ಕಾರ್ಬನ್ ಹೀರಿಕೊಂಡು ಶುದ್ಧ ಗಾಳಿ ಹೊರಸೂಸುವ ಕಾರನ್ನು ಅಭಿವೃದ್ಧಿಪಡಿಸಿದ ವಿದ್ಯಾರ್ಥಿಗಳು

ಕಾರು ಚಾಲನೆ ಮಾಡುವ ಜೊತೆಜೊತೆಗೆ ಗಾಳಿಯನ್ನೂ ಸ್ವಚ್ಛಗೊಳಿಸುವ ಸೌಲಭ್ಯದೊಂದಿಗೆ ವಿದ್ಯಾರ್ಥಿಗಳ ತಂಡವೊಂದು ಕಾರನ್ನು ಅಭಿವೃದ್ಧಿಪಡಿಸಿದೆ. ಇದು ಎಲೆಕ್ಟ್ರಿಕ್ ಕಾರಾಗಿದ್ದು, ವಾಹನವು ಚಾಲನೆಯಲ್ಲಿರುವಾಗ ಗಾಳಿಯನ್ನು ಶುದ್ಧೀಕರಿಸುತ್ತದೆ. ಐಂಡ್‌ಹೋವನ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯ ಡಚ್ ವಿದ್ಯಾರ್ಥಿಗಳು ಈ ಸೂಪರ್ ಎಲೆಕ್ಟ್ರಿಕ್ ಕಾರನ್ನು ಅಭಿವೃದ್ಧಿಪಡಿಸಿದ್ದಾರೆ.

ಕಾರ್ಬನ್ ಹೀರಿಕೊಂಡು ಶುದ್ಧ ಗಾಳಿ ಹೊರಸೂಸುವ ಕಾರನ್ನು ಅಭಿವೃದ್ಧಿಪಡಿಸಿದ ವಿದ್ಯಾರ್ಥಿಗಳು

ಈ ಕಾರಿಗೆ ಜೆಮ್ ನೆಟ್ ಝೀರೋ ಎಂದು ಹೆಸರಿಟ್ಟಿದ್ದಾರೆ. ಇದನ್ನು ಮೂಲ ಮಾದರಿಯಾಗಿ ಅಭಿವೃದ್ಧಿಪಡಿಸಲಾಗಿದ್ದು, ಇದರ ವಿಶಿಷ್ಟತೆಯೆಂದರೆ ಇಂಗಾಲದ ಡೈಆಕ್ಸೈಡ್ ಅನ್ನು ಸೇವಿಸುತ್ತದೆ. ಇದು ಮರಗಳಂತೆ CO2 ಅನ್ನು ಹೀರಿಕೊಂಡು ಶುದ್ಧ ಗಾಳಿಯಾಗಿ ಹೊರಹಾಕುತ್ತದೆ. ಈ ಉದ್ದೇಶಕ್ಕಾಗಿ ಕಾರಿನಲ್ಲಿ ವಿಶೇಷ ಫಿಲ್ಟರ್‌ಗಳನ್ನು ಒದಗಿಸಲಾಗಿದೆ.

ಕಾರ್ಬನ್ ಹೀರಿಕೊಂಡು ಶುದ್ಧ ಗಾಳಿ ಹೊರಸೂಸುವ ಕಾರನ್ನು ಅಭಿವೃದ್ಧಿಪಡಿಸಿದ ವಿದ್ಯಾರ್ಥಿಗಳು

ಒಂದು ವರ್ಷದ ಹಿಂದೆ ಏರ್ ಫಿಲ್ಟರೇಶನ್ ಹೊಂದಿರುವ ಕಾರನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗಿತ್ತು. ಇದೀಗ ಕೊನೆಯ ಹಂತವನ್ನು ತಲುಪಿದ್ದು, ವಾಹನವನ್ನು ಸಂಪೂರ್ಣವಾಗಿ ವಿನ್ಯಾಸಗೊಳಿಸಲಾಗಿದೆ. ಈ ಕಾರಿನ ವಿನ್ಯಾಸದಲ್ಲಿಯೂ ವಿದ್ಯಾರ್ಥಿಗಳು ಇಂಗಾಲದ ಹೊರಸೂಸುವಿಕೆಯನ್ನು ತಪ್ಪಿಸುವಂತೆ ವ್ಯವಹರಿಸಿದ್ದಾರೆ.

ಕಾರ್ಬನ್ ಹೀರಿಕೊಂಡು ಶುದ್ಧ ಗಾಳಿ ಹೊರಸೂಸುವ ಕಾರನ್ನು ಅಭಿವೃದ್ಧಿಪಡಿಸಿದ ವಿದ್ಯಾರ್ಥಿಗಳು

ಇದರ ಆಧಾರದ ಮೇಲೆ ಕಾರಿನ ಮೊನೊಕಾಕ್ ಚಾಸಿಸ್ ಮತ್ತು ಬಾಡಿ ಪ್ಯಾನೆಲ್ ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅದೇ ರೀತಿ ಕಾರಿನ ಒಳಭಾಗದಲ್ಲಿ ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್‌ಗಳನ್ನು ಬಳಸಲಾಗಿದೆ. ಕಾರಿನ ಕ್ಯಾಬಿನ್ ಅನ್ನು ಸಹ ವಿದ್ಯಾರ್ಥಿಗಳು ಆಧುನಿಕ ಕಾಲಕ್ಕೆ ತಕ್ಕಂತೆ ವಿನ್ಯಾಸಗೊಳಿಸಿದ್ದಾರೆ.

ಕಾರ್ಬನ್ ಹೀರಿಕೊಂಡು ಶುದ್ಧ ಗಾಳಿ ಹೊರಸೂಸುವ ಕಾರನ್ನು ಅಭಿವೃದ್ಧಿಪಡಿಸಿದ ವಿದ್ಯಾರ್ಥಿಗಳು

ನಿರ್ದಿಷ್ಟವಾಗಿ ಹೇಳುವುದಾದರೆ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಎಲೆಕ್ಟ್ರಿಕ್ ವೈಶಿಷ್ಟ್ಯಗಳನ್ನು ಅತ್ಯುತ್ತಮ ಸೌಲಭ್ಯಗಳೊಂದಿಗೆ ಒದಗಿಸಲಾಗಿದೆ. ಜೆಮ್ ನೆಟ್ ಝೀರೋ ಎಲೆಕ್ಟ್ರಿಕ್ ಕಾರಿನಲ್ಲಿ 22 kWh ಎಲೆಕ್ಟ್ರಿಕ್ ಮೋಟಾರ್ ಅನ್ನು ಬಳಸಲಾಗಿದೆ. ಇದರೊಂದಿಗೆ, ಕಳೆದುಹೋದ ಶಕ್ತಿಯನ್ನು ಸ್ವಲ್ಪಮಟ್ಟಿಗೆ ಪುನಃಸ್ಥಾಪಿಸಲು ಪುನರುತ್ಪಾದಕ ಬ್ರೇಕಿಂಗ್ ವ್ಯವಸ್ಥೆಯನ್ನು ಒದಗಿಸಲಾಗಿದೆ.

ಕಾರ್ಬನ್ ಹೀರಿಕೊಂಡು ಶುದ್ಧ ಗಾಳಿ ಹೊರಸೂಸುವ ಕಾರನ್ನು ಅಭಿವೃದ್ಧಿಪಡಿಸಿದ ವಿದ್ಯಾರ್ಥಿಗಳು

ಇಂಗಾಲದ ಡೈಆಕ್ಸೈಡ್ ಅನ್ನು ಫಿಲ್ಟರ್ ಮಾಡಲು ಫಿಲ್ಟರ್‌ಗಳನ್ನು ಒದಗಿಸಲಾಗಿದೆ. ಇವುಗಳಿಗೆ ಹಿಂಭಾಗ ಮತ್ತು ಮುಂಭಾಗದಲ್ಲಿ ಏರ್-ಡ್ಯಾಮ್‌ಗಳನ್ನು ಅಳವಡಿಸಲಾಗಿದೆ. ಇಲ್ಲಿ ಗಾಳಿಯು ನೇರವಾಗಿ ಒಳಗೆ ಹೋಗಿ ಫಿಲ್ಟರ್ ಆಗುತ್ತದೆ. ಈ ವ್ಯವಸ್ಥೆಯು ಪ್ರತಿ 20,000 ಮೈಲುಗಳ ಪ್ರಯಾಣಕ್ಕೆ 2 ಕೆ.ಜಿಯಷ್ಟು ಇಂಗಾಲದ ಡೈಆಕ್ಸೈಡ್ ಹೀರಿಕೊಳ್ಳುತ್ತದೆ.

ಕಾರ್ಬನ್ ಹೀರಿಕೊಂಡು ಶುದ್ಧ ಗಾಳಿ ಹೊರಸೂಸುವ ಕಾರನ್ನು ಅಭಿವೃದ್ಧಿಪಡಿಸಿದ ವಿದ್ಯಾರ್ಥಿಗಳು

ಅಲ್ಲದೆ, ಈ ಕಾರಿನ ಹುಡ್ ಮತ್ತು ರೂಫ್ ಮೇಲೆ ಸೌರ ಫಲಕಗಳನ್ನು ಒದಗಿಸಲಾಗಿದೆ. ಇದರ ಮೂಲಕ ನೀವು ಕಾರನ್ನು ಚಾರ್ಜ್ ಮಾಡಬಹುದು. ಈ ಕಾರನ್ನು ಚಾರ್ಜ್ ಮಾಡಲು ನಿಮಗೆ ಪ್ರತ್ಯೇಕ ಚಾರ್ಜಿಂಗ್ ಸ್ಟೇಷನ್ ಅಗತ್ಯವಿಲ್ಲ. ದೈನಂದಿನ ಪ್ರಯಾಣಕ್ಕೆ ವಿದ್ಯುತ್ ಉತ್ಪಾದಿಸಲು ಸೌರಶಕ್ತಿ ಸಾಕು ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಕಾರ್ಬನ್ ಹೀರಿಕೊಂಡು ಶುದ್ಧ ಗಾಳಿ ಹೊರಸೂಸುವ ಕಾರನ್ನು ಅಭಿವೃದ್ಧಿಪಡಿಸಿದ ವಿದ್ಯಾರ್ಥಿಗಳು

ಈ ಸೂಪರ್ ಸೌಲಭ್ಯಗಳೊಂದಿರುವ ಎಲೆಕ್ಟ್ರಿಕ್ ಕಾರನ್ನು 35 ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ. ಈ ಎಲೆಕ್ಟ್ರಿಕ್ ವಾಹನಕ್ಕೆ ವಿದ್ಯಾರ್ಥಿಗಳು ಪೇಟೆಂಟ್ ಪಡೆದಿಲ್ಲ. ಆದ್ದರಿಂದ ಯಾವುದೇ ಪ್ರಮುಖ ವಾಹನ ತಯಾರಕರು ಈ ಎಲೆಕ್ಟ್ರಿಕ್ ವಾಹನವನ್ನು ಅಳವಡಿಸಿಕೊಳ್ಳುವ ಸಾಧ್ಯತೆಯಿರುವುದರಿಂದ ಶೀಘ್ರದಲ್ಲೇ ತಮ್ಮ ಉತ್ಪನ್ನವನ್ನು ಬಿಡುಗಡೆ ಮಾಡುವ ನಿರೀಕ್ಷಿಯೂ ಇದೆ.

ಕಾರ್ಬನ್ ಹೀರಿಕೊಂಡು ಶುದ್ಧ ಗಾಳಿ ಹೊರಸೂಸುವ ಕಾರನ್ನು ಅಭಿವೃದ್ಧಿಪಡಿಸಿದ ವಿದ್ಯಾರ್ಥಿಗಳು

ಪ್ರಸ್ತುತ ಎಲೆಕ್ಟ್ರಿಕ್ ವಾಹನಗಳು ಜಗತ್ತಿನಲ್ಲಿ ಪ್ರಾಬಲ್ಯ ಸಾಧಿಸಲು ಪ್ರಾರಂಭಿಸಿವೆ. ಆದ್ದರಿಂದ, ಕೆಲವು ಕಂಪನಿಗಳು ಖಂಡಿತವಾಗಿಯೂ ಈ ವಾಹನವನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಕೆಲವು ಕಂಪನಿಗಳು ಸೋಲಾರ್ ಚಾಲಿತ ಎಲೆಕ್ಟ್ರಿಕ್ ವಾಹನಗಳ ತಯಾರಿಕೆಯಲ್ಲಿ ತೊಡಗಿವೆ. ಸೋನೊ ಮೋಟಾರ್ಸ್ ಇತ್ತೀಚೆಗೆ ತನ್ನ ಸಿಯಾನ್ ಸೋಲಾರ್ ಎಲೆಕ್ಟ್ರಿಕ್ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದೆ.

ಕಾರ್ಬನ್ ಹೀರಿಕೊಂಡು ಶುದ್ಧ ಗಾಳಿ ಹೊರಸೂಸುವ ಕಾರನ್ನು ಅಭಿವೃದ್ಧಿಪಡಿಸಿದ ವಿದ್ಯಾರ್ಥಿಗಳು

ಈ ಕಾರಿನಲ್ಲಿ ಒಟ್ಟು 456 ಸೌರ ಕೋಶಗಳನ್ನು ಬಳಸಲಾಗಿದೆ. ಇವುಗಳ ಮೂಲಕ ಸುಮಾರು 112 ಕಿ.ಮೀ ದೂರದವರೆಗೆ ಚಲಿಸುವ ವಿದ್ಯುತ್ ಸಾಮರ್ಥ್ಯವನ್ನು ಪಡೆಯಬಹುದು. ಇದು ಸೂರ್ಯನ ಬೆಳಕಿನ ಸಹಾಯದಿಂದ ಮಾತ್ರ ಲಭ್ಯವಿರುವ ವ್ಯಾಪ್ತಿಯ ಮಾಹಿತಿಯಾಗಿದೆ. ಇದರೊಂದಿಗೆ ಕಾರಿನಲ್ಲಿ ಬ್ಯಾಟರಿ ಪ್ಯಾಕ್ ಅನ್ನು ಸಹ ಅಳವಡಿಸಲಾಗಿದ್ದು, ಪೂರ್ಣ ಚಾರ್ಜ್ ಮಾಡಿದರೆ 305 ಕಿ.ಮೀ. ಓಡಿಸಬಹುದು.

ಕಾರ್ಬನ್ ಹೀರಿಕೊಂಡು ಶುದ್ಧ ಗಾಳಿ ಹೊರಸೂಸುವ ಕಾರನ್ನು ಅಭಿವೃದ್ಧಿಪಡಿಸಿದ ವಿದ್ಯಾರ್ಥಿಗಳು

ಸದ್ಯ ಈ ಕಾರನ್ನು ಹೆಚ್ಚಿನ ಜನರು ಬುಕ್ ಮಾಡಿದ್ದಾರೆ. ಈ ಕಾರಿಗೆ ಇದುವರೆಗೆ 19,000 ಮುಂಗಡ ನೋಂದಣಿಗಳನ್ನು ಸಂಗ್ರಹಿಸಲಾಗಿದೆ ಎಂದು ಕಂಪನಿ ತಿಳಿಸಿದೆ. ವರದಿಗಳ ಪ್ರಕಾರ, 2,225 ಯುರೋಗಳ ಬುಕಿಂಗ್ ಶುಲ್ಕವನ್ನು ವಿಧಿಸಲಾಗುತ್ತಿದೆ. ಇದು ಐದು ಪ್ರಯಾಣಿಕರನ್ನು ಒಳಗೊಂಡು ಚಲಿಸುವ ಸೋಲಾರ್ ಎಲೆಕ್ಟ್ರಿಕ್ ಕಾರು ಎಂಬುದು ಗಮನಾರ್ಹ.

ಕಾರ್ಬನ್ ಹೀರಿಕೊಂಡು ಶುದ್ಧ ಗಾಳಿ ಹೊರಸೂಸುವ ಕಾರನ್ನು ಅಭಿವೃದ್ಧಿಪಡಿಸಿದ ವಿದ್ಯಾರ್ಥಿಗಳು

ಸದ್ಯ ಸೋಲಾರ್ ಕಾರುಗಳು ಅಷ್ಟು ಬಳಕೆಯಲ್ಲಿ ಇಲ್ಲ, ಇವುಗಳ ಮೌಲ್ಯ ಹೆಚ್ಚಾಗಿರುವುದರಿಂದ ಜನರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಆದರೆ ಭಾರತದಲ್ಲಿ ದೇಶೀಯ ಬ್ರಾಂಡ್‌ಗಳಾದ ಟಾಟಾ, ಮಹೀಂದ್ರಾ ಎಲೆಕ್ಟ್ರಿಕ್ ವಾಹನಗಳನ್ನು ತುಸು ಕೈಗೆಟುಕುವ ಬೆಲೆಯಲ್ಲಿ ನೀಡುತ್ತಿರುವುದರಿಂದ ಇವಿ ವಾಹನಗಳು ದೇಶದಲ್ಲಿ ಉತ್ತಮ ಮಾರಾಟ ಕಾಣುತ್ತಿವೆ.

ಕಾರ್ಬನ್ ಹೀರಿಕೊಂಡು ಶುದ್ಧ ಗಾಳಿ ಹೊರಸೂಸುವ ಕಾರನ್ನು ಅಭಿವೃದ್ಧಿಪಡಿಸಿದ ವಿದ್ಯಾರ್ಥಿಗಳು

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಇತ್ತಿಚಿನ ವರ್ಷಗಳಲ್ಲಿ ವಿಶ್ವದೆಲ್ಲೆಡೆ ಪರಿಸರ ಮಾಲಿನ್ಯ ಹೆಚ್ಚಾಗಿದ್ದು, ಹಲವು ದೇಶಗಳು ಕಾರ್ಬನ್ ಮುಕ್ತವಾಗಲು ಸಾಕಷ್ಟು ಶ್ರಮಿಸುತ್ತಿವೆ. ಇದಕ್ಕಾಗಿ ಮಾಲಿನ್ಯಕ್ಕೆ ಕಾರಣವಾಗಿರವ ಇಂಧನ ಚಾಲಿತ ವಾಹನಗಳನ್ನು ಹಂತ ಹಂತವಾಗಿ ತೊಲಗಿಸಲು ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಇದೀಗ ವಿದ್ಯಾರ್ಥಿಗಳ ಹೊಸ ಆವಿಷ್ಕಾರವು ವಿಶ್ವದ ಭವಿಷ್ಯವನ್ನು ಬದಲಿಸುವ ಎಲ್ಲಾ ಮುನ್ಸೂನೆಗಳನ್ನು ನೀಡುತ್ತಿದೆ.

Most Read Articles

Kannada
English summary
Students have developed a car that absorbs carbon and breathes clean air
Story first published: Monday, September 19, 2022, 11:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X