ಕಾರು ಖರೀದಿಸುವ ಯೋಚನೆಯಿದೆಯೇ?: ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿರುವ ಈ ಕಾರುಗಳನ್ನು ಒಮ್ಮೆ ನೋಡಿ...
2022 ರ ಮೊದಲಾರ್ಧದಲ್ಲಿ ಭಾರತದಲ್ಲಿ ಅನೇಕ ಹೊಸ ಕಾರುಗಳನ್ನು ಪರಿಚಯಿಸಲಾಯಿತು. ಇನ್ನು ದ್ವಿತಿಯಾರ್ಧದಲ್ಲಿ ಸಾಲು ಹಬ್ಬಗಳು ಬರುತ್ತಿದ್ದು, ಬಹಳಷ್ಟು ಕಾರುಗಳು ಬಿಡುಗಡೆಗೆ ಸಿದ್ಧವಾಗುತ್ತಿವೆ. ಸದ್ಯ ಬಿಡುಗಡೆಯಲ್ಲೂ ಪೈಪೋಟಿ ತೋರುತ್ತಿರುವ ವಾಹನ ತಯಾರಕರು ಮುಂದಿನ ತಿಂಗಳಲ್ಲಿ ಒಂದಷ್ಟು ಕಾರುಗಳ ಬಿಡುಗಡೆ ಮಾಡಲು ಸಿದ್ದವಾಗಿದ್ದಾರೆ.

ಸದ್ಯ ಭಾರತದಲ್ಲಿ ಆಗಸ್ಟ್‌ನಲ್ಲಿ ಯಾವೆಲ್ಲಾ ಕಾರುಗಳು ಬಿಡುಗಡೆಯಾಗಲಿವೆ ಎಂಬ ಕುತೂಹಲ ಹಲವರಲ್ಲಿರುತ್ತದೆ. ಹಾಗಾಗಿ ವಾಹನ ಪ್ರೇಮಿಗಳಿಗಾಗಿ ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಟಾಪ್ ಕಾರುಗಳನ್ನು ಕೆಳಗೆ ಪಟ್ಟಿಮಾಡಲಾಗಿದೆ.

ಹುಂಡೈ ಟಕ್ಸನ್
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಟಕ್ಸನ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಲು ಹುಂಡೈ ನಿರ್ಧರಿಸಿದೆ. ಇದಕ್ಕಾಗಿ ಬುಕ್ಕಿಂಗ್ ಕೂಡ ಆರಂಭವಾಗಿದೆ. ಈ ಕಾರನ್ನು ಬುಕ್ ಮಾಡಲು ಬಯಸುವ ಗ್ರಾಹಕರು ರೂ.50 ಸಾವಿರ ಮುಂಗಡ ಪಾವತಿಸಿ ಬುಕ್ ಮಾಡಬಹುದು. ಅಂತಾರಾಷ್ಟ್ರೀಯ ಮಟ್ಟದಲ್ಲಿ 70 ಲಕ್ಷ ಕಾರುಗಳು ಮಾರಾಟವಾಗಿದ್ದು, ಈ ಕಾರು ಭಾರತದಲ್ಲೂ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ.

ಹೊಸ ಟಕ್ಸನ್ ಅನ್ನು ಸ್ಪೋರ್ಟಿಯರ್ ಆಗಿ ವಿನ್ಯಾಸಗೊಳಿಸಲಾಗಿದೆ. ಮುಂಭಾಗವು ಟ್ರೈಯಾಂಗಲ್ ಎಲ್ಇಡಿ ಡಿಆರ್ಎಲ್‌ಗಳೊಂದಿಗೆ ದೊಡ್ಡ ಗ್ರಿಲ್ ಅನ್ನು ಪಡೆಯುತ್ತದೆ, ಹಿಂಭಾಗದ ಟಿ-ಆಕಾರದ ಟೈಲ್ ಲೈಟ್ ಮತ್ತು ಹಿಂಭಾಗದ ವಿಂಡ್ಸ್ಕ್ರೀನ್ ಕೆಳಗೆ ಹ್ಯುಂಡೈ ಲೋಗೋವನ್ನು ಹೊಂದಿದೆ.

ಟಕ್ಸನ್ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಜೊತೆಗೆ ಇಂಟಿಗ್ರೇಟೆಡ್ ಬೋಸ್ ಪ್ರೀಮಿಯರ್ ಸೌಂಡ್ ಸಿಸ್ಟಮ್, ಬ್ಲೂ ಲಿಂಕ್ ಕಿನ್ 60-ಫೀಚರ್ ಸಂಪರ್ಕಿತ ಕಾರ್ ತಂತ್ರಜ್ಞಾನ, ಬಹು-ಭಾಷಾ UI ಬೆಂಬಲ, ಹಿಂಭಾಗದ ಒರಗುವ ಸೀಟುಗಳು, 64-ಹಂತದ ಆಂಬಿಯೆಂಟ್ ಲೈಟಿಂಗ್, ಅಲೆಕ್ಸಾ ಮತ್ತು ಗೂಗಲ್ ವಾಯ್ಸ್ ಅಸಿಸ್ಟೆಂಟ್ ಅನ್ನು ಒಳಗೊಂಡಿದೆ.

ಹ್ಯುಂಡೈ ಟಕ್ಸನ್ 2.0 ಲೀಟರ್ ಡೀಸೆಲ್ ಮತ್ತು 2.0 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಡೀಸೆಲ್ ಎಂಜಿನ್ 186 bhp ಪವರ್ ಮತ್ತು 417 Nm ಟಾರ್ಕ್ ಅನ್ನು ಹೊರಹಾಕುತ್ತದೆ, ಆದರೆ ಪೆಟ್ರೋಲ್ ಎಂಜಿನ್ 156 bhp ಪವರ್ ಮತ್ತು 192 Nm ಟಾರ್ಕ್ ಅನ್ನು ಹೊರಹಾಕುತ್ತದೆ. ಡೀಸೆಲ್ ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಪೆಟ್ರೋಲ್ ಎಂಜಿನ್ ಅನ್ನು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಹುಂಡೈ ಟಕ್ಸನ್ ಕಾರಿನಲ್ಲಿ ಆಲ್-ವೀಲ್ ಡ್ರೈವ್ ಆಯ್ಕೆಯನ್ನು HTRAC ನೀಡುತ್ತದೆ.

5 ಮಹೀಂದ್ರಾ ಎಲೆಕ್ಟ್ರಿಕ್ SUVಗಳು
ಮಹೀಂದ್ರಾ ಇತ್ತೀಚೆಗೆ ತನ್ನ 5 ಎಲೆಕ್ಟ್ರಿಕ್ SUV ಗಳ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಅದರಂತೆ ಈ ಎಲ್ಲ ಕಾರುಗಳು ಆಗಸ್ಟ್ 15ರೊಳಗೆ ಅಥವಾ ಅದೇ ದಿನ ಬಿಡುಗಡೆಯಾಗಲಿವೆ. ಒಟ್ಟು 5 SUV ಸಿಲೂಯೆಟ್‌ಗಳನ್ನು ಹೊರತರಲಾಗಿದ್ದು, ಅದರಲ್ಲಿ 4 SUVಗಳು ಕೂಪೆ SUVಗಳಾಗಿದ್ದರೆ, ಒಂದು XUV700 ನಂತೆ ಕಾಣುತ್ತದೆ.

ಮಹೀಂದ್ರಾ ತನ್ನ ಕಾರುಗಳನ್ನು ಲಂಡನ್‌ನಲ್ಲಿ ಬಿಡುಗಡೆ ಮಾಡಲಿದೆ. ಇದಕ್ಕಾಗಿ ಕಂಪನಿಯು XUV 400 ಅನ್ನು ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲು ಯೋಜಿಸುತ್ತಿದೆ. XUV400 ಪ್ರಸ್ತುತ ಮಾರುಕಟ್ಟೆಯಲ್ಲಿ ಟಾಟಾ ನೆಕ್ಸಾನ್ EV, MG ZS EV ಮತ್ತು ಹುಂಡೈ ಕೋನಾ EV ಯೊಂದಿಗೆ ಸ್ಪರ್ಧಿಸುತ್ತದೆ.

ಮಾರುತಿ ಸುಜುಕಿ ಆಲ್ಟೊ
ಭಾರತದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ತನ್ನ ಹೊಸ ತಲೆಮಾರಿನ ಆಲ್ಟೊ ಕಾರನ್ನು ಆಗಸ್ಟ್ 18 ರಂದು ಬಿಡುಗಡೆ ಮಾಡುವುದಾಗಿ ಇತ್ತೀಚೆಗೆ ಘೋಷಿಸಿದೆ. ಸೋರಿಕೆಯಾದ ಚಿತ್ರಗಳ ಪ್ರಕಾರ ಹೊಸ ಆಲ್ಟೊ ಕಾರಿನ ಗಾತ್ರವು ದೊಡ್ಡದಾಗಿದೆ ಅಂದರೆ ಉದ್ದ ಮತ್ತು ಎತ್ತರದಲ್ಲಿ ದೊಡ್ಡದಾಗಿ ಕಾಣುತ್ತಿದೆ. ಹಿಂಭಾಗವನ್ನು ವಿಭಿನ್ನವಾಗಿ ವಿನ್ಯಾಸಗೊಳಿಸಲಾಗಿದೆ. ಇದರ ಟೈಲ್ ಲೈಟ್ 2022 ರ ಸೆಲೆರಿಯೊದ ಟೈಲ್ ಲೈಟ್ ವಿನ್ಯಾಸಕ್ಕೆ ಬಹುತೇಕ ಹೋಲುತ್ತದೆ.

ಆಲ್ಟೊ 796 cc 3 ಸಿಲಿಂಡರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಮಾರುತಿ ಸುಜುಕಿ ಈ ಕಾರಿನಲ್ಲಿ ಆಲ್ಟಾ ಕೆ10 ಎಂಜಿನ್ ಅನ್ನು ಅಳವಡಿಸುವ ಸಾಧ್ಯತೆಯಿದೆ. ಆದರೆ 2022 ಎಸ್-ಪ್ರೆಸ್ಸೊ ಅದೇ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸುತ್ತದೆ. ಸ್ವಯಂಚಾಲಿತ ಗೇರ್ ಐಚ್ಛಿಕವಾಗಿರಲಿದ್ದು, ಸೆಲೆರಿಯೊ AGS (AMD) ಗೇರ್ ಅನ್ನು ಆಯ್ಕೆಯಾಗಿ ಪಡೆಯಬಹುದು.

ಟೊಯೋಟಾ ಹೈರೈಡರ್
ಟೊಯೊಟಾ ಮಾರುತಿಯೊಂದಿಗೆ ಜಂಟಿಯಾಗಿ ಅಭಿವೃದ್ಧಿಪಡಿಸಿದ ಕಾರನ್ನು ಹೈರೈಡರ್ ಹೆಸರಿನಲ್ಲಿ ಬಿಡುಗಡೆ ಮಾಡುತ್ತಿದೆ. ಕಂಪನಿಯು ಈ ಕಾರನ್ನು ಜುಲೈ 1 ರಂದು ಸಾರ್ವಜನಿಕರಿಗೆ ಪ್ರದರ್ಶಿಸಿದೆ. ಆಗಸ್ಟ್ 16 ರಿಂದ ಮಾರಾಟ ಮಾಡಲು ನಿರ್ಧರಿಸಿದ್ದು, ಇದಕ್ಕಾಗಿ ಬುಕ್ಕಿಂಗ್ ಪ್ರಸ್ತುತ 25,000 ರೂ ಮುಂಗಡ ಪಾವತಿಯೊಂದಿಗೆ ನಡೆಯುತ್ತಿದೆ.

ಸುಜುಕಿಯ ಜಾಗತಿಕ ಪ್ಲಾಟ್‌ಫಾರ್ಮ್‌ನಲ್ಲಿ ಈ ಕಾರನ್ನು ನಿರ್ಮಿಸಲಾಗಿದ್ದು, ಇದನ್ನು ಕರ್ನಾಟಕದ ಬಿಡದಿಯಲ್ಲಿರುವ ತನ್ನ ಸ್ಥಾವರದಲ್ಲಿ ತಯಾರಿಸಲಾಗುತ್ತದೆ. ಈ ಕಾರು ಮಸ್ಕ್ಯುಲರ್ ಬಾನೆಟ್, ಗ್ಲಾನ್ಸಿಯಾ ತರಹದ ಮುಂಭಾಗದ ಗ್ರಿಲ್, ಸ್ಪ್ಲಿಟ್ ಎಲ್ಇಡಿ ಡಿಆರ್ಎಲ್, 17-ಇಂಚಿನ ಮಲ್ಟಿ-ಸ್ಪೋಕ್ ಅಲಾಯ್ ವೀಲ್ ಮುಂತಾದ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಈ ಕಾರಿನ ಒಳಭಾಗದಲ್ಲಿ ಟೊಯೊಟಾದ ಐ-ಕನೆಕ್ಟ್ ಸೌಲಭ್ಯವು 55 ವೈಶಿಷ್ಟ್ಯಗಳೊಂದಿಗೆ, ಸ್ಮಾರ್ಟ್ ವಾಚ್ ಸಂಪರ್ಕ, 9 ಇಂಚಿನ ಸ್ಮಾರ್ಟ್ ಪ್ಲೇ ಕಾಸ್ಟ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವಾಯಿಸ್ ಕಂಟ್ರೋಲ್, ರಿಮೋಟ್ ಎಸಿ ಆನ್ ಮತ್ತು ಆಫ್, ರಿಮೋಟ್ ವೆಹಿಕಲ್ ರೆಕಗ್ನಿಷನ್, ವೈರ್‌ಲೆಸ್ ಚಾರ್ಜಿಂಗ್, ಪನೋರಮಿಕ್ ಸನ್‌ರೂಫ್ , HUD ಲಭ್ಯವಿದೆ.

ಮರ್ಸಿಡಿಸ್ AMG EQ53 4ಮ್ಯಾಟಿಕ್ +
Mercedes-Benz ಇಂಡಿಯಾ ತನ್ನ EQS ಎಲೆಕ್ಟ್ರಿಕ್ ಸೆಡಾನ್ ಅನ್ನು ಭಾರತದಲ್ಲಿ ಆಗಸ್ಟ್ 24 ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇದು EQS ಪರ್ಫಾರ್ಮೆನ್ಸ್ AMG ಆವೃತ್ತಿಯಾಗಿ ಬಿಡುಗಡೆಯಾಗಲಿದೆ. Mercedes-AMG EQS 53 4Matic+ ನಲ್ಲಿ 2 ಎಲೆಕ್ಟ್ರಿಕ್ ಮೋಟಾರ್‌ಗಳನ್ನು ಅಳವಡಿಸಲಾಗಿದೆ.

ಒಂದು ಆಕ್ಸಲ್‌ನಲ್ಲಿದ್ದರೆ ಇನ್ನೊಂದು AMG ಪರ್ಫಾರ್ಮೆನ್ಸ್ 4ಮ್ಯಾಟಿಕ್+ ಆಲ್-ವೀಲ್ ಡ್ರೈವ್ ಸಿಸ್ಟಮ್‌ನೊಂದಿಗೆ ಸಜ್ಜುಗೊಂಡಿದೆ. ಈ ಕಾರು ಗರಿಷ್ಠ 658 bhp ಪವರ್ ಮತ್ತು 950 Nm ಟಾರ್ಕ್ ಅನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. ಕೇವಲ 3.4 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿ.ಮೀ ವೇಗವನ್ನು ತಲುಪುತ್ತದೆ. ಗಂಟೆಗೆ ಗರಿಷ್ಠ 250 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಈ ಕಾರು ಸ್ಲಿಪರಿ, ಕಂಫರ್ಟ್, ಸ್ಪೋರ್ಟ್, ಸ್ಪೋರ್ಟ್+ ಮತ್ತು ಇಂಡಿವಿಜುವಲ್ ಎಂಬ ಡೈನಾಮಿಕ್ ಸೆಲೆಕ್ಟ್ ಡ್ರೈವಿಂಗ್ ಮೋಡ್‌ಗಳೊಂದಿಗೆ ಬರುತ್ತದೆ.


Click it and Unblock the Notifications
