ದುಬಾರಿ ಬಿಎಂಡಬ್ಲ್ಯು ಕಾರು ಖರೀದಿಸಿದ ರಿಯಲ್ ಹೀರೋ ಸೋನು ಸೂದ್

ನಟ ಸೋನು ಸೂದ್ ಅವರು ತಮ್ಮ ಚಾರಿಟಿ ಕಾರ್ಯಗಳಿಂದಾಗಿ ಮತ್ತು ಕೊರೊನಾ ಸಮಯದಲ್ಲಿ ಜನರಿಗೆ ಮಾಡಿದ ಸಹಾಯದಿಂದಾಗಿ ನಿಜ ಜೀವನದ ಹೀರೊ ಎನಿಸಿಕೊಂಡಿದ್ದಾರೆ. ಇತರ ನಟರಂತೆ ಸೋನು ಸೂದ್ ಬಳಿ ಐಷಾರಾಮಿ ಕಾರುಗಳ ದೊಡ್ಡ ಸಂಗ್ರಹವಿಲ್ಲದಿದ್ದರೂ ಒಂದಿಷ್ಟು ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಇದೀಗ ಮತ್ತೊಂದು ದುಬಾರಿ ಕಾರನ್ನು ಖರೀದಿಸಿದ್ದು, ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಅವರು ಹೊಚ್ಚ ಹೊಸ BMW 7-ಸರಣಿಯ ಐಷಾರಾಮಿ ಸೆಡಾನ್‌ನೊಂದಿಗೆ ಪೋಸ್ ನೀಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಹೊಸ ಕಾರು ಆಲ್ಪೈನ್ ವೈಟ್ ಶೇಡ್‌ನಲ್ಲಿ ಇರುವುದನ್ನು ಫೋಟೋದಲ್ಲಿ ನೊಡಬಹುದು. ಈ ಹೊಸ 7-ಸರಣಿಯ ಸೆಡಾನ್‌ನ ನೋಂದಾಯಿತ ಮಾಲೀಕರನ್ನು ಪತ್ತೆಹಚ್ಚಿದಾಗ ಶಕ್ತಿ ಸಾಗರ್ ಪ್ರೊಡಕ್ಷನ್ಸ್ ಎಂದು ತಿಳಿದುಬಂದಿದೆ. ಇದು ಸೋನು ಸೂದ್ ಒಡೆತನದ ನಿರ್ಮಾಣ ಸಂಸ್ಥೆಯಾಗಿದೆ. ಇಲ್ಲಿ ಕಂಡುಬಂದಿರುವ ಕಾರು 740 Li M ಸ್ಪೋರ್ಟ್ ರೂಪಾಂತರವಾಗಿದೆ. ಬಿಳಿ ಛಾಯೆಯಲ್ಲಿ ಕಾರು ತುಂಬಾ ಆಕರ್ಷಣೀಯವಾಗಿ ಕಾಣುತ್ತದೆ.

ದುಬಾರಿ ಬಿಎಂಡಬ್ಲ್ಯು ಕಾರು ಖರೀದಿಸಿದ ರಿಯಲ್ ಹೀರೋ ಸೋನು ಸೂದ್

ಮುಂಭಾಗದಲ್ಲಿ ದೊಡ್ಡ ಕಿಡ್ನಿ ಗ್ರಿಲ್ ಮತ್ತು ಆಕರ್ಷಕ ಹೆಡ್‌ಲ್ಯಾಂಪ್‌ಗಳು ರಸ್ತೆಯ ಮೇಲೆ ಭವ್ಯವಾಗಿ ಕಾಣುತ್ತವೆ. ನಟ ಸೋನೂ ಸೂದ್ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್ ಕಾರಿನ ಮುಂಭಾಗವನ್ನು ಮಾತ್ರ ತೋರಿಸುತ್ತದೆ. ಮೇಲೆ ಹೇಳಿದಂತೆ, ಇದು ಎಂ ಸ್ಪೋರ್ಟ್ ರೂಪಾಂತರವಾಗಿರುವುದರಿಂದ, ಇದು ಸಾಮಾನ್ಯ ಆವೃತ್ತಿಗಿಂತ ಸ್ವಲ್ಪ ವಿಭಿನ್ನವಾಗಿ ಕಾಣುವ ಸೆಡಾನ್ ಆಗಿದೆ. ಇದು ಆಕ್ರಮಣಕಾರಿಯಾಗಿ ಕಾಣುವ ಮುಂಭಾಗದ ಬಂಪರ್ ಅನ್ನು ಪಡೆದು ಸ್ಪೋರ್ಟಿ ನೋಟವನ್ನು ನೀಡುತ್ತದೆ.

BMW 7 - ಸರಣಿಯು ತಯಾರಕರ ಪ್ರಮುಖ ಸೆಡಾನ್ ಆಗಿದ್ದು, ಸಾಕಷ್ಟು ವೈಶಿಷ್ಟ್ಯಗಳೊಂದಿಗೆ ಲೋಡ್ ಆಗಿದೆ. ಹೊಚ್ಚಹೊಸ BMW 7- ಸರಣಿಯ ಬೆಲೆಯು 1.42 ಕೋಟಿ ರೂಪಾಯಿಗಳಿಂದ ಪ್ರಾರಂಭವಾಗುತ್ತದೆ. ಈ ವೀಡಿಯೊದಲ್ಲಿ ಕಂಡುಬರುವ M ಸ್ಪೋರ್ಟ್ ರೂಪಾಂತರವು 1. 51 ಕೋಟಿ ರೂ., ಎಕ್ಸ್ ಶೋ ರೂಂ ಬೆಲೆಯಿದೆ. ಆನ್‌ ರೋಡ್ ಪ್ರಕಾರ ಈ ಕಾರು 1. 76 ಕೋಟಿ ರೂಪಾಯಿಗಳವರೆಗೆ ಇರುತ್ತದೆ.

ಈ ಹೊಸ ಕಾರು ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಲೆದರ್ ಸೀಟ್ ಕವರ್‌ಗಳು, ಎಲೆಕ್ಟ್ರಿಕ್ ಸನ್‌ರೂಫ್, 4 ಜೋನ್ ಕ್ಲೈಮೆಟ್ ಕಂಟ್ರೋಲ್, ಮೆಮೊರಿ ಫಂಕ್ಷನ್‌ನೊಂದಿಗೆ ಎಲೆಕ್ಟ್ರಿಕಲಿ ಅಡ್ಜೆಸ್ಟ್ ಮಾಡಬಹುದಾದ ಸೀಟುಗಳು, ರಿಮೋಟ್ ಕಂಟ್ರೋಲ್ ಪಾರ್ಕಿಂಗ್, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಪ್ಯಾಡಲ್ ಶಿಫ್ಟರ್‌ಗಳು, ಸೀಟ್‌ಗಳಿಗೆ ಮಸಾಜರ್ ಫಂಕ್ಷನ್, ಹಿಂಬದಿ ಸೀಟಿನಲ್ಲಿ ಎಂಟರ್‌ ಟೈನ್ಮೆಂಟ್ ಸ್ಕ್ರೀನ್, ಪ್ರೀಮಿಯಂ ಆಡಿಯೋ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

BMW 740 Li M ಸ್ಪೋರ್ಟ್ ರೂಪಾಂತರವು 3.0 ಲೀಟರ್ ಟ್ವಿನ್ ಟರ್ಬೊ ಇನ್‌ಲೈನ್ 6-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಎಂಜಿನ್ 333 Bhp ಮತ್ತು 450 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ. ಎಲ್ಲಾ ನಾಲ್ಕು ಚಕ್ರಗಳಿಗೆ ಪವರ್ ಕಳುಹಿಸಲಾಗುತ್ತದೆ. BMW ಚೆನ್ನೈನಲ್ಲಿ ಸ್ಥಾವರವನ್ನು ಹೊಂದಿದ್ದು, ಅವರ ಪ್ರಮುಖ ಸೆಡಾನ್ 7-ಸರಣಿಯನ್ನು ಈ ಸ್ಥಾವರದಲ್ಲಿಯೂ ತಯಾರಿಸಲಾಗುತ್ತದೆ.

ಮೇಲೆ ತಿಳಿಸಿರುವಂತೆ ಸೋನು ಸೂದ್ ಕೆಲವೇ ಕೆಲವು ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಇವೆಲ್ಲವೂ ಅವರ ನೆಚ್ಚಿನ ಕಾರುಗಳಾಗಿದ್ದು, ಸ್ವತಃ ಅವರೇ ಹೆಚ್ಚಾಗಿ ಓಡಿಸುತ್ತಾ ಕಾಣಿಸಿಕೊಂಡಿದ್ದಾರೆ. ಇನ್ನು ಅವರ ಗ್ಯಾರೇಜಿನಲ್ಲಿ ತಮ್ಮ ಮೊದಲ ಕಾರಿನಿಂದ ಹಿಡಿದು ಇತ್ತೀಚೆಗೆ ಖರೀದಿಸಿದ ಕಾರುಗಳ ಸಂಗ್ರಹವಿದೆ. ಇವುಗಳಲ್ಲಿ ಕೆಲವನ್ನು ಮಾತ್ರ ಮಾರಾಟ ಮಾಡಿದ್ದು, ತಮಗೆ ಇಷ್ಟವಾದ ಕೆಲವನ್ನು ಉಳಿಸಿಕೊಂಡಿದ್ದಾರೆ. ಹಾಗಾದ್ರೆ ಅವರ ಬಳಿಯಿರುವ ಕೆಲವೇ ಕೆಲವು ಐಷಾರಾಮಿ ಕಾರುಗಳನ್ನು ತಿಳಿಯೋಣ.

ಸೋನು ಸೂದ್ ತನ್ನ ಗ್ಯಾರೇಜ್‌ನಲ್ಲಿ ಐಷಾರಾಮಿ 3.0 ಲೀಟರ್ ವಿ6 ಟರ್ಬೊ ಡೀಸೆಲ್ ಎಂಜಿನ್ ಹೊಂದಿರುವ ಪೋರ್ಷೆ ಪನಾಮೆರಾ, ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ಸಾಕಷ್ಟು ಜನಪ್ರಿಯವಾಗಿರುವ ಆಡಿ ಕ್ಯೂ7 ಎಸ್‌ಯುವಿ, ಮರ್ಸಿಡಿಸ್ ಬೆಂಜ್ ಎಂಎಲ್-ಕ್ಲಾಸ್ ಮತ್ತು ಮುಂತಾದ ಕಾರುಗಳನ್ನು ನಟ ಹೊಂದಿದ್ದಾರೆ. ಅವರು ಬಜಾಜ್ ಚೇತಕ್ ಅನ್ನು ಸಹ ಹೊಂದಿದ್ದಾರೆ, ಅದು ಮೂಲತಃ ಅವರ ತಂದೆಯ ಒಡೆತನದಲ್ಲಿದೆ. ಇದನ್ನು ಹೊರತುಪಡಿಸಿ, ನಟ ಇನ್ನೂ ತನ್ನ ಮೊದಲ ಕಾರು ಮಾರುತಿ ಝೆನ್ ಅನ್ನು ಹೊಂದಿದ್ದಾರೆ.

More from DriveSpark

Article Published On: Tuesday, December 6, 2022, 18:06 [IST]
English summary
Sonu sood is a real hero who bought an expensive bmw car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+