2022ರ ಮೊದಲಾರ್ಧದಲ್ಲಿ ಮೇಲುಗೈ ಸಾಧಿಸಿದ SUVಗಳು: ಹ್ಯುಂಡೈ ಅನ್ನು ಹಿಂದಿಕ್ಕಿದ ಟಾಟಾ

ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಎಸ್‌ಯುವಿಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಸೆಡಾನ್‌ಗಳಿಗೆ ಹೋಲಿಸಿಕೊಂಡರೆ ಕಡಿಮೆ ಬೆಲೆ ಹಾಗೂ ಸ್ಪೋರ್ಟಿ ಲುಕ್‌ನೊಂದಿಗೆ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡು ಬರುತ್ತಿರುವುದರಿಂದ ಗ್ರಾಹಕರು ಹೆಚ್ಚಾಗಿ ಎಸ್‌ಯುವಿಗಳನ್ನು ಖರೀದಿಸುತ್ತಿದ್ದಾರೆ.

2022ರ ಮೊದಲಾರ್ಧದಲ್ಲಿ ಮೇಲುಗೈ ಸಾಧಿಸಿದ SUVಗಳು: ಹ್ಯುಂಡೈ ಅನ್ನು ಹಿಂದಿಕ್ಕಿದ ಟಾಟಾ

ಇನ್ನು ಈ ವರ್ಷದ ಎಸ್‌ಯುವಿಗಳ ಮಾರಾಟದ ವಿಷಯಕ್ಕೆ ಬಂದರೆ, ಈಗ 2022 ರ ಮಧ್ಯದಲ್ಲಿದ್ದು, ಈಗಾಗಲೇ 5 ತಿಂಗಳು ಕಳೆದಿವೆ. ಈ ಐದು ತಿಂಗಳಲ್ಲಿ ಹೆಚ್ಚಿನ ವಾಹನ ತಯಾರಕರು ಗಮನಾರ್ಹವಾದ ಮಾರಾಟದ ಬೆಳವಣಿಗೆಯನ್ನು ಕಂಡಿದ್ದಾರೆ. ಅದರಲ್ಲೂ ಟಾಟಾ ಮೋಟಾರ್ಸ್ ಭಾರತದಲ್ಲಿ ನಂ.2 ಬ್ರಾಂಡ್ ಆಗಿ ಹೊರಹೊಮ್ಮಿದೆ.

2022ರ ಮೊದಲಾರ್ಧದಲ್ಲಿ ಮೇಲುಗೈ ಸಾಧಿಸಿದ SUVಗಳು: ಹ್ಯುಂಡೈ ಅನ್ನು ಹಿಂದಿಕ್ಕಿದ ಟಾಟಾ

ಹ್ಯುಂಡೈ ಕಳೆದ ಏಪ್ರಿಲ್‌ವರೆಗೆ ಎರಡನೇ ಸ್ಥಾನವನ್ನು ಅಲಂಕರಿಸಿತ್ತು, ಮೇ ತಿಂಗಳಲ್ಲಿ ಟಾಟಾ ಮೋಟಾರ್ಸ್ ಅದನ್ನು ಹಿಂದಿಕ್ಕಿದೆ. ಮೇ 2022 ರಲ್ಲಿ, ಟಾಟಾ ಮೋಟಾರ್ಸ್ 43,341 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇದೇ ಸಮಯದಲ್ಲಿ, ಹ್ಯುಂಡೈ ಉತ್ಪನ್ನಗಳು 42,293 ಯುನಿಟ್‌ಗಳನ್ನು ಮಾರಾಟವಾಗಿವೆ. ಈ ಮೂಲಕ ಟಾಟಾ ಮೇ ತಿಂಗಳಲ್ಲಿ ಹ್ಯುಂಡೈ ಅನ್ನು ಹಿಂದಿಕ್ಕಿದೆ.

2022ರ ಮೊದಲಾರ್ಧದಲ್ಲಿ ಮೇಲುಗೈ ಸಾಧಿಸಿದ SUVಗಳು: ಹ್ಯುಂಡೈ ಅನ್ನು ಹಿಂದಿಕ್ಕಿದ ಟಾಟಾ

ಹ್ಯುಂಡೈ ಅತ್ಯಂತ ಕಡಿಮೆ ಘಟಕಗಳ ವ್ಯತ್ಯಾಸದಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿರುವುದನ್ನು ನಾವು ನೋಡಬಹುದು. ಟಾಟಾ ಮೋಟಾರ್ಸ್ ಮಾರಾಟದಲ್ಲಿ ಕಳೆದ ಹಲವು ವರ್ಷಗಳಿಂದಲೂ ಉತ್ತಮವಾಗಿಯೇ ಇದೆ. ಇದೀಗ ಮತ್ತಷ್ಟು ಬೆಳವಣಿಗೆ ಕಾಣಲು ನೆಕ್ಸಾನ್ SUV ಕಾರು ಪ್ರಮುಖ ಪಾತ್ರ ವಹಿಸಿದೆ.

2022ರ ಮೊದಲಾರ್ಧದಲ್ಲಿ ಮೇಲುಗೈ ಸಾಧಿಸಿದ SUVಗಳು: ಹ್ಯುಂಡೈ ಅನ್ನು ಹಿಂದಿಕ್ಕಿದ ಟಾಟಾ

ಈ ಎಸ್‌ಯುವಿ ಮಾತ್ರವಲ್ಲದೆ ಭಾರತದಲ್ಲಿನ ಇತರ ಎಸ್‌ಯುವಿಗಳಿಗೂ ಉತ್ತಮ ಬೇಡಿಕೆಯಿದೆ. ಸ್ಪಷ್ಟವಾಗಿ ಹೇಳಬೇಕೆಂದರೆ, ಪ್ರಸ್ತುತ ದೇಶದಲ್ಲಿ ಮಾರಾಟವಾಗುವ ವಾಹನಗಳಲ್ಲಿ ಐದನೇ ಎರಡರಷ್ಟು ವಾಹನಗಳು ಎಸ್‌ಯುವಿಗಳಾಗಿವೆ. ಭಾರತದಲ್ಲಿ SUVಗಳು ಬಹಳ ಜನಪ್ರಿಯವಾಗಿವೆ ಎಂಬುದನ್ನು ಈ ಅಂಕಿಅಂಶಗಳಿಂದ ತಿಳಿದುಕೊಳ್ಳಬಹುದು.

2022ರ ಮೊದಲಾರ್ಧದಲ್ಲಿ ಮೇಲುಗೈ ಸಾಧಿಸಿದ SUVಗಳು: ಹ್ಯುಂಡೈ ಅನ್ನು ಹಿಂದಿಕ್ಕಿದ ಟಾಟಾ

ಈ ಮಾಹಿತಿಯು ವರ್ಷದ ಮೊದಲ ಐದು ತಿಂಗಳ ಪ್ರಸ್ತುತ ಮಾರಾಟದ ಅಂಕಿಅಂಶಗಳನ್ನು ಆಧರಿಸಿದೆ. 2015 ರವರೆಗೆ, ಹ್ಯಾಚ್‌ಬ್ಯಾಕ್‌ಗಳು ಪ್ರಯಾಣಿಕ ವಾಹನ ವಿಭಾಗದಲ್ಲಿ ಒಟ್ಟಾರೆ ಮಾರಾಟದ ಅತಿದೊಡ್ಡ ಪಾಲನ್ನು ಹೊಂದಿದ್ದವು. ಆ ಅವಧಿಯಲ್ಲಿ ಹ್ಯಾಚ್‌ಬ್ಯಾಕ್ ಕಾರುಗಳು ಶೇ49 ರಷ್ಟು ಮಾರಾಟವನ್ನು ಹೊಂದಿದ್ದವು.

2022ರ ಮೊದಲಾರ್ಧದಲ್ಲಿ ಮೇಲುಗೈ ಸಾಧಿಸಿದ SUVಗಳು: ಹ್ಯುಂಡೈ ಅನ್ನು ಹಿಂದಿಕ್ಕಿದ ಟಾಟಾ

ಆದರೆ ಇದೀಗ ಎಸ್‌ಯುವಿ ಕಾರುಗಳು ಹ್ಯಾಚ್ ಬ್ಯಾಕ್ ಸ್ಥಾನವನ್ನು ಬಡಿದೆಬ್ಬಿಸಿವೆ. SUV ಗಳು ಒಟ್ಟು ಭಾರತೀಯ ವಾಹನ ಮಾರಾಟದ ಶೇಕಡಾ 41 ರಷ್ಟು ಪಾಲನ್ನು ತನ್ನದಾಗಿಸಿಕೊಂಡಿವೆ. ಭಾರತದಲ್ಲಿ SUV ಗಳಿಗೆ ಭಾರೀ ಬೇಡಿಕೆಯನ್ನು ಮನಗಂಡ ವಾಹನ ತಯಾರಕರು ಕ್ಷೇತ್ರವನ್ನು ಇನ್ನಷ್ಟು ಬಲಪಡಿಸಲು ಪ್ರಾರಂಭಿಸಿದ್ದಾರೆ.

2022ರ ಮೊದಲಾರ್ಧದಲ್ಲಿ ಮೇಲುಗೈ ಸಾಧಿಸಿದ SUVಗಳು: ಹ್ಯುಂಡೈ ಅನ್ನು ಹಿಂದಿಕ್ಕಿದ ಟಾಟಾ

ಅಂದಹಾಗೆ, ಮಾರುತಿ ಸುಜುಕಿ ಈ ವಿಭಾಗಕ್ಕೆ ಪೂರಕವಾಗಿ ಬ್ರೆಜ್ಜಾದ ನವೀಕರಿಸಿದ ಆವೃತ್ತಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಸಿದ್ಧವಾಗಿದೆ. ಇದೇ ಸಮಯದಲ್ಲಿ ಹುಂಡೈ ಈಗಾಗಲೇ ತನ್ನ ಫೇಸ್‌ಲಿಫ್ಟ್ ವೆನ್ಯೂ ಕಾರನ್ನು ಮಾರಾಟಕ್ಕೆ ಪರಿಚಯಿಸಿದೆ. ಈ ಉತ್ಪನ್ನಗಳು ಕಿಯಾ ಮತ್ತು ಟಾಟಾ ಉತ್ಪನ್ನಗಳಿಗೆ ತೀವ್ರ ಪೈಪೋಟಿ ನೀಡಲಿವೆ.

2022ರ ಮೊದಲಾರ್ಧದಲ್ಲಿ ಮೇಲುಗೈ ಸಾಧಿಸಿದ SUVಗಳು: ಹ್ಯುಂಡೈ ಅನ್ನು ಹಿಂದಿಕ್ಕಿದ ಟಾಟಾ

ಇದೀಗ ನೆಕ್ಸಾನ್ ಮತ್ತು ಕಿಯಾ ಸಾನೆಟ್‌ನಂತಹ ಟಾಟಾ ಎಸ್‌ಯುವಿಗಳಿಗೆ ಭಾರಿ ಬೇಡಿಕೆಯಿದೆ. ಇದಕ್ಕೆ ಕಡಿವಾಣ ಹಾಕಲು ಮಾರುತಿ ಮತ್ತು ಸುಜುಕಿ ಮುಂದಾಗಿವೆ. ಹ್ಯುಂಡೈ ತನ್ನ ವೆನ್ಯೂ ಕಾರನ್ನು ವಿವಿಧ ವಿಶೇಷ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡಿದೆ. ಅಂದರೆ, ಇದು ಡಿಸೈನ್ ಮತ್ತು ವೈಶಿಷ್ಟ್ಯಗಳ ನವೀಕರಣವನ್ನು ಪ್ರಾರಂಭಿಸಿದೆ.

2022ರ ಮೊದಲಾರ್ಧದಲ್ಲಿ ಮೇಲುಗೈ ಸಾಧಿಸಿದ SUVಗಳು: ಹ್ಯುಂಡೈ ಅನ್ನು ಹಿಂದಿಕ್ಕಿದ ಟಾಟಾ

ಈ ರೀತಿಯ ಹೊಸ ಬದಲಾವಣೆಗಳಿಂದಾಗಿ 2022 ವೆನ್ಯೂ ಸಂಪೂರ್ಣವಾಗಿ ಆಕರ್ಷಕ ಕಾರಾಗಿ ಹೊರಹೊಮ್ಮಿದೆ. ಈಗಾಗಲೇ ಮಾರಾಟದಲ್ಲಿರುವ ವೆನ್ಯೂಗಿಂತ ಹಲವು ಪಟ್ಟು ಉತ್ತಮವಾದ ಕಾರಾಗಿದೆ. ಮುಂಬರುವ ದಿನಗಳಲ್ಲಿ ಈ ಮಾದರಿಯ ಮಾರಾಟದಲ್ಲಿ ಉತ್ತಮ ಬೆಳವಣಿಗೆ ಕಾಣುವ ನಿರೀಕ್ಷೆಯಿದೆ.

2022ರ ಮೊದಲಾರ್ಧದಲ್ಲಿ ಮೇಲುಗೈ ಸಾಧಿಸಿದ SUVಗಳು: ಹ್ಯುಂಡೈ ಅನ್ನು ಹಿಂದಿಕ್ಕಿದ ಟಾಟಾ

ಎರಡನೇ ಸ್ಥಾನ ಪಡೆದುಕೊಂಡ ಟಾಟಾ ನೆಕ್ಸಾನ್

ಟಾಟಾ ನೆಕ್ಸಾನ್ 2017 ರಲ್ಲಿ ಪ್ರಾರಂಭವಾದಾಗಿನಿಂದ ಭಾರತೀಯ ವಾಹನ ತಯಾರಕರಿಗೆ ವಾಲ್ಯೂಮ್ ಜನರೇಟರ್ ಆಗಿದೆ. ವಾಸ್ತವವಾಗಿ, ಸಬ್‌ಕಾಂಪ್ಯಾಕ್ಟ್ ಸತತ ಆರನೇ ತಿಂಗಳಿಗೆ ಅತಿ ಹೆಚ್ಚು ಮಾರಾಟವಾಗುವ ಸಬ್ -4 ಮೀಟರ್ ಎಸ್‌ಯುವಿಯಾಗಿ ಮುಂದುವರೆದಿದೆ.

2022ರ ಮೊದಲಾರ್ಧದಲ್ಲಿ ಮೇಲುಗೈ ಸಾಧಿಸಿದ SUVಗಳು: ಹ್ಯುಂಡೈ ಅನ್ನು ಹಿಂದಿಕ್ಕಿದ ಟಾಟಾ

2022ರ ಮೇ ತಿಂಗಳಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ಎಸ್‍ಯುವಿಯ 14,614 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಮೇ ತಿಂಗಳಿನಲ್ಲಿ 6,439 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ 127 ಪ್ರತಿಶತದಷ್ಟು ಬೆಳವಣಿಗೆಯನ್ನು ಸಾಧಿಸಿದೆ.

2022ರ ಮೊದಲಾರ್ಧದಲ್ಲಿ ಮೇಲುಗೈ ಸಾಧಿಸಿದ SUVಗಳು: ಹ್ಯುಂಡೈ ಅನ್ನು ಹಿಂದಿಕ್ಕಿದ ಟಾಟಾ

ಟಾಟಾ ನೆಕ್ಸಾನ್ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಹ್ಯುಂಡೈ ವೆನ್ಯೂ ಮತ್ತು ಹ್ಯುಂಡೈ ಕ್ರೆಟಾದಂತಹ ಕಾರುಗಳನ್ನು ಹಿಂದಿಕ್ಕಿ ಸಬ್‌ಕಾಂಪ್ಯಾಕ್ಟ್ ಎಸ್‍ಯುವಿ ವಿಭಾಗದ ಮಾರಾಟದಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಟಾಟಾ ನೆಕ್ಸಾನ್ ಎಸ್‍ಯುವಿಯ ಎಂಜಿನ್ ಬಗ್ಗೆ ಹೇಳುವುದಾದರೆ, ಇದರಲ್ಲಿ 1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 118 ಬಿಹೆಚ್‍ಪಿ ಪವರ್ ಮತ್ತು 170 ಎನ್ಎಂ ಟಾರ್ಕ್ ಉತ್ಪಾದಿಸುಸುವ ಸಾಮರ್ಥ್ಯವನ್ನು ಹೊಂದಿದೆ.

2022ರ ಮೊದಲಾರ್ಧದಲ್ಲಿ ಮೇಲುಗೈ ಸಾಧಿಸಿದ SUVಗಳು: ಹ್ಯುಂಡೈ ಅನ್ನು ಹಿಂದಿಕ್ಕಿದ ಟಾಟಾ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಹೆಚ್ಚುವರಿ ವೈಶಿಷ್ಟ್ಯಗಳು ಮತ್ತು ಹೆಚ್ಚುವರಿ ಸ್ಥಳಾವಕಾಶದಂತಹ ಆಕರ್ಷಕ ವೈಶಿಷ್ಟ್ಯಗಳೊಂದಿಗೆ ಮಾರಾಟಕ್ಕೆ ಲಭ್ಯವಿರುವುದರಿಂದ ಭಾರತದಲ್ಲಿ ಎಸ್‌ಯುವಿಗಳ ಮಾರುಕಟ್ಟೆ ವಿಸ್ತರಿಸುತ್ತಿದೆ. ಇದರ ಪರಿಣಾಮವಾಗಿ, SUV ಗಳು ಒಂದು ಕಾಲದಲ್ಲಿ ಹೆಚ್ಚು ಮಾರಾಟವಾಗುತ್ತಿದ್ದ ಹ್ಯಾಚ್‌ಬ್ಯಾಕ್‌ಗಳನ್ನು ಹಿಂದಿಕ್ಕಿವೆ.

Most Read Articles

Kannada
English summary
SUVs ahead of first half sales in 2022 Tata overtakes Hyundai
Story first published: Friday, June 17, 2022, 18:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X