದದ ಹೊಸ ಎಂಜಿ ಎಲೆಕ್ಟ್ರಿಕ್ ಕಾರು

ಎಂಜಿ ಮೊಟಾರ್ ಇಂಡಿಯಾವು 2023ರ ಆರಂಭದಲ್ಲಿ 2-ಡೋರುಗಳ ಏರ್ ಎಲೆಕ್ಟ್ರಿಕ್ ಕಾರು ಪರಿಚಯಿಸುವುದಾಗಿ ದೃಢಪಡಿಸಿದೆ. ಅದರ ಮಾರುಕಟ್ಟೆಯ ಬಿಡುಗಡೆಗೆ ಮುಂಚಿತವಾಗಿ, ಸಣ್ಣ ಎಲೆಕ್ಟ್ರಿಕ್ ಕಾರು ಜನವರಿಯಲ್ಲಿ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಸಾರ್ವಜನಿಕವಾಗಿ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ.

ಬಿಡುಗಡೆಗೆ ಸಜ್ಜಾದ 2.9 ಮೀಟರ್ ಉದ್ದದ ಹೊಸ ಎಂಜಿ ಎಲೆಕ್ಟ್ರಿಕ್ ಕಾರು

ಇದು ಹೊಸದಾಗಿ ಬಿಡುಗಡೆಯಾದ ಟಾಟಾ ಟಿಯಾಗೋ ಇವಿಗಿಂತ ಪ್ರೀಮಿಯಂ ಎಂದು ಹೇಳಲಾಗುವ ಬ್ರ್ಯಾಂಡ್‌ನ ಪ್ರೀಮಿಯಂ ಎಂದು ಹೇಳಲಾಗುವ ಬ್ರ್ಯಾಂಡ್‌ನ ಎಂಟ್ರಿ ಲೆವೆಲ್ ಎಲೆಕ್ಟ್ರಿಕ್ ಕೊಡುಗೆಯಾಗಿದೆ. ಎಂಜಿ ಏರ್ ಇವಿ ಇಂಡೋನೇಷ್ಯಾದಲ್ಲಿ ಈಗಾಗಲೇ ಮಾರಾಟದಲ್ಲಿರುವ ವುಲಿಂಗ್ ಏರ್ ಇವಿ ಆಧಾರಿತವಾಗಿದೆ.

ಬಿಡುಗಡೆಗೆ ಸಜ್ಜಾದ 2.9 ಮೀಟರ್ ಉದ್ದದ ಹೊಸ ಎಂಜಿ ಎಲೆಕ್ಟ್ರಿಕ್ ಕಾರು

ಹೊಸ ಎಂಜಿ ಎಲೆಕ್ಟ್ರಿಕ್ ಕಾರಿನ ಬೆಲೆಗಳು ಸುಮಾರು 10 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಆಗುವ ನಿರೀಕ್ಷೆಯಿದೆ. ಈ ಹೊಸ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ 2023ರಲ್ಲಿ ನಡೆಯಲ್ಲಿರುವ ಆಟೋ ಎಕ್ಸ್‌ಪೋದಲ್ಲಿ ಚೊಚ್ಚಲ ಪ್ರವೇಶವನ್ನು ಮಾಡಬಹುದು.

ಬಿಡುಗಡೆಗೆ ಸಜ್ಜಾದ 2.9 ಮೀಟರ್ ಉದ್ದದ ಹೊಸ ಎಂಜಿ ಎಲೆಕ್ಟ್ರಿಕ್ ಕಾರು

ಈ ಹೊಸ ಎಂಜಿ ಏರ್ ಕಾರಿನ ಪವರ್‌ಟ್ರೇನ್ ಬಗ್ಗೆ ಹೇಳುವುದಾದರೆ, ಏರ್ ಇವಿ ಸುಮಾರು 20kWh-25kWh ಬ್ಯಾಟರಿ ಪ್ಯಾಕ್ ಸಾಮರ್ಥ್ಯ ಮತ್ತು 40 ಬಿಹೆಚ್‍ಪಿ ಪವರ್ ಮಾಡುವ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಬರಲಿದೆ. ಈ ಮಾದರಿಯು ಎಲ್‌ಎಫ್‌ಪಿ (ಲಿಥಿಯಂ ಐರನ್ ಫಾಸ್ಫೇಟ್) ಸೆಲ್‌ಗಳನ್ನು ಹೊಂದಿರುತ್ತದೆ,

ಬಿಡುಗಡೆಗೆ ಸಜ್ಜಾದ 2.9 ಮೀಟರ್ ಉದ್ದದ ಹೊಸ ಎಂಜಿ ಎಲೆಕ್ಟ್ರಿಕ್ ಕಾರು

ಇದು ದೀರ್ಘಾವಧಿಯ ಜೀವಿತಾವಧಿ, ಹಗುರವಾದ, ಯಾವುದೇ ನಿರ್ವಹಣೆ ಮತ್ತು ಉತ್ತಮ ಡಿಸ್ಚಾರ್ಜ್ ಮತ್ತು ಚಾರ್ಜ್ ದಕ್ಷತೆಗೆ ಹೆಸರುವಾಸಿಯಾಗಿದೆ. ಇದೇ ರೀತಿಯ ಸೆಲ್‌ಗಳನ್ನು ಟಾಟಾ ನೆಕ್ಸಾನ್ ಇವಿಯಲ್ಲಿಯೂ ಬಳಸಲಾಗಿದೆ. ಇದು ಸಿಂಗಲ್ ಚಾರ್ಜ್‌ನಲ್ಲಿ 150 ಕಿಮೀ ರೇಂಜ್ ಅನ್ನು ನೀಡುತ್ತದೆ.

ಬಿಡುಗಡೆಗೆ ಸಜ್ಜಾದ 2.9 ಮೀಟರ್ ಉದ್ದದ ಹೊಸ ಎಂಜಿ ಎಲೆಕ್ಟ್ರಿಕ್ ಕಾರು

ಈ ಹೊಸ ಸಣ್ಣ ಎಲೆಕ್ಟ್ರಿಕ್ ಕಾರ್ FWD (ಫ್ರಂಟ್-ವೀಲ್ ಡ್ರೈವ್) ಸಿಸ್ಟಂ ಅನ್ನು ಹೊಂದಿರುತ್ತದೆ. ಬ್ರಿಟಿಷ್ ವಾಹನ ತಯಾರಕರು ಸ್ಥಳೀಯವಾಗಿ ಟಾಟಾ ಆಟೋಕಾಂಪ್‌ನಿಂದ ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತಾರೆ.

ಬಿಡುಗಡೆಗೆ ಸಜ್ಜಾದ 2.9 ಮೀಟರ್ ಉದ್ದದ ಹೊಸ ಎಂಜಿ ಎಲೆಕ್ಟ್ರಿಕ್ ಕಾರು

ಇನ್ನು ಟಾಟಾ ಆಟೋಕಾಂಪ್ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗಾಗಿ Li-ion ಬ್ಯಾಟರಿ ಪ್ಯಾಕ್‌ಗಳನ್ನು ವಿನ್ಯಾಸಗೊಳಿಸಲು, ತಯಾರಿಸಲು, ಸರಬರಾಜು ಮಾಡಲು ಮತ್ತು ಸೇವೆ ಮಾಡಲು ಚೀನಾ ಮೂಲದ ಗೋಷನ್‌ನೊಂದಿಗೆ ಜಂಟಿ ಉದ್ಯಮವನ್ನು ಹೊಂದಿದೆ.

ಬಿಡುಗಡೆಗೆ ಸಜ್ಜಾದ 2.9 ಮೀಟರ್ ಉದ್ದದ ಹೊಸ ಎಂಜಿ ಎಲೆಕ್ಟ್ರಿಕ್ ಕಾರು

ಗೋಷನ್ ಚೀನಾವು ಬಹು ಸೌಲಭ್ಯಗಳನ್ನು ಹೊಂದಿರುವ ಚೀನಾದ ಮಾರುಕಟ್ಟೆಯಲ್ಲಿ ಪ್ರಮುಖ ಬ್ಯಾಟರಿ ಸೆಲ್ ಮತ್ತು ಪ್ಯಾಕ್ ತಯಾರಕರಲ್ಲಿ ಒಂದಾಗಿದೆ. ಈ ಹೊಸ ಎಂಜಿ ಸಣ್ಣ ಕಾರುಸುಮಾರು 2.9 ಮೀಟರ್ ಉದ್ದ ಹೊಂದಿರುವ ಎಂಜಿ ಏರ್ ಇವಿ ಕಾಂಪ್ಯಾಕ್ಟ್, ಬಾಕ್ಸಿ ನಿಲುವು ಹೊಂದಿದೆ.

ಬಿಡುಗಡೆಗೆ ಸಜ್ಜಾದ 2.9 ಮೀಟರ್ ಉದ್ದದ ಹೊಸ ಎಂಜಿ ಎಲೆಕ್ಟ್ರಿಕ್ ಕಾರು

ಇದು 2010 ಎಂಎಂ ವ್ಹೀಲ್‌ಬೇಸ್‌ನಲ್ಲಿ ಇರುತ್ತದೆ. ಇದರ ಕೆಲವು ಪ್ರಮುಖ ವಿನ್ಯಾಸದ ಮುಖ್ಯಾಂಶಗಳಲ್ಲಿ ಸ್ಕ್ವಾರಿಶ್ ಹೆಡ್‌ಲ್ಯಾಂಪ್‌ಗಳು ಪ್ರಮುಖ ಆಕರ್ಷಣೆಯಾಗಿದೆ. ಈ ಕಾರು ಕೋನೀಯ ಮುಂಭಾಗದ ಬಂಪರ್, ಪೂರ್ಣ ಅಗಲದ ಲೈಟ್ ಬಾರ್‌ನೊಂದಿಗೆ ಮೂಗು, ಸ್ಲಿಮ್ ಫಾಗ್ ಲ್ಯಾಂಪ್‌ಗಳು, ಚಾರ್ಜಿಂಗ್ ಪೋರ್ಟ್ ಡೋರ್, 12-ಇಂಚಿನ ಸ್ಟೀಲ್ ರಿಮ್‌ಗಳು ಪ್ಲಾಸ್ಟಿಕ್ ಹಬ್ ಕ್ಯಾಪ್‌ಗಳು ಮತ್ತು ಸಣ್ಣ ಟೈಲ್‌ಲ್ಯಾಂಪ್‌ಗಳು ಸೇರಿವೆ.

ಬಿಡುಗಡೆಗೆ ಸಜ್ಜಾದ 2.9 ಮೀಟರ್ ಉದ್ದದ ಹೊಸ ಎಂಜಿ ಎಲೆಕ್ಟ್ರಿಕ್ ಕಾರು

ವೈಶಿಷ್ಟ್ಯಗಳ ವಿಷಯದಲ್ಲಿ, ಸಣ್ಣ ಎಲೆಕ್ಟ್ರಿಕ್ ಕಾರ್ ಡ್ಯುಯಲ್ 10.25-ಇಂಚಿನ ಡಿಸ್ ಪ್ಲೇಗಳನ್ನು ನೀಡುವ ಸಾಧ್ಯತೆಯಿದೆ. ಇದರಲ್ಲಿ ಒಂದು ಇನ್ಫೋಟೈನ್‌ಮೆಂಟ್ ಮತ್ತು ಇನ್ನೊಂದು ಇನ್‌ಸ್ಟ್ರುಮೆಂಟೇಶನ್ ಆಗಿರುತ್ತದೆ. ಈ ವಾಹನವು ಈಗಾಗಲೇ ಭಾರತೀಯ ರಸ್ತೆಗಳಲ್ಲಿ ರೋಡ್ ಟೆಸ್ಟ್ ನಡೆಸಿದೆ.

ಬಿಡುಗಡೆಗೆ ಸಜ್ಜಾದ 2.9 ಮೀಟರ್ ಉದ್ದದ ಹೊಸ ಎಂಜಿ ಎಲೆಕ್ಟ್ರಿಕ್ ಕಾರು

ಈ ಹಿಂದೆ ಎಂಜಿ ಇಂಡಿಯಾದ ಅಧ್ಯಕ್ಷ ಮತ್ತು ಎಂಡಿ ರಾಜೀವ್ ಚಾಬಾ, ಕಂಪನಿಯು ಭಾರತದ ಅಗ್ಗದ ಪ್ರಯಾಣಿಕ ಎಲೆಕ್ಟ್ರಿಕ್ ವಾಹನವನ್ನು ತರಲು ಕೆಲಸ ಮಾಡುತ್ತಿಲ್ಲ ಎಂದು ಘೋಷಿಸಿದ್ದಾರೆ. . ಬದಲಾಗಿ, ಎಂಜಿಯು ಅರ್ಬನ್ ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ವೆಹಿಕಲ್ ಅನ್ನು ತರುತ್ತಿದೆ. ಇದು ಎಂಟ್ರಿ ಲೆವೆಲ್ ಮಟ್ಟದ ವಾಹನದ ಕಾಂಪ್ಯಾಕ್ಟ್ ಆಯಾಮಗಳನ್ನು ಹೊಂದಿರುವಾಗ ಮೌಲ್ಯ ಮತ್ತು ತಂತ್ರಜ್ಞಾನದ ಮೇಲೆ ಹೆಚ್ಚಿನದಾಗಿರುತ್ತದೆ ಎಂದು ಹೇಳಿದ್ದಾರೆ.

ಬಿಡುಗಡೆಗೆ ಸಜ್ಜಾದ 2.9 ಮೀಟರ್ ಉದ್ದದ ಹೊಸ ಎಂಜಿ ಎಲೆಕ್ಟ್ರಿಕ್ ಕಾರು

ಇನ್ನು ಎಂಜಿ ಮೋಟಾರ್ ಕಂಪನಿಯು ತನ್ನ ಹೊಸ ಜೆಡ್ಎಸ್ ಇವಿ ಕಾರು ಮಾದರಿಯ ಮೂಲಕ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡಿದೆ. ಹೊಸ ಇವಿ ಕಾರುಗಳ ಹೆಚ್ಚುತ್ತಿದ್ದಂತೆ ಕಂಪನಿಯು ಮಾರಾಟದ ಜೊತೆ ಗ್ರಾಹಕರ ಸೇವೆಗಳಿಗಳಿಗಾಗಿ ತನ್ನದೇ ಪ್ರತ್ಯೇಕ ಇವಿ ಚಾರ್ಜರ್ ನಿಲ್ದಾಣಗಳ ನಿರ್ಮಾಸಲಿದೆ.

ಬಿಡುಗಡೆಗೆ ಸಜ್ಜಾದ 2.9 ಮೀಟರ್ ಉದ್ದದ ಹೊಸ ಎಂಜಿ ಎಲೆಕ್ಟ್ರಿಕ್ ಕಾರು

ಹೊಸ ಇವಿ ಕಾರುಗಳ ಮಾರಾಟ ಹೆಚ್ಚಳಕ್ಕೆ ಸೂಕ್ತವಾದ ಚಾರ್ಜಿಂಗ್ ನಿಲ್ದಾಣಗಳ ಅವಶ್ಯಕತೆಯನ್ನು ಅರಿತಿರುವ ಇವಿ ಕಾರು ಉತ್ಪಾದನಾ ಕಂಪನಿಗಳು ಇವಿ ಕಾರುಗಳ ಉತ್ಪಾದನೆ ಜೊತೆಗೆ ಚಾರ್ಜಿಂಗ್ ನಿಲ್ದಾಣಗಳ ಹೆಚ್ಚಳಕ್ಕೂ ಹೊಸ ಯೋಜನೆಗಳನ್ನು ರೂಪಿಸುತ್ತಿವೆ.

ಬಿಡುಗಡೆಗೆ ಸಜ್ಜಾದ 2.9 ಮೀಟರ್ ಉದ್ದದ ಹೊಸ ಎಂಜಿ ಎಲೆಕ್ಟ್ರಿಕ್ ಕಾರು

ಈ ಜೆಡ್ಎಸ್ ಇವಿ ಮೂಲಕ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಹೊಂದಿರುವ ಎಂಜಿ ಮೋಟಾರ್ ಕಂಪನಿಯು ಸಹ ಸಾರ್ವಜನಿಕ ಬಳಕೆಯ ಚಾರ್ಜಿಂಗ್ ನಿಲ್ದಾಣಗಳ ಅಭಿವೃದ್ದಿಗೆ ಪ್ರಯತ್ನಿಸುತ್ತಿದ್ದು, ಟಾಟಾ ಪವರ್ ಜೊತೆಗೂಡಿ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ಆರಂಭಿಸಿದೆ. ಕಂಪನಿಯು ಸಾರ್ವಜನಿಕ ಬಳಕೆಯ ಇವಿ ಮಾದರಿಗಳೊಂದಿಗೆ ಕಮ್ಯೂನಿಟಿ ಇವಿ ಚಾರ್ಜಿಂಗ್ ಕೇಂದ್ರಗಳಿಗೂ ಚಾಲನೆ ನೀಡಿದೆ.

ಬಿಡುಗಡೆಗೆ ಸಜ್ಜಾದ 2.9 ಮೀಟರ್ ಉದ್ದದ ಹೊಸ ಎಂಜಿ ಎಲೆಕ್ಟ್ರಿಕ್ ಕಾರು

ತನ್ನ ಮೊದಲ ಕಮ್ಯೂನಿಟಿ ಇವಿ ಚಾರ್ಜಿಂಗ್ ಕೇಂದ್ರವನ್ನು ರಾಜಸ್ತಾನದ ಜೈಪುರ್‌ದಲ್ಲಿ ಆರಂಭಿಸಲಾಗಿದೆ. ದೊಡ್ಡ ಮಟ್ಟದ ಅಂಪಾಟ್ಮೆಂಟ್‌ಗಳಲ್ಲಿನ ಇವಿ ಕಾರು ಬಳಕೆದಾರರಿಗೆ ಇದು ಸಾಕಷ್ಟು ಅನುಕೂರವಾಗಿದ್ದು, ಎಂಜಿ ಮೋಟಾರ್ ಕಂಪನಿಯು ಮುಂದಿನ ಮೂರು ವರ್ಷಗಳಲ್ಲಿ ಒಟ್ಟು 1 ಸಾವಿರ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯುವ ಗುರಿಯೋಜನೆ ಹೊಂದಿದೆ.

Most Read Articles

Kannada
English summary
New mg air ev india launch timeline details revealed
Story first published: Monday, October 31, 2022, 11:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X