Just In
- 4 min ago
ರಾಜ್ಯದ ಈ ನಗರಗಳಲ್ಲಿ ಡಬ್ಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್ ಸೇವೆ: KSRTC ತೀರ್ಮಾನ!
- 53 min ago
ಇನ್ನೋವಾ ಕ್ರಿಸ್ಟಾ ಡೀಸಲ್ ಸೇರಿದಂತೆ ಇದೆ ತಿಂಗಳು ಮಾರುಕಟ್ಟೆ ಪ್ರವೇಶಿಸಲಿವೆ 8 ಹೊಸ ಕಾರುಗಳು
- 4 hrs ago
ಭಾರತದಲ್ಲಿ ಹ್ಯುಂಡೈ i20 ಕಾರುಗಳ ಬೆಲೆ ಏರಿಕೆ
- 15 hrs ago
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: 1 ಲಕ್ಷಕ್ಕೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬಹುದು!
Don't Miss!
- Technology
Budget 2023: ಬಜೆಟ್ ಪ್ರತಿಯನ್ನು ಕನ್ನಡದಲ್ಲಿ ಡೌನ್ಲೋಡ್ ಮಾಡಲು ಹೀಗೆ ಮಾಡಿ!
- News
Budget 2023: ಬಜೆಟ್ ಮಂಡನೆಗೆ ಕೆಂಪು ಬಣ್ಣದ ಸೀರೆಯುಟ್ಟು ಬಂದ ನಿರ್ಮಲಾ ಸೀತಾರಾಮನ್, ಕಾರಣ ಇಲ್ಲಿದೆ
- Finance
Budget 2023: ಇದೇ ಮೊದಲ ಬಾರಿಗೆ ಅಪರೂಪದ ವಿದ್ಯಮಾನಕ್ಕೆ ಸಂಸತ್ ಸಾಕ್ಷಿ
- Lifestyle
ಫೆಬ್ರವರಿ ತಿಂಗಳಿನಲ್ಲಿ ಈ 5 ರಾಶಿಯವರಿಗೆ ಲಕ್ಷ್ಮಿ ಕೃಪೆಯಿದೆ
- Sports
ರಣಜಿ ಟ್ರೋಫಿ: ಕ್ವಾ. ಫೈನಲ್ನಲ್ಲಿ ಕರ್ನಾಟಕ vs ಉತ್ತರಾಖಂಡ್ ಸೆಣೆಸಾಟ: 2ನೇ ದಿನದ Live score
- Movies
Ramachari Serial: ಮಾನ್ಯತಾಗೆ ತಿಳಿತು ಸತ್ಯ! ಮುಂದೇನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸೆಕೆಂಡ್ ಹ್ಯಾಂಡ್ ವಾಹನಗಳ ಮಾರುಕಟ್ಟೆ ನಿಯಂತ್ರಣಕ್ಕಾಗಿ ಶೀಘ್ರದಲ್ಲಿಯೇ ಜಾರಿಯಾಗಲಿದೆ ಹೊಸ ನಿಯಮ!
ದೇಶಿಯ ಮಾರುಕಟ್ಟೆಯಲ್ಲಿ ಹೊಸ ವಾಹನಗಳ ಖರೀದಿ ಪ್ರಕ್ರಿಯೆ ಹೆಚ್ಚುತ್ತಿದ್ದು, ಇದರ ಜೊತೆಗೆ ಬಳಕೆ ಮಾಡಿದ ವಾಹನ ವಹಿವಾಟು ಕೂಡಾ ಸಾಕಷ್ಟು ಬೆಳವಣಿಗೆ ಕಾಣುತ್ತಿದೆ. ಆದರೆ ಬಳಕೆ ಮಾಡಿದ ವಾಹನ ಮಾರುಕಟ್ಟೆಯಲ್ಲಿ ಯಾವುದೇ ನಿಯಂತ್ರಣಗಳಲ್ಲಿರುವುದರಿಂದ ಮೋಸದ ವ್ಯವಹಾರ ಹೆಚ್ಚುತ್ತಿದ್ದು, ಇದಕ್ಕಾಗಿ ಕೇಂದ್ರ ಸಾರಿಗೆ ಇಲಾಖೆಯು ಹೊಸ ನಿಯಮಗಳನ್ನು ಪರಿಚಯಿಸುತ್ತಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಹೊಸ ವಾಹನಗಳ ಖರೀದಿ ಜೊತೆ ಹಲವು ಗ್ರಾಹಕರು ಪರಿಸ್ಥಿತಿಗೆ ಅನುಗುಣವಾಗಿ ಸೆಕೆಂಡ್ ಹ್ಯಾಂಡ್ ವಾಹನಗಳ ಖರೀದಿಯತ್ತ ಮುಖ ಮಾಡುತ್ತಿದ್ದಾರೆ. ಹೀಗಾಗಿ ಸೆಕೆಂಡ್ ಹ್ಯಾಂಡ್ ವಾಹನಗಳ ಮಾರಾಟದ ಉದ್ಯಮವು ವೇಗವಾಗಿ ಬೆಳೆಯುತ್ತಿದ್ದು, ಇದರ ನಿಯಂತ್ರಣಕ್ಕಾಗಿ ಹೊಸ ನೀತಿ ನಿಯಮಗಳನ್ನು ರೂಪಿಸಲಾಗುತ್ತಿದೆ.

ಹೊಸ ನಿಯಮಗಳ ಪ್ರಕಾರ ಇನ್ಮುಂದೆ ಬಳಸಿದ ವಾಹನಗಳ ಮಾರಾಟ ಮಾಡುವ ಡೀಲರ್‌ಗಳು ಮತ್ತು ಮಧ್ಯವರ್ತಿಗಳು ಮಾರಾಟದ ಪ್ರಕ್ರಿಯೆಯ ಬಗ್ಗೆ ಸಾರಿಗೆ ಇಲಾಖೆಗೆ ಕಡ್ಡಾಯವಾಗಿ ಮಾಹಿತಿ ಸಲ್ಲಿಸಬೇಕಾಗುತ್ತದೆ.

ಬಳಸಿದ ವಾಹನಗಳನ್ನು ಖರೀದಿ ಮತ್ತು ಮಾರಾಟ ಮಾಡುವ ಡೀಲರ್‌ಗಳು ಪ್ರತಿ ವಾಹನದ ಕುರಿತಾಗಿ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಬೇಕಿದ್ದು, ಇದರಲ್ಲಿ ಡೀಲರ್, ವಾಹನ ಮಾರಾಟ ಮಾಡುವ ಮಾಲೀಕ ಮತ್ತು ವಾಹನ ಖರೀದಿಸುವ ಗ್ರಾಹಕರ ಮಾಹಿತಿಯನ್ನು ಒಳಗೊಂಡಿರುತ್ತದೆ.

ಹೊಸ ನಿಯಮದಡಿಯಲ್ಲಿ ಆಯಾ ವ್ಯಾಪ್ತಿಯಲ್ಲಿರುವ ಸಾರಿಗೆ ಸಂಸ್ಥೆಗಳು ಬಳಸಿದ ವಾಹನಗಳ ಮರು-ಮಾರಾಟಗಾರನಿಗೆ ಪರವಾನಗಿಯನ್ನು ಸಹ ನೀಡಲಿದ್ದು, ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಮೋಸದ ವ್ಯವಹಾರ ಕೈಗೊಂಡಲ್ಲಿ ಅಂತವರ ಪರವಾನಿಗೆಯನ್ನು ರದ್ದುಗೊಳಿಸಬಹುದಾಗಿದೆ.

ಬಳಸಿದ ವಾಹನಗಳ ಮಾರುಕಟ್ಟೆಯನ್ನು ರಕ್ಷಿಸಲು ಮತ್ತು ಗ್ರಾಹಕರನ್ನು ವಂಚನೆಯಿಂದ ರಕ್ಷಿಸಲು ಸರ್ಕಾರವು ಈ ಹೊಸ ನಿಯಮವನ್ನು ಜಾರಿಗೆ ತರುತ್ತಿದ್ದು, ಇದು ಮುಖ್ಯವಾಗಿ ಕದ್ದ ವಾಹನಗಳ ಮರು ಮಾರಾಟ ಮಾಡುವುದನ್ನು ತಡೆಯಲು ಸಾಕಷ್ಟು ಸಹಕಾರಿಯಾಗಲಿದೆ.

ಹೊಸ ನಿಯಮದಡಿಯಲ್ಲಿ ಒಬ್ಬ ವ್ಯಕ್ತಿಯು ತನ್ನ ಕಾರನ್ನು ಸೆಕೆಂಡ್ ಹ್ಯಾಂಡ್ ಡೀಲರ್‌ಗೆ ಮಾರಾಟ ಮಾಡಿದ ತಕ್ಷಣ ಇಬ್ಬರೂ ತಮ್ಮ ಸ್ಥಳೀಯ ಆರ್‌ಟಿಒಗೆ ಈ ಮಾಹಿತಿಯನ್ನು ನೀಡಬೇಕಿದ್ದು, ತದನಂತರ ಆ ವಾಹನವನ್ನು ಖರೀದಿಸುವ ಗ್ರಾಹಕರ ಮಾಹಿತಿಯನ್ನು ಸಹ ಆರ್‌ಟಿಒ ಅಧಿಕಾರಿಗಳಿಗೆ ತಿಳಿಸಬೇಕು.

ಬಳಸಿದ ವಾಹನಗಳ ಮಾರಾಟ ಮತ್ತು ಖರೀದಿ ಪ್ರಕ್ರಿಯೆಯನ್ನು ಡೀಲರ್ ನೇರವಾಗಿ ಆರ್‌ಟಿಒ ಅಧಿಕಾರಿಗಳಿಗೆ ಮಾಹಿತಿ ನೀಡಬಹುದಾಗಿದ್ದು, ಇಲ್ಲವೇ ಆನ್‌ಲೈನ್ ಮೂಲಕ ಪ್ರತ್ಯೇಕ ವೆಬ್‌ತಾಣದಲ್ಲಿ ಮಾಹಿತಿಗಳನ್ನು ಸಲ್ಲಿಕೆ ಮಾಡಬಹುದಾಗಿದೆ.

ಸಾರಿಗೆ ಕಚೇರಿಯಲ್ಲಿ ನೋಂದಾಯಿಸಲಾದ ಹೊಸ ಮಾಲೀಕರ ವಿವರಗಳನ್ನು ಪಡೆಯುವುದು ಕೂಡಾ ಡೀಲರ್ಸ್ ಜವಾಬ್ದಾರಿಯಾಗಿದ್ದು, ಮೂಲ ಮಾಲೀಕರು ತಮ್ಮ ಹಳೆಯ ವಾಹನವನ್ನು ಡೀಲರ್‌ಗೆ ಮಾರಾಟ ಮಾಡಿದ ನಂತರ ಆ ಕಾರನ್ನು ಡೀಲರ್‌ಗಳು ತಪ್ಪು ಉದ್ದೇಶಗಳಿಗಾಗಿ ಬಳಸಿರುವ ಅನೇಕ ಪ್ರಕರಣಗಳು ದಾಖಲಾಗಿವೆ.

ಜೊತೆಗೆ ಸರಿಯಾದ ಸಮಯಕ್ಕೆ ನೋಂದಣಿಯನ್ನು ವರ್ಗಾವಣೆ ಮಾಡದ ಕಾರಣಕ್ಕೆ ಟ್ರಾಫಿಕ್ ಉಲ್ಲಂಘನೆಯ ಚಲನ್‌ಗಳು ಮೊದಲ ಮಾಲೀಕರ ಹೆಸರಿಗೆ ಬರುತ್ತವೆ. ಹಾಗೆಯೇ ಕೆಲವು ಪ್ರಕರಣಗಳಲ್ಲಿ ಹಳೆಯ ಮಾಲೀಕರು ಮಾಡಿದ ಉಲ್ಲಂಘನೆಗಳಿಗಾಗಿ ಹೊಸ ಮಾಲೀಕರು ಕೂಡಾ ಕೆಲವೊಮ್ಮೆ ಕಾನೂನು ಕ್ರಮಕ್ಕೆ ಒಳಗಾದ ಅನೇಕ ಪ್ರಕರಣಗಳಿವೆ.

ಹೀಗಾಗಿ ಹಳೆಯ ವಾಹನಗಳನ್ನು ಮರು ಮಾಡುವ ಮಾಲೀಕರಿಗೆ ಮತ್ತು ಹಳೆಯ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ ಹೊಸ ನಿಯಮಗಳು ಸಾಕಷ್ಟು ಸಹಕಾರಿಯಾಗಲಿದ್ದು, ಇಬ್ಬರ ನಡುವಿನ ವ್ಯವಹಾರವನ್ನು ಸುಲಭಗೊಳಿಸಲು ಮತ್ತು ಯಾವುದೇ ರೀತಿ ಮೋಸದ ವ್ಯವಹಾರಗಳನ್ನು ತಡೆಯುವುದು ಇದೀಗ ಬಳಸಿದ ವಾಹನಗಳ ಡೀಲರ್ಸ್‌ಗಳ ಮೇಲೆ ಜವಾಬ್ದಾರಿ ಹೆಚ್ಚಲಿದೆ.

ಇನ್ನು ಭಾರತದಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯು 2026-27 ರ ವೇಳೆಗೆ 19.5 ಪ್ರತಿಶತದಷ್ಟು ಬೆಳೆಯುವ ನಿರೀಕ್ಷೆಯಿದ್ದು, ಇಂಡಿಯನ್ ಬ್ಲೂಬುಕ್ ಮತ್ತು ದಾಸ್‌ವೆಲ್ಟ್ಆಟೋ ಸಿದ್ಧಪಡಿಸಿರುವ ವರದಿಯ ಪ್ರಕಾರ, 2026 ರ ವೇಳೆಗೆ ಮೂರನೇ ಹಂತದ ನಗರಗಳಲ್ಲಿ ಉಪಯೋಗಿಸಿದ ಕಾರುಗಳ ಬೇಡಿಕೆಯು ಶೇ. 30 ರಷ್ಟು ಹೆಚ್ಚಳವಾಗುವ ನೀರಿಕ್ಷೆಯಿದೆ.

ಅದೇ ಸಮಯದಲ್ಲಿ ಬಳಸಿದ ವಾಹನಗಳ ಬೇಡಿಕೆಯು ದೇಶದ ಪ್ರಮುಖ 40 ನಗರಗಳಲ್ಲಿ ಶೇಕಡಾ 10ರಷ್ಟು ಹೆಚ್ಚಳವಾಗುವ ನೀರಿಕ್ಷೆಯಿದ್ದು, ಗ್ರಾಹಕರ ಅಭಿರುಚಿಗಳಿಗೆ ಅನುಗುಣವಾಗಿ ಹೊಸ ವಾಹನಗಳ ಜೊತೆಗೆ ಬಳಸಿದ ವಾಹನಗಳ ಮಾರುಕಟ್ಟೆಯೂ ಕೂಡಾ ವೇಗವಾಗಿ ಬೆಳವಣಿಗೆ ಹೊಂದುತ್ತಿದೆ.