ನ್ಯಾನೋ ಕಾರು ನಿರ್ಮಾಣಕ್ಕೆ ಕಾರಣವಾದ ರೋಚಕ ಕಥೆಯನ್ನು ಬಿಚ್ಚಿಟ್ಟ ರತನ್‌ ಟಾಟಾ!

ರತನ್ ಟಾಟಾ ಅವರು ಕಡಿಮೆ ಬೆಲೆಗೆ ಸುರಕ್ಷಿತ ದ್ವಿಚಕ್ರ ವಾಹನವನ್ನು ಸಾಮಾನ್ಯರಿಗೆ ತಲುಪಿಸಲು ಯೋಜನೆಯನ್ನು ರೂಪಿಸಿ ಕೊನೆಗೆ ಅದನ್ನು ನಾಲ್ಕು ಚಕ್ರದ ವಾಹನವನ್ನಾಗಿ ಪರಿವರ್ತಿಸಿ ಟಾಟಾ ನ್ಯಾನೋವನ್ನಾಗಿ ಮಾಡಿದ ಅಚ್ಚರಿಯ ಮಾಹಿತಿಯನ್ನು ಮೊದಲ ಬಾರಿಗೆ ಹಂಚಿಕೊಂಡಿದ್ದಾರೆ.

 ನ್ಯಾನೋ ಕಾರು ನಿರ್ಮಾಣಕ್ಕೆ ಕಾರಣವಾದ ರೋಚಕ ಕಥೆಯನ್ನು ಬಿಚ್ಚಿಟ್ಟ ರತನ್‌ ಟಾಟಾ!

ಟಾಟಾ ಮೋಟಾರ್ಸ್ ನೀಡುವ ನ್ಯಾನೋ ಭಾರತದಲ್ಲಿ ಇದುವರೆಗೆ ಮಾರಾಟವಾದ ಅತ್ಯಂತ ಕೈಗೆಟುಕುವ ಬೆಲೆಯ ಕಾರು ಎಂದೇ ಹೇಳಬಹುದು. ಈ ಕಾರಣಕ್ಕಾಗಿಯೇ ಇದು ವಿಶ್ವದ ಅತ್ಯಂತ ಅಗ್ಗದ ಕಾರು ಎಂದು ಸಹ ಖ್ಯಾತಿ ಪಡೆದುಕೊಂಡಿದೆ. ಟಾಟಾ ನ್ಯಾನೋ ಜಾಗವನ್ನು ಆಕ್ರಮಿಸಲು ಯಾವುದೇ ಕಂಪನಿ ಇನ್ನೂ ಸಹ ಮುಂದೆ ಬಂದಿಲ್ಲ.

 ನ್ಯಾನೋ ಕಾರು ನಿರ್ಮಾಣಕ್ಕೆ ಕಾರಣವಾದ ರೋಚಕ ಕಥೆಯನ್ನು ಬಿಚ್ಚಿಟ್ಟ ರತನ್‌ ಟಾಟಾ!

ಭವಿಷ್ಯದಲ್ಲೂ ನ್ಯಾನೋದಷ್ಟು ಕಡಿಮೆ ಬೆಲೆಗೆ ಕಾರನ್ನು ಮಾರಾಟ ಮಾಡುವುದು ಅಸಾಧ್ಯವೆಂದೇ ಹೇಳಬಹುದು. ಅಷ್ಟೊಂದು ಕೈಗೆಟಕುವ ಬೆಲೆಯಲ್ಲಿ ಟಾಟಾ ನ್ಯಾನೋವನ್ನು ಮಾರುಕಟ್ಟೆಗೆ ತರಲಾಗಿತ್ತು. ದ್ವಿಚಕ್ರ ವಾಹನದ ಮಾರಾಟ ಬೆಲೆಗೆ ಸಮನಾದ ಬೆಲೆಯಲ್ಲಿ ಟಾಟಾ ನ್ಯಾನೋ ಬಿಡುಗಡೆಯಾಗಿತ್ತು.

 ನ್ಯಾನೋ ಕಾರು ನಿರ್ಮಾಣಕ್ಕೆ ಕಾರಣವಾದ ರೋಚಕ ಕಥೆಯನ್ನು ಬಿಚ್ಚಿಟ್ಟ ರತನ್‌ ಟಾಟಾ!

ಅಸುರಕ್ಷಿತ ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವ ಭಾರತೀಯರ ಪ್ರಯಾಣ ಸುರಕ್ಷಿತವಾಗಲಿ ಎಂಬ ಸದುದ್ದೇಶದಿಂದ ರತನ್ ಟಾಟಾ ಈ ಕಾರನ್ನು ದೇಶದಲ್ಲಿ ಮಾರಾಟಕ್ಕೆ ತಂದಿದ್ದು, ಅದು ಅವರ ಕನಸಿನ ವಾಹನವೂ ಆಗಿತ್ತು. ಇತ್ತೀಚೆಗೆ ರತನ್ ಟಾಟಾ ಅವರು ಆಕಾರನ್ನು ಭಾರತದಲ್ಲಿ ಯಾವ ಕಾರಣಕ್ಕೆ ಪರಿಚಯಿಸಲಾಯಿತು ಎಂಬುದನ್ನು ನೆನಪಿಸಿಕೊಂಡಿದ್ದಾರೆ.

 ನ್ಯಾನೋ ಕಾರು ನಿರ್ಮಾಣಕ್ಕೆ ಕಾರಣವಾದ ರೋಚಕ ಕಥೆಯನ್ನು ಬಿಚ್ಚಿಟ್ಟ ರತನ್‌ ಟಾಟಾ!

ಅದೇನೆಂದರೆ, ಟಾಟಾ ನ್ಯಾನೋ ಕಾರನ್ನು ತಯಾರಿಸಲು ಪ್ರೇರೇಪಿಸಿದ ಘಟನೆಯನ್ನು ಅವರು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಭಾರತವು ಅತಿ ಹೆಚ್ಚು ದ್ವಿಚಕ್ರ ವಾಹನ ಬಳಕೆದಾರರನ್ನು ಹೊಂದಿದೆ. ನಾಲ್ಕು ಚಕ್ರದ ವಾಹನಗಳಿಗಿಂತ ದ್ವಿಚಕ್ರ ವಾಹನಗಳು ಹೆಚ್ಚು ಬಳಕೆಯಲ್ಲಿವೆ.

 ನ್ಯಾನೋ ಕಾರು ನಿರ್ಮಾಣಕ್ಕೆ ಕಾರಣವಾದ ರೋಚಕ ಕಥೆಯನ್ನು ಬಿಚ್ಚಿಟ್ಟ ರತನ್‌ ಟಾಟಾ!

ಆದ್ದರಿಂದ, ಭಾರತೀಯ ರಸ್ತೆಯಲ್ಲಿ ಕಾರುಗಳಿಗಿಂತ ಹೆಚ್ಚು ದ್ವಿಚಕ್ರ ವಾಹನಗಳ ಅಪಘಾತಗಳನ್ನೇ ಹೆಚ್ಚಾಗಿ ನೋಡುತ್ತಿರುತ್ತೇವೆ. ಹೀಗೆ ಒಂದೇ ಸ್ಕೂಟರ್‌ನಲ್ಲಿ ಕುಟುಂಬದ ಮೂವರು ಪ್ರಯಾಣಿಸುವ ದೃಶ್ಯವೇ ರತನ್ ಟಾಟಾ ನ್ಯಾನೋ ಕಾರನ್ನು ರಚಿಸಲು ಪ್ರೇರೇಪಿಸಿತು.

 ನ್ಯಾನೋ ಕಾರು ನಿರ್ಮಾಣಕ್ಕೆ ಕಾರಣವಾದ ರೋಚಕ ಕಥೆಯನ್ನು ಬಿಚ್ಚಿಟ್ಟ ರತನ್‌ ಟಾಟಾ!

ತಂದೆ ದ್ವಿಚಕ್ರ ವಾಹನವನ್ನು ಓಡಿಸುತ್ತಿದ್ದರೆ, ತಾಯಿ ಹಿಂಬದಿಯ ಸೀಟಿನಲ್ಲಿ ಪ್ರಯಾಣಿಸುತ್ತಿದ್ದು ಮಗು ಅವರಿಬ್ಬರ ನಡುವೆ ಕುಳಿತಿದ್ದ ದೃಶ್ಯ ರತನ್ ಟಾಟಾ ಅವರ ಮನಸ್ಸನ್ನು ಕಲಕುವಂತೆ ಮಾಡಿತ್ತು. ಇದೇ ಟಾಟಾ ನ್ಯಾನೋ ಸೃಷ್ಟಿಗೆ ಕಾರಣವಾಯಿತು. ಅಂದು ಅವರಂದುಕೊಂಡ ಭಾರತದ ಅಗ್ಗದ ಕಾರಿನ ತಯಾರಿಗೆ ನಾಂದಿ ಹಾಡಿತು.

 ನ್ಯಾನೋ ಕಾರು ನಿರ್ಮಾಣಕ್ಕೆ ಕಾರಣವಾದ ರೋಚಕ ಕಥೆಯನ್ನು ಬಿಚ್ಚಿಟ್ಟ ರತನ್‌ ಟಾಟಾ!

ಅಸುರಕ್ಷಿತ ಬೈಕ್‌ಗಳಲ್ಲಿ ಸವಾರಿ ಮಾಡುವುದು ಅಪಾಯಕಾರಿ. ಇದಲ್ಲದೆ, ಅನೇಕ ಭಾರತೀಯರು ಕುಟುಂಬ ಸಮೇತರಾಗಿ ಅವುಗಳಲ್ಲಿ ಪ್ರಯಾಣಿಸುತ್ತಿರುವುದು ರತನ್ ಟಾಟಾ ಅವರನ್ನು ಇನ್ನಷ್ಟು ಬಿಕ್ಕಟ್ಟಿಗೆ ಸಿಲುಕಿಸಿತ್ತು. ಪರಿಣಾಮವಾಗಿ, ಅವರು ಮೊದಲು ಸುರಕ್ಷಿತ ದ್ವಿಚಕ್ರ ವಾಹನವನ್ನು ನಿರ್ಮಿಸಲು ಯೋಜಿಸಿದ್ದರು. ಆದರೆ ಅದು ನಾಲ್ಕು ಚಕ್ರದ ವಾಹನಗಳ ಉತ್ಪಾದನೆಯಲ್ಲಿ ಕೊನೆಗೊಂಡಿತು.

 ನ್ಯಾನೋ ಕಾರು ನಿರ್ಮಾಣಕ್ಕೆ ಕಾರಣವಾದ ರೋಚಕ ಕಥೆಯನ್ನು ಬಿಚ್ಚಿಟ್ಟ ರತನ್‌ ಟಾಟಾ!

ರತನ್ ಟಾಟಾ ಈ ಘಟನೆಗಳನ್ನು ನೆನಪಿಸಿಕೊಂಡು ತಮ್ಮ Instagram ಅಕಂಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. "ಮೊದಲು ನಾವು ದ್ವಿಚಕ್ರ ವಾಹನಗಳನ್ನು ಸುರಕ್ಷಿತವಾಗಿಸುವುದು ಹೇಗೆ ಎಂದು ಲೆಕ್ಕಾಚಾರ ಮಾಡಲು ಪ್ರಯತ್ನಿಸಿದ್ದೆವು" ಎಂದು ಅವರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಆ ಡೂಡಲ್‌ಗಳು ನಾಲ್ಕು ಚಕ್ರದ ವಾಹನವಾಗಿ ಮಾರ್ಪಟ್ಟಿವೆ.

 ನ್ಯಾನೋ ಕಾರು ನಿರ್ಮಾಣಕ್ಕೆ ಕಾರಣವಾದ ರೋಚಕ ಕಥೆಯನ್ನು ಬಿಚ್ಚಿಟ್ಟ ರತನ್‌ ಟಾಟಾ!

ಇದನ್ನು ಮೂಲತಃ ಕಿಟಕಿಗಳು ಮತ್ತು ಬಾಗಿಲುಗಳಿಲ್ಲದೆ ನಿರ್ಮಿಸಲಾಗಿತ್ತು. ಆದರೆ, ಅದು ಕೆಳಮಟ್ಟದ್ದಾಗಿ ಕಂಡಿತು, ಇದಾದ ನಂತರವೇ ನಮ್ಮ ಈ ಸೃಷ್ಟಿ ಕಾರಾಗಬೇಕು ಎಂಬ ಅಂತಿಮ ನಿರ್ಧಾರವಾಯಿತು ಎಂದು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ರತನ್ ಟಾಟಾ ಅವರ ಪೋಸ್ಟ್ ಅಂತರ್ಜಾಲದಲ್ಲಿ ವೈರಲ್ ಆಗಿದೆ.

 ನ್ಯಾನೋ ಕಾರು ನಿರ್ಮಾಣಕ್ಕೆ ಕಾರಣವಾದ ರೋಚಕ ಕಥೆಯನ್ನು ಬಿಚ್ಚಿಟ್ಟ ರತನ್‌ ಟಾಟಾ!

ಈ ದಾಖಲೆಯು ಅನೇಕ ಭಾರತೀಯರಲ್ಲಿ ನಮ್ಯತೆಯನ್ನು ಸೃಷ್ಟಿಸಿದೆ. ಈ ಪೋಸ್ಟ್‌ಗೆ ಲಕ್ಷಾಂತರ ಜನರು ಲೈಕ್ ಮತ್ತು ಕಾಮೆಂಟ್ ಮಾಡಿದ್ದಾರೆ. ಅಲ್ಲದೆ, ಟಾಟಾ ಮೋಟಾರ್ಸ್ ಮೂಲತಃ ನ್ಯಾನೋವನ್ನು ಸುರಕ್ಷಿತ ದ್ವಿಚಕ್ರ ವಾಹನವಾಗಿ ಅಭಿವೃದ್ಧಿಪಡಿಸಲು ಮತ್ತು ಅಂತಿಮವಾಗಿ ನಾಲ್ಕು ಚಕ್ರದ ವಾಹನವಾಗಿ ಅಭಿವೃದ್ಧಿಪಡಿಸಲು ಯೋಜಿಸಿದೆ ಎಂದು ಈ ಪೋಸ್ಟ್ ಮೂಲಕ ಬಹಿರಂಗಪಡಿಸಲಾಗಿದೆ.

 ನ್ಯಾನೋ ಕಾರು ನಿರ್ಮಾಣಕ್ಕೆ ಕಾರಣವಾದ ರೋಚಕ ಕಥೆಯನ್ನು ಬಿಚ್ಚಿಟ್ಟ ರತನ್‌ ಟಾಟಾ!

ಟಾಟಾ ನ್ಯಾನೋ ಮೊದಲ ಬಾರಿಗೆ 2008 ರಲ್ಲಿ ಬಿಡುಗಡೆಯಾಯಿತು. ಅದರ ಆಗಮನವು ಇಡೀ ವಾಹನ ಜಗತ್ತನ್ನು ಬೆಚ್ಚಿಬೀಳಿಸಿತ್ತು. ಕಾರಣ ಅತ್ಯಂತ ಕಡಿಮೆ ಬೆಲೆಗೆ ಮಾರಾಟಕ್ಕೆ ತಂದಿದ್ದರು. ಆದರೆ ರತನ್ ಟಾಟಾ ಅವರ ಕನಸಿನ ವಾಹನವು ದೇಶದಲ್ಲಿ ದೊಡ್ಡ ಯಶಸ್ಸನ್ನು ಸಾಧಿಸಲಿಲ್ಲ. ಕಡಿಮೆ ಸುರಕ್ಷತೆ ಮತ್ತು ಕಡಿಮೆ ಎಂಜಿನ್ ಸಾಮರ್ಥ್ಯವು ಕಾರಿನ ವೈಫಲ್ಯಕ್ಕೆ ಪ್ರಮುಖ ಕಾರಣವಾಯಿತು.

 ನ್ಯಾನೋ ಕಾರು ನಿರ್ಮಾಣಕ್ಕೆ ಕಾರಣವಾದ ರೋಚಕ ಕಥೆಯನ್ನು ಬಿಚ್ಚಿಟ್ಟ ರತನ್‌ ಟಾಟಾ!

ತರುವಾಯ, 2019 ರಲ್ಲಿ ನ್ಯಾನೋದ ಎಲ್ಲಾ ಉತ್ಪಾದನೆ ಮತ್ತು ಮಾರಾಟವನ್ನು ನಿಲ್ಲಿಸಲಾಯಿತು. ಹೊಸ ಸುರಕ್ಷತಾ ನಿಯಮ ಮತ್ತು ಹೊರಸೂಸುವಿಕೆ ನಿಯಮಕ್ಕೆ ಕಾರನ್ನು ನವೀಕರಿಸುವುದರಿಂದ ಹೆಚ್ಚುವರಿ ವೆಚ್ಚಗಳು ಮತ್ತು ನಷ್ಟಗಳು ಉಂಟಾಗುತ್ತವೆ ಎಂಬ ಆಧಾರದ ಮೇಲೆ ಕಂಪನಿಯು ಈ ನಿರ್ಧಾರವನ್ನು ತೆಗೆದುಕೊಂಡಿತು. ನಂತರ ನ್ಯಾನೋ ಯುಗಕ್ಕೆ ಅಂತ್ಯ ಹಾಡಲಾಯಿತು.

Most Read Articles

Kannada
English summary
Ratan tata shares why he made world s affordable nano car
Story first published: Saturday, May 14, 2022, 17:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X