Just In
- 3 hrs ago
ಎಲೆಕ್ಟ್ರಿಕ್, ಹೈಬ್ರಿಡ್ ಕಾರುಗಳಲ್ಲಿ ಮಾತ್ರ ರಿಜನರೇಟಿವ್ ಬ್ರೇಕಿಂಗ್ ಏಕೆ ಲಭ್ಯವಿದೆ: ಇದರ ಉಪಯೋಗವೇನು?
- 4 hrs ago
ಹೊಸ ನವೀಕರಣಗಳೊಂದಿಗೆ ಸಿಎಫ್ಮೋಟೋ 150ಎನ್ಕೆ ಬೈಕ್ ಬಿಡುಗಡೆ
- 6 hrs ago
ಏಪ್ರಿಲ್ ತಿಂಗಳ ಟಿವಿಎಸ್ ವಾಹನ ಮಾರಾಟ ವರದಿ: ರಫ್ತಿನಲ್ಲಿ ದಾಖಲೆ ನಿರ್ಮಾಣ
- 6 hrs ago
ಎಲೆಕ್ಟ್ರಿಕ್ ಕಾರ್ ಆಗಿ ಪರಿವರ್ತನೆಗೊಂಡು ಮಿಂಚುತ್ತಿದೆ 1954ರ ಫಿಯೆಟ್ ಕಾರು
Don't Miss!
- News
ಭ್ರಷ್ಟಾಚಾರದ ಆರೋಪ: ಭ್ರಷ್ಟಾಚಾರದ ಆರೋಪದ ಮೇಲೆ ಸಚಿವ ಸಿಂಗ್ಲಾ ಅರೆಸ್ಟ್
- Sports
GT vs RR: ಅಂತಿಮ ಓವರ್ನಲ್ಲಿ ಅತಿ ಹೆಚ್ಚು ಬಾರಿ ರನ್ ಚೇಸ್ ಮಾಡಿದ ಗುಜರಾತ್ ಟೈಟನ್ಸ್ ದಾಖಲೆ
- Lifestyle
ಮೇ. 30ಕ್ಕೆ ಶನಿ ಜಯಂತಿ: ಶನಿ ಧೈಯ್ಯಾ, ಶನಿ ದೋಷವಿದ್ದರೆ ಈ ಪರಿಹಾರಗಳನ್ನು ಮಾಡಿ
- Finance
ಮೇ 24ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Movies
'ಯುಗಾಂತರ' ಧಾರಾವಾಹಿಗೆ ಪ್ರಾಮಾಣಿಕ ಐಎಎಸ್ ಅಧಿಕಾರಿ ಪ್ರೇರಣೆ: ವಾಹಿನಿ ಮುಖ್ಯಸ್ಥರ ಸ್ಪಷ್ಟನೆಯೇನು?
- Technology
ಭಾರತದಲ್ಲಿ ಎಲ್ಜಿ OLED 2022 ಸ್ಮಾರ್ಟ್ ಟಿವಿ ಸರಣಿ ಅನಾವರಣ!
- Education
BSF Recruitment 2022 : 281 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕ್ರೂಸ್ ಹಡಗಿನಂತಹ ಐಷಾರಾಮಿ ಕಾರನ್ನು ಖರೀದಿಸಿದ ನಟ ಶಾಹಿದ್ ಕಪೂರ್
ಭಾರತೀಯ ಸಿನಿಮಾ ರಂಗದಲ್ಲಿ ಹಲವು ನಟ ನಟಿಯರಿಗೆ ಕಾರುಗಳ ಕ್ರೇಜ್ ಇದೆ. ಇದೇ ಕಾರಣಕ್ಕೆ ತಮ್ಮ ಹುಟ್ಟುಹಬ್ಬ ಅಥವ ಇತರೆ ಸಂದರ್ಭಗಳಲ್ಲಿ ಮಾರುಕಟ್ಟೆಯಲ್ಲಿರುವ ಐಷಾರಾಮಿ ಕಾರುಗಳನ್ನು ಖರೀದಿಸುತ್ತಿರುತ್ತಾರೆ. ಇದೀಗ ಬಾಲಿವುಡ್ ಖ್ಯಾತ ನಟ ಶಾಹಿದ್ ಕಪೂರ್ ಅವರು ಕೂಡ ಇತ್ತೀಚೆಗೆ ತಮ್ಮ ಹುಟ್ಟು ಹಬ್ಬದ ಅಂಗವಾಗಿ ಹೊಸ ಕಾರನ್ನು ಖರೀದಿಸಿದ್ದಾರೆ.

ಶಾಹಿದ್ ಕಪೂರ್ ಬಾಲಿವುಡ್ ಚಲನಚಿತ್ರೋದ್ಯಮದ ಅತ್ಯಂತ ಜನಪ್ರಿಯ ನಟರಾಗಿದ್ದು, ತಮ್ಮ ಕಬೀರ್ ಸಿಂಗ್ ಸಿನಿಮಾ ಮೂಲಕ ಬಾಲಿವುಡ್‌ನಲ್ಲಿ ಬ್ಲಾಕ್ ಬಸ್ಟರ್ ಹಿಟ್ ನೀಡಿದ್ದರು. ಇದೀಗ ತೆಲುಗು ಸಿನಿಮಾದ ರಿಮೇಕ್ ಆದ ಜೆರ್ಸಿ ಸಿನಿಮಾ ರಿಲೀಸ್ ಆಗಬೇಕಿದ್ದು, ಮತ್ತೊಂದು ಸೂಪರ್ ಹಿಟ್ ನೀಡುವ ನಿರೀಕ್ಷೆಯಲ್ಲಿದ್ದಾರೆ.

ಈ ನಡುವೆ ಅವರು ಇತ್ತೀಚೆಗೆ ತಮ್ಮ 41 ನೇ ವರ್ಷಕ್ಕೆ ಕಾಲಿಟ್ಟರು. ಅವರ ಹುಟ್ಟುಹಬ್ಬದ ಅಂಗವಾಗಿ ಹೊಚ್ಚ ಹೊಸ ಮರ್ಸಿಡಿಸ್-ಮೇಬ್ಯಾಕ್ ಎಸ್ 580 ಸಲೂನ್ ಅನ್ನು ಖರೀದಿಸಿದ್ದಾರೆ. ಕಳೆದ ತಿಂಗಳು ಶಾಹಿದ್ ಕಪೂರ್ ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್ ಕಾರನ್ನು ಟೆಸ್ಟ್ ರೈಡ್ ಮಾಡುವುದು ಕಂಡುಬಂದಿತ್ತು. ಇದೀಗ ಡೆಲಿವರಿ ಪಡೆದಿದ್ದು, ಶಾಹಿದ್ ಫೇಸ್‌ಲಿಫ್ಟ್ ಆವೃತ್ತಿಯನ್ನು ಪಡೆದಿದ್ದಾರೆ. ಇದನ್ನು ಬ್ರಾಂಡ್ ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದೆ.

ಶಾಹಿದ್ ಕಪೂರ್ ಮರ್ಸಿಡಿಸ್ ಮೇಬ್ಯಾಕ್ ಎಸ್580 ರೂಪಾಂತರವನ್ನು ಪಡೆದಿದ್ದಾರೆ. ಇದರ ಎಕ್ಸ್ ಶೋರೂಂ ಬೆಲೆ 2.5 ಕೋಟಿ ರೂ. ಇದ್ದು, ಯಾವುದೇ ಐಚ್ಛಿಕ ಹೆಚ್ಚುವರಿಗಳಿಲ್ಲದೆ ಆನ್-ರೋಡ್ ಬೆಲೆ ಸುಮಾರು 3 ಕೋಟಿ ರೂ. ಇದೆ. ಮರ್ಸಿಡಿಸ್-ಬೆಂಝ್, ಸಂಪೂರ್ಣವಾಗಿ ಆಮದು ಮಾಡಿಕೊಂಡ ಎಸ್ 680 ರೂಪಾಂತರವನ್ನು ಸಹ ಮಾರಾಟ ಮಾಡುತ್ತಿದ್ದು, ಇದರ ಬೆಲೆ 3.5 ಕೋಟಿ ರೂ ಇದೆ.

ಕಂಪನಿಯು ಭಾರತೀಯ ಮಾರುಕಟ್ಟೆಗೆ ಸೀಮಿತ ಸಂಖ್ಯೆಯ ಎಸ್ 680 ರೂಪಾಂತರಗಳನ್ನು ಮಾತ್ರ ಆಮದು ಮಾಡಿಕೊಳ್ಳುತ್ತಿದೆ. ಈ ರೂಪಾಂತರದ ಎಕ್ಸ್ ಶೋರೂಂ ಬೆಲೆ ಸುಮಾರು 3.20 ಕೋಟಿ ರೂ. ಇದ್ದು, ಇದನ್ನು ಆಮದು ಮಾಡಿಕೊಳ್ಳಲಾಗಿರುವುದರಿಂದ ಎಸ್ 680 ರೂಪಾಂತರದ ಬೆಲೆ ತುಂಬಾ ಹೆಚ್ಚಾಗಿದೆ.

ಮರ್ಸಿಡಿಸ್ ಮೂಲಗಳ ಪ್ರಕಾರ, ಎಸ್ 680 ರೂಪಾಂತರವನ್ನು ಭಾರತದಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿದೆ, ಏಕೆಂದರೆ ಇದು ಭಾರತೀಯ ಗ್ರಾಹಕರಿಂದ ಭಾರಿ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಪುಣೆ ಬಳಿಯ ಸಹನ್ ಕಾರ್ಖಾನೆಯಲ್ಲಿ ಅಸೆಂಬ್ಲಿ ಕೆಲಸವನ್ನು ನಡೆಸಲು ಯೋಜಿಸಲಾಗಿದೆ ಎಂದು ತಿಳಿದುಬಂದಿದೆ. ಸ್ಟ್ಯಾಂಡರ್ಡ್ ಎಸ್-ಕ್ಲಾಸ್ ಅನ್ನು ಆಧರಿಸಿದ ಮೇಬ್ಯಾಕ್ ಎಸ್-ಕ್ಲಾಸ್, 180 ಎಂಎಂ ಉದ್ದದ ವ್ಹೀಲ್ ಬೇಸ್ ಅನ್ನು ಹೊಂದಿರುವ ಕಾರಣ ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್ ತುಂಬಾ ಆರಾಮದಾಯಕ ರೈಡಿಂಗ್ ಅನುಭವ ನೀಡುತ್ತದೆ.

ಈ ಕಾರಿನ ಉದ್ದ ಸುಮಾರು 5.5 ಮೀಟರ್ ಇದ್ದು, ಇದು ಅತಿ ಉದ್ದದ ಕಾರುಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ಕಾರುಗಳು ವೇಗವಾಗಿ ಚಲಿಸುವಾಗ ಟೈರ್‌ಗಳ ಶಬ್ದ ಕೇಳಿಬರುತ್ತದೆ. ಆದರೆ ಈ ಕಾರಿನ ಕ್ಯಾಬಿನ್ ತುಂಬಾ ನಿಶ್ಯಬ್ದವಾಗಿರುತ್ತದೆ. ಈ ಕಾರಿನಲ್ಲಿ 19 ಇಂಚಿನ ಅಲಾಯ್ ವ್ಹೀಲ್‌ಗಳಿವೆ. ಮರ್ಸಿಡಿಸ್-ಮೇಬ್ಯಾಕ್ ಕಾರಿನ ಚಕ್ರಗಳನ್ನು 20 ರಿಂದ 21 ಇಂಚುಗಳಿಗೆ ಹೆಚ್ಚಿಸುವ ಅವಕಾಶವನ್ನು ಗ್ರಾಹಕರಿಗೆ ನೀಡಲಾಗಿದೆ. ಈ ಕಾರು ಪ್ರಯಾಣಿಕರಿಗೆ ಮಸಾಜ್ ಸೌಲಭ್ಯವನ್ನು ಸಹ ಒದಗಿಸುತ್ತದೆ. ಮರ್ಸಿಡಿಸ್-ಮೇಬ್ಯಾಕ್ ಎಸ್580 ಕಾರು 4.0-ಲೀಟರ್ ವಿ8 ಟ್ವಿನ್ ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಹೊಂದಿದೆ.

ಇದು 48-ವೋಲ್ಟ್ ಮೈಲ್ಡ್ ಹೈಬ್ರಿಡ್ ವ್ಯವಸ್ಥೆಯನ್ನು ಸಹ ಹೊಂದಿದೆ. ಇದು 496 ಬಿಹೆಚ್‌ಪಿ ಮತ್ತು 700 ಎನ್ ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮತ್ತು 4-ವ್ಹೀಲ್ ಡ್ರೈವ್ ಸಿಸ್ಟಮ್ ನೊಂದಿಗೆ ಬರುತ್ತದೆ. ಈ ಮೂಲಕ ಶಾಹಿದ್ ಕಪೂರ್ ಅನೇಕ ವೈಶಿಷ್ಟ್ಯಗಳನ್ನು ಹೊಂದಿರುವ ದುಬಾರಿ ಕಾರನ್ನು ಖರೀದಿಸಿದ್ದಾರೆ.

ಈ ಕಾರನ್ನು ಕಿಂಗ್ ಆಫ್ ಲಕ್ಸೂರಿ (ಐಷಾರಾಮಿ ಕಾರುಗಳ ರಾಜ) ಅಂತಲೂ ಕರಿಯುತ್ತಾರೆ. ಹಾಗಾಗಿಯೇ ಈ ಕಾರನ್ನು ಸಿನಿಮಾ ತಾರೆಗಳಿಂದ ಹಿಡಿದು ಪ್ರಮುಖ ಕೈಗಾರಿಕೋದ್ಯಮಿಗಳವರೆಗೆ ಹಲವರು ಖರೀದಿಸಿದ್ದಾರೆ. ಶಾಹಿದ್ ಕಪೂರ್ ಅವರ ಬಳಿ ಮತ್ತೊಂದು ಎಸ್-ಕ್ಲಾಸ್ ಕಾರು ಸಹ ಬಳಕೆಯಲ್ಲಿದೆ. ಇದು ಹಿಂದಿನ ಪೀಳಿಗೆಯ ಆವೃತ್ತಿಯಾಗಿದೆ.

ಕಾರಿನ ಒಳಾಂಗಣವನ್ನು ಪ್ರೀಮಿಯಂ ಗುಣಮಟ್ಟದ ವೈಶಿಷ್ಟ್ಯಗಳಿಂದ ಅಲಂಕರಿಸಲಾಗಿದೆ. ಹೊಸ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ವ್ಯವಸ್ಥೆಯನ್ನು ಬಳಸಲಾಗಿದೆ. ಈ ಮೂಲಕ ಇದು ಟ್ಯಾಬ್ಲೆಟ್‌ಂತೆ ಕಾಣಲಿದ್ದು, 12.8 ಇಂಚು ಗಾತ್ರದಲ್ಲಿದೆ. ಈ ಕಾರಿನಲ್ಲಿ ಎಂಬುಎಕ್ಸ್ ವ್ಯವಸ್ಥೆಯನ್ನು ಸಹ ಒದಗಿಸಲಾಗಿದೆ.

ಇದಲ್ಲದೆ, ಶಾಹಿದ್ ಕಪೂರ್ ಜಿಎಲ್ ಕ್ಲಾಸ್, ಎಲ್‌ಎಲ್ ಕ್ಲಾಸ್, ಲ್ಯಾಂಡ್ ರೋವರ್ ರೇಂಜ್ ರೋವರ್ ವೋಗ್ ಮತ್ತು ಪೋರ್ಷೆ ಕ್ಯಾನ್ಯನ್ ಜಿಟಿಎಸ್ ಸೇರಿದಂತೆ ಹಲವು ಕಾರುಗಳನ್ನು ಬಳಸಿದ್ದಾರೆ. ಅವರು ಹಾರ್ಲೆ ಡೆವಿಡನ್ ಫ್ಯಾಟ್ ಬಾಯ್ ನಂತಹ ದುಬಾರಿ ಬೈಕ್ ಅನ್ನು ಸಹ ಹೊಂದಿದ್ದಾರೆ. ಇಷ್ಟೆಲ್ಲಾ ದುಬಾರಿ ಕಾರುಗಳನ್ನು ಬಳಸುತ್ತದರೂ, ಮರ್ಸಿಡಿಸ್ ಮೇಬ್ಯಾಕ್ ಎಸ್ 580 ಅನ್ನು ಖರೀದಿಸಿರುವುದು ವಿಶೇಷ. ಮರ್ಸಿಡಿಸ್ ಕಂಪನಿಯು ತನ್ನ ಉತ್ಪಾದನೆಯನ್ನು ಸ್ಥಳೀಕರಣಗೊಳಿಸಿದೆ ಎಂಬುದು ಗಮನಾರ್ಹವಾಗಿದೆ.