Just In
- 7 hrs ago
ಕ್ರ್ಯಾಶ್ ಟೆಸ್ಟ್ನಲ್ಲಿ ಗರಿಷ್ಠ ರೇಟಿಂಗ್ ಪಡೆದುಕೊಂಡ ಹೊಸ ಕಿಯಾ ಇವಿ6 ಎಲೆಕ್ಟ್ರಿಕ್ ಕಾರು
- 7 hrs ago
ಕೇವಲ 40 ಸಾವಿರ ರೂ. ಬೆಲೆಗೆ ಬಿಡುಗಡೆಯಾಗಿದೆ 100 ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್
- 9 hrs ago
ಎರ್ಟಿಗಾದಲ್ಲಿ ಹೊಸ ಸಿಎನ್ಜಿ ರೂಪಾಂತರಗಳನ್ನು ಪರಿಚಯಿಸಲು ಸಜ್ಜಾದ ಮಾರುತಿ ಸುಜುಕಿ
- 9 hrs ago
ಏಪ್ರಿಲ್ ತಿಂಗಳ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಯಮಹಾ ಎಂಟಿ-15 ಬೈಕ್
Don't Miss!
- Sports
IPL 2022: ಕೆಎಲ್ ರಾಹುಲ್ ಹೋರಾಟ ವ್ಯರ್ಥ, ಲಕ್ನೋಗೆ ಮಣ್ಣು ಮುಕ್ಕಿಸಿದ ಆರ್ಸಿಬಿ ಟ್ರೋಫಿ ಕನಸು ಜೀವಂತ
- News
ವಿಮಾನ ಇಂಧನ ತೆರಿಗೆ ಕಡಿತ ಮಾಡುತ್ತಾ ಕೇಂದ್ರ ಸರ್ಕಾರ?
- Movies
ಹಿಜಾಬ್ ಧರಿಸಿ ಮುಸ್ಲಿಂ ಮಹಿಳೆಯರ ಪಾತ್ರ ಮಾಡುತ್ತಿರುವ ಸ್ಟಾರ್ ನಟಿಯರಿವರು
- Lifestyle
12 ಲಕ್ಷ ಖರ್ಚು ಮಾಡಿದ ನಾಯಿಯಾದ ಜಪಾನಿನ ವ್ಯಕ್ತಿ!
- Finance
ಮೇ 25ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Technology
ಅಪ್ಲಿಕೇಶನ್ ಡೆವಲಪರ್ಗಳಿಗೆ ಮತ್ತೊಮ್ಮೆ ಸಂದೇಶ ಕಳುಹಿಸಿದ ಆಪಲ್ ಕಂಪೆನಿ!
- Education
ESIC MTS 2022 : ಫೇಸ್ I ಫಲಿತಾಂಶ ಮತ್ತು ಫೇಸ್ II ಪ್ರವೇಶ ಪತ್ರ ಪ್ರಕಟ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪವರ್‌ಟ್ರೈನ್ ತಯಾರಿಯಲ್ಲಿ ರೆನಾಲ್ಟ್-ನಿಸ್ಸಾನ್ ಮೈಲಿಗಲ್ಲು: ಮೈತ್ರಿಯಾಗಿ 35 ಲಕ್ಷ ಯೂನಿಟ್‌ಗಳ ಉತ್ಪಾದನೆ
ಚೆನ್ನೈನ ಓರಗಡಂನಲ್ಲಿರುವ ರೆನಾಲ್ಟ್ ಹಾಗೂ ನಿಸ್ಸಾನ್ ಮೈತ್ರಿ ಉತ್ಪಾದನಾ ಘಟಕವು 2010 ರಲ್ಲಿ ಉತ್ಪಾದನೆಯನ್ನು ಪ್ರಾರಂಭಿಸಿದಾಗಿನಿಂದ ಇಲ್ಲಿಯವರೆಗೆ 35 ಲಕ್ಷ ಪವರ್‌ಟ್ರೈನ್ ಯೂನಿಟ್‌ಗಳನ್ನು ಉತ್ಪಾದಿಸುವ ಮೂಲಕ ಉತ್ಪಾದನಾ ರಂಗದಲ್ಲಿ ಮೈಲಿಗಲ್ಲನ್ನು ಸಾಧಿಸಿದೆ.

ರೆನಾಲ್ಟ್, ನಿಸ್ಸಾನ್‌ನ ಓರಗಡಂ ಉತ್ಪಾದನಾ ಘಟಕದಲ್ಲಿ ಎರಡೂ ಕಂಪನಿಗಳಿಗೆ ಈವರೆಗೂ 23 ಲಕ್ಷ ಯುನಿಟ್ ಎಂಜಿನ್‌ಗಳು ಮತ್ತು 12 ಲಕ್ಷ ಯೂನಿಟ್ ಗೇರ್‌ಬಾಕ್ಸ್‌ಗಳನ್ನು ಉತ್ಪಾದಿಸಲಾಗಿದೆ. ಪ್ರಸ್ತುತ ರೆನಾಲ್ಟ್-ನಿಸ್ಸಾನ್‌ನ ಓರಗಡಂ ಉತ್ಪಾದನಾ ಘಟಕವು 6 ಎಂಜಿನ್ ರೂಪಾಂತರಗಳನ್ನು ಮತ್ತು ಅದರ ಪವರ್‌ಟ್ರೈನ್‌ಗಳಿಗಾಗಿ 4 ವಿಧದ ಗೇರ್‌ಬಾಕ್ಸ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ, ಈ ಉತ್ಪಾದನಾ ಸೌಲಭ್ಯವು ದೇಶೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ಪವರ್‌ಟ್ರೈನ್‌ಗಳನ್ನು ಉತ್ಪಾದಿಸುತ್ತಿದೆ.

ಇತ್ತೀಚೆಗೆ, ರೆನಾಲ್ಟ್ ಭಾರತದಲ್ಲಿ ತನ್ನ ರೆನಾಲ್ಟ್ ಟ್ರೈಬ್ ಎಂಪಿವಿಗಾಗಿ ಒಂದು ಲಕ್ಷ ಮಾರಾಟ ಮಾಡುವ ಮೂಲಕ ಮತ್ತೊಂದು ಮೈಲಿಗಲ್ಲನ್ನು ದಾಟಿತ್ತು. ಈ ಸಂಭ್ರಮದ ಭಾಗವಾಗಿ ಟ್ರೈಬರ್ MPVಯ ಹೊಸ ವಿಶೇಷ ಆವೃತ್ತಿಯ ರೂಪಾಂತರವನ್ನು ಬಿಡುಗಡೆ ಮಾಡಿದೆ.

ಫ್ರೆಂಚ್ ವಾಹನ ತಯಾರಕರ ಪ್ರಕಾರ, ರೆನಾಲ್ಟ್ ಟ್ರೈಬರ್‌ನ ಈ ಸೀಮಿತ ಆವೃತ್ತಿಯು ದೇಶದಾದ್ಯಂತ ಎಲ್ಲಾ ರೆನಾಲ್ಟ್ ಶೋರೂಂಗಳಲ್ಲಿ ಬುಕಿಂಗ್‌ಗೆ ಲಭ್ಯವಿದೆ. ರೆನಾಲ್ಟ್ ಟ್ರೈಬರ್‌ನ ಸೀಮಿತ ಆವೃತ್ತಿಯ ರೂಪಾಂತರವು ವಾಸ್ತವವಾಗಿ ಎರಡನೇ-ಫಾರ್ಮ್ ಟಾಪ್ RxT ಟ್ರಿಮ್ ಲೆವೆಲ್ ಅನ್ನು ಆಧರಿಸಿದೆ. ಜೊತೆಗೆ, ಸೀಮಿತ ಆವೃತ್ತಿಯು ರೆನಾಲ್ಟ್ ಟ್ರೈಬರ್ ಎಂಪಿವಿಯ ಸ್ಟ್ಯಾಂಡರ್ಡ್ RxT ಟ್ರಿಮ್‌ಗಿಂತ ಸುಮಾರು 28,000 ರೂ.ಗಳಷ್ಟು ಹೆಚ್ಚು ವೆಚ್ಚವಾಗಲಿದೆ. ಇದರ ಬೆಲೆ 7.24 ಲಕ್ಷ ರೂ. (ಎಕ್ಸ್-ಶೋರೂಂ, ಇಂಡಿಯಾ) ಇದೆ.

ರೆನಾಲ್ಟ್ ಟ್ರೈಬ್ ಎಂಪಿವಿ ಕುರಿತು ಹೇಳುವುದಾದರೆ, ಇದು ಭಾರತದಲ್ಲಿ ಖರೀದಿಸಬಹುದಾದ 7-ಆಸನಗಳ ಸುರಕ್ಷಿತ ಕಾರು ಮಾದರಿಗಳಲ್ಲಿ ಒಂದಾಗಿದ್ದು, ಗ್ಲೋಬಲ್-ಎನ್‌ಸಿಎಪಿ 4-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ನೀಡಿದೆ. ಈ ಎಂಪಿವಿ ಅನ್ನು 1.0-ಲೀಟರ್, 3 ಸಿಲಿಂಡರ್, ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನೊಂದಿಗೆ 71.01bhp ಗರಿಷ್ಠ ಶಕ್ತಿ ಮತ್ತು 96Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಹೊಸ ಸೀಮಿತ ಆವೃತ್ತಿಯ ರೆನಾಲ್ಟ್ ಟ್ರೈಬರ್‌ನಲ್ಲಿನ ಗೇರ್‌ಬಾಕ್ಸ್ ಆಯ್ಕೆಯು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಮತ್ತು 5-ಸ್ಪೀಡ್ ಸ್ವಯಂಚಾಲಿತ ಮ್ಯಾನುವಲ್ ಟ್ರಾನ್ಸ್‌ಮಿಷನ್ (AMT) ಆಗಿ ಮುಂದುವರಿಯುತ್ತದೆ.

ನಿಸ್ಸಾನ್ ಬಗ್ಗೆ ಮಾತನಾಡುವುದಾದದೆ, ಸಬ್-4m ಎಸ್‌ಯುವಿ, ನಿಸ್ಸಾನ್ ಮ್ಯಾಗ್ನೈಟ್ ಭಾರತದಲ್ಲಿ ಬ್ರ್ಯಾಂಡ್‌ನ ಗೇಮ್ ಚೇಂಜರ್‌ಗಳಾಗಿವೆ ಎಂದು ಹೇಳಬಹುದು. ಎಸ್‌ಯುವಿ ಇತ್ತೀಚೆಗೆ ಗ್ಲೋಬಲ್-ಎನ್‌ಸಿಎಪಿಯಲ್ಲಿ 4-ಸ್ಟಾರ್ ಸುರಕ್ಷತಾ ರೇಟಿಂಗ್ ಗಳಿಸಿದೆ.

ಅಲ್ಲದೆ, ನಿಸ್ಸಾನ್ ಮ್ಯಾಗ್ನೈಟ್ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಬಿಎಸ್, ಇಬಿಡಿ, ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳು, ಐಎಸ್‌ಒಫಿಕ್ಸ್ ಚೈಲ್ಡ್ ಸೀಟ್ ಮೌಂಟ್‌ಗಳು, 360-ಡಿಗ್ರಿ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರ್, ಬ್ರೇಕ್ ಅಸಿಸ್ಟ್, ಟ್ರಾಕ್ಷನ್ ಕಂಟ್ರೋಲ್, ಸ್ಟೆಬಿಲಿಟಿ ಕಂಟ್ರೋಲ್ ಮುಂತಾದ ಸುರಕ್ಷತಾ ವ್ಯವಸ್ಥೆಗಳ ದೀರ್ಘ ಪಟ್ಟಿಯನ್ನು ಹೊಂದಿದ್ದು, ಹಿಲ್ ಸ್ಟಾರ್ಟ್ ಅಸಿಸ್ಟ್‌ನಂತಹ ಹಲವು ಆಯ್ಕೆಗಳನ್ನು ಹೊಂದಿದೆ.

ಇದಲ್ಲದೆ, ನಿಸ್ಸಾನ್ ಮ್ಯಾಗ್ನೈಟ್ ಅನ್ನು CMF-A+ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ. ಇದು ರೆನಾಲ್ಟ್ ಟ್ರೈಬರ್‌ಗೆ ಆಧಾರವಾಗಿದೆ ಮತ್ತು ಪ್ಲಾಟ್‌ಫಾರ್ಮ್ ಸ್ವತಃ ರೆನಾಲ್ಟ್ ಕ್ವಿಡ್ ಅನ್ನು ಆಧಾರವಾಗಿರುವ CMF-A ಪ್ಲಾಟ್‌ಫಾರ್ಮ್‌ನ ಉತ್ಪನ್ನವಾಗಿದೆ.

ನಿಸ್ಸಾನ್ ಮ್ಯಾಗ್ನೈಟ್ ಭಾರತದಲ್ಲಿ ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಬೇಸ್ ಎಂಜಿನ್ 1.0-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಆಗಿದ್ದು 72bhp ಗರಿಷ್ಠ ಶಕ್ತಿ ಮತ್ತು 96Nm ಪೀಕ್ ಟಾರ್ಕ್ ಹೊಂದಿದೆ. ಈ ಎಂಜಿನ್ ಎಸ್‌ಯುವಿಗಾಗಿ ಕಾಗದದ ಮೇಲೆ ಕಡಿಮೆ ಶಕ್ತಿಯುತವಾಗಿ ತೋರಿದರೂ, ನಿಸ್ಸಾನ್ ಮ್ಯಾಗ್ನೈಟ್‌ನ ಹಗುರವಾದ ಕರ್ಬ್ ತೂಕವು ಯೋಗ್ಯವಾದ ಕಾರ್ಯಕ್ಷಮತೆಯನ್ನು ತೋರಿಸುತ್ತದೆ.

ಮುಂದಿನ ಎಂಜಿನ್ ಆಯ್ಕೆಯು 1.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಗಿದ್ದು, ಇದು 98.6bhp ಗರಿಷ್ಠ ಶಕ್ತಿ ಮತ್ತು 160Nm ಪೀಕ್ ಟಾರ್ಕ್ (CVT ಗೇರ್ ಬಾಕ್ಸ್ ರೂಪಾಂತರದಲ್ಲಿ 152Nm ಟಾರ್ಕ್) ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅಥವಾ ಸಿಲ್ಕಿ-ಸ್ಮೂತ್ CVTಗಳು ಗೇರ್‌ಬಾಕ್ಸ್ ಆಯ್ಕೆಗಳಲ್ಲಿ ಲಭ್ಯವಿದೆ.

ಸದ್ಯ 35 ಲಕ್ಷ ಪವರ್‌ಟ್ರೇನ್ ಯೂನಿಟ್‌ಗಳನ್ನು ಉತ್ಪಾದಿಸುವ ಮೂಲಕ ಮೈಲಿಗಲ್ಲನ್ನು ದಾಟಿರುವ ರೆನಾಲ್ಟ್-ನಿಸ್ಸಾನ್ ಮೈತ್ರಿಯು, ಈ ಹಿಂದೆ ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಅನೇಕ ಏರಿಳಿತಗಳನ್ನು ಕಂಡಿದೆ. ಈ ಏರಿಳಿತಗಳ ಹೊರತಾಗಿಯೂ ಮೈಲಿಗಲನ್ನು ಸಾಧಿಸುವ ಮೂಲಕ ಇದೀಗ ಒಕ್ಕೂಟವು ಬಲವಾಗಿ ಕಾಣುತ್ತಿದೆ. ಈ 35 ಲಕ್ಷ ಮೈಲಿಗಲ್ಲು ಭಾರತೀಯ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಮೈತ್ರಿಯ ಬಲವಾದ ಅಡಿಪಾಯಕ್ಕೆ ಸಾಕ್ಷಿಯಾಗಿದೆ.