ಇದೇ ತಿಂಗಳು 7ರಂದು ಬಿಡುಗಡೆಯಾಗಲಿದೆ ಅತ್ಯಧಿಕ ಮೈಲೇಜ್ ಪ್ರೇರಿತ 2022ರ ಜೆಡ್ಎಸ್ ಎಲೆಕ್ಟ್ರಿಕ್

ಎಂಜಿ ಮೋಟಾರ್(MG Motor) ಇಂಡಿಯಾ ಕಂಪನಿಯು 2022ರ ಜೆಡ್ಎಸ್ ಎಲೆಕ್ಟ್ರಿಕ್ ಎಸ್‌ಯುವಿ ಕಾರು ಮಾದರಿಯನ್ನು ಹಲವಾರು ಹೊಸ ಬದಲಾವಣೆಗಳೊಂದಿಗೆ ಉನ್ನತೀಕರಿಸಿದ್ದು, ಹೊಸ ಕಾರು ಇದೇ ತಿಂಗಳು 7ರಂದು ಅಧಿಕೃತವಾಗಿ ಮಾರುಕಟ್ಟೆ ಪ್ರವೇಶಿಸಲಿದೆ.

ಇದೇ ತಿಂಗಳು 7ರಂದು ಬಿಡುಗಡೆಯಾಗಲಿದೆ ಅತ್ಯಧಿಕ ಮೈಲೇಜ್ 2022ರ ಜೆಡ್ಎಸ್ ಎಲೆಕ್ಟ್ರಿಕ್

ಹೊಸ ಜೆಡ್ಎಸ್ ಇವಿ ಕಾರು ಹಲವಾರು ಹೊಸ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಮಹತ್ವದ ಬದಲಾವಣೆ ತರಲಾಗಿದೆ. ನವೀಕರಿಸಿದ ಹೊಸ ಕಾರಿನಲ್ಲಿ ವಿಸ್ತರಿತ ಬ್ಯಾಟರಿ ಪ್ಯಾಕ್ ಜೊತೆಗೆ ಇನ್ನು ಹಲವು ಹೊಸ ಬದಲಾವಣೆಗಳನ್ನು ಪರಿಚಯಿಸಲಾಗಿದ್ದು, ಆಸಕ್ತ ಗ್ರಾಹಕರಿಂದ ಕಂಪನಿಯು ಈಗಾಗಲೇ ಬುಕ್ಕಿಂಗ್ ಸ್ವಿಕರಿಸುತ್ತಿದೆ.

ಇದೇ ತಿಂಗಳು 7ರಂದು ಬಿಡುಗಡೆಯಾಗಲಿದೆ ಅತ್ಯಧಿಕ ಮೈಲೇಜ್ 2022ರ ಜೆಡ್ಎಸ್ ಎಲೆಕ್ಟ್ರಿಕ್

ದೇಶಿಯ ಮಾರುಕಟ್ಟೆಯಲ್ಲಿ ಇವಿ ಕಾರು ಮಾರಾಟ ಪಟ್ಟಿಯಲ್ಲಿ ಉತ್ತಮ ಸ್ಥಾನ ಹೊಂದಿರುವ ಜೆಡ್ಎಸ್ ಇವಿ ಕಾರು ಇದುವರೆಗೆ 4 ಸಾವಿರ ಯುನಿಟ್ ಮಾರಾಟ ಗುರಿಸಾಧಿಸಿದ್ದು, ಹೊಸ ಆವೃತ್ತಿಯೊಂದಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಿದೆ.

ಇದೇ ತಿಂಗಳು 7ರಂದು ಬಿಡುಗಡೆಯಾಗಲಿದೆ ಅತ್ಯಧಿಕ ಮೈಲೇಜ್ 2022ರ ಜೆಡ್ಎಸ್ ಎಲೆಕ್ಟ್ರಿಕ್

ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗಿಂತಲೂ ಹೆಚ್ಚು ಪ್ರೀಮಿಯಂ ಮಾದರಿಯಾಗಿರಲಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಮಾದರಿಯು 44.5 kWh ಬ್ಯಾಟರಿ ಪ್ಯಾಕ್ ಮೂಲಕ ಪ್ರತಿ ಚಾರ್ಚ್‌ಗೆ 419 ಕಿ.ಮೀ ಮೈಲೇಜ್ ಹಿಂದಿರುಗಿಸುವ ಸಾಮರ್ಥ್ಯ ಹೊಂದಿದ್ದರೆ 2022ರ ಮಾದರಿಯು 51 kWh ಬ್ಯಾಟರಿ ಪ್ಯಾಕ್ ಮೂಲಕ ಹೊಸ ಕಾರಿನ ಮೈಲೇಜ್ ರೇಂಜ್ ಇದೀಗ ಪ್ರತಿ ಚಾರ್ಜ್‌ಗೆ 480 ಕಿ.ಮೀ ಗೆ ಹೆಚ್ಚಳವಾಗಿದೆ.

ಇದೇ ತಿಂಗಳು 7ರಂದು ಬಿಡುಗಡೆಯಾಗಲಿದೆ ಅತ್ಯಧಿಕ ಮೈಲೇಜ್ 2022ರ ಜೆಡ್ಎಸ್ ಎಲೆಕ್ಟ್ರಿಕ್

ಮೈಲೇಜ್ ಹೆಚ್ಚಳದೊಂದಿಗೆ ಕಾರಿನ ಪರ್ಫಾಮೆನ್ಸ್ ಕೂಡಾ ಸಾಕಷ್ಟು ಸುಧಾರಣೆಗೊಂಡಿರುವುದು ಎಲೆಕ್ಟ್ರಿಕ್ ಎಸ್‌ಯುವಿ ಪ್ರಿಯರನ್ನು ಸೆಳೆಯಲಿದ್ದು, ಹೊಸ ಮಾದರಿಯು ಎಂಜಿ ಮೋಟಾರ್ ಕಂಪನಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಿದೆ.

ಇದೇ ತಿಂಗಳು 7ರಂದು ಬಿಡುಗಡೆಯಾಗಲಿದೆ ಅತ್ಯಧಿಕ ಮೈಲೇಜ್ 2022ರ ಜೆಡ್ಎಸ್ ಎಲೆಕ್ಟ್ರಿಕ್

ಪ್ರೀಮಿಯಂ ಮಾದರಿಗೆ ಪೂರಕವಾಗಿ ಬಣ್ಣದ ಆಯ್ಕೆಯನ್ನು ಸಹ ವಿಸ್ತರಿಸಿರುವ ಎಂಜಿ ಮೋಟಾರ್ ಕಂಪನಿಯು ಹೊಸ ಕಾರಿನಲ್ಲಿ ಈ ಹಿಂದಿನ ರೆಡ್, ವೈಟ್ ಮತ್ತು ಪೊಲಾರ್ ವೈಟ್ ಬಣ್ಣಗಳ ಜೊತೆಗೆ ಹೊಸ ಮಾದರಿಯಲ್ಲಿ ಸಿಲ್ವರ್, ಬ್ರೌನ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ ಎನ್ನಲಾಗಿದೆ.

ಇದೇ ತಿಂಗಳು 7ರಂದು ಬಿಡುಗಡೆಯಾಗಲಿದೆ ಅತ್ಯಧಿಕ ಮೈಲೇಜ್ 2022ರ ಜೆಡ್ಎಸ್ ಎಲೆಕ್ಟ್ರಿಕ್

ಇದರೊಂದಿಗೆ ಐಷಾರಾಮಿ ವೈಶಿಷ್ಟ್ಯಗಳೊಂದಿಗೆ ಅಭಿವೃದ್ದಿಗೊಂಡಿರುವ ಹೊಸ ಕಾರಿನಲ್ಲಿ ಸುಧಾರಿತ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಕೂಡಾ ಅಳವಡಿಸಿದ್ದು, 10.1 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಅತ್ಯುತ್ತಮ ಗ್ರಾಫಿಕ್ಸ್ ಮತ್ತು ಮೆನು ಲೇಔಟ್‌ನೊಂದಿಗೆ ಆ್ಯಪಲ್ ಕಾರ್‌ಪ್ಲೇ ಹಾಗೂ ಆಂಡ್ರಾಯಿಡ್ ಆಟೋ ಜೋಡಣೆ ಹೊಂದಿದೆ.

ಇದೇ ತಿಂಗಳು 7ರಂದು ಬಿಡುಗಡೆಯಾಗಲಿದೆ ಅತ್ಯಧಿಕ ಮೈಲೇಜ್ 2022ರ ಜೆಡ್ಎಸ್ ಎಲೆಕ್ಟ್ರಿಕ್

ಇದರ ಜೊತೆ ಉನ್ನತೀಕರಿಸಿದ ಮಾದರಿಯಲ್ಲಿ ಅತ್ಯುತ್ತಮ ದರ್ಜೆಯ ಹಿಂಭಾಗದ ಆಸನದ ಸೌಕರ್ಯದ ವೈಶಿಷ್ಟ್ಯಗಳನ್ನು ನೀಡಲಾಗಿದ್ದು, ಹಿಂದಿನ ಸೀಟ್‌ನಲ್ಲಿ ಸೆಂಟರ್ ಆರ್ಮ್ ರೆಸ್ಟ್, ಕಪ್ ಹೋಲ್ಡರ್ ಮತ್ತು ಹೆಡ್‌ರೆಸ್ಟ್ ಒಳಗೊಂಡಂತೆ ಹಿಂಬದಿಯ ಪ್ರಯಾಣಿಕರಿಗೂ ಏರ್ ಕಂಡಿಷನ್ ವೆಂಟ್ಸ್ ಸೇರಿದಂತೆ ಪ್ರಮುಖ ಬದಲಾವಣೆಗಳನ್ನು ಪಡೆದುಕೊಂಡಿದೆ.

ಇದೇ ತಿಂಗಳು 7ರಂದು ಬಿಡುಗಡೆಯಾಗಲಿದೆ ಅತ್ಯಧಿಕ ಮೈಲೇಜ್ 2022ರ ಜೆಡ್ಎಸ್ ಎಲೆಕ್ಟ್ರಿಕ್

ಭಾರತದಲ್ಲಿ ಸದ್ಯ ಅತಿ ಹೆಚ್ಚು ಬೇಡಿಕೆಯಲ್ಲಿರುವ ಎಲೆಕ್ಟ್ರಿಕ್ ಕಾರಗಳ ಮಾರಾಟ ಪಟ್ಟಿಯಲ್ಲಿ ಟಾಟಾ ನೆಕ್ಸಾನ್ ಇವಿ ನಂತರ ಎರಡನೇ ಸ್ಥಾನ ಕಾಯ್ದುಕೊಂಡಿರುವ ಜೆಡ್ಎಸ್ ಇವಿ ಕಾರು ತುಸು ದುಬಾರಿ ಬೆಲೆ ಹೊಂದಿದ್ದರೂ ಹೆಚ್ಚಿನ ಮೈಲೇಜ್ ರೇಂಜ್ ಮೂಲಕ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದೆ.

ಇದೇ ತಿಂಗಳು 7ರಂದು ಬಿಡುಗಡೆಯಾಗಲಿದೆ ಅತ್ಯಧಿಕ ಮೈಲೇಜ್ 2022ರ ಜೆಡ್ಎಸ್ ಎಲೆಕ್ಟ್ರಿಕ್

ಇದೀಗ ಬಿಡುಗಡೆಗಾಗಿ ಸಿದ್ದವಾಗಿರುವ ಹೊಸ ಮಾದರಿಯು ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ರೇಂಜ್ ಖಾತ್ರಿಪಡಿಸಿರುವುದು ಮತ್ತಷ್ಟು ಗ್ರಾಹಕರನ್ನು ಸೆಳೆಯಲಿದ್ದು, ನವೀಕರಿಸಿದ ಜೆಡ್ಎಸ್ ಎಲೆಕ್ಟ್ರಿಕ್ ಎಸ್‍ಯುವಿಯ ಮುಂಭಾಗದಲ್ಲಿ ಪ್ರೊಫೈಲ್ ಈ ಬಾರಿ ಗಮನಾರ್ಹ ಬದಲಾವಣೆಯೊಂದಿಗೆ ತೀಕ್ಷ್ಣವಾದ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಮತ್ತು ಟೈಲ್‌ಲೈಟ್‌ಗಳನ್ನು ಪಡೆದುಕೊಂಡಿದೆ.

ಇದೇ ತಿಂಗಳು 7ರಂದು ಬಿಡುಗಡೆಯಾಗಲಿದೆ ಅತ್ಯಧಿಕ ಮೈಲೇಜ್ 2022ರ ಜೆಡ್ಎಸ್ ಎಲೆಕ್ಟ್ರಿಕ್

ಹಾಗೆಯೇ ಹೊಸ ಕಾರು ಗ್ರಿಲ್ ಅನ್ನು ಕವರ್ಡ್ ಪ್ಲೇಟ್ ನಿಂದ ಬದಲಾಯಿಸಲಾಗಿದ್ದು, ಮುಂಭಾಗದ ಬಂಪರ್ ಅನ್ನು ಸಹ ನವೀಕರಿಸಲಾಗಿದೆ. ಜೊತೆಗೆ ಇನ್ ಟೆಕ್ ವಿನ್ಯಾಸವು ಸಹ ಪ್ರಸ್ತುತ ಮಾದರಿಗೆ ಹೋಲಿಸಿದರೆ ಒಟ್ಟಾರೆ ವಿನ್ಯಾಸವು ಏರೋಡೈನಾಮಿಕ್ ಹೆಚ್ಚು ಪರಿಣಾಮಕಾರಿಯಾಗಿ ಕಾಣುತ್ತದೆ.

ಇದೇ ತಿಂಗಳು 7ರಂದು ಬಿಡುಗಡೆಯಾಗಲಿದೆ ಅತ್ಯಧಿಕ ಮೈಲೇಜ್ 2022ರ ಜೆಡ್ಎಸ್ ಎಲೆಕ್ಟ್ರಿಕ್

ಹೊಸ ಕಾರಿನ ಹಿಂದಿನ ಪ್ರೊಫೈಲ್ ಕೂಡಾ ತುಸು ಬದಲಾವಣೆ ಪಡೆದುಕೊಂಡಿದ್ದು, ಇದು ಮರುವಿನ್ಯಾಸಗೊಳಿಸಿದ 17 ಇಂಚಿನ ಅಲಾಯ್ ವ್ಹೀಲ್ ಗಳೊಂದಿಗೆ ಹೆಚ್ಚಿನ ಆಕರ್ಷಣೆ ನೀಡುತ್ತದೆ. ನವೀಕರಿಸಿದ ಎಂಜಿ ಜೆಡ್ಎಸ್ ಇವಿ ಫೇಸ್‌ಲಿಫ್ಟ್ ಮಾದರಿಯ ಕ್ಯಾಬಿನ್ ಒಳಗೂ ಕೂಡಾ ನವೀಕರಿಸಿದ ಹಲವು ಬದಲಾವಣೆಗಳಾಗಿದ್ದು, ಹೊಸ ಕಾರು ಎಂಜಿ ಐಸ್ಮಾರ್ಟ್ ಇನ್ಫೋಟೈನ್‌ಮೆಂಟ್ ಸಿಸ್ಟಂನೊಂದಿಗೆ ದೊಡ್ಡದಾದ ಪನೊರಮಿಕ್ ಸನ್‌ರೂಫ್ ಅನ್ನು ಪಡೆದುಕೊಂಡಿದೆ.

ಇದೇ ತಿಂಗಳು 7ರಂದು ಬಿಡುಗಡೆಯಾಗಲಿದೆ ಅತ್ಯಧಿಕ ಮೈಲೇಜ್ 2022ರ ಜೆಡ್ಎಸ್ ಎಲೆಕ್ಟ್ರಿಕ್

ನವೀಕರಿಸಿದ ವೈಶಿಷ್ಟ್ಯತೆಗಳಲ್ಲಿ ರಿಮೋಟ್ ಕಂಟ್ರೋಲ್‌ನೊಂದಿಗೆ ಹೆಚ್ಚಿನ ಕನೆಕ್ಟಿವಿಟಿ ಫೀಚರ್ಸ್ ಆಯ್ಕೆಗಳನ್ನು ಪಡೆಯಬಹುದಾಗಿದ್ದು, ಜೊತೆಗೆ ಹೊಸ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ವೈರ್‌ಲೆಸ್ ಚಾರ್ಜಿಂಗ್ ತಂತ್ರಜ್ಞಾನವನ್ನು ಪರಿಚಯಿಸಲಾಗಿದೆ.

ಇದೇ ತಿಂಗಳು 7ರಂದು ಬಿಡುಗಡೆಯಾಗಲಿದೆ ಅತ್ಯಧಿಕ ಮೈಲೇಜ್ 2022ರ ಜೆಡ್ಎಸ್ ಎಲೆಕ್ಟ್ರಿಕ್

ಹೊಸ ಜೆಡ್ಎಸ್ ಇವಿ ಕಾರಿನಲ್ಲಿ ಎಂಜಿ ಕಂಪನಿಯು ಆಸ್ಟರ್ ಎಸ್‌ಯುವಿ ನೀಡಲಾಗಿರುವ ಭಾರತದ ಮೊದಲ ವ್ಯಯಕ್ತಿಕರಣಗೊಳಿಸಿದ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಸೌಲಭ್ಯವನ್ನು ಜೋಡಣೆ ಮಾಡುತ್ತಿದ್ದು, ಲೆವಲ್ 2 ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ(ಎಡಿಎಎಸ್) ಹೊಸ ಕಾರಿಗೆ ಮತ್ತಷ್ಟು ಸುರಕ್ಷತೆ ನೀಡಲಿದೆ.

ಇದೇ ತಿಂಗಳು 7ರಂದು ಬಿಡುಗಡೆಯಾಗಲಿದೆ ಅತ್ಯಧಿಕ ಮೈಲೇಜ್ 2022ರ ಜೆಡ್ಎಸ್ ಎಲೆಕ್ಟ್ರಿಕ್

ಹೀಗಾಗಿ 2022ರ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಮಾದರಿಯು ಹೆಚ್ಚಿನ ಮಟ್ಟದ ಮೈಲೇಜ್ ರೇಂಜ್‌ನೊಂದಿಗೆ ಸುರಕ್ಷತೆಯಲ್ಲೂ ಗಮನಸೆಳೆಯಲಿದ್ದು, ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗಿಂತಲೂ ರೂ. 1.50 ಲಕ್ಷದಿಂದ ರೂ. 2 ಲಕ್ಷದ ತನಕ ಹೆಚ್ಚುವರಿ ಬೆಲೆ ಹೊಂದಬಹುದಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಜೆಡ್ಎಸ್ ಮಾದರಿಯು ವಿವಿಧ ಮಾದರಿಯೊಂದಿಗೆ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 21.49 ಲಕ್ಷದಿಂದ ರೂ. 25.18 ಲಕ್ಷ ಬೆಲೆ ಹೊಂದಿದ್ದು, ಹೊಸ ಮಾದರಿಯು ಮತ್ತಷ್ಟು ದುಬಾರಿಯಾಗಿರಲಿದೆ.

Article Published On: Wednesday, March 2, 2022, 11:33 [IST]
English summary
New mg zs ev launch date announced details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+