Just In
- 43 min ago
ಇನ್ನೋವಾ ಕ್ರಿಸ್ಟಾ ಡೀಸಲ್ ಸೇರಿದಂತೆ ಇದೆ ತಿಂಗಳು ಮಾರುಕಟ್ಟೆ ಪ್ರವೇಶಿಸಲಿವೆ 8 ಹೊಸ ಕಾರುಗಳು
- 4 hrs ago
ಭಾರತದಲ್ಲಿ ಹ್ಯುಂಡೈ i20 ಕಾರುಗಳ ಬೆಲೆ ಏರಿಕೆ
- 15 hrs ago
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: 1 ಲಕ್ಷಕ್ಕೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬಹುದು!
- 16 hrs ago
ಹೋಂಡಾ ಆಕ್ಟೀವಾ 6Gಗೆ ಸೆಡ್ಡು ಹೊಡೆಯಲು ಮಾರುಕಟ್ಟೆಗಿಳಿದ ಹೀರೋ Xoom... ಏನಿದರ ವಿಶೇಷತೆ!
Don't Miss!
- News
Budget 2023: ದೇಶದ ಆರ್ಥಿಕ ಭವಿಷ್ಯ ನಿರ್ಧರಿಸುವ ಕೇಂದ್ರ ಬಜೆಟ್ ತಂಡದಲ್ಲಿ ಯಾರೆಲ್ಲಾ ಇದ್ದಾರೆ? ಅವರ ಹಿನ್ನೆಲೆ ಏನು? ತಿಳಿಯಿರಿ
- Technology
ಏರ್ಟೆಲ್ ಗ್ರಾಹಕರೇ, 84 ದಿನಗಳ ಮಾನ್ಯತೆಯ ರೀಚಾರ್ಜ್ ಪ್ಲ್ಯಾನ್ ಇಲ್ಲಿವೆ ನೋಡಿ
- Finance
Budget 2023: ಇದೇ ಮೊದಲ ಬಾರಿಗೆ ಅಪರೂಪದ ವಿದ್ಯಮಾನಕ್ಕೆ ಸಂಸತ್ ಸಾಕ್ಷಿ
- Lifestyle
ಫೆಬ್ರವರಿ ತಿಂಗಳಿನಲ್ಲಿ ಈ 5 ರಾಶಿಯವರಿಗೆ ಲಕ್ಷ್ಮಿ ಕೃಪೆಯಿದೆ
- Sports
ರಣಜಿ ಟ್ರೋಫಿ: ಕ್ವಾ. ಫೈನಲ್ನಲ್ಲಿ ಕರ್ನಾಟಕ vs ಉತ್ತರಾಖಂಡ್ ಸೆಣೆಸಾಟ: 2ನೇ ದಿನದ Live score
- Movies
Ramachari Serial: ಮಾನ್ಯತಾಗೆ ತಿಳಿತು ಸತ್ಯ! ಮುಂದೇನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಇನ್ಮುಂದೆ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಒಲಾ, ಉಬರ್ ಆಟೋಗಳು ನಿಷೇಧ
ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಮಹಾನಗರಗಳಲ್ಲಿ ಉಬರ್, ಒಲಾ, ರಾಪಿಡೋ ಸೇರಿದಂತೆ ಅಗ್ರಿಗೇಟರ್‌ಗಳಡಿ ಸೇವೆ ನೀಡುತ್ತಿದ್ದ ಆಟೋಗಳನ್ನು ಕರ್ನಾಟಕ ಸಾರಿಗೆ ಇಲಾಖೆ ತಕ್ಷಣ ಸೇವೆ ಸ್ಥಗಿತಗೊಳಿಸಲು ಆದೇಶ ನೀಡಿದೆ.

ಗ್ರಾಹಕರಿಗೆ ಸ್ವಯಂ ದರಗಳನ್ನು ನಿಗದಿಪಡಿಸುತ್ತಿರುವ ಆರೋಪದಡಿ ರಾಜ್ಯ ಸಾರಿಗೆ ಇಲಾಖೆಯು ಗುರುವಾರ ಮೂರು ಕಂಪನಿಗಳಿಗೆ ನೋಟಿಸ್ ಜಾರಿ ಮಾಡಿತ್ತು. ರಾಜ್ಯ ಕಾನೂನು ಪ್ರಕಾರ ಟೆಕ್ನಾಲಜಿ ಪ್ಲಾಟ್‌ಫರ್ಮ್‌ಗಳಿಗೆ ಕಾರುಗಳನ್ನು ಮಾತ್ರ ಒಟ್ಟುಗೂಡಿಸಲು ಅನುಮತಿ ನೀಡಲಾಗಿದೆ. ಆದರೆ ಆಟೋಗಳಿಗೆ ಇದಕ್ಕೆ ಅನುಮತಿ ಇಲ್ಲ.

ಅಗ್ರಿಗೇಟರ್‌ಗಳಿಡಿ ಸೇವೆ ನೀಡುತ್ತಿರುವ ಆಟೋಗಳನ್ನು ತಕ್ಷಣ ಸೇವೆ ಸ್ಥಗಿತಗೊಳಿಸಲು ಆದೇಶ ನೀಡಲಾಗಿದೆ. "ಆಟೋಗಳನ್ನು ಇದರಲ್ಲಿ ಒಟ್ಟುಗೂಡಿಸುವುದು ಕಾನೂನುಬದ್ಧವಲ್ಲ, ಕಾರುಗಳನ್ನು ಮಾತ್ರ ಒಟ್ಟುಗೂಡಿಸಬಹುದು ಆದ್ದರಿಂದ ನಾವು ಅವರಿಗೆ ನೋಟಿಸ್ ಕಳುಹಿಸಿದ್ದೆವು" ಎಂದು ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಎಲ್ ಹೇಮಂತ್ ಕುಮಾರ್ ಹೇಳಿದ್ದಾರೆ.

ಆಟೋ ಸೇವೆಗೆ ಅನುಮತಿ ಇಲ್ಲ
ಕ್ಯಾಬ್ ಸೇವೆ ಎಂದರೆ ಗರಿಷ್ಟ ಆರು ಮಂದಿಯ ಆಸನ ಸಾಮರ್ಥ್ಯವನ್ನು ಹೊಂದಿರಬೇಕು ಎಂಬ ನಿಯಮವಿದೆ. ಆದರೆ ಒಲಾ, ಉಬರ್, ರಾಪಿಡೋ ಅಗ್ರಿಗೇಟರ್‌ಗಳು ನಿಯಮ ಮೀರಿ ಆಟೋಗಳನ್ನು ಈ ಸೇವೆಗೆ ಇಳಿಸಿದ್ದಾರೆ. ಅಲ್ಲದೇ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಮೊತ್ತವನ್ನು ಗ್ರಾಹಕರಿಂದ ಸುಳಿಗೆ ಮಾಡಲಾಗುತ್ತಿದೆ.

ಸಾರಿಗೆ ಇಲಾಖೆಯು ರಾಜ್ಯದ ರಾಜಧಾನಿಯಲ್ಲಿ ಆಟೋಗಳಿಂದ ವಿಧಿಸಬಹುದಾದ ಕನಿಷ್ಠ ದರವಾಗಿ 30 ರೂ. ಇದ್ದರೇ, ಆಟೋ-ಹೇಲಿಂಗ್ ಅಪ್ಲಿಕೇಶನ್‌ನಿಂದ ಕನಿಷ್ಟ ದರವಾಗಿ ರೂ. 100 ವರೆಗೆ ವಿಧಿಸಲಾಗುತ್ತಿದೆ. ಈ ಕುರಿತ ದೂರುಗಳು ಹೆಚ್ಚಾಗುತ್ತಲೇ ಸಾರಿಗೆ ಇಲಾಖೆ ಎಚ್ಚೆತ್ತು ರಾಜ್ಯ ನಿಗದಿಪಡಿಸಿದ ಕನಿಷ್ಠ ದರಕ್ಕಿಂತ ಹೆಚ್ಚಿನ ದರವನ್ನು ಗ್ರಾಹಕರಿಗೆ ವಿಧಿಸಲಾಗಿದೆ ಎಂಬ ವರದಿಗಳ ಬಗ್ಗೆ ಸರ್ಕಾರ ವಿವರಣೆಯನ್ನು ಕೋರಿದೆ.

ದ್ವಿಚಕ್ರ ಸೇವೆಗೂ ಅನುಮತಿ ಪಡೆದಿಲ್ಲ
ಇತ್ತೀಚೆಗೆ ಜನಪ್ರಿಯವಾಗಿರುವ ರಾಪಿಡೋ ಕೂಡ ತನ್ನ ದ್ವಿಚಕ್ರ ವಾಹನ ಸೇವೆಗಾಗಿ ಯಾವುದೇ ಅನುಮತಿ ಪಡೆದಿಲ್ಲ ಎಂದು ತಿಳಿದುಬಂದಿದೆ. ಇದು ಕಾನೂನು ಬಾಹಿರವಾಗಿದ್ದು, ರ್ಯಾಪಿಡೋ ದ್ವಿಚಕ್ರ ವಾಹನ ಸೇವೆಯನ್ನು ನಿಲ್ಲಿಸಲು ಸೂಚಿಸಲಾಗಿದೆ. ಅನುಮತಿಯಿಲ್ಲದೇ ಸೇವೆ ನೀಡುತ್ತಿದ್ದ ಈ ಸಂಸ್ಥೆಗಳ ವಿರುದ್ಧ ಸರ್ಕಾರವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ.

ಸದ್ಯ ಬೆಂಗಳೂರು, ಹುಬ್ಬಳ್ಳಿ, ಮೈಸೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಆಪ್ ಆಧಾರಿತ ಆಟೋರಿಕ್ಷಾ ಸೇವೆ ಬಂದ್ ಆಗಿದೆ. ರ್ಯಾಪಿಡೋದ ಬೈಕ್ ಸೇವೆ ಕೂಡ ಸ್ಥಗಿತಗೊಂಡಿದೆ. ಓಲಾ, ಉಬರ್ ಕ್ಯಾಬ್ ಸೇವೆಗಳು ಮಾತ್ರ ಈ ಆ್ಯಪ್‌ನಲ್ಲಿ ಲಭ್ಯವಿರಲಿವೆ. ಇನ್ನು 3 ದಿನದಲ್ಲಿ ಗ್ರಾಹಕರಿಂದ ಸುಳಿಗೆ ಮಾಡುತ್ತಿದ್ದ ಹೆಚ್ಚಿನ ದರದ ಕುರಿತಂತೆ ಉತ್ತರಿಸುವಂತೆ ಕಂಪನಿಗಳಿಗೆ ಸರ್ಕಾರ ಸೂಚನೆ ನೀಡಿದೆ.

ಮಾಮೂಲಿ ಆಟೋಗಳಿಗೂ ಎಚ್ಚರಿಕೆ ನೀಡಬೇಕಿದೆ
ಭಾರತದಲ್ಲಿ ಆಟೋಗಳು ಸಾರ್ವಜನಿಕರ ನಿತ್ಯವಸರ ಸೇವೆಗೆ ಪ್ರಮುಖ ಸಾರಿಗೆಗಳಾಗಿವೆ. ದೇಶದ ಆಯಾ ರಾಜ್ಯಗಳಲ್ಲಿ ಆಟೋಗಳಿಗೆ ಇಂತಿಷ್ಟು ಕಿ.ಮೀಗಳಿಗೆ ಕನಿಷ್ಟ ದರವನ್ನು ರಾಜ್ಯ ಸರ್ಕಾರಗಳು ನಿಗದಿಪಡಿಸಿವೆ. ಹಾಗೇಯೇ ಕರ್ನಾಟಕದಲ್ಲೂ ರೂ. 30 ಕನಿಷ್ಟ ಪ್ರಯಾಣದ ದರವಾಗಿದೆ.

ಆದರೆ ಆಟೋ ಚಾಲಕರು ಮೀಟರ್ ಇದ್ದರೂ ಬಳಸುವುದಿಲ್ಲ, ಜೊತೆಗೆ ಮನಬಂದಂತೆ ಹಣಕ್ಕೆ ಬೇಡಿಕೆಯಿಟ್ಟು ಸುಳಿಗೆ ಮಾಡುತ್ತಾರೆ. ಈ ಬಗ್ಗೆ ನಗರ ವಾಸಿಗಳಿಗೆ ಹೇಳಬೇಕಿಲ್ಲ, ಪ್ರತಿಯೊಬ್ಬರಿಗೂ ಇಂತಹ ಅನುಭವವಾಗಿರುತ್ತದೆ. ಸ್ಥಳೀಯರಿಗೆ ಇಂತಹ ಸಂದರ್ಭಗಳು ಎದುರಾದಾಗ ನಗರಕ್ಕೆ ಭೇಟಿ ನೀಡುವ ಇತರ ರಾಜ್ಯದವರು ಹಾಗೂ ವಿದೇಶಿಗರ ಪರಿಸ್ಥಿತಿ ಹೇಳಬೇಕಿಲ್ಲ.

ಇದು ಕೇವಲ ಬೆಂಗಳೂರು, ಮೈಸೂರು ನಗರಗಳಲ್ಲಿ ಮಾತ್ರವಲ್ಲ ರಾಜ್ಯದ ಬಹುತೇಕ ನಗರಗಳಲ್ಲಿ ಆಟೋ ಚಾಲಕರು ಹೀಗೆಯೇ ವರ್ತಿಸುತ್ತಾರೆ. ಇವರ ಹಾವಳಿ ಕೂಡ ಹೆಚ್ಚಾಗದ್ದು, ರಾತ್ರಿ 9 ರ ನಂತರ ಒನ್ ಆಂಡ್ ಆಫ್ ಪಡೆಯುವ ಅನುಮತಿಯಿದೆ. ಆಟೋ ಚಾಲಕರು ಮನಬಂದಂತೆ ದರ ನಿಗದಿ ಪಡಿಸುತ್ತಾರೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ತುರ್ತು ಸಂಧರ್ಭಗಳಲ್ಲಿ ವಿಧಿಯಿಲ್ಲದೇ ಪ್ರಯಾಣಿಕರು ಕೇಳಿದಷ್ಟು ಹಣ ನೀಡಿ ಪ್ರಯಾಣಿಸುತ್ತಾರೆ. ಇದನ್ನೇ ಅವಕಾಶವನ್ನಾಗಿಸಿಕೊಂಡು ಪ್ರತಿ ಬಾರಿಯು ಆಟೋಚಾಲಕರು ಇದನ್ನೇ ಬಂಡವಾಳವನ್ನಾಗಿಸಿಕೊಂಡಿದ್ದಾರೆ ಎಂದು ಸಾರ್ವಜನಿಕರು ಹಲವು ಬಾರಿ ಆರೋಪಿಸಿದ್ದಾರೆ. ಈ ಬಗ್ಗೆ ಆಟೋ ಚಾಲಕರಿಗೂ ಎಚ್ಚರಿಕೆ ನೀಡಬೇಕಿದೆ.