ಬೆಂಗಳೂರಿನಲ್ಲಿ ಜಾರಿಯಾಗಲಿದೆ ಪೇ ಅಂಡ್ ಪಾರ್ಕ್: ವಾರ್ಷಿಕವಾಗಿ ರೂ. 188 ಕೋಟಿ ಆದಾಯ ನೀರಿಕ್ಷೆಯಲ್ಲಿ ಬಿಬಿಎಂಪಿ!

ಹೆಚ್ಚುತ್ತಿರುವ ವಾಹನಗಳ ಪರಿಣಾಮ ಬೆಂಗಳೂರಿನಂತಹ ಮಾಹಾನಗರಗಳಲ್ಲಿ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತಿದ್ದು, ಬೇಕಾಬಿಟ್ಟಿಯಾಗಿ ಪಾರ್ಕಿಂಗ್ ಮಾಡುವುದು ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ಪಾರ್ಕಿಂಗ್ ನಿರ್ವಹಣೆಯನ್ನು ವ್ಯವಸ್ಥಿತಗೊಳಿಸಲು ಮುಂದಾಗಿರುವ ಬೃಹತ್ ಬೆಂಗಳೂರು ಮಾಹಾನಗರ ಪಾಲಿಕೆಯು ಪೇ ಅಂಡ್ ಪಾರ್ಕ್ ನಿಯಮ ಜಾರಿಗೆ ಮುಂದಾಗಿದೆ.

ಬೆಂಗಳೂರಿನಲ್ಲಿ ಜಾರಿಯಾಗಲಿದೆ ಪೇ ಅಂಡ್ ಪಾರ್ಕ್: ವಾರ್ಷಿಕವಾಗಿ ರೂ. 188 ಕೋಟಿ ನೀರಿಕ್ಷೆಯಲ್ಲಿ ಬಿಬಿಎಂಪಿ!

ಬೆಂಗಳೂರಿನ ಎಂಟು ವಲಯಗಳಲ್ಲೂ ಪಾವತಿಸಿದ ಪಾರ್ಕಿಂಗ್ ಸೌಲಭ್ಯವನ್ನು ಅನ್ನು ಪರಿಚಯಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ಟೆಂಡರ್‌ಗಳನ್ನು ಆಹ್ವಾನಿಸಲು ಸಿದ್ಧವಾಗಿದ್ದು, ಹೊಸ ಉಪಕ್ರಮವು ವಾಹನ ದಟ್ಟಣೆಯನ್ನು ಪರಿಣಾಮಕಾರಿ ತಗ್ಗಿಸಲಿದೆ.

ಬೆಂಗಳೂರಿನಲ್ಲಿ ಜಾರಿಯಾಗಲಿದೆ ಪೇ ಅಂಡ್ ಪಾರ್ಕ್: ವಾರ್ಷಿಕವಾಗಿ ರೂ. 188 ಕೋಟಿ ನೀರಿಕ್ಷೆಯಲ್ಲಿ ಬಿಬಿಎಂಪಿ!

ಪೇ ಅಂಡ್ ಪಾರ್ಕ್ ಆರಂಭಿಸಲು ನಗರದ್ಯಾಂತ ಈಗಾಗಲೇ ಅಂತಿಮ ಹಂತದ ಸಿದ್ಧತೆ ನಡೆದಿದ್ದು, ಹೊಸ ವ್ಯವಸ್ಥೆಯನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗುತ್ತಿದೆ.

ಬೆಂಗಳೂರಿನಲ್ಲಿ ಜಾರಿಯಾಗಲಿದೆ ಪೇ ಅಂಡ್ ಪಾರ್ಕ್: ವಾರ್ಷಿಕವಾಗಿ ರೂ. 188 ಕೋಟಿ ನೀರಿಕ್ಷೆಯಲ್ಲಿ ಬಿಬಿಎಂಪಿ!

ಉಚಿತ ವಾಹನ ನಿಲುಗಡೆ ಸೌಲಭ್ಯವನ್ನು ಆದಾಯದ ಮೂಲವಾಗಿ ಪರಿವರ್ತಿಸಲು ಮುಂದಾಗಿರುವ ಪಾಲಿಕೆಯು ಫೆಬ್ರವರಿ 2, 2021 ರಂದು ರಾಜ್ಯ ಸರ್ಕಾರವು ಅನುಮೋದಿಸಿರುವ ಪಾರ್ಕಿಂಗ್ ನೀತಿ ಅಡಿಯಲ್ಲಿ ಹೊಸ ಸೌಲಭ್ಯವನ್ನು ಜಾರಿಗೊಳಿಸಲು ಮುಂದಾಗಿದೆ.

ಬೆಂಗಳೂರಿನಲ್ಲಿ ಜಾರಿಯಾಗಲಿದೆ ಪೇ ಅಂಡ್ ಪಾರ್ಕ್: ವಾರ್ಷಿಕವಾಗಿ ರೂ. 188 ಕೋಟಿ ನೀರಿಕ್ಷೆಯಲ್ಲಿ ಬಿಬಿಎಂಪಿ!

ಹೊಸ ಪಾರ್ಕಿಂಗ್ ನೀತಿಯ ಅಡಿಯಲ್ಲಿ ನಗರವನ್ನು ಉಚಿತ ಪಾರ್ಕಿಂಗ್ ಸೌಲಭ್ಯದಿಂದ ಪಾವತಿಸಿದ ಪಾರ್ಕಿಂಗ್‌ ನತ್ತ ಸ್ಥಳಾಂತರಿಸುವ ಮತ್ತು ವೈಯಕ್ತಿಕ ವಾಹನಗಳ ಬಳಕೆಯನ್ನು ಪರೋಕ್ಷವಾಗಿ ತಗ್ಗಿಸಿ ಸಾರ್ವಜನಿಕ ಸಾರಿಗೆ ಸೌಲಭ್ಯ ಬಳಕೆಯನ್ನು ಹೆಚ್ಚಿಸುವುದು ಹೊಸ ನಿಮಯ ಜಾರಿ ಹಿಂದಿನ ಪ್ರಮುಖ ಉದ್ದೇಶವಾಗಿದೆ.

ಬೆಂಗಳೂರಿನಲ್ಲಿ ಜಾರಿಯಾಗಲಿದೆ ಪೇ ಅಂಡ್ ಪಾರ್ಕ್: ವಾರ್ಷಿಕವಾಗಿ ರೂ. 188 ಕೋಟಿ ನೀರಿಕ್ಷೆಯಲ್ಲಿ ಬಿಬಿಎಂಪಿ!

ಬಿಬಿಎಂಪಿಯು ನಗರ ಭೂ ಸಾರಿಗೆ ನಿರ್ದೇಶನಾಲಯದ (DULT) ವಿವರವಾದ ಅಧ್ಯಯನದ ನಂತರವೇ ಹೊಸ ಯೋಜನೆ ಸಿದ್ಧಪಡಿಸಲಾಗಿದ್ದು, ಹೊಸ ಯೋಜನೆ ಮೂಲಕ ಎಂಟು ವಲಯಗಳಿಂದ ಕನಿಷ್ಠ ರೂ. 188 ಕೋಟಿ ವಾರ್ಷಿಕ ಆದಾಯವನ್ನು ಗಳಿಸುವ ಭರವಸೆ ಹೊಂದಿದೆ.

ಬೆಂಗಳೂರಿನಲ್ಲಿ ಜಾರಿಯಾಗಲಿದೆ ಪೇ ಅಂಡ್ ಪಾರ್ಕ್: ವಾರ್ಷಿಕವಾಗಿ ರೂ. 188 ಕೋಟಿ ನೀರಿಕ್ಷೆಯಲ್ಲಿ ಬಿಬಿಎಂಪಿ!

ಹೊಸ ಪಾರ್ಕಿಂಗ್ ನೀತಿಯ ಅಡಿಯಲ್ಲಿ ಪಾವತಿಸಿದ ಪಾರ್ಕಿಂಗ್ ಸೌಲಭ್ಯದ ಜೊತೆಗೆ ಸಾರ್ವಜನಿಕ ಬಳಕೆಯ ವಾಹನಗಳ ಪಾರ್ಕಿಂಗ್ ಸೌಲಭ್ಯಗಳನ್ನು ಸಹ ನಿಗದಿಪಡಿಸಲಾಗುತ್ತಿದ್ದು, ಹೊಸ ನಿಯಮದಡಿಯಲ್ಲಿ ಪ್ರಮುಖ ವಾಹನಗಳಿಗೆ ವಿನಾಯ್ತಿ ಸಹ ನೀಡಲಾಗುತ್ತಿದೆ.

ಬೆಂಗಳೂರಿನಲ್ಲಿ ಜಾರಿಯಾಗಲಿದೆ ಪೇ ಅಂಡ್ ಪಾರ್ಕ್: ವಾರ್ಷಿಕವಾಗಿ ರೂ. 188 ಕೋಟಿ ನೀರಿಕ್ಷೆಯಲ್ಲಿ ಬಿಬಿಎಂಪಿ!

ಬಿಬಿಎಂಪಿ ಹಿರಿಯ ಅಧಿಕಾರಿ ಮಾಹಿತಿ ಪ್ರಕಾರ ಪಾವತಿಸಿದ ಪಾರ್ಕಿಂಗ್ ಸೌಲಭ್ಯವನ್ನು ಹೊಂದಿರುವ ರಸ್ತೆಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗುತ್ತಿದ್ದು, ಪ್ರದೇಶಗಳಿಗೆ ಅನುಗುಣವಾಗಿ ಪಾರ್ಕಿಂಗ್ ಶುಲ್ಕವು ಪಾವತಿಸಬೇಕಾಗುತ್ತದೆ.

ಬೆಂಗಳೂರಿನಲ್ಲಿ ಜಾರಿಯಾಗಲಿದೆ ಪೇ ಅಂಡ್ ಪಾರ್ಕ್: ವಾರ್ಷಿಕವಾಗಿ ರೂ. 188 ಕೋಟಿ ನೀರಿಕ್ಷೆಯಲ್ಲಿ ಬಿಬಿಎಂಪಿ!

ನಗರದಲ್ಲಿ ಹೆಚ್ಚು ವಾಹನದಟ್ಟಣೆಯನ್ನು ಆಧರಿಸಿ ಪಾರ್ಕಿಂಗ್ ಶುಲ್ಕವನ್ನು ನಿರ್ಧರಿಸಲಾಗುತ್ತಿದ್ದು, ಎ, ಬಿ ಮತ್ತು ಸಿ ವಿಭಾಗಗಳಲ್ಲಿ ವರ್ಗಿಕರಿಸಿ ಶುಲ್ಕ ಪಾವತಿಸಬೇಕಾಗುತ್ತದೆ.

ಬೆಂಗಳೂರಿನಲ್ಲಿ ಜಾರಿಯಾಗಲಿದೆ ಪೇ ಅಂಡ್ ಪಾರ್ಕ್: ವಾರ್ಷಿಕವಾಗಿ ರೂ. 188 ಕೋಟಿ ನೀರಿಕ್ಷೆಯಲ್ಲಿ ಬಿಬಿಎಂಪಿ!

ಟ್ರಾಫಿಕ್ ಎಂಜಿನಿಯರ್ ಅಧಿಕಾರಿಗಳು ನಗರದಲ್ಲಿನ ಪಾರ್ಕಿಂಗ್ ಸ್ಥಳಗಳ ಮಾರುಕಟ್ಟೆ ಮೌಲ್ಯ ಮತ್ತು ಕ್ಯಾರೇಜ್‌ ವೇ ಅಗಲದ ಆಧಾರದ ಮೇಲೆ ರಸ್ತೆಗಳನ್ನು ಎ, ಬಿ ಮತ್ತು ಸಿ ಎಂದು ವರ್ಗೀಕರಿಸಿದ್ದು, ಮುಂಜಾನೆ 7 ಗಂಟೆಯಿಂದ ರಾತ್ರಿ 10 ಗಂಟೆಯ ತನಕ ಪ್ರತಿ ಗಂಟೆ ಆಧರಿಸಿ ಚಾರ್ಜ್ ವಸೂಲಿ ಮಾಡಲಾಗುತ್ತದೆ.

ಬೆಂಗಳೂರಿನಲ್ಲಿ ಜಾರಿಯಾಗಲಿದೆ ಪೇ ಅಂಡ್ ಪಾರ್ಕ್: ವಾರ್ಷಿಕವಾಗಿ ರೂ. 188 ಕೋಟಿ ನೀರಿಕ್ಷೆಯಲ್ಲಿ ಬಿಬಿಎಂಪಿ!

ಪ್ರತಿ ಗಂಟೆಗೆ ಎಷ್ಟು ಶುಲ್ಕ?

ವಾಹನ ನಿಲುಗಡೆ ಅವಧಿ ಮತ್ತು ಪಾರ್ಕಿಂಗ್ ಶುಲ್ಕದ ಕುರಿತಾಗಿ ಅಂತಿಮ ಹಂತದ ಚರ್ಚೆ ನಡೆಯುತ್ತಿದ್ದು, ಮಾಹಿತಿಗಳ ಪ್ರಕಾರ ಎ ವರ್ಗದ ಪಾರ್ಕಿಂಗ್ ಸ್ಥಳಗಳಲ್ಲಿ ದ್ವಿಚಕ್ರ ವಾಹನಗಳಿಗೆ ಪ್ರತಿ ಗಂಟೆಗೆ ರೂ.15 ಮತ್ತು ನಾಲ್ಕು-ಚಕ್ರ ವಾಹನಗಳಿಗೆ ರೂ. 30 ಶುಲ್ಕ ವಿಧಿಸಬಹುದು ಎನ್ನಲಾಗಿದೆ.

ಬೆಂಗಳೂರಿನಲ್ಲಿ ಜಾರಿಯಾಗಲಿದೆ ಪೇ ಅಂಡ್ ಪಾರ್ಕ್: ವಾರ್ಷಿಕವಾಗಿ ರೂ. 188 ಕೋಟಿ ನೀರಿಕ್ಷೆಯಲ್ಲಿ ಬಿಬಿಎಂಪಿ!

ಹಾಗೆಯೇ ಬಿ ವರ್ಗದ ಪಾರ್ಕಿಂಗ್‌ ಸ್ಥಳಗಳಲ್ಲಿ ದ್ವಿಚಕ್ರ ವಾಹನಗಳಿಗೆ ಪ್ರತಿ ಗಂಟೆಗೆ ರೂ. 10 ಮತ್ತು ಕಾರುಗಳಿಗೆ ರೂ. 20 ಶುಲ್ಕ ವಿಧಿಸಬಹುದಾಗಿದ್ದು, ಸಿ ವರ್ಗದ ಪಾರ್ಕಿಂಗ್ ಸ್ಥಳಗಳಲ್ಲಿ ದ್ವಿಚಕ್ರ ವಾಹನಗಳಿಗೆ ಪ್ರತಿ ಗಂಟೆಗೆ ರೂ. 5 ಮತ್ತು ಕಾರುಗಳಿಗೆ ರೂ. 10 ಶುಲ್ಕ ವಿಧಿಸಬಹುದಾಗಿದೆ.

ಬೆಂಗಳೂರಿನಲ್ಲಿ ಜಾರಿಯಾಗಲಿದೆ ಪೇ ಅಂಡ್ ಪಾರ್ಕ್: ವಾರ್ಷಿಕವಾಗಿ ರೂ. 188 ಕೋಟಿ ನೀರಿಕ್ಷೆಯಲ್ಲಿ ಬಿಬಿಎಂಪಿ!

ನಗರದ ಪ್ರಮುಖ ಪ್ರದೇಶಗಳು ಮತ್ತು ವಾಹನ ದಟ್ಟಣೆಯ ಸ್ಥಳಗಳಲ್ಲಿ ಪಾರ್ಕಿಂಗ್ ವೆಚ್ಚವು ವಾಹನ ಮಾಲೀಕರಿಗೆ ಹೆಚ್ಚಿನ ಹೊರೆಯಾಗಲಿದ್ದು, ಯಲಹಂಕ, ಬೊಮ್ಮನಹಳ್ಳಿ, ರಾಜರಾಜೇಶ್ವರಿ ನಗರ ಮತ್ತು ದಾಸರಹಳ್ಳಿ ವಲಯಗಳು ಸಿ ವರ್ಗದ ಪಾರ್ಕಿಂಗ್ ವ್ಯಾಪ್ತಿಗೆ ಒಳಪಡಲಿವೆ.

ಬೆಂಗಳೂರಿನಲ್ಲಿ ಜಾರಿಯಾಗಲಿದೆ ಪೇ ಅಂಡ್ ಪಾರ್ಕ್: ವಾರ್ಷಿಕವಾಗಿ ರೂ. 188 ಕೋಟಿ ನೀರಿಕ್ಷೆಯಲ್ಲಿ ಬಿಬಿಎಂಪಿ!

ಹೊಸ ಪಾರ್ಕಿಂಗ್ ಸೌಲಭ್ಯವನ್ನು ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿ ಜಾರಿಗೆ ತರಲಾಗುತ್ತಿದ್ದು, ಶುಲ್ಕ ವಿಧಿಸುವುದಕ್ಕೆ ಪರ-ವಿರೋಧವಿದ್ದರೂ ವಾಹನ ದಟ್ಟಣೆಯನ್ನು ತಗ್ಗಿಸಲು ಮತ್ತು ಕೆಲವು ಕಡೆಗಳಲ್ಲಿ ಸಾರ್ವಜನಿಕ ಸ್ಥಳಗಳನ್ನು ಖಾಯಂ ಪಾರ್ಕಿಂಗ್ ಆಗಿ ಮಾರ್ಪಡಿಸಿಕೊಂಡಿರುವ ವಾಹನ ಮಾಲೀಕರಿಗೆ ಹೊಸ ನಿಯಮವು ಬಿಸಿ ತುಪ್ಪವಾಗಿ ಪರಿಣಮಿಸಲಿದೆ ಎನ್ನಬಹುದು.

Article Published On: Monday, September 19, 2022, 19:31 [IST]
English summary
Paid parking path start soon in bengaluru here all details about parking hours and parking fee
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+