ಭಾರತದಲ್ಲಿ ಇವಿ ಪ್ಲಾಂಟ್ ಸ್ಥಾಪಿಸಲು 10,440 ಕೋಟಿ ರೂ. ಹೂಡಿಕೆಗೆ ಸಿದ್ಧವಾದ ಸುಜುಕಿ

ಬಹುತೇಕ ದೇಶಗಳಲ್ಲಿ ಪೆಟ್ರೋಲ್ ಬೆಲೆ ದಿನೇ ದಿನೇ ಹೆಚ್ಚುತ್ತಿದ್ದು, ವಾಹನ ತಯಾರಕ ಕಂಪನಿಗಳು ಕೆಲವು ವರ್ಷಗಳಿಂದ ಎಲೆಕ್ಟ್ರಿಕ್ ವಾಹನಗಳ ತಯಾರಿಕೆ ಹಾಗೂ ಅದಕ್ಕೆ ಬೇಕಾಗುವ ಬಂಡವಾಳ ಹೂಡಿಕೆಯತ್ತ ಗಮನ ಹರಿಸುತ್ತಿವೆ.

ಭಾರತದಲ್ಲಿ ಇವಿ ಪ್ಲಾಂಟ್ ಸ್ಥಾಪಿಸಲು 10,440 ಕೋಟಿ ರೂ. ಹೂಡಿಕೆಗೆ ಸಿದ್ಧವೆಂದ ಸುಜುಕಿ

ಇದೀಗ ಸುಜುಕಿ ಮೋಟಾರ್ ಕಂಪನಿ ಕೂಡ ಇತ್ತೀಚೆಗೆ ಹೊಸ ಎಲೆಕ್ಟ್ರಿಕ್ ಕಾರು ಮತ್ತು ಬ್ಯಾಟರಿ ಉತ್ಪಾದನಾ ಸೌಲಭ್ಯವನ್ನು ನಿರ್ಮಿಸಲು ಭಾರತದಲ್ಲಿ 10,440 ಕೋಟಿ ರೂ.ಗಳನ್ನು ಹೂಡಿಕೆ ಮಾಡಲು ಎದುರು ನೋಡುತ್ತಿರುವುದಾಗಿ ಘೋಷಿಸಿದೆ. ಸುಜುಕಿ ಮೋಟಾರ್ ಭಾರತೀಯ ಆಟೋಮೊಬೈಲ್ ದೈತ್ಯ ಮಾರುತಿ ಸುಜುಕಿಯ ಮಾತೃಸಂಸ್ಥೆಯಾಗಿದೆ. ಕಂಪನಿಯು 2025ರ ಆರಂಭದಿಂದ ಕೈಗೆಟುಕುವ ಇವಿಗಳ ಆರಂಭಿಕ ಬ್ಯಾಚ್ ಅನ್ನು ಹೊರತರಲು ಎದುರುನೋಡುತ್ತಿದೆ.

ಭಾರತದಲ್ಲಿ ಇವಿ ಪ್ಲಾಂಟ್ ಸ್ಥಾಪಿಸಲು 10,440 ಕೋಟಿ ರೂ. ಹೂಡಿಕೆಗೆ ಸಿದ್ಧವೆಂದ ಸುಜುಕಿ

ಕಂಪನಿಯು ಹೂಡಿಕೆ ಮಾಡಲು ಯೋಜಿಸುತ್ತಿರುವ 10,440 ಕೋಟಿ ರೂ.ಗಳಲ್ಲಿ, ಉತ್ಪಾದನೆಯನ್ನು ಹೆಚ್ಚಿಸಲು ಹೊಸ ಘಟಕದ ನಿರ್ಮಾಣಕ್ಕಾಗಿ 3,000 ಕೋಟಿ ರೂ.ಗಳನ್ನು ಖರ್ಚು ಮಾಡಲು ಮುಂದಾಗಿದೆ. ಈ ಮೂಲಕ ಮಾರುತಿ ಸುಜುಕಿ ಶೀಘ್ರದಲ್ಲೇ ಇತರ ಸೌಲಭ್ಯಗಳಲ್ಲಿಯೂ ಇವಿಗಳ ಉತ್ಪಾದನೆಯನ್ನು ಪ್ರಾರಂಭಿಸಬಹುದು.

ಭಾರತದಲ್ಲಿ ಇವಿ ಪ್ಲಾಂಟ್ ಸ್ಥಾಪಿಸಲು 10,440 ಕೋಟಿ ರೂ. ಹೂಡಿಕೆಗೆ ಸಿದ್ಧವೆಂದ ಸುಜುಕಿ

ಇದಲ್ಲದೆ, ಇವಿಗಳಿಗಾಗಿ ಎಲೆಕ್ಟ್ರಿಕ್ ಬ್ಯಾಟರಿಗಳನ್ನು ತಯಾರಿಸಲು 7,300 ಕೋಟಿ ರೂ.ಗಳನ್ನು ಬಳಸಲಾಗುವುದು ಎಂದು ಕಂಪನಿ ತಿಳಿಸಿದೆ. ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಬೇಕಾಗುವ ಬ್ಯಾಟರಿಗಳನ್ನು ಹಾಗೂ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಪ್ರಾರಂಭಿಸಲು ಜಪಾನಿನ ವಾಹನ ತಯಾರಕರು ಆಸಕ್ತಿಯನ್ನು ತೋರುತ್ತಿರುವ ಬಗ್ಗೆ ಭಾನುವಾರ ಘೋಷಣೆ ಮಾಡಲಾಗಿದೆ.

ಭಾರತದಲ್ಲಿ ಇವಿ ಪ್ಲಾಂಟ್ ಸ್ಥಾಪಿಸಲು 10,440 ಕೋಟಿ ರೂ. ಹೂಡಿಕೆಗೆ ಸಿದ್ಧವೆಂದ ಸುಜುಕಿ

ಸುಜುಕಿ ಈಗಾಗಲೇ ಟೊಯೊಟಾದೊಂದಿಗೆ ಜಾಗತಿಕ ಒಪ್ಪಂದವನ್ನು ಹೊಂದಿದ್ದು, ಕಂಪನಿಯು ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಪಡಿಸಲು ಮತ್ತು ಹೊಸ ಘಟಕವನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದೆ. ಈ ಒಪ್ಪಂದದ ಮೂಲಕ, ಟೊಯೋಟಾ ಮತ್ತು ಮಾರುತಿ ಸುಜುಕಿ ಮುಂದಿನ ದಿನಗಳಲ್ಲಿ ಕೆಲವು ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸಲು ಪಾಲುದಾರಿಕೆ ಹೊಂದುವುದನ್ನು ಮುಂದಿನ ದಿನಗಳಲ್ಲಿ ನಾವು ನೋಡಬಹುದು.

ಭಾರತದಲ್ಲಿ ಇವಿ ಪ್ಲಾಂಟ್ ಸ್ಥಾಪಿಸಲು 10,440 ಕೋಟಿ ರೂ. ಹೂಡಿಕೆಗೆ ಸಿದ್ಧವೆಂದ ಸುಜುಕಿ

ಕೆಲ ಮೂಲಗಳ ಪ್ರಕಾರ, ಮುಂಬರುವ ಉದ್ದೇಶಿತ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಘಟಕವನ್ನು ಗುಜರಾತ್‌ನಲ್ಲಿ ಮಾರುತಿ ಸುಜುಕಿಯ ಅಸ್ತಿತ್ವದಲ್ಲಿರುವ ಘಟಕಕ್ಕೆ ಬಹಳ ಹತ್ತಿರದಲ್ಲಿ ಸ್ಥಾಪಿಸಲಾಗುವುದು. ಈ ಸ್ಥಾವರವು ಸುಜುಕಿ ಮೋಟಾರ್ ಕಾರ್ಪೊರೇಷನ್‌ನ ಶೇಕಡಾ 100 ರಷ್ಟು ಅಂಗಸಂಸ್ಥೆಯಾದ ಸುಜುಕಿ ಮೋಟಾರ್ ಗುಜರಾತ್ (ಎಸ್ಎಂಜಿ)ನ ಒಡೆತನದಲ್ಲಿದೆ.

ಭಾರತದಲ್ಲಿ ಇವಿ ಪ್ಲಾಂಟ್ ಸ್ಥಾಪಿಸಲು 10,440 ಕೋಟಿ ರೂ. ಹೂಡಿಕೆಗೆ ಸಿದ್ಧವೆಂದ ಸುಜುಕಿ

ಈ ಘಟಕವು ಮಾರುತಿ ಸುಜುಕಿ ಮತ್ತು ಭಾರತದಲ್ಲಿ ಸಂಪೂರ್ಣವಾಗಿ ತಯಾರಿಸಿದ ಕಾರುಗಳನ್ನು ಪೂರೈಸುತ್ತದೆ. ಭಾರತದಲ್ಲಿರುವ ಪ್ರಸ್ತುತ ಉತ್ಪಾದನಾ ಘಟಕದ ಬಗ್ಗೆ ಹೇಳುವುದಾದರೆ, ಮಾರುತಿ ಸುಜುಕಿ ಕಾರುಗಳಿಗೆ ಇರುವ ಬಲವಾದ ಬೇಡಿಕೆಯಿಂದಾಗಿ ಕಂಪನಿಯು ಇತ್ತೀಚೆಗೆ ಹೊಸ ಉತ್ಪಾದನಾ ಮಾರ್ಗವನ್ನು ಪ್ರಾರಂಭಿಸಿದೆ. ಇದು ವಾರ್ಷಿಕ ಉತ್ಪಾದನೆಯನ್ನು ಹೆಚ್ಚಿಸಿದ್ದು, ಪ್ರಸ್ತುತ ವಾರ್ಷಿಕ ಉತ್ಪಾದನೆಯು 750,000 ಯುನಿಟ್‌‌ಗಳಷ್ಟಿದೆ.

ಭಾರತದಲ್ಲಿ ಇವಿ ಪ್ಲಾಂಟ್ ಸ್ಥಾಪಿಸಲು 10,440 ಕೋಟಿ ರೂ. ಹೂಡಿಕೆಗೆ ಸಿದ್ಧವೆಂದ ಸುಜುಕಿ

ಇವಿ ವಲಯದಲ್ಲಿ ಕಂಪನಿಯ ಅಭಿವೃದ್ಧಿಯ ಬಗ್ಗೆ ಮಾತನಾಡುವುದಾದರೆ, ಸುಜುಕಿ ಈಗಾಗಲೇ ಡೆನ್ಸೊ ಕಾರ್ಪ್ ಮತ್ತು ತೋಷಿಬಾ ಎಂಬ ಇನ್ನೂ ಎರಡು ಕಂಪನಿಗಳನ್ನು ಒಳಗೊಂಡ ಜಂಟಿ ಉದ್ಯಮದ ಮೂಲಕ ಹೊಸ ಲಿಥಿಯಂ-ಅಯಾನ್ ಬ್ಯಾಟರಿ ಪ್ಯಾಕ್ ಉತ್ಪಾದನಾ ಘಟಕವನ್ನು ಅಭಿವೃದ್ಧಿಪಡಿಸಿದೆ. ಈ ಲಿಥಿಯಂ-ಅಯಾನ್ ಬ್ಯಾಟರಿಗಳನ್ನು ಗುಜರಾತ್‌ನ ಹನ್ಸಾಲ್ಪುರ ಘಟಕದಲ್ಲಿ ಉತ್ಪಾದಿಸುವ ನಿರೀಕ್ಷೆಯಿದೆ. ಅಲ್ಲದೇ ಈ ಬ್ಯಾಟರಿ ಪ್ಯಾಕ್‌ ಉತ್ಪಾದನೆ ಈ ವರ್ಷದ ಅಂತ್ಯದ ವೇಳೆಗೆ ಪ್ರಾರಂಭವಾಗಲಿದೆ ಎಂದು ತಿಳಿದುಬಂದಿದೆ.

ಭಾರತದಲ್ಲಿ ಇವಿ ಪ್ಲಾಂಟ್ ಸ್ಥಾಪಿಸಲು 10,440 ಕೋಟಿ ರೂ. ಹೂಡಿಕೆಗೆ ಸಿದ್ಧವೆಂದ ಸುಜುಕಿ

ಮಾರುತಿ 2025 ಎಂದು ನಿಗದಿಪಡಿಸಿದ ಎಲೆಕ್ಟ್ರಿಕ್ ವಾಹನಗಳ ಲಾಂಚ್ ಟೈಮ್‌ನಲ್ಲಿ ಯಾವುದೇ ರೀತಿಯ ಬದಲಾವಣೆಯನ್ನು ಘೋಷಿಸಿಲ್ಲ. ಸುಜುಕಿ ಮೋಟಾರ್ ಕಾರ್ಪೊರೇಷನ್‌ನ ಸಂಪೂರ್ಣ ಸ್ವಾಮ್ಯದ ಸುಜುಕಿ ಮೋಟಾರ್ ಗುಜರಾತ್ ಪ್ರೈವೇಟ್ ಲಿಮಿಟೆಡ್ (ಎಸ್ಎಂಜಿ) 2026ರ ವೇಳೆಗೆ ಎಸ್ಎಂಜಿಯ ಆಟೋಮೊಬೈಲ್ ಉತ್ಪಾದನಾ ಘಟಕದ ಬಳಿ ಬ್ಯಾಟರಿ ಘಟಕವನ್ನು ನಿರ್ಮಿಸಲು 7,300 ಕೋಟಿ ರೂಪಾಯಿ ಹೂಡಿಕೆ ಮಾಡಲಾಗುವುದು ಎಂದು ತಿಳಿಸಿದೆ.

ಭಾರತದಲ್ಲಿ ಇವಿ ಪ್ಲಾಂಟ್ ಸ್ಥಾಪಿಸಲು 10,440 ಕೋಟಿ ರೂ. ಹೂಡಿಕೆಗೆ ಸಿದ್ಧವೆಂದ ಸುಜುಕಿ

2025ರ ವೇಳೆಗೆ ಇವಿಗಳ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಎಸ್ಎಂಜಿ ಇನ್ನೂ 3,100 ಕೋಟಿ ರೂಪಾಯಿಗಳನ್ನು ಸಹ ಹೂಡಿಕೆ ಮಾಡಲಿದೆ ಎಂದು ಹೇಳಿದೆ. ಇದಲ್ಲದೇ ಮತ್ತೊಂದು ಸಮೂಹ ಸಂಸ್ಥೆ ಮಾರುತಿ ಸುಜುಕಿ ಟೊಯೊಟ್ಸು ಇಂಡಿಯಾ ಪ್ರೈವೇಟ್ ಲಿಮಿಟೆಡ್ 2025ರ ವೇಳೆಗೆ ವಾಹನ ಮರುಬಳಕೆ ಘಟಕವನ್ನು ನಿರ್ಮಿಸಲು 45 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ. ಇದು ಮಾರುತಿ ಸುಜುಕಿ ಮತ್ತು ಟೊಯೊಟಾ ಸುಶೋ ಗ್ರೂಪ್ ನವೆಂಬರ್ 2019 ರಲ್ಲಿ ವಾಹನವನ್ನು ಬೇರ್ಪಡಿಸುವುದು ಮತ್ತು ಮರುಬಳಕೆ ಮಾಡಲು ಜಂಟಿ ಉದ್ಯಮವನ್ನು ಉತ್ತರ ಪ್ರದೇಶದ ನೋಯ್ಡಾದಲ್ಲಿ ಘಟಕವೊಂದನ್ನು ಸ್ಥಾಪಿಸುವುದಾಗಿ ಘೋಷಿಸಿದ ನಂತರ ಬಂದಿದೆ ಎಂದು ಹೇಳಲಾಗುತ್ತಿದೆ.

ಭಾರತದಲ್ಲಿ ಇವಿ ಪ್ಲಾಂಟ್ ಸ್ಥಾಪಿಸಲು 10,440 ಕೋಟಿ ರೂ. ಹೂಡಿಕೆಗೆ ಸಿದ್ಧವೆಂದ ಸುಜುಕಿ

ಮೂಲಸೌಕರ್ಯ ಮತ್ತು ಸರ್ಕಾರದ ಬೆಂಬಲದ ಕೊರತೆಯಿಂದಾಗಿ ಮಾರುತಿ ಸುಜುಕಿ ಈ ಹಿಂದೆ 2020 ರಲ್ಲಿ ಇವಿಗಳನ್ನು ಪ್ರಾರಂಭಿಸುವ ಯೋಜನೆಯನ್ನು ಸ್ಥಗಿತಗೊಳಿಸಿತ್ತು. ಮೋದಿ ಮತ್ತು ಕಿಶಿದಾ ನಡುವಿನ ಮಾತುಕತೆಯ ನಂತರ ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ 4,20,000 ಕೋಟಿ ರೂಪಾಯಿಗಳ ಹೂಡಿಕೆಯನ್ನು ಜಪಾನ್ ಮಾರ್ಚ್ 19 ರಂದು ಘೋಷಿಸಿದ ನಂತರ, ಸುಜುಕಿ ಮೋಟಾರ್ ಕಾರ್ಪೊರೇಷನ್ ಈ ಘೋಷಣೆಯನ್ನು ಮಾಡಿದೆ ಎಂದು ಹೇಳಬಹುದು.

Most Read Articles

Kannada
Read more on suzuki ಸುಜುಕಿ
English summary
Suzuki to invest rs 10 440 crore in india ev plant in gujarat
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X