ಹೊಸ ಬ್ಯಾಟರಿಗಳ ವೆಚ್ಚ ತಗ್ಗಿಸಲು ಆಡಿ ಎಲೆಕ್ಟ್ರಿಕ್ ಕಾರಿನ ಹಳೆಯ ಬ್ಯಾಟರಿಗಳಿಂದ ಇ-ಆಟೋ ನಿರ್ಮಾಣ

ಭಾರತದಲ್ಲಿ ಈಗಾಗಲೇ ಎಲೆಕ್ಟ್ರಿಕ್ ಕಾರುಗಳು ಹೆಚ್ಚಾಗತೊಡಗಿವೆ, ಈ ವಾಹನಗಳು ಹಳೆಯದಾಗುತ್ತಾ ಹೋದಲ್ಲಿ ಬ್ಯಾಟರಿ ಸಾಮರ್ಥ್ಯ ಕೂಡ ಕಡಿಮೆಯಾಗುತ್ತದೆ. ಹಾಗಾಗಿ ಈ ಬ್ಯಾಟರಿಗಳನ್ನು ನಿಷ್ಕ್ರಿಯಗೊಳಿಸಿ ಡಂಪ್ ಮಾಡಲಾಗುತ್ತದೆ. ಆದರೆ ಇನ್ನು ಮುಂದೆ ಇಂತಹ ಪ್ರಕ್ರಿಯೆಗೆ ಆಡಿ ಕಂಪನಿ ಬ್ರೇಕ್ ನೀಡಲಿದೆ. ತನ್ನ ಹಳೆಯ ಬ್ಯಾಟರಿಗಳನ್ನು ಆಟೋಗಳಿಗೆ ಅಳವಡಿಸಲು ತೀರ್ಮಾನಿಸಿದೆ.

ಹೊಸ ಬ್ಯಾಟರಿಗಳ ವೆಚ್ಚ ತಗ್ಗಿಸಲು ಆಡಿ ಎಲೆಕ್ಟ್ರಿಕ್ ಕಾರಿನ ಹಳೆಯ ಬ್ಯಾಟರಿಗಳಿಂದ ಇ-ಆಟೋ ನಿರ್ಮಾಣ

ಈ ನಿಟ್ಟಿನಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಹಳೆಯ ಬ್ಯಾಟರಿಗಳಿಂದ ಎಲೆಕ್ಟ್ರಿಕ್ ಆಟೋಗಳನ್ನು ಓಡಿಸಲು ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಇದಕ್ಕಾಗಿ ಸ್ಟಾರ್ಟಪ್ ಕಂಪನಿಯಾದ ನೂನಮ್ ಆಡಿ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ. ಇದರ ಅಡಿಯಲ್ಲಿ ಆಡಿ ಇ-ಟ್ರಾನ್ ಐಷಾರಾಮಿ ಎಲೆಕ್ಟ್ರಿಕ್ ಕಾರಿನ ಹಳೆಯ ಬ್ಯಾಟರಿಯನ್ನು ಭಾರತದಲ್ಲಿ ಮಾರಾಟವಾಗುವ ಎಲೆಕ್ಟ್ರಿಕ್ ಆಟೋದಲ್ಲಿ ಬಳಸಲಿದ್ದಾರೆ.

ಹೊಸ ಬ್ಯಾಟರಿಗಳ ವೆಚ್ಚ ತಗ್ಗಿಸಲು ಆಡಿ ಎಲೆಕ್ಟ್ರಿಕ್ ಕಾರಿನ ಹಳೆಯ ಬ್ಯಾಟರಿಗಳಿಂದ ಇ-ಆಟೋ ನಿರ್ಮಾಣ

ಇ-ಟ್ರಾನ್‌ನ ಹಳೆಯ ಬ್ಯಾಟರಿಯನ್ನು ಬಳಸುವ ಮೊದಲು ಆಡಿ ಮೂರು ಮಾದರಿಗಳನ್ನು ಪರಿಚಯಿಸಿದೆ. ಈಗ ಕೆಲವು ಹೊಸ ಮಾದರಿಗಳಲ್ಲಿಯೂ ಕಾರ್ಯನಿರ್ವಹಿಸುತ್ತಿದೆ. ಭಾರತದಲ್ಲಿ ಆಡಿ ಇ-ಟ್ರಾನ್‌ನ ಹಳೆಯ ಬ್ಯಾಟರಿಯಿಂದ ತಯಾರಿಸಿದ ಎಲೆಕ್ಟ್ರಿಕ್ ಆಟೋವನ್ನು 2023ರ ಆರಂಭಿಕ ತಿಂಗಳುಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕಂಪನಿ ಹೇಳಿದೆ.

ಹೊಸ ಬ್ಯಾಟರಿಗಳ ವೆಚ್ಚ ತಗ್ಗಿಸಲು ಆಡಿ ಎಲೆಕ್ಟ್ರಿಕ್ ಕಾರಿನ ಹಳೆಯ ಬ್ಯಾಟರಿಗಳಿಂದ ಇ-ಆಟೋ ನಿರ್ಮಾಣ

ಈ ಇ-ರಿಕ್ಷಾಗಳನ್ನು ಮೊದಲು ಪ್ರಾಯೋಗಿಕ ಯೋಜನೆಯಡಿ ಪ್ರಾರಂಭಿಸಲಾಗುವುದು. ಇದು ಭಾರತದಲ್ಲಿ ಲಿಥಿಯಂ-ಐಯಾನ್ ಬ್ಯಾಟರಿಗಳನ್ನು ಮರುಬಳಕೆ ಮಾಡುವ ಉದ್ಯಮಕ್ಕೆ ಪೂರಕವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಅಲ್ಲದೆ, ಮರುಬಳಕೆಯ ಬ್ಯಾಟರಿಗಳ ಬಳಕೆಯು ಇ-ವಾಹನಗಳ ಬೆಲೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಹೊಸ ಬ್ಯಾಟರಿಗಳ ವೆಚ್ಚ ತಗ್ಗಿಸಲು ಆಡಿ ಎಲೆಕ್ಟ್ರಿಕ್ ಕಾರಿನ ಹಳೆಯ ಬ್ಯಾಟರಿಗಳಿಂದ ಇ-ಆಟೋ ನಿರ್ಮಾಣ

ಹಳೆಯದಾದ ನಂತರವೂ ಆಡಿ ಇ-ಟ್ರಾನ್ ಬ್ಯಾಟರಿಯನ್ನು ಇತರ ಸಣ್ಣ ವಾಹನಗಳಲ್ಲಿ ಬಳಸಬಹುದು ಎಂದು ಸ್ಟಾರ್ಟಪ್ ಸಂಸ್ಥಾಪಕ ಪ್ರದೀಪ್ ಚಟರ್ಜಿ ಹೇಳಿದ್ದಾರೆ. ಹಳೆಯ ಲಿಥಿಯಂ-ಐಯಾನ್ ಬ್ಯಾಟರಿಗಳು ಅಗ್ಗವಾಗಿದ್ದು, ಇ-ಆಟೋ ಅಥವಾ ಇ-ಕಾರ್ಗೋದಂತಹ ಸಣ್ಣ ವಾಹನಗಳಲ್ಲಿ ಬಳಸಬಹುದು ಎಂದು ಅವರು ಹೇಳಿದರು.

ಹೊಸ ಬ್ಯಾಟರಿಗಳ ವೆಚ್ಚ ತಗ್ಗಿಸಲು ಆಡಿ ಎಲೆಕ್ಟ್ರಿಕ್ ಕಾರಿನ ಹಳೆಯ ಬ್ಯಾಟರಿಗಳಿಂದ ಇ-ಆಟೋ ನಿರ್ಮಾಣ

ಇದು ಎಲೆಕ್ಟ್ರಿಕ್ ವಾಹನಗಳ ಬೆಲೆಯನ್ನು ಕಡಿಮೆ ಮಾಡುತ್ತದೆ. ಜನರಿಗೆ ಕೈಗೆಟುಕುವಂತೆ ಮಾಡುತ್ತದೆ. ಇದು ಕಾರಿನ ಜೀವನ ಚಕ್ರದಂತೆ ಕೆಲಸ ಮಾಡಲಿದೆ. ಕಾರಿನ ಜೀವಿತಾವಧಿ ನಂತರವೂ, ಬ್ಯಾಟರಿ ಮಾತ್ರ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿರಲಿದೆ. ಈ ಕಡಿಮೆ ಶಕ್ತಿಯೊಂದಿಗೆ ಸಣ್ಣ ಎಲೆಕ್ಟ್ರಿಕ್ ವಾಹನಗಳಲ್ಲಿ ಬಳಸಬಹುದು.

ಹೊಸ ಬ್ಯಾಟರಿಗಳ ವೆಚ್ಚ ತಗ್ಗಿಸಲು ಆಡಿ ಎಲೆಕ್ಟ್ರಿಕ್ ಕಾರಿನ ಹಳೆಯ ಬ್ಯಾಟರಿಗಳಿಂದ ಇ-ಆಟೋ ನಿರ್ಮಾಣ

ಇ-ಟ್ರಾನ್ 50, ಇ-ಟ್ರಾನ್ 55 ಮತ್ತು ಇ-ಟ್ರಾನ್ ಸ್ಪೋರ್ಟ್‌ಬ್ಯಾಕ್ ಸೇರಿದಂತೆ ಮೂರು ರೂಪಾಂತರಗಳಲ್ಲಿ ಆಡಿ ಇ-ಟ್ರಾನ್ ಅನ್ನು ಭಾರತದಲ್ಲಿ ಲಭ್ಯವಾಗುವಂತೆ ಮಾಡಿದೆ. ಆಡಿ ಇ-ಟ್ರಾನ್ ಶ್ರೇಣಿಯ ಬೆಲೆಗಳು ₹ 99.99 ಲಕ್ಷದಿಂದ ಪ್ರಾರಂಭವಾಗುತ್ತವೆ (ಎಕ್ಸ್-ಶೋರೂಮ್, ಭಾರತ). ಆಡಿ ಇ-ಟ್ರಾನ್ ಕಂಪ್ಲೀಟ್ಲಿ ಬಿಲ್ಟ್ ಯುನಿಟ್ (CBU) ಅನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತಿದೆ.

ಹೊಸ ಬ್ಯಾಟರಿಗಳ ವೆಚ್ಚ ತಗ್ಗಿಸಲು ಆಡಿ ಎಲೆಕ್ಟ್ರಿಕ್ ಕಾರಿನ ಹಳೆಯ ಬ್ಯಾಟರಿಗಳಿಂದ ಇ-ಆಟೋ ನಿರ್ಮಾಣ

ಆಡಿ ಇ-ಟ್ರಾನ್ 50 ನಲ್ಲಿ 71 kWh ಬ್ಯಾಟರಿ ಪ್ಯಾಕ್ ಅನ್ನು ಬಳಸಲಾಗಿದೆ. ಇದರ ಎಲೆಕ್ಟ್ರಿಕ್ ಮೋಟಾರ್ 308 Bhp ಪವರ್ ಮತ್ತು 540 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೆಚ್ಚು ಶಕ್ತಿಶಾಲಿಯಾದ ಆಡಿ ಇ-ಟ್ರಾನ್ 55 ಮತ್ತು ಇ-ಟ್ರಾನ್ ಸ್ಪೋರ್ಟ್‌ಬ್ಯಾಕ್ 55 ಎರಡು ಎಲೆಕ್ಟ್ರಿಕ್ ಮೋಟಾರ್‌ಗಳೊಂದಿಗೆ 95 kWh ಬ್ಯಾಟರಿ ಪ್ಯಾಕ್ ಅನ್ನು 402 bhp ಶಕ್ತಿ ಮತ್ತು 664 Nm ಟಾರ್ಕ್ ಅನ್ನು ಉತ್ಪಾದಿಸಬಲ್ಲದು.

ಹೊಸ ಬ್ಯಾಟರಿಗಳ ವೆಚ್ಚ ತಗ್ಗಿಸಲು ಆಡಿ ಎಲೆಕ್ಟ್ರಿಕ್ ಕಾರಿನ ಹಳೆಯ ಬ್ಯಾಟರಿಗಳಿಂದ ಇ-ಆಟೋ ನಿರ್ಮಾಣ

ಇ-ಟ್ರಾನ್ 50 ನಲ್ಲಿ 359 ಕಿ.ಮೀ ವ್ಯಾಪ್ತಿ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ, ಇ-ಟ್ರಾನ್ 55 ಒಂದೇ ಚಾರ್ಜ್‌ನಲ್ಲಿ 484 ಕಿ.ಮೀ ವ್ಯಾಪ್ತಿಯನ್ನು ತಲುಪಿಸಬಲ್ಲದು. ಆಡಿ ವರ್ಚುವಲ್ ಕಾಕ್‌ಪಿಟ್, ಆಂಬಿಯೆಂಟ್ ಲೈಟಿಂಗ್, ಫೋರ್ ಝೋನ್ ಕ್ಲೈಮೆಟ್ ಕಂಟ್ರೋಲ್, 360-ಡಿಗ್ರಿ ಕ್ಯಾಮೆರಾ, ವೈರ್‌ಲೆಸ್ ಚಾರ್ಜಿಂಗ್, ಹೆಡ್ಸ್-ಅಪ್ ಡಿಸ್ಪ್ಲೇ, ಎಂಟು ಏರ್‌ಬ್ಯಾಗ್‌ಗಳು ಇ-ಟ್ರಾನ್‌ನಲ್ಲಿ ಲಭ್ಯವಿದೆ.

ಹೊಸ ಬ್ಯಾಟರಿಗಳ ವೆಚ್ಚ ತಗ್ಗಿಸಲು ಆಡಿ ಎಲೆಕ್ಟ್ರಿಕ್ ಕಾರಿನ ಹಳೆಯ ಬ್ಯಾಟರಿಗಳಿಂದ ಇ-ಆಟೋ ನಿರ್ಮಾಣ

ಪೋರ್ಟಬಲ್ 11 kW ಕಾಂಪ್ಯಾಕ್ಟ್ ಚಾರ್ಜರ್ ಆಡಿ ಇ-ಟ್ರಾನ್‌ನ ವಿವಿಧ ಮಾದರಿಗಳೊಂದಿಗೆ ಬರುತ್ತದೆ. ಕಾರುಗಳು ಮತ್ತು ಆಟೋಗಳಲ್ಲಿ ಬಳಸಿದ ನಂತರವೂ ಲಿಥಿಯಂ-ಐಯಾನ್ ಬ್ಯಾಟರಿಗಳು ಆ ವಾಹನಗಳಿಗೆ ತಕ್ಕಂತೆ ಸಾಮರ್ಥ್ಯವನ್ನು ಹೊಂದಿರಲಿವೆ.

ಹೊಸ ಬ್ಯಾಟರಿಗಳ ವೆಚ್ಚ ತಗ್ಗಿಸಲು ಆಡಿ ಎಲೆಕ್ಟ್ರಿಕ್ ಕಾರಿನ ಹಳೆಯ ಬ್ಯಾಟರಿಗಳಿಂದ ಇ-ಆಟೋ ನಿರ್ಮಾಣ

ಅಂತಹ ಬ್ಯಾಟರಿಗಳನ್ನು ವಿದ್ಯುತ್ ಎಲ್ಇಡಿ ದೀಪಗಳು ಅಥವಾ ಸಣ್ಣ ಉಪಕರಣಗಳಿಗೆ ಬಳಸಬಹುದು. ಲಿಥಿಯಂ-ಐಯಾನ್ ಬ್ಯಾಟರಿಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಮೊದಲು ಮರುಬಳಕೆ ಮಾಡುವುದು ಲಿಥಿಯಂ ಗಣಿಗಾರಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಲಿಥಿಯಂನ ದೀರ್ಘ ಕಾಲದ ಸಂಗ್ರಹಕ್ಕೆ ಸಹಕಾರಿಯಾಗಿದೆ.

ಹೊಸ ಬ್ಯಾಟರಿಗಳ ವೆಚ್ಚ ತಗ್ಗಿಸಲು ಆಡಿ ಎಲೆಕ್ಟ್ರಿಕ್ ಕಾರಿನ ಹಳೆಯ ಬ್ಯಾಟರಿಗಳಿಂದ ಇ-ಆಟೋ ನಿರ್ಮಾಣ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಪ್ರಸ್ತುತ ಎಲೆಕ್ಟ್ರಿಕ್ ವಾಹನಗಳ ಬೆಲೆಯಲ್ಲಿ ಶೇ30-40 ರಷ್ಟು ಮೌಲ್ಯ ಬ್ಯಾಟರಿಗಳದ್ದೇ ಆಗಿರುತ್ತದೆ. ಜೊತೆಗೆ ಎಲೆಕ್ಟ್ರಿಕ್ ವಾಹನಗಳ ಉಳಿದ ಬಿಡಿ ಭಾಗಗಳು ಸಾಮಾನ್ಯ ವಾಹನಗಳ ಮೌಲ್ಯವನ್ನು ಹೊಂದಿರುತ್ತವೆ. ಹಾಗಾಗಿಯೇ ಇವಿ ವಾಹನಗಳ ಬೆಲೆಯು ಇಂಧನ ಚಾಲಿತ ವಾಹನಗಳಿಗಿಂತ ಹೆಚ್ಚಾಗಿರುತ್ತದೆ. ಈ ನಿಟ್ಟಿನಲ್ಲಿ ಹೊಸ ಬ್ಯಾಟರಿಗಳಿಗೆ ತಗುಲುವ ವೆಚ್ಚವನ್ನು ಕಡಿಮೆ ಮಾಡಲು ಆಡಿ ತೆಗೆದುಕೊಂಡಿರುವ ನಿರ್ಣಯದಿಂದ ಇ-ಆಟೋಗಳು ಕೈಗೆಟುಕುವ ಬೆಲೆಗೆ ಸಿಗಲಿವೆ.

Most Read Articles

Kannada
English summary
Nunam Audi deal to build e auto from old batteries of Audi electric car
Story first published: Wednesday, June 15, 2022, 19:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X